POLICE BHAVAN KALABURAGI

POLICE BHAVAN KALABURAGI

31 December 2012

GULBARGA DISTRICT REPORTED CRIMES


ಕೊಲೆ ಪ್ರಕರಣ:
ಚಿಂಚೋಳಿ ಪೊಲೀಸ್ ಠಾಣೆ:ಶ್ರೀ ಮೌಲಾನಾಸಾಬ ತಂದೆ ಮೈನೋದ್ದಿನ ಶೆರಿಕಾರ ಸಾ|| ಮರಪಳ್ಳಿ  ಇವರು ನನ್ನ ಮಗನಾದ ಮಂಜೆಲೆಸಾಬ ಇತನು ದಿನಾಂಕ:31-12-2012 ರಂದು ರಾತ್ರಿ 10.30 ಗಂಟೆಯ ಸುಮಾರಿಗೆ ತಾನು ಕೆಲಸ ಮಾಡುವ ಮಾಲಿಕರಾದ ನರಸಪ್ಪ ನಾಟಿಕಾರ ಇವರ ಮನೆಗೆ ಹೋಗಿ ಎತ್ತುಗಳಿಗೆ ಮೇವು ಹಾಕಿ ಬರುತ್ತೆನೆ ಅಂತ ಹೇಳಿ ಹೋಗಿದ್ದು,ರಾತ್ರಿ 12.30 ಗಂಟೆಗೆ ನಮ್ಮ ಮನೆಯ ಪಕ್ಕದಲ್ಲಿರುವ ಬಾಬು ಕಂಬಾರ  ಇತನು ಮನೆಯ ಬಾಗಿಲು ಬಡೆದು ನಮ್ಮನ್ನು ಎಬ್ಬಿಸಿ ನಿಮ್ಮ ಮಗನಾದ ಮಂಜೆಲೆಸಾಬನಿಗೆ ನರಸಪ್ಪ ಆತನ ತಾಯಿಯಾದ ಚಂದ್ರಮ್ಮಾ  ಇಬ್ಬರು ಕೂಡಿಕೊಂಡು ಹೊಡೆಯುತ್ತಿದ್ದಾರೆ ಅಂತ ತಿಳಿಸಿದ್ದರಿಂದ, ನಾನು, ನನ್ನ ಹೆಂಡತಿ, ತಮ್ಮನಾದ ಜಬ್ಬರ ಕೂಡಿಕೊಂಡು ನರಸಪ್ಪ ಇವರ ಮನೆಯಲ್ಲಿ ಹೋಗಿ ನೋಡಲು ಎತ್ತುಗಳು ಕಟ್ಟಿರುವ ಕೋಟ್ಟಿಗೆಯಲ್ಲಿರುವ ಕಂಬಕ್ಕೆ ಹಗ್ಗದಿಂದ ನನ್ನ ಮಗನಿಗೆ ಕಟ್ಟಿಹಾಕಿ ನರಸಪ್ಪ ಬಡಿಗೆಯಿಂದ ನನ್ನ ಮಗನ ತಲೆಗೆ ಹೋಡೆಯುತ್ತಿದ್ದನು, ಚಂದ್ರಮ್ಮಾ ಇವಳು ಕಲ್ಲನ್ನು ಕೈಯಲ್ಲಿ ಹಿಡಿದುಕೊಂಡು ತಲೆಗೆ ಮತ್ತು ಬೆನ್ನಿಗೆ ಹೊಡೆಯುತ್ತಿದ್ದಳು. ನಾನು ನರಸಪ್ಪ ಇತನಿಗೆ ಏಕೆ ನನ್ನ ಮಗನಿಗೆ ಹೊಡೆಯುತ್ತಿದ್ದಿರಿ ಅಂತ ಕೇಳಿದ್ದಕ್ಕೆ,  ನೀಏನು ಕೇಳುತ್ತಿ  ಸೂಳಿ ಮಗನೆ ಅವನು ಮಾಡಿದ ಗನಂದಾರಿ ಕೆಲಸಕ್ಕೆ ಜೀವ ಸಹಿತ ಬಿಡುವದಿಲ್ಲ ಅಂತ ಬೈಯುತ್ತಿದ್ದನು. ನಾವು ಅಂಜಿ ನನ್ನ ಮಗ ಏನದರೂ ತಪ್ಪು ಮಾಡಿದರೆ ಬೇಳೆಗ್ಗೆ ಹಿರಿಯರ ಸಮಕ್ಷಮ ವಿಚಾರ ಮಾಡಿದರಾಯಿತ್ತು ಅಂತ ಕೈಕಾಲು ಬಿದ್ದರೂ ನಮಗೆ ಅಂಜಿಸುತ್ತಿದ್ದರೂ. ಸದರಿಯವರು ನನ್ನ ಮಗನಿಗೆ ಹೊಡೆಯಲು ಅವರ ಸೋಸೆಯಾದ ನಾಗಮ್ಮ ಇವಳ ಸಂಗಡ ಅನೈತಿಕ ಸಂಬಂದ ಇದೆಯಂತ ತಪ್ಪು ತಿಳಿದುಕೊಂಡು ಹೊಡೆಬಡೆ ಮಾಡಿರುತ್ತಾರೆ. ದಿನಾಂಕ;31-12-2012 ರಂದು ಬೆಳಿಗ್ಗೆ 7.00  ಗಂಟೆಗೆ ನಾನು ನನ್ನ ಹೆಂಡತಿ ಹೂಡಮಾಬಿ,ನನ್ನ ತಮ್ಮಂದಿರಾದ ಮೈಬೂಬು ಮತ್ತು ಜಬ್ಬಾರ ಕೂಡಿಕೋಂಡು  ನರಸಪ್ಪ ಇತನ ಮನೆಗೆ ಹೋಗಿ ನೋಡಲು ನನ್ನ ಮಗನಾದ ಮಂಜೆಲೆಸಾಬನು ದನದ ಕೋಟ್ಟಿಗೆಯಲ್ಲಿ ಕಂಬಕ್ಕೆ ಕಟ್ಟಿದಲ್ಲಿಯೇ ಮೃತಪಟ್ಟಿದ್ದನು. ನನ್ನ ಮಗನಿಗೆ ಕೋಲೆ ಮಾಡಿದವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ  ನಂ:140/2012 ಕಲಂ 324,342,504,302 ಸಂಗಡ 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.                                      
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:ಶ್ರೀ ರಾಮಲಿಂಗ ತಂದೆ ರೇವಣಸಿದ್ದಪ್ಪ ಹಳ್ಳಿಖೇಡ  ವಯಾ: 20 ಉ:ವಿಧ್ಯಾರ್ಥಿ  ಸಾ||ಅರವಿಂದ ಆಶ್ರಮ ಹತ್ತಿರ ಓಂ ನಗರ ಸೇಡಂರೋಡ  ಗುಲಬರ್ಗಾ ರವರು ನಾನು ಮತ್ತು ಸಚೀನ ಕೂಡಿಕೊಂಡು ದಿನಾಂಕ:30-12-2012  ರಂದು ಸಾಯಂಕಾಲ 7=30  ಗಂಟೆಗೆ  ಮೋಟಾರ ಸೈಕಲ್ ನಂ: ಕೆಎ-32 ಯು-6108 ನೇದ್ದರ ಮೇಲೆ ಏಷೀಯಾನ ಮಹಲನಲ್ಲಿ ಬಟ್ಟೆ ಖರೀದಿ ಮಾಡಲು ಆರ್.ಟಿ.ಓ ಕ್ರಾಸ್ ಮುಖಾಂತರ ಹೋಗುತ್ತಿರುವಾಗ ಎಮ್.ಆರ್.ಎಮ್.ಸಿ. ಕಾಲೇಜ ಎದುರು ರೋಡಿನ ಮೇಲೆ ಎದುರುಗಡೆಯಿಂದ ಅಟೋರಿಕ್ಷಾ ನಂಬರ ಕೆಎ-32 ಬಿ-5903 ರ  ಚಾಲಕನು ತನ್ನ ಅಟೋ ರೀಕ್ಷಾವನ್ನು ಜಿ.ಜಿ.ಹೆಚ್.