POLICE BHAVAN KALABURAGI

POLICE BHAVAN KALABURAGI

24 June 2011

GULBARGA DISTRICT REPORTED CRIMES

ಆಯುಧ ಪ್ರಕರಣ :

ನರೋಣಾ ಠಾಣೆ:
ಶ್ರೀ ಅನೀಲ ತಂದೆ ಹಣಮಂತ ರಂಜಾರೇ ಸಾ|| ಕಡಗಂಚಿ ರವರು ನಾನು ದಿನಾಂಕ: 23-06-2011 ರಂದು ಸಾಯಂಕಾಲ 07-30 ಗಂಟೆಗೆ ಕಡಗಂಚಿಯ ಕ್ರಾಸ ಹತ್ತಿರ ರೋಡಿನ ಹತ್ತಿರ ಇದ್ದಾಗ ಶ್ರೀಶೈಲ್ ತಂದೆ ಬಸವರಾಜ ಅಲ್ದಿ ಸಾ|| ಕಡಗಂಚಿ ಇತನು ತನ್ನ ಕೈಯಲ್ಲಿ ಒಂದು ಪಿಸ್ತೂಲ ಹಿಡಿದು ಕೊಂಡು ಹೋಗಿ ಬರುವ ಜನರಿಗೆ ಕೊಲೆ ಮಾಡುವ ಬೇದರಿಕೆ ಹಾಕುತ್ತಿದ್ದು, ಇದನ್ನು ಕಂಡು ಅಲ್ಲೆ ಇರುವ 10 ರಿಂದ 15 ಜನರು ಗುಂಪುವೊಂದು ಶ್ರೀಶೈಲ್ ನ ಹತ್ತಿರ ಬಂದವರೆ ಅವನಿಗೆ ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ :

ಆಳಂದ ಠಾಣೆ :ಶ್ರೀ ದಯಾನಂದ ತಂದೆ ಶ್ರೀಪತರಾವ ಸಾ|| ರೇವಣಸಿದ್ದೇಶವರ ಕಾಲೋನಿ ಆಳಂದ ರವರು ನಾನು ದಿನಾಂಕ:23-06-20111 ರಂದು ಬೆಳಿಗ್ಗೆ 09-00 ಗಂಟೆಯ ಸುಮಾರಿಗೆ ನನ್ನ ಬಂಗಾರದ ಅಂಗಡಿಗೆ ಬಂದು ಬಂಗಾರದ ಅಂಗಡಿಯ ಶೇಟ್ಟರ ಕೀಲಿ ತೆಗೆಯುವ ಕುರಿತು ನನ್ನ ಜೋತೆಯಲ್ಲಿ ತಂದಿರುವ ಹಸಿರು ಬಣ್ಣದ ಬ್ಯಾಗನಲ್ಲಿ 92 ಗ್ರಾಂ ಬಂಗಾರದ ಆಭರಣಗಳು ಮತ್ತು ನಗದು ಹಣ 9400-00 ರೂಪಾಯಿಗಳು ಹೀಗೆ ಒಟ್ಟು 221000-00 ಮೌಲ್ಯದ್ದು ಇರುವ ಬ್ಯಾಗನ್ನು ಕೆಳಗಡೆ ಇಟ್ಟು ಶೇಟ್ಟರ ತೆಗೆಯುತ್ತಿರುವಾಗ ಯಾರೋ ಇಬ್ಬರು ಕಳ್ಳರು ಬ್ಯಾಗ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DISTRICT REPORTED CRIMES

ಹಲ್ಲೆ ಪ್ರಕರಣ :

