POLICE BHAVAN KALABURAGI

POLICE BHAVAN KALABURAGI

03 April 2013

GULBARGA DISTRICT REPORTED CRIMES


ವರದಕ್ಷಿಣೆ ಕಿರುಕುಳ ಪ್ರಕರಣ:
ಮಹಿಳಾ ಪೋಲಿಸ ಠಾಣೆ: ಶ್ರೀಮತಿ ಹೇಮಲತಾ @ ಲಕ್ಷ್ಮಿ ಗಂಡ ಸುನೀಲ ಚವ್ಹಾಣ ಸಾ:ದೇವಾಜಿ ನಾಯಕ ಸ್ಕೂಲ ಹತ್ತಿರ ಮಡ್ಡಿತಾಂಡಾ ಪಿಲ್ಟರಬೆಡ ಗುಲಬರ್ಗಾ ರವರು ನನ್ನ ಮದುವೆಯು ಗುರು ಹಿರಿಯರು ಸಮ್ಮುಖದಲ್ಲಿ ದಿನಾಂಕ24-04-2012 ರಂದು ಸುನೀಲ ತಂದೆ ಪ್ರೇಮದಾಸ ಚವ್ಹಾಣ ಸಾ: ಕುಸ್ರಂಪಳ್ಳಿ ತಾಂಡಾ ತಾ:ಚಿಂಚೋಳಿ ಇವರ ಜೊತೆ ವಿವಾಹವಾಗಿದ್ದು  ಮದುವೆಯ ಮಾತುಕತೆ ಸಂದರ್ಭದಲ್ಲಿ ವರನಿಗೆ  2 ತೊಲೆ ಬಂಗಾರ 1 ಪ್ಲಾಟ ಹಾಗೂ ಮನೆ ಕಟ್ಟುವ ಸಲುವಾಗಿ 2.00 ಲಕ್ಷ ರೂಪಾಯಿಗಳು ಕೊಟ್ಟಿರುತ್ತಾರೆ. ಮದುಎಯಾದ 3 ತಿಂಗಳಲ್ಲಿ  ಇನ್ನೂ  ನಾಲ್ಕು ಲಕ್ಷ ರೂಪಾಯಿಗಳನ್ನು ತವರು ಮನೆಯಿಂದ ತೆಗೆದುಕೊಂಡು ಬರುವಂತೆ ನನ್ನ ಗಂಡ ಅತ್ತೆ ಮಾವ ಇವರೆಲ್ಲರು ಜಗಳ ಮಾಡಿರುತ್ತಾರೆ ಅಲ್ಲದೇ ನನ್ನ ಗಂಡನು ಅವಾಚ್ಯವಾಗಿ ಬೈದು ದೈಹಿಕ ಹಿಂಸೆ ನೀಡುತ್ತಾ ಬಂದಿದ್ದರಿಂದ ಹಿರಿಯರ ಸಮ್ಮುಖದಲ್ಲಿ ಪಂಚಾಯತ ಮಾಡಿ ಸಮಾಜಾಯಿಸಿರುತ್ತಾರೆನಾನು ಮೊದಲೆ ಅಂಗವಿಕಲೆಯಾಗಿದ್ದರಿಂದ ನನ್ನ ಗಂಡನು ನನಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ತೊಂದರೆ ನೀಡುತ್ತಿದ್ದಾನೆ. ನನ್ನ ಗಂಡನು ಆತನ ಕಾಕನಾದ ಅಂಬರಸಿಂಗ ಚವ್ಹಾಣಮಾಣಿಕ ಚವ್ಹಾಣ, ಲಲಿತಾಬಾಯಿಸುಮಿತ್ರಾಬಾಯಿ ಹಾಗೂ ಸುನೀಲನ ತಂದೆ ಪ್ರೇಮದಾಸ ಚವ್ಹಾಣ ಇವರೆಲ್ಲರ ಕೈವಾಡವಿರುತ್ತದೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ: 20/2013 ಕಲಂ 498 (ಎ),323.504. ಸಂಗಡ 34 ಐ.ಪಿ.ಸಿ ಮತ್ತು 3 & 4 ಡಿ.ಪಿ.ಎಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ,
