POLICE BHAVAN KALABURAGI

POLICE BHAVAN KALABURAGI

03 March 2017

Kalaburagi District Reported Crimes

ದ್ವೀಚಕ್ರ ವಾನ ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ವಿನೋದ ತಂದೆ ಪ್ರಕಾಶ ಕಣ್ಣಿ ಸಾ: ಮನೆ ನಂ. 3-979 ಗಾಜಿಪೂರ ಕಲಬುರಗಿ ರವರು ದಿನಾಂಕ. 10/02/2017  ರಂದು ಬೆಳಿಗ್ಗೆ 6 .ಎಂ ಸುಮಾರಿಗೆ ನಾನು ನನ್ನ ಹಿರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ನಂ. KA-31 QB-7969 ಚೆಸ್ಸಿನಂ. MBLHA10EEAHE04334, ಇ.ನಂ. HA10EAAHE04543 ಅ.ಕಿ.25,000/- ರೂ ನೇದ್ದನ್ನು  ಚಂದ್ರಶೇಖರ ಪಾಟೀಲ ಸ್ಟೇಡಿಯಂ ಗೇಟಿನ ಮುಂದೆ ನಿಲ್ಲಿಸಿ ವಾಕಿಂಗ ಮುಗಿಸಿಕೊಂಡು ನಂತರ 7 ಎ.ಎಮ್ ಸುಮಾರಿಗೆ ಬಂದು ನೋಡಲಾಗಿ ನನ್ನ ಹಿರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ಮೋಟರ ಸೈಕಲ್ ಇರಲಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇಲ್ಲಿಯವರೆಗೆ ಎಲ್ಲಾ ಕಡೆಗೆ ಹುಡುಕಾಡಿದರು ಸಿಕ್ಕಿರುವುದಿಲ್ಲ. ಕಾರಣ ಸದರಿ ಹಿರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ಮೋಟಾರ ಸೈಕಲ್  ಪತ್ತೆ ಮಾಡಿ ಕಳ್ಳತನ ಮಾಡಿದವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 02/03/2017 ರಂದು ಬೆಳಿಗ್ಗೆ 6.00 ಗಂಟೆ ಸುಮಾರಿಗೆ ಮಹೀಂದ್ರ ಪಿಕಪ್ ಗೂಡ್ಸ ಚಾಲಕ ತನ್ನ ವಶದಲ್ಲಿರುವ ಮಹೀಂದ್ರ ಪಿಕಪ್ ಗೂಡ್ಸ ನಂ. ಟಿ ಎಸ್ -15 ಯುಎ-7177 ನೇದ್ದನ್ನು ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ನಂದಿಕೂರ ತಾಂಡಾದ ಹತ್ತಿರ ಪಲ್ಟಿ ಮಾಡಿ ಲುಕ್ಸನ ಮಾಡಿರುತ್ತಾನೆ ಅಂತಾ ಶ್ರೀ ಮಹ್ಮದ ಉಸ್ಮಾನ ತಂದೆ ಮಹ್ಮದ ಶರೀಫ್ ಸಾಬ  ಸಾ: ಜಹೀರಾಬಾದ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.     
ಹಲ್ಲೆ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 16/02/2017 ರಂದು ಸಾಯಂಕಾಲ ತುಕಾರಾಮ ತಂದೆ ಹೀರಾಸಿಂಗ್ ರಾಠೋಡ ಸಂಗಡ ಇನ್ನೂ 10 ಜನರು ಕುಡಿಕೊಂಡು ಶ್ರೀ ಸೈಯದ ಶಾಹಾ ಬುಜುರುಗ ಸಾಹೇಬ ಸಾ: ಶಾಹಾಬಾದ ರೋಡ ನೃಪತುಂಗಾ ಕಾಲೋನಿ ಕಲಬುರಗಿ   ರವರ ಹೊಲದಲ್ಲಿ ಅತೀಕ್ರಮಣ ಮಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಹೊಲ ಮಾರಾಟ ಮತ್ತು ನೊಂದಣಿ ಮಾಡುವ ವಿಷಯಲ್ಲಿ ಮೋಸ ಮಾಡಿ ಹಲ್ಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.