POLICE BHAVAN KALABURAGI

POLICE BHAVAN KALABURAGI

22 April 2016

KALABURAGI DISTRICT REPORTED CRIMES

ಹಲ್ಲೆ ಪ್ರಕರಣ :
ನಿಂಬರ್ಗಾ ಪೊಲೀಸ ಠಾಣೆ:-  ದಿನಾಂಕ 22/04/2016 ರಂದು ಶ್ರೀ ಸಂಜು ತಂದೆ ಲಕ್ಷ್ಮಣ ದಂಡನಕರ ಸಾ: ಭಟ್ಟರ್ಗಾ ರವರು ಠಾಣೆಗೆ ಹಾಜರಾಗಿ ನಮಗೂ ಮತ್ತು ನಮ್ಮೂರಿನ ಮಲೀಕಪ್ಪ ತಂದೆ ಹಸನಪ್ಪ ಇವರಿಗೂ ಈ ಹಿಂದೆ ಜಗಳಗಳು ಆಗಿ ವೈಷಮ್ಯ ಬೆಳೆದಿದ್ದು. ದಿನಾಂಕ 12/04/2016 ರಂದು ರಾತ್ರಿ 0800 ಗಂಟೆ ಸುಮಾರಿಗೆ ನನ್ನ ತಾಯಿ ಮುಕ್ತಾಬಾಯಿ ಮತ್ತು ನನ್ನ ತಂದೆ ಲಕ್ಷ್ಮಣ ಇಬ್ಬರೂ ಮನೆಯಲ್ಲಿ ಇರುವಾಗ 01) ರವಿ ತಂದೆ ಮಲೀಕಪ್ಪ, 02) ಪುಟ್ಟು ತಂದೆ ಮಲೀಕಪ್ಪ, 03) ಸುನೀಲ ತಂದೆ ಮಲೀಕಪ್ಪ ಇವರು ನಮ್ಮ ಮನೆಯ ಮುಂದೆ ನಿಂತು ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ನನ್ನ ರವಿ ಇತನು ಕಲ್ಲಿನಿಂದ ಜೋರಾಗಿ ಹೊಟ್ಟೆಗೆ ಹೊಡೆದಿದ್ದು. ಪುಟ್ಟು ಎಂಬಾತ ಕೈಯಿಂದ ಹೊಟ್ಟೆಯ ಮೇಲೆ ಗುದ್ದಿ ನೆಲಕ್ಕೆಹಾಕಿ ಹೊಡೆಯುತ್ತಿರುವಾಗ ಬಿಡಿಸಲು ಬಂದ ನನ್ನ ತಂದೆಗೆ ಸುನೀಲನು ಕೈಯಿಂದ ಕಪಾಳ ಮೇಲೆ ಹೊಡೆದಿದ್ದು. ಆ ದಿನ ನನ್ನ ತಾಯಿಗೆ ಉಪಚಾರ ಕುರಿತು ನಿಂಬರ್ಗಾ ಸರ್ಕಾರಿ ಆಸ್ಪತ್ರೆಗೆ ತಂದು ಉಪಚಾರ ಕೊಡಿಸಿ ಮರಳಿ ನಮ್ಮೂರಿಗೆ ಕರೆದುಕೊಂಡು ಹೋಗಿದ್ದು. ದಿನಾಂಕ 20/04/2016 ರಂದು ನನ್ನ ತಾಯಿಗೆ ಎದೆ ನೋವು ಜಾಸ್ತಿಯಾದ ಕಾರಣ ಉಪಚಾರ ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ. ಈ ಬಗ್ಗೆ ನನ್ನ ತಾಯಿಯ ಸೂಚನೆ ಮೇರೆಗೆ ಇಂದು ಪ್ರಕರಣ ದಾಖಲಿಸುತ್ತಿದ್ದು. ನನ್ನ ತಂದೆ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿ ಜೀವ ಭಯಪಡಿಸಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ :
ನಿಂಬರ್ಗಾ ಪೊಲೀಸ ಠಾಣೆ: ದಿನಾಂಕ 21/04/2016 ರಂದು ಶ್ರೀ ಪುನ್ನು ತಂದೆ ಸೀತಾರಾಮರಾಠೋಡ ಸಾ:ಮಾಡಿಯಾಳ ತಾಂಡಾ ಇವರು ಠಾಣೆಗೆ ಹಾಜರಾಗಿ ನಮ್ಮ ಮನೆಯ ಮುಂದೆ ನೀರಿಗಾಗಿ ನಳದ ಗಾರಿ ಮಾಡಿದ್ದಕ್ಕಾಗಿ ಶ್ರೀ ಬಾಬು ತಂದೆ ರತ್ನು ರಾಠೋಡ, ಇನ್ನು 04 ಜನರು ಎಲ್ಲಾರೊ ಸಾ|| ಮಾಡಿಯಾಳ ತಾಂಡಾರವರುಗಳು ದ್ವೇಶದಿಂದ ದಿನಾಂಕ 20/04/2016 ರಂದು ಬೆಳಿಗ್ಗೆ 0800 ಗಂಟೆ ಸುಮಾರಿಗೆ ನಮ್ಮ ಮನೆಯ ಮುಂದಿನ ರಸ್ತೆಯ ಮೇಲೆ ನನಗೆ ಮತ್ತು ನನ್ನ ಹೆಂಡತಿ ಮಗನಿಗೆ ಅವಾಚ್ಯವಾಗಿ ಬೈದು ಕೈಯಿಂದ ಮತ್ತು ಕಲ್ಲಿನಿಂದ ಹೊಡೆ ಬಡೆ ಮಾಡಿ ಜೀವ ಭಯಪಡಿಸಿದ್ದು.  ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.