POLICE BHAVAN KALABURAGI

POLICE BHAVAN KALABURAGI

30 October 2013

Gulbarga District Reported Crimes

ಕಳವು ಪ್ರಕರಣ:
ಸ್ಟೇಷನ ಬಜಾರ ಠಾಣೆ : ಶ್ರೀ ಶ್ಯಾಮಸುಂದರ ತಂಧೆ ಗಜಾನನರಾವ ಸಾ|| ಮನೆ ನಂ.1-89/ಎ ರಾಘವೇಂದ್ರ ನಿವಾಸ ಐವಾನ ಇ ಶಾಹಿ ಕಾಲೂಣಿ ಇವರು ದಿನಾಂಕ. 29.10.2013 ರಂದು ಮದ್ಯಾಹ್ನ 2.30 ಗಂಟೆಗೆ ತಮ್ಮ ವಯಕ್ತಿಕ ಕೆಲಸದ ನಿಮಿತ್ಯ ಹೊರಗಡೆ ಹೋಗಿದ್ದು ತಾಯಿ ಒಬ್ಬಳಿಗೆ ಮನೆಯಲ್ಲಿ ಬಿಟ್ಟು ಹೋಗಿದ್ದು ಅವರು ಮನೆಯಲ್ಲಿದ್ದು ಬಾಗಿಲು ಸ್ವಲ್ಪ ಮುಂದಕ್ಕೆ ಮಾಡಿ ಒಳಗಡೆ ಮಲಗಿಕೊಂಡಾಗ ಯಾರೋ ಒಬ್ಬ ಹೆಣ್ಣುಮಗಳು ಮನೆಯ ಬಾಗಿಲನ್ನು ದಬ್ಬಿ ತೆರೆದು ಮನೆಯಲ್ಲಿ ಬಂದು ಮನೆಯಲ್ಲಿಯ ದೇವರ ಜಗಲಿಯ ಮೇಲಿದ್ದ ಎರಡು ಬೆಳ್ಳಿಯ ಪ್ಲೇಟ,  ಮೂರು ಬೆಳ್ಳಿಯ ನಿಲಂಜನ, ಎರಡು ಬೆಳ್ಳಿಯ ಗ್ಲಾಸ, ಎರಡು ಬೆಳ್ಳಿಯ ಬೋಗೊನಿ, ಒಂದು ಬೆಳ್ಳಿಯ ಚಮಚ, ಒಂದು ಹಿತ್ತಾಳಿಯ ತಟ್ಟೆ ಹೀಗೆ ಒಟ್ಟು  ಅ.ಕಿ|| 24,500/- ರೂ ಬೆಲೆಬಾಳುವ ಬೆಳ್ಳಿಯ ವಸ್ತುಗಳನ್ನು ಕಳ್ಳತನ ಮಾಡಿಕೋಮಡು ಹೋಗಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀಮತಿ ಗಿರಿಜಾಬಾಯಿ ಗಂಡ ಶಿವಶಂಕರ ಕಣ್ಣಿ ಸಾಃ ಗುಬ್ಬಿ ಕಾಲೋನಿ ಗುಲಬರ್ಗಾ ಇವರು, ದಿನಾಂಕಃ 29-10-2013 ರಂದು 07:30 ಎ.ಎಂ. ಕ್ಕೆ ಶಾರದಬಾಯಿ ಇವಳ ಮನೆಯ ಅಂಗಳದಲ್ಲಿ ಹೋಗಿ ನನ್ನ ಮಗ ಕೊಟ್ಟ 50 ಸಾವಿರ ರೂ. ಕೊಡು ಅಂತಾ ಕೇಳಿದಕ್ಕೆ ಶಾರದಾಬಾಯಿ ಇವಳು ಸಿಟ್ಟಿಗೆ ಬಂದು ಭೋಸಡಿ ನಿನಗೆ ಹಣ ಕೊಡುವುದಿಲ್ಲ ರಂಡಿ ನೀನು