POLICE BHAVAN KALABURAGI

POLICE BHAVAN KALABURAGI

01 January 2016

Kalaburagi District Reported Crimes

 ಕೊಲೆ ಪ್ರಕರಣ :
ವಾಡಿ ಠಾಣೆ : ದಿನಾಂಕ;31/12/2015 ರಂದು ನಾನು ಮತ್ತು ನನ್ನ ಹೆಂಡತಿ ಮಹಾದೇವಿ ಕೂಡಿ ಮನೆಯಲ್ಲಿದ್ದಾಗ ನಮ್ಮ ಓಣಿಯವರಾದ ಶಿವಕುಮಾರ ತಂದೆ ಬಸವರಾಜ ಈತನು ಮನಗೆ ಬಂದು ಹೇಳಿದ್ದೇನೆಂದರೆ, ನಿನ್ನ ಮಗ ಮಲ್ಲಿಕಾರ್ಜುನ ಇತನು ವಾಡಿ ಪಟ್ಟಣದ ನ್ಯೂ ಡೆಕ್ಯೊರೊಶನ್ ಪಬ್ಲಿಸಿಟಿ ಹತ್ತಿರ ರೋಡಿನ ಮೇಲೆ ಅಂದಾಜು 10.30 ಎಎಮ್ ಕ್ಕೆ ಹೋಗುತ್ತಿದ್ದಾಗ ಆಗ ಅಲ್ಲಿಗೆ ಮೊಹ್ಮದ ಅಬ್ದುಲ ರಹೆಮಾನ ತಂದೆ ಮೊಹ್ಮದ ಅಬ್ದುಲ ನಬಿ ಇತನು ತನ್ನ ಸೈಕಲ ಮೇಲೆ ಬಂಬಾಯಿ ಮಿಟಾಯಿ ಮಾರುತ್ತಾ ಬಂದಾಗ ಆಗ ನಿನ್ನ ಮಗನು ಆತನಿಗೆ ಏ  ರಹಿಮಾನ ನಿನಗೆ ಕಬ್ಬಿಣದ ಸಾಮಾನುಗಳು ಹಾಕಿದ್ದೇನೆ ಅದರ 100 ರೂಪಾಯಿ ಕೊಡು ಅಂತಾ ಅಂದಾಗ ಆಗ ರಹಿಮಾನ ಇತನು ನನ್ನ ಮಗನಿಗೆ ಏ ಮಗನೇ ನನ್ನ  ಹತ್ತಿರ 100 ರೂಪಾಯಿ ಇಲ್ಲಾ 40 ರೂಪಾಯಿ ಇದೆ ತೊಗೊ ಇಲ್ಲಂದರ ಅದನ್ನು ಕೊಡುವದಿಲ್ಲಾ ಏನು ಮಾಡುಕೊಳ್ಳುತ್ತಿ ಮಾಡಕೊ ಅಂದಾಗ ಆಗ ಮಲ್ಲಿಕಾರ್ಜುನ ಇತನು ನನಗೆ ಇವತ್ತು 100 ರೂಪಾಯಿ ಬೇಕೆ ಬೇಕು ಅಂತಾ ಅಂದಾಗ ಅಬ್ದುಲ ರಹಿಮಾನ ಇತನು ಆತನಿಗೆ ಏ ಬೊಸಡಿ ಕ್ಯಾ ಬಿಡು ನಾನು ಮುಂದೆ ಹೋಗುತ್ತೇನೆ ಅಂತಾ ಅಂದು ಅದಕ್ಕೆ ಮಲ್ಲಿಕಾರ್ಜುನನು ಇತನು ಸೈಕಲನ್ನು ಹಿಡಿದು ನಿಲ್ಲಿಸಿದಾಗ ಮೊಹ್ಮದ ಅಬ್ದುಲ ರಹಿಮಾನ ಇತನು ಕೈ ಮುಷ್ಟಿ ಮಾಡಿ ಜೊರಾಗಿ ಮಲ್ಲಿಕಾರ್ಜುನ ತಲೆಗೆ ಮತ್ತು ಎಡ ಎದೆಗೆ ಜೊರಾಗಿ ಹೊಡೆದನು. ಆಗ ಮಲ್ಲಿಕಾರ್ಜುನ ಇತನ ಕೆಳಗೆ ಬಿದ್ದು ಒದ್ದಾಡುತ್ತಿದ್ದಾಗ ನಾನು ಮತ್ತು ಮೊಹ್ಮದ ಅಬ್ದುಲ ರಹಿಮಾನ ಕೂಡಿ ಯಾವುದೊ ಒಂದು ವಾಹನದಲ್ಲಿ ಹಾಕಿಕೊಂಡು ಉಪಚಾರ ಕುರಿತು ವಾಡಿ ಪಟ್ಟಣದ ಇಂಗಳೇಶ್ವರ ಆಸ್ತತ್ರೆಗೆ ತೆಗೆದುಕೊಂಡು ಹೊದಾಗ ಸದರಿ ಆಸ್ಪತ್ರೆಗೆ ಕೀಲಿ ಹಾಕಿದ್ದರಿಂದ ನಂತರ ಆತನಿಗೆ ಸರ್ಕಾರಿ ಆಸ್ಪತ್ರೆಗೆ ವಾಡಿಯಲ್ಲಿ ಸೇರಿಕೆ ಮಾಡಿದೇವು. ಅಂತಾ ತಿಳಿಸಿದ್ದರಿಂದ ನಾನು ಮತ್ತು ನನ್ನ ಹೆಂಡತಿ ಮಾಹದೇವಿ ಹಾಗೂ ಸುನೀಲ ತಂದೆ ಯಮನಯ್ಯಾ ಗುತ್ತೆದಾರ , ಹುಸನಯ್ಯಾ ತಂದೆ ನರಸಯ್ಯಾ ಗುತ್ತೆದಾರ ಕೂಡಿ ಆಸ್ಪತ್ರೆಗೆ ಹೋಗಿ ನೊಡಲಾಗಿ ನನ್ನ ಮಗನಿಗೆ ವೈದ್ಯಾಧಿಕಾರಿಗಳು ಪರೀಕ್ಷಿಸಿ ನೋಡಿದ್ದು ವೈದ್ಯಾಧಿಕಾರಿಗಳು ನನ್ನ ಮಗ ಮಲ್ಲಿಕಾರ್ಜುನ ಇತನು 11.30 ಎಎಮ್ ಸುಮಾರಿಗೆ ಮೃತ ಪಟ್ಟಿರುತ್ತಾನೆ. ಅಂತಾ ತಿಳಿಸಿರುತ್ತಾರೆ ಅಂತಾ ಶ್ರೀ ಬಸಯ್ಯಾ ತಂದೆ ಭೀಮಯ್ಯಾ ಗುತ್ತೆದಾರ ಸಾ: ಮಲ್ಲಿಕಾರ್ಜುನ ಗುಡಿಯ ಹತ್ತಿರ ವಾಡಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದರೋಡೆ ಮಾಡಲು ಹೊಂಚು ಹಾಕಿ ಕುಳಿತವರ ಬಂಧನ :
ಚೌಕ ಠಾಣೆ : ದಿನಾಂಕ 31.12.2015 ರಂದು ನಸುಕಿನ ಜಾವ ಚೌಕ ಪೋಲೀಸ ಠಾಣೆ ವ್ಯಾಪ್ತಿಯ ಹುಮನಾಬಾದ ರಿಂಗ್ ರೋಡ ಹತ್ತಿರ ಇರುವ ರಿಲಾಯನ್ಸ್ ಪೆಟ್ರೋಲ್ ಬಂಕದ ಪಕ್ಕದಲ್ಲಿ ರಸ್ತೆಯ ಮೇಲೆ 5-6 ಜನರು ಗುಂಪು ಕಟ್ಟಿಕೊಂಡು ಕೈಯಲ್ಲಿ ತಲವಾರ, ಮಚ್ಚು, ಲಾಂಗ, ಜಂಬ್ಯಾವನ್ನು ಹಿಡಿದುಕೊಂಡು ಮೋಟಾರ ಸೈಕಲ ಇಟ್ಟುಕೊಂಡು ದರೋಡ ಮಾಡುವ ಕುರಿತು ಹೊಂಚು ರೂಪಿಸಿಸುತ್ತಿದ್ದಾರೆಂದು ಖಚಿತವಾದ ಭಾತ್ಮಿ ಬಂದ ಮೇರೆಗೆ ಪಿ.