POLICE BHAVAN KALABURAGI

POLICE BHAVAN KALABURAGI

31 May 2012

GULBARGA DIST REPORTED CRIMES


ಮೋಟಾರ ಸೈಕಲ ಕಳ್ಳತನ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ: ಶ್ರೀ.ಅಬ್ಬಾಸ ಅಲಿ ತಂದೆ ಅಮಿನಸಾಬ ಸಾ|| ಹೀರಾ ನಗರ ಹೀರಾಪೂರ ಗುಲಬರ್ಗಾ ರವರು ನಾನು ದಿನಾಂಕ: 29/04/2012 ರಂದು 1330 ಗಂಟೆಗೆ ಶರಣಬಸವೇಶ್ವರ ಕೆರೆ ಗಾರ್ಡನ ಎದುರುಗಡೆ ನನ್ನ ದ್ವಿಚಕ್ರ ವಾಹನ ಹೀರೊಹೊಂಡಾ ಸ್ಪೆಂಡರ್ ಪ್ಲಸ ನಂ ಕೆಎ 32 ಕ್ಯೂ 3377 ಅ||ಕಿ|| 25,000/-  ನೇದ್ದನ್ನು ನಿಲ್ಲಿಸಿದ್ದು,   ಮರಳಿ ಬಂದು ನೋಡಿದಾಗ ನಿಲ್ಲಿಸಿರುವ ಸ್ಥಳದಲ್ಲಿ ವಾಹನವು ಇರುವದಿಲ್ಲ. ಯಾರೋ ಕಳ್ಳರು ನನ್ನ ಮೋಟರ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 67/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕ್ಷುಲಕ್ಕ ಕಾರಣಕ್ಕಾಗಿ ಕೊಲೆ:
ಚಿತ್ತಾಪೂರ ಪೊಲೀಸ್ ಠಾಣೆ:ಶ್ರೀ ಸಾಬಣ್ಣ ತಂದೆ ಬೀರಪ್ಪ ಮುಗಟಿ ಸಾ|ಮರಗೋಳ ಗ್ರಾಮ ತಾ|| ಚಿತ್ತಾಫೂರ ರವರು ನಾನು ಮನೆಯ ಮುಂದೆ ಕಟ್ಟೆಯ ಮೇಲೆ ಕುಳಿತುಕೊಂಡು ತಂಬಾಕು ಹಾಕಿಕೊಂಡು ರಸ್ತೆಯ ಬಾಜು ಉಗುಳಿದಾಗ ಬಾಜು ಮನೆಯ ಬುಜ್ಜಮ್ಮ ಗಂಡ ದಸ್ತಯ್ಯಾ ಈಳಗೇರ ಇವಳು ಏ ಈ ಕಡೆ ಯಾಕೆ ಉಗುಳುತ್ತೀ ಅಂತ ಕೇಳಿದಾಗ ನಾನು ನನ್ನ ಜಾಗದಲ್ಲಿ ಉಗುಳಿದ್ದೇನೆ ಅಂತ ಅಂದಾಗ ಸದರಿಯವಳು ಅವಾಚ್ಯವಾಗಿ ಬೈಯುತ್ತಿದ್ದಾಗ ಮರೆಪ್ಪ ಇತನು ಮನೆಯಿಂದ ಹೊರಗೆ ಬಂದು ನಮ್ಮ ಅಪ್ಪ ನಮ್ಮ ಜಾಗದಲ್ಲಿ ಉಗುಳಿದ್ದಾನೆ ಅವನಿಗೆ ಯಾಕ್ಎ ಬೈಯುತ್ತಿ ಅಂತಾ ಬುಜ್ಜಮ್ಮನನ್ನು ಕೇಳಿದಾಗ ಅಕೆ ಗಂಡ ದಸ್ತಯ್ಯಾ ಗಂಡ ಶಂಕ್ರಯ್ಯಾ ಈಳಗೇರ ಇವನು ನನ್ನ ಮಗನಿಗೆ ತೆಕ್ಕೆಗೆ ಬಿದ್ದು ಅಲ್ಲಿಯೇ ಇದ್ದ ಒಂದು ಕಟ್ಟಿಗೆ ತೆಗೆದುಕೊಂಡು ನನ್ನ ಮಗನ ಹೆಡಕಿಗೆ ಜೋರಾಗಿ ಹೊಡೆದನು ಹಾಗೆಯೇ ನನ್ನ ಮಗ ನೆಲಕ್ಕೆ ಬಿದ್ದು ಬಿಟ್ಟನು. ಅವನನ್ನು ಉಪಚಾರ ಕುರಿತು ಚಿತ್ತಾಫೂರ ಸರಕಾರಿ ದವಾಖಾನೆಗೆ ಟಂಟಂ ಗಾಡಿಯಲ್ಲಿ ಹಾಕಿಕೊಂಡು ಚಿತ್ತಾಫೂರ ಸರಕಾರಿ ಆಸ್ಪತ್ರೆಗೆ ಬಂದೆವು, ಆಸ್ಪತ್ರೆಯ ವೈದ್ಯಾಧಿಕಾರಿಗಳು ಮೃತಪಟ್ಟಿರುತ್ತಾನೆ. ಅಂತ ತಿಳಿಸಿದರು. ನನ್ನ ಮಗ ಮರೆಪ್ಪ ಈತನಿಗೆ ದಸ್ತಯ್ಯಾ ಈಳಗೇರ ಮತ್ತು ಅವನ ಹೆಂಡತಿ ಬುಜ್ಜಮ್ಮ ಇವರು ಅವಾಚ್ಯವಾಗಿ ಬೈದು ನನ್ನ ಮಗನಿಗೆ ಕೈಯಿಂದ ಮತ್ತು ಬಡಿಗೆಯಿಂದ ಹೊಡೆದು ಕೊಲೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 54/2012 ಕಲಂ 302,504, ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

30 May 2012

GULBARGA DIST REPORTED CRIME


ಮನುಷ್ಯ ಕಾಣೆಯಾದ ಪ್ರಕರಣ:
ಆಳಂದ ಪೊಲೀಸ್ ಠಾಣೆ: ಶ್ರೀಮತಿ, ಸೀತಾಬಾಯಿ ಗಂಡ ನಾಗೇಶ ಅಲಿಯಾಸ ನಾಗೇಂದ್ರ ಸಿಂಗೆ ಸಾ: ಬಂಗರಗಾ ರವರು ನಾನು 4 ವರ್ಷದ ಹಿಂದೆ ಬಂಗರಗಾ ಗ್ರಾಮದ ನಾಗೇಶನೊಂದಿಗೆ ಮದುವೆಯಾಗಿದ್ದೆನೆ.ನಮ್ಮ ಮನೆಯಲ್ಲಿ ನನಗೆ  2 ಜನ ಗಂಡು ಮಕ್ಕಳು ಇದ್ದು, ನನ್ನ ಅತ್ತೆ , ನನ್ನ ಗಂಡ  ಜನರು ಇದ್ದು. ನನ್ನ ಗಂಡ ರುದ್ರವಾಡಿ ಗ್ರಾಮ ಪಂಚಾಯತಿಯಲ್ಲಿ ಪಂಪ ಅಪರೇಟರ ಅಂತ ಕೂಲಿ ಕೆಲಸ ಮಾಡುತ್ತಾನೆ.  ಪ್ರತಿ ದಿವಸ ನಮ್ಮ ಗ್ರಾಮದಲ್ಲಿ ಒಟ್ಟು 6 ಮೋಟಾರಗಳಿಗೆ ನೀರು ಬಿಡಲು ದಿನಾಲು ನನ್ನ ಗಂಡ  ಸೈಕಲ ತೆಗೆದುಕೊಂಡು ಹೋಗಿ ನೀರು ಬಿಟ್ಟು ರಾತ್ರಿ 8-00 ಗಂಟೆಗೆ ಮನೆಗೆ ಬರುತ್ತಿದ್ದನು. ನನ್ನ ಗಂಡ ಬರದೆ ಇದ್ದುದರಿಂದ ನಮ್ಮ ಅತ್ತೆ ಬೀಮಬಾಯಿ ಮೈದುನ ರಾಜೇಂದ್ರ ತಂದೆ ವಿಠಲ ಕಲಕೇರೆ ಕೂಡಿಕೊಂಡು ಮೊಬಾಯಿಲ್ ಗೆ ಕಾಲ್ ಮಾಡಿದಾಗ  ನಾಟ್ ರಿಚೇಬಲ್ ಅಂತಾ ಬಂತು ನಾವೇಲ್ಲರೂ ಹುಡಕಾಡಿದರೂ ಎಲ್ಲಿಯೂ ಸಿಕ್ಕಿರುವದಿಲ್ಲ. ನನ್ನ ಗಂಡ ಕಾಣೆಯಾದ ಬಗ್ಗೆ ನಮ್ಮೂರು ಸುಭಾಷ ಮತ್ತು ದರ್ಮರಾಯ ಇವರ ಮೇಲೆ ಸಂಶಯವಿರುತ್ತದೆ. ಕಾಣೆಯಾದ ಮನುಷ್ಯನ ಚಹರೆ ಪಟ್ಟೆ: ಎತ್ತರ 5 ಅಡಿ 6 ಇಂಚು ಉದ್ದ, ಸುಮಾರು 35 ವರ್ಷ ವಯಸ್ಸು, ಮೈಬಣ್ಣ ಗೋಧಿ ವರ್ಣ. ಸಣ್ಣ ಮೀಸೆ, ಕರೀಯ ಪ್ಯಾಂಟು, ಬಿಳಿ ಬಣ್ಣದ ಪುಲ್ಲ ಶರ್ಟ, ಕಾಲಲ್ಲಿ ಕಂಪನೀಯ ಕೆಂಪು ಬಣ್ಣದ ಚಪ್ಪಲಿ, ಹಣೆಯ ಮೇಲೆ ಬಲಗಡೆ ಒಂದು ಹಳೆಯ ಗಾಯ, ಬಲಗಡೆ ಕಾಲು ಕುಂಟುತ್ತಾನೆ. ಬಲಗೈಯಲ್ಲಿ ತಾಮ್ರದ ಖಡೆ ಇರುತ್ತದೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DIST REPORTED CRIMES


ಅಪಘಾತ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ಶ್ರೀ.ಗೊಬರುರಾವ  ತಂದೆ  ಕೃಷ್ಣ ರಾವುತ್ ಸಾ:ಟೀಮನಪೂರ ರಾಯಗಡ ಪೋಷ್ಟಿ ನವರಂಗಪೂರ  ಜಿಲ್ಲೆ  ರಾಜ್ಯ|| ಒರಿಸ್ಸಾ ರವರು  ನಾನು ಕೆಎ-01 ಡಿ-9547 ರ ಬೋರವೆಲ್  ಲಾರಿಯ  ಮೇಲೆ ಹೆಲ್ಪರ್ ಅಂತಾ ಕೆಲಸ ಮಾಡಿಕೊಂಡಿರುತ್ತೆನೆ.  ನಮ್ಮ ಗ್ರಾಮದ ಗಾಗುಡರಾಮ ತಂದೆ ಬಾಲಕ  ಯಾದವ  ಖೇತುರಾಮ ತಂದೆ ಖಟಲಿ ಮಾಲಿ  ಹಾಗೂ ಲಾಲು ತಂದೆ ಲಕ್ಕಮ್ಮ ವಡ್ಡೆ  ನಾಲ್ಕು ಜನರು ಬೋರವೆಲ್ ಲಾರಿ ಮೇಲೆ  ಹೇಲ್ಪರ್  ಕೆಲಸ  ಮಾಡುತ್ತಿದ್ದೆವೆ. ದಿನಾಂಕ:29/05/2012 ರಂದು  ಬೆಳಿಗ್ಗೆ ಳಂದ  ತಾಲೂಕಿನ  ಚಿಂಚೋಳಿ  ಗ್ರಾಮದ   ಹೊಲದಲ್ಲಿ ಬೊರವಲ್  ಹಾಕಿ ನಾವು ಅಕ್ಕಲಕೋಟಕ್ಕೆ ಹೋಗಲು ಚಿಂಚೋಳ್ಳಿ ಮಾರ್ಗವಾಗಿ ಹೋಗುತ್ತಿದೆವು, ಲಾರಿ ಎಮ್, ಮೋಹನ ತಂದೆ  ಮುತ್ತು ಸ್ವಾಮಿ ಸಾ:ಪಾಳಮೇಡ  ಇತನು ನಡೆಸುತ್ತಿದ್ದನು .ಮದ್ಯಾನ 2:30 ಗಂಟೆಯ ಸುಮಾರಿಗೆ ನಾವು ಕುಳಿತ ಹೊರಟ ಬೊರವೆಲ್ಲ ಲಾರಿ ಚಾಲಕನು ಸರಸಂಬಾ ಗ್ರಾಮದ  ಕೆಇಬಿ ಖಜಾನೆ ಹತ್ತಿರ ರಸ್ತೆಯಲ್ಲಿ ಜೊತು ಕೆಳಗೆ ಆಗದ  ಕರೇಂಟ ಇರುವ ವಿದ್ಯುತ್ ವೈಯರ್ ನೋಡದೆ ನಿರ್ಲಕ್ಷತನದಿಂದ ಎಮ್. ಮೋಹನ ತಂದೆ ಮುತ್ತು ಸ್ವಾಮಿ ಇತನು ಲಾರಿ ಚಲಾಯಿಸಿದ್ದರಿಂದ ಲಾರಿಯಲ್ಲಿ ಕುಳಿತ ಗಾಗುಡರಾಮ ತಂದೆ ಬಾಲಕ ಯಾದವ ಸಾ:ಟೀಮನಪೂರ ಇತನಿಗೆ ಹತ್ತಿ ಶಾಖ  ಹೊಡೆದಿದ್ದರಿಂದ   ವಿದ್ಯೂತ್ ವೈಯರ್ ಶಾಖದಿಂದ  ಮೃತಪಟ್ಟಿರುತ್ತಾನೆ ಸರಸಂಭಾ ಗ್ರಾಮದ ರೋಡಿನ ಹತ್ತಿರದ  ರಸ್ತೆಯಲ್ಲಿ  ಜೇಸ್ಕಾ ಕೇಂದ್ರದ  ಅಧಿಕಾರಿಗಳು  ಜೋತು ಬಿದ್ದ ವಿದ್ಯೂತ್  ಕಂಬದ ವೈಯರ್ ಜೇಸ್ಕಾಂ ಅಧಿಕಾರಿಗಳು ಸರಿಪಡಿಸದೆ ಕರ್ತವ್ಯದಲ್ಲಿ ನಿರ್ಲಕ್ಷತನ ತೋರಿಸಿರುತ್ತಾರೆ.ಕಾರಣ ಜೇಸ್ಕಾಂ ಅಧಿಕಾರಿಗಳಾದ ಅಶೋಕ ಕುಮಾರ  ಗೂಡುರೆ  ಮತ್ತು   ಬೋರವೇಲ್ ಲಾರಿ ನಂ ಕೆ,- ಎ 01 ಡಿ- 9547 ರ  ಚಾಲಕನ  ಮೇಲೆ   ಕಾನೂನು ಪ್ರಕಾರ  ಕ್ರಮ ಜರುಗಿಸಬೇಕು  ಅಂತಾ  ಹೇಳಿಕೆ ದೂರು ಸಲ್ಲಿಸಿದ ಸಾರಾಂಶದ  ಮೇಲಿಂದ ಠಾಣೆ ಗುನ್ನೆ  ನಂ 24/2012 ಕಲಂ 285 304 (ಎ) ರ  ಪ್ರಕಾರ  ಗುನ್ನೆ ದಾಖಲಿಸಿಕೊಂಡು ತನಿಖೆ  ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ: ಶ್ರೀಶರಣರೆಡ್ಡಿ  ತಂ/ ಅನಾಂತರೆಡ್ಡಿ ಬಂಡಿ ಮು:ರಾಘಾಪೂರ ರಾಮ ನಗರ ಗುಲಬರ್ಗಾ ರವರು ನಾನು ಸಫಾರಿ ದಾಭಾದಲ್ಲಿ  ಕೆಲಸ ಮಾಡು ತ್ತಿದ್ದು  ನಾನು ದಿನಾಲು  ಹೋಗಿ ಬರಲಿಕ್ಕೆ  ನನ್ನ ಮೋಟಾರ ಸೈಕಲ ನಂ ಕೆಎ 32 ಜೆ 4759  ನೇದ್ದನ್ನು  ಉಪಯೋಗಸುತ್ತೇನೆದಿನಾಂಕ: 26-04-2012 ರಂದು ರಾತ್ರಿ  ಕೆಲಸ ಮುಗಿಸಿಕೊಂಡು ಸಫಾರಿ ದಾಭಾದ ಪಾರ್ಕಿಂಗ ನಲ್ಲಿ  ಗಾಡಿ  ನಂ ಕೆಎ 32 ಜೆ 4759  ನೇದ್ದನ್ನು ನಿಲ್ಲಿಸಿದ್ದು, ರಾತ್ರಿ 12  ಗಂಟೆಗೆ  ಮನೆಗೆ ಹೋಗುವ ಕುರಿತು ಮೋಟಾರ ಸೈಕಲ ನೋಡಲಾಗಿ  ನನ್ನ ಮೋಟಾರ ಸೈಕಲ ಇರಲಿಲ್ಲ .ಯಾರೋ  ಕಳ್ಳರು  ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ  ಹೇಳಿಕೆ ದೂರು ಸಲ್ಲಿಸಿದ ಸಾರಾಂಶದ  ಮೇಲಿಂದ ಠಾಣೆ ಗುನ್ನೆ  ನಂ: 179/2012 ಕಲಂ 379 ಐಪಿಸಿ ಪ್ರಕಾರ  ಗುನ್ನೆ ದಾಖಲಿಸಿಕೊಂಡು ತನಿಖೆ  ಕೈಕೊಂಡಿರುತ್ತಾರೆ. 

29 May 2012

GULBARGA DIST REPORTED CRIME


ಅಪಹರಣ ಪ್ರಕರಣ:
ವಾಡಿ ಪೊಲೀಸ್ ಠಾಣೆ:ಶ್ರೀ ಬಸವರಾಜ ತಂದೆ ಹಣಮಂತಪ್ಪಾ ಸಾ|| ಇಂಗಳಗಿ ವರು ನಮ್ಮ ಮನೆಯ ಅಂಗಳದಲ್ಲಿ ರಾತ್ರಿ 11-00 ಗಂಟೆ ಸುಮಾರಿಗೆ ನಾವು ಮಲಗಿಕೊಂಡಾಗ ಅಂಬಿಕಾ ಇವಳು ನನಗೆ ಸಂಡಾಸ ಬಂದಿದೆ ಅಂತಾ ಹೇಳಿದಳು.ನಾವಿಬ್ಬರೂ  ನನ್ನ ಮಗಳಿಗೆ ಹೋಗಿ ಬಾ ಅಂತಾ ಹೇಳಿದೆವು ಸ್ವಲ್ಪ ಸಮಯದ ನಂತರ ನನ್ನ ಮಗಳು ಅಂಬಿಕಾ ಅಮ್ಮಾ ಅಂತಾ ಚೀರಿದ್ದರಿಂದ ನಾವು ಗಾಬರಿಯಾಗಿ ನೊಡಲಾಗಿ ನನ್ನ ಮಗಳು ಅಂಬಿಕಾಳಿಗೆ ನಮ್ಮ ಊರಿನ ಹರಿಜನ ಕೇರಿಯ ಪರ್ದಾನಿ ಹೊನಗುಂಟಾ ಮತ್ತು ಮೊನಪ್ಪಾ ತಳಗೆರಿ ಇವರು ಎಳೆದುಕೊಂಡು ಹೊರಟಿದ್ದರು ಪರ್ದಾನಿ ನನ್ನ ಮಗಳ ಬಾಯಿ ಒತ್ತಿ ಹಿಡಿದಿದ್ದನು ಆಗ ನಾವು ಬೆನ್ನು ಹತ್ತಿದೆವು ಊರ ಹೊರಗೆ ಕತ್ತಲಲ್ಲಿ ಓಡಿ ಹೊದರು ನಾವು ಹುಡುಕಾಡಿದರು ನನ್ನ ಮಗಳು ಪತ್ತೆಯಾಗಲಿಲ್ಲಾ ಮನೆಯಲ್ಲಿ ಬಂದು ನೊಡಲಾಗಿ ಅಂಬಿಕಾಳ ನಿಶ್ಚಯ ಕಾರಣದಿಂದಾಗಿ ಅಳಿಯನಿಗೆಂದು ತಂದಿರುವ 10 ಗ್ರಾಂ ಬಂಗಾರದ ಲಾಕೆಟ, 10  ಗ್ರಾಂ ಬಂಗಾರದ ಉಂಗುರ ಮನೆಯಲ್ಲಿ ಇರಲಿಲ್ಲ ಸದರಿಯವರ ಮೇಲೆ ಕಾನೂನು ಕ್ರಮ ಜರೂಗಿಸ ಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:78/2012 ಕಲಂ 366(ಎ) ಐಪಿಸಿ ಪ್ರಕಾರ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DIST REPORTED CRIME

ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:
ಶ್ರೀ ಅಕ್ಮಲ್ ತಂದೆ ಮಂಜೂರ ಅಹೇಮದ ಶಿವಪುರಗಲ್ಲಿ ಹುಮನಾಬಾದ ಜಿ|| ಬೀದರ ರವರು ನಾನು ಮತ್ತು ನನ್ನ ಗೆಳೆಯರಾದ ಮಹ್ಮದ ಇಸ್ಮಾಯಿಲ ಹಾಗೂ ಸೈಯದ ಖಾನ ಮೂರು ಜನರು ಕೂಡಿಕೊಂಡು ಮದ್ಯಾಹ್ನ 2:15 ಗಂಟೆಗೆ ತಂಪು ಪಾನಿಯ ಕುಡಿಯಲು ಮಹಮ್ಮದ ಇಸ್ಮಾಯಿಲ್ ಇವರ ಮೊಟಾರ ಸೈಕಲ್ ನಂ.ಕೆಎ=32 ಎಇ-9979 ನೇದ್ದರ ಮೇಲೆ ರಿಂಗ ರೋಡನ ಮೆಜೆಸ್ಟಿಕ್ ಫಕ್ಸನ್ ಹಾಲ ಹತ್ತಿರದ ಹೋಟಲಗೆ ಹೋರಟಾಗ ಮಹಮ್ಮದ ಇಸ್ಮಾಯಿಲ್ ಇತನು ಮೋಟಾರ ಸೈಕಲ್ ನಡೆಸುತ್ತಿದ್ದ, ನಾನು ಅವನ ಹಿಂದೆ ಕುಳಿತಿದ್ದೆ ನನ್ನ ಹಿಂದೆ ಸೈಯದ ಖಾನ ಕುಳಿತಿದ್ದನು. ಮಹಮ್ಮದ ರಫೀಕ್ ಚೌಕ ಹತ್ತಿರ ಹೋಗುತ್ತಿರುವಾಗ ಹಾಗರಗಾ ಕ್ರಾಸ ಕಡೆಯಿಂದ ಒಂದು ಟಾಟಾ ಎ.ಸಿ.ಇ ಕೆಎ 32 ಎ-7349 ನೇದ್ದರ ನೇದ್ದರ ಚಾಲಕ ತನ್ನ ವಾಹನವನ್ನು ಅತೀವೇಗ & ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ನಾವು ಕುಳಿತು ಹೊರಟ ಮೋಟಾರ ಸೈಕಲ್‌ಕ್ಕೆ ಡಿಕ್ಕಿ ಹೊಡೆದಿದ್ದರಿಂದ ನಾವು ಕೆಳಗೆ ಬಿದ್ದೆವು, ನನಗೆ ಹಾಗೂ ಸೈಯದ ಇಸ್ಮಾಯಿಲ್ ಇತನಿಗೆ ಸಾದಾ ಹಾಗೂ ಭಾರಿ ಗಾಯವಾಗಿರುತ್ತದೆ. ಇನ್ನೊಬ್ಬ ಗೆಳೆಯ ಸೈಯದ ಖಾನನಿಗೆ ತಲೆಗೆ ಬಾರಿ ಪೆಟ್ಟಾಗಿತ್ತು, ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ಬಸವೇಶ್ವರ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ಮೃತ ಪಟ್ಟಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:178/2012 ಕಲಂ , 279, 337, 338, 304 (ಎ) ಐಪಿಸಿ ಸಂಗಡ 187 ಐ.ಎಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

28 May 2012

GULBARGA DIST REPORTED CRIME

ಅಪಘಾತ ಪ್ರಕರಣ:

ಕಮಲಾಪೂರ ಪೊಲೀಸ್ ಠಾಣೆ:ಶ್ರೀ ರವಿಕುಮಾರ ತಂದೆ ಸಿದ್ರಾಮಪ್ಪಾ ಕೋರಿ ಸಾಃ ಬಸವೇಶ್ವರ ಕಾಲೋನಿ ಗುಲಬರ್ಗಾ ರವರು ನಮ್ಮ ತಂದೆ ಸಿದ್ರಾಮಪ್ಪಾ ತಾಯಿ ಕಾಂತುಬಾಯಿ ರವರು  ದಿಃ 25/05/2012 ರಂದು ಇಬ್ಬರು ಕೂಡಿಕೊಂಡು ಕಮಲಾಪೂರ ಕೆ.ಜಿ.ಬಿ ಬ್ಯಾಂಕಿನಲ್ಲಿ ಕೆಲಸವಿದ್ದ ಪ್ರಯುಕ್ತ ಸೈಕಲ ಮೇಲೆ ಕುಳಿತುಕೊಂಡು ರಾಜನಾಳದಿಂದ ಕಮಲಾಪುರಕ್ಕೆ ಬರುತ್ತಿದ್ದಾಗ ಬೆಳಿಗ್ಗೆ 11-00 ಗಂಟೆ ಸುಮಾರಿಗೆ ರಾಜನಾಳ ಕ್ರಾಸ ಹತ್ತಿರ ಎದುರಿನಿಂದ ಜೀಪ ನಂ. ಕೆಎ-20 ಎಮ್-7865 ನೇದ್ದರ ಚಾಲಕ ಮಹ್ಮದ ಮೋಹಿನ ತಂದೆ ಸರದಾರಸಾಬ ಸಾಃ ಮರಗುತ್ತಿ ಈತನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಸೈಕಲ ಮೇಲೆ ಬರುತ್ತಿದ್ದ ನಮ್ಮ ತಂದೆ ತಾಯಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ನಮ್ಮ ತಂದೆಗೆ ಬಲಕಣ್ಣಿನ ಕೆಳಗೆ ರಕ್ತಗಾಯ, ಹಣೆಗೆ ರಕ್ತಗಾಯವಾಗಿರುತ್ತದೆ. ನಮ್ಮ ತಾಯಿ ಕಾಂತಾಬಾಯಿ ಇವಳಿಗೆ ಹಣೆಗೆ ರಕ್ತಗಾಯ, ಎಡಕಣ್ಣಿನ ಹತ್ತಿರ ರಕ್ತಗಾಯ, ಬಲಗೈ ಮಣಿಕಟ್ಟಿಗೆ ರಕ್ತಗಾಯವಾಗಿದ್ದು ಇರುತ್ತದೆ. ಅಪಘಾತ ನೋಡಿದವರು 108 ಅಂಬುಲೇನ್ಸದಲ್ಲಿ ಸರಕಾರಿ ಆಸ್ಪತ್ರೆಗೆ ಉಪಚಾರ ಕುರಿತು ಕಳುಹಿಸಿರುತ್ತಾರೆ. ಕಾರಣ ನನ್ನ ತಂದೆ ತಾಯಿಗೆ ಅಪಘಾತ ಪಡಿಸಿದ ಮಹ್ಮದ ಮೋಹಿನ ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.62/2012 ಕಲಂ.279,337 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ

GULBARGA DIST REPORTED CRIMES

ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ದಿನಾಂಕ:26/05/2012 ರಂದು  ಕೆಎ-32-5963 ಲಾರಿಯಲ್ಲಿ   ಉಸುಕು (ರೇತಿ) ತುಂಬಿಕೊಂಡು ಬರಲು ವಿಜಯಕುಮಾರ ತಂದೆ ಬೋಜು ರಾಠೋಡ ಸಾ:ಜಾಫೂರ ತಾಂಡಾನಂದೂರ (ಬಿ) ಬಾಪುನಾಯಕ ತಾಂಡಾದ ಹತ್ತಿರ ತಾ:ಜಿ:ಗುಲಬರ್ಗಾ ಇತನು ಹೊನಗುಂಟಾ ಗ್ರಾಮಕ್ಕೆ ಹೋಗಿದ್ದನು. ಲಾರಿ ಚಾಲಕ ವಿಜಯ ಕುಮಾರ ಇವನು ನನ್ನ ಲಾರಿಯನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಶಹಾಬಾದದ ಭೀಮಶಪ್ಪಾ ನಗರ ಬ್ರೀಡ್ಜ ಹತ್ತಿರ ರೋಡಿನ ಬಲಬಾಜು ಕಟ ಮಾಡಿದ್ದರಿಂದ ಲಾರಿ ಪಲ್ಟಿಯಾಗಿ ಸ್ಥಳದಲ್ಲಿಯೇ ವಿಜಯಕುಮಾರ ಇವನು ಮೃತ ಪಟ್ಟಿದ್ದ ವಿಷಯ ತಿಳಿದುಕೊಂಡು ನಾನು ಶಹಾಬಾದಕ್ಕೆ ಹೋಗಿ ಬಂದು ನೋಡಲು ಲಾರಿ ನಂ.ಕೆಎ-32-5963 ನೇದ್ದು ಪಲ್ಟಿಯಾಗಿ ಬಿದ್ದು ಅದರ ಕೆಳಗೆ ವಿಜಯಕುಮಾರ ಇವನು ಸಿಕ್ಕಿ ಬಿದ್ದು ಮೃತ ಪಟ್ಟಿರುತ್ತಾನೆ ಈ ಘಟನೆಯು ದಿನಾಂಕ:26/05/2012 ರಂದು ರಾತ್ರಿ  10-45 ಗಂಟೆ ಸುಮಾರಿಗೆ ಘಟನೆ ಜರೂಗಿರಬಹುದು ಅಂತಾ ಶ್ರೀ ವಿಜಯಕುಮಾರ ತಂದೆ ಮಾನಸಿಂಗ ಚವ್ಹಾಣ ಉ:ಲಾರಿ.ನಂ.ಕೆಎ-32-5963 ನೇದ್ದರ ಮಾಲಿಕ ಸಾ:ಶಕ್ತಿನಗರ ಗುಲಬರ್ಗಾರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 76/2012 ಕಲಂ:279, 304 (ಎ) ಐಪಿಸಿ   ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ: ಶ್ರೀ ಗುರಣ್ಣ ತಂದೆ ಶರಣಪ್ಪ ಹಾಗರಗಿ ಸಾ: ಮನೆ ನಂ 1920/31/ 2 ನೇ ಕ್ರಾಸ ರಾಮನಗರ ರವರು ನಾವು ದಿನಾಂಕ 23-05-2012 ರಂದು ಮಧ್ಯರಾತ್ರಿ 12-00 ಗಂಟೆ ಸುಮಾರಿಗೆ ಮ್ಮ ಮನೆಗೆ ಕೀಲಿ ಹಾಕಿಕೊಂಡು ಮನೆಯ ಮಾಳಿಗೆ ಮೇಲೆ ಮಲಗಿದ್ದು ಕೀಲಿ ಕೈ ತಲೆ ದಿಂಬಿನ ಕೆಳಗಡೆ ಇಟ್ಟಿಕೊಂಡಿದ್ದೆನು. ದಿನಾಂಕ 24-05-2012 ರಂದು ಬೆಳಗ್ಗೆ 5-00 ಗಂಟೆಗೆ ಬಂದು ನೋಡಲಾಗಿ ಯಾರೋ ನನ್ನ ತಲೆ ದಿಂಬಿನ ಕೆಳಗಿದ್ದ ಬೀಗದ ಕೈ ತೆಗೆದುಕೊಂಡು ಮನೆಯಲ್ಲಿಟ್ಟಿದ್ದ  5 ತೊಲಿ ಬಂಗಾರದ ಒಡವೆಗಳು ಮತ್ತು 15 ತೊಲಿ ಬೆಳ್ಳಿಯ ಸಾಮಾನುಗಳು ನಗದು 20,000/- ರೂ ಹೀಗೆ ಒಟ್ಟು 1,58,700/- ರೂಪಾಯಿ ಮೌಲ್ಯದ್ದಯ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 78/12 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಗೃಹಿಣೆಗೆ ಸೀಮೆ ಎಣ್ಣೆ ಸುರಿದು ಬೆಂಕಿ ಕೊಲೆ ಮಾಡಿದ ಬಗ್ಗೆ :
ಗ್ರಾಮೀಣ ಪೊಲೀಸ ಠಾಣೆ:ಶ್ರೀಮತಿ ಅಂಬು ಗಂಡ ಪಾಂಡು ಗೌಳಿ ಸಾ:ಸೈಯ್ಯದ ಚಿಂಚೋಳಿ ಹಾ:ವ:ಪಟ್ಟಣ ತಾ:ಜಿ:ಗುಲಬರ್ಗಾರವರು ನನಗೆ ನನ್ನ ಗಂಡನಾದ ಪಾಂಡು ಇತನು ದಿನಾಂಕ:-23/05/2012 ರಂದು ರಾತ್ರಿ 11:00 ಗಂಟೆಯ ಸುಮಾರಿಗೆ ಶೀಲದ ಬಗ್ಗೆ ಶಂಕೆ ಮಾಡಿಕೊಂಡು ಕೊಲೆ ಮಾಡುವ ಉದ್ದೇಶದಿಂದ ಪಟ್ಟಣ ಕ್ರಾಸದಲ್ಲಿ ವಾಸವಾಗಿರುವ ಮನೆಯಲ್ಲಿ ಅವಳೊಂದಿಗೆ ಜಗಳ ತೆಗೆದು ಹೊಡೆಬಡೆ ಮಾಡಿ ಮೈಮೇಲೆ ಸೀಮೇ ಎಣ್ಣೆ ಹಾಕಿ ಬೆಂಕಿ ಹಚ್ಚಿ ಓಡಿ ಹೋಗಿರುತ್ತಾನೆ ಗಾಯಾಳುವಿನಿಂದ ದೂರು ದಾಖಲಾಗಿತ್ತು, ಗಾಯಾಳು ಉಪಚಾರ ಕುರಿತು ಗುಲಬರ್ಗಾ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಲಾಗಿತ್ತು, ಸುಟ್ಟಗಾಯಗಳಿಂದ ಗುಣಮುಖ ವಾಗದೇ ದಿನಾಂಕ:27/05/2012 ರಂದು ರಾತ್ರಿ 9-00 ಗಂಟೆಯ ಸುಮಾರಿಗೆ ಮೃತಪಟ್ಟಿರುತ್ತಾಳೆ ಅಂತಾ ನಾಮದೇವ ರವರು ಹೇಳಿಕೆಯಿಂದ ಗುನ್ನೆ ನಂ: 169/2012 ಕಲಂ 498 (ಎ) 307 , 504 ಐಪಿಸಿ ನೇದ್ದರಲ್ಲಿ ಕಲಂ 302 ಅಳವಡಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಆಕಸ್ಮಿಕ ಬೆಂಕಿ ಅಪಘಾತ:
ಮಾಡಬೂಳ ಪೊಲೀಸ್ ಠಾಣೆ ದಿನಾಂಕ:7/05/12 ರಂದು ಮದ್ಯಾಹ್ನ 12-00 ಗಂಟೆ ಇಂದು ದಿನಾಂಕ:27-05-2012 ರಂದು ಬೆಳಿಗ್ಗೆ 10-30 ಗಂಟೆಗೆ ಗುರಮಿಟಕಲ್ ದಿಂದ ಮಳಖೇಡ ಮಾರ್ಗವಾಗಿ ಗುಲಬರ್ಗಾಕ್ಕೆ ಬರುತ್ತಿರುವಾಗ ಟೆಂಗಳಿ ಕ್ರಾಸ ಹತ್ತಿರ ರಸ್ತೆಯ ಮೇಲೆ ತಾನು ಚಲಾಯಿಸುತ್ತಿರುವ ಮಿನಿ ಲಾರಿ ಕೆಎ 32 ಎ-6783 ನೇದ್ದು ಆಕಸ್ಮಿಕವಾಗಿ ಬೆಂಕಿ ತಗುಲಿ ವಾಹನದಲ್ಲಿ ತುಂಬಿಕೊಂಡು ಬರುತ್ತಿರು ಹಳೆಯ ಸಾಮಾನುಗಳು ಬೆಂಕಿ ತಗಲು ಸುಮಾರು 80,000/- ಮೌಲ್ಯದ್ದು ಸುಟ್ಟು ಕರಕಲಾಗಿದ್ದು, ಲಾರಿಯು ಸಹ ಸುಟ್ಟಿದ್ದರಿಂದ   ಸುಮಾರು 6,50,000/- ಮೌಲ್ಯದು ಹಾನಿಯಾಗಿರುತ್ತದೆ. ಹೀಗೆ ಒಟ್ಟು 7,30,000/- ರಷ್ಟು ನಷ್ಟವಾಗಿರುತ್ತದೆ ಅಂತಾ ಶ್ರೀ ಹನೀಪ್ ತಂದೆ ದಾವೂದ್ ಸುನಖೇವಾಲೆ ಸಾ:ಗುರುಮಿಠಕಲ್ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಆಕಸ್ಮಿಕ ಬೆಂಕಿ ಅಪಘಾ ನಂಬರ:01/2012 ನೇದ್ದರಲ್ಲಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

