POLICE BHAVAN KALABURAGI

POLICE BHAVAN KALABURAGI

29 August 2014

Gulbarga District Reported Crimes

                                                  
ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ವೆಂಕಟೇಶ ತಂದೆ ಮಲಕಪ್ಪ ಸೂಲದೋರ ಸಾ : ಗಾಜಿಪೂರ ಗುಲಬರ್ಗಾರವರು  ದಿನಾಂಕ:-28/08/2014 ರಂದು ಸಂಜೆ 06:15 ಗಂಟೆ ಸುಮಾರಿಗೆ ಗುಲಬರ್ಗಾ ಅಫಜಲಪುರ ರೋಡಿನ ಶರಣಸಿರಸಗಿ ಗ್ರಾಮ ದಾಟಿ ಎಸ್.ಬಿ ಡೈರಿ ಹತ್ತಿರ ರೋಡಿನ ಎಡಗಡೆಯಿಂದ ಗುಲಬರ್ಗಾದಿಂದ ಅಫಜಲಪುರ ಕಡೆಗೆ ಹೋಗುವಾಗ ಎದರಿನಿಂದ ಮೃತ ಅಮರಸಿಂಗ ಇತನು ತನ್ನ ವಶದಲ್ಲಿದ್ದ ಇನೋವಾ ಕಾರ ನಂ ಕೆಎ-04 ಡಿ-2626 ನೇದ್ದನ್ನು ಅತೀವೇಗ ಮತ್ತು ನಿಸ್ಕಾಜಿತದಿಂದ ಚಲಾಯಿಸಿಕೊಂಡು ಬಂದವನೇ ತನ್ನ ಮುಂದೆ ಇದ್ದ ಒಂದು ವಾಹನಕ್ಕೆ ಸೈಡ ಹೋಡೆಯಲು ಹೋಗಿ ಓವರಟೇಕ ಮಾಡಿ ಎದರಿಗೆ ಬರುತ್ತಿದ್ದ ಫಿರ್ಯಾದಿ ಬುಲೆರೋ ಜೀಪಗೆ  ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಫಿರ್ಯಾದಿಗೆ ಬಲಗೈ ಮತ್ತು ಬಲತೊಡೆಗೆ ಭಾರಿ ಒಳಪೆಟ್ಟಾಗಿ ಮುರಿದಂತೆ ಆಗಿದ್ದು ಮೆಕ್ಯಾನಿಕನಿಗೆ ಮುಖಕ್ಕೆ ತಚಿದ ರಕ್ತಗಾಯವಾಗಿದ್ದು ಚಾಲಕ ಅಮರಸಿಂಗ ಇತನಿಗೆ ಎಡಗಣ್ಣಿನ ಹುಬ್ಬಿನ ಮೇಲೆ ಗದಕ್ಕೆ ಹಾಗು ತಲೆಗೆ ಹಾಗು ಇತರೇ ಕಡೆ ಭಾರಿ ರಕ್ತಗಾಯ ಮತ್ತು ಒಳಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.             
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ಪುಷ್ಪಾ ಗಂಡ ಸೊಮ್ಲು ರಾಠೋಡ  ಸಾ: ಪ್ಲಾಟ ನಂ 1 ಸರಸ್ವತಿಪೂರಂ ವಿಶ್ವವಿದ್ಯಾಲಯ ಹಿಂದುಗಡೆ ಕುಸನೂರ ರೋಡ ಗುಲಬರ್ಗಾ ರವರು . ದಿನಾಂಕ 28-08-2014 ರಂದು ಮದ್ಯಾಹ್ನ 2-30 ಗಂಟೆ ಸುಮಾರಿಗೆ ಚಪ್ಪಲ ಬಜಾರ ಕ್ರಾಸದಿಂದ ಜನತಾ ಬಜಾರ ಕ್ರಾಸ ಕಡೆಗೆ ನಾನು ಮತ್ತು ನನ್ನ ಗಂಡ ಹಾಗು ನನ್ನ ತಂಗಿ ಪಾರ್ವತಿ ಮೂರು ಜನರು ಗಣಪತಿ ಖರಿದಿ ಮಾಡುವ ಸಲುವಾಗಿ ನಡೆದುಕೊಂಡು ಹೋಗುವಾಗ ಹಳೆ ಮಾರ್ಕೆಟ ಆಸೀಫ ಗಂಜ ಶಾಲೆ ಎದುರು ರೋಡಿನ ಮೇಲೆ ಹಿಂದಿನಿಂದ ಮೋ/ಸೈಕಲ ನಂಬರ ಎಮ್.