ಸರ್ಕಲ್ ಕಡೆಯಿಂದ   ಅತಿವೇಗವಾಗಿ ಮತ್ತು ಅಲಕ್ಷತನ ದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ ಸೈಕಲ್ ಗೆ ಡಿಕ್ಕಿ ಪಡಿಸಿ ನನಗೂ ಮತ್ತು ಸಚೀನನಿಗೆ  ಭಾರಿಗಾಯಗೊಳಿಸಿ ತನ್ನ ಅಟೋರೀಕ್ಷಾ ಅಲ್ಲಿಯೇ ಬಿಟ್ಟು ಚಾಲಕ  ಹೊರಟು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ  ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ: 128/12  ಕಲಂ: 279,338 ಐ.ಪಿ.ಸಿ ಸಂ 187 ಐ,ಎಮ್,ವಿ ಆಕ್ಟ  ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವರದಕ್ಷಿಣೆ ಕಿರುಕುಳ ಪ್ರಕರಣ:
ಮಹಿಳಾ ಪೊಲೀಸ್ ಠಾಣೆ:ಶ್ರೀಮತಿ ಸುನೀತಾ ಗಂಡ ಶರಣು ದಿವಟೆ  ವಯ:26ವರ್ಷ   ಉ:ಮನೆಗೆಲಸ  ಪ್ಲಾಟನಂ-20  ಜಿ,ಡಿ.ಎ ಲೇಔಟ  ಮಾಣಿಕೇಶ್ವರಿ  ಕಾಲೋನಿ  ಬ್ರಹ್ಮಪೂರ  ಗುಲಬರ್ಗಾ ರವರು ನನಗೆ ದಿನಾಂಕ:17.03.2012 ರಂದು ಹಿರಿಯರ ಸಮಕ್ಷಮದಲ್ಲಿ ಮದುವೆ ಮಾಡಿಕೊಟ್ಟಿದ್ದು. ಮದುವೆ ಕಾಲಕ್ಕೆ ವರದಕ್ಷಿಣೆ ಒಂದು ಲಕ್ಷ ರೂಪಾಯಿ, 4 ತೊಲೆ ಬಂಗಾರ ಬಟ್ಟೆ ಬರೆಗಾಗಿ 20 ಸಾವಿರ ರೂಪಾಯಿ ಹಾಗೂ  ಗೃಹ ಬಳಿಕೆ ಸಮಾನುಗಳು ಕೊಟು ಮದುವೆ ಮಾಡಿರುತ್ತಾರೆ. ಮದುವೆ ಸಮಯದಲ್ಲಿ ಒಂದು ಮೋಟರ್ ಬೈಕ ಬೇಕೆಂದು ಮದುವೆ ತಡೆಹಿಡಿದ್ದಿದ್ದು, ನನ್ನ ತಂದೆಯವರು ನನ್ನ ಗಂಡನಿಗೆ 45 ಸಾವಿರ ರೂ ನಗದು ಹಣ ಕೊಟ್ಟು  ಮದುವೆ ಮಾಡಿದ್ದು ಇರುತ್ತದೆ. ಮದುವೆಯಾದ ನಂತರ ನನಗೆ ತಾಡವಲಗಾ ಗ್ರಾಮಕ್ಕೆ ಕರೆದುಕೊಂಡು ಹೋಗಿ ಇನ್ನೂ ಹಣ ತರುವಂತೆ ಶರಣು ತಂದೆ ಮಳಸಿದ್ದಪ್ಪ ದಿವಟೆ ಸಾ:ತಡವಲಗಾ ತಾ: ಇಂಡಿ,ಜಿ:ಬಿಜಾಪುರ, ಲಕ್ಷ್ಮಿಬಾಯಿ ಗಂಡ ಕಾಂತಪ್ಪ ಹರಳಯ್ಯಾ ,ಕಾಂತಪ್ಪ ಹರಳಯ್ಯಾ,ಬಸು ಹರಳಯ್ಯಾ ಸಾ: ಎಲ್ಲರೂ ಅಫಜಲಪೂರ ಗುಲಬರ್ಗಾ ರವರು ಪೀಡಿಸುತ್ತಿದ್ದರು. ನಾನು ತವರು ಮನೆಗೆ ಬಂದಾಗ ನನ್ನ ಗಂಡನು ನನ್ನ ಜೊತೆ 3 ತಿಂಗಳು  ತವರು ಮನೆಯಲ್ಲಿ ಉಳಿದಿದ್ದು. ನಾನು ಎಂ,ಬಿ,ಬಿ.