POLICE BHAVAN KALABURAGI

POLICE BHAVAN KALABURAGI

08 July 2015

Kalaburagi District Reported Crimes

ಅಪಘಾತ ಪ್ರಕರಣ :
ಸಂಚಾರಿ ಠಾಣೆ : ದಿನಾಂಕ: 07/07/2015  ರಂದು ರಾತ್ರಿ 10=00 ಗಂಟೆ ಸುಮಾರಿಗೆ ಆರ್.ಟಿ.ಓ ಕ್ರಾಸ್ ದಿಂದ ಸೇಡಂ ರಿಂಗರೋಡ ಮಧ್ಯದಲ್ಲಿ ಬರುವ ಸುಷ್ಮಾ ವೈನ್ಸ ಶಾಪ ಎದುರಿನ ರೋಡ ಮೇಲೆ ಒಬ್ಬ ಅಪರಿಚಿತ ಮನುಷ್ನ ಅಂದಾಜು ವಯಾ: 30 ರಿಂದ 35 ವರ್ಷ ಇತನು ನಡೆದುಕೊಂಡು ರೋಡ ದಾಟುತ್ತಿದ್ದಾಗ ಆರ್.ಟಿ.ಓ ಕ್ರಾಸ್ ರೋಡ ಕಡೆಯಿಂದ ಆರೋಪಿ ನಾಗರಾಜ ಇತನು ತನ್ನ ಮೋ/ಸೈಕಲ್ ನಂ: ಕೆಎ 32 ಎಲ್ 3896 ನೆದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಅಪರಚಿತ ಮನುಷ್ಯನಿಗೆ ಡಿಕ್ಕಿ ಪಡಿಸಿ ಅಪಘಾತಮಾಡಿ ತಲೆಗೆ ಭಾರಿ ಗಾಯಗೊಳಿಸಿ ಮೋ/ಸೈಕಲ್ ಸ್ಥಳದಲ್ಲೆ ಬಿಟ್ಟು ಸವಾರ ಹೊರಟು ಹೋಗಿದ್ದು. ಅಪರಿಚಿತ ಮನುಷ್ಯನು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ಇಂದು ದಿನಾಂಕ: 08/08/2015 ರಂದು ಬೆಳಿಗೆ 6=10 ಗಂಟೆಗೆ ಮೃತ ಪಟ್ಟಿರುತ್ತಾನೆ ಅಂತಾ  ಶ್ರೀ ರಾಜಶೇಖರ  ತಂದೆ ಶಿವಶರಣಪ್ಪಾ ಪಾಟೀಲ  ಸಾ: ಗುಬ್ಬಿ ಕಾಲೋನಿ ಅಂಬಾ ಬಾಯಿ ಗುಡಿ ಹತ್ತಿರ ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