ಗ್ರಾಮೀಣ ಠಾಣೆ : ಶ್ರೀ ಮನೋಹರ ತಂದೆ ಶಿವಶರಣಪ್ಪ ಮದನಕರ ಸಾ|| ತಾಜಸುಲ್ತಾನ ಪೂರ ರವರು ನಾನು ಈ ಮೊದಲು 6-7 ತಿಂಗಳ ಹಿಂದೆ ಶೃತಿ ಎಂಬುವಳೊಂದಿಗೆ ಪ್ರೀತಿಸಿ ಲಗ್ನ ಮಾಡಿಕೊಂಡಿದ್ದು ಇದ್ದಕ್ಕೆ ಮನೆಯ ಹಿರಿಯರು ಒಪ್ಪಿಕೊಂಡಿದ್ದು ಆದರೆ ನಾನು ಬೇರೆ ಮನೆ ಮಾಡಿಕೊಂಡು ವಾಸವಾಗಿದ್ದು, ಇಂದು ಮುಂಜಾನೆ ನಾನು ನನ್ನ ಹೆಂಡತಿ ಮನೆಯಲ್ಲಿದ್ದಾಗ ಶರಣಪ್ಪ ನರೋಣಾ, ತಮ್ಮ ನಾಗರಾಜ, ತಾಯಿ ಸುಜಾತಾ, ತಂದೆ ಶಿವಶರಣಪ್ಪಾ ಮತ್ತು ಇನ್ನಿಬ್ಬರು ಮನೆಯ ಹತ್ತಿರ ಬಂದು ಅವಾಚ್ಯವಾಗಿ ಬೈದು ಹೊಡೆದು ಕಾಲಿನಿಂದ ಒದೆಯುತ್ತಾ ಹಾಗು ಶರಣಪ್ಪಾ ನರೋಣಾ ಇತನು ನನಗೆ ಮತ್ತು ನನ್ನ ಹೆಂಡತಿಗೆ ಚಾಕುವಿನಿಂದ ಹೊಡೆದಿರುತ್ತಾನೆ ಎಲ್ಲರೂ ಸೇರಿ ಕೊಲೆ ಮಾಡಲು ಪ್ರಯತ್ತಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವು ಪ್ರಕರಣ :
ಬ್ರಹ್ಮಪೂರ ಠಾಣೆ
:ಶ್ರೀ ಮಹಮದ್ ಇಸ್ಮಾಯಿಲ್ ತಂದೆ ಇಮಾಮ ಪಟೇಲ್ ಸಾ|| ಮಿಸ ಭಾ ನಗರ ಎಮ.ಎಸ.ಕೆ.ಮಿಲ್ ರೋಡ ಗುಲಬರ್ಗಾ ರವರು ನಾನು ದಿನಾಂಕ; 01-05-2011 ರಂದು ಸಾಯಂಕಾಲ ನನ್ನ ಹಿರೋ ಹೊಂಡಾ ಪ್ಯಾಶನ ಕೆಎ 33 ಇ-5853 ನೇದ್ದನ್ನು ಚೇತನ ಸ್ಕೂಲ ಹತ್ತಿರ ನಿಲ್ಲಿಸಿದಾಗ ಯಾರೋ ಕಳ್ಳರು ನನ್ನ ವಾಹನವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಟಕಾ ಪ್ರಕರಣ :

ಅಫಜಲಪೂರ ಠಾಣೆ :
ದಿನಾಂಕ 23/6/2011 ರಂದು ನಾನು (ಸರ್ಕಾರಿ ತರ್ಪೆಯಾಗಿ) ರಮೇಶ ಸಿ ಮೇಟಿ ಸಿಪಿಐ ಅಫಜಲಪೂರ ಮತ್ತು ನನ್ನ ಸಂಗಡ ಹೆಚ್ ಸಿ-510, ಪಿಸಿ-684,608 ರವರೆಲ್ಲರೂ ಪೆಟ್ರೊಲಿಂಗ್ ಕರ್ತವ್ಯದಲ್ಲಿದ್ದಾಗ ಅಬಜಲಖಾನ ಚೌಕ ಹತ್ತಿರ ಇಬ್ಬರು ವ್ಯಕ್ತಿಗಳು 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಚೀಟಿ ಬರೆದುಕೊಳ್ಳುತ್ತಿರುವಾಗ ನಾವೇಲ್ಲರೂ ಕೂಡಿಕೊಂಡು ಅವರನ್ನು ಹಿಡಿದು ವಿಚಾರಿಸಲಾಗಿ, ಶಿವಪ್ಪಾ ತಂದೆ ಕಲ್ಲಪ್ಪಾ ಪೂಜಾರಿ ಸಾ|| ಘತ್ತರಗಾ ಮತ್ತು ರೇವಣಸಿದ್ದಪ್ಪಾ ತಂದೆ ನಾಗಪ್ಪಾ ಜಮಾದಾರ ಸಾ|| ಬಂಕಲಗಾ ರವರು ಮಟಕಾ ಚೀಟಿ ಬರೆದುಕೊಳ್ಳುತ್ತಿರುವದರನ್ನು ದಸ್ತಗಿರಿ ಮಾಡಿ ಅವರಿಂದ ಎರಡು ಮೊಬಾಯಿಲ್ ಗಳು ಮತ್ತು 2410- ರೂಪಾಯಿಗಳು ಹಾಗು ಮಟಕಾ ಚೀಟಿಗಳನ್ನು ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.