ಎಸ, ಪೀಸು ಕಟ್ಟಬೇಕು 1.50,000 ರೂ ಕೋಡಿ ಎಂದು ಪೀಡಿಸುತ್ತಿದ್ದನು.  ನನಗೆ  ಒಂದು ರೂಮಿನಲ್ಲಿ ಕೂಡಿ ಹಾಕಿ ಹೊಡೆಬಡೆ ಮಾಡಿ ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಡುತ್ತಿದ್ದನು ದಿನಾಂಕ:27.08.2012 ರಂದು  ಸಾಯಂಕಾಲ 7.30 ಪಿಎಮ್ ಕ್ಕೆ ನನ್ನ ಗಂಡ ಮನೆಗೆ ಬಂದು ನನ್ನ ಹೊಡೆ ಬಡೆ ಮಾಡಿರುತ್ತಾನೆ  ಅಂತಾ ದೂರು ಸಲ್ಲಿಸಿದ  ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ: 90/2012 ಕಲಂ 498(ಎ),323.504.506.ಸಂಗಡ 34 ಐ.ಪಿ.ಸಿ ಮತ್ತು 3 & 4 ಡಿ.ಪಿ.ಕ್ಟ್ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIME


ವೈಶ್ಯವಾಟಿಕೆ ನಡೆಸುತ್ತಿರುವ ಮನೆಯ ಮೇಲೆ ದಾಳಿ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ದಿನಾಂಕ:30-12-2012 ರಂದು ಸಾಯಂಕಾಲ 4-30 ಗಂಟೆಗೆ ಗುಲಬರ್ಗಾ ಗ್ರಾಮೀಣ ಪೊಲೀಸ್  ಠಾಣೆಯ ವ್ಯಾಪ್ತಿಯ ವೀರಭದ್ರಶ್ವೇರ ಕಾಲೋನಿಯಲ್ಲಿ ಇರುವ  ವಿಶ್ವನಾಥ ಆಟೋ ಚಾಲಕ  ಎಂಬುವವರ  ಮನೆಯಲ್ಲಿ  ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವ ಬಗ್ಗೆ ಖಚಿತವಾದ ಬಾತ್ಮಿ ಬಂದ ಮೇರೆಗೆ ಮಾನ್ಯ ಎಸ್.ಪಿ. ಸಾಹೇಬ ಗುಲಬರ್ಗಾ, ಅಪರ ಎಸ್.ಪಿ.ಸಾಹೇಬ ಗುಲಬರ್ಗಾ ಮಾನ್ಯ ಡಿಎಸ್ ಪಿ (ಗ್ರಾ) ಉಪವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಡಿಸಿಐಬಿ ಘಟಕದ ಪೊಲೀಸ್ ಇನ್ಸಪೇಕ್ಟರ ಶ್ರೀ ಎಸ್. ಎಸ್, ಹುಲ್ಲೂರು ರವರು ತಮ್ಮ ಸಿಬ್ಬಂದಿಯೊಂದಿಗೆ ಹಾಗೂ ಗ್ರಾಮೀಣ ಠಾಣೆಯ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ವೇಶ್ಯಾವಟಿಕೆ  ದಂಧೆಯಲ್ಲಿ ನಿರತರಾದ ರಾಜು ತಂದೆ ಅಣ್ಣಪ್ಪ ದೇಗಾಂವ  ಪೈನಾನ್ಸ ಕೇಲಸ ಸಾ|| ಹನುಮಾನ ಗುಡಿ ಹತ್ತಿರ ಒಕ್ಕಲಗೇರಾ ಗುಲಬರ್ಗಾ, ಅಣ್ಣಾರಾಯ ತಂದೆ ಸಾಯಬಣ್ಣಾ ಖಂಬನವರ  ಉ|| ಅಟೋ ಡೈವರ್ ಸಾ|| ಕಪನೂರ, ಶಾಹಿನಾ ಗಂಡ ಶೇಖ ರಫಿಕ ವ|| 43 ಸಾ|| ಮೂಕ ಮತ್ತು ಕಿವಡ ಶಾಲೆ ಹತ್ತಿರ ಆಳಂದ ರೋಡ ಗುಲಬರ್ಗಾ, ಜ್ಯೋತಿಲಕ್ಷ್ಮಿ  ಗಂಡ ರವಿ ಕಾಂಬಳೆ ಉ|| ಟೇಲರ್ ಕೆಲಸ ಸಾ|| ತಾರಪೈಲ್ ಗುಲಬರ್ಗಾ, ವಿಶ್ವನಾಥ ಆಟೋ ಚಾಲಕ ಸಾ:ವೀರಭದ್ರಶ್ವೇರ ಕಾಲನಿ ಗುಲಬರ್ಗಾ ಇವರನ್ನು ವಶಕ್ಕೆ ತೆಗೆದುಕೊಂಡು ಇವರಿಂದ ನೊಂದ ಹೆಣ್ಣು ಮಕ್ಕಳಾದ ಮಂಜುಳಾ ಗಂಡ ಆನಂದ, ಅನಿತಾ ಗಂಡ ಸುಭಾಷ ಹಾನಗಲ, ಸುಧಾ ತಂದೆ ನರಸಿಂಹ್  ಸಾ|| ನೆಲಮಂಗಲಾ ಬೆಂಗಳೂರು ಹಾ||ವ|| ಪಾವನ ಗಂಗಾ ಕಾಲೋನಿ ಗುಲಬರ್ಗಾ ಇವರನ್ನು ಬಿಡುಗಡೆ ಮಾಡಿದ್ದು, ಮೇಲಿನ ಆರೋಪಿತರು ವೈಶ್ಯವಾಟಿಕೆ ನಡೆಸಲು ಗೃಹವನ್ನು ಒದಗಿಸಿ, ವೈಶ್ಯವಾಟಿಕೆ ನಡೆಸಲು ಹುಡಗಿಯರನ್ನು ಕರೆದುಕೊಂಡು ಹೋಗಿ, ವೈಶ್ಯವಾಟಿಕೆ ದಂದೆಯಿಂದ ನಡೆಸುತ್ತಿರುವವರನ್ನು ವಶಕ್ಕೆ ತೆಗೆದುಕೊಂಡು  ಅವರಿಂದ ನಗದು ಹಣ 11,060/- ,ಬಳಕೆ ಮಾಡಿದ ಕಾಂಡೋಮ್, ಬಳಸದೇ ಇರುವ ಕಾಂಡೋಮ್ ಒಂದು ಪಾಕೇಟ,ಅಟೋ ರಿಕ್ಷಾ ನಂ:ಕೆಎ-32/ಎ-1467 ನೇದ್ದು ಜಪ್ತಿ ಪಡಿಸಿಕೊಂಡು ವರದಿ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:437/2012 ಕಲಂ, 3,4,5,6, Immoral Traffic Prevention Act 1956 ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.