ಎಸ್.ಐ ರವರಾದ ಶ್ರೀ ಹಸೇನ್ ಬಾಷಾ. ಮಲ್ಲಿಕಾರ್ಜುನ ಎಎಸ್ಐ, ವಿಶ್ವನಾಥ ಪಿಸಿ 686, ಮೀರಯಾಸಿನ್ ಪಿಸಿ 948, ಪ್ರಕಾಶ ಪಿಸಿ 1132, ಅಸ್ಲಂ ಪಾಶ ಪಿಸಿ 434, ಶಂಕರಲಿಂಗ್ ಪಿಸಿ 1128, ಬಂದೇನವಾಜ ಪಿಸಿ 429 ರವರು ಹಾಗು ಪಂಚರೊಂದಿಗೆ  ಬಾತ್ಮೀ ಬಂದ ಸ್ಥಳದ ಸಮೀಪದಲ್ಲಿ ಪಿ ರಿಲಾಯನ್ಸ್ ಪೆಟ್ರೋಲ್ ಬಂಕದ ಪಕ್ಕದಲ್ಲಿ ಮರೆಯಾಗಿ ನಿಂತು ನೋಡಲಾಗಿ ರಿಲಾಯನ್ಸ್ ಪೆಟ್ರೋಲ್ ಬಂಕ ಮುಂದುಗಡೆ ರಸ್ತೆಯ ಮೇಲೆ 5-6 ಜನರು ಕೈಯಲ್ಲಿ ತಲವಾರ, ಲಾಂಗ, ಮಚ್ಚು, ಜಂಬ್ಯಾಗಳನ್ನು ಹಿಡಿದುಕೊಂಡು ದರೋಡ ಮಾಡಲು ಸಿದ್ದತೆಯಲ್ಲಿರುವುದನ್ನು ಖಚಿತಪಡಿಸಿಕೊಂಡು ಒಮ್ಮಲೆ ಎಲ್ಲರೂ ಎಲ್ಲಾ ಕಡೆಗಳಿಂದ ಸುತ್ತುವರಿದು ಧಾಳಿ ಮಾಡಿ ಹಿಡಿಯುವಷ್ಟರಲ್ಲಿ ನಾಲ್ಕು ಜನರು ಜನರು ಅಲ್ಲಿಂದ ಕತ್ತಲಲ್ಲಿ ಓಡಿ ಹೋಗಿದ್ದು ತಮ್ಮ ಕೈಯಲ್ಲಿದ್ದ ಮಾರಕಾಸ್ತ್ರಗಳನ್ನು ಅಲ್ಲೆ ಬಿಸಾಕಿ ಹೋಗಿದ್ದು, ಅವರಲ್ಲಿ ಇಬ್ಬರನ್ನು ಹಿಡಿದುಕೊಂಡಿದ್ದು, ಹಿಡಿದುಕೊಂಡ ಇಬ್ಬರಲ್ಲಿ ಒಬ್ಬಬ್ಬರಾಗಿ ಹೆಸರು ವಿಳಾಸ ವಿಚಾರಿಸಲಾಗಿ ಕೈಯಲ್ಲಿ ಜಂಬ್ಯಾ ಹಿಡಿದವನ ಹೆಸರು ಕೇಳಲಾಗಿ ಅವನು ತನ್ನ ಹೆಸರು ಸತೀಶ @ ಸತ್ಯಾ @ ಮಾರ್ಕೆಟ ಸತ್ಯಾ @ ಸಂಗಮ ಸತ್ಯಾ @ ಸತ್ಯಾ ಡಾನ್  ತಂದೆ ವೆಂಕಟಸ್ವಾಮಿ ರೆಡ್ಡಿ ಸಾ: ಯಾಕೂಬ ಮನಿಯಾರ ಚಾಳ, ಎಲ್.ಐ.ಸಿ. ಆಫೀಸ ಎದರುಗಡೆ ಕಲಬುರಗಿ ಅಂತಾ ತಿಳಿಸಿದ್ದು, ಇನ್ನೂಬ್ಬನಿಗೆ ವಿಚಾರಿಸಲಾಗಿ ಅವನು ತನ್ನ ಹೆಸರು ರೋಹಿತ ತಂದೆ ಸತೀಶ ಹೂಳಗಟ್ಟಿ ಸಾ: ಗಾಜೀಪೂರ ಕಲಬುರಗಿ ಅಂತಾ ತಿಳಿಸಿದ್ದು ನಂತರ ದರೋಡೆ ಮಾಡಲು ಹೊಂಚು ಹಾಕಿ ಕುಳಿತಿದ ಸ್ಥಳದಲ್ಲಿ ದಾಳ ಕಾಲಕ್ಕೆ ಓಡಿ ಹೋದ 4 ಜನರ ಹೆಸರು ವಿಳಾಸದ ವಿಚಾರಿಸಲಾಗಿ 1] ವಿಜಯಕುಮಾರ 2) ಅಜೀಮ್ 3) ವಿಕ್ರಮ ಪ್ರಸಾದ @ ಮಾಲಗತಿ ವಿಕ್ರಮ 4) ಸಚೀನ ಮೇತಾರ ಅಂತಾ ಸತೀಶ @ ಮಾರ್ಕೆಟ ಸತ್ಯಾ ಇತನು ತಿಳಿಸಿದ್ದು ಇರುತ್ತದೆ. ಈ  ಮೇಲೆ ನಮೂದ ಮಾಡಿದ 6 ಜನ ಆರೋಪಿತರು ಸಾರ್ವಜನಿಕರಿಗೆ ಹೆದರಿಸಿ ಹೊಡೆಬಡೆ ಮಾಡಿ ಹಣ ವಸೂಲಿ ಮಾಡಿ ದರೋಡೆ ಮಾಡುವ ಉದ್ದೇಶದಿಂದ ಕೈಯಲ್ಲಿ ಅತೀ ಹರಿತವಾದ ಮತ್ತು ಸೂಕ್ಷ್ಮವಾದ ಮಚ್ಚು, ತಲವಾರ, ಜಂಬ್ಯಾ ಇಟ್ಟುಕೊಂಡು ದರೋಡೆ ಮಾಡುವ ಕುರಿತು ತಯ್ಯಾರಿಯಲ್ಲಿದ್ದು ಇರುತ್ತದೆ.   ಸದರಿ ಮೇಲೆ ನಮೂದು ಮಾಡಿದ ಎಲ್ಲಾ ಆರೋಪಿತರ ಪೈಕಿ ಸತೀಶ ರಡ್ಡಿ ಇತನು ಕೊಲೆ, ಕೊಲೆಗೆ ಪ್ರಯತ್ನಗಳ ಅಪರಾಧಗಳನ್ನು ಎಸಗಿದವನಿದ್ದು ಸದರಿಯವನ ಮೇಲೆ ಈಗಾಗಲ್ಲೇ ಚೌಕ ಪೊಲೀಸ ಠಾಣೆಯಲ್ಲಿ ರೌಡಿ ಶೀಟ ಆಸಾಮಿ ಯಾಗಿದ್ದು ನಗರದ ಇತರೆ ಠಾಣೆಗಳಲ್ಲಿಯು ಸಹ ಇತನ ವಿರುದ್ಧ ಪ್ರಕರಣಗಳು ದಾಖಲಾಗಿದ್ದು ಇರುತ್ತದೆ. ಹಾಗೂ ಸಂಗಡ ಇದ್ದ 5 ಜನರು ಅವನ ಸಹಚರರಾಗಿದ್ದು ಇರುತ್ತದೆ.   ಸದರಿ ಎಲ್ಲಾ ಆರೋಪಿತರು ಸುಫಾರಿ ಕಿಲ್ಲರಗಳಾಗಿದ್ದು, ಸದರಿ ಆರೋಪಿತರು ಕಾನೂನು ಬಾಹಿರವಾಗಿ ಗುಂಪುಕಟ್ಟಿಕೊಂಡು ರಸ್ತೆ ದರೋಡೆ ಮಾಡುವ ಉದ್ದೇಶದಿಂದ ಅತೀ ಹರಿತವಾದ ತಲವಾರ, ಮಚ್ಚು, ಜಂಬ್ಯಾಗಳನ್ನು ಇಟ್ಟುಕೊಂಡು ಒಳಸಂಚು ಮಾಡಿ ದರೋಡೆ ಮಾಡಲು ತಯ್ಯಾರಿಯಲ್ಲಿದ್ದಾಗ ಸಿಕ್ಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಿಸಿಕೊಂಡು ಹೋಗಿ ಅತ್ಯಾಚಾರ ಮಾಡಿದ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಇವರ ಮಗಳು ಕುಮಾರಿ ಇವಳನ್ನುದಿನಾಂಕ 30-12-2015 ರಂದು ಬೆಳಗಿನ ಜಾವ 5-00 ಗಂಟೆಯ ಸುಮಾರಿಗೆ  ನಾಗೇಂದ್ರ, ಬಾಬಿ , ರೂಪೇಶ , ಗಜಾನನ   ಇವರು ನನ್ನ ಮನೆಗೆ ಬಂದು ಬಲವಂತವಾಗಿ  ನನ್ನ ಮಗಳಾದ ಕುಮಾರಿ ವಯ:16 ವರ್ಷ ಇವಳಿಗೆ  ಬಲವಂತವಾಗಿ ಅಪಹರಿಸಿಕೊಂಡು ಹೋಗಿದ್ದು  ಸದರಿ ನಾಗೇಂದ್ರ, ಬಾಬಿ , ರೂಪೇಶ , ಗಜಾನನ  ಇವರ ಮೇಲೆ ಕಾನೂನುಕ್ರಮ ಜರುಗಿಸಿ ಮತ್ತು ನನ್ನ ಮಗಳನ್ನು ಸೌಂದರ್ಯ ಇವಳಿಗೆ ಪತ್ತೆ ಮಾಡಿಕೊಡಬೇಕು ಅಂತಾ ಲಿಖಿತ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 97/2015 ಕಲಂ 363 ಸಂಗಡ 34 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ಕೈಕೊಂಡು ಕುಮಾರಿ ಇವಳು ದಿನಾಂಕ: 31-12-2015 ರಂದು ಪತ್ತೆಯಾಗಿ ಸಿಕ್ಕಿದ್ದು ಸದರೀಯವಳ ಹೇಳಿಕೆ ಪಡೆಯಲಾಗಿ ಹೇಳಿದ್ದೆನೆಂದರೆ ಕೊಟ್ಟಿದ್ದೆನೆಂದರೆ ನಮ್ಮ ಓಣಿಯದವನಾದ ಗಜಾನನ ಇತನು ಯಾವಾಗಲು ನಮ್ಮ ಮನೆಯ ಮುಂದೆ ಬರುವುದು ನನಗೆ ಚುಡಾಯಿಸುವುದು ನಾನು ಹೊರಗಡೆ ಹೋದಾಗ ವ್ಯಂಗವಾಗಿ ಮಾತನಾಡುವುದು ಮಾಡುತ್ತಿದ್ದನು. ಈ ವಿಷಯವನ್ನು ನಾನು ನಮ್ಮ ತಾಯಿಗೆ ತಿಳಿಸಿದಾಗ ಅವರು ಗಜಾನನ ಇತನಿಗೆ ಬುದ್ದಿವಾದ ಹೇಳಿದ್ದು ಅವನು ತನ್ನ ಚಟವನ್ನೆ ಮುಂದುವರೆಸಿಕೊಂಡು ಬಂದಿರುತ್ತಾನೆ. ಈಗ ಸುಮಾರು 4-5 ದಿವಸಗಳಿಂದ ನಮ್ಮ ತಾಯಿ ಮನೆ ದೇವರಿಗೆಂದು ಹುಲಿಗೆಮ್ಮ ದೇವಾಸ್ಥಾನಕ್ಕೆ ಮುಂಡರಾಬಾದಕ್ಕೆ ಹೋಗಿದ್ದಳು. ದಿನಾಂಕ 30-12-2015 ರಂದು ಬೆಳಗ್ಗೆ 5 ಗಂಟೆಯ ಸುಮಾರಿಗೆ ಗಜಾನನ ಇತನು ನಮ್ಮ ಮನೆಗೆ ಬಂದು ನನಗೆ ಜಬರದಸ್ತಿಯಿಂದ ನನಗೆ ಯಾವುದೋ ಇಂದು ಆಟೋದಲ್ಲಿ ಕೂಡಿಸಿಕೊಂಡು ಸುಲ್ತಾನಪೂರಕ್ಕೆ  ಕರೆದುಕೊಂಢು ಹೋಗಿ ಅಲ್ಲಿ ಯಾವುದೋ ಒಂದು ಹೊಲದಲ್ಲಿ ನಾನು ಬೇಡವೆಂದರೂ ನನಗೆ ಜಬರದಸ್ತಿಯಿಂದ ದೈಹಿಕ ಸಂಬೋಗ ಮಾಡಿರುತ್ತಾನೆ. ನಂತರ ಇಂದು ನಮ್ಮ ಮನೆಯ ಮುಂದೆ ಬಿಟ್ಟು ಹೋದನು. ನಮ್ಮ ತಾಯಿ ನನಗೆ ಗಜಾನನ ಇತನು ಅಪಹರಣ ಮಾಡಿಕೊಂಡು ಹೋಗಿದ್ದರಿಂದ ಮಹಿಳಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿರುವ ವಿಷಯ ತಿಳಿಸಿದಳು. ಕಾರಣ ನನಗೆ ಗಜಾನನ ಇತನು ಅಪಹರಿಸಿಕೊಂಡು ಹೋಗಿದ್ದು ಅಲ್ಲದೇ ಸುಲ್ತಾನಪೂರದ ಯಾವುದೋ ಒಂದು ಹೊಲದಲ್ಲಿ ನನಗೆ ಜಬರದಸ್ತಿಯಿಂದ ದೈಹಿಕ ಸಂಬೋಗ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ನೆಲೋಗಿ ಠಾಣೆ : ದಿನಾಂಕ: 28/12/2015 ರಂದು 4:30 ಪಿ,ಎಂಕ್ಕೆ ಕಂಪ್ಯೂಟರ ಕೋಣೆಯ ಬೀಗವನ್ನು ಹಾಕಿ ಕಾರ್ಯಾಲಯದ ಅಲಮರಾದಲ್ಲಿ ಇಟ್ಟು ಮನೆಗೆ ಹೋಗಿದ್ದು ದಿನಾಂಕ: 31/12/2015 ರಂದು ಮುಂಜಾನೆ 10-00 ಘಂಟೆಗೆ ಕಂಪ್ಯೂಟರ ಕೋಣೆ ತೆಗೆದು ನೋಡಿದಾಗ 11 ಕಂಪ್ಯೂಟರ (ಸರ್ವರ್ ) ಗಳು ಇರಲಿಲ್ಲ. ದಿನಾಂಕ: 28/12/2015 ರಿಂದ 30/12/2015 ರ ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಕಂಪ್ಯೂಟರ ಕೋಣೆಯ ಕೀಲಿ ತೆರೆದು ಕೋಣೆಯಲ್ಲಿದ್ದ 11 ಕಂಪ್ಯೂಟರ ಕಳುವು ಮಾಡಿಕೊಂಡು ಹೋಗಿದ್ದು ಅವುಗಳ ಅಂದಾಜು ಬೆಲೆ 24500/- ರೂಗಳು ಆಗುತ್ತಿದ್ದು ಅವುಗಳನ್ನು ಪತ್ತೆ ಮಾಡಿ ಕೊಡಬೇಕೆಂದು ಶ್ರೀ ಶಂಕರಗೌಡ ತಂದೆ ಶಿವಪ್ಪ ಪಾಟೀಲ ಮುಖ್ಯ ಗುರುಗಳು ಸರಕಾರಿ ಪ್ರೌಢ ಶಾಲೆ ಹಿಪ್ಪರಗಾ ಎಸ್,ಎನ್.  