ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಭಜರಂಗಸಿಂಗ ತಂದೆ ಭವಾನಿಸಿಂಗ ತಿವಾರಿ ಸಾ:ಅವರಾದ (ಬಿ) ಗ್ರಾಮ ತಾ:ಜಿ: ಕಲಬುರಗಿ ಇವರ ಮಗ ಭೀಮಸಿಂಗ ಇತನು ಆಪಾದಿತ ಬಸರವಾಜ ಗೌಡಪ್ಪಗೋಳ ಇತನ ತಂಗಿಗೆ ಚುಡಾಸಿದ್ದು ಅಲ್ಲದೇ ಊರಲ್ಲಿ ಅವಳ ಬಗ್ಗೆ ಇಲ್ಲ ಸಲ್ಲದ ಅಪವಾದ ಮಾಡಿದ್ದಾನೆ ಎಂಬ ಉದ್ದೇಶದಿಂದ ಭೀಮಸಿಂಗ ಇತನಿಗೆ ಬಸವರಾಜ ಗೌಡಪ್ಪಗೋಳ ಹಾಗು ಇತರರು ಕೂಡಿಕೊಂಡು ದಿನಾಂಕ:-23/01/15 ರಂದು 00:00 ಗಂಟೆಯಿಂದ ಬೆಳಿಗ್ಗೆ 06:00 ಗಂಟೆಯ ಮದ್ಯದ ಅವದಿಯಲ್ಲಿ ಮೃತ ಭೀಮಸಿಂಗನಿಗೆ ಯಾವುದೋ ಆಯುಧಗಳಿಂದ ತಲೆ ಹಿಂದೆ ಹಾಗೂ ಇತರೇ ಕಡೆಗಳಲ್ಲಿ ಹೊಡೆದು ಕೊಲೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ದೇವಕಿ ಗಂಡ ತಿಪ್ಪಣ್ಣಾ ಗುಜ್ಜಾಲದಾರ ಸಾ:ಕನಕನಗರ ಸಮತಾ ಕಾಲೋನಿ ಬ್ರಹ್ಮಪುರ ಕಲಬುರಗಿ ಇವರ ಗಂಡ ತಿಪ್ಪಣ್ಣಾ ಇತನು ದಿನಾಂಕ:-23/01/2015 ರಂದು ರಾತ್ರಿ 10:20 ಗಂಟೆ ಸುಕಾರಿಬೆ ಕೇರಿ ಭೋಸಗಾ ಕ್ರಾಸ ಹತ್ತಿರ ನಡೆದುಕೊಂಡು ಕಲಬುರ್ಗಿ ಕಡೆಗೆ ಬರುವಾಗ ಅದೇ ವೇಳೆಗೆ ಹಿಂದಿನಿಂದ ಅಂದರೇ ಆಳಂದ ಕಡೆಯಿಂದ ಕೆಎಸ್.ಆರ್.ಟಿಸಿ ಬಸ ನಂ ಕೆಎ-32 ಎಪ್-1681 ನೇದ್ದರ ಚಾಲಕನು ತನ್ನ ಬಸನ್ನು ಅತೀವೇಗ ಮತ್ತು ನಿಷ್ಕಾಜಿತನದಿಂದ ನಡೆಸಿಕೊಂಡು ಬಂದು ಮೃತ ತಿಪ್ಪಣ್ಣಾ ಇತನಿಗೆ ಡಿಕ್ಕಿ ಹೊಡೆದು
ಅಪಘಾತಪಡಿದ ಅದರಿಂದ ಆತನಿಗೆ ತಲೆಯ ಹಿಂದೆ ಬಾರಿ ರಕ್ತಗಾಯ, ಬಲ ಮೇಲಕಿನ ಮತ್ತು ಕಣ್ಣಿನ ಹತ್ತಿರ ರಕ್ತಗಾಯವಾಗಿ ಬಾಯಿಯಿಂದ ಮತ್ತು ಮೂಗಿನಿಂದ
ರಕ್ತಸ್ರಾವವಾಗಿದ್ದು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿ ಹೆಚ್ಚಿನ ಉಪಚಾರ ಕುರಿತು ಖಾಸಗಿ ಆಸ್ಪತ್ರೆಗೆ 108 ಅಂಬುಲೆನ್ಸದಲ್ಲಿ ಹಾಕಿಕೊಂಡು ಒಯ್ಯಬೇಕು ಎನ್ನಷ್ಟರಲ್ಲಿ ಮೃತಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಶಿವರಾಜ
ತಂದೆ ಮಲ್ಲಿಕಾರ್ಜುನ
ಪಾಟೀಲ ಸಾ:
ಉದನೂರ ರವರು
ದಿನಾಂಕ 15-1-2015 ರಂದು
ರಾತ್ರಿ 10-30 ಗಂಟೆಗೆ
ಕರ್ತವ್ಯ ಮುಗಿಸಿಕೊಂಡು
ಗೋದುತಾಯಿ ನಗರದ
ನನ್ನ ಮನೆಗೆ
ಬಂದು ನನ್ನ
ಹೀರೋ ಹೋಂಡಾ
ಪ್ಯಾಶನ ಪ್ಲಸ
ದ್ವಿಚಕ್ರ ವಾಹನ
ಸಂಖ್ಯೆ ಕೆಎ-34
ಎಲ್-5347 ಚೆಸ್ಸಿನಂ
04ಎ05ಸಿ08084
ಇಂಜನ ನಂ
04ಎ08ಎನ್05252 ನೇದ್ದನ್ನು
ಮನೆಯ ಮುಂದೆ
ನಿಲ್ಲಿಸಿ ಮನೆಯಲ್ಲಿ ಮಲಗಿದ್ದು
ಮರುದಿವಸ 16-01-2015 ರಂದು
ಬೆಳಿಗ್ಗೆ 6-30 ಗಂಟೆ
ಸುಮಾರಿಗೆ ಎದ್ದು
ನೋಡಲಾಗಿ ದ್ವಿಚಕ್ರ
ವಾಹನ ಇರಲಿಲ್ಲಾ. ರಾತ್ರಿ
ವೇಳೆಯಲ್ಲಿ ಯಾರೋ
ಕಳ್ಳರು ನನ್ನ
ದ್ವಿಚಕ್ರ ವಾಹನವನ್ನು
ಕಳ್ಳತನ ಮಾಡಿಕೊಂಡು
ಹೋಗಿರುತ್ತಾರೆ. ವಾಹನದ
ಅಂದಾಜು ಬೆಲೆ
25000/- ರೂ ಇರುತ್ತದೆ.
ಅಂತಾ ಸಲ್ಲಿಸಿದ
ದೂರು ಸಾರಾಂಶದ
ಮೇಲಿಂದ ಅಶೋಕ
ನಗರ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
No comments:
Post a Comment