ಏನು ಮಾಡಿಕೊಳ್ಳುತ್ತಿ ಮಾಡಕೋ ಅಂತಾ ಜಗಳಕ್ಕೆ ಬಿದ್ದು ತಲೆಯ ಕೂದಲು ಹಿಡಿದಳು ಅಷ್ಟರಲ್ಲಿ ಶರಣಪ್ಪಾ ಮತ್ತು ಪ್ರಭು ಮನೆಯಿಂದ ನಾಗಮ್ಮ ಅವಳೊಂದಿಗೆ ಅಂಗಳಕ್ಕೆ ಬಂದು ಶರಣಪ್ಪ ಮತ್ತು ಪ್ರಭು ಇವರು ನನ್ನ ಕೈಗಳನ್ನು ಒತ್ತಿ ಹಿಡಿದು ಅವಮಾನಗೊಳಸಿದ್ದು ಮತ್ತು ನಾಗಮ್ಮ ಇವಳು ಕೈಯಿಂದ ಬೆನ್ನಿನ ಮೇಲೆ ಹೊಡೆದು ಗುಪ್ತಗಾಯ ಪಡಿಸಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಹಲ್ಲೆ ಪ್ರಕರಣಗಳು :
ಫರತಾಬಾದ ಠಾಣೆ :
ಶ್ರೀ ಬಸಪ್ಪ ತಂದೆ ಬೈಲಪ್ಪ ಬಾಸಗಿ ಸಾ: ಜೋಗುರ   ರವರು ದಿನಾಂಕ 28-10-2013 ರಂದು ತಮ್ಮ ಹೊಲದಲ್ಲಿನ ಸೂರ್ಯಪಾನ ರಾಶಿಯನ್ನು ಮಾಡುವ ಸಲುವಾಗ ನಮ್ಮೂರಿನ ಹಣಮಂತ ಯಳಸಂಗಿ ಇವರ ರಾಶಿಯ ಮಸೀನ ತಗೆದುಕೊಂಡು ನಾನು ಮತ್ತು ಅವರ ಆಳು ಮಗ ಶರಣು ಮ್ಯಾಕೇರಿ ಇಬ್ಬರು ಕೂಡಿಕೊಂಡು ನಮ್ಮ ಹೊಲಕ್ಕೆ ಹೊರಟಿದ್ದೇವು. ನಮ್ಮ ಹೊಲಕ್ಕೆ ಹೋಗುವ ದಾರಿಯ ಮಧ್ಯದಲ್ಲಿ ಇರುವ ನಮ್ಮ ಅಣ್ಣತಮ್ಮಕಿಯ ಹೊಲದವರಾದ ಶರಣಪ್ಪಾ ಮತ್ತು ಅವನ ಅಕ್ಕಳಾದ ಭೀಮಾರತಿ ಇವರು ಬದು ಇದ್ದು ನಮ್ಮ ಹೊಲ ಇದೆ ಇಲ್ಲಿ ದಾರಿ ಇಲ್ಲ ಇಲ್ಲಿಂದ ಹೋಗಬೇಡ ಅಂತಾ ಹೇಳಿದಾಗ ಬಾಯಿಮಾತಿನ ಜಗಳವಾಗಿದ್ದು  ರಾತ್ರಿ 8:30 ಗಂಟೆಯ ಸುಮಾರಿಗೆ ನಮ್ಮೂರಿನ ಹಿರಿಯರಲ್ಲಿ ಸದರಿ ವಿಷಯವನ್ನು ಹೇಳಿ ಬರಲು ನಾನು ಮತ್ತು ನಮ್ಮ ತಾಯಿ ಅಂಬಾಬಾಯಿ ಇಬ್ಬರು ಕೂಡಿಕೊಂಡು ಹೋಗಿ ಹೇಳಿ ನಮ್ಮ ಮನೆಯ ಮುಂದೆ ಬರುತ್ತಿರುವಾಗ ನಮ್ಮ ಅಣ್ಣತಮ್ಮಕೀಯವರಾದ 1) ಶರಣಪ್ಪ ತಂದೆ ದೆವೇಂದ್ರಪ್ಪ ಭಾಸಗಿ 2) ದೆವೇಂದ್ರ ತಂದೆ ತಿಪ್ಪಣ್ಣ ಭಾಸಗಿ 3) ಅನಿಲ ತಂದೆ  ದೆವೇಂದ್ರ ಭಾಸಗಿ ಮತ್ತು 4) ಭೀಮಾರಥಿ ತಂದೆ ದೆವೇಂದ್ರ ಭಾಸಗಿ ಇವರೆಲ್ಲರೂ ಕೂಡಿಕೊಂಡು  ಬಂದು ನಮ್ಮನ್ನು ತಡೆದು ನನಗೆ ಏ ರಂಡಿ ಮಗನೆ ಶರಣ್ಯ ನಿನಗ ಹೊಲದಾಗ ದಾರಿ ಬೇಕು ಬಾ ಈಗ ಮಗನೆ ಅಂತಾ ಬೈಯುತ್ತಿದ್ದಾಗ ನಾನು ಸುಮ್ಮನೆ ಬೈಯಬೇಡ ನಾಳೆ ಹಿರಿಯರ ಮುಂದೆ ಕುಳಿತು ಬಗೆ ಹರಿಸಿಕೊಳ್ಳಮಿ ಅಂತಾ ಹೇಳಿದಾಗ ಅವಾಚ್ಯಶಬ್ದಗಳಿಂದ ಬೈಯುತ್ತಾ ಶರಣಪ್ಪ ಇತನು ಕೈ ಮುಷ್ಟಿ ಮಾಡಿ ನನ್ನ ಹೊಟ್ಟೆಯ ಮೇಲೆ ಗುದ್ದಿರುತ್ತಾನೆ, ದೆವೇಂದ್ರ ಇತನು ಕೈಯಿಂದ ಕಪಾಳ ಮೇಲೆ ಹೊಡೆದಿರುತ್ತಾನೆ.ಆಗ ಅಲ್ಲೆಯಿದ್ದ ನಮ್ಮ  ತಾಯಿ ಅಂಬಾಬಾಯಿ ಬಿಡಿಸಲು ಬಂದರೆ ಅವಳಿಗೆ ಭಿಮಾರಥಿ ಇವಳು ಈ ರಂಡಿದೆ ಎಲ್ಲಾ ಅಂತಾ ಬೈದು ಸೀರೆ ಹಿಡಿದು ಎಳೆದಾಡಿ ಹೊಟ್ಟೆಯ ಮೇಲೆ ಗುದ್ದಿ ನೂಕಿ ಕೊಟ್ಟಿರುತ್ತಾಳೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಫಜಲಪೂರ ಠಾಣೆ :
ಶ್ರೀ ಶ್ರೀಶೈಲ ತಂದೆ ಧರ್ಮಣ್ಣಾ ಜಮಾದಾರ ಇವರು ದಿನಾಂಕ29-10-2013 ರಂದು ಬೆಳಿಗ್ಗೆ 07 00 ಗಂಟೆಗೆ ನಾನುನಮ್ಮಮನೆಯ ಮುಂದೆ ಇದ್ದ ನಳದಿಂದ ನೀರುತುಂಬುತ್ತಿರುವಾಗ ನಮ್ಮ ಮನೆಯಹತ್ತಿರ ಇದ್ದ 1]ಕಲ್ಲಪ್ಪಗೌಡ ತಂದೆಸಂಗಣಗೌಡಪಾಟೀಲ,2]ಮಹಾರುದ್ರಪ್ಪ ತಂದೆ ಸಂಗಣಗೌಡ ಪಾಟೀಲ,3]ಸಂಗಣಗೌಡ ತಂದೆಚಂದ್ರಶಾ ಪಾಟೀಲಇವರುತಮ್ಮ ಕೈಯಲ್ಲಿ ಬಡಿಗೆಗಳನ್ನು ಹಿಡಿದುಕೊಂಡು ನನ್ನಹತ್ತಿರಬಂದು  ಭೋಸಡಿ ಮಗನೆಶಿರಶ್ಯಾ ನಿಮಗೆಎಷ್ಟು ಸಲ ಹೇಳಿದರು ಕೇಳದೆ ಮತ್ತೆ ಬಚ್ಚಲನೀಲುರಸ್ತೆಗೆ ಬಿಡುತ್ತಿರಿ ಮಕ್ಕಳ್ಯ ನಿಮಗ ಸೊಕ್ಕೆ ಬಹಳಬಂದಿದೆನೋಡಕೋತಿವಿ ಅಂತಾಅನ್ನುತ್ತಿರುವಾಗ ನಾನು ನಮ್ಮ ಬಚ್ಚಲ ನೀರುರಸ್ತೆಯಿಲ್ಲಿ ಬಿಟ್ಟರೆ  ನಿಮಗೇನ ತೊಂದರೆ ಆಗುತ್ತದೆ ಅಂತಾ ಕೇಳಿದ್ದಕ್ಕೆ ಎಲ್ಲರು ಸೇರಿ ಕೈಯಿಂದ ಮತ್ತು ಬಡಿಗೆಯಿಂದ ಹೊಡೆ ಬಡೆ ಮಾಡಿ ನಿಮಗ ಜೀವ ಸಹೀತಬಿಡುವುದಿಲ್ಲ ಅಂತಾ ಅನ್ನುತ್ತಾ ಅಲ್ಲಿಂದ ಹೋದರು, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ :
ತಿರುಪತಿ ತಂದೆ ಇಟಪ್ಪಾ ಅಡಕಿ  ಸಾ: ಹಾಗರಗುಂಡಗಿ  ತಾ:ಜಿ: ಗುಲಬರ್ಗಾ  ರವರ  ಹೊಲ ಸರ್ವೆ ನಂ: 199 ನೇದ್ದು 3 ಎಕರೆ 20 ಗುಂಟೆ ಜಮೀನು ನಮ್ಮೂರಿನ ನಾಗಣ್ಣಾ ವಜಾಪೂರೆ ಇವರ ಮಧ್ಯಸ್ಥಿಕೆಯಲ್ಲಿ 1 ಎಕರೆಗೆ 7 ಲಕ್ಷ 10 ಸಾವಿರ ರೂಪಾಯಿಂತೆ ದಿನಾಂಕ: 23-4-2013 ರಂದು ಶಿವಾನಂದ ಗಾಲಿಬಾ ಇವರಿಗೆ ನಮ್ಮ ಹೊಲ 3 ಎಕರೆ 20 ಗುಂಟೆ ಹೊಲವನ್ನು ಮಾರಾಟ ಮಾಡಿದ್ದು ಇರುತ್ತದೆ. 3 ಎಕರೆ 20 ಗುಂಟೆ ಜಮೀನಿನಲ್ಲಿ 2 ಎಕರೆ 20 ಗಂಟೆ ಜಮೀನು ಅವರ ಹೆಸರಿಗೆ ನೊಂದಾಣಿ ಮಾಡಿಕೊಟ್ಟಿದ್ದು, ಅದರಲ್ಲಿ ಇನ್ನು 64 ಸಾವಿರ ಹಣ ಕೊಡುವದು ಬಾಕಿ ಇಟ್ಟುಕೊಂಡಿದ್ದು ಅಲ್ಲದೆ ಇನ್ನೂಳಿದ 1 ಎಕರೆ ಜಮೀನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಹೊಲ ಮಾರಾಟ ಮಾಡಿದ ಮಧ್ಯಸ್ಥಿಕೆ ವಹಿಸಿಕೊಂಡ ನಾಗಣ್ಣಾ ವೈಜಾಪೂರ ಇವರಿಗೆ ನಮ್ಮ ತಮ್ಮ ಗಣಪತಿ ಕೇಳಲು ಹೋದಾಗ ಅವನು ಇನ್ನುಳಿದ 1 ಎಕರೆ ಜಮೀನು ಖರಾಬ ಜಮೀನಾಗಿದ್ದರಿಂದ ಅದನ್ನು ತಗೆದುಕೊಳ್ಳುವುದಿಲ್ಲ, ಹಣವು ಕೊಡುವುದಿಲ್ಲ ಅಂತಾ ಹೇಳಿದ್ದನ್ನು ನಿನ್ನೆ ದಿನಾಂಕ: 28-10-2013 ರಂದು 6.30 ಪಿ.