27 May 2012

GULBARGA DIST REPORTED CRIMES


ಅಪಘಾತ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ:ದಿನಾಂಕ:27/05/2012 ರಂದು  ಮುಂಜಾನೆ 6:30 ಎ.ಎಮ ಕ್ಕೆ ಕಮಲಾಪೂರ ದಿಂದ ಗುಲಬರ್ಗಾಕ್ಕೆ  ಹೋಗುವ ರಾಷ್ಟ್ರೀಯ ಹೆದ್ದಾರಿಯ ಮೇಲೆ ಕೆಎ.39-2286 ನೇದ್ದರ ಲಾರಿ ಚಾಲಕ ಮದರ ಸಾಬ ತಂದೆ ನಬಿ ಸಾಬ ಸಾ: ತಿಪರಾಂತ  ಈತನು ತನ್ನ  ಲಾರಿ ಯನ್ನು ಯಾವುದೇ ಮುನ್ಸೂಚನೆ ನೀಡದೆ ರೋಡಿನ ಮೇಲೆ ನಿಲ್ಲಿಸಿದ್ದು ಅದರ ಹಿಂದಿನಿಂದ ಲಾರಿ ನಂ ಎಮ್‌ ಹೆಚ್‌ 22-ಎನ್-410 ನೇದ್ದರ ಚಾಲಕ ದಿಗಂಬರ ತಂದೆ ದೇವರಾವ ಕದಂ ಸಾ: ದೊಡ್ಡಗಾಂವ ಈತನು ತನ್ನ ಲಾರಿಯನ್ನು ಅತೀವೇಗದಿಂದ ಚಲಾಯಿಸಿಕೊಂಡು ಬಂದು ರೊಡಿನ ಮೇಲೆ ನಿಂತ ಲಾರಿಗೆ ಡಿಕ್ಕಿ ಹೊಡೆದನು. ಎಮ್ ಹೆಚ್ 22-ಎನ್-410 ನೇದ್ದರ ಲಾರಿಯಲ್ಲಿ ಕುಳಿತ ಕ್ಲೀನರ ಲಿಂಬಾಜಿ ತಂದೆ ನಿವೃತ್ತಿ ಈತನು ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಲಾರಿಯ ಚಾಲಕ ದಿಗಂಬರ ಈತನಿಗೆ ಗಾಯಗಳಾಗಿರುತ್ತವೆ. ಕಾರಣ ಎರಡು ಲಾರಿ ಚಾಲಕರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀ ಸಲಾವುದ್ದಿನ ತಂದೆ ಜಾಫರ ಶೇಖ ಸಾ: ಕಮಲಾಪೂರ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 61/12 ಕಲಂ: 279,337,283, 304(ಎ) ಐ.ಪಿ.ಸಿ  ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಕೆ ಕೈಕೊಂಡಿರುತ್ತಾರೆ.
ಕೊಲೆಗೆ ಪ್ರಯತ್ನ ಪ್ರಕರಣ:
ನೆಲೋಗಿ ಪೊಲೀಸ ಠಾಣೆ:ಶ್ರೀ ಶೆಂಕ್ರೇಪ್ಪ ತಂದೆ ರುದ್ರಗೌಡ ರವರು ನನ್ನ ಹೆಂಡತಿ ಭಾರತಿ ಮತ್ತು  ಮಲ್ಲಪ್ಪ ಮೋರಟಗಿ ಇಬ್ಬರೂ ನಡುವೆ ಅನೈತಿಕ ಸಂಬಂಧ ಹೊಂದಿದ್ದು ಅವರಿಬ್ಬರೂ ದಿನಾಂಕ 25-05-2012 ರಂದು ರಾತ್ರಿ 1-00 ಗಂಟೆಗೆ ಇಬ್ಬರೂ ಮಲಗಿದನ್ನು ನಾನು ನೋಡಿದ್ದರಿಂದ ಮುಂಜಾನೆ 6-00 ಗಂಟೆಗೆ ಸುಮಾರಿಗೆ ನಾನು ಮನೆಯಲ್ಲಿ ಮಲಗಿದ್ದಾಗ ನನ್ನ ಹೆಂಡತಿ ಭಾರತಿ ನಮ್ಮ ಅತ್ತೆ ಗೋದಾಬಾಯಿ ಇಬ್ಬರೂ ಬಂದು ನನಗೆ ಹೊರಗೆ ಏಳೆದುಕೊಂಡು ಬಂದು ಅವಾಚ್ಯವಾಗಿ ಬೈದು  ನನಗೆ ಹಾದರ ಹೊಂದುಸ್ತಿ ಅಂತ ಮಲ್ಕಪ್ಪ ಮುಗಾನೂರ ಇವರ ಮನೆಯ ಮುಂದೆ ಏಳೆದು   ಕೊಂಡು ಹೋಗಿ ಹೊಡೆದರು. ಮತ್ತು ಮಲ್ಲಪ್ಪ ಮೋರಟಗಿ, ವಿಠಲ ಮೋರಟಗಿ. ಕಮಲಾಬಾಯಿ ಮೋರಟಗಿ. ಯಲ್ಲವ್ವ  ಮೋರಟಗಿ ಇವರೆಲ್ಲರೂ ಕೂಡಿ ವಿಷದ ಬಾಟಲಿಯನ್ನು ನನ್ನ ಬಾಯಿಯಲ್ಲಿ ಹಾಕಿದನು ವಿಠಲ ಇವನು ನನ್ನ ಎರಡು ಕೈಗಳನ್ನು ಹಿಡಿದು ಎದೆಯ ಮೇಲೆ ಕುಳಿತು ಹೊಡದೆನು ಯಲ್ಲವ್ವ, ಕಮಲಾಬಾಯಿ ಇವರು ನನ್ನ ಕಾಲುಗಳನ್ನು ಒತ್ತಿ ಹಿಡಿದರು ಸತ್ತು ಹೊಡೆಯಿರಿ ಅಂತ ಬೈಯುತ್ತಿದರು ಆರು ಜನರು ವಿಷ ಕುಡಿಸಿ ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 66/12 ಕಲಂ .143,147,148,323,504,307,ಸಂಗಡ 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಕೆ ಕೈಕೊಂಡಿರುತ್ತಾರೆ.
ಗಂಡನ ಮಾನಸಿಕ ಹಿಂಸೆಯಿಂದ ಮೈಮೇಲೆ ಸೀಮೆ ಎಣ್ಣೆ ಹಾಕಿಕೊಂಡು ಮೃತಪಟ್ಟ ಗೃಹಿಣೆ:

ಚಿತ್ತಾಪೂರ ಪೊಲೀಸ್ ಠಾಣೆ:ಶ್ರೀಮತಿ ಸುನಂದ ಗಂಡ ಬಸಪ್ಪ @ಬಸವರಾಜ ನಾಯಕಲ್ ಸಾ|| ಇಟಗಾ ರವರು  ನನಗೆ ಒಂದು ವರ್ಷದ ಹಿಂದೆ ಇಟಗಾ ಗ್ರಾಮದ  ಬಸಪ್ಪ ತಂದೆ ಮರೆಪ್ಪ ನಾಯಕಲ್ ಇವರಿಗೆ  ಕೊಟ್ಟು ಮದುವೆ ಮಾಡಿರುತ್ತಾರೆ. ನನ್ನ ಗಂಡ ಬಸಪ್ಪ ನಾಯಕಲ್ ಮತ್ತು ಅತ್ತೆ ಸುಭದ್ರಮ್ಮ,ಮಾವನಾದ ಮರೆಪ್ಪ, ಹಾಗೂ ಭಾವನಾದ ಪೀರಪ್ಪ, ಎಲ್ಲರು ಒಂದೆ ಮನೆಯಲ್ಲಿ ಒಟ್ಟಿಗೆ ಇರುತ್ತೇವೆ. ನನ್ನ ಗಂಡನಾದ ಬಸಪ್ಪ ಈತನು ನಾನು ಬೇರೆಯವರ ಜೊತೆ ಮಾತಡಿದ್ದಲ್ಲಿ ನೀನು ನನಗೆ ಬೇರೆಯವರ ಜೋತೆ ಮಾತಾಡುತ್ತಿ ನಾನು ನೀನಗೆ ಚೆನ್ನಾಗಿ ಕಾಣುವದಿಲ್ಲವೇನು ಅಂತಾ ಸಂಶಯ ಪಟ್ಟುಕೊಳ್ಳುತ್ತಿದ್ದನು,ಈ ವಿಷಯವನ್ನು ನನ್ನ ತಂದೆ ತಾಯಿಯವರಿಗೆ ತಿಳಿಸಿದರೆ ನೀನು ನಿನ್ನ ಗಂಡನ ಮನೆಯಲ್ಲಿ ಚೆನ್ನಾಗಿ ಇರಬೇಕು ಅಂತಾ ಬುದ್ದಿಮಾತು ಹೇಳಿ ಕಳುಯಿಸುತ್ತಿದ್ದರು,ದಿನಾಂಕ 21/5/2012 ರಂದು ಸಾಯಾಂಕಾಲ 6-00 ಗಂಟೆಗೆ  ನಾನು ನಮ್ಮ ಮಾವ ಮರೆಪ್ಪ ಇವರಿಗೆ ಟಿಪಿನ್ ಕೊಟ್ಟು ಮೇಲೆ ನೋಡುತ್ತಿರುವಾಗ ನನ್ನ ಗಂಡನು ನನಗೆ ಏನು ಮೇಲೆ ನೋಡುತ್ತಿ ಅವಾಚ್ಯವಾಗಿ ಬೈದು ಮಾನಸಿಕ  ಹಿಂಸೆ ಕೊಟ್ಟನು ನಾನು ಮನಸ್ಸಿಗೆ ಬೆಜಾರು ಮಾಡಿಕೊಂಡು ಮನೆಯಲ್ಲಿದ್ದ ಸೀಮೆ ಎಣ್ಣೆ ಡಬ್ಬಾ ತಗೆದುಕೊಂಡು ಮೈಮೇಲೆ ಎಣ್ಣೆ ಹಾಕಿಕೊಂಡು ಬೆಂಕಿ ಹಚ್ಚಿಕೊಂಡೆನು.ನನಗೆ ತಲೆಗೆ ಮತ್ತು ಎರಡು ಕೈಗಳು ಮೊಣಕೈ ವರೆಗೆ,ಮುಖಕ್ಕೆ,ಕುತ್ತಿಗೆಗೆ,ಎರಡು ಕಾಲುಗಳು ಮೊಣಕಾಲನೊವರೆಗೆ ಸುಟ್ಟು  ಗಾಯಗಳಾದವು, ನಮ್ಮ ಬಾಜು ಮನೆಯವರಾದ ಚಂದ್ರಭಾಗಮ್ಮ ,ಮರೆಮ್ಮ ಇವರುಗಳು ಒಂದು ಖಾಸಗಿ ವಾಹನದಲ್ಲಿ ಚಿತ್ತಾಪೂರ ಸರಕಾರಿ ಆಸ್ಪತ್ರೆಗೆ ತಂದು ಉಪಚಾರ ಕುರಿತು ಸೇರಿಕೆ ಮಾಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 50/2012 ಕಲಂ 498(ಎ), 306,504,ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. ಸದರಿ ಗಾಯಾಳು ಸುನಂಧ ಇವರಿಗೆ  ಹೆಚ್ಚಿನ ಉಪಚಾರ ಕುರಿತು ಗುಲಬರ್ಗಾ ಬಸವೇಶ್ವರ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು, ಉಪಚಾರ ಹೊಂದುತ್ತಾ ದಿನಾಂಕ 27/5/2012 ರಂದು ಮಧ್ಯರಾತ್ರಿ 1-00 ಎ ಎಂ ಕ್ಕೆ ಗುಲಬರ್ಗಾ ಬಸವೇಶ್ವರ ಆಸ್ಪತ್ರೆಯಲ್ಲಿ  ಮೃತ ಪಟ್ಟಿರುತ್ತಾರೆ. 

GULBARGA DIST REPORTED CRIMES


ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ:ಶ್ರೀ ಚಿದಾನಂದಯ್ಯ ತಂದೆ ಚಂದ್ರಶೇಖರಯ್ಯಾ ಹಿರೇಮಠಉಃ ಪೊಸ್ಟ ಮ್ಯಾನ ಸಾಃ ಅತ್ತರ ಕಂಪೌಂಡ ಗುಲಬರ್ಗಾರವರು ನಾನು ದಿನಾಂಕ 26-05-2014 ರಂದು ಮಧ್ಯಾಹ್ನ 12-00 ಗಂಟೆಗೆ ನನ್ನ ಟಿ.ವಿ.ಎಸ್ ನಂ. ಕೆ.ಎ 32 ಎಕ್ಸ 3245 ನೇದ್ದರ ಮೇಲೆ ಶಹಾಬಜಾರ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಲಾಲ ಹನುಮಾನ ಗುಡಿ ಕಡೆಯಿಂದ ಯಾವುದೋ ಅಟೋರಿಕ್ಷಾ ಚಾಲಕ ತನ್ನ ಅಟೋರಿಕ್ಷಾವನ್ನು ಅತಿವೇಗ ಮತ್ತು ಅಲಕ್ಷತನದಿಂದ ಎದರುಗಡೆಯಿಂದ ಚಲಾಯಿಸಿಕೊಂಡು ಬಂದು ನನ್ನ ಟಿ.ವಿ.ಎಸ ಕ್ಕೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಅಟೋರಿಕ್ಷಾ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 29/2012 ಕಲಂ 279, 338 ಐಪಿಸಿ ಸಂಗಡ 187 ಐ.ಎಮ.ವಿ. ಆಕ್ಟ ಪ್ರಕಾರ ಪ್ರಕರಣ ದಾಖಲ  ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಉದ್ದೇಶ ಪೂರ್ವಕವಾಗಿ ಮನೆ ಸುಟ್ಟಿರುವ ಬಗ್ಗೆ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ಶ್ರೀ.ಮಿತಾನಂದ  ತಂದೆ ನಾಗಪ್ಪ  ಕುಡಕೆ   ಸಾ: ಕಿಣ್ಣಿಅಬ್ಬಾಸ   ರವರು ನಮ್ಮ ಹುಲ್ಲಿನ ಜಪ್ಪರ ಮನೆಯಲ್ಲಿ ವಾಸವಾಗಿರುತ್ತೆವೆ. ದಿನಾಂಕ 26/05/2012 ರಂದು ನಾನು ಗುಲಬರ್ಗಾಕ್ಕೆ ಕೆಲಸದ ಮೇಲೆ ಬಂದಿದ್ದು, ನನ್ನ ತಂದೆ ತಾಯಿ ಅಣ್ಣ ಅತ್ತಿಗೆಯವರು ಹೊಲದಲ್ಲಿ ಸೇಂಗಾ ಬೇಳೆ ಕಿತ್ತಲು ನಮ್ಮ ಹೊಲಕ್ಕೆ ಹೋಗಿದ್ದರು. ಮನೆಯಲ್ಲಿ ನನ್ನ ಅಣ್ಣನ ಮಗಳು ಸಂಗೀತಾ ಒಬ್ಬಳೆ ಇದ್ದಾಗ ನಮ್ಮ ಅಣ್ಣತಮ್ಮಂದಿರು ಚಂದ್ರಭಾಗಮ್ಮ ಗಂಡ ನಾಮದೇವ ಕುಡಕೆಸಂತೋಷಕುಮಾರ ತಂದೆ ನಾಮದೇವ ಕುಡಕೆಸಂಜಕುಮಾರ ತಂದೆ ನಾಮದೇವ ಕುಡಕೆ ಮೂರು ಜನರು ಮತ್ತು ಇತರರ ಪ್ರಚೋದನೆಯಿಂದ ಮನೆಗೆ ಬೆಂಕಿ ಹಚ್ಚಿರುತ್ತಾರೆ. ಮನೆಯಲ್ಲಿಟ್ಟಿದ ದವಸ ಧಾನ್ಯಗಳು ಬಂಗಾರದ ಆಭರಣ ಇನ್ನಿತರ ಮನೆಯ ಸಾಮಾನುಗಳು ಹೀಗೆ ಒಟ್ಟು 1,50,000/- ಕೀಮ್ಮತ್ತಿನದು ಸುಟ್ಟಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 22/2012  ಕಲಂ436 ,109, ಸಂಗಡ 149 ಐಪಿಸಿ   ಪ್ರಕಾರ ಪ್ರಕರಣ ದಾಖಲ  ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮುಂಜಾಗ್ರತೆ ಕ್ರಮ:
ಕಮಲಾಪೂರ ಪೊಲೀಸ್ ಠಾಣೆ:ದಿನಾಂಕ:26/05/2012 ರಂದು 12-30 ಗಂಟೆ ಸುಮಾರಿಗೆ ಶಾಂತಿನಾಥ.ಬಿ.ಪಿ. ಪಿಎಸ್ಐ ಕಮಲಾಪೂರ ಪೊಲೀಸ್ ಠಾಣೆರವರು ಠಾಣೆಯ ಸಿಬ್ಬಂದಿಯವರೊಂದಿಗೆ ಪೆಟ್ರೋಲಿಂಗ್ ಕರ್ತವ್ಯ ಮಾಡುತ್ತಿರುವಾಗ ಕಮಲಾಪೂರ ಬಸ್ಸ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ನಿಂತು ಹೋಗಿ ಬರುವ ಸಾರ್ವಜನಿಕರಿಗೆ ತಾರಸಿಂಗ ತಂದೆ ರೂಪಸಿಂಗ್ ರಾಠೋಡ ಇತನು ಪಧವಿಧರ ಮತ ಕೇತ್ರದ ವಿಧಾನ ಪರಿಷತ್ ಚುನಾವಣೆ ನಿಮಿತ್ಯವಾಗಿ ಅವಾಚ್ಯವಾಗಿ ಬೈಯುತ್ತಾ.,ಚಿರಾಡುವುದುಹೆದರಿಸುವುದು ಮಾಡುತ್ತಾ ಸಾರ್ವಜನಿಕ ಶಾಂತತೆಗೆ ಭಂಗ ತರುತ್ತಿದ್ದಾಗಈತನಿಗೆ ಹೀಗೇಯೇ ಬಿಟ್ಟಲ್ಲಿ ಮುಂದೆ ಯಾವುದಾದರು ಸಂಜ್ಞೆಯ ಅಪರಾಧ ಮಾಡುವುದಾಗಿ ಕಂಡು ಬಂದಿದ್ದರಿಂದ ಮತ್ತು ಏರಿಯಾದಲ್ಲಿ ಸಾರ್ವಜನಿಕರ ನೆಮ್ಮದಿ ಹಾಳು ಮಾಡುವ ಸಾಧ್ಯತೆ ಕಂಡುಬಂದಿದ್ದರಿಂದ ಠಾಣೆ ಗುನ್ನೆ ನಂ: 59/2012 ಕಲಂ 110 (ಇ) & (ಜಿ) ಸಿಆರ್.ಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ದರೋಡೆ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ:ಶ್ರೀ  ಮಹ್ಮದ ಯುಸಫ್ ತಂದೆ ಗಪೂರಸಾಬ ಸೌದಾಗರ ಉಃ ಗ್ರಾಮ ಪಂಚಾಯತ ಅಧ್ಯಕ್ಷ ಸಾಃ ಸೊಂತ ತಾಃಜಿಃ ಗುಲಬರ್ಗಾ ರವರು ದಿನಾಂಕ: 26/05/12 ರಂದು ಸಾಯಂಕಾಲ 5-00 ಗಂಟೆ ಸುಮಾರಿಗೆ ಕಮಲಾಪೂರದಲ್ಲಿ ಖಾಸಗಿ ಕೆಲಸವಿದ್ದ ಪ್ರಯುಕ್ತ ಸೊಂತ ದಿಂದ ಕಮಲಾಪೂರಕ್ಕೆ ಜೀಪ ನಂ. ಕೆಎ:17, ಎ:2171 ನೇದ್ದರಲ್ಲಿ ಕುಳಿತಕೊಂಡು ಬರುತ್ತಿರುವಾಗ ಸೊಂತದ ನಾಲಾದ ಹತ್ತಿರ ಬರುತ್ತಿದ್ದಂತೆ 3-4 ಜನರು ತಮ್ಮ ತಮ್ಮ ಕೈಯಲ್ಲಿ ಹರಿತವಾದ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಜೀಪ ನೋಡಿ ಅಡ್ಡಗಟ್ಟಿ ನಿಲ್ಲಿಸಿ ನಮಗೆ ಜೀಪಿನಿಂದ ಕೆಳಗೆ ಇಳಿಸಿ, ನಮ್ಮ ಹತ್ತಿರ ಇದ್ದ ಹಣ ಬಂಗಾರಗಳು ಕೊಡಿ ಇಲ್ಲಿದ್ದಿದ್ದರೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಹೇದರಿಸುತ್ತಾ ನಮ್ಮೊಂದಿಗೆ ತೆಕ್ಕೆ ಕುಸ್ತಿ ಮಾಡುತ್ತಿದ್ದಾಗ ನಮ್ಮ ಗ್ರಾಮದ ವಿಠಲ ಮಾಸ್ಟರ ಮತ್ತು ಅರ್ಜುನ ಇಬ್ಬರು ತಮ್ಮ ಮೋಟಾರ ಸೈಕಲ ಮೇಲೆ ಸೊಂತದಿಂದ ಕಮಲಾಪೂರ ಕಡೆಗೆ ಬರುತ್ತಿದ್ದವರು ನಮ್ಮ ಸಹಾಯಕ್ಕೆ ಬಂದಾಗ ಅವರು ತಪ್ಪಿಸಿಕೊಂಡು ಓಡಿ ಹೋಗುತ್ತಿದ್ಧಾಗ ಅವರಿಗೆ ಬೆನ್ನು ಹತ್ತಿ ಹಿಡಿಯಲಾಗಿ 4 ಜನರಲ್ಲಿ 3 ಜನರು ಓಡಿ ಹೋಗಿದ್ದು. ಒಬ್ಬನು ನಮ್ಮೊಂದಿಗೆ ತೆಕ್ಕೆ ಕುಸ್ತಿ ಮಾಡಿ ತಪ್ಪಿಸಿಕೊಳ್ಳುತ್ತಿರುವಾಗ ಕೆಳಗೆ ಬಿದ್ದು ತಲೆಗೆ ರಕ್ತಗಾಯ ಮಾಡಿಕೊಂಡಿರುತ್ತಾನೆ. ಅವನ ಹತ್ತಿರ ಇದ್ದ ಚಾಕು ಮತ್ತು ಓಡಿ ಹೋದವರಲ್ಲಿ ಒಬ್ಬನ ಹತ್ತಿರ ಇದ್ದ ಇನ್ನೊಂದು ಚಾಕು ಸ್ಥಳದಲ್ಲಿಯೇ ಇದ್ದವು ಆತನ ಹೆಸರು ವಿಚಾರಿಸಲಾಗಿ, ಟಕ್ಲ್ಯಾ ತಂದೆ ಶಂಕರ ಗಿರಗಿರ ವಯ: 45 ವರ್ಷ ಜಾ: ಪಾರ್ದಿ ಉಃ ಬುರಲಿ ಹೊಡೆಯುವುದು. ಸಾಃ ಗೊಬ್ಬುರ (ಕೆ) ತಾಃ ಅಫಜಲಪೂರ ಜಿಃ ಗುಲಬರ್ಗಾ ಅಂತಾ ತಿಳಿಸಿದ್ದು. ಇನ್ನೂ ಓಡಿ ಹೋದ 3 ಜನರನ್ನು ನಾವು ಗುರ್ತಿಸುತ್ತೇವೆ.  ತಮ್ಮ ಕೈಯಲ್ಲಿ ಹರಿತವಾದ ಮಾರಕ ಅಸ್ತ್ರಗಳನ್ನು ಹಿಡಿದುಕೊಂಡು ದರೋಡೆ ಮಾಡುವ ಉದ್ದೇಶದಿಂದ ನಮಗೆ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿದವರ ಮೇಲೆ ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 60/2012, ಕಲಂ. 398, 504, 506 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

