POLICE BHAVAN KALABURAGI

POLICE BHAVAN KALABURAGI

15 May 2019

KALABURAGI DISTRICT REPORTED CRIMESಜೇವರಗಿ ಪೊಲೀಸ್ ಠಾಣೆ : ದಿನಾಂಕ; 14/05/2019 ರಂದು ರಾತ್ರಿ 11-20 ಪಿ.ಎಮ್ ವೇಳೆಗೆ ಫಿರ್ಯಾದಿ ಪೀರಪ್ಪ ತಂದೆ ಬಸಪ್ಪ ಯಾತನೂರ ಸಾ; ಯಾತನೂರ ವಯ; 38 ವರ್ಷ ಉ; ಸಮಾಜಸೇವೆ ಕೆಲಸ ಜಾ; ಹಿಂದು ಹೊಲೆಯ ಈತನು ಠಾಣೆಗೆ ಹಾಜರಾಗಿ ಲಿಖಿತ ದೂರಿ ನಿಡಿದ ದೂರಿನ ಸಾರಂಶವೇನೆಂದರೆ; ನಾನು ಪೀರಪ್ಪ ಯಾತನೂರ ಸಾ; ಯಾತನೂರ ವಯ; 38 ವರ್ಷ ಉ; ಸಮಾಜಸೇವೆ ಕೆಲಸ ಜಾ; ಹಿಂದು ಹೊಲೆಯ ನಾನು ಮತ್ತು ನನ್ನ ಗೆಳೆಯನಾದ ಗಂಗಾಧರ ವಿಭೂತಿ ಕೂಡಿಕೊಂಡು ಸುಮಾರು 3-20 ರ ಮದ್ಯಾಹ್ನ ದಿನಾಂಕ; 13/05/2019 ರಂದು ನನ್ನ ಕಾರಿನ ವೀಲ್ ಅಲೈನ್ ಮೆಂಟ್ ಮಾಡಿಕೊಂಡು ಐಲ್ ಚೇಂಜ್ ಗೋಸ್ಕರ ಅಲ್ಲೆ ಎಮ್ ಆರ್ ಎಫ್ ಟಾಯರ್ ಎದರುಗಡೆಯಿದ್ದ ಗ್ಯಾರೇಜಗೆ ನನ್ನ ಕಾರು ತೆಗೆದುಕೊಂಡು ಹೋದಾಗ ಏಕಾ ಏಕಿ ರೌಫ್ ಹವಲ್ದಾರ, ಕಾಲೀದ್ ಗುತ್ತೆದಾರ, ರೌಪ್ ಹವಲ್ದಾರನ ಟಿಪ್ಪರ್ ಚಾಲಕ ( ಹೆಸರು ಗೊತ್ತಿಲ್ಲ ) ಹಾಗು ಇನ್ನಿತರ ಇಬ್ಬರ ಹೆಸರು ಗೊತ್ತಿಲ್ಲ. ನನ್ನ ಉಸುಕಿನ ಟಿಪ್ಪರ ಹಿಡಿಯಲು ನೀ ಯಾರು ಹೊಲೆಯ ಸೂಳೆ ಮಗನೆ ಇಲಾಖೆಗೆ ದುಡ್ಡುಕೊಟ್ಟು ಹೊಡಿತೀವಿ ಇದನ್ನು ನೀನು ಯಾಕೆ ಕೇಳುತ್ತಿಯಾ ಸೂಳಿ ಮಗನೆ ಎನ್ನುತ್ತಾ ರೌಫ್ ಹವಲ್ದಾರ ಇತನು ನನ್ನ ಕೆನ್ನೆಯ ಮೇಲ್ಭಾಗಕ್ಕೆ ಬಲವಾಗಿ ಹೊಡೆನು. ಅಲ್ಲದೆ ನನ್ನ ಎಡಗಡೆ ಕಿವಿಗೆ ಬಲವಾಗಿ ಹೊಡೆದ ರಭಸಕ್ಕೆ ಕಿವಿಯಿಂದ ರಕ್ತ ಬರಲು ಆರಂಬಿಸಿತು ಅಲ್ಲೆ ಇದ್ದ ಕಾಲಿದ್ ಗುತ್ತೆದಾರ ಈತನು ತೊರಡಿಗೆ ಒದ್ದನು. ಮತ್ತು ಟಿಪ್ಪರ್ ಡ್ರೈವರ್ ಈತನು ಕೂಡ ಮುಖಕ್ಕೆ, ಕಪಾಳಕ್ಕೆ ಹೊಡೆದನು. ಇನ್ನಿತರ ಇಬ್ಬರು ಕೂಡ ನನ್ನ ಮೇಲೆ ಹಲ್ಲೆ ಮಾಡಿ ಅವಾಚ್ಯವಾಗಿ ನಿಂದಿಸುತ್ತಾ ಹೊಲೆ ಸೂಳಿ ಮಗನೆ ಎನ್ನುತ್ತಾ ತನ್ನ ಕಾಲಲ್ಲಿದ್ದ ಚಪ್ಪಲಿ ತೆಗೆದುಕೊಂಡು ರೌಫ್ ಹವಲ್ದಾರ ಎನ್ನುವವನು ತಲೆಗೆ ಐದಾರು ಬಾರಿ ಹೊಡೆದನು. ಏಕಾ ಏಕಿ ಗುಫು ಕಟ್ಟಿಕೊಂಡು ನನ್ನ ಮೆಲೆ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಢುವ ಉದ್ದೇಶದಿಂದ ನನ್ನನ್ನು ಹೊಡೆದಿರುತ್ತಾರೆ. ಅಲ್ಲೆ ಜೊತೆಯಲ್ಲಿ ಇದ್ದ ಗಂಗಾಧರ ವಿಭೂತಿ, ರವಿ ಹೂಗಾರ ಇವರು ನನ್ನನ್ನು ಕಾರಿನಲ್ಲಿ ಇವರಿಂದ ಬಿಡಿಸಿಕೊಂಡು ಕರೆದುಕೊಂಡು ಬಂದರು. ಇಲ್ಲದೆ ಹೋದರೆ ಈ ಮೇಲೆ ತಿಳಿಸಿದ ಐದು ಜನ ನನ್ನನ್ನು ಕೊಲೆ ಮಾಡುತ್ತಿದ್ದರು.ಹಿನ್ನೆಲೆಸುಮಾರು ಒಂದರಿಂದ ಒಂದುವರೆ ತಿಂಗಳ ಹಿಂದೆ ರೌಫ್ ಹವಲ್ದಾರ ಸುಮಾರು 11-30 ರ ರಾತ್ರಿ ಅಕ್ರಮ ಮರಳು ಸಾಗಿಸುತ್ತಿದ್ದದ್ದನ್ನು ನಾನು ತಡೆದಾಗ ಅಲ್ಲೆ ಟಿಪ್ಪರ ಮರಳು ಅಂದರೆ ಜೇರಟಗಿಯಲ್ಲಿ ಖಾಲಿ ಮಾಡಿ ಜೇಆವರಗಿಗೆ ಬಾ ಮಗನೆ ನಿನ್ನನ್ನು ನೋಡಿಕೊಳ್ಳುತ್ತೇನೆ. ನಿನ್ನನ್ನು ಬಿಟ್ಟರೆ ಅಪ್ಪನಿಗೆ ಹುಟ್ಟಿಲ್ಲ ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ದಮಕಿ ಹಾಕಿರುತ್ತಾನೆ. ಅಲ್ಲೆ ರೂಲ್ ಕಾಲಿನಲ್ಲಿ ಇದ್ದ ಸಿಬ್ಬಂದಿಯಾದ ಶಿವರಾಯ ಪಿಸಿ 859, ಹಾಗು ಬಸವರಾಜ ಮಾಗಣಗೇರಾ ನೆಲೋಗಿ ಠಾಣಾ ಸಿಬ್ಬಂದಿಯವರಿಗೆ ಪ್ರಾಣಭೆದರಿಕೆ ಹಾಕಿದ್ದು ಘಮನಕ್ಕೆ ತಂದರು ಕೂಡ ಯಾವುದೆ ಕ್ರಮ ಕೈಗೊಂಡಿರುವದಿಲ್ಲಈ ಮೇಲೆ ತಿಳಿಸಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ತಮ್ಮಲ್ಲಿ ಕೋರಿಕೆ ಅಲ್ಲದೆ ನನಗೆ ರಕ್ಷಣೆ ನೀಡಲು ಕೋರಿಕೆ. ಮತ್ತು ಮದುವೆಯ ನಿಮಿತ್ಯ ದೂರೂ ನೀಡಲು ತಡವಾಗಿರುತ್ತದೆ ಎಂದು ನೀಡಿದ ದೂರಿನ ಸಾರಂಶದ ಮೇಲಿಂದ ಜೇವರಗಿ ಪೊಲೀಸ್ ಠಾಣೆ ಗುನ್ನೆ ನಂ; 102/2019 ಕಲಂ: 143 147 323 324 307 504 506 ಸಂಗಡ 149 ಐಪಿಸಿ ಮತ್ತು ಕಲಂ; 3 (1) (r) ಎಸ್ ಸಿ, ಎಸ್ ಟಿ ಕಾಯ್ದೆ ನೇದ್ದರ ಪ್ರಕಾರ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೇನು.ಇರುತ್ತದೆ
ಚೌಕ ಠಾಣೇ : ದಿನಾಂಕ.14.05.2019 ರಂದು ಸಾಯಾಂಕಾಲ 18.00 ಗಂಟೆಗೆ ಫಿರ್ಯಾಧಿದಾರರಾದ ಶ್ರೀ ಮಾಣೀಕ ಪಾಟೀಲ ತಂದೆ ಬಾಬುರಾವ ಪಾಟೀಲ, ವಯ: 41ವರ್ಷ, ಉ: ಒಕ್ಕಲುತನ, ಮು: ಗೋಳಾ(ಕೆ), ತಾ: ಶಹಾಬಾದ, ಜಿಲ್ಲಾ : ಕಲಬುರಗಿ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕೃತ ಮಾಡಿದ ದೂರು ಅರ್ಜಿಯನ್ನು ನೀಡಿದ್ದು ಸಾರಾಂಶ ಈ ಕೆಳಗಿನಂತೆ ಇರುತ್ತದೆ.ಈ ಅರ್ಜಿಯ ಮೂಲಕ ತಮಗೆ ತಿಳಿಯಪಡಿಸುವುದೆನೆಂದರೆ, ಇಂದು ದಿನಾಂಕ.14.05.2019 ರಂದು ಬೆಳಿಗ್ಗೆ 10.00 ಗಂಟೆ ಸುಮಾರಿಗೆ ನಮ್ಮೂರಿನಿಂದ ನನ್ನ ಖಾಸಗಿ ಕೆಲಸದ ಪ್ರಯುಕ್ತ ನನ್ನ ಕಾರ್ ನಂ.KA05MQ2501 ನೆದ್ದರಲ್ಲಿ ಕಲಬುರಗಿಗೆ ಬಂದು ಆಸೀಪ ಗಂಜ್ ಎಲ.ಐ.ಸಿ ಆಫೀಸ ಹತ್ತಿರ ಇರುವ ಕರ್ನಾಟಕ ಬ್ಯಾಂಕಿಗೆ ಹೋಗಿ ನನ್ನ ಅವಶ್ಯಕತೆಗಾಗಿ ಬ್ಯಾಂಕಿನಿಂದ 3,85,000=00 ( ಮೂರು ಲಕ್ಷ ಎಂಬತೈದು ಸಾವಿರ ರೂಪಾಯಿ) ಹಣವನ್ನು ಡ್ರಾ ಮಾಡಿಕೊಂಡು ಆ ಹಣವನ್ನು ಬ್ಯಾಗಿನಲ್ಲಿಟ್ಟು ನನ್ನ ಕಾರಿನ ಹಿಂದಿನ ಸೀಟಿನಲ್ಲಿ ಇಟ್ಟು ಅಲ್ಲಿಂದ ಕನಿಷ್ಕಾ ಲಾಡ್ಜ ಹತ್ತಿರ ಬಂದು ನನ್ನ ಕಾರನ್ನು ಮುಂದೆ ರೋಡಿನ ಪಕ್ಕದಲ್ಲಿ ನಿಲ್ಲಿಸಿ ಕೆಲಸವಿದ್ದ ಕಾರಣ ಟಾಟಾ ಪೈನಾನ್ಸಿಗೆ ಹೋಗಿ ಮರಳಿ ಬಂದು ನೋಡಲಾಗಿ ನನ್ನ ಕಾರಿನ ಹಿಂಭಾಗದ ಡೋರಿನ ಗ್ಲಾಸ ಒಡೆದಿದ್ದು, ಒಳಗೆ ನೋಡಲಾಗಿ ನಾನು ಇಟ್ಟಿದ್ದ ಹಣ ಬ್ಯಾಗ ಇರಲಿಲ್ಲ. ಕಾರಿನಲ್ಲಿ ನೋಡಲಾಗಿ ಯಾವ ಕಡೆಯು ಸಹ ನನ್ನ ಹಣದ ