POLICE BHAVAN KALABURAGI

POLICE BHAVAN KALABURAGI

03 September 2015

Kalaburagi District Reported Crimes.

ಅಫಜಲಪೂರ ಠಾಣೆ : ದಿನಾಂಕ 13-08-2015 ರಂದು 5.00 ಪಿಎಮ್ ಕ್ಕೆ ಪೈಗಂಬರ ತಂದೆ ಮೋಹಿದ್ದಿನ್ ಶೇಖ ಸಾ: ಅಫಜಲಪೂರ ಈತನು ಸಾಮಾಜಿಕ ಜಾಲತಾಣವಾದ ಪೇಸ್ ಬುಕನಲ್ಲಿ ಚಪ್ಪಲಿ ಮೇಲೆ ರಾಷ್ಟ್ರದ್ವಜವಿರುವ ಚಿತ್ತರವನ್ನು ತಾನೆ ಸ್ವತ ಡೌನೋಲ್ಡ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟು ರಾಷ್ಟ್ರದ್ವಜಕ್ಕೆ ಅಫಮಾನ ಮಾಡಿರುತ್ತಾನೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು ಇರುತ್ತದೆ. ಸದರಿ ಪೈಗಂಬರ ಶೇಖ  ಈತನನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಇರುತ್ತದೆ. ದಿನಾಂಕ 14-08-2015 ರಂದು ಬೆಳಿಗ್ಗೆ 08:00 ಗಂಟೆಗೆ ಅಫಜಲಪೂರ ಪಟ್ಟಣದ ಬಿ.ಜೆ.ಪಿ ನಗರ ಘಟಕದ ಯುವಕರು, ವ್ಯಾಪಾರಸ್ತರ ಸಂಘ ಅಫಜಲಪೂರ, ದ್ರಾಕ್ಷೀ ಬೇಳೆಗಾರರ ಸಂಘ ಅಫಜಲಪೂರ, .ಬಿ.ವ್ಹಿ.ಪಿ ಘಟಕ ಅಫಜಲಪೂರ, ..ಎಮ್..ಎಮ್ ಪಕ್ಷದ ಕಾರ್ಯಜಕರ್ತರು ಅಫಜಲಪೂರ, ಗ್ಯಾರೇಜ ಮಾಲಿಕರ ಸಂಘ, ಪಟ್ಟಣದ ಇನ್ನಿತರ ಸಂಘ ಸಂಸ್ಥೆಗಳು ಪೈಗಂಬರ ಶೇಖನ ಕೃತ್ಯವನ್ನು ವಿರೋದಿಸಿ ಅಫಜಲಪೂರ ಪಟ್ಟಣದ ಬಸವೇಶ್ವರ ಚೌಕದಲ್ಲಿ ಏಕಾಏಕಿಯಾಗಿ ಒಬ್ಬರಿಗೊಬ್ಬರು ಮಾತನಾಡುತ್ತಾ ಗುಂಪುಕಟ್ಟಿಕೊಂಡು ರಾಷ್ಟ್ರದ್ವಜಕ್ಕೆ ಅಫಮಾನ ಮಾಡಿದ ಕೃತ್ಯದ ಬಗ್ಗೆ ಖಂಡನೆ ಮಾಡುತ್ತಾ ಏಕಾಏಕಿ ಜಮಾಯಿಸಿಕೊಂಡು ಕೂಡಲೆ ಸದರಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದರು. ಸುಮಾರು 11:00 ಗಂಟೆಗೆ ಬಸವೇಶ್ವರ ಸರ್ಕಲದಲ್ಲಿರುವ ಪ್ರತಿಭಟನಾಕಾರರು ಸುಮಾರು 1500 ರಿಂದ 2000 ಜನ ಜಮಾಯಿಸಿ ಅಂಗಡಿ ಮುಂಗಟ್ಟುಗಳನ್ನು ಬಂದ ಮಾಡಿಸಿ, ಬಂದ ಮಾಡಲು ಕರೆ ಕೊಟ್ಟು ಸದರಿ ಪ್ರತಿಭಟನೆ ಹೆಚ್ಚಾಗುತ್ತಿದ್ದಂತೆ ನಾವು ಹೆಚ್ಚಿನ ಸೂಕ್ತ ಬಂದೋಬಸ್ತ ಮಾಡಿದೆವು. ಸದರಿ ಪ್ರತಿಭಟನಾಕಾರರು ಮೇರವಣಿಗೆ ಮೂಖಾಂತರ ಬಜಾರ ಏರಿಯಾದಲ್ಲಿ ಹಾದು, ಅಫ್ಜಲಖಾನ ಚೌಕ ಮಾರ್ಗವಾಗಿ ಅಂಬೆಡ್ಕರ ಸರ್ಕಲಕ್ಕೆ ಬಂದು ತಲುಪಿದರು, ಪ್ರತಿಭಟನಾಕಾರರು ಮಾನ್ಯ ಡಿ.ಸಿ ಸಾಹೇಬರು ಕಲಬುರಗಿ ರವರು ಬಂದು ನಮ್ಮ ಮನವಿಯನ್ನು ಸ್ವೀಕರಿಸಬೇಕು ಎಂದು ಪಟ್ಟು ಹಿಡಿದು ಸುಮಾರು 12:15  ಗಂಟೆಯ ವೇಳೆಯಗೆ ರಸ್ತೆಯ ಮೇಲೆ ಕುಳಿತುಕೊಂಡರು. ಅವಕಾಶವನ್ನು ಬಳಸಿಕೊಂಡು ಸದರಿ ಪ್ರತಿಭಟನಾಕಾರರ ಗುಂಪಿನಲ್ಲಿದ್ದ ಹಾಗೂ ಪಟ್ಟಣದ ಇತರೆ ಕಡೆಯಿಂದ ಬಂದ ಕೆಲವೊಂದು ದುಸ್ಕರ್ಮಿಗಳು ಅಂದಾಜು 50 ರಿಂದ 100 ಜನ ದುಸ್ಕರ್ಮಿಗಳು ಪ್ರತಿಭಟನೆಯನ್ನು ಬಿಟ್ಟು ತಮ್ಮ ವ್ಯಯಕ್ತಿಕ ದ್ವೇಷ ಸಾದಿಸುವ ಸಲುವಾಗಿ ಅವಕಾಶವನ್ನು ಬಳಸಿಕೊಂಡು ರಾಷ್ಟ್ರದ್ವಜಕ್ಕೆ ಆದ ಅಫಮಾನದ ಹಿಂದೆ ..ಎಮ್..ಎಮ್ ಪಕ್ಷದ ಅಫಜಲಪೂರ ತಾಲೂಕಾ ಅದ್ಯಕ್ಷನಾದ ಮಂಜೂರ ಅಹ್ಮದ ತಂದೆ ಅಬ್ದುಲಕರೀಮ್ ಅಗರಖೇಡ ಸಾ|| ಅಫಜಲಪೂರ ಈತನ ಕೈವಾಡವಿದೆ ಎಂದು ಮಾಹಿತಿಯನ್ನು ಸೃಷ್ಟಿಸಿ ಜನರನ್ನು ರೊಚ್ಚಿಗೆಬ್ಬಿಸಿ ಸದರಿ ಮಂಜೂರ ಅಹ್ಮದ ಈತನ ಕಲಬುರಗಿ ರೋಡಿಗೆ ಇರುವ ಸೊನ್ನ ಗ್ರಾಮದ ಹಣಮಂತ ಅಗಸಿ ರವರ ಮಳಿಗೆಯಲ್ಲಿರುವ ಟಾಯರ ಅಂಗಡಿಗೆ ಸುಮಾರು ಮದ್ಯಾಹ್ನ 2:00 ಗಂಟೆಯ ವೇಳೆಗೆ ಸದರಿ ದುಸ್ಕರ್ಮಿಗಳು ಅಕ್ರಮ ಕೂಟ ರಚಿಸಿ ಗುಂಪುಕಟ್ಟಿಕೊಂಡು ಟಾಯರ ಅಂಗಡಿಯ ಮೇಲೆ ಕಲ್ಲು ತೂರಾಟ ಮಾಡಿ ಕಲ್ಲಿನಿಂದ ಅಂಗಡಿಯ ಬೀಗ ಮುರಿದು, ಅಂಗಡಿಯಲ್ಲಿದ್ದ ಹೊಸ ಟಾಯರಗಳನ್ನು ತಗೆದುಕೊಂಡು ಬಂದು, ಎದುರುಗಡೆ ಇರುವ ಮುಖ್ಯ ರಸ್ತೆಯ ಮೇಲೆ ಹಾಕಿ, ಸದರಿ ಹೊಸ ಟಾಯರಗಳಿಗೆ ಬೆಂಕಿ ಹಚ್ಚಿ ಟಾಯರಗಳನ್ನು ಸುಟ್ಟು ನಾಶ ಪಡಿಸಿ ಆಕ್ರೋಶ ವ್ಯಕ್ತ ಪಡಿಸಿರುತ್ತಾರೆ. ಅಂದಾಜು 4 ಲಕ್ಷ ರೂಪಾಯಿ ಕಿಮ್ಮತ್ತಿನ ಟಾಯರಗಳನ್ನು ಸುಟ್ಟು ಹಾನಿ ಮಾಡಿರುತ್ತಾರೆ, ಹಾಗೂ ದಿನಾಂಕ 13-08-2015 ರಂದು ಗುನ್ನೆ ನಂ 218/15 ನೇದ್ದರ ಆರೋಪಿತನಾದ ಪೈಗಂಬರ ಶೇಖ ಈತನು, ಬಸ್ ನಿಲ್ದಾಣದ ಎದುರುಗಡೆ ಇರುವ ಚಲಿಸುವ ಪಾವಬಜಿ ವ್ಯಾಪಾರ ಮಾಡುವ ಬಂಡಿಯನ್ನು ಸಹ ಸದರಿ ದುಸ್ಕರ್ಮಿಗಳು ಸಹ ಸುಟ್ಟಿರುತ್ತಾರೆ. ಸದರಿ ಗಾಡಿಯ ಅಕಿ-20,000/- ರೂಪಾಯಿ ಹಾನಿ ಪಡಿಸಿರುತ್ತಾರೆ. ಸದರಿ ಹಾನಿಗೊಳಗಾದ ಅಂಗಡಿಕಾರರು ಹಾನಿಯಾದ ಬಗ್ಗೆ ಇಲ್ಲಿಯವರೆಗೆ ಪಿರ್ಯಾದಿಯನ್ನು ನೀಡದೆ ಇಂದು ನೀಡುತ್ತೇವೆ ನಾಳೆ ನೀಡುತ್ತೇವೆ ಅಂತಾ ಹೇಳುತ್ತಾ ವಿಳಂಬ ಮಾಡುತ್ತಾ ಪಿರ್ಯಾದಿ ನೀಡದೆ ಇದ್ದರಿಂದ. ಸದರಿ ವಿಷಯವನ್ನು ಮಾನ್ಯ ಮೇಲಾದಿಕಾರಿಗಳಿಗೆ ವರದಿ ಮಾಡಿ, ಸದರಿ ಹಾನಿಗೊಳಗಾದವರ ಹಾನಿಯ ಬಗ್ಗೆ ಹಾಗೂ ಪಟ್ಟಣದಲ್ಲಾದ ಪ್ರತಿಭಟನೆಯನ್ನು ಬಿಟ್ಟು ಸುಮಾರು 50 ರಿಂದ 100 ಜನ ದುಸ್ಕರ್ಮಿಗಳು ಸಂಚು ರೂಪಿಸಿ ಅಕ್ರಮ ಕೂಟ ರಚಿಸಿ ವೈಯಕ್ತಿಕ ದ್ವೇಷದ ಸಲುವಾಗಿ ಸೇಡು ತೀರಿಸಿಕೊಳ್ಳಲು ಕೃತ್ಯ ವೇಸಗಿರುತ್ತಾರೆ.ದಿನಾಂಕ 14-08-2015 ರಂದು ಮದ್ಯಹ್ನ 2:00 ರಿಂದ 3:00 ಗಂಟೆಯ ಮದ್ಯದ ಅವದಿಯಲ್ಲಿ ಸುಮಾರು 50 ರಿಂದ 100 ಜನ ದುಸ್ಕರ್ಮಿಗಳು ಪಟ್ಟಣದ ಪ್ರತಿಭಟನೆಯ ಸ್ಥಳದಲ್ಲಿ ಇಲ್ಲದೆ ತಮ್ಮ ವ್ಯಯಕ್ತಿಕ ದ್ವೇಷದಿಂದ, ಸದರಿ ಪ್ರತಿ ಭಟನೆ ವೇಳೆಯಲ್ಲಿ ಒಳ ಸಂಚು ರೂಪಿಸಿ ದುಸ್ಕರ್ಮಿಗಳು  ಅಕ್ರಮ ಕೂಟ ಹಾಗೂ ಗುಂಪುಕಟ್ಟಿಕೊಂಡು ಅಫಜಲಪೂರ ಪಟ್ಟಣದ ..ಎಮ್,.ಎಮ್ ಪಕ್ಷದ ಅಫಜಲಪೂರ ತಾಲೂಕಾ ಅದ್ಯಕ್ಷನಾದ  ಮಂಜೂರ ಅಹ್ಮದ ತಂದೆ ಅಬ್ದುಲಕರೀಮ್ ಅಗರಖೇಡ ಸಾ|| ಅಫಜಲಪೂರ ಈತನ  ಅಂಗಡಿಯ ಮೇಲೆ ಕಲ್ಲು ತೂರಾಟ ಮಾಡಿ, ಬೀಗ ಒಡೆದು ಅಂಗಡಿಯಲ್ಲಿದ್ದ ಹೊಸ ಟಾಯರಗಳನ್ನು ತಂದು ಅವುಗಳನ್ನು ರೋಡಿನಲ್ಲಿಟ್ಟು ಬೆಂಕಿ ಹಚ್ಚಿ ಅಂದಾಜು 4 ಲಕ್ಷ ರೂಪಾಯಿಗಳಷ್ಟು ಹಾನಿ ಮಾಡಿರುತ್ತಾರೆ ಹಾಗೂ ಪೈಗಂಬರ ಶೇಖ ಈತನ ವ್ಯಾಪಾರ ಬಂಡಿಯನ್ನು ಸುಟ್ಟು ಹಾಕಿ ಅಂದಾಜು 20,000/- ರೂ ಹಾನಿ ಮಾಡಿರುತ್ತಾರೆ. ಸದರಿ ವೇಳೆಯಲ್ಲಿ ವಾಹನಗಳನ್ನು ನಿಲ್ಲಿಸಿ ರಸ್ತೆ ಬಂದ ಮಾಡಿ ಸಾರ್ವಜನಿಕ ರಸ್ತೆ ಸಂಚಾರಕ್ಕೆ ಅಡೆ ತಡೆ ಮಾಡಿ ವೈಯಕ್ತಿಕ ದ್ವೇಷ ಸಾದಿಸಿರುತ್ತಾರೆ. ಆದ್ದರಿಂದ ಅಫರಿಚಿತ 50 ರಿಂದ 100 ಜನ ದುಸ್ಕರ್ಮಿಗಳ ವಿರುದ್ದ ಕಾನೂನು ಕ್ರಮ ಜರೂಗಿಸಬೇಕು ಎಂದು ವರದಿ ನೀಡಿದ್ದು ಇರುತ್ತದೆ.
