POLICE BHAVAN KALABURAGI

POLICE BHAVAN KALABURAGI

13 February 2015

Kalaburagi District Reported Crimes

ಕಡಲೆ ಚೀಲಗಳನ್ನು ಕಳವು ಮಾಡಿದ ಆರೋಪಿತರ ಬಂಧನ :
ಕಮಲಾಪೂರ ಠಾಣೆ : ದಿನಾಂಕ 09-02-2015 ರಂದು 12-00 ಪಿ.ಎಮ್ ಕ್ಕೆ ಶ್ರೀ ಬಸಪ್ಪ ತಂದೆ ದೇವಪ್ಪ ಹಕಾರೆ  ಸಾ:ನೆರೆಗಲ ಗ್ರಾಮ ತಾ:ರೋಣ ಜಿ:ಗದಗ ಇವರು ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದಿನಾಂಕ:11-02-2015 ರಂದು 11-00 ಎ.ಎಮಕ್ಕೆ ಪಿ.ಎಸ್.ಐ. ಕಮಲಾಪೂರ ಮತ್ತು ಠಾಣೆಯ ಸಿಬ್ಬಂದಿ ಜನರಾದ ಸಿದ್ರಾಮಪ್ಪ ಎ.ಎಸ.ಐ ಕತಲಸಾ ಪಿ.ಸಿ-310 ಹಾಗೂ ಹಣಮಂತ ರೆಡ್ಡಿ ಪಿ.ಸಿ-491 ಇವರನ್ನು ಕರೆದುಕೊಂಡು ಆರೋಪಿತರ ಪತ್ತೆ ಕುರಿತು ಭಿಮನಾಳ ಗ್ರಾಮಕ್ಕೆ ಬೇಟಿನೀಡಿ ಅಲ್ಲಿಂದ ಮರಗುತ್ತ ಗ್ರಾಮಕ್ಕೆ ಹೋಗುವಾಗ 12-00 ಪಿ.ಎಮ ಸೂಮಾರಿಗೆ ಮರಗುತ್ತಿ ಇನ್ನೂ 1 ಕೆ.ಮೀ  ಅಂತರ ಇದ್ದಾಗ 4 ಜನರು ನಮ್ಮ ಪೋಲಿಸ ಜೀಪನ್ನು ನೋಡಿ ಸಂಶಯಯಾಸ್ಪದ ರೀತಿಯಲ್ಲಿ ವರ್ತಿಸುತ್ತ ನಮಗೆ  ನೋಡಿ ವೇಗವಾಗಿ ಹೋಲದಲ್ಲಿ ಓಡಿ ಹೋಗುತ್ತಿದ್ದಾಗ ನಾನು ಸಿಬ್ಬಂದಿ ಜನರ ಸಹಾಯದಿಂದ ಆರೋಪಿತರಿಗೆ ಬೆನ್ನು ಹತ್ತಿ 4 ಜನರನ್ನು ಹಿಡಿದು ಅವರ ಹೆಸರು ವಿಳಾಸದ ಬಗ್ಗೆ ವಿಚಾರ ಮಾಡಲು ಸರಿಯಾಗಿ ತಮ್ಮ ಹೆಸರು ವಿಳಾಸ ಹೇಳದೆ ಇದ್ದುದರಿಂದ ಸದರಿ 4 ಜನರನ್ನು ಠಾಣೆಗೆ ಕರೆದುಕೊಂಡು ಬಂದು ಕೂಲಂಕುಷವಾಗಿ ವಿಚಾರ ಮಾಡಲು 1) ಲಕ್ಷ್ಮಣ ತಂದೆ ಅರ್ಜುನ ಕಾಳೆ ಸಾ; ಶೆಖಾಪೂರ 2) ಮಹೇಶ ತಂದೆ ಭಾಗಣ್ಣ ಗೋಡಕೆ ಸಾ; ಪಡಸಾವಳಗಿ, 3) ಚಂದ್ರಕಾಂತ ತಂದೆ ಸಂಗು ಕಾಳೆ  ಸಾ; ಶೆಖಾಪೂರ, 4) ಧರ್ಮರಾಜ ತಂದೆ ಭುತಾಳೆ ಸಾ;   ಪಡಸಾವಳಗಿ ಎಲ್ಲರೂ ತಾ; ಆಳಂದ ಜಿ; ಕಲಬುರ್ಗಿ  ಅಂತ ತಿಳಿಸಿದ್ದುನಂತರ ಅವರ ಸ್ವ ಖುಷಿ ಹೇಳಿಕೆಯನ್ನು ಪಡೆದ್ದಾಗ ಮೇಲೆ ಹೇಳಿದ ನಾಲ್ಕು ಜನರು ಮತ್ತು ಅಮೃತ ತಂದೆ ಮಕ್ಲು ಪವಾರ , ಗಂಗಾಧರ ತಂದೆ ಖಾರೋಳ ಕಾಳೆ, ಮಾಣಿಕ್ಯ ತಂದೆ ಪದ್ಮು ಕಾಳೆ, ಶಿವಾಜಿ ತಂದೆ ಪದ್ಮು ಕಾಳೆ, ವಸಂತ ತಂದೆ ಭೈರು ಪವಾರ ಮತ್ತು ರಾಜು ತಂದೆ ಭೈರು ಪವಾರ ಇವರೆಲ್ಲರೂ ಕೂಡಿ ದಿನಾಂಕ 08-02-2015 ರಂದು ರಾತ್ರಿ ವೇಳೆಯಲ್ಲಿ ಹೆದ್ದಾರಿಯ ಕುದರೆಮುಖ  ಹೊಡಿನಲ್ಲಿ ನಿಧಾನವಾಗಿ ಏರುತ್ತಿದ್ದ ಲಾರಿ , ಹಿಂದಿನಿಂದ ನಾಲ್ಕು ಜನರು ಅದರ ಮೇಲೆ ಏರಿ ಕೊಯಿತಾದಿಂದ ಲಾರಿಯ ಮೇಲೆ ಕಟ್ಟಿದ್ದ ತಾಡಪತ್ರಿ ಮತ್ತು ಹಗ್ಗವನ್ನು ಕಟ್ಟ ಮಾಡಿ ಲಾರಿಯಲ್ಲಿದ್ದ ಏಳು ಕಡಲಿ ಚೀಲಗಳನ್ನು ಕಳ್ಳತನ ಮಾಡಿ, ಕೆಳಗೆ ಬೀಸಾಕಿದ್ದು, ಉಳಿದ ಆರು ಜನರು ಮಹೇಂದ್ರ ಬುಲೆರೋ ಪೀಕಫ್ ಜೀಪಿನಲ್ಲಿ ಕಳ್ಳುವು ಮಾಡಿದ, ಚೀಲಗಳನ್ನು ಹಾಕುತ್ತಾ ಬಂದಿದ್ದುನಂತರ ಲಾರಿ ಚಾಲಕನಿಗೆ ಅನುಮಾನ ಬಂದು ಲಾರಿ ನಿಲ್ಲಿಸಿದ್ದಾಗನಾವೆಲ್ಲರೂ ಲಾರಿಯಿಂದ ಇಳಿದು ಬುಲೆರೋ ಜೀಪನಲ್ಲಿ ಕುಳಿತು ಕಳ್ಳತನ ಮಾಡಿದ್ದ ಕಡಲಿ ಚೀಲಗಳನ್ನು ತೆಗೆದುಕೊಂಡು  ಓಡಿ ಹೋದ ಬಗ್ಗೆ ತಪ್ಪು ಓಪ್ಪಿಕೊಂಡಿದ್ದು, ನಂತರ ಕಳ್ಳವು ಮಾಡಿ ಮುಚ್ಚಿಟ್ಟ ಜಾಗೆಯನ್ನು ಆರೋಪಿತನಾದ ಲಕ್ಷ್ಮಣ ಕಾಳೆ ಇತನು ತೋರಿಸಿ, ನಾಲ್ಕು ಚೀಲ ಕಡಲಿ ಅ,ಕಿ 8500 ಮತ್ತು ಒಂದು ಮಹೇಂದ್ರಾ ಪೀಕಫ್ ಬುಲೆರೋ ಜೀಪ್ ನಂ ಕೆಎ-32-ಬಿ-6722 ಅ.ಕಿ 2,00000 ಲಕ್ಷ ಮತ್ತು ಒಂದು ಕೊಯಿತಾ ಅ.ಕಿ 00.00 ನೇದ್ದನು ಹಾಜಪಡಿಸಿದ್ದು  ಅವುಗಳನ್ನು ಜಪ್ತಿಮಾಡಿಕೊಂಡು ಸದರಿಯವರಿಗೆ ನ್ಯಾಯಾಂಗ ಬಂಧನ ಕುರಿತು ಕಳುಹಿಸಲಾಗಿದೆ.
ಅಪಘಾತ ಪ್ರಕರಣಗಳು :
ಜೇವರ್ಗಿ ಠಾಣೆ : ದಿನಾಂಕ 11.02.2015 ರಂದು ಸಾಯಂಕಾಲ 06:00 ಗಂಟೆಯ ಸುಮಾರಿಗೆ ಕಟ್ಟಿ ಸಂಗಾವಿ ಕ್ರಾಸ್‌ ಹತ್ತಿರ ಮಲ್ಲಣ್ಣ ಹೆಳವರ ಇವರ ಮನೇಯ ಹತ್ತಿರ ಜೇವರ್ಗಿ ಕಲಬುರಗಿ ಮೇನ್‌ ರೋಡ್‌ ಮೇಲೆ ಶ್ರೀ ನಾಗಣ್ಣ ತಂದೆ ನಿಂಗಣ್ಣ ನಂದೆಳಿ ಸಾ: ಯನಗುಂಟಿ ಮತ್ತು ಇತರರು ಕುಳಿತುಕೊಂಡು ಹೋಗುತ್ತಿದ್ದ ಟಂಟಂ ನಂ ಕೆ.ಎ32ಎ6769 ನೇದ್ದಕ್ಕೆ ಟಿ.ಎಸ್12ಯು.ಎ೦551 ನೇದ್ದರ ಚಾಲಕ ನೇದ್ದರ ಚಾಲಕನು ತನ್ನ ಲಾರಿಯನ್ನು ತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಫಿರ್ಯಾದಿ ಮತ್ತು ಇತರರು ಕುಳಿತುಕೊಂಡು ಹೋಗುತ್ತಿದ್ದ ಟಂಟಂಗೆ ಹಿಂದಿನಿಂದ ಡಿಕ್ಕಿ ಪಡಿಸಿ ಟಂಟಂ ಪಲ್ಟಿಮಾಡಿ ಫಿರ್ಯಾದಿ ಮತ್ತು ಇತರರಿಗೆ ಸಾದಾ ಮತ್ತು ಭಾರಿ ಗಾಯಗೊಳಿಸಿ ತನ್ನ ಲಾರಿ ಸಮೇತ ಓಡಿಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 12-02-2014 ರಂದು ಮದ್ಯಾಹ್ನ ಶ್ರೀ ಮಲ್ಲಿಕಾರ್ಜುನ ತಂದೆ ಶಿವಲಿಂಗಪ್ಪಾ ಪಾಟೀಲ  ಸಾ: ಆರ್.ಜಿ. ನಗರ ಖಾದ್ರಿ ಚೌಕ ಕಲಬುರಗಿ ರವರು ಮತ್ತು ಅವರ ಚಿಕ್ಕಪ್ಪನ ಮಗನಾದ ಶರಣು ಪಾಟೀಲ ಇಬ್ಬರೂ ಜೆ.ಆರ್ ನಗರಕ್ಕೆ ಹೋಗಬೇಕು ಅಂತಾ ನಡೆದುಕೊಂಡು ಇಬ್ಬರೂ ಹೋಗುವಾಗ ಕೇಂದ್ರ ಬಸ್ ನಿಲ್ದಾಣದ ಕಡೆಯಿಂದ ಒಬ್ಬ ಮೋಟಾರ ಸೈಕಲ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹಿಂದಿನಿಂದ ಬಂದು ನನಗೆ ಡಿಕ್ಕಿ ಪಡಿಸಿದರಿಂದ ನನಗೆ ಬಲ ಹಣೆಗೆ ರಕ್ತಗಾಯ, ಬಲಕಣ್ಣಿಗೆ ಗುಪ್ತಪೆಟ್ಟು, ಎಡಗಣ್ಣಿಗೆ ಗುಪ್ತಪೆಟ್ಟು ಬಿದ್ದು ಬಾವ ಬಂದಿರುತ್ತದೆ ಅಪಘಾತ ಪಡಿಸಿದ ಮೋ/ಸೈಕಲ ಸವಾರನ ಹಿಂದುಗಡೆ ಕುಳಿತ್ತಿದ್ದ ಸಾಗರ ಇತನು ಕೂಡಾ ಕೆಳಗಡೆ ಬಿದ್ದು ಗಾಯಹೊಂದಿದ್ದು ಮೋ/ಸೈಕಲ ಸವಾರ  ನಮ್ಮ ಕಡೆಗೆ ನೋಡುತ್ತಾ ಜಿ.