POLICE BHAVAN KALABURAGI

POLICE BHAVAN KALABURAGI

01 February 2017

Kalaburagi District Reported Crimes.

ಮುಧೋಳ ಠಾಣೆ : ದಿನಾಂಕ 01-02-17 ರಂದು 01-30 ಎ ಎಮ್ ಕ್ಕೆ ಗರುಮಿಠಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಫಿರ್ಯಾದಿ ನರಸಪ್ಪ ತಂದೆ ಸಾಯಪ್ಪ ಕೊಮ್ಮು ಸಾ|| ಕಾಕಲವಾರ ಇವರ ಹೇಳಿಕೆ ಫಿರ್ಯಾದಿಯನ್ನು ತೆಗೆದುಕೊಂಡು ಠಾಣೆಗೆ 04-15 ಎ ಎಮ್ ಕ್ಕೆ ಠಾಣೆಗೆ ಹಾಜರಾಗಿದ್ದು ಸದರಿ ಹೇಳಿಕೆ ಫಿರ್ಯಾದಿಯ ಸಾರಾಂಶವೇನೆಂದರೆ, ನನಗೆ ಮೂರು ಜನ ಮಕ್ಕಳಿದ್ದು ದೊಡ್ಡವಳು ಮಲ್ಲಿಕಾರ್ಜುನಮ್ಮ ಗಂಡ ಭೀಮಶಪ್ಪ ತಿಪಡಂಪಲ್ಲಿ ವ|| 22 ವರ್ಷ, ಎರಡನೇ ಮಗ ಲಕ್ಷ್ಮಣ ವ|| 19 ವರ್ಷ, ಮೂರನೆಯ ಮಗ ಗೋವಿಂದ ವ|| 6 ವರ್ಷ ಅಂತಾ ಮಕ್ಕಳಿದ್ದು ನನ್ನ ಮಗಳಾದ ಮಲ್ಲಿಕಾರ್ಜುನಮ್ಮ ಇವಳಿಗೆ ಹೀಗೆ ಸುಮಾರು ಎರಡು ವರ್ಷಗಳ ಹಿಂದೆ ಮೊತಕಪಲ್ಲಿ ಗ್ರಾಮದ ಭೀಮಶಪ್ಪ ತಂದೆ ಬಾಲಪ್ಪ ತಿಪಡಂಪಲ್ಲಿ ಎಂಬುವವರೊಂದಿಗೆ ಮದುವೆ ಮಾಡಿಕೊಟ್ಟಿದ್ದು, ಮದುವೆಯಾದಾಗಿನಿಂದ ನನ್ನ ಮಗಳಿಗೆ ಗಂಡನ ಮನೆಯವರು ಚೆನ್ನಾಗಿ ನೊಡಿಕೊಂಡಿದ್ದು ಇಗ ಒಂದು ವರ್ಷದ ಹಿಂದೆ ನನ್ನ ಮಗಳಿಗೆ ಒಂದು ಹೆಣ್ಣುಮಗಳು ಜನಿಸಿದ್ದು, ಆವತ್ತಿನಿಂದ ನನ್ನ ಮಗಳಿಗೆ ನಮ್ಮ ಮನೆಗೆ ಕರೆದುಕೊಂಡು ಬಂದಿದ್ದು ಹುಟ್ಟಿದ ಹೆಣ್ಣು ಮಗು ಸುಮಾರು 7 ತಿಂಗಳು ಇರುವಾಗ ಮೃತಪಟ್ಟಿದ್ದು ಇರುತ್ತದೆ. ನನ್ನ ಮಗಳಿಗೆ ಬಾಣಂತನ ಆದ ನಂತರ ಅವಳ ಗಂಡನ ಮನೆಯವರು ಅವಳೊಂದಿಗೆ ಸರಿಯಾಗಿ ಮಾತನಾಡುತ್ತಿರಲಿಲ್ಲ ಮತ್ತು ನಮ್ಮ ಮನೆಗೆ ಬಾಣಂತನಕ್ಕೆ ಅಂತಾ ಕರೆದುಕೊಂಡು ಬಂದು 7 ತಿಂಗಳು ಆದರು ವಾಪಸ್ಸು ಕರೆದುಕೊಂಡು ಹೋಗಿರದ್ದಕ್ಕೆ ನಾವು ಅವರಿಗೆ ಕರೆದುಕೊಂಡು ಹೋಗಿರಿ ಅಂತಾ ಹೇಳಿದರು ನಮ್ಮ ಅಳಿಯ ಭೀಮಶಪ್ಪ ತಂದೆ ಬಾಲಪ್ಪ ಮತ್ತು ಅವರ ತಂದೆ ಬಾಲಪ್ಪ ತಂದೆ ಭೀಮಪ್ಪ ಹಾಗೂ ತಾಯಿಯಾದ ಭೀಮಮ್ಮ ಗಂಡ ಬಾಲಪ್ಪ ಹೀಗೆ ಎಲ್ಲರೂ ನಮ್ಮ ಮನೆಗೆ ಬಂದು ನನ್ನ ಮಗಳೊಂದಿಗೆ ಜಗಳ ತೆಗೆದು ಅವಳ ಶೀಲವನ್ನು ಶಂಕಿಸಿ ತಮ್ಮ ಮನೆಗೆ ಕರೆದುಕೊಂಡು ಹೋಗುವುದಿಲ್ಲ ಅಂತಾ ನಮ್ಮೊಂದಿಗೆ ಜಗಳ ತೆಗೆದು ಹೋಗಿದ್ದರು. ಆದರು ಕೂಡ ನನ್ನ ಮಗಳಿಗೆ ತಮ್ಮ ಮನೆಗೆ ಕರೆದುಕೊಂಡು ಹೋಗಿರುವುದಿಲ್ಲ. ಇಗ ಸುಮಾರು ಒಂದು ತಿಂಗಳ ಹಿಂದೆ ಮತ್ತೆ ಮೂರು ಜನರು ನಮ್ಮ ಮನೆಗೆ ಬಂದು ನಮ್ಮೊಂದಿಗೆ ಜಗಳ ತೆಗೆದು ಕಿರಿಕಿರಿ ಮಾಡುತ್ತಿದ್ದಾಗ ನಮ್ಮೂರಿನ ಕೆಲವು ಪ್ರಮುಖರನ್ನು ಕರೆಯಿಸಿ ನ್ಯಾಯ ಪಂಚಾಯಿತಿ ಮಾಡಿಸಿ ನನ್ನ ಮಗಳಿಗೆ ಅವರೊಂದಿಗೆ ಗಂಡನ ಮನೆಗೆ ಕಳುಹಿಸಿಕೊಟ್ಟಿದ್ದು ಇರುತ್ತದೆ. ಹೀಗಿದ್ದು ನಿನ್ನೆ ದಿನಾಂಕ: 31-01-17 ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಮೊತಕಪಲ್ಲಿ ಗ್ರಾಮದ ಚಂದ್ರಪ್ಪ ಇವರು ನನಗೆ ಪೋನ ಮಾಡಿ ನಿನ್ನ ಮಗಳಾದ ಮಲ್ಲಿಕಾರ್ಜುನಮ್ಮ ಇವಳಿಗೆ ಅವಳ ಗಂಡ ಮತ್ತು ಮನೆಯವರು ಜಗಳ ತೆಗೆದು ಹೊಡೆ ಬಡೆ ಮಾಡಿರುತ್ತಾರೆ. ನೀನು ಬಂದು ನಿನ್ನ ಮಗಳಿಗೆ ಕರೆದುಕೊಂಡು ಹೋಗು ಅಂತಾ ಹೇಳಿದ್ದರಿಂದ ನಾನು ಮತ್ತು ನನ್ನ ಹೆಂಡತಿ ನರಸಿಂಗಮ್ಮ ಇಬ್ಬರೂ ಸೇರಿ ನಿನ್ನೆ ಮದ್ಯಾಹ್ನ ಮೊತಕಪಲ್ಲಿ ಗ್ರಾಮದ ನನ್ನ ಮಗಳ ಮನೆಗೆ ಹೋಗಿ ನನ್ನ ಮಗಳನ್ನು ವಿಚಾರಿಸಲಾಗಿ ಅವಳು ಮನೆಯಲ್ಲಿ ಮಲಗಿಕೊಂಡಿದ್ದು, ಅವಳಿಗೆ ಏನಾಗಿದೆ ಅಂತಾ ವಿಚಾರಿಸಲಾಗಿ ನಿನ್ನೆ ದಿನಾಂಕ: 30-01-17 ರಂದು ರಾತ್ರಿ 08-00 ಗಂಟೆ ಸುಮಾರಿಗೆ ನನ್ನ ಮನೆಯಲ್ಲಿ ನನ್ನ ಗಂಡ, ಅತ್ತೆ, ಮಾವ ಎಲ್ಲರೂ ಸೇರಿ ನನಗೆ ನಿನ್ನ ಶೀಲ ಸರಿಇಲ್ಲ ನೀನು ನಡತೆಗೆಟ್ಟವಳು ಇದ್ದಿಯಾ ಅಂತಾ ಬೈದು ನನ್ನ ಗಂಡ ಭೀಮಶಪ್ಪ ಇತನು ಕೈಯಿಂದ ನನ್ನ ಎದೆಗೆ ಹೊಟ್ಟೆಗೆ ಬೆನ್ನಿಗೆ ಹೊಡೆ ಬಡೆ ಮಾಡಿ ಭಾರಿ ಗುಪ್ತಗಾಯಪಡಿಸಿದ್ದು, ನಮ್ಮ ಅತ್ತೆ ಮತ್ತು ಮಾವ ನನಗೆ ಅವಾಚ್ಯವಾಗಿ ಬೈದಿರುತ್ತಾರೆ ಅಂತಾ ತಿಳಿಸಿದಳು. ನಂತರ ಅಲ್ಲಿಯೆ ಇದ್ದ ನನ್ನ ಅಳಿಯನಿಗೆ ವಿಚಾರಿಸಲಾಗಿ ಅವನು ಕೂಡ ನಿಮ್ಮ ಮಗಳ ಶೀಲ ಸರಿಇಲ್ಲ ಅಂತಾ ನಮ್ಮೊಂದಿಗೆ ಜಗಳ ತೆಗೆಯುತ್ತಿದ್ದಾಗ, ಯಾಕೆ ಇವರೊಂದಿಗೆ ಜಗಳ ತೆಗೆಯುವದು ಅಂತಾ ತಿಳಿದು ನನ್ನ ಮಗಳು ಮೈ ಕೈಗೆ ನೊವಾಗಿದೆ ಅಂತಾ ಅನ್ನುತ್ತಿದ್ದಾಗ ಅವಳಿಗೆ ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಸೇರಿ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಮುಧೋಳ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ಅಲ್ಲಿನ ವೈದ್ಯರು ಹೆಚ್ಚಿನ ಉಪಚಾರಕ್ಕಾಗಿ ಮುಂದಕ್ಕೆ ಕರೆದುಕೊಂಡು ಹೋಗಿರಿ ಅಂತಾ ಹೇಳಿದ್ದಕ್ಕೆ ನನ್ನ ಮಗಳಿಗೆ ಒಂದು ಖಾಸಗಿ ವಾಹನದಲ್ಲಿ ನಿನ್ನೆ ಸಾಯಂಕಾಲ ಯಾದಗಿರಿಗೆ ಕರೆದುಕೊಂಡು ಹೋಗುವಾಗ ನಮಗೆ ಪರಿಚಯಸ್ಥರು ಗುರುಮಿಠಕಲ್ ಆಸ್ಪತ್ರೆಗೆ ಕರೆದುಕೊಂಡು ಹೋಗೊಣ ಅಂತಾ ಹೇಳಿದ್ದಕ್ಕೆ ನನ್ನ ಮಗಳಿಗೆ ಗುರುಮಿಠಕಲದ ಡಾ|| ಮೇತ್ರೆ ಆಸ್ಪತ್ರೆಗೆ ನಿನ್ನೆ ರಾತ್ರಿ 09-00 ಗಂಟೆ ಸುಮಾರಿಕೆ ತಂದು ಸೇರಿಕೆ ಮಾಡಿದ್ದು, ಅಲ್ಲಿನ ವೈದ್ಯರು ನನ್ನ ಮಗಳಿಗೆ ನೋಡಿ ನಿಮ್ಮ ಮಗಳು ಮೃತಪಟ್ಟಿರುತ್ತಾಳೆ ಅಂತಾ ತಿಳಿಸಿರುತ್ತಾಳೆ. ನಂತರ ನಾವು ನಮ್ಮ ಸಂಬಂಧಿಕರಿಗೆ ವಿಚಾರಿಸಿಕೊಂಡು ನನ್ನ ಮಗಳ ಮೃತದೇಹವನ್ನು ನಾವುಗಳು ಇಲ್ಲಿಗೆ ತಂದು ಸೇರಿಸಿ ನಮ್ಮ ಮಗಳ ಶವವನ್ನು ಆಸ್ಪತ್ರೆಯ ಶವಗಾರದಲ್ಲಿ ಹಾಕಿ ನಿನ್ನೆ ರಾತ್ರಿ 10-00 ಗಂಟೆ ಸುಮಾರಿಗೆ ಈ ಬಗ್ಗೆ ಮುಧೋಳ ಠಾಣೆಯ ಪೊಲೀಸರಿಗೆ ಮಾಹಿತಿ ತಿಳಿಸಿದ್ದು ಇರುತ್ತದೆ. ಕಾರಣ ಸದರಿ ಮೇಲ್ಕಂಡ ಮೂರು ಜನರ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಬೇಕು ಅಂತಾ ನಾನು ತೆಲುಗಿನಲ್ಲಿ ಹೇಳಿದ್ದನ್ನು ನಮ್ಮ ಸಂಬಂಧಿಕರಾದ ದೇವಿಂದ್ರಪ್ಪ ತಂದೆ ನರಸಪ್ಪ ಕೊಜ್ಜಿ ಸಾ|| ಮೊತಕಪಲ್ಲಿ ಇವರು ಕನ್ನಡದಲ್ಲಿ ಅನುವಾದಿಸಿರುತ್ತಾರೆ ಅಂತಾ ಕೊಟ್ಟ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕಾರ ಪ್ರಕರಣವನ್ನು ಧಾಖಲಿಸಿಕೊಂಡ ಬಗ್ಗೆ ವರದಿ.
ರಾಘವೇಂದ್ರನಗರ ಠಾಣೆ : ದಿನಾಂಕ   30-01-2017 ರಂದು ಬೆಳಗ್ಗೆ 5.00 ಗಂಟೆಗೆ ಕಲಬುರಗಿ ನಗರದ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಎಮ್,ಎಲ್,ಸಿ ವಿಚಾರಣೆ ಕುರಿತು ಹೋಗಿ ಅಲ್ಲಿ ಗಾಯಾಳುದಾರ ಶ್ರೀ ಮಂತ ತಂದೆ ಪಾಂಡುರಂಗ ಜೋಡಪಲ್ಲಿ || 22 || ಹಾಲಿನ ವ್ಯಾಪಾರ ಸಾ|| ಮಾಣಿಕೇಶ್ವರಿ ಕಾಲೋನಿ ಇವರಿಗೆ ಬೇಟಿಯಾಗಿ ಘಟನೆ ಬಗ್ಗೆ ವಿಚಾರಿಸಿದ್ದು ಸದರಿಯವನು ನಾನು ನನ್ನ ತಂದೆ ಯವರಿಗೆ ವಿಚಾರ ಮಾಡಿ ಹೇಳಿಕೆ ಕೊಡುತ್ತೇನೆ ಅಂತಾ ಹೇಳಿದ್ದರಿಂದ ಮರಳಿಬಂದಿದ್ದು ಇಂದು ದಿ|| 31-01-2017 ರಂದು ಸಾಯಂಕಾಲ 6.00 ಗಂಟೆಗೆ ಗಾಯಾಳುದಾರ ಶ್ರೀಮಂತ ಇತನು ನಾನು ನನ್ನ ತಂದೆಯವರಿಗೆ ವಿಚಾರ ಮಾಡಿದ್ದು ಅವರು ನಿನಗೆ ಹೊಡೆದವರ ಮೇಲೆ ದೂರು ಸಲ್ಲಿಸು ಅಂತಾ ಹೇಳಿದ್ದಾಗ ನಾನು ಇಂದು ಹೇಳಿಕೆ ನೀಡಿರುತ್ತೇನೆ ಅಂತಾ ಹೇಳಿಕೆ ನೀಡಿದ್ದರ ಸಾರಂಶವೆನಂದರೆ ದಿ|| 29-01-2017 ರಂದು ರಾತ್ರಿ 9.30 ಗಂಟೆಯ ಸುಮಾರಿಗೆ ನಾನು ಹಾಲು ಮನೆ ಮನೆಗೆ ಹಾಕಿ ಮನೆಗೆ ಹೋಗುತ್ತಿರುವಾಗ ನಮ್ಮ ಬಡಾವಣೆಯ ನಾಗರಕಟ್ಟಾದ ಹತ್ತಿರ ಅಪ್ಪಾಸಾಬ, ಮಂಜು, ಅಂಬರೀಶ, ಮತ್ತು ಭಾಗೇಶ ಇವರು ಬಂದು ನನಗೆ ತಡೆದು ಅಪ್ಪಾಸಾಬ ಇವನು ಶ್ರೀಮಂತ ನೀನು ನಮಗೆ ಖರ್ಚಿಗೆ ಹಣ ಕೊಡಬೇಕು ಅಂತಾ ಹೇಳಿದ್ದಾಗ ನನ್ನ ಹತ್ತಿರ ಹಣ ಇಲ್ಲಾ ನಿಮ್ಮಗೆ ಏಕೆ ಕೋಡಬೇಕು ಅಂತಾ ಹೇಳಿದಕ್ಕೆ ಅವನು ರಂಡಿ ಮಗನೆ ಭೋಸಡಿ ಮಗನೆ ಅಂತಾ ಅವಾಚ್ಯವಾಗಿ ಬೈದು ಕೋಲೆ ಮಾಡುವ ಉದ್ದೇಶದಿಂದ ಅಲ್ಲೆ ಬಿದ್ದ ಒಂದು ಪರ್ಸಿ ಕಲ್ಲು ತೆಗೆದುಕೊಂಡು ನನ್ನ ತಲೆಯ ಮೇಲೆ ಹೊಡೆದು ಭಾರಿ ರಕ್ತಗಾಯಮಾಡಿರುತ್ತಾನೆ ಮತ್ತು ಕೈಯಿಂದ ಎದೆಯ ಮೇಲೆ ಹೊಡೆಬಡೆ ಮಾಡಿರುತ್ತಾನೆ ಅಂಬರೀಶ ಇವನು ಒಂದು ಕಲ್ಲಿನಿಂದ ಎಡಬೆನ್ನಿನ ಮೇಲೆ ಹೊಡೆದು ರಕ್ತಗಾಯ ಮಾಡಿರುತ್ತಾನೆ ಭಾಗೇಶ ಇತನು ಭೋಸಡಿ ಮಗನಿಗೆ ಬಿಡಬಾರದು ಅಂತಾ ನನ್ನ ಎರಡು ಕಾಲು ಹೀಡಿದು ಕೆಳಗೆ ಕೆಡವಿ ಎಳೆದಾಡಿದ್ದಾಗ ನನ್ನ ಬಲ ಪಕ್ಕೆಯ ಮೇಲೆ ಟೊಂಕದ ಮೇಲೆ ತರಚೀದ ಗಾಯ ಆಗಿರುತ್ತದೆ ಆಕಾಶ ಎಂಬುವವನು ಬಂದು  ರಂಡಿ ಮಗನೆ ನನ್ನ ಗೇಳೆಯರ ಜೋತೆಯಲ್ಲಿ ಏಕೆ ಜಗಳ ಮಾಡುತ್ತಿರಿ ಅಂತಾ ಬೈದು ಕಾಲೀನಿಂದ ಹೊಟ್ಟೆಯ ಮೇಲೆ ಒದ್ದಿರುತ್ತಾನೆ ಆಗ ನಾನು ಚಿರಾಡುವ ಸಪ್ಪಳ ಕೇಳಿ ನನ್ನ ತಂದೆ ಯವರು ಮತ್ತು ನನ್ನ ಅಣ್ಣ ಪ್ರಕಾಶ ಹಾಗೂ ರಸ್ತೆಗೆ ನಡೆದುಕೊಂಡು ಹೋಗುತ್ತಿರುವ ಸಿದ್ದು ಯಾರ ಮತ್ತು ವೆಂಕಟೇಶ ಇವರು ಜಗಳ ಬಿಡಿಸಿರುತ್ತಾರೆ ನನಗೆ ರಕ್ತಗಾಯ ಮತ್ತು ಗುಪ್ತಗಾಯವಾಗಿದ್ದರಿಂದ ಉಪಚಾರ ಕುರಿತು ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೇನೆ ನನಗೆ ಹೋಡೆಬಡೆ ಮಾಡಿದವರ ಮೇಲೆ ಕೇಸ ಮಾಡಬೇಕು ಅಥವಾ ಇಲ್ಲಾ ಅಂತಾ ನನ್ನ ತಂದೆಯವರಿಗೆ ವಿಚಾರ ಮಾಡಿ ಇಂದು ದಿ|| 31-01-2017 ರಂದು ಹೇಳಿಕೆ ನೀಡಿರುತ್ತೇನೆ ಕಾರಣ ನನಗೆ ಹೋಡಬಡೆ ಮಾಡಿ ರಕ್ತಗಾಯ ಹಾಗೂ ಗುಪ್ತಗಾಯ ಪಡಿಸಿದ್ದವರ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಬೇಕು ಅಂತಾ ಹೇಳಿ ಬರೆಯಿಸಿದ ಹೇಳಿಕೆ ನೀಜವಿರುತ್ತದೆ ಅಂತಾ ಹೇಳಿಕೆ ನಿಡಿದ್ದು ಸದರಿ ಹೇಳಿಕೆಯೊಂದಿಗೆ ಸಾಯಂಕಾಲ 7.30 ಗಂಟೆಗೆ ಠಾಣೆಗೆ ಬಂದು ಹೇಳಿಕೆ ಸಾರಂಶ ಮೇಲಿಂದ ಪ್ರಕರಣ ವರದಿಯಾದ ಬಗ್ಗೆ .