POLICE BHAVAN KALABURAGI

POLICE BHAVAN KALABURAGI

03 March 2015

Kalaburagi District Reported Crimes

ಅತ್ಯಾಚಾರ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 26-01-15 ರಂದು ಮಧ್ಯರಾತ್ರಿ ಬೆಳಗಿನ 1-45 ಗಂಟೆ ಸುಮಾರಿಗೆ ಕುಮಾರಿ  ಇವಳಿಗೆ ಓಂಕಾರೇಶ್ವರ ಇತನು ತನ್ನ ಮಾವನ ಮನೆಯಲ್ಲಿ ರುದ್ರಾಭಿಷೇಕ ಇದೆ ಅಂತಾ ಹೇಳಿ  ಕಾರಿನಲ್ಲಿ, ಅವನ ಜೊತೆಯಲ್ಲಿ  2. ಓಂಪ್ರಕಾಶ ಕಮಲಾಪೂರಕರ  3.ಮಾಯಾ ಕಮಲಾಪೂರಕರ  4.ಕಿರಣಕುಮಾರ  5. ರಾಜಪ್ಪಾ  6. ಶ್ರೀಶೈಲ 7. ಕುಮಾರ 8. ಒಂಕಾರೇಶ್ವರ ಸೋದರ ಮಾವಂದಿರು 9. ಓಮಾಕಾರೇಶ್ವರ ಅಜ್ಜ ಮತ್ತು ಅಜ್ಜಿ ಹಾಗು ಇತರರು ಸಾ : ಎಲ್ಲರು ರೇವಣಸಿದ್ಏಶ್ವರ ಕಾಲನಿ ಕಲಬುರಗಿ  ಇವರೊಂದಿಗೆ ಸೋಲಾಪೂರಕ್ಕೆ ಕರೆದುಕೊಂಡು ಹೋಗಿ ಸೋಲಾಪೂರದ ಒಂದು ಲಾಡ್ಜನಲ್ಲಿ ಓಂಕಾರೇಶ್ವರನು ಜಬರಿ ಸಂಭೋಗ ಮಾಡಿರುತ್ತಾನೆ.  ಮತ್ತು ಒತ್ತಾಯಪೂರ್ವಕವಾಗಿ ಸೋಲಾಪೂರದ ಸಂಬಂಧಿಕರ ಮನೆಯಲ್ಲಿ ಬೆದರಿಸಿ ಇಟ್ಟಿದ್ದರು. ನಂತರ ದಿನಾಂಕ ದಿನಾಂಕ 29-01-15 ರಂದ  ಜಾಲಾನಾ ಆರ್ಯ ಸಮಾಜದಲ್ಲಿ  ಮದುವೆ ಮಾಡಿಕೊಂಡಿದ್ದು, ನಂತರ  ಅವಳ ಹತ್ತಿರವಿದ್ದ  1)ನಗದು ಹಣ 25000/- ರೂ.2)ಬಂಗಾರದ ಬಳೆಗಳು, 3)ಬಂಗಾರ ಪ್ಲಾಟಲಿಗಳು 4)ಬಂಗಾರದ ಬಿಲ್ವಾರಗಳು 5)ಬಂಗಾರದ ಲಾಕೇಟ, 6)ಬಂಗಾರದ ನೆಕ್ಕಲೇಸ 7)ಬಂಗಾರದ ಉಂಗುರುಗಳು ಓಂಕಾರೇಶ್ವರ  ಮತ್ತು ಅವನ ತಂದೆ, ತಾಯಿ ಜಬರದಸ್ತಿಯಿಂದ ಕಸಿದುಕೊಂಡರು, ಮತ್ತು ಫಿರ್ಯಾದಿದಾರಳ ಕಡೆಯಿಂದ  ತಮ್ಮಿಬ್ಬರ ವಿವಾಹ ಸ್ವಇಚ್ಫೆಯಿಂದ ಆಗಿದೆ ಎಂದು ಅಂಜಿಸಿ ಅಫಿಡೆವಿಟ್ ಬರೆಯಿಸಿ, ಜೀವ ಬೆದರಿಕೆ ಹಾಕಿ ಸಹಿ ಮಾಡಿಸಿ ಪೋಸ್ಟ ಮುಖಾಂತರ  ಮಾನ್ಯ ಎಸ್.