ಆರ್ ನಗರ ಕಡೆಗೆ ತನ್ನ ಮೋ/ಸೈಕಲ ಸಮೇತ ಓಡಿಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಝಕೀಯಾ ಗಂಡ ಅತೀಕ ಅಹ್ಮದ ಸಾ; ಮನೆ ನಂ 1-949-10/29ಎ ಶಹಾಬಾಜ ಕಾಲೋನಿ ರೆಹಮತ ನಗರ ಕಲಬುರಗಿ ಇವರು ದಿನಾಂಕ 29.03.2008 ರಂದು ಅತೀಕ ಅಹ್ಮದನೊಂದಿಗೆ ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗಿದ್ದು ಮದುವೆ ಕಾಲಕ್ಕೆ ವರನಿಗೆ ವರದಕ್ಷಿಣೆ ರೂಪದಲ್ಲಿ 15.000/- ರೂ ಹೀರೋ ಹೊಂಡಾ ದ್ವೀಚಕ್ರ ವಾಹನ 1 ತೊಲೆ ಬಂಗಾರ ಮತ್ತು ಗ್ರಹ ಬಳಕೆಯ ಸಾಮಾನುಗಳು ಕೊಟ್ಟಿದ್ದು ಇರುತ್ತದೆ ಮದುವೆಯಾದ ನಂತರ ನನ್ನ ಗಂಡ ನನ್ನೊಂದಿಗೆ ಒಳ್ಳೆ ಬಾಂದವ್ಯದಿಂದ ಇದ್ದುದರಿಂದ ನನಗೆ ಆಪಿಯಾ ಮಹರನ ಅಂತಾ ಒಂದು ಹೆಣ್ಣು ಮಗು ಹುಟ್ಟಿರುತ್ತದೆ ಆವಾಗಿನಿಂದ ನನ್ನ ಗಂಡ ಅತೀಕ ಒಂದಲ್ಲಾ ಒಂದು ಕಾರಣ ಒಡ್ಡಿ ಹಿಂಸೆ ಕೊಡಲು ಪ್ರಾರಂಬಿಸಿದನು. ನನ್ನ ಅತ್ತೆ ಬದರ ಜಹಾಂ ಮಾವ ಶೇಖಯಾಕುಬ ಮೈದುನ ಶಫೀಖಅಹ್ಮದ ನಾದಿನಿ ಆಸ್ಮಾ ಪೀರದೋಸ, ಅಪ್ಸಾನ ಇವರೆಲ್ಲರೂ ಕೂಡಿ ನನ್ನ ಗಂಡನಿಗೆ ಪ್ರಚೋದನೆ ಕೊಡುತ್ತಾ ತವರು ಮನೆಯಿಂದ 2 ಲಕ್ಷ ರೂ ತೆಗೆದುಕೊಂಡು ಬಾ ಅಂತ ಹಿಂಸೆ ಕೊಡಲು ಪ್ರಾರಂಬಿಸಿದರು. ದಿನಾಂಕ 09.01.2015 ರಂದು 5 ಗಂಟೆ ಸುಮಾರಿಗೆ ನಾನು ನಮ್ಮ ತಂದೆ ತಾಯಿಯ ಮನೆಯಲ್ಲಿದ್ದಾಗ ನನ್ನ ಗಂಡ ನನ್ನ ತವರು ಮನೆಗೆ ಬಂದು ಅವಾಚ್ಯವಾಗಿ ಬೈಯ್ಯಲು ಪ್ರಾರಂಬಿಸಿ ಚಪ್ಪಲಿಯಿಂದ ಹೊಡೆದು ಕೂದಲು ಹಿಡಿದು ಜಗ್ಗಾಡಿ ಕೈಯಿಂದ ಹೊಡೆಬಡೆ ಮಾಡಲು  ಹತ್ತಿದನು. ಈ ವಿಷಯವನ್ನು ನಾನು ನನ್ನ ಅತ್ತೆ ಮಾವನಿಗೆ ಪೋನ ಮಾಡಿ ತಿಳಿಸಿದರೆ ಅವರು ಕೂಡ ಬಾಯಿಗೆ ಬಂದಂತೆ ಬೈದು ಏ ರಂಡಿ ನೀನು ನನ್ನ ಮಗನಿಗೆ 2 ಲಕ್ಷ ರೂ ತರದೇ ಇದ್ದರೆ ನನ್ನ ಮಗನಿಗೆ ಬೇರೆ ಮದುವೆ ಮಾಡುತ್ತೇವೆ ಅಂತಾ ಬೈದಿರುತ್ತಾರೆ. ನೀನು ಕೇಸು ಮಾಡಿದರೆ ನಿನಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.