ಗೃಹಿಣಿಗೆ ಕೊಲೆ ಮಾಡಿ ನೇಣು ಹಾಕಿದ ಬಗ್ಗೆ:
ಕಮಲಾಪೂರ ಪೊಲೀಸ್ ಠಾಣೆ:ಶ್ರೀಮತಿ ಶೋಭಾದೇವಿ ಗಂಡ ಅಶೋಕ ಜಂಬಗಾ ವಯಸ್ಸು:40 ಸಾ; ಕಗ್ಗನಮಡಿ ತಾ;ಜಿ;ಗುಲಬರ್ಗಾ ರವರು ನನ್ನ ಮಗಳಾದ ಜಯಶ್ರೀ ಎಂಬುವವಳಿಗೆ  ನಮ್ಮ ಸಂಭಂದಿಕರಾದ ಅಂಬಣ್ಣಾ ಶಟಗೋಳ ಇವರ ಮಗನಾದ ಮಲ್ಲಿಕಾರ್ಜುನ ಸಾ||ಓಕಳಿ ಗ್ರಾಮ ದವನಿಗೆ 10 ತಿಂಗಳ ಹಿಂದೆ ನಮ್ಮೂರಲ್ಲಿಯೇ ಲಗ್ನ ಮಾಡಿಕೂಟ್ಟಿರುತ್ತೆವೆ. ನನ್ನ ಗಂಡನಾದ ಅಶೋಕ ತಂದೆ ಮಲ್ಕಪ್ಪಾ ಇವರ ನಮ್ಮ ಉಪ-ಜೀವನಕ್ಕಾಗಿ ಹೋರದೇಶಕ್ಕೆ ಹೋಗಿರುತ್ತಾರೆ. ನನ್ನ ಅಳಿಯನಾದ ಮಲ್ಲಿಕಾರ್ಜುನ ಮತ್ತು ಅವನ ಅಕ್ಕಂದ್ದಿರಾದ ರಾಧಾ ಮತ್ತು ಕಸ್ತೂರಿಬಾಯಿವರು ಆಗಾಗ ವಿನಾಃಕಾರಣ ಜಗಳ ತೆಗೆದು ಅವಳ ಸಂಶಯ ಮಾಡಿ ಬೈಯುವದು ಹೋಡೆ ಬಡೆ ಮಾಡುತ್ತಿದ್ದರು. ನನ್ನ ಮಗಳ ಜಯಶ್ರೀ ಇವಳು ನಮ್ಮೂರ ಜಾತ್ರೆಗೆ 7-8 ದಿವಸಗಳ ಹಿಂದೆ ಬಂದಾಗ, ಅಳಿಯ ಮಗಳಿಗೆ ತಿಳುವಳಿಕೆ ನೀಡಿ ನಂತರ ಗಂಡನ ಮನೆಗೆ ಕಳುಹಿಸಿದೆವು. ದಿನಾಂಕ:02-04-2013 ರಂದು ಸಾಯಾಂಕಾಲ 6-30 ಗಂಟೆ ಸುಮಾರಿಗೆ ನಮ್ಮ ಮೈದುನನ ಮಗನಾದ ಸತೀಶನಿಗೆ ಓಕಳಿ ಗ್ರಾಮದಿಂದ ಯಾರೂ ಪೋನ ಮಾಡಿ ಜಯಶ್ರೀ ನೇಣು ಹಾಕಿಕೂಂಡು ಸತ್ತಿರುತ್ತಾಳೆ ಅಂತಾ ತಿಳಿಸಿದ್ದರಿಂದ, ನಾವು ಹೋಗಿ ನೋಡಲು ನನ್ನ ಮಗಳಾದ ಜಯಶ್ರೀ ಇವಳಿಗೆ ಆಕೆಯ ಗಂಡನಾದ ಮಲ್ಲಿಕಾರ್ಜುನ ಮತ್ತು ನಾದನಿಯರಾದ ದಾವಮ್ಮಾ ಮತ್ತು ಕಸ್ತೂರಿಬಾಯಿ ಇವರು ಜಗಳ ತೆಗೆದು  ಸಾಯಂಕಾಲ 4=00 ಗಂಟೆ ಸುಮಾರಿಗೆ ಜೀವ ಹೋಡೆದು ಹಗ್ಗದಿಂದ ನೇಣು ಹಾಕಿರುತ್ತಾರೆ ಅನ್ನುವದು ತಿಳಿದು ಬಂದಿರುತ್ತದೆ ಅಂತಾ ಮೃತಳ ತಾಯಿಯವರು ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ: 27/2013 ಕಲಂ, 498 (ಎ) 302 ಸಂಗಡ  34 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ,