POLICE BHAVAN KALABURAGI

POLICE BHAVAN KALABURAGI

14 February 2015

Kalaburagi District Reported Crimes

ಆಕ್ರಮವಾಗಿ ಆಯುಧ ಮಾರಾಟ ಮಾಡುತ್ತಿದ್ದವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 13-02-2015 ರಂದು ಬೆಳಿಗ್ಗೆ ಕಲಬುರಗಿ ರಸ್ತೆಗೆ ಇರುವ ನಿರಾವರಿ ಆಫೀಸ ಹತ್ತಿರ ಎರಡು ಜನರು ನಿಂತುಕೊಂಡು ಪಿಸ್ತೂಲ ಮಾರಾಟ ಮಾಡುವ ವ್ಯವಹಾರ ಮಾಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ನಿರಾವರಿ ಆಫೀಸ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ನಿರಾವರಿ ಆಫೀಸ ಹತ್ತಿರ ಇಬ್ಬರು ನಿಂತಿದ್ದು, ಒಬ್ಬನ ಹತ್ತಿರ ಪಿಸ್ತೂಲ ಇತ್ತು ಮತ್ತೊಬ್ಬನ ಹತ್ತಿರ ಗುಂಡುಗಳು ಇದ್ದವು. ಇಬ್ಬರು ಪಿಸ್ತೂಲ ಮತ್ತು ಗುಂಡುಗಳು ತಮ್ಮ ಕೈಯಲ್ಲಿ ಹಿಡಿದು ಪರಿಶೀಲನೆ ಮಾಡುತ್ತಿದ್ದಾಗ ದಾಳಿ ಮಾಡಿ ಇಬ್ಬರನ್ನು ಹಿಡಿದು ಹೆಸರು ವಿಳಾಸ ವಿಚಾರಿಸಿಲಾಗಿ 1] ಮಹಮ್ಮದ ಹನೀಫ ತಂದೆ ಚಾಂದಸಾಬ ಮುಲ್ಲಾ ಸಾ|| ಲಿಂಬಿತೋಟ ಅಫಜಲಪುರ ಅಂತಾ ತಿಳಿಸಿದನು, ಇವನ ಹತ್ತಿರ ಒಂದು ಪಿಸ್ತೂಲ ದೊರೆತಿದ್ದು, ಸದರಿ ಪಿಸ್ತೂಲಿನ ಬಗ್ಗೆ ವಿಚಾರಿಸಿದಾಗ ಇದು ಕಂಟ್ರಿ ಪಿಸ್ತೂಲ ಇರುತ್ತದೆ, ಇದರ ಬಗ್ಗೆ ನನ್ನ ಹತ್ತಿರ ಯಾವುದೆ ಲೈಸನ್ಸ  ಇರುವುದಿಲ್ಲಾ ಅಂತಾ ತಿಳಿಸಿದನು. 2] ಶರಣಬಸಪ್ಪಾ @ ಶರಣು ತಂದೆ ಜಗದೇವಪ್ಪಾ ಕಲಶಟ್ಟಿ@ ಗೂಳೆ ಸಾ|| ಚಿಂಚೋಳಿ ಅಂತಾ ತಿಳಿಸಿದ್ದು, ಇವನ ಹತ್ತಿರ 4 ಜೀವಂತ ಗುಂಡುಗಳು ದೊರೆತವು, ನಂತರ ಇವನಿಗೆ ತನ್ನ ಹತ್ತಿರ ಇದ್ದ ಸದರಿ 4 ಜೀವಂತ ಗುಂಡಗಳ ಬಗ್ಗೆ ವಿಚಾರಿಸಿದಾಗ ಅವುಗಳು ಇದೇ ಕಂಟ್ರಿ ಪಿಸ್ತೂಲಿಗೆ ಸಂಬಂಧ ಪಟ್ಟಿದ್ದು ಇರುತ್ತವೆ ಅಂತಾ ತಿಳಿಸಿದನು. ಆರೋಪಿತರು ಅಕ್ರಮವಾಗಿ ಇಟ್ಟುಕೊಂಡ ಒಂದು ಕಂಟ್ರಿ ಪಿಸ್ತೂಲ ಅ||ಕಿ|| 40,000/- ರೂ ಮತ್ತು ಸದರಿ ಕಂಟ್ರಿ ಪಿಸ್ತೂಲಿನ 4 ಜಿವಂತ ಗುಂಡುಗಳು ಅ||ಕಿ|| 2,000/- ರೂ ನೇದ್ದವುಗಳನ್ನು  ಜಪ್ತ ಮಾಡಿಕೊಂಡ ಮುದ್ದೆ ಮಾಲಿನೊಂದಿಗೆ ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಕೊಲೆ ಪ್ರಕರಣ :
ನರೋಣಾ ಠಾಣೆ : ಶ್ರೀಮತಿ ಕಲಾವತಿ ಗಂಡ ಶಿವಶರಣ ಪೂಜಾರಿ ಸಾ: ಕಿಣ್ಣಿಸುಲ್ತಾನ ಇವರಿಗೆ ಐದು ವರ್ಷದ ಹಿಂದೆ ಗುಲಬರ್ಗಾ ತಾಲೂಕಿನ ಶರಣಸಿರಸಗಿ ಗ್ರಾಮದ ಶಿವಕುಮಾರ ತಂದೆ ಈರಣ್ಣಾ ಚಾಕಣಿ ಇತನಿಗೆ ಶರಣಸಿರಸಗಿ ಗ್ರಾಮದ ಶರಣಬಸವಣಪ್ಪಾ ಮಂಟಪದಲ್ಲಿ ಮದುವೆ ಮಾಡಿಕೊಟ್ಟಿರುವದು ಇರುತ್ತದೆ. ನನ್ನ ಮಗಳು ಮದುವೆಯಾದ ನಂತರ ನಡೆಯಲು ತನ್ನ ಗಂಡನ ಮನೆಗೆ ಹೋಗಿದ್ದು ಮದುವೆಯಾದ ಒಂದು ವರ್ಷದವರೆಗೆ ನನ್ನ ಮಗಳ ಗಂಡ ಶಿವಕುಮಾರ ಚಾಕಣಿ, ಅತ್ತೆ ನೀಲಮ್ಮಾ ಚಾಕಣಿ, ಮಾವ ಈರಣ್ಣಾ ಚಾಕಣಿ, ಭಾವ ರಾಜು ಚಾಕಣಿ,  ಮೈದುನ ಸಂತೋಷ ಚಾಕಣಿ ಇವರುಗಳು ಒಂದು ವರ್ಷದ ವರೆಗೆ ಚನ್ನಾಗಿ ನೋಡಿಕೊಂಡು ನಂತರ ನನ್ನ ಮಗಳಿಗೆ ಅವಳ ಗಂಡ ಅತ್ತೆ ಮಾವ ಭಾವ ಮತ್ತು ಮೈದುನ ಇವರೆಲ್ಲರೂ ಕೂಡಿ ನನ್ನ ಮಗಳಿಗೆ ಮಕ್ಕಳಾಗಿರುವುದಿಲ್ಲಾ ಅಂತಾ ಬೈಯುವದು ಮಾಡುತ್ತಿದ್ದು ಈ ವಿಷಯವನ್ನು ನನ್ನ ಮಗಳು ಫೋನ ಮೂಲಕ ಹಾಗೂ ಹಬ್ಬ ಹರಿದಿನಗಳಿಗೆ ತವರಿಗೆ ಬಂದಾಗ ನಮಗೆ ಹೇಳಿದ್ದು ಇರುತ್ತದೆ. ಈಗ ಒಂದುವರೆ ತಿಂಗಳ ಹಿಂದೆ ನನ್ನ ಮಗಳಿಗೆ  ಅವಳ ಗಂಡ ಶೀವಕುಮಾರ ಮತ್ತು ಅತ್ತೆ ನೀಲಮ್ಮ  ಕೂಡಿ ಅವಳ ಗಂಡನ ಮನೆಯಲ್ಲಿ ರಂಡೀ ನೀನಗೆ ಮಕ್ಕಳಾಗಿಲ್ಲಾ ನೀನು ಗೊಡ್ಡು ಇದ್ದಿ, ಅಂತಾ ಜಗಳ ಮಾಡಿ ಹೊಡೆದು, ನನ್ನ ಮಗಳ ಗಂಡ ನನ್ನ ಮಗಳಿಗೆ ಶರಣ ಸಿರಸಗಿಯಿಂದ ಕರೆದುಕೊಂಡು ಬಂದು ನನ್ನ ಮನೆಗೆ ಬಿಟ್ಟು ಹೋಗಿದ್ದ. ಈ ವಿಷಯವನ್ನು ನನ್ನ ಮಗಳು ನನ್ನ ಮುಂದೆ ಹೇಳಿದ್ದು ಇರುತ್ತದೆ. ದಿನಾಂಕ: 12/02/2015 ರಂದು ಮದ್ಯಾಹ್ನ ನಾನು ನನ್ನ ಮಗಳಾದ ಮೀನಾಕ್ಷಿ ನನ್ನ ಎರಡನೆ ಮಗಳಾದ ಸಾರಿಕ @ ಸವೀತಾ ನನ್ನ ಎರಡನೆ ಅಳಿಯ ಉಮಾಕಾಂತ ತಂದೆ ಶಿವಣ್ಣಾ ಗೊಡಕೆ ಇವರುಗಳು ಇದ್ದಾಗ ನನ್ನ ಮಗಳಾದ ಮಿನಾಕ್ಷಿ ಇವಳ ಗಂಡ ಶಿವಕುಮಾರ ಚಾಕಣಿ ಇವನು ಒಂದು ಸೈಕಲ್ ಮೋಟರ್ ತೆಗೆದುಕೊಂಡು ಕಿಣ್ಣಿಸುಲ್ತಾನಕ್ಕೆ ನಮ್ಮ ಮನೆಯಲ್ಲಿ ಒಂದು ಅರ್ದಗಂಟೆ ಕುಳಿತು ಊಟ ಮಾಡಿಕೊಂಡು ನಾಲ್ಕುವರೆ ಗಂಟೆಗೆ ನನ್ನ ಹೆಂಡತಿಗೆ ಕರೆಯಲು ಬಂದಿರುತ್ತೆನೆ. ಸದ್ಯ ನಾವು ಹೋಗುತ್ತಿದ್ದೆವೆ ಎಂದು ನನಗೆ ಹೇಳಿ ನನ್ನ ಅಳಿಯ ಶಿವಕುಮಾರ ಚಾಕಣಿ ರವರು ತಾನು ತಂದಿದ್ದ ಸೈಕಲ್ ಮೋಟರ್ ನಂ: ಕೆಎ 32 ಆರ್ 8668 ಇದರ ಮೇಲೆ ನನ್ನ ಮಗಳಾದ ಮಿನಾಕ್ಷಿಗೆ ಕುಡಿಸಿಕೊಂಡು ಸಾಯಾಂಕಾಲ 05:00 ಗಂಟೆಗೆ ಹೋಗಿದ್ದು ಇರುತ್ತದೆ, ನಂತರ ನಾನು 08:00 ಗಂಟೆಯ ಸುಮಾರಿಗೆ ಅಳಿಯನಿಗೆ ಫೊನ ಮಾಡಿ ಊರಿಗೆ ಮುಟ್ಟಿದ್ದಿರಾ ಅಂತಾ ಕೇಳಿದ್ದಾಗ ನನ್ನ ಮಗಳು ಮತಾಡಿ ದಾರಿಯಲ್ಲಿ ಹೋಗುತ್ತಿದ್ದೆವೆ ಅಂತಾ ಹೇಳಿರುತ್ತಾಳೆ ನಮ್ಮೂರಿನ ಶಿವಾನಂದ ತಂದೆ ವಿಠಲ ಕುಂಬಾರ ಮತ್ತು ಸಂಜಿವುಕುಮಾರ ತಂದೆ ಮಾಳಪ್ಪಾ ಪೂಜಾರಿ ಇವರು ಮದ್ಯ ರಾತ್ರಿ 12:00 ಗಂಟೆಯ ಸುಮಾರಿಗೆ ನಮ್ಮ ಮನೆಗೆ ಬಂದು ವಿಷಯ ತಿಳಿಸಿದ್ದೆನೆಂದರೆ, ನಿಮ್ಮ ಅಳಿಯ ಶಿವಕುಮಾರ ಚಾಕಣಿ ಹಾಗೂ ನಿಮ್ಮ ಮಗಳು ಮಿನಾಕ್ಷೀ ಹೋಗುವ ದಾರಿಯಲ್ಲಿ ಲಾಡಚಿಂಚೋಳಿ ಕ್ರಾಸ್ ಹತ್ತಿರ ರಾತ್ರಿ 10:00 ಗಂಟೆಯ ಸುಮಾರಿಗೆ ಅಪಘಾತವಾಗಿದ್ದರಿಂದ ನಿಮ್ಮ ಮಗಳಾದ ಮಿನಾಕ್ಷಿ ಇವರು ಭಾರಿಗಾಯವಾಗಿ ಮೃತಪಟ್ಟಿರುತ್ತಾಳೆ ಎಂದು ತಿಳಿಸಿದ ಮೇರೆಗೆ ನಾನು ನನ್ನ ಗಂಡನಾದ ಶಿವಶರಣ ಹಾಗೂ ಓಣಿಯ ಕೆಲವು ಜನರು ಕೂಡಿ ಡೋಗಿನಾಲಾ ದಾಟಿ ಲಾಡಚಿಂಚೋಳಿ ಕಡೆಗೆ ಹೋಗುವ ರಸ್ತೆಯ ಎಡಬದಿಯಲ್ಲಿ ನನ್ನ ಮಗಳ ಶವವು ಬಿದ್ದಿದ್ದು ನಾವುಗಳು ನೋಡಲು ಅವಳ ಬಲಗಡೆ ಮೆಲಕಿನ ಮೇಲೆ ಭಾರಿ ರಕ್ತಗಾಯವಾಗಿದ್ದು ಅಲ್ಲದೆ ಗದ್ದಕ್ಕೆ ಎಡಗಡೆ, ಮಗ್ಗಲಿಗೆ ಕಂದುಗಟ್ಟಿದ ಗಾಯವಾಗಿದ್ದು ಅಲ್ಲದೆ ಎಡಗಾಲು ಮೊಳಕಾಲಿಗೆ ತರಚಿದ ಗಾಯವಾಗಿತ್ತು ಇದು ನನ್ನ ಅಳಿಯ ನನ್ನ ಮಗಳಿಗೆ ಶಿಲದ ಬಗ್ಗೆ ಸಂಶಯ ಮಾಡಿ ನನ್ನ ಮಗಳಿಗೆ ಜೊತೆಯಲ್ಲಿ ಕರೆದುಕೊಂಡು ಬಂದು ಲಾಡಚಿಂಚೋಳಿಯ ಸಿಮೆಯ ಒಂದು ಹೊಲದಲ್ಲಿ ಕೆಳಗೆ ಮಲಗಿಸಿ ದೊಡ್ಡ ಕಲ್ಲಿನಿಂದ ನನ್ನ ಮಗಳಾದ ಮಿನಾಕ್ಷಿಯ ತಲೆಯ ಮೇಲೆ ಎತ್ತಿ ಹಾಕಿ ಭಾರಿ ಗಾಯ ಪಡಿಸಿ ಕೊಲೆ ಮಾಡಿರುತ್ತಾರೆ. ಇದನ್ನು ಮುಚ್ಚಲು ಅವಳ ಶವವು ಸೈಕಲ್ ಮೋಟರ್ ಮೇಲೆ ಹಾಕಿಕೊಂಡು ರೋಡಿಗೆ ಹಾಕಿ ಸಾಕ್ಷೀ ಮುಚ್ಚಿ ಹಾಕುವ ಉದ್ದೇಶದಿಂದ ಅಪಘಾತವೆಂದು ಸೃಷ್ಠಿ ಮಾಡಿರುತ್ತಾನೆ. ಅಂದರೆ ನನ್ನ ಅಳಿಯನೆ ನನ್ನ ಮಗಳಿಗೆ ಅವಳ ಶೀಲದ ಬಗ್ಗೆ ಸಂಶಯ ಪಟ್ಟು ಕೊಲೆ ಮಾಡಿರುತ್ತಾನೆ  ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.