ಪಿ. ಸಾಹೇಬ ಕಲಬುರಗಿ ಮತ್ತು ಸರ್ಕಲ ಇನ್ಸಪೆಕ್ಟರ, ಹಾಗೂ ಔರಂಗಬಾದ ಮುಖ್ಯ ಪೊಲೀಸ ಅಧಿಕಾರಿಗಳಿಗೆ ಕಳುಹಿಸಿರುತ್ತಾರೆ.  ದಿನಾಂಕ 09-02-15 ರಂದು ಸಂಜೆ ಕಲಬುರಗಿ ಬಿಟ್ಟು ಎಲ್ಲರೂ ಪರಾರಿಯಾಗಿರುತ್ತಾರೆ.  ಮತ್ತು ನನ್ನ ಇಚ್ಫೆಯ ವಿರುದ್ಧ ಹಾಗೂ ಜೀವ ಬೆದರಿಕೆ ಹಾಕಿ ಹಾಗೂ ನನ್ನ ಬೆತ್ತೆಲೆ ಪೋಟೋಗಳನ್ನು ತೋರಿಸಿ ವಂಚಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಮಾದನಹಿಪ್ಪರಗಾ ಠಾಣೆ : ಶ್ರೀ.ಸೂರ್ಯಕಾಂತ ತಂದೆ ಬಸಣ್ಣಾ ಮಾಳಿ@ಯಳಸಂಗಿ ಸಾ; ಸರಸಂಬಾ ರವರು ದಿನಾಂಕ:05/12/2014 ರಂದು ಪಿರ್ಯಾದಿಯು ತನ್ನ ಅಣ್ಣನಾದ ಮಹಾದೇವ ಇತನ ಮನೆಗೆ ಹೋಗಿ ಮನೆಯ ಜಾಗದ ಹಂಚಿಕೆಯ ವಿಷಯದ ಬಗ್ಗೆ ಕೇಳಿದ್ದಾಗ ನಾಲ್ಕು ಮಂದಿಯ ಮಧ್ಯ ಹಂಚಿಕೊಳ್ಳೊಣಾ ಅಂತಾ ಹೇಳಿ ನನಗೆ ಕಳುಹಿಸಿದ್ದು ನಂತರ ಅದೇ ದಿವಸ ಮದ್ಯಾಹ್ನ 01:00 ಗಂಟೆಯ ಸುಮಾರಿಗೆ ನಾನು ನಮ್ಮೂರಿನ ಗ್ರಾಮ ಪಂಚಾಯತ ಕಾರ್ಯಾಲಯದ ಮುಂದೆ ನಿಂತಾಗ ನನ್ನ ಅಣ್ಣಾನಾದ ಮಹಾದೇವ ಇತನು ಬಂದು ನನಗೆ ನೋಡಿ ಏ ರಂಡೀ ಮಗನೇ ನಿನ್ನ ಅವ್ವನ್ನ ತುಲ ಹಡಾ ನನ್ನ ಮನೆಯ ಕಟ್ಟಡ ನಿಲ್ಲಿಸುತ್ತಿಯಾ ರಂಡೀ ಮಗನೇ ಅಂತಾ ಅವಾಚ್ಯವಾಗಿ ಬೈದು ಕೈಯಿಂದ ಕಪ್ಪಾಳದ ಮೇಲೆ ಹೊಡೆದನು ನಂತರ ಬಸವರಾಜ ಇತನು ಓಡಿ ಬಂದು ನನಗೆ ಕೈಹಿಡಿದು ಕೆಳಗೆ ಹಾಕಿ ಬೂಟ ಕಾಲಿನಿಂದ ಹೊಟ್ಟೆಯ ಮೇಲೆ ಹೊಡೆದು ಒಳಪೆಟ್ಟು ಮಾಡಿ ಕೈಮುಷ್ಠಿ ಮಾಡಿ ಮುಖದ ಮೇಲೆ ಹೊಡೆದಿದ್ದು ಅಲ್ಲಿಯೇ ಇದ್ದ ಯುವರಾಜ ಇತನು ಈ ರಂಡೀ ಮಗನಿಗೆ ಇವತ್ತು ಬೀಡ ಬೇಡಿರಿ ಸರಿಯಾಗಿ ಸಿಕ್ಕಿ ಬಿದ್ದಿದ್ದಾನೆ ಮುಗಿಸಿಯೇ ಬಿಡೋಣಾ ಅಂತಾ ಅವಾಚ್ಯ ಶಬ್ಬಗಳಿಂದ ಬೈದು ಕಟ್ಟಿಗೆಯಿಂದ ಬೇನ್ನಿನ ಮೇಲೆ ಹೊಡೆದು ಒಳಪೆಟ್ಟು ಮಾಡಿದ್ದು ನನ್ನ ಅತ್ತಿಗೆ ಪಾವರ್ತಿ ಇವಳು ಈ ನನ್ನ ಹಟ್ಯಾನ ಮಗನಿಗೆ ಬಹಳ ಸೊಕ್ಕು ಬಂದಿದೆ ಜೀವ ಸಹಿತ ಬೀಡ ಬೇಡಿರಿ ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾದನಹಿಪ್ಪರಗಾ ಠಾಣೆ : ಶ್ರೀ.ಗುರುಲಿಂಗಪ್ಪಾ ತಂದೆ ಬಸವಣಪ್ಪಾ ಬಮ್ಮದೆ ಸಾ; ಕಿಣ್ಣಿ ಅಬ್ಬಾಸ ರವರು ದಿನಾಂಕ:10/02/2015 ರಂದು ಮುಂಜಾನೆ 10 ಗಂಟೆಯಿಂದ ದಿನಾಂಕ: 13/02/2015 ರವರೆಗೆ ಗಂಟೆಯವರೆಗೆ ನನಗೆ ಕಿಣ್ಣಿ ಅಬ್ಬಾಸ ಗ್ರಾಮದ ನನ್ನ ಮನೆಯಲ್ಲಿ ನನ್ನ ಆಸ್ತಿಯನ್ನು ಕಬಳಿಸಬೇಕು ಅನ್ನುವ ಉದ್ದೇಶದಿಂದ ಆರೋಪಿತರೆಲ್ಲರೂ ನನಗೆ ಮನೆಯಲ್ಲಿ ಅಕ್ರಮವಾಗಿ ಮನೆಯಲ್ಲಿ ಇಟ್ಟಿರುತ್ತಾರೆ. ದಿ:13/02/2015 ರಂದು ಮುಂಜಾನೆ 11 ಗಂಟೆಯಿಂದ ಸಾಯಂಕಾಲ 4:00 ಗಂಟೆಯವರೆಗೆ ಉಪನೊಂದಣಿ ಅಧಿಕಾರಿಗಳು ಆಳಂದರವರ ಕಾರ್ಯಾಲಯದಲ್ಲಿ ನನಗೆ ಜೀವದ ಭಯ ಹಾಕಿ ನನ್ನ ಆಸ್ತಿಯನ್ನು ಕಾಣಿಕೆ ಪತ್ರ ಅಂತಾ ನನ್ನ ಮೊಮ್ಮಗಳ ಹೆಸರಿಗೆ ನೊಂದಣಿ ಮಾಡಿಸಿರುತ್ತಾರೆ. ನಂತರ ನನಗೆ 13/02/2015 ರಿಂದ 25/02/2015 ರವರೆಗೆ ನನ್ನ ಸೊಸೆಯ ತವರು ಮನೆಯಾದ ಗಿಲಿಗಿಲಿ[ಗಿಲಕಿ] ತಾ: ಬಸವಕಲ್ಯಾಣದಲ್ಲಿ ಇಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದುರು ಸಾರಾಂಸದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.