POLICE BHAVAN KALABURAGI

POLICE BHAVAN KALABURAGI

14 February 2012

GULBARGA DIST REPORTED CRIMES

ಅಪಘಾತ ಪ್ರಕರಣ:
ನೇಲೋಗಿ ಪೊಲೀಸ್ ಠಾಣೆ :
ಶ್ರೀಮತಿ ಮರೇಮ್ಮ ಗಂಡ ಬಾಬುರಾಯ ನಾಯ್ಕೊಡಿ ಸಾ: ಗೌನಳ್ಳಿರವರು ನಾನು ದಿನಾಂಕ 13/02/2012 ರಂದು ಸೊನ್ನ ದಿಂದ ಹಿಪ್ಪರಗಾ ಎಸ್ ಎನ್ ಕಡೆ ಟಂ ಟಂ ದಲ್ಲಿ ಕುಳಿತು ಮಂದೆವಾಲ ಬಸ್ಸ ನಿಲ್ದಾಣದ ಹತ್ತಿರ ಹೋಗುವಾಗ ಗುಲಬರ್ಗಾ ಕಡೆಯಿಂದ ಬಂದ ಕೆಂಪು ಕಲರ ಕಾರ ಚಾಲಕನು ನಾವು ಕುಳಿತ ಟಂಟಂ ಕ್ಕೆ ಡಿಕ್ಕಿ ಹೊಡೆದು ಕಾರ ಚಾಲಕನು ತನ್ನ ಕಾರನ್ನು ನೀಲ್ಲಿಸದೆ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 20/2012 ಕಲಂ 279.337.338. ಐ ಪಿಸಿ ಸಂ/ 187 ಐ ಎಮ್ ವಿ ಆಕ್ಟ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ:
ಶ್ರೀ ರಘುವೀರ ತಂದೆ ಶಿವಣ್ಣ ಇನಾಮದಾರ ಸಾ: ಅರಳಹಳ್ಳಿ ತಾ: ಶಹಾಪೂರ ರವರು ನಾನು ನಿನ್ನೆ ದಿನಾಂಕ: 13/02/2012 ರಂದು ಸಾಯಂಕಾಲ 6-00 ಗಂಟೆಗೆ ಸುಮಾರಿಗೆ ನಾನು ಮತ್ತು ಪರಿಚಯದ ಲಕ್ಷ್ಮಣ ನ್ಯಾವನೂರ ಇಬ್ವರೂ ಟ್ರಾಕ್ಟರ ನಂ ಕೆಎ. 33 ಟಿ 8581 ಟ್ರಾಲಿ ನಂ ಕೆ.ಎ. 32 /2972 ನೇದ್ದನು ಶಹಾಪೂರದಿಂದ ಶಿರವಾಳಕ್ಕೆ ಹೋಗಿ ಪರಸಿ ಕಲ್ಲುಗಳು ಹಾಕಿಕೊಂಡು ಯಡ್ರಾಮಿಗೆ ಬರುತ್ತಿದ್ದಾಗ ರಾತ್ರಿ 9-00 ಗಂಟೆ ಸುಮಾರಿಗೆ ಮುದಬಾಳ (ಕೆ) ಕ್ರಾಸ ದಾಟಿ ಸ್ವಲ್ಪ ಮುಂದೆ ರೋಡಿನಲ್ಲಿ ಟ್ರಾಕ್ಟರ ಟೈರ ಪಂಚರ ಆಗಿದ್ದರಿಂದ ರೋಡಿನಲ್ಲಿ ಬದಿಯಲ್ಲಿ ಟ್ರಾಕ್ಟರ ಪಾರ್ಕಿಂಗ ಲೈಟ ಹಾಕದೆ ನಿಲ್ಲಿಸಿದ್ದು ರಾತ್ರಿ 9-15 ಗಂಟೆಗೆ ಶಹಾಪೂರ ಕಡೆಯಿಂದ ಗುರುಪ್ರಸಾದ ಇತನು ತನ್ನ ಹೀರೋ ಹೊಂಡಾ ಮೋಟಾರ ಸೈಕಲ ನಂ ಕೆ.ಎ. 32 ಯು 5864 ನೇದ್ದನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಟ್ರಾಕ್ಟರ ಟ್ರಾಲಿಯ ಹಿಂಭಾಗಕ್ಕೆ ಜೋರಾಗಿ ಡಿಕ್ಕಿ ಹೊಡೆದು ಗಾಯಾ ಹೊಂದಿ ಉಪಚಾರ ಕುರಿತು ಗುಲಬರ್ಗಾ ಆಸ್ಪತ್ತೆಗೆ ತೆಗೆದುಕೊಂಡು ಹೋಗುತ್ತಿದ್ದಾಗ ದಾರಿಯ ಮದ್ಯದಲ್ಲಿ ಮೃತಪಟ್ಟಿರುತ್ತಾನೆ. ಕಾರಣ ಸದರಿ ಇಬ್ಬರ ಚಾಲಕರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂಬರ 18/2012 ಕಲಂ 279,283, 304 (ಎ), ಐಪಿಸಿ ಸಂಗಡ 187 ಐ.ಎಮ್.ವಿ ಅಕ್ಟ ಅಡಿಯಲ್ಲಿ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಕಳ್ಳತನ ಪ್ರಕರಣ:
ಅಶೋಕ ನಗರ ಠಾಣೆ:
ಶ್ರೀ ನೋಶಿಲ್ ಪಾಂಡೆ ತಂದೆ ನಾಗೇಶ ಪಾಂಡೆ ಉ ಬಿಎಸ್ಎನ್ಎಲ್ ಆಫೀಸ್ ಶಹಾಪುರದಲ್ಲಿ ಕೆಲಸ ಸಾ: ಬಿಎಸ್ಎನ್ಎಲ್ ಸ್ಟಾಫ್ ಕ್ವಾಟರ್ಸ –ಬಿ2 ಹಿಂದುಗಡೆ ಟೇಲಿಪೋನ್ ಎಕ್ಸಚೆಂಜ್ ಶಹಾಪುರ ರವರು ನಾನು ದಿನಾಂಕ 12/02/2012 ರಂದು ಹೈದ್ರಾಬಾದಕ್ಕೆ ಬಂದು ಹೈದ್ರಾಬಾದಿಂದ ಗುಲಬರ್ಗಾಕ್ಕೆ ದಿನಾಂಕ 13/02/2012 ರಂದು ಬೆಳಗಿನ ಜಾವ 4-30 ಗಂಟೆಗೆ ಬಂದು ನೋಡಲಾಗಿ ಬಸ್ಸಿನಲ್ಲಿದ್ದ ನನ್ನ ಡೆಲ್ಲ ಕಂಪನಿಯ ಲ್ಯಾಪ ಟ್ಯಾಪ್ ಅ.ಕಿ. 34,300/- ರೂ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯ ಗುನ್ನೆ ನಂ. 14/2012 ಕಲಂ. 379 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.