POLICE BHAVAN KALABURAGI

POLICE BHAVAN KALABURAGI

21 September 2013

ಜಾತಿ ನಿಂದನೆ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಬಸವರಾಜ ಮತ್ತು ಮಾಲಗತ್ತಿ ಗ್ರಾಮದ ಮನೊಹರ ಹಾಗೂ ವಿಠ್ಠಲ ರವರ ಹೆಣ್ಣು ಮಕ್ಕಳು ಕೂಡಿ ಕೊಂಡು ಮಾಲಗತ್ತಿ ದಿಂದ ರಾವೂರ ಕ್ಕೆ ಶಾಲೆಗೆ ಹೋಗಿದ್ದು ರಾವೂರದವರಾದ ಶರಣು ತಂದೆ ಮಲ್ಲೇಶಿ ಮತ್ತು ಅಶೋಕ ತಂದೆ ಮಲ್ಲೇಶಿ ರವರು ಸದರಿ ಹುಡಗಿಯರಿಗೆ ಚುಡಾಯಿಸಿದ ಸಂಬಂದವಾಗಿ ದಿನಾಂಕ: 20/09/2013 ರಂದು 12.30 ಪಿಎಮ್ ಕ್ಕೆ ಶ್ರೀ ಗುಂಡಪ್ಪಾ ತಂದೆ  ಯಲ್ಲಪ್ಪಾ ಕಟ್ಟಿ ಮತ್ತು ಶ್ರೀಶೈಲ ಹಾಗೂ ಮಲ್ಲಿಕಾರ್ಜುನ ಕೂಡಿ ಹೊಲಕ್ಕೆ ಹೋಗುವಾಗ 1] ಶರಣು ತಂದೆ ಮಲ್ಲೇಶಿ, ಮತ್ತು ಇತರೆ 5 ಜನರು ಹಾಗೂ ಇತರರು ಕೂಡಿಕೊಂಡು ಸದರಿಯವರಿಗೆ  ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ  ನೀನು ನಿನ್ನ ಅಣ್ಣ ಮಗಳಿಗೆ ಚುಡಾಯಿಸಿದ್ದಿ ಅಂಥಾ ನಮ್ಮನ್ನು ಅಪಮಾನ ಮಾಡುತ್ತಿ ಅಂತಾ ಅವ್ಯಾಚ ಶಬ್ದುಗಳಿಂದ ಬೈದು ಜಾತಿ ನಿಂದನೆ ಮಾಡಿ ಅಲ್ಲಿಯೇ ಬಿದ್ದ ಬಡಿಗೆಯಿಂದ ತಲೆಗೆ ಹೊಡೆದು  ರಕ್ತಗಾಯ ಮಾಡಿದ್ದು ಇರುತ್ತದೆ. ಸೂಳಿ ಮಕ್ಕಳದ್ದು ಹೊಲೆಯರದ್ದು ಬಹಳ ಆಗಿದೆ ಇವರನ್ನು ಮುಗಿಸಿಯೇ ಬಿಡರಿ ಅಂತಾ ಜೀವದ ಬೇದರಿಕೆ ಹಾಕಿರುತ್ಥಾರೆ. ಸದರಿಯವರೆಲ್ಲರೂ 3 ಮೊಟಾರ ಸೈಕಲ ಮೇಲೆ ಬಂದು ಹೊಡೆದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.