26 May 2012

GULBARGA DIST REPORTED CRIMES


4 ದಿವಸಗಳ ಹಿಂದೆ ಜೇವರ್ಗಿಲ್ಲಿ ಕಳ್ಳತನ ಮಾಡಿದ ಆರೋಪಿ ಬಂದನ;
5 ತೊಲಿ ಬಂಗಾರದ ಆಭರಣ, ನಗದು ಹಣ ಮತ್ತು ಮೊಬಾಯಿಲ್ ಜಪ್ತಿ.
ಶ್ರೀ ಚನ್ನಮಲ್ಲಯ್ಯ ಹಿರೇಮಠ ಇವರು ತಮ್ಮ ಮನೆಯಲ್ಲಿ ದಿನಾಂಕ 22-05-2012 ರ ಮಧ್ಯ ರಾತ್ರಿ ಯಾರೋ ಕಳ್ಳರು ಮನೆಯೊಳಗೆ ಪ್ರವೇಶಿಸಿ 5 ತೊಲೆ ಬಂಗಾರದ ಆಭರಣಗಳು, 9000=00 ರೂ ನಗದು ಹಣ, ಹಾಗೂ ಒಂದು ಸ್ಯಾಮಸ್ಯಾಂಗ್ ಮೋಬೈಲ್ ಹೀಗೆ  ಒಟ್ಟು 1, 35,000=00 ರೂ  ಕಳುವಾದ ಬಗ್ಗೆ ಜೇವರಗಿ ಠಾಣೆಯಲ್ಲಿ ದೂರು ನೀಡಿದ್ದರ  ಮೇರೆಗೆ ಮಾನ್ಯ ಶ್ರೀ ಪ್ರವೀಣ ಪವಾರ ಎಸ್ ಪಿ ಗುಲಬರ್ಗಾ, ಶ್ರೀ ಕಾಶಿನಾಥ ತಳಿಕೇರಿ ಹೆಚ್ಚುವರಿ ಎಸ್ ಪಿ ಗುಲಬರ್ಗಾ, ಹಾಗೂ ಶ್ರೀ ತಿಮ್ಮಪ್ಪ  ಡಿ ಎಸ್ ಪಿ ಗ್ರಾಮೀಣ ಉಪ ವಿಭಾಗ ಗುಲಬರ್ಗಾರವರ ಮಾರ್ಗದರ್ಶನದಲ್ಲಿ ವಿಶ್ವನಾಥ ಕುಲಕರ್ಣಿ ಸಿಪಿಐ ಜೇವರಗಿ ರವರ ನೇತೃತ್ವದಲ್ಲಿ ಸಿಬ್ಬಂದಿಯವರಾದ ಗುರುಬಸ್ಸು, ತುಕರಾಮ, ಜಗದೇವಪ್ಪ, ಅಣ್ಣಪ್ಪ, ರವರು ಕಳ್ಳತನ ಮಾಡಿದ ಆರೋಪಿ ಹಣಮಂತ ತಂದೆ ಯಮನಪ್ಪ ಚಲವಾದಿ ವಯ: 40ವರ್ಷ ಸಾ: ಕಲಕೇರಿ ತಾ: ಸಿಂದಗಿ ಜಿ: ಬಿಜಾಪೂರ ಇತನನ್ನು ಕಲಕೇರಿ ಗ್ರಾಮದಲ್ಲಿ ಬಂದಿಸಿ ಕಳುವಾದ 5 ತೊಲಿ ಬಂಗಾರದ ಆಭರಣಗಳು ಹಾಗೂ ಮೋಬೈಲ್ ಹ್ಯಾಂಡ್ ಸೆಟ್ ಹೀಗೆ ಒಟ್ಟು 1, 26,000=00 ರೂ ವಶಪಡಿಸಿಕೊಂಡಿರುತ್ತಾರೆ, ಆರೋಪಿತನು ಇದಕ್ಕೂ ಮುಂಚೆ ಹುಣಸಗಿ ಹಾಗೂ ಚೌಕ ಪೊಲೀಸ ಠಾಣಾ ವ್ಯಾಪ್ತಿಯಲ್ಲಿಯು ಸಹ ಕಳ್ಳತನ ಮಾಡಿದ್ದು ತನಿಖೆಯಿಂದ ತಿಳಿದು ಬಂದಿರುತ್ತದೆ. ಆರೋಪಿತನನ್ನು ಮಾನ್ಯ ನ್ಯಾಯಾಲಕ್ಕೆ ಒಪ್ಪಿಸಲಾಗಿದೆ. 

GULBARGA DIST REPORTED CRIMES


ಕೊಲೆಗೆ ಪ್ರಯತ್ನ :
ಸ್ಟೇಷನ ಬಜಾರ ಪೊಲೀಸ ಠಾಣೆ :ಶ್ರೀ ಗಣೇಶ ತಂದೆ ಅಮರಯ್ಯ ಹಿರೇಮಠ ಸಾ:ರಾಮಪೂರ ತಾ:ಸಿಂದಗಿಹಾ:ವ:ನಾಗಪ್ಪಾ ಸಿರಸಗಿ ಮನೆಯಲ್ಲಿ ಬಾಡಿಗೆ ವಾಸಗಾಬ್ರೆ ಲೇಔಟ ಗುಲಬರ್ಗಾ ರವರು ನನ್ನ ತಂದೆಯವರು ರಾಂಪೂರದಲ್ಲಿರುವ ಹೊಲ ಸುಮಾರು ಎರಡು ವರ್ಷಗಳ ಹಿಂದೆ ಮಾರಾಟ ಮಾಡಿ ಬಂದ ಹಣವನ್ನು ಖರ್ಚು ಮಾಡಿರುತ್ತಾನೆ. ಹೀಗಾಗಿ ಸುಮಾರು ಎರಡು ತಿಂಗಳಿಂದ ಹೊಲ ಮಾರಿದ ಹಣದ ವಿಷಯದಲ್ಲಿ ನನ್ನ ತಾಯಿ ನನ್ನ ತಂದೆಗೆ ಹಣ ಕೇಳುತ್ತಿರುವದರಿಂದ ನನ್ನ ತಂದೆ ನನ್ನ ತಾಯಿಗೆ ಹೊಡೆಬಡೆ ಮಾಡುವದು ಜಗಳ ತೆಗೆಯುವದು ಮಾಡುತ್ತಿದ್ದನು.ದಿನಾಂಕ 25-05-12 ರಂದು ರಾತ್ರಿ 9-00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಅಜ್ಜಿಯಾದ ಕರಿಬಸಮ್ಮ, ನನ್ನ ತಂಗಿ ಭಾಗ್ಯವತಿ ಮಾಳಿಗೆ ಮೇಲೆ ಮಲಗಲು ಹೋಗುವಾಗ ನನ್ನ ತಾಯಿ ಸಂಗಮ್ಮ ಗಣೇಶ ಅಂತಾ  ಚೀರುದಳು. ಆಗ ನಾವೆಲ್ಲರು ಮಾಳಿಗೆ ಮೇಲಿಂದ ಕೆಳಗೆ ಬಂದು ನೋಡಲಾಗಿ ನನ್ನ ತಾಯಿಗೆ ಚಾಕುವಿನಿಂದ ಕುತ್ತಿಗೆಗೆ ಹಾಗೂ ಎರಡು ಭುಜಗಳ ಮೇಲೆ ಹೊಡೆದು ಬಾರಿ ರಕ್ತಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಿಸಿ ತಾನು  ನೇಣು ಹಾಕಿಕೊಳ್ಳಲು ಪ್ರಯತ್ನಿಸುತ್ತಿದ್ದನ್ನು ನನ್ನ ತಾಯಿಗೆ ಉಪಚಾರಕ್ಕಾಗಿ ಬಸವೇಶ್ವರ ಆಸ್ಪತ್ರೆಗೆ ಖಾಸಗಿ ವಾಹನದಲ್ಲಿ ನಾನು ಮತ್ತು ನನ್ನ ಮನೆಯ ಪಕ್ಕದವರು ಕೂಡಿ ಉಪಚಾರಕ್ಕಾಗಿ ಸೇರಿಕೆ ಮಾಡಿರುತ್ತೇವೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 77/12 ಕಲಂ 325, 307 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:ಶ್ರೀ ಆಬಿದ ಹುಸೇನ ತಂದೆ ಚಾಂದ ಹುಸೇನ ಸಾ: ಹೈಕೋರ್ಟ ಆಫ ಕರ್ನಾಟಕ ಸೆರೂಕ್ಯೂಟ ಬಾಚ ಗುಲಬರ್ಗಾರವರು ರವರು ನಾನು ದಿನಾಂಕ 25-05-12 ರಂದು ರಾತ್ರಿ 8-30  ಗಂಟೆಗೆ ಹೈಕೋರ್ಟ ಕಾರ ನಂ ಕೆಎ-01 ಜೆ-4856 ರ ಚಾಲಕ ಸಲೀಮ ತಂದೆ ಮಹಿಬೂಬ ಸಾಬ ಇತನು ಕೋರ್ಟನಿಂದ ಕಾರಿಗೆ ಪೇಟ್ರೂಲ ಹಾಕಿಸಿಕೊಂಡು ಬರಲು ಶಕ್ತಿ ಪೇಟ್ರೂಲ ಪಂಪಗೆ ಬಂದು ಪೇಟ್ರೂಲ ಹಾಕಿಸಕೊಂಡು  ಹೈಕೋರ್ಟ ಕಡೆಗೆ ಬರುವಾಗ ಸನ್ ಇಂಟರ ನ್ಯಾಷೆನಲ್ ಹೋಟೇಲ ಎದುರು ರೋಡಿನ ಮೇಲೆ ಒಂದು ಹುಡುಗಿ ನಡೆದುಕೊಂಡು ಹೋಗುವಾಗ ಅವಳನ್ನು ಬಚಾವ ಮಾಡಲು ಹೋಗಿ ರೋಡಿನ ಪುಟಪಾಲ ಮೇಲೆ ಇರುವ ಒಂದು ಮರಕ್ಕೆ ಡಿಕ್ಕಿ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 60/2012  ಕಲಂ: 279 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ಶ್ರೀ ಮಧುಕರ ತಂದೆ  ಅಂಬಾಜಿ  ಕಾಂಬಳೆ   ಸಾ:  ಮಾದನ ಹಿಪ್ಪರಗಾರವರು ದಿನಾಂಕ 24/05/2012 ರಂದು  ನಮ್ಮ ಮನೆಯಲ್ಲಿ  ನಾನು ಮತ್ತು ನನ್ನ ಹೆಂಡತಿ ಮಂಗಲಾಬಾಯಿನಮ್ಮ  ಮನೆಯೆ  ಮೇಲೆ ಪತ್ರವಾನ್ನು ಹಾಕುತ್ತಿದ್ದಾಗ ಮಲ್ಲಪ್ಪಾ ತಂದೆ ದೊಂಡಿಬಾ ಕಾಂಬಳೆ , ವಿಠಲ್ ತಂದೆ ದೊಂಡಿಬಾ ಕಾಂಬಳೆ, ವಿಮಲಾಬಾಯಿ  ಗಂಡ  ವಿಠ್ಠಲಕಾಂಬಳೆ   ಮಹಾನಂದ ಗಂಡ  ಗಣೇಶ, ಕುಹಿರಾಬಾಯಿತಂದೆ  ವಿಠ್ಠಲಕಾಂಬಳೆ  6) ಯಶಾಬಾಯಿ  ಗಂಡ  ಮಲ್ಲಪ್ಪ  ಕಾಂಬಳೆ  7)  ಬಾಬು  ತಂದೆ  ವಿಠ್ಠಲ  ಕಾಂಬಳೆ  ಸಾ:  ಎಲ್ಲರೂ  ಮಾದನ  ಹಿಪ್ಪರಗಾ ಇವರೆಲ್ಲರೂ   ತಮ್ಮ  ಕೈಯಲ್ಲಿ  ಕಟ್ಟಿಗೆ  ರಾಡು   ಕೈಯಲ್ಲಿ  ಹಿಡಿದುಕೊಂಡು  ಎಕೊದ್ದೇಶದಿಂದ  ಆಕ್ರಮಕೂಟ  ಕಟ್ಟಿಕೊಂಡು  ಬಂದು  ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ  ಠಾಣೆ   ಗುನ್ನೆ ನಂ  21/2012 ಕಲಂ  143,147,148, 323,324,504,506ಸಂಗಡ 149  ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮೋಸ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ: ಶ್ರೀ ಹೋಳಬಸಯ್ಯ ತಂದೆ ಚನ್ನವೀರಯ್ಯ ಸುರೇಬಾನ  ಸಾ: ಇಂದ್ರಜೀತ ವ್ಹೇರ ಹೌಸಿಂಗ ಕಾರ್ಪೋರೆಷನ್‌ ಆಳಂದ ರೋಡ ಗುಲಬರ್ಗಾ ರವರು ದಿ: ನಾಂಕ: 22/5/2012 ರಂದು ಸಾಯಂಕಾಳ 4 ಪಿಎಮಕ್ಕೆ ಸಂಗಮೇಶ್ವರ ಟ್ರಾನ್ಸ್‌‌ಪೋರ್ಟ ಲಾರಿ ನಂ ಕೆಎ 17 9186 ನೇದ್ದರಲ್ಲಿ ಪಾರ್ಲೆ ಬಿಸ್ಕಿಟ್‌ & ಚಾಕಲೇಟ 555 ಬಾಕ್ಸಗಳನ್ನು ರಾಯಚೂರ ನಂದನ ಟ್ರೇಡರ್ಸ ಅವರಿಗೆ ಬಿಲ್‌ ನಂ 344 & 386 ನೇದ್ದರಲ್ಲಿ 3,49,739/- ರೂ ಕಿಮ್ಮತ್ತಿನದ್ದನ್ನು ಕೊಟ್ಟು ಕಳುಹಿಸಿದ್ದು ಅದನ್ನು ದಿನಾಂಕ:23/5/2012 ರಂದು ಮದ್ಯಾಹ್ನ 3 ಗಂಟೆಗೆ ನಂದನ ಟ್ರೇಡರ್ಸ ರಾಯಚೂರ ಇವರ ಹತ್ತಿರ 80 ಬಾಕ್ಸ್‌‌‌ ಬಿಸ್ಕಿಟ & ಚಾಕಲೇಟ ಕಡಿಮೆ ಕೊಟ್ಟು ಅಫರಾದಿಕ ನಂಬಿಕೆ ದ್ರೋಹವನ್ನು ವೆಸಗಿರುತ್ತಾನೆ ಅಂತಾದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 171/2012 ಕಲಂ 406 420 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.  
ಮೋಸ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ: ಶ್ರೀ ಉಮೇಶ ತಂದೆ ಭೀಮಾಶಂಕರ ಖಣಜೆಗೋಳ @ ಎಕಲೂರ  ಸಾ: ಸೈಯದ್ಯ ಚಿಂಚೋಳಿರವರು ನಾನು ನನ್ನ ತಮ್ಮ ಕೂಡಿಕೊಂಡು ದಿನಾಂಕ: 23/4/2012 ರಂದು ಬೆಳಿಗ್ಗೆ 8-00 ಎಎಮಕ್ಕೆ ಸರ್ವೇ ನಂ 4 ನೇದ್ದರಲ್ಲಿ ಬಂಡೆಪ್ಪ ತಂದೆ ಶರಣಪ್ಪ ಖಣಜೇಗೊಳ,ಮಲ್ಲಮ್ಮಾ ಗಂಡ ಬಂಡೆಪ್ಪ ಖಣಜೇಗೋಳ,ಚಂದ್ರಕಾಂತ ತಂದೆ ಬಂಡೆಪ್ಪ ಖಣಜೇಗೋಳ ಸಾ: ಎಲ್ಲರೂ  ಸೈಯದ ಚಿಂಚೋಳಿ ತಾ: ಜಿ: ಗುಲಬರ್ಗಾ ರವರು ಗಳ್ಯಾ ಹೊಡೆಯುತ್ತಿದ್ದಾಗ. ಇಲ್ಲಿ ಏಕೆ ಗಳ್ಯೆ ಹೊಡೆಯುತ್ತಿದ್ದಿರಿ ಅಂತ ಕೇಳಿದಕ್ಕೆ ಗಳ್ಯಾ ಹೊಡೆಯುವರು ಅವ್ಯಾಚ್ಯಚಾಗಿ ಬೈದು ಬಡಿಗೆಯಿಂದ ಹೊಡೆದು ರಕ್ತಗಾಯ ಗೊಳಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 172/2012 ಕಲಂ  504, 323,324, ಸಂ. 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.