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ: 30/12/2015 ರಂದು ರಾತ್ರಿ 11-30 ಗಂಟೆ ಸುಮಾರಿಗೆ ಮೃತ ರಾಜು ತಂದೆ ಗೇಮು ರಾಠೋಡ ಈತನು ತನ್ನ ಅಂಗವಿಕಲ ಟಿ.ವಿ.ಎಸ್. ಸ್ಕೂಟಿ ಮೋಟರ್ ಸೈಕಲ್ ಅನ್ನು ಅತೀ ವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಅವರಾಧ ಸೀಮಾಂತರದ ಎಸ್.ಬಿ ಪಾಟೀಲ್ ಸಾವಳ ಪ್ಯಾಕ್ಟರಿ ಎದರುಗಡೆ ಯಾವುಧೆ ಮುನ್ಸೂಚನೆ ಮತ್ತು ಲೈಟ್ ಹಾಗೂ ಇಂಡಿಕೇಟರ್ ಹಾಕದೇ ಸಂಚಾರಕ್ಕೆ ಅಡೆತಡೆಯುಂಟಾಗುವಂತೆ ರೋಡಿನ ಮೇಲೆ ಕಲಬುರಗಿ ಕಡೆ ಮುಖ ಮಾಡಿ ನಿಲ್ಲಿಸಿದ್ದ ಟಿಪ್ಪರ್ ನಂಬರ್ ಕೆಎ 32 ಬಿ 1953 ನೇದ್ದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದರಿಂದ ಮೃತ ರಾಜುನಿಗೆ ತಲೆಗೆ ಮೂಗಿಗೆ ಹಣೆಗೆ ಎದೆಗೆ ಭಾರಿ ರಕ್ತಗಾಯ ಮತ್ತು ಒಳಪೆಟ್ಟಾಗಿ ಸ್ಥಳದ್ಲಲಿಯೇ ಮೃತಪಟ್ಟಿದ್ದು ಹಾಗೂ ಹಿಂದೆ ಕುಳಿತ ಕಿಶನ್ ಜಾಧವ್ ಈತನಿಗೆ ತಲೆಗೆ ಹಣೆಗೆ, ಮುಗೀಗೆ, ಮತ್ತು ಮುಖಕ್ಕೆ ಅಲ್ಲಲ್ಲಿ ಭಾರಿ ರಕ್ತಗಾವಾಗಿ ಬೇಹೋಷ್‌ ಆರುತ್ತಾನೆ, ಅಂತಾ ಶ್ರೀಮತಿ ಮೀನಾಕ್ಷಿ ಗಂಡ ರಾಜು ರಾಠೋಡ ಸಾ: ಚೆಂಗಟಾ ಮಳಿಕೋಳಾ ತಾಂಡಾ ಹಾವ: ಗುಂಡಗುರ್ತಿ ತಾಂಡಾ ತಾ: ಚಿತ್ತಾಪೂರ ಜಿ: ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.