POLICE BHAVAN KALABURAGI

POLICE BHAVAN KALABURAGI

22 September 2014

Gulbarga District Reported Crimes


C¥sÀd®¥ÀÆgÀ oÁuÉ:
ಫಿರ್ಯಾದಿ ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದರ ಸಾರಂಶವೆನೆಂದರೆ ನಾನು ಮೇಲೆ ಹೇಳಿದ ವಿಳಾಸದವನಿದ್ದು ಬೆನಕ ಟೈಮಸ್ ಪತ್ರಿಕೆ ಮತ್ತು ಕಲರ್ಬುಗಿ ಕಲರವ ಪತ್ರಿಕೆಯ ಸಂಪಾದಕನಾಗಿ ಕೆಲಸಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತೆನೆ. ನನ್ನ ಎರಡನೆ ಹೆಂಡತಿ ಭಾಗಿರತಿ ಇವಳಿಗೆ 4 ಜನ ಮಕ್ಕಳಿದ್ದು, 1] ತ್ರೀಮೂರ್ತಿ, 2] ಸಿದ್ದಮ್ಮ, 3] ಧಾನಮ್ಮ ವಯ; 12 ವರ್ಷ ಒಂದು ತಿಂಗಳ, 4] ಹರ್ಶೀಲ ಅಂತಾ ರುತ್ತಾರೆ. ಧಾನಮ್ಮ ಇವಳು ನಮ್ಮೂರಲ್ಲೇ ಸರಕಾರಿ ಶಾಲೆಯಲ್ಲಿ 7 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುತ್ತಾಳೆ. ನಿನ್ನೆ ನಮ್ಮ ಮನೆಯಲ್ಲಿ ನಾನು ಮತ್ತು ನನ್ನ ಹೆಂಡತಿ ಭಾಗಿರತಿ ಹಾಗು ನಮ್ಮ ಮಕ್ಕಳು ಎಲ್ಲರು ಇದ್ದಾಗ ಅದೇ ಸಮಯಕ್ಕೆ ನನ್ನ ಮಗಳು ಧಾನಮ್ಮ ಇವಳು ಅಡುಗೆ ಮಾಡುವ ಸಲುವಾಗಿ ಮಸಾಲಿ ತರಲು ನಮ್ಮ ಮನೆ ಹತ್ತಿರ ಇರುವ ಕಿರಾಣಿ ಅಂಗಡಿ ಹೋಗಿರುತ್ತಾಳೆ. ನಂತರ ಎಷ್ಟೊತ್ತಾದರು ನಮ್ಮ ಮಗಳು ಮರಳಿ ಮನೆಗೆ ಬರಲಿಲ್ಲ ನಂತರ ನಾನು ಮತ್ತು ನನ್ನ ಹೆಂಡತಿ ಭಾಗಿರತಿ ಕೂಡಿ ನಮ್ಮ ಮನೆ ಹತ್ತಿರ ವಿಚಾರಿಸಿದಾಗ ಗೊತ್ತಾಗಿದ್ದೇನೆಂದರೆ, ನಿಮ್ಮ ಮಗಳು ಧಾನಮ್ಮ ಇವಳು ನಿಮ್ಮ ಮನೆ ಬಾಜು ರಸ್ತೆಯ ಮೇಲೆ ಇದ್ದಾಗ ನಮ್ಮೂರ ಅನೀಲ ತಂದೆ ಅಣ್ಣಪ್ಪ ಶೆಂಡಗೆ ವಯ; 22 ವರ್ಷ, ಇವನು ಒಂದು ಯಾವುದೊ ಟಾಟಾ ಸೂಮೋದಲ್ಲಿ ವತ್ತಾಯಪೂರಕವಾಗಿ ಹಾಕಿ ಅಪಹರಣ ಮಾಡಿಕೊಂಡು ಹೋಗಿರುತ್ತಾನೆ ಅಂತಾ ತಿಳಿಸಿದರು. ನಂತರ ನಾನು ಮತ್ತು ನನ್ನ ಹೆಂಡತಿ ಭಾಗಿರತಿ, ನನ್ನ ಮಗ ತ್ರೀಮೂರ್ತಿ, ನಮ್ಮ ವಾಹನ ಚಾಲಕ ಸೈಪನಸಾಬ ಕರವಲ್ ರವರು ಕೂಡಿಕೊಂಡು ನಮ್ಮೂರಲ್ಲಿ ಮತ್ತು ಕರಜಗಿ, ಮಾಶಾಳ, ಅಫಜಲಪೂರ, ಇಂಡಿ, ಆಲಮೇಲ ಗ್ರಾಮಗಳಲ್ಲಿ ಹುಡಕಾಡಿದರು ನಮ್ಮ ಮಗಳು ಸಿಗಲಿಲ್ಲಾ. ಅಪ್ರಾಪ್ತ ವಯಸ್ಸಿನ ನನ್ನ ಮಗಳನ್ನು ಅಪಹರಣ ಮಾಡಿಕೊಂಡು ಹೋಗಲು ಮೇಲ್ಕಂಡ ಅನೀಲ ಇವನ ತಾಯಿ ಕಮಲಾಬಾಯಿ ಗಂಡ ಅಣ್ಣಪ್ಪ ಶಂಡಗೆ, ಅವನ ಅಣ್ಣ ರವಿ ತಂದೆ ಅಣ್ಣಪ್ಪ ಶಂಡಗೆ ವಯ; 24 ವರ್ಷ ರವರು ನನ್ನ ಮಗಳನ್ನು ಅಪಹರಣಮಾಡಿಕೊಂಡು ಹೋಗಲು ಅನೀಲ ಈತನಿಗೆ ಚಿತಾವಣಿ ಮಾಡಿರುತ್ತಾರೆ ಅಂತಾ ತಿಳಿದುಬಂದಿರುತ್ತದೆ. ಸದರಿ ನನ್ನ ಮಗಳನ್ನು ಎಲ್ಲಾಕಡೆ ಹುಡಕಾಡಿದರು ಸಕ್ಕಿರುವುದಿಲ್ಲ, ಆದ್ದರಿಂದ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಸಿದ್ದು ಇರುತ್ತದೆ. ಸದರಿ ನನ್ನ ಮಗಳು ಅಪ್ರಾಪ್ತ ವಯಸ್ಸಿನವಳಿದ್ದು, ಮೇಲ್ಕಂಡ  ಕಮಲಾಬಾಯಿ ಶಂಡಗೆ ಮತ್ತು ರವಿ ಶಂಡಗೆ ಇವರು ಚಿತಾವಣಿ ಮಾಡಿದ್ದರಿಂದ ಅನೀಲ ಶಂಡಗೆ ಇವರು ಯಾವುದೊ ದುರೂದ್ದೇಶದಿಂದ ಒತ್ತಾಯಪೂರಕವಾಗಿ ಟಾಟಾ ಸೂಮೋದಲ್ಲಿ ಅಪಹರಣ ಮಾಡಿಕೊಂಡು ಹೊಗಿರುತ್ತಾನೆ. ಸದರಿಯವರ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಹಾಗೂ ನನ್ನ ಮಗಳನ್ನು ಪತ್ತೆ ಮಾಡಿಕೊಡಬೇಕು ಎಂದು ಹೇಳಿಕೆ ನಿಡಿದ್ದು ನೀಜ ವಿರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು

§æºÀä¥ÀÆgÀ ¥Éưøï oÁuÉ:
PÀ¼ÀªÀÅ ¥ÀæPÀgÀt:
ಶ್ರೀ ಗುಡ್ಡಾ ಪರಮೇಶ್ವರ ತಂದೆ ಅಣ್ಣಪ್ಪಾ ಜಗತ್ ಮೇಲಿನಕೇರಿ ಓಣಿ ಗುಲಬರ್ಗಾ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕೃತ ಮಾಡಿದ ಅರ್ಜಿ ಸಲ್ಲಿಸಿದ್ದು ಸಾರಾಂಶವೆನೆಂದರೆ  ಸುಪರ ಮಾರ್ಕೆಟ್  ಸ್ಟೇಟ್ ಬ್ಯಾಂಕ್ ಆಪ್ ಹೈದ್ರಾಬಾದ ಶಾಖೆ ಎದುರುಗಡೆ  ನಿಲ್ಲಿಸಿದ ನನ್ನ ಹಿರೋ ಹೋಡಾ ಸ್ಲೇಂಡರ್ ಪ್ಲಸ್  ನಂ: ಕೆಎ 32 ಎಕ್ಸ-4461 ಅ||ಕಿ|| 41,065/-ನೇದ್ದನ್ನು ಯಾರೋ ಕಳ್ಳರು ಕಳುವು ಮಾಡಿದ್ದು ಎಷ್ಟು ಹುಡಕಾಡಿದರು ಸಿಕ್ಕರುವದಿಲ್ಲಾ. ಅಂತಾ ಇತ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಬ್ರಹ್ಮಪೂರ ಪೊಲೀಸ ಠಾಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ªÀiÁqÀ§Æ¼À ¥Éưøï oÁuÉ:
ಅರ್ಜಿ ದಾರನಾದ ಶ್ರೀ ಶಿವಾನಂದ ಮಠಪತಿ ಸಾ: ಇವಣಿ ಇವರು ಖುದ್ದಾಗಿ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ಅರ್ಜಿ ಸಾರಾಂಶವೆನೆಂದರೆ. ನನಗೆ ಮೂರ ಜನ ಮಕ್ಕಳಿದ್ದು ಅಭಿಷಕ ಈತನು 3 ನೇ ಮಗನಾಗಿದ್ದು ಅಭಿಷಕ ಈತನು 10 ನೇ ಫೈಲ್ ಆಗಿ ಕೂಲಿ ಕೆಲಸ ಮಾಡಿಕೊಂಡು ಇರುತ್ತಿದ್ದು ಇಂದು ತೋನಸಳ್ಳಿ ಗ್ರಾಮಕ್ಕೆ ಸಂಬಂದಿಕರ ಮನೆಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋಗಿದ್ದು ನಂತರ 3 ಪಿ.ಎಮ್ ಸುಮಾರಿಗೆ ಅಭಿಷಕ ಫೋನ್ ಮಾಡಿ ತಿಳಿಸಿದೆನೆಂದರೆ, ತೋನಸಳ್ಳಿ ಗ್ರಾಮದ ಭೀಮರಾವ ಲಿಂಗದೆ ಇವರ ಹೊಲದ ಹತ್ತಿರ ಟಂ ಟಂ ಪಲ್ಟಿಯಾಗಿ ನನಗೆ ಬಹಳ ಹತ್ತಿರುತ್ತದೆ ಅಂತಾ ಪೋನ್ ಮಾಡಿದ್ದು ನಾನು ಹೋಗಿ ನೋಡಲಾಗಿ ನನ್ನ ಮಗನಿಗೆ ವಿಚಾರಿಸಲಾಗಿ ನನ್ನ ಮಗ ತಿಳಿಸಿದೆನೆಂದರೆ ಮಲಕೂಡ ಗ್ರಾಮದ ಕೇದರನಾಥ ತಂದೆ ನಾಗಣ್ಣಾ ನೀಲಿ ಇವರ ಟಂ ಟಂ ನಂ ಕೆಎ-32 ಬಿ-7066 ನೇದ್ದರಲ್ಲಿ ಬರುತ್ತಿರುವಾಗ ಸದರಿ ವಾಹನ ಚಾಲಕ ಅತಿ ವೇಗ ಹಾಗೂ ನಿಷ್ಕಳಜಿತನದಿಂದ ನಡೆಸುತ್ತಿದ್ದು ಅದಲ್ಲದೆ ಮಳೆ ಕೂಡಾ ಜೋರಾಗಿ ಬರುತ್ತಿದ್ದು ಸವಕಾಶ ನಡೆಸು ಅಂತಾ ಹೇಳಿದರು ಕೂಡಾ ಆತನು ಹಾಗೆ ನಡೆಸುತ್ತಿರುವಾಗ ಎದುರಿನಿಂದ ಒಂದು ವಾಹನ ಬರುತ್ತಿದ್ದನ್ನು ನೋಡಿ ಎಡಕ್ಕೆ ಕಟ್ ಮಾಡಿದರಿಂದ ಟಂ ಟಂ ಪಲ್ಟಿಯಾಗಿ ನನ್ನ ಎದೆಯ ಮೇಲೆ ಬಿದ್ದು ಭಾರಿ ಒಳಪೇಟ ಆಗಿ ಬಾಯಿಗೆ, ಮೂಗಿಗೆ, ಹಣೆಗೆ ತರಚಿದ ಗಾಯವಾಗಿದ್ದು ಸದರಿ ವಾಹನ ಚಾಲಕ ಕೇದರನಾಥ ತನ್ನ ಟಂ ಟಂ ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಅಂತಾ ತಿಳಿಸಿದ್ದು ನಂತರ ನಾನು ರೂಡಿಗೆ ಹೋಗುತ್ತಿರುವ ಜನರ ಸಹಾಯದಿಂದ ಖಾಸಗಿ ವಾಹನದಲ್ಲಿ ಹಾಕಿಕೊಂಡು ಗುಲಬರ್ಗಾಕ್ಕೆ ಹೋಗುತ್ತಿರುವಾಗ ಮಾರ್ಗಮದ್ಯದಲ್ಲಿ ನನ್ನ ಮಗ ಅಭಿಷಕ ಮೃತ ಪಟ್ಟಿದ್ದು ಅಂತಾ ವಗೈರೆ ಅರ್ಜಿ ಸಾರಾಂಶದ ಮೇಲಿಂದ ಮಾಡಬೂಳ ಪೊಲೀಸ ಠಾಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಕುರಕುಂಟಾ ¥Éưøï oÁuÉ:
ಕುರಕುಂಟಾ ಗ್ರಾಮದಿಂದ ದೂರವಾಣಿ ಮೂಲಕ ರೇವಣಸಿದ್ದಪ್ಪ ಸೀಡಿಲು ಬಿದ್ದು ಮೃತ ಹೊಂದಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಕುರಕುಂಟಾದಲ್ಲಿದ್ದ ಮೃತನ ತಂದೆಯಾದ ಶಾಮರಾಯ ತಂದೆ ಗಾಳಪ್ಪಾ ಗಾರಂಪಳ್ಳಿ ವಃ 55 ವರ್ಷ ಜಾಃ ಕುರುಬ ಉಃ ಒಕ್ಕಲುತನ ಸಾಃ ಕುರಕುಂಟಾ ಇವರ ಫಿರ್ಯಾದಿ ಹೇಳಿಕೆ ಪಡೆದುಕೊಂಡಿದ್ದು  ಫಿರ್ಯಾದಿ ಹೇಳಿಕೆಯ ಸಾರಾಂಶವೆನೆಂದರೆ ನನಗೆ ಎರಡು ಜನ ಗಂಡು ಮತ್ತು ಎರಡು ಜನ ಹೆಣ್ಣು ಮಕ್ಕಳಿದ್ದು ಹಿರಿಯವಳು ನಾಗಮ್ಮ ಅಂತಾ 24 ವರ್ಷಗಳಿದ್ದು ಎರಡನೆಯವ ಶರಣಪ್ಪಾ ಅಂತಾ 21 ವರ್ಷದ ಮಗನಾಗಿದ್ದು ಮೂರನೆದವ ರೇವಣಸಿದ್ದಪ್ಪಾ ಅಂತಾ 19 ವರ್ಷದವನಾಗಿದ್ದು ನನ್ನ ಹೆಂಡತಿ ಮಕ್ಕಳೊಂದಿಗೆ ಒಕ್ಕಲುತನ ಕೆಲಸ ಮಾಡಿಕೊಂಡು ಉಪಜೀವಿಸುತ್ತೇನೆ ಹೆಣ್ಣು ಹುಡುಗಿಯರಿಗೆ ಮದುವೆ ಮಾಡಿಕೊಟ್ಟಿದ್ದು ತಮ್ಮತಮ್ಮ ಮನೆಯಲ್ಲಿ ಇರುತ್ತಾರೆ ಗಂಡು ಮಕ್ಕಳಲ್ಲಿ ಶರಣಪ್ಪಾ ಮತ್ತು ರೇವಣಸಿದ್ದಪ್ಪಾ ಇಬ್ಬರು ನಮ್ಮ ಜಮೀನಿನಲ್ಲಿ ಒಕ್ಕಲುತನ ಕೆಲಸ  ಮಾಡಿಕೊಂಡು ಇರುತ್ತಾರೆ ಎರಡು ಮೂರು ದಿವಸದಿಂದ ಸುರಿಯುತ್ತಿರುವ ಮಳೆಯ ಕಾರಣ ಎತ್ತುಗಳಿಗೆ ಮೇವು ವಗೈರೆ ಇಲ್ಲದೇ ಅವುಗಳನ್ನು ಮೆಯಿಸಿಕೊಂಡು ಬರಲು ನನ್ನ ಎರಡನೆ ಮಗನಾದ ರೇವಣಸಿದ್ದಪ್ಪಾ ವಃ 19 ವರ್ಷ ಇವನು ನಮ್ಮ ಎರಡು ಎತ್ತುಗಳನ್ನು ಹೊಡೆದುಕೊಂಡು ಲೇವಲ್ ಕ್ರಾಸಿಂಗ ಆಚೆಗೆ ಇರುವ ನರಸಮ್ಮ ಚಿಂತಪಳ್ಳಿ ಇವರ ಹೊಲದ ಬದುವಿಗೆ ಎತ್ತುಗಳನ್ನು ಮೇಯಿಸುತ್ತಿರುವಾಗ ಮಧ್ಯಾಹ್ನ 3 ಘಂಟೆ ಸುಜಮಾರಿಗೆ ಬಂದಿರುವ ಎಕಾಎಕಿ ಧಾರಕಾರ ಮಳೆಯಲ್ಲಿ ನನ್ನ ಮಗನಿಗೆ ಯಾವುದೇ ದಾರಿ ತೋಚದೆ ಬದುವಿನ ಮೇಲೆ ಬಿದಿದ್ದು ನಮ್ಮ ಎರಡು ಎತ್ತುಗಳು ಸಾಯಂಕಾಲ 6 ಘಂಟೆ ಸುಮಾರಿಗೆ ಮನೆಗೆ ಮರಳಿದಾಗ ನನ್ನ ಮಗನು ಸಹ ಹಿಂದೆ ಬರುತ್ತಿರಬಹುದೆಂದು ಅಂತಾ ಸ್ವಲ್ಪ ಸಮಯ ಕಾದು ನೋಡಿದಾಗ ನನ್ನ ಮಗ ರೇವಣಸಿದ್ದಪ್ಪಾ ಇತನು ಮನೆಗೆ ಬರಲೇ ಇಲ್ಲಾ ನಂತರ ನಾನು ನನ್ನ ಹೆಂಡತಿ ಮತ್ತು ನನ್ನ ಇನ್ನೊಬ್ಬ ಮಗನಾದ ಶರಣಪ್ಪಾ ಕೂಡಿ ಹುಡುಕುತ್ತಾ ಹೋದೆವು ನಂತರ ನನ್ನ ಮಗ ಶರಣಪ್ಪಾ ಇವನು ರೇವಣಸಿದ್ದಪ್ಪನ ಮೋಬೈಲನ ಕರೆ ಮಾಡಿದಾಗ ಸದರಿ ಮೋಬೈಲನ ಮೇಲೆ ರೇವಣಸಿದ್ದಪ್ಪಾ ಮಾತಾಡಿಸದ ಕಾರಣ ರೈಲ್ವೆ ಲೇವಲ ಕ್ರಾಸಿಂಗ್ ದಾಟಿ ರೋಡಿನ ಮೇಲೆ ಕೆಲಸವು ಜನರು ನನ್ನ ಮಗ ಎತ್ತುಗಳನ್ನು ಹೊಡೆದುಕೊಂಡು ಹೋಗಿದ್ದು ನೋಡಿದ್ದು ಇತ್ತು ಅದೇ ಅಂದಾಜಿನ ಮೇಲೆ ಸುತ್ತ ಮುತ್ತಲಿನ ಹೊಲಗಳಲ್ಲಿ ಹುಡುಕಾಡಲಾಗಿ ನನ್ನ ಹೆಂಡತಿ ಜರಣಮ್ಮಾ ಇವಳು ನರಸಪ್ಪಾ ಚಿಂತಪಳ್ಳಿ ಇವರ ಹೊಲದ ಬದುವಿಗೆ ಬಿದುದ್ದನ್ನು ನೋಡಿ ನನ್ನ ಮಗ ಶರಣಪ್ಪಾ ಇವನಿಗೆ ಚೀರಿ ಕರೆದಾಗ ನನ್ನ ಮಗ ನಾನು ಕೂಡಿ ಹೋಗಿ ನೋಡಲಾಗಿ ನನ್ನ ಮಗ ರೇವಣಸಿದ್ದಪ್ಪಾ ಇವನು ಬೋರಳಾಗಿ ಬಿದ್ದಿದ್ದು ಎರಡು ಕಿವಿಯಿಂದ ರಕ್ತ ಬರುತ್ತಿದ್ದು ಮತ್ತು ಮತ್ತು ಎದೆಯ ಮೇಲೆ ಸುಟ್ಟಂತೆ ಕಂಡು ಬರುತ್ತಿದ್ದು ಕಾರಣ ನನ್ನ ಮಗನಿಗೆ ಮಧ್ಯಾಹ್ನ 3 ಘಂಟೆ ವೇಳೆಗೆ ಆಗಿರುವ ಮಳೆಯಲ್ಲಿ ಆಕಸ್ಮಿಕವಾಗಿ ಸಿಡಿಲು ಬಡಿದು ಸತ್ತಿರಬಹುದು ಕಾರಣ ನನ್ನ ಮಗನ ಸಾವಿನ ಕಾರಣ ಪತ್ತೆ ಮಾಡಿ ಸೂಕ್ತ ಪರಿಹಾರ ಕುರಿತು ಕ್ರಮ ಜರುಗಿಸಬೇಕು ಅಂತಾ ವೆಗೈರೆ ಫಿರ್ಯಾದಿ ಹೇಳಿಕೆಯ ಸಾರಾಂಶದ ಮೇಲಿಂದ ಕುರಕುಂಟಾ ಪೊಲೀಸ ಠಾಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.