POLICE BHAVAN KALABURAGI

POLICE BHAVAN KALABURAGI

31 December 2014

Kalaburagi District Reported Crimes

ಅಪಘಾತ ಪ್ರಕರಣ :
ಸಂಚಾರಿ ಠಾಣೆ : ದಿನಾಂಕ 30-12-2014 ರಂದು ಶ್ರೀ ಮಹ್ಮದ ಫಿರೋಜ @ ರೌಫ ತಂದೆ ಮಹ್ಮದ ಖುತುಬುದ್ದಿನ ಸಾಃ ಚನ್ನವೀರ ನಗರ ಕಲಬುರಗಿ, ರವರು ಮತ್ತು  ಗೆಳಯನಾದ ಮಹ್ಮದ ಫಯಾಜ ಈತನು ತನ್ನ ಮೋಟಾರ ಸೈಕಲ ನಂ. ಕೆ.ಎ 27 ಇ.ಸಿ 8652 ನೇದ್ದರ ಮೇಲೆ ಫಿರ್ಯಾದಿಯನ್ನು ಹಿಂದೆ ಕೂಡಿಸಿಕೊಂಡು ಎಮ್.ಎ.ಟಿ ಕ್ರಾಸ್ ದಿಂದ ಕೆ.ಬಿ.ಎನ್ ದರ್ಗಾ ಕಡೆಗೆ ಹೋಗುತ್ತಿದ್ದಾಗ ಸಂತ್ರಾಸ್ ವಾಡಿ ರೋಡಿಗೆ ಇರುವ ಜಾನಿ ಪೆಟ್ರೊಲ ಬಂಕ ಹತ್ತಿರ ರೋಡಿನ ಮೇಲೆ ಸುಜಕಿ ಎಕ್ಸೆಸ್ ಮೋ. ಸೈ ನಂ. ಕೆ.ಎ 32 ಇ.ಸಿ 772 ನೇದ್ದರ ಚಾಲಕನು ತನ್ನ ಮೋಟಾರ ಸೈಕಲ ರಾಂಗ ಸೈಡಿನಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಕುಳಿತು ಹೊರಟ ಮೋಟಾರ ಸೈಕಲಕ್ಕೆ ಎದರುಗಡೆಯಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಮೋಟಾರ ಸೈಕಲ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಪಂಡಿತ ತಂದೆ ಶೀವರಾಯ ದೇವಂತಗಿ ರವರು ದಿನಾಂಕ 29-12-2014 ರಂದು ರಾತ್ರಿ 10:00 ಗಂಟೆಗೆ ಮಾರ್ಗ ಸೂಚಿ 55 ಕಲಬುರಗಿ ಜವಳಿ (ಡಿ) ಬಸ್ ನಂ ಕೆಎ-32-ಎಫ್-1501 ನೇದ್ದರಲ್ಲಿ ಸಾರಾಯಿ ಕುಡಿಯಲು ಬೇಡ ಅಂತಾ ಅಂದಿದಕ್ಕೆ ಜವಳಿ (ಡಿ) ಗ್ರಾಮದ ಅಗಸಿ ಹತ್ತಿರ ಬಸ್ ಚಲಾಯಿಸುತ್ತಿದ್ದಾಗ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆ ಬಡೆ ಮಾಡಿ ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಬಸ್ಸಿನ ಮುಂದಿನ ಗ್ಲಾಸಿಗೆ ಕಲ್ಲು ಹೊಡೆದು 25,000/- ನಷ್ಟ ಪಡಿಸಿದ ಬಾಬು ತಂದೆ ಸಿದ್ದಣ್ಣ ಬನಶೇಟ್ಟಿ ಸಾ: ಜವಳಿ (ಡಿ) ಇತನ ಮೇಲೆಸೂಕ್ತಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.