ಅಫಜಲಪೂರ ಠಾಣೆ: ದಿನಾಂಕ 01-09-2015 ರಂದು 12:05 ಪಿ ಎಮ್ ಕ್ಕೆ ನಮ್ಮ ಪಿಸಿ-905 ಸುರೇಶ, ಪಿಸಿ-339 ಗುಂಡಪ್ಪ ರವರನ್ನು ಸಂಗಡ ಕರೆದುಕೊಂಡು ಠಾಣೆಯಿಂದ ಹೊರಟು ಅಫಜಲಪೂರ ಪಟ್ಟಣದಲ್ಲಿ ಪೆಟ್ರೊಲಿಂಗ ಮಾಡುತ್ತಾ ಪಟ್ಟಣದ ತಹಸಿಲ ಕಾರ್ಯಾಲಯದ ಹತ್ತಿರ ಇದ್ದಾಗ ಮಾಹಿತಿ ಬಂದಿದ್ದೆನೆಂದರೆ, ಉಡಚಾಣ ಗ್ರಾಮದ ಭೀಮಾನದಿಯಲ್ಲಿ ಕಳ್ಳತನದಿಂದ ಅಕ್ರಮವಾಗಿ ಟ್ರಾಕ್ಟರದಲ್ಲಿ ಮರಳು ತುಂಬುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಅಲ್ಲೆ ಇದ್ದ ಇಬ್ಬರು ಪಂಚರಾದ 1) ಶಿವಪ್ಪ ತಂದೆ ಗಿರಿಮಲ್ಲಪ್ಪ ಕಡ್ಲೆವಾಡ, 2) ಚಂದಪ್ಪ ತಂದೆ ರಮೇಶ ಕೋಳಗೇರಿ ಸಾ|| ಇಬ್ಬರು ಅಫಜಲಪೂರ ಇವರನ್ನು ಕರೆಸಿಕೊಂಡು ವಿಷಯವನ್ನು ತಿಳಿಸಿ, ಪಂಚರಾಗಲು ಒಪ್ಪಿಕೊಂಡ ನಂತರ ಪಂಚರೊಂದಿಗೆ ಮತ್ತು ಸದರಿ ಸಿಬ್ಬಂದಿಯವರೊಂದಿಗೆ ಠಾಣಾ ಜೀಪಿನಲ್ಲಿ 12:10 ಪಿ ಎಮ್ ಕ್ಕೆ ಹೊರಟು 1:10 ಪಿ ಎಮ್ ಕ್ಕೆ ಉಡಚಾಣ  ಗ್ರಾಮದ ಬಸ್ ನಿಲ್ದಾಣದ ಹತ್ತಿರ ಹೋಗುತ್ತಿದ್ದಾಗ, ಎದುರುಗಡೆಯಿಂದ ಒಂದು ಟ್ರಾಕ್ಟರ ಬರುತ್ತಿದ್ದು ಸದರಿ ಟ್ರಾಕ್ಟರ ಚಾಲಕ ನಮ್ಮ ಜೀಪನ್ನು ನೋಡಿ ಟ್ರಾಕ್ಟರನ್ನು  ನಿಲ್ಲಿಸಿ  ಓಡಿ ಹೋದನು. ನಂತರ ಪಂಚರ ಸಮಕ್ಷಮ ಟ್ರಾಕ್ಟರ ಚಕ್ಕ ಮಾಡಲು, ಅರ್ಜುನ ಮಹೆಂದ್ರಾ ಕಂಪನಿಯ ಟ್ಯಾಕ್ಟರ ಇದ್ದು, ಅದರ ಪಾಸಿಂಗ ನಂಬರ ಕೆಎ-32 ಟಿಎ-2148 ಅಂತ ಇದ್ದು, ಸದರಿ ಟ್ರಾಕ್ಟರ ಟ್ರೈಲಿಯಲ್ಲಿ ಮರಳು ತುಂಬಿದ್ದು ಇದ್ದಿತ್ತು. ಸದರಿ ಟ್ರಾಕ್ಟರನಲಿದ್ದ ಮರಳಿ ಅಂದಾಜು ಕಿಮ್ಮತ್ತು 3000/- ರೂ ಇರಬಹುದು ನಂತರ ಸದರಿ ಮರಳು ತುಂಬಿದ ಟ್ರಾಕ್ಟರನ್ನು ಪಂಚರ ಸಮಕ್ಷಮ 1:15 ಪಿ ಎಮ್ ದಿಂದ 2:15 ಪಿ ಎಮ್ ವರೆಗೆ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡೆನು. ನಂತರ ಸದರಿ ಮರಳು ತುಂಬಿದ ಟ್ರಾಕ್ಟರನ್ನು ಸಿಬ್ಬಂದಿಯವರ ಸಾಹಾಯದಿಂದ ಮಾಶಾಳ ಉಕ್ಕಡ ಠಾಣೆಯಲ್ಲಿ ನಿಲ್ಲಿಸಿ, ಮರಳಿ ಠಾಣೆಗೆ 4:00 ಪಿ ಎಮ್ ಕ್ಕೆ ಬಂದು, ಅಕ್ರಮವಾಗಿ ಕಳ್ಳತನದಿಂದ ಟ್ರಾಕ್ಟರದಲ್ಲಿ ಮರಳು ಸಾಗಿಸುತ್ತಿದ್ದ ಆರೋಪಿತನ ವಿರುದ್ದ ಮುಂದಿನ ಕ್ರಮ ಕೈಕೊಳ್ಳುವಂತೆ ವರದಿ. 
ಅಫಜಲಪೂರ ಠಾಣೆ : ದಿನಾಂಕ 01-09-2015 ರಂದು 09:30 ಎ.ಎಂ ಕ್ಕೆ ನಮ್ಮ ಠಾಣೆಯ ವಿಶ್ವನಾಥ ಎ.ಎಸ್.ಐ, ಸುರೇಶ ಪಿಸಿ-801, ವಿಠ್ಠಲ ಪಿಸಿ-820 ರವರನ್ನು ಸಂಗಡ ಕರೆದುಕೊಂಡು ಠಾಣೆಯಿಂದ ಹೊರಟು ಅಫಜಲಪೂರ ಪಟ್ಟಣದಲ್ಲಿ ಪೆಟ್ರೊಲಿಂಗ ಮಾಡುತ್ತಾ ಪಟ್ಟಣದ ಬಸವೇಶ್ವರ ಸರ್ಕಲ ಹತ್ತಿರ ಇದ್ದಾಗ ಮಾಹಿತಿ ಬಂದಿದ್ದೆನೆಂದರೆ, ಬನ್ನಟ್ಟಿ ಗ್ರಾಮದ ಭೀಮಾನದಿಯಲ್ಲಿ ಕಳ್ಳತನದಿಂದ ಅಕ್ರಮವಾಗಿ ಟ್ರಾಕ್ಟರದಲ್ಲಿ  ಮರಳು ತುಂಬುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರಾದ 1) ಶಿವಪ್ಪ ತಂದೆ ಗಿರಿಮಲ್ಲಪ್ಪ ಕಡ್ಲೆವಾಡ, 2) ಚಂದಪ್ಪ ತಂದೆ ರಮೇಶ ಕೋಳಗೇರಿ ಸಾ|| ಇಬ್ಬರು ಅಫಜಲಪೂರ ಇವರನ್ನು ಅಫಜಲಪೂರ ಪಟ್ಟಣದ ಬಸವೇಶ್ವರ ಸರ್ಕಲ ಹತ್ತಿರ ಕರೆಸಿಕೊಂಡು ವಿಷಯವನ್ನು ತಿಳಿಸಿ, ಪಂಚರಾಗಲು ಒಪ್ಪಿಕೊಂಡ ನಂತರ ಪಂಚರೊಂದಿಗೆ ಮತ್ತು ಸದರಿ ಸಿಬ್ಬಂದಿಯವರೊಂದಿಗೆ ಠಾಣಾ ಜೀಪಿನಲ್ಲಿ 10:00 ಎ.ಎಂ ಕ್ಕೆ ಹೊರಟು 10:20 ಎ.ಎಂ ಕ್ಕೆ ಬನ್ನಟ್ಟಿ ಗ್ರಾಮದ ಸರ್ಕಾರಿ ಶಾಲೆಯ ಹತ್ತಿರ ಹೋಗುತ್ತಿದ್ದಾಗ, ಎದುರುಗಡೆಯಿಂದ ಒಂದು ಟ್ರಾಕ್ಟರ ಬರುತ್ತಿದ್ದು ಸದರಿ ಟ್ರಾಕ್ಟರ ಚಾಲಕ ನಮ್ಮ ಜೀಪನ್ನು ನೋಡಿ ಟ್ರಾಕ್ಟರನ್ನು  ನಿಲ್ಲಿಸಿ  ಓಡಿ ಹೋದನು. ನಂತರ  ಪಂಚರ ಸಮಕ್ಷಮ ಟ್ರಾಕ್ಟರ  ಚಕ್ಕ ಮಾಡಲು, ಸ್ವರಾಜ ಕಂಪನಿಯ ಟ್ಯಾಕ್ಟರ ಇದ್ದು, ಅದರ ಪಾಸಿಂಗ ನಂಬರ ಹಾಕಿರುವುದಿಲ್ಲ. CH NO :- WACH40906160567 ENG NO:- 43.3008/SRH08671  ಅಂತ ಇದ್ದು, ಸದರಿ ಟ್ರಾಕ್ಟರ ಟ್ರೈಲಿಯಲ್ಲಿ ಮರಳು ತುಂಬಿದ್ದು ಇದ್ದಿತ್ತು. ಸದರಿ ಟ್ರಾಕ್ಟರನಲಿದ್ದ ಮರಳಿ ಅಂದಾಜು ಕಿಮ್ಮತ್ತು 3000/- ರೂ ಇರಬಹುದು ನಂತರ ಸದರಿ ಮರಳು ತುಂಬಿದ ಟ್ರಾಕ್ಟರನ್ನು ಪಂಚರ ಸಮಕ್ಷಮ 10:30 ಎ ಎಮ್ ದಿಂದ 11:30 ಎ ಎಮ್ ವರೆಗೆ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡೆನು. ನಂತರ ಸದರಿ ಮರಳು ತುಂಬಿದ ಟ್ರಾಕ್ಟರನ್ನು ಸಿಬ್ಬಂದಿಯವರ ಸಾಹಾಯದಿಂದ ತಗೆದುಕೊಂಡು  ಮರಳಿ ಠಾಣೆಗೆ 11:50 ಎ ಎಮ್ ಕ್ಕೆ ಬಂದು, ಅಕ್ರಮವಾಗಿ ಕಳ್ಳತನದಿಂದ ಟ್ರಾಕ್ಟರದಲ್ಲಿ ಮರಳು ಸಾಗಿಸುತ್ತಿದ್ದ ಆರೋಪಿತನ ವಿರುದ್ದ ಮುಂದಿನ ಕ್ರಮ ಕೈಕೊಳ್ಳುವಂತೆ ವರದಿ. 
ಚೌಕ ಠಾಣೆ : ದಿನಾಂಕ 02/09/2015 ರಂದು ರಾತ್ರಿ 9-45 ಪಿ.ಎಂ.ಕ್ಕೆ ಪ್ರಕರಣ ಪಿರ್ಯಾದಿ ಶ್ರೀ ಮಾರುತಿ ಮಾನ್ಪಡೆ ರಾಜ್ಯಾಧ್ಸಕ್ಷರು ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ ಪಿರ್ಯಾದಿ ಅರ್ಜಿ ಹಾಜರ ಪಡಿಸಿದ್ದು ಸಂಕ್ಷಿಪ್ತ ಸಾರಾಂಶವೆನೆಂದರೆ ನಾನು ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷನಾಗಿದ್ದು ಇಂದು ದಿನಾಂಕ 02/09/2015 ರಂದು ಬೆಳಿಗ್ಗೆ ಸುಮಾರು 9 ರಿಂದ 9-30 ರ ಸಮಯದ ಮದ್ಯ ಭಾಗದಲ್ಲಿ ನಾವು ಅಖಿಲ ಭಾರತ ಬಂದ ಮುಷ್ಠಕರ ಆಚರಿಸಲು ನಾನು ಮತ್ತು ನನ್ನ ಸಂಗಡಿಗರು ಸೇರಿಕೊಂಡು ಹುಮನಾಬಾದ ರಿಂಗ ರೋಡದಲ್ಲಿ ಸೇರಿಕೊಂಡು ಸಾರ್ವಜನಿಕರಿಗೆ ಮತ್ತು ಅಂಗಡಿ ಮುಂಗಟ್ಟುಗಳ ಮಾಲಿಕರಿಗೆ ಸಹಕರಿಸಲು ವಿನಂತಿಸಿಕೊಳ್ಳುತ್ತಿದ್ದೇವು ಅದೇ ಸಮಯದಲ್ಲಿ ಹುಮನಾಬಾದ ರಿಂಗ ರೋಡಿನ ರಸ್ತೆಯ ಪಕ್ಕದಲ್ಲಿ ಮೋಬೈಲ್ ಕ್ಯಾಂಟಿನ ನಡೆಸುವಂತ ವ್ಯಾನ್ ನಂ. ಕೆ.ಎ-32 ಎಮ್.- 1648 ರಲ್ಲಿ 3-4 ಜನ ಒಳಗೆ ಕುಳಿತ್ತಿದ್ದರು ಅಲ್ಲದೆ ವ್ಯಾನಿನ ಮುಂದೆ ಒಬ್ಬ ವ್ಯಕ್ತಿ ಪುರಿ ಕರೆಯುತ್ತಿದ್ದನ್ನು ಅಲ್ಲದೆ ಮತ್ತೊಬ್ಬನು ಆ ಕರಿದ ಪುರಿಗಳನ್ನು ಗಿರಾಕಿಗಳಿಗೆ ಕೊಡಲು ತಯಾರಿ ನಡೆಸುತ್ತಿದ್ದನ್ನು ಅಂತಾ ಸಮಯದಲ್ಲಿ ನಾನು ಮತ್ತು ನನ್ನ ಸಂಗಡಿಗರು ಸೇರಿಕೊಂಡು ಪುರಿ ಕರಿಯುವಂತಹ ವ್ಯಕ್ತಿಗೆ ವಿನಂತಿ ಪೂರ್ವಕ ಕೇಳಿಕೊಂಡಿದ್ದೇನೆಂದರೆ ದಯವಿಟ್ಟು ನಾವು ಭಾರತ ಸರ್ಕಾರ ತರುತ್ತಿರುವ ಕಾರ್ಮಿಕ ಕಾನೂನಿನ ವಿರುದ್ದ ಹೊರಾಡುತ್ತಿದ್ದೇವೆ ದಯವಿಟ್ಟು ತಾವು ನಮಗೆ ಸಹಕರಿಸಬೇಕೆಂದು ವಿನಂತಿಸಿಕೊಳ್ಳುತ್ತಿರುವಾಗ ಪುರಿ ಮತ್ತು ಬಜಿ ಗಿರಾಕಿಗಳಿಗೆ ಕೊಡುವಂತಹ ವ್ಯಕ್ತಿ, ‘’ ಲೇ ಸೋಳೆ ಮಕ್ಕಳೆ ನೀವು ಭಾರತೀಯ ಜನತಾ ಪಕ್ಷಕ್ಕೆ ( ಬಿಜೆಪಿ) ಮತ್ತು ಮಾನ್ಯ ಪ್ರಧಾನ ಮಂತ್ರಿ ಮೋದಿಯವರಿಗೆ ಬೈದು ಅವರ ವಿರುದ್ದ ಧರಣಿ ಮಾಡಿ ನೀವು ನಿಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಿರಾ ಎಂಧು ಬೈಯುತ್ತಿದ್ದನ್ನು ಅದೇ ಸಮಯದಲ್ಲಿ ಬಜಿ, ಪುರಿ ಕರೆಯುವಂತಹ ವ್ಯಕ್ತಿ ‘’ ಲೇ ಮಕ್ಕಳೇ ನೀವು ಜಿಜೆಪಿ ಯವರ ವಿರುದ್ದ ಧರಣಿ ಮಾಡುತ್ತಿರಾ ಅಲ್ಲದೆ ನನಗೆ ಮಗನೇ ಮಾರುತಿ ಮಾನ್ಪಡೆ ನೀನು ಜೀವಂತ ಇದ್ದರೆ ತಾನೆ ಬಿಜೆಪಿ ಮತ್ತು ಮೋದಿ ವಿರುದ್ದ ಧರಣಿ ಮಾಡುತ್ತಿ ಅಂತಾ ತನ್ನ ಕೈಯಲ್ಲಿ ಇದ್ದಂತಹ ಬಜಿ & ಪುರಿ ತೆಗೆಯುವಂತಹ ಜಾರಿಯಿಂದ ನನ್ನ ತಲೆಗೆ ಮರಣಾಂತೀಕ ಹಲ್ಲೆ ಮಾಡಲು ಯತ್ನಿಸಿದನು ಅದೇ ಸಮಯಕ್ಕೆ ಸರಿಯಾಗಿ ನಾನು ನನ್ನ ಬಲಗೈಯಿಂದ ಅದನ್ನು ತಡೆದೇನು. ಆಗ ನನ್ನ ಬಲಗೈ ಹಸ್ತದ ಹಿಂಭಾಗಕ್ಕೆ ಮತ್ತು ಹಸ್ತದ ಕೇಳಭಾಗಕ್ಕೆ ಭಾರಿಗಾಯವಾಯಿತು. ಅಲ್ಲದೆ ಬಜಿ & ಪುರಿ ಗಿರಾಕಿಗಳಿಗೆ ಕೊಡುವಂತಹ ವ್ಯಕ್ತಿ ನನ್ನ ಮೇಲೆ ಮರಣಾಂತೀಕ ಹಲ್ಲೆ ಮಾಡಿರುತ್ತಾನೆ. ಕೊಡಲೇ ನನ್ನನ್ನು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಉಪಚರಿಸಿರುತ್ತಾರೆ. ಅದೆ ಸಮಯದಲ್ಲಿ ನಾನು ಸರಕಾರಿ ಆಸ್ಪತ್ರೆಯ ಅಧಿಕಾರಿಗಳಿಗೆ ಜಗಳದ ಬಗ್ಗೆ ತಿಳಿಸಿರುತ್ತೆನೆ. ಅಲ್ಲದೆ ನೇರ ನಾನು ತಮ್ಮಲ್ಲಿ ದೂರು ಕೊಡಲು ಬಂದರೇ ಇನ್ನೂ ಜನಜಂಗುಳಿ ಆಗುತ್ತಿತ್ತು ಅಲ್ಲದೆ ಮುಷ್ಟಕರ ಸರಿಯಾಗಿ ಮುಂದುವರಿಸುದು ಆಗುತ್ತಿರಲಿಲ್ಲಾ ಅದಕ್ಕಾಗಿ ನನಗೆ ಮಾರಣಾಂತಿಕ ಹಲ್ಲೆ ನಡೆಸಲು ಪ್ರಯತ್ನಿಸದರೂ ಸಹಿತ ನಾನು ಆಸ್ಪತ್ರೆಯಿಂದ ನೇರ ಮುಷ್ಕರದಲ್ಲಿ ಭಾಗಿಯಾಗಿರುತ್ತೆನೆ. ಆದ್ದರಿಂದ ಈಗ ನಾನು ತಮ್ಮಲ್ಲಿ ದೂರು ಕೊಡಲು ಬಂದಿದ್ದೇನೆ. ದಯಾಳುಗಳಾದ ತಾವು ನ್ಯಾಯ ಸಮ್ಮತವಾದ ಬೇಡಿಕೆಯಲ್ಲಿ ಭಾಗಿಯಾಗದಂತೆ ನಮ್ಮ ಮೇಲೆ ಮಾರಣಾಂತೀಕ ಹಲ್ಲೆ ನಡೆಸಿರುವ ವ್ಯಕ್ತಿಗಳ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೆಕೆಂದು ತಮ್ಮಲ್ಲಿ ಬೇಡಿಕೊಳ್ಳುತ್ತೆನೆ.  ಅಂತಾ ವಗೈರೆ ಕೊಟ್ಟ  ಲಿಖಿತ ಪಿರ್ಯಾದಿಯ ಅರ್ಜಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ. 145/2015 ಕಲಂ. 324,504,506, ಸಂ. 34 ಐಪಿಸಿ ಪ್ರಕಾರ ಗುನ್ನೆ ದಾಖಲಾಗಿರುತ್ತದೆ.

ಅಫಜಲಪೂರ ಠಾಣೆ : ದಿನಾಂಕ 02-09-2015 ರಂದು 3:30 ಪಿ ಎಮ್ ಕ್ಕೆ ನಮ್ಮ ಪಿಸಿ-905 ಸುರೇಶ, ಪಿಸಿ-339 ಗುಂಡಪ್ಪ ರವರನ್ನು ಸಂಗಡ ಕರೆದುಕೊಂಡು ಠಾಣೆಯಿಂದ ಹೊರಟು ಅಫಜಲಪೂರ ಪಟ್ಟಣದಲ್ಲಿ ಪೆಟ್ರೊಲಿಂಗ ಮಾಡುತ್ತಾ ಪಟ್ಟಣದ ಅಂಬೆಡ್ಕರ ಸರ್ಕಲ ಹತ್ತಿರ ಇದ್ದಾಗ ಮಾಹಿತಿ ಬಂದಿದ್ದೆನೆಂದರೆ, ಮಣೂರ ಗ್ರಾಮದ ಭೀಮಾನದಿಯಲ್ಲಿ ಕಳ್ಳತನದಿಂದ ಅಕ್ರಮವಾಗಿ ಟ್ರಾಕ್ಟರದಲ್ಲಿ ಮರಳು ತುಂಬುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರಾದ 1) ಶಿವಪ್ಪ ತಂದೆ ಗಿರಿಮಲ್ಲಪ್ಪ ಕಡ್ಲೆವಾಡ, 2) ಚಂದಪ್ಪ ತಂದೆ ರಮೇಶ ಕೋಳಗೇರಿ ಸಾ|| ಇಬ್ಬರು ಅಫಜಲಪೂರ ಇವರನ್ನು ಅಂಬೆಡ್ಕರ ಸರ್ಕಲ ಹತ್ತಿರ ಕರೆಸಿಕೊಂಡು ವಿಷಯವನ್ನು ತಿಳಿಸಿ, ಪಂಚರಾಗಲು ಒಪ್ಪಿಕೊಂಡ ನಂತರ ಪಂಚರೊಂದಿಗೆ ಮತ್ತು ಸದರಿ ಸಿಬ್ಬಂದಿಯವರೊಂದಿಗೆ ಠಾಣಾ ಜೀಪಿನಲ್ಲಿ 3:45 ಪಿ ಎಮ್ ಕ್ಕೆ ಹೊರಟು 5:00 ಪಿ ಎಮ್ ಕ್ಕೆ ಮಣೂರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಹೋಗುತ್ತಿದ್ದಾಗ, ಎದುರುಗಡೆಯಿಂದ ಎರಡು ಟ್ರಾಕ್ಟರಗಳು ಬರುತ್ತಿದ್ದು ಸದರಿ ಟ್ರಾಕ್ಟರ ಚಾಲಕರು ನಮ್ಮ ಜೀಪನ್ನು ನೋಡಿ ಟ್ರಾಕ್ಟರನ್ನು  ನಿಲ್ಲಿಸಿ  ಓಡಿ ಹೋದರು. ನಂತರ ಪಂಚರ ಸಮಕ್ಷಮ ಸದರಿ ಟ್ರಾಕ್ಟರಗಳನ್ನು ಚಕ್ಕ ಮಾಡಲು, 1) ಸ್ವರಾಜ ಕಂಪನಿಯ ಟ್ಯಾಕ್ಟರ ಇದ್ದು, ಅದರ CH NO:- WXCK40606104604, ENG NO :- 43.1024STK17826 ಅಂತ ಇದ್ದು, ಸದರಿ ಟ್ರಾಕ್ಟರ ಟ್ರೈಲಿಯಲ್ಲಿ ಮರಳು ತುಂಬಿದ್ದು ಇದ್ದಿತ್ತು. ಸದರಿ ಟ್ರಾಕ್ಟರನಲಿದ್ದ ಮರಳಿ ಅಂದಾಜು ಕಿಮ್ಮತ್ತು 3000/- ರೂ ಇರುತ್ತದೆ. 2) ನೂ ಹಾಲೆಂಡ ಕಂಪನಿಯ ಟ್ಯಾಕ್ಟರ ನಂ ಕೆಎ-28 ಟಿಬಿ-5137 ಅಂತ ಇದ್ದು, ಸದರಿ ಟ್ರಾಕ್ಟರ ಟ್ರೈಲಿಯಲ್ಲಿ ಮರಳು ತುಂಬಿದ್ದು ಇದ್ದಿತ್ತು. ಸದರಿ ಟ್ರಾಕ್ಟರನಲಿದ್ದ ಮರಳಿ ಅಂದಾಜು ಕಿಮ್ಮತ್ತು 3000/- ರೂ ಇರುತ್ತದೆ. ನಂತರ ಸದರಿ ಮರಳು ತುಂಬಿದ ಟ್ರಾಕ್ಟರಗಳನ್ನು ಪಂಚರ ಸಮಕ್ಷಮ 5:10 ಪಿ ಎಮ್ ದಿಂದ 6:10 ಪಿ ಎಮ್ ವರೆಗೆ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡೆನು. ನಂತರ ಸದರಿ ಮರಳು ತುಂಬಿದ ಟ್ರಾಕ್ಟರನ್ನು ಸಿಬ್ಬಂದಿಯವರ ಸಾಹಾಯದಿಂದ ಮಾಶಾಳ ಉಕ್ಕಡ ಠಾಣೆಯಲ್ಲಿ ನಿಲ್ಲಿಸಿ, ಮರಳಿ ಠಾಣೆಗೆ 8:15 ಪಿ ಎಮ್ ಕ್ಕೆ ಬಂದು, ಅಕ್ರಮವಾಗಿ ಕಳ್ಳತನದಿಂದ ಟ್ರಾಕ್ಟರಗಳಲ್ಲಿ ಮರಳು ಸಾಗಿಸುತ್ತಿದ್ದ ಆರೋಪಿತರ ವಿರುದ್ದ ಮುಂದಿನ ಕ್ರಮ ಕೈಕೊಳ್ಳುವಂತೆ ವರದಿ.