ಹೆಚ್-12 ಇಡಿ-2691 ರ ಸವಾರ ಡಿಕ್ಕಿ ಪಡಿಸಿ ಅಪಘಾತ ಮಾಡಿ ನನಗೆ ಭಾರಿಗಾಯಗೊಳಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ರೆಹಮತ ಜಹಾ ಗಂಡ ಪಪ್ಪುಖಾನ ಸಾ: ಪಲಕನಾಮ ಗಾಜಿ ಮಲಕ ಕಾಲೋನಿ ದುರ್ಜಾನಾ ಹೊಟೇಲ ಹತ್ತಿರ ಹೈದ್ರಾಬಾದ  ಆಂದ್ರಪ್ರದೇಶ ಇವರು ಮತ್ತು ಮಕ್ಕಳು ಮತ್ತು ನಮ್ಮ ಸಂಬಂಧಿಕರು ಕೂಡಿಕೊಂಡು ಗುಲಬರ್ಗಾದ ಬಂದೇನವಾಜ ದರ್ಶನಕ್ಕೆಂದು ಹೈದ್ರಾಬಾದದಿಂದ ದಿನಾಂಕ 23-8-2014 ರಂದು ಗುಲಬರ್ಗಾಕ್ಕೆ ಬಂದಿದ್ದು ದಿನಾಂಕ 24-8-2014 ರಂದು ಗುಲಬರ್ಗಾದ  ಬಂದೇ ನವಾಜ ದರ್ಗಾದ ದೇವರ ದರ್ಶನ ಮಾಡಿಕೊಂಡು ದರ್ಗಾದಲ್ಲಿ ಯೇ ಉಳಿದುಕೊಂಡೆನು  ಮದ್ಹಾನ್ಹ 3-00 ಗಂಟೆಯ ಸುಮಾರಿಗೆ ನನ್ನ ಮಗಳಾದ ಸನಾ ಮತ್ತು ನಮ್ಮ ಸಂಬಂಧಿ ಮಗಳಾದ ರಾಣಿ ಇಬ್ಬರು ಕಾಣೆಯಾಗಿರುತ್ತಾರೆ ಅಲ್ಲಿಂದ ಇಲ್ಲಿಯವರೆಗೆ ಎಲ್ಲಾ ಕಡೆ ಹುಡುಕಾಡಿದರು ಸನಾ ಮತ್ತು ರಾಣಿ ಇಬ್ಬರು ಪತ್ತೆಯಾಗಿರುವುದಿಲ್ಲಾ ಕಾರಣ ಕಾಣೆಯಾದ ಸನಾ ಮತ್ತು ರಾಣಿ ಇವರಿಗೆ ಪತ್ತೆ ಮಾಡಿಕೊಡಬೆಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.    
ದ್ವೀಚಕ್ರ ವಾಹನ ಕಳವು ಪ್ರಕರಣ :
ಫರತಾಬಾದ ಠಾಣೆ : ಶ್ರೀ ಅಮಜಾದಶೇಖ ತಂದೆ ಅಬ್ದಲ ರಜಾಕ ಸಾ|| ಮೊಮಿನಪೊರಾ ಗುಲಬರ್ಗಾ ಇವರು ದಿನಾಂಕ: 08/08/2014 ರಂದು ಸಾಯಂಕಾಲ ಫೀರೋಜಾಬಾದ ಖಲಿಫತ ರೇಹಮಾನ ದರ್ಗಾಕ್ಕೆ ಜಿಯಾರತ ಕುರಿತು ನನ್ನ ಸ್ಪೆಂಡರ ಪ್ಲಸ್ ಮೋಟಾರ ಸೈಕಲ ನಂ: ಕೆಎ-32,ಇಎಫ- 2285 ನೆದ್ದನ್ನು ತೆಗೆದುಕೊಂಡು ಹೋಗಿ ದರ್ಗಾ ಎದುರಿನ ಗೇಟ್ ಮುಂದುಗಡೆ 5-30 ಪಿಎಮ್ ಕ್ಕೆ ನಿಲ್ಲಿಸಿ ಹ್ಯಾಂಡಲ ಲಾಕ ಹಾಕಿ ದರ್ಗಾ ಒಳಗಡೆ ಹೋಗಿ ಜಿಯಾರಾತ ಮಾಡಿ 6-00 ಗಂಟೆ ಸಂಜೆ ಮರಳಿ ಬಂದು ನೋಡಲಾಗಿ ನಾನು ನಿಲ್ಲಿಸಿ ಹೋದ ಜಾಗೆಯಲ್ಲಿ ಸದರಿ ಮೋಟಾರ ಸೈಕಲ ಇರಲಿಲ್ಲಾ ದರ್ಗಾದ ಸುತ್ತ ಮುತ್ತಾ ಹುಡುಕಾಡಲಾಗಿ ಸಿಕ್ಕರಲಿಲ್ಲಾ ಯಾರೊ ಕಳ್ಳರು ಕಳವೊ ಮಾಡಿಕೊಂಡು ಹೋಗಿದ್ದು ಸದರಿ ಮೋಟಾರ ಸೈಕಲನ್ನು ಹುಡಕಲು ಶಾಹಾಬಾದ, ವಾಡಿ ,ಗುಲಬರ್ಗಾಗಳಲ್ಲಿ  ತಿರುಗಾಡಿ ಹುಡುಕಾಡಿದರು ಸಿಕ್ಕಿರುವದಿಲ್ಲಾ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗದೆ.