POLICE BHAVAN KALABURAGI

POLICE BHAVAN KALABURAGI

24 January 2015

Kalaburagi District Reported Crimes

ಮಟಕಾ ಜುಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 24/01/2015 ರಂದು ಸುಂಟನೂರ ಗ್ರಾಮದ ಹನುಮಾನ ದೇವರ ಗುಡಿಯ ಮುಂದಿನ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜುಜಾಟ ನಡೆಸುತ್ತಿದ್ದ ಬಗ್ಗೆ ಬಾತ್ಮಿ ಮೇರೆಗೆ ಪಿ.ಎಸ್.ಐ. ನಿಂಬರ್ಗಾ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲು ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲು ತನ್ನ ಹೆಸರು ಅಪ್ಪಾರಾಯ ತಂದೆ ಶಾಂತಪ್ಪ ಮೇಲಿನಕೇರಿ ಸಾ: ಸುಂಟನೂರ ಗ್ರಾಮ  ಅಂತ ತಿಳಿಸಿದನು ಅವನನ್ನು ಚೆಕ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಿಸಿರುವ  ನಗದು ಹಣ 510/-,  ಒಂದು ಮಟಕಾ ಅಂಕಿ ಸಂಖ್ಯೆಯುಳ್ಳ ಚೀಟಿ, ಒಂದು  ಬಾಲ ಪೆನ್ನ ನೇದ್ದವುಗಳನ್ನು ವಶಪಡಿಸಿಕೊಂಡು ಸದರಿಯವನೊಂದಿಗೆ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಸಂಚಾರಿ ಠಾಣೆ : ಶ್ರೀ ಮಹಾಂತಗೌಡ ತಂದೆ ನೀಲಕಂಠರಾವ ಪೊಲೀಸ್ ಪಾಟೀಲ, ಸಾಃ ಶರಣಸಿರಸಗಿ, ಮತ್ತುಶ್ರೀ  ಮಹಾಂತಯ್ಯಾ ತಂದೆ ಮಹಾದೇವಯ್ಯಾ ಇಬ್ಬರು ಕೂಡಿ ತನ್ನ ಮೋಟಾರ ಸೈಕಲ ನಂ. ಕೆ.ಎ 32 ಕೆ 9812 ನೇದ್ದರ ಮೇಲೆ ಗಣೆಶ ನಗರದಲ್ಲಿ ಕೆಲಸವಿದ್ದ ಕಾರಣ ಹೋಗಿ ನಂತರ ಅಲ್ಲಿ ಕೆಲಸ ಮುಗಿಸಿಕೊಂಡು ಫಿರ್ಯಾದಿ ತನ್ನ ಮೋಟಾರ ಸೈಕಲ ನಂ.ಕೆ.ಎ 32 ಕೆ 9812 ನೇದ್ದರ ಮೇಲೆ ಹಿಂದೆ ಮಹಾಂತಯ್ಯಾ ಈತನನ್ನು ಕೂಡಿಸಿಕೊಂಡು ತಾನು ಮೋಟಾರ ಸೈಕಲ ಚಲಾಯಿಸಿಕೊಂಡು ಸೇಡಂ ರಿಂಗ ರೋಡ ಕಡೆಯಿಂದ ಜಿ.ಜಿ..ಎಚ್ ಆಸ್ಪತ್ರೆ ಕಡೆಗೆ ಹೊರಟಾಗ ರಾತ್ರಿ 10-30 ಗಂಟೆಯ ಸುಮಾರಿಗೆ ಗುಬ್ಬಿ ಕಾಲೂನಿ ಕ್ರಾಸ್ ಹತ್ತಿರ ಆರೋಪಿ ಅಣ್ಣಪ್ಪಾ ತಂದೆ ಶಿವಶಂಕರ ಈತನು ತನ್ನ ಲಾರಿ ಟ್ಯಾಂಕರ ನಂ. ಎಮ್.ಎಚ್. 04 ಬಿ.ಯು 9677 ನೇದ್ದನ್ನು ಸೇಡಂ ರಿಂಗ ರೋಡ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟಾರ ಸೈಕಲಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು ಅಪಘಾತದಿಂದ ಫಿರ್ಯಾದಿಗೆ ಮತ್ತು ಹಿಂದೆ ಕುಳಿತ ಮಹಾಂತಯ್ಯಾ  ಇಬ್ಬರಿಗೂ ಕಾಲುಗಳಿಗೆ ತರಚಿದ ರಕ್ತಗಾಯ ಮತ್ತು ಗುಪ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ನಿಂಬರ್ಗಾ ಠಾಣೆ : ಶ್ರೀಮತಿ ಸುರೇಖಾ ಗಂಡ ಗಿರಿಮಲ್ಲ ವಾರದ ಸಾ: ಹಿತ್ತಲ ಶೀರೂರ ಇವರು ದಿನಾಂಕ 23-01-2015 ರಂದು ಸಾಯಂಕಾಲ ತಾನು ಹಾಗೂ ತನ್ನ ಗಂಡ ಗಿರಿಮಲ್ಲ ಹಾಗೂ ಇತರರು ತಾವು ಮಾಡಿದ ಹೊಲದಲ್ಲಿ ಕಡಲಿ ಕಿತ್ತುತ್ತಿರುವಾಗ ಹಳೆ ದ್ವೇಷ ಕಟ್ಟಿಕೊಂಡು ತನಗೂ ಹಾಗೂ ತನ್ನ ಗಂಡನಿಗೆ ಕೊಲೆ ಮಾಡುವ ಉದ್ದೇಶದಿಂದ ಬಸಣ್ಣ ತಂದೆ ಸಿದ್ದಣ್ಣ ಕೋನೆರಿ ಸಂಗಡ 03 ಜನ  ಸೇರಿಕೊಂಡು ಕಲ್ಲು ಬಡಿಗೆಗಳಿಂದ ಹೊಡೆ ಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ತನಗೆ ಮಾನಭಂಗಕ್ಕೆ ಯತ್ನಿಸಿ ಗಂಭೀರ ರಕ್ತಗಾಯ ಮತ್ತು ಗುಪ್ತಗಾಯ ಪಡೆಸಿ ಕೊಲೆಗೆ ಯತ್ನಿಸಿದ್ದು ಇದನ್ನು ನೋಡಿ ಬಿಡಿಸಲು ಅಂತಾ ಶ್ರೀಮಂತ ತಂದೆ  ಶರಣಪ್ಪ ವಡ್ಡರ ಇವನು  ಅಡ್ಡ ಬಂದಿದ್ದು ಆತನ ಬಲಗಣ್ಣಿನ ಹುಬ್ಬಿಗೆ ಬಸಣ್ಣನ ಬಡಿಗೆಯಿಂದ ಭಾರಿ ಏಟು ಬಿದ್ದಿರುತ್ತದೆ ಆತನಿಗೂ ಕೂಡಾಗಂಭೀರ ರಕ್ತಗಾಯ ಮತ್ತು ಗುಪ್ತಗಾಯವಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಫಜಲಪೂರ ಠಾಣೆ : ಶ್ರೀಮತಿ ಲಕ್ಷ್ಮಿಬಾಯಿ ಗಂಡ ದೌಲಪ್ಪಾ ತಳಕೇರಿ ಸಾ||ದಿಕ್ಸಂಗಾ (ಕೆ) ಇವರು ದಿನಾಂಕ 24/01/2015 ರಂದು ತನ್ನ ಮೊಮ್ಮಗಳು ನಮ್ಮ ಮನೆಯ ಮುಂದೆ ಕಸ ಗುಡಿಸುತಿದ್ದಾಗ ನಮ್ಮ ಮನೆಯ ಬಾಜು ನನ್ನ ಮೈದುನನಾದ ಹಣಮಂತನ ಹೆಂಡತಿ ಶಿವಲಿಂಗಮ್ಮಾ ಇವಳು ನನ್ನ ಮೋಮ್ಮಗಳಿಗೆ ಏ ರಂಡಿ ಸೋನಿ ಕಸ ನಮ್ಮ ಮನೆಕಡೆಯಿಂದ ಯಾಕ ಗುಡುಸ್ತಿ ಬೋಸಡಿ ನಮ್ಮ ಅಂಗಳದ ಮಣ್ಣು ನಿಮ್ಮ ಕಡೆ ಹೋಗ್ತಾದ ಅಂತ ಬೈಯುತಿದ್ದಾಗ ನಾನು ಹಾಗೂ ನನ್ನ ಗಂಡ ಸದರಿಯವಳಿಗೆ  ಯಾಕೆ ಕುಸಿಗಿ ಸುಮ್ಮನೆ ಬೈತಿ ಅದಕೇನ ತಿಳಿತಾದ ಅಂತ ಅಂದಿದಕ್ಕೆ ಅವರ ಮನೆಯಲಿಂದ ನಮ್ಮ ಮೈದುನ ಹಣಮಂತ ಹಾಗೂ ಅವರ ಮಕ್ಕಳಾದ ಈರಪ್ಪಾ, ಕಾಂತಪ್ಪಾ ಬಂದು ಅವರಲ್ಲಿ ಹಣಮಂತ ಇತನು ನನಗೆ ಏ ರಂಡಿ ಲಚ್ಚಿ ಬೋಸಡಿ ದಿನಾ ಇದೆ ರೀತಿ ಮಾಡ್ತಿ ಅಂತ ಬೈಯುತ್ತಾ ಹಣಮಂತ ಇತನು  ತನ್ನ ಮನೆಯಿಂದ ಒಂದು  ಬಡಿಗೆ ತಗೆದುಕೊಂಡು ಬಂದು ನ್ನನ ಬಲಗೈ ಮುಂಡಿಯ ಮೇಲೆ ಜೋರಾಗಿ ಹೊಡೆದಾಗ ನನಗೆ ಕಣ್ಣಿಗೆ  ಕತ್ತಲು ಬಂದಂತಾಗಿ ಚಿರಾಡುತ್ತಾ ನೆಲಕ್ಕೆ ಬಿದ್ದೆನು ಆಗ ನನ್ನ ಗಂಡ ಮತ್ತು ನಾಗಪ್ಪಾ, ಬಂಗಾರೇವ್ವ ಬಿಡಿಸಲು ಬಂದರೆ ಹಣಮಂತ ಇತನು ಅದೆ ಬಡಿಗೆಯಿಂದ ನನ್ನ ಗಂಡನ ಬಲಕಾಲಿನ ಮೊಳಕಾಲಿಗೆ ಜೋರಾಗಿ ಹೊಡೆದಿರುತ್ತಾನೆ  ಈರಪ್ಪಾ ಇತನು ಈ ಮುದಿ ಸುಳೆ ಮಕ್ಕಳದು ಬಾಳ ನಡದಾದ ಅಂತ ಅವಾಚ್ಯವಾಗಿ ಬೈಯುತಿದ್ದನು  ಕಾಂತಪ್ಪಾ ಇತನು ಈ ರಂಡಿ ಮಕ್ಕಳಿಗೆ ಜೀವ ಹೊಡಿಬೇಕು ಅಂತಾ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Kalaburagi District Reported Crimes

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಭಜರಂಗಸಿಂಗ ತಂದೆ ಭವಾನಿಸಿಂಗ ತಿವಾರಿ ಸಾ:ಅವರಾದ (ಬಿ) ಗ್ರಾಮ ತಾ:ಜಿ: ಕಲಬುರಗಿ ಇವರ ಮಗ ಭೀಮಸಿಂಗ ಇತನು ಆಪಾದಿತ ಬಸರವಾಜ ಗೌಡಪ್ಪಗೋಳ ಇತನ ತಂಗಿಗೆ ಚುಡಾಸಿದ್ದು ಅಲ್ಲದೇ ಊರಲ್ಲಿ ಅವಳ ಬಗ್ಗೆ ಇಲ್ಲ ಸಲ್ಲದ ಅಪವಾದ ಮಾಡಿದ್ದಾನೆ ಎಂಬ ಉದ್ದೇಶದಿಂದ ಭೀಮಸಿಂಗ ಇತನಿಗೆ ಬಸವರಾಜ ಗೌಡಪ್ಪಗೋಳ ಹಾಗು ಇತರರು ಕೂಡಿಕೊಂಡು ದಿನಾಂಕ:-23/01/15 ರಂದು 00:00 ಗಂಟೆಯಿಂದ ಬೆಳಿಗ್ಗೆ 06:00 ಗಂಟೆಯ ಮದ್ಯದ ಅವದಿಯಲ್ಲಿ ಮೃತ ಭೀಮಸಿಂಗನಿಗೆ ಯಾವುದೋ ಆಯುಧಗಳಿಂದ  ತಲೆ ಹಿಂದೆ  ಹಾಗೂ ಇತರೇ ಕಡೆಗಳಲ್ಲಿ ಹೊಡೆದು ಕೊಲೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ದೇವಕಿ ಗಂಡ ತಿಪ್ಪಣ್ಣಾ ಗುಜ್ಜಾಲದಾರ ಸಾ:ಕನಕನಗರ ಸಮತಾ ಕಾಲೋನಿ ಬ್ರಹ್ಮಪುರ ಕಲಬುರಗಿ ಇವರ ಗಂಡ ತಿಪ್ಪಣ್ಣಾ ಇತನು ದಿನಾಂಕ:-23/01/2015 ರಂದು ರಾತ್ರಿ 10:20 ಗಂಟೆ ಸುಕಾರಿಬೆ ಕೇರಿ ಭೋಸಗಾ ಕ್ರಾಸ ಹತ್ತಿರ ನಡೆದುಕೊಂಡು ಕಲಬುರ್ಗಿ ಕಡೆಗೆ ಬರುವಾಗ ಅದೇ ವೇಳೆಗೆ ಹಿಂದಿನಿಂದ ಅಂದರೇ ಆಳಂದ ಕಡೆಯಿಂದ ಕೆಎಸ್.ಆರ್.ಟಿಸಿ ಬಸ ನಂ ಕೆಎ-32 ಎಪ್-1681 ನೇದ್ದರ ಚಾಲಕನು ತನ್ನ ಬಸನ್ನು ಅತೀವೇಗ ಮತ್ತು ನಿಷ್ಕಾಜಿತನದಿಂದ ನಡೆಸಿಕೊಂಡು ಬಂದು ಮೃತ ತಿಪ್ಪಣ್ಣಾ ಇತನಿಗೆ ಡಿಕ್ಕಿ ಹೊಡೆದು ಅಪಘಾತಪಡಿದ ಅದರಿಂದ ಆತನಿಗೆ ತಲೆಯ ಹಿಂದೆ ಬಾರಿ ರಕ್ತಗಾಯ, ಬಲ ಮೇಲಕಿನ ಮತ್ತು ಕಣ್ಣಿನ ಹತ್ತಿರ ರಕ್ತಗಾಯವಾಗಿ ಬಾಯಿಯಿಂದ ಮತ್ತು ಮೂಗಿನಿಂದ ರಕ್ತಸ್ರಾವವಾಗಿದ್ದು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿ ಹೆಚ್ಚಿನ ಉಪಚಾರ ಕುರಿತು ಖಾಸಗಿ ಆಸ್ಪತ್ರೆಗೆ 108 ಅಂಬುಲೆನ್ಸದಲ್ಲಿ ಹಾಕಿಕೊಂಡು ಒಯ್ಯಬೇಕು ಎನ್ನಷ್ಟರಲ್ಲಿ ಮೃತಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಶಿವರಾಜ ತಂದೆ ಮಲ್ಲಿಕಾರ್ಜುನ ಪಾಟೀಲ ಸಾ: ಉದನೂರ ರವರು ದಿನಾಂಕ 15-1-2015 ರಂದು ರಾತ್ರಿ 10-30 ಗಂಟೆಗೆ ಕರ್ತವ್ಯ ಮುಗಿಸಿಕೊಂಡು ಗೋದುತಾಯಿ ನಗರದ ನನ್ನ ಮನೆಗೆ ಬಂದು ನನ್ನ ಹೀರೋ ಹೋಂಡಾ ಪ್ಯಾಶನ ಪ್ಲಸ ದ್ವಿಚಕ್ರ ವಾಹನ ಸಂಖ್ಯೆ ಕೆಎ-34 ಎಲ್-5347 ಚೆಸ್ಸಿನಂ 0405ಸಿ08084 ಇಂಜನ ನಂ 0408ಎನ್05252 ನೇದ್ದನ್ನು ಮನೆಯ ಮುಂದೆ ನಿಲ್ಲಿಸಿ ಮನೆಯಲ್ಲಿ  ಮಲಗಿದ್ದು ಮರುದಿವಸ 16-01-2015 ರಂದು ಬೆಳಿಗ್ಗೆ 6-30 ಗಂಟೆ ಸುಮಾರಿಗೆ ಎದ್ದು ನೋಡಲಾಗಿ ದ್ವಿಚಕ್ರ ವಾಹನ ಇರಲಿಲ್ಲಾರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ನನ್ನ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆವಾಹನದ ಅಂದಾಜು ಬೆಲೆ 25000/- ರೂ ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.