KALABURAGI DISTRICT REPORTED CRIMES

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ: 08-07-2015 ರಂದು ರಾತ್ರಿ ರಾಘವೇಂದ್ರ ನಗರ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಬರುವ ಎಂ.ಎಸ್‌‌.ಕೆ ಮೀಲ್‌‌ ಬಡಾವಣೆಯ ಎಕ್ಬಾಲ್‌ ಕಾಲೋನಿಯ ಮೋಹಿನ ಫಂಕ್ಷನ್‌ ಹಾಲ್‌ ಎದರುಗಡೆ  ಸಾರ್ವಜನಿಕ ಸ್ಥಳದಲ್ಲಿ ಪಣಕ್ಕೆ ಹಣ ಹಚ್ಚಿ ಇಸ್ಪೀಟ್‌ ಜೂಜಾಟ ಆಡುತ್ತಿದ್ದ ಬಗ್ಗೆ ಬಾತ್ಮಿ  ಬಂದ ಮೇರೆಗೆ ಪಿ.ಎಸ್.ಐ ರಾಘವೇಂದ್ರ ನಗರ ಃಆಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ 6 ಜನರನ್ನು ವಶಕ್ಕೆ ತೆಗೆದುಕೊಂಡು ಅವರ ಹೆಸರು ವಿಚಾರಿಸಲು 1. ಆಬೀದ ಹುಸೇನ್ ತಂದೆ ಮಹ್ಮದ ಪಾಶಾಮೀಯ್ಯಾ ಸಾ:ಎಕ್ಬಾಲ್‌ ಕಾಲೋನಿ ಎಂ.ಎಸ್‌‌.ಕೆ ಮೀಲ್‌‌ ಕಲಬುರಗಿ 2. ನದೀಮ ತಂದೆ ಅಬ್ದುಲ್‌ ರಶೀದ ಸಾ:ಎಂ.ಎಸ್‌.ಕೆ ಮೀಲ್ ಖದೀರ ಚೌಕ ಕಲಬುರಗಿ 3. ಇಜಾಜ ತಂದೆ ಶೇಖ ಮಕಬೂಲ ಸಾ:ರಾಮಚಕ್ಕಿ ಹತ್ತಿರ ಜಿಲಾನಾಬಾದ ಎಂ.ಎಸ್‌.ಕೆ ಮೀಲ್‌ ಕಲಬುರಗಿ 4. ಜಾಕೀರ ತಂದೆ ಅಬ್ದುಲ್‌ ನಬಿ ಸಾ:ಮದೀನಾ ಕಾಲೋನಿ ಕಲಬುರಗಿ 5. ಮತೀನ ತಂದೆ ಮಹ್ಮದ ಹುಸೇನ್‌ ಸಾ:ಪುರಾನಾ ಮಜೀದ ಜಿಲಾನಾಬಾದ ಎಂ.ಎಸ್‌.ಕೆ ಮೀಲ್‌ ಕಲಬುರಗಿ 6. ಸಾಜೀದ ತಂದೆ ಅಬ್ದುಲ್‌ ಸೂಕ್ಕೂರ ಸಾ:ಮಹ್ಮದಿ ಚೌಕ ಹತ್ತಿರ ಜಿಲಾನಾಬಾದ ಕಲಬುರಗಿ ಅಂತಾ ತಿಳಿಸಿದ್ದು ಸದರಿವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 3040/- ರೂ ಹಾಗು 52 ಇಸ್ಪೀಟ್‌ ಎಲೆಗಳನ್ನು ವಶಪಡಿಸಿಕೊಂಡು ಸದರಿಯವರ ವಿರುದ್ದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.  
ಅಫಜಲಪೂರ ಠಾಣೆ : ದಿನಾಂಕ 07-07-2015 ರಂದು ಕೂಡಿಗಾನೂರ ಗ್ರಾಮದ ಭೋಗಲಿಂಗೇಶ್ವರ ಗುಡಿಯ ಮುಂದೆ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ   ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ರಾಜಕುಮಾರ ಸಿ.ಎಚ್.ಸಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಭೋಗಲಿಂಗೇಶ್ವರ ಗುಡಿಯಿಂದ ಸ್ವಲ್ಪ ದೂರ ಮರೆಯಾಗಿ ನಿಂತು ನೊಡಲು ಗುಡಿಯ ಮುಂದೆ ಖುಲ್ಲಾ ಜಾಗದಲ್ಲಿ ನಾಲ್ಕು ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದು ಖಚಿತ ಪಡಿಸಿಕೊಂಡು ದಾಳಿ ಮಾಡಿದಾಗ ಅದರಲ್ಲಿ ಜೂಜಾಡುತ್ತಿದ್ದ ಇಬ್ಬರು ಓಡಿ ಹೋಗಿದ್ದು, ಇಬ್ಬರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ರಮೇಶ ತಂದೆ ಭಗವಂತರಾವ ಜಮಾದಾರ ಸಾ||ಕೂಡಿಗಾನೂರ 2) ಸಿದ್ರಾಮ ತಂದೆ ಹಣಮಂತ ಜಮಾದಾರ ಸಾ|| ಕೂಡಿಗಾನೂರ ಅಂತಾ ತಿಳಿಸಿದ್ದು, ಅಂತಾ ತಿಳಿಸಿದ್ದು  ಓಡಿ ಹೋದ ಇಬ್ಬರ ಹೆಸರು ವಿಳಾಸ ಸದರಿಯವರಿಗೆ ವಿಚಾರಿಸಲಾಗಿ 1) ಕಲ್ಲಣ್ಣ ತಂದೆ ಶಿವಶಂಕರ ಆಳ್ಳಗಿ 2) ಕುಮಾರ ತಂದೆ ಭಗವಂತರಾವ ಪೊಲೀಸ್ ಪಾಟೀಲ ಸಾ|| ಇಬ್ಬರು ಕೂಡಿಗಾನೂರ  ಅಂತಾ ತಿಳಿಸಿರುತ್ತಾರೆ. ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 5,070/- ರೂ ಮತ್ತು 52 ಇಸ್ಪೆಟ ಎಲೆಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ:
ನೆಲೋಗಿ ಪೊಲೀಸ್ ಠಾಣೆ:- ದಿನಾಂಕ:07/07/2015  ರಂದು 12-15 ಪಿ.ಎಂ.ಕ್ಕೆ ಶ್ರೀ ಸಾಹೇಬಗೌಡ ತಂದೆ ಸಿದ್ದಪ್ಪ ಸಾ: ಮುರಗಾನೂರರವರು ಠಾಣೆಗೆ ಹಾಜರಾಗಿ ಮುಂಜಾನೆ 8-00 ಗಂಟೆ ಸುಮಾರಿಗೆ ನಮ್ಮ ಅಣ್ಣ ಸಿದ್ರಾಮಪ್ಪನು ಹೊಲಕ್ಕೆ ಹೋದಾಗ ಅಲ್ಲೆ ಬಾವಿ ಹತ್ತಿರ ಇರುವ ಮಾವನಿಗಿಡಕ್ಕೆ ನನ್ನ ಮಗ ಮಲ್ಲಣ್ಣ ತಂದೆ ಸಾಹೇಬಗೌಡ ಚಾಂದಕವಠೆ ನೇಣು ಹಾಕಿಕೊಂಡೆಇದ್ದನ್ನು ನೋಡಿ ಮನಗೆ ಬಂದು ತಿಳಿಸಿದಾಗ ನಾವೆಲ್ಲರೂ ಹೊಲಕ್ಕೆ ಹೋಗಿ ನೋಡಲಾಗಿ ನನ್ನ ಮಗನು ಬಾವಿಯ ಹತ್ತಿರ ಇರುವ ಮಾವಿನ ಗಿಡಕ್ಕೆ ಹಗ್ಗದಿಂದ ಊರಲು ಹಾಕಿಕೊಂಡು ಮೃತಪಟ್ಟಿದ್ದು. ನನ್ನ ಮಗ ಣೇನು ಹಾಕಿಕೊಂಡು ಮೃತ ಪಟ್ಟ ಬಗ್ಗೆ ನನಗೆ ಸಂಶಯವಿದ್ದು. ಪ್ರಕರಣ ದಾಖಲಿಸಿ ನನ್ನ ಮಗನ ಸಾವಿನ ಬಗ್ಗೆ ತನಿಖೆ ಕೈಕೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.