ಎಮ್ಕ್ಕೆ ನನ್ನ ತಮ್ಮನು ಕಿರಾಣ ಅಂಗಡಿಗೆ ಬಂದು ನನಗೆ ತಿಳಿಸಿದನು.  ಆಗ ನಾನು ನಾಳೆ ಬೆಳಗ್ಗೆ ಕೇಳಿದರಾಯಿತು ಅಂತಾ ಸುಮ್ಮನೆ ಆಗಿ ಕಿರಾಣಿ ಅಂಗಡಿಯಲ್ಲಿ ಕುಳಿತ್ತೇನು. ರಾತ್ರಿ 7-30 ಗಂಟೆಯ ಸುಮಾರಿಗೆ ನಾಗಣ್ಣಾ ವೈಜಾಪೂರ ಈತನ ತಮ್ಮಂದಿರಾದ 1) ಶರಣಪ್ಪಾ ತಂದೆ ರಾಣೋಜಿ ವೈಜಾಪೂರ, 2) ಶ್ರೀಮಂತ ತಂದೆ ರಾಣೋಜಿ ವೈಜಾಪೂರ ಹಾಗೂ ಅವರ ಸಂಬಂಧಿ ಆಕಾಶ ತಂದೆ ತೇಜಿರಾಯ ವೈಜಾಪೂರ ಇವರೆಲ್ಲರೂ ಕೂಡಿ ನಮ್ಮ ಕಿರಾಣಿ ಅಂಗಡಿಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಹೊಡೆಬಡೆ ಮಾಡಿ ಜೀವದ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೃಹಿಣಿಗೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ :

ಶ್ರೀಮತಿ ಸುನೀತಾ ಗಂಡ ಸಂತೋಷ ಕುಮಾರ ಹಾಗರಗಿ ಸಾ:ಶಹಾಬಜಾರ ಮರಗಮ್ಮ ಗುಡಿಯ ಹತ್ತಿರ ಗುಲಬರ್ಗಾ ನನ್ನ ಮದುವೆಯು ದಿನಾಂಕ 13-05-2007 ರಂದು ಗುಲಬರ್ಗಾ ನಗರದ ಶಿವಾಜಿ ನಗರದಲ್ಲಿ ಸಂತೋಷ ಕುಮಾರ ಹಾಗರಗಿ ಇವರೊಂದಿಗೆ ಶಿವಾಜಿನಗರದಲ್ಲಿರುವ ಶ್ರೀ ಬಸಲಿಂಗೇಶ್ವರ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ನನ್ನ ತವರು ಮನೆಯವರು ಮದುವೆ ಮಾಡಿಕೊಟ್ಟಿದ್ದು, ಇರುತ್ತದೆ. ಮದುವೆಯಾದ 2 ತಿಂಗಳ ವರೆಗೆ ನನಗೆ ಚೆನ್ನಾಗಿ ಇಟ್ಟುಕೊಂಡು ನಂತರ ಪತಿ ಸಂತೋಷ ಕುಮಾರ , ಅತ್ತೆ ಬಸವಲಿಂಗಮ್ಮ ಮತ್ತು ಮಾವ ಚಂದ್ರಕಾಂತ ಇವರು ನಿನ್ನ ತವರು ಮನೆಯಿಂದ 5 ತೊಲೆ ಬಂಗಾರ 1 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ ಎಂದು ಹೇಳುತ್ತಾ ತಾನು ತರದೇ ಹೋದ ಸಂದರ್ಭದಲ್ಲಿ ಆಗಾಗ ತನಗೆ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡುತ್ತಿದ್ದರು ದಿನಾಂಕ 27-10-2013 ರಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ ಮನೆಯಲ್ಲಿದ್ದಾಗ ನಿನ್ನ ತವರು ಮನೆಯಿಂದ 5 ತೊಲೆ ಬಂಗಾರ ಹಾಗೂ 1 ಲಕ್ಷ ರೂಪಾಯಿ ನಿನ್ನ ತವರು ಮನೆಯಿಂದ ವರದಕ್ಷಿಣೆ ಹಣ ಬಂಗಾರ ತೆಗೆದುಕೊಂಡು ಬರುವಂತೆ ಒತ್ತಾಯಿಸಿ ಪತಿ ಸಂತೋಷ, ಅತ್ತೆ ಬಸಲಿಂಗಮ್ಮ ಮತ್ತು ಮಾವ ಚಂದ್ರಕಾಂತ ಇವರು ಕೂಡಿಕೊಂಡು ನನಗೆ ವರದಕ್ಷಿಣೆ ಹಣ ಬಂಗಾರ ತರುವವರೆಗೆ ಮನೆಗೆ ಬರಬೇಡಾ ಅಂತಾ ಹೊಡೆ ಬಡೆ ಮಾಡಿ ಕೂದಲು ಹಿಡಿದು ಎಳೆದಾಡಿ ಎಡ ಕಪಾಳ ಮೇಲೆ ಹೊಡೆದು, ನನ್ನ ಚಿಕ್ಕ ಮಗಳಿಗೆ ಅವರ ಹತ್ತಿರ ಇಟ್ಟುಕೊಂಡು ನನಗೆ ಮನೆಯಿಂದ ಹೊರ ಹಾಕಿದ್ದು, ಇರುತ್ತದೆ. ಅಲ್ಲದೇ ನನ್ನ ತಂದೆ ಕೆಲಸ ನಿರ್ವಹಿಸುತ್ತಿರುವ ಗುಲಬರ್ಗಾ ನಗರದ ಸುಪರ ಮಾರ್ಕೆಟ ಬಡಾವಣೆಯ ದಂಡೋತಿ ಹೋಲ್ ಸೇಲ್ ಬಟ್ಟೆ ಅಂಗಡಿಗೆ ಬಂದು ನನ್ನ ತಂದೆಗೆ ನನ್ನ ಪತಿಯವರು ಜೀವದ ಬೆದರಿಕೆ ಒಡ್ಡಿ ಅವಮಾನ ಮಾಡಿದ್ದು, ಇರುತ್ತದೆ ನನ್ನ ಪತಿಯವರು ಹಾಗೂ ಅವರ ಕುಟುಂಬದವರು ನನಗೆ ಆಗಾಗ ಮೇಲಿಂದ ಮೇಲೆ ಕಿರುಕುಳ ನೀಡುತ್ತಾ ಬಂದಿರುತ್ತಾರೆ.ಆದ್ದರಿಂದ ದಯಾಳುಗಳಾದ ತಾವುಗಳು ಈ ನನ್ನ ಮನವಿ ಅರ್ಜಿಯನ್ನು ಪರಿಶೀಲಿಸಿ ನನಗೆ ವರದಕ್ಷಣೆ ಕಿರುಕುಳ ನೀಡಿ ಕೊಲೆಗೆ ಯತ್ನ ಗೈದ ಹಾಗೂ ನನ್ನ ತಂದೆ- ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.