POLICE BHAVAN KALABURAGI

POLICE BHAVAN KALABURAGI

13 February 2017

Kalaburagi District Reported Crimes

ಬುಲೆರೋ ವಾಹನ ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ. ನಿಲಕಂಠ ತಂದೆ ಜಗದೇವ ಗುತ್ತೆದಾರ ಸಾ: ಕುಂಬಾರಗಲ್ಲಿ ಬ್ರಹ್ಮಪೂರ ಕಲಬುರಗಿ ಇವರು ದಿನಾಂಕ 10-2-2017 ರಂದು ರಾತ್ರಿ10-30 ಗಂಟೆಗೆ ತಮ್ಮ ಮಹಿಂದ್ರಾ ಬುಲೋರೊ  ಜೀಪ ನಂ. KA 56 M 9099 ನೇದ್ದನ್ನು ನಾನು ನಮ್ಮ ಬಡಾವಣೆಯ ಮರಗಮ್ಮ ಗುಡಿಯ ಹತ್ತಿರ ನಿಲ್ಲಿಸಿ ಡೊರ ಲಾಕ್ ಮಾಡಿ ಮನೆಗೆ ಹೊಗಿದ್ದು ದಿನಾಂಕ 11-2-2016 ರಂದು ಬೆಳಿಗ್ಗೆ 6-30 ಗಂಟೆಗೆ ನಾನು ನನ್ನ ಜಿಪ್ ಹತ್ತಿರ ಹೊದಾಗ ಅಲ್ಲಿ ನನ್ನ ಜೀಪ ಇರಲಿಲ್ಲಾ ನಾನು ಗಾಬರಿಯಾಗಿ ಕಲಬುರಗಿ ನಗರದಲ್ಲಿ ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವದಿಲ್ಲಾ, ಯಾರೊ ಕಳ್ಳರು ನಮ್ಮ ಮಹಿಂದ್ರಾ ಬುಲೋರೊ ಜೀಪ್ ಬಿಳಿ ಬಣ್ಣ ಉಳ್ಳದು ಇದ್ದು  ನಂ.KA 56 M 9099, Engine No.GHB4A35334, Chassis No.MA1PS2GHKB5B64179 ಅದರ ಅಂ.ಕಿ- 5,00,000/-ರೂ ಬೇಲೆ ಬಾಳುವುದು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಪತ್ತೆ ಹಚ್ಚಿ ಕೋಡಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಯಡ್ರಾಮಿ ಠಾಣೆ : ದಿನಾಂಕ 12-02-2017 ರಂದು ಬೆಳಿಗ್ಗೆ ನಾನು ನಮ್ಮೂರ ಬಸ್ಸ ನಿಲ್ದಾಣದ ಹತ್ತಿರ ಇದ್ದಾಗ ನಮ್ಮೂರಿನ ಮಹಾಂತಗೌಡ ತಂದೆ ಭಾಗಣ್ಣ ಮಾಲಿಪಾಟೀಲ ಈತನ ಟಂಟಂ ನಂ ಕೆ.-32/ಬಿ-6812 ನೇದ್ದರಲ್ಲಿ ನಮ್ಮ ಚಿಕ್ಕಮ್ಮ  ಸೋಮವ್ವ ಹಾಗು ಇತರೆ ನಮ್ಮೂರಿನ 1] ಲಕ್ಷ್ಮೀಬಾಯಿ ಗಂಡ ಮಲ್ಲಿನಾಥ ಮಾಲಿಪಾಟೀಲ, 2] ನೀಲಮ್ಮ ಗಂಡ ಮಲ್ಲಿನಾಥ ಹರವಾಳ, 3] ಪಾರ್ವತಿ ಗಂಡ ಶಂಕ್ರೆಪ್ಪ ಜಾಲವಾದಿ, 4] ಗೌರಮ್ಮ ಗಂಡ ನಿಂಬೆಣ್ಣ ಕರನಾಳ, 5] ಶಾಂತಮ್ಮ ಗಂಡ ಸಿದ್ದಣ್ಣ ಪೂಜಾರಿ, 6] ಮಂಜುಳಾ ಗಂಡ ಗೌಡಪ್ಪಗೌಡ ಮಾಲಿಪಾಟೀಲ, 7] ಸಿದ್ದಮ್ಮ ಗಂಡ ಮೌನೇಶ ಮಾಲಿಪಾಟೀಲ, 8] ಶೋಭಾ ಗಂಡ ಶಂಕರ ಮಾಲಿಪಾಟೀಲ ಹೀಗೆಲ್ಲರು ಕೂಡಿಕೊಂಡು ಟಂಟಂ ನಲ್ಲಿ ಕೂಳಿತು ಹಂಗರಗಾ(ಬಿ) ಕಡೆ ಹೋದರು. ಆಗ ಟಂಟಂ ಮಹಾಂತಗೌಡ ಈತನು ನಡೆಸುತ್ತಿದ್ದನು. ಸ್ವಲ್ಪ ಸಮಯದ ನಂತರ ಯಲಗೋಡ ಮತ್ತು ಹಂಗರಗಾ (ಬಿ) ಗ್ರಾಮ ಮದ್ಯ ಸಿದ್ದಣ್ಣಗೌಡ ಪಾಟೀಲ ಎಂಬುವರ ಹೊಲದ ಹತ್ತಿರ ಟಂಟಂ ಪಲ್ಟಿಯಾಗಿದೆ ಅಂತಾ ಗೊತ್ತಾಗಿ ನಾನು ಮತ್ತು ನಮ್ಮೂರಿನ ಈರಣ್ಣ ತಂದೆ ಬಸವಂತ್ರಾಯ ಪೊಲೀಸ ಪಾಟೀಲ, ಪರಮಣಗೌಡ ತಂದೆ ಬಸವಂತ್ರಾಯ ಪೊಲೀಸ ಪಾಟೀಲ, ದೇವಿಂದ್ರ ತಂದೆ ಸಿದ್ದಣ್ಣ ಹರವಾಳ, ದೇವಿಂದ್ರಪ್ಪ ತಂದೆ ಸಾಯಬಣ್ಣ ನಾಯ್ಕೋಡಿ ರವರು ಕೂಡಿಕೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ನಮ್ಮೂರ ಮಹಾಂತಗೌಡನ ಟಂಟಂ ಇದ್ದು, ರಸ್ತೆಯ ಎಡಗಡೆ ತೆಗ್ಗಿನಲ್ಲಿ ಪಲ್ಟಿಯಾಗಿತ್ತು, ಕೆಳಗೆ ಹೋಗಿ ನೋಡಲಾಗಿ ನಮ್ಮ ಚಿಕ್ಕಮ್ಮ ಸೋಮವ್ವಳಿಗೆ ಎಡಗಡೆ ತೆಲೆಗೆ ಮತ್ತು ಹಣೆಗೆ ಭಾರಿ ರಕ್ತಗಾಯ ಮತ್ತು ಎಡಗಾಲ ಮೊಳಕಾಲ ಹ್ತತಿರ ಭಾರಿ ರಕ್ತಗಾಯವಾಗಿದ್ದು, ಸ್ಥಳದಲ್ಲೆ ಮೃತ ಪಟ್ಟಿರುತ್ತಾಳೆ. ಇನ್ನುಳಿ 8 ಜನರಿಗೆ ಅಲ್ಲಲ್ಲಿ ಸದಾ ಮತ್ತು ಭಾರಿ ಗಾಯಗಳಾಗಿರುತ್ತವೆ.  ಅಂತಾ ಶ್ರೀ ರೇವಣಸಿದ್ದಪ್ಪ ತಂದೆ ಸಿದ್ರಾಮಪ್ಪಗೌಡ ಪೊಲೀಸಪಾಟೀಲ ಸಾ : ಅಣಜಗಿ ತಾ : ಜೇವರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣಗಳು :
ಫರತಾಬಾದ ಠಾಣೆ : ದಿನಾಂಕ 0-02-2017  ರಂದು ನನ್ನ ಗಂಡನಾದ ವಿಜಯಕುಮಾರ ತಂದೆ ಸಾಯಬಣ್ಣಾ ಸೋನೆಗಾರ ಉ: ದಿನಗೂಲಿ ನೌಕರ ಮಹನಗರ ಪಾಲಿಕೆ ಕಲಬುರಗಿ ಸಾ: ಬೋರಾಬಾಯಿ ನಗರ ಕಲಬುರಗಿ ರವರು ಮನೆಯಿಂದ ಊರಿಗೆ ಹೋಗುವದಾಗ ಹೇಳಿ ಹೋಗಿದ್ದು ನಂತರ ರಾತ್ರಿಯಾದರು ಮರಳಿ ಮನೆಗೆ ಬಂದಿರುವುದಿಲ್ಲಾ ನಂತರ ಸಂಬಂದಿಕರ ಮನೆಗೆ ಪೋನ ಮಾಡಿ ಕೇಳಿದರು ಮಾಹಿತಿ ಸಿಕ್ಕಿರುವುದಿಲ್ಲಾ ನಂತರ ದಿನಾಂಕ 11-02-2017 ರಂದು ರಾತ್ರಿ 11 ಗಂಟೆಗೆ ಮಾಹಿತಿ ಗೊತ್ತಾಗಿದ್ದು ಸದರಿ ನನ್ನ ಗಂಡನು ಮಹಾನಗರ ಪಾಲಿಕೆಯಲ್ಲಿ ಕೆಲಸ ಮಾಡಿ ಕೊಂಡಿದ್ದು ನೌಕರಿ ಖಾಯಂ ಆಗಿಲ್ಲಾ ಅಂತಾ ಮಾನಸಿಕವಾಗಿ ನೊಂದು ಸದರಿ ಈ ಮೇಲಿನ ಅವಧಿಯಲ್ಲಿ ಸರಡಗಿ (ಬಿ) ಗ್ರಾಮದ ಬೀಮಾ ನದಿಯಲ್ಲಿ ಮುಳುಗಿ ಮೃತಪಟ್ಟಿರುತ್ತಾನೆ ಅಂತಾ ಶ್ರೀಮತಿ ಸುವರ್ಣಾ ಗಂಡ ವಿಜಯಕುಮಾರ ಸೋನೆಗಾರ ಸಾ: ಬೋರಾಬಾಯಿ ನಗರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ 12-02-2017 ರಂದು ನನ್ನ ಗಂಡ ಸಂತೋಷ ತಂದೆ ತಂದೆ ಶಿವಶರಣಪ್ಪಾ ಶೀಲವಂತ(ಹೆಬ್ಬಾಳ) ರವರು ಫರತಾಬಾದ ವೈನ ಶಾಪ ಮ್ಯಾನೇಜರ ಕೆಲಸಕ್ಕೆ ಹೋಗಿದ್ದು ನಂತರ ಮದ್ಯಾಹ್ನ 1 ಗಂಟೆ ಯ ಸುಮಾರಿಗೆ ನನ್ನ ಗಂಡನೊಂದಿಗೆ ಕೆಲಸ ಮಾಡುವ ಶಕ್ತಿ ವೈನ ಶಾಪದಲ್ಲಿಯ ಕೆಲಸಗಾರ ವಿರೇಶ ಇತನು ಪೋನ ಮಾಡಿ ಸಂತೋಷ ವೈನ ಶಾಪ ಹಿಂದಿನ ರೂಮಿನಲ್ಲಿ ನೇಣು ಹಾಕಿ ಕೊಂಡಿದ್ದಾನೆ ಅಂತಾ ತಿಳಿಸಿದ್ದರಿಂದ ನಾವು ಕುಟುಂಬದವರು ಬಂದು ನೋಡಲಾಗಿ ನೇಣು ಹಾಕಿ ಕೊಂಡು ಮೃತಪಟ್ಟಿದ್ದು. ಸದರಿ ನನ್ನ ಗಂಡನಿಗೆ ಸುಮಾರು 15 ಲಕ್ಷ 30 ಸಾವಿರ ರೂಪಾಯಿ ಸಾಲ ಮಾಡಿದ್ದು ಆ ಸಾಲ ಮೇ ತಿಂಗಳಲ್ಲಿ ಮುಟ್ಟಿಸುವದು ಹೇಗೆ ಅಂತಾ ಚಿಂತೆಯಲ್ಲಿ ವಿಷಯ ಪಿರ್ಯಾದಿ ಅತ್ತೆಗೆಗೆ ತಿಳಿಸಿದ್ದು ಸದರಿ ಪಿರ್ಯಾದಿಯ ಗಂಡನ ಸಾವಿನಲ್ಲಿ ಸಂಶಯ ವ್ಯಕ್ತಪಡಿಸಿದ್ದು ಇರುತ್ತದೆ. ಅಂತಾ ಶ್ರೀಮತಿ ಸುಧಾ ಗಂಡ ಸಂತೋಷ ಶೀಲವಂತ (ಹೆಬ್ಬಾಳ) ಸಾ: ಓಂ ನಗರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಮಾಹಾಗಾಂವ ಠಾಣೆ : ದಿನಾಂಕ 11-02-2017 ರಂದು ಶ್ರೀ ನೀಲಕಂಠ ತಂದೆ ನಿಂಗಪ್ಪಾ ಅಳಗುಣಕಿ ಸಾ : ಚಂದ್ರನಗರ ಇವರು ತಮ್ಮ ಅಕ್ಕಳ ಮನೆಯಲ್ಲಿ ದ್ದಾಗ ಭೀಮಣ್ಣಾ ತಂದೆ ಹಣಮಂತ ನಾಯ್ಕಲ್ ಸಂಗಡ 5 ಜನರು ಸಾ : ಎಲ್ಲರು ಚಂ್ದರನಗರ ಕಲಬುರಗಿ  ಇವರು ಕೂಡಿಕೊಂಡು ಬಂದು ನಮಗೆ ಯಾಕೆ ಬೈದಿರುವಿರಿ ಅಂತಾ ವಿನಾ:ಕಾರಣ ಜಗಳ ತೆಗೆದು ಅವಾಚ್ಯವಾಗಿ ಬೈದು ಕಲ್ಲಿನಿಂದ ಹೊಡೆದು ರಕ್ತಗಾಯಪಡಿಸಿದ್ದು ಅಲ್ಲದೆ ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.