POLICE BHAVAN KALABURAGI

POLICE BHAVAN KALABURAGI

02 January 2012

GULBARGA DIST REPORTED CRIMES

ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ :
ಶ್ರೀ ರಾಮು ತಂದೆ ಸಿದ್ದಣ್ಣಾ ಹೊನಗುಂಟಾ ಸಾ:ಶಂಕರವಾಡಿರವರು ನಾನು ಮತ್ತು ವಿನೋದ ಕೂಡಿಕೊಂಡು ಮರೇಮ್ಮಾ ಗುಡಿಯ ಹತ್ತಿರ ಹೊಗುತ್ತಿರುವಾಗ ರಾಜು ತಂದೆ ಮಲ್ಲಪ್ಪಾ ಸಂಗಡ ಇಬ್ಬರೂ ಹಾಗೂ ರಾಣೋಜಿ ತಂದೆ ದೇವಪ್ಪಾ ಸಂಗಡ ಮೂವರು ಸಾ:ಎಲ್ಲರೂ ಶಂಕರವಾಡಿ ಇವರ ನಡುವೆ ಹೊಸ ವರ್ಷದಲ್ಲಿ ಸ್ಪೀಕರ ಹಚ್ಚುವ ಸಲುವಾಗಿ ಬಾಯಿ ಮಾತಿನ ಜಗಳ ನಡೆಯುತ್ತಿರುವಾಗ ನಾವು ಏಕೆ ಜಗಳ ತೆಗೆಯುತ್ತೀರಿ ಅಂತಾ ಕೇಳಿದಕ್ಕೆ ರಾಣೋಜಿ ಇತನು ನನಗೆ ಮತ್ತು ವಿನೋದನಿಗೆ ಅವಾಚ್ಯ ಶಬ್ಬಗಳಿಂದ ಬೈದು ಕಲ್ಲಿನಿಂದ ತಲೆಗೆ ಹೊಡೆದು ಕೈ ಮುಷ್ಠಿಮಾಡಿ ಎಡಗೈ ಮುಂಗೈಗೆ ಹೊಡೆದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 02/2012 ಕಲಂ:323,324,504,506,ಸಂ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:
ಕು ಶರಣಕುಮಾರ ತಂದೆ ಶಿವಾನಂದ ಸುತಾರ ವ: 14 ಉ: ವಿಧ್ಯಾರ್ಥಿ ಸಾ: ನರೋಣ ಹಾ.ವ: ತಾರಫೈಲ್ ಗುಲಬರ್ಗಾರವರು ನಾನು ಮತ್ತು ನನ್ನ ಕಾಕ ಕಲ್ಲಪ್ಪ ಈತನಿಗೆ ಹಣ ಬೇಕಾಗಿದ್ದರಿಂದ ದಿನಾಂಕ: 02-01-2012 ರಂದು ಆಶ್ರಯ ಕಾಲೋನಿ ಶೇಖ ರೋಜಾದಿಂದ ಬೆಳಗ್ಗೆ ಎ.ಟಿ.ಎಮ್.ದಿಂದ ಹಣ ತರಲು ಶೆಟ್ಟಿ ಕಾಂಪ್ಲೇಕ್ಸ ಹತ್ತಿರ ಮೋಟಾರ ಸೈಕಲ್ ನಂ: ಕೆಎ 32 ಎಲ್ 8626 ನೇದ್ದರ ಮೇಲೆ ನಾನು ಹಿಂದೆ ಕುಳಿತು ಶೇಟ್ಟಿ ಕಾಂಪ್ಲೇಕ್ಸ ಎ.ಟಿ.ಎಮ್.ಕ್ಕೆ ಬಂದು ಎ.ಟಿ.ಎಮ್.ದಿಂದ ಹಣ ಬರದಿದ್ದಕ್ಕೆ ಪುನಃ ಆಶ್ರಯ ಕಾಲೋನಿಗೆ ಶಾಹಾ ಬಜಾರ ನಾಕಾದಿಂದ ಆಳಂದ ಚೆಕ್ಕಪೊಸ್ಟ ಮುಖಾಂತರ ಗದಲೇಗಾಂವ ಕಾಂಪ್ಲೇಕ್ಸ ಎದುರುಗಡೆ ಹೋಗುತ್ತಿರುವಾಗ ಕಾರ ನಂ:ಕೆಎ 32 ಎನ್ 29 ರ ಚಾಲಕ ಆಳಂದ ಚೆಕ್ಕಪೊಸ್ಟ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಾವು ಕುಳಿತು ಹೋಗುತ್ತಿದ್ದ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿದ್ದರಿಂದ ನಾವು ಮೋಟಾರ ಸೈಕಲ್ ಸಮೇತ ಕೆಳಗಡೆ ಬಿದ್ದೆವು . ಕಾಕನಾದ ಕಲ್ಲಪ್ಪ ಈತನ ತಲೆಗೆ ಭಾರಿ ಪೆಟ್ಟು ಬಿದ್ದು ರಕ್ತ ಸೋರಿ ಆತನು ಸ್ಥಳದಲ್ಲಿಯೇ ಮೃತ ಪಟ್ಟಿದನು. ನನಗೆ ಬಲ ಭುಜಕ್ಕೆ ಬಲ ಮೊಳಕಾಲಿಗೆ ತರಚೀದ ಗಾಯವಾಗಿರುತ್ತದೆ. ಕಾರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 02/12 ಕಲಂ: 279,337 304(ಎ) ಐ.ಪಿ.ಸಿ.ಸಂ:187 ಐ.ಎಮ್.ವಿ.ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಜಾತಿ ನಿಂದನೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ :
ಶ್ರೀ ರಾಣೋಜಿ ತಂದೆ ದೇವಪ್ಪಾ ಹಾದಿಮನಿ ಸಾ:ಶಂಕರವಾಡಿ ರವರು ನನ್ನ ಮಗ ಆಕಾಶ ಇತನು ದಿನಾಂಕ:01/01/2012 ರಂದು ಬೆಳಿಗ್ಗೆ 9.00 ಗಂಟೆಗೆ ಶಂಕರವಾಡಿಯ ಮರೇಮ್ಮಾ ಗುಡಿಯ ಹತ್ತಿರ ನೀರು ತರಲು ಹೋದಾಗ ರಾಜು ತಂದೆ ಮಲ್ಲಪ್ಪಾ, ಬಸಂತ ತಂದೆ ಶಿವಶರಣಪ್ಪಾ, ಸುರೇಶ ತಂದೆ ಮಲ್ಲಪ್ಪಾ, ಮಲ್ಲಿಕಾರ್ಜುನ ತಂದೆ ಸಿದ್ದಣ್ಣಾ ದೊಡ್ಡಮನಿ ಸಾ:ಎಲ್ಲರೂ ಶಂಕರವಾಡಿ ಗ್ರಾಮದವರು ಕೂಡಿಕೊಂಡು ಬಂದು ನನ್ನ ಮಗ ಆಕಾಶನಿಗೆ ನಿನ್ನೆ ಸ್ಪೀಕರ ಹಚ್ಚುವ ಸಂಭಂದ ಜಗಳ ತೆಗೆಯುತ್ತಿಯಾ ಜಾತಿ ಎತ್ತಿ ಬೈದು ಕೈಯಿಂದ ಮತ್ತು ಕಲ್ಲಿನಿಂದ ಹೊಡೆದು ರಕ್ತಗಾಯ ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 01/2012 ಕಲಂ:341 324 504 ಸಂ:34 ಐಪಿಸಿ ಮತ್ತು 3[1] [10] ಎಸ್‌ಸಿ/ಎಸ್‌ಟಿ ಪಿಎ ಆಕ್ಟ್‌ 1989 ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ
ಫರಹತಾಬಾದ ಪೊಲೀಸ್ ಠಾಣೆ :
ಶ್ರೀ ಚಂದ್ರಕಾಂತ ತಂದೆ ದಶರಥ ಶಾಕಾಪೂರ ಸಾ: ಬಸನಾಳ ತಾ:ಜಿ:ಗುಲಬರ್ಗಾರವರು ನಾನು ಮತ್ತು ಪರಿಚಯವರಾದ ಕಲ್ಯಾಣಿ ಇಬ್ಬರೂ ಕೂಡಿಕೊಂಡು ಓಮಿನಿ ಕಾರ ನಂ: ಕೆಎ-04 ಸಿ-3764 ರಲ್ಲಿ ಕುಳಿತುಕೊಂಡು ಗುಲಬರ್ಗಾದಿಂದ ಫರಹತಾಬಾದಕ್ಕೆ ಖಾಸಗಿ ಕೆಲಸ ಕುರಿತು ಬಂದು ಕೆಲಸ ಮುಗಿದ ನಂತರ ರಾತ್ರಿ 11-00 ಗಂಟೆಗೆ ಮರಳಿ ಗುಲಬರ್ಗಾಕ್ಕೆ ಹೋಗುತ್ತಿದ್ದಾಗ ನಂದಿಕೂರ ತಾಂಡಾದ ಹತ್ತಿರ 11-45 ಗಂಟೆಯ ಸುಮಾರಿಗೆ ನಮ್ಮ ಕಾರ ಚಾಲಕನು ಸದರಿ ಕಾರನ್ನು ರಸ್ತೆಯ ಎಡಬದಿಗೆ ನಿಲ್ಲಿಸಿ ಮೂತ್ರ ವಿರ್ಸಜನೆ ಮಾಡುತ್ತಿದ್ದಾಗ ನಿಲ್ಲಿಸಿದ ನಮ್ಮ ಕಾರಿಗೆ ಎದುರಿನಿಂದ ಒಬ್ಬ ಖಾಸಗಿ ಟೂರಿಸ್ಟ ಬಸ್ ಚಾಲಕ ಎಪಿ-16 ಟಿಸಿ-7171 ನೇದ್ದರ ಚಾಲಕ ಬಸ್‌ನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಿಂತ್ತಿದ್ದ ಕಾರಿಗೆ ಡಿಕ್ಕಿ ಪಡಿಸಿದ್ದರಿಂದ ನನಗೆ ಬಲಗೈ ಹತ್ತಿರ ಮುಂಗೈಗೆ ಭಾರಿ ರಕ್ತಗಾಯವಾಗಿ ಮೊಳೆ ಮುರಿದಂತೆ ಆಗಿರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 02/2012 ಕಲಂ 279. 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ಸಂಜೀವಕುಮಾರ ತಂದೆ ಲಕ್ಕು ಚವ್ಹಾಣ ಸಾ: ಉದನೂರ ತಾಂಡಾ ತಾ:ಜಿ: ಗುಲಬರ್ಗಾರವರು ನಾನು ಮತ್ತು ನನ್ನ ಅಣ್ಣ ರಾಜುಕುಮಾರ ಈತನು ಗೆಳೆಯರು ಕೂಡಿಕೊಂಡು ಉದನೂರ ಸೀಮೆಯ ಹಾದಿ ಬಸವಣ್ಣ ಗುಡಿಯ ಖುಲ್ಲಾ ಜಾಗೆಯಲ್ಲಿ ದಿನಾಂಕ 1-01-2012 ರಂದು ಮಧ್ಯಾಹ್ನ 1-30 ಗಂಟೆ ಸುಮಾರಿಗೆ ಕ್ರಿಕೆಟ ಆಡುತ್ತಿದ್ದಾಗ ಜೈಭೀಮ ತಂದೆ ಶಿವಲಿಂಗಪ್ಪ ಕೊರಳ್ಲಿ ಸಾ: ಉದನೂರ ಇತನು ನನಗೆ ಕರೆದು ಅವಾಚ್ಯವಾಗಿ ಬೈದು ನಾ ಕರೆದರೆ ಬರುವುದಿಲ್ಲಾ ಎಂದು ಬೈಯ್ಯುತ್ತಿದ್ದಾಗ ಯಾಕೇ ಬೈಯ್ಯುತ್ತಿದ್ದೀ ಎಂದು ಕೇಳಿದ್ದಕ್ಕೆ ಈ ಹಿಂದೆ ನನ್ನ ಮೇಲೆ ಮಾಡಿದ ಕೇಸ್ ವಾಪಸ್ಸು ತೆಗೆದುಕೋ ಎಂದು ಹೇಳಿದನು ನಾನು ಆಗುವದಿಲ್ಲ ಅಂತಾ ಅಂದಿದಕ್ಕೆ ಕೇಸ ವಾಪಸ್ಸು ತೆಗೆದುಕೊಳ್ಳುವುದಿಲ್ಲಾ ಅಂತೀ ಅನ್ನುತ್ತಾ ಕೈಯಲ್ಲಿದ್ದ ಚಾಕುದಿಂದ ಎಡಗೈ ರಟ್ಟೆಯ ಮೇಲೆ ಹೊಡೆದು ರಕ್ತಗಾಯಗೊಳಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 1/2012 ಕಲಂ 504, 324, 506 (2)ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ,
ಹಲ್ಲೆ ಪ್ರಕರಣ:
ಮಹಾಗಾಂವ ಪೊಲೀಸ ಠಾಣೆ:
ಶ್ರೀ ಶರಣಬಸಪ್ಪ ತಂದೆ ಗುರುಶಾಂತಪ್ಪ ಸಾ ಹೊಳಕುಂದಾ ತಾಜಿ ಗುಲಬರ್ಗಾ ರವರು ನಾನು ಹಾಗೂ ಅಳಿಯ ಮಂಜುನಾಥ ಹಾಗೂ ಅಕ್ಕ ಸಂಗಮ್ಮ ಇವರಿಗೆ ಅದೇ ಗ್ರಾಮದವರಾದ ಹಣಮಂತ ಸೋನಳ್ಳಿ, ಉದಯಕುಮಾರ ಚಿನ್ನ, ಪ್ರೇಮಕುಮಾರ ಖಂಡಾರಿ, ಇವರು ಅವಾಚ್ಯವಾಗಿ ಬೈದು ಚಾಕುವಿನಿಂದ ಹೊಡೆದು ರಕ್ತಗಾಯ ಗೊಳಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದಠಾಣಾ ಗುನ್ನೆ ನಂ: 01/2012 ಕಲಂ: 341, 323, 324, 504, 506(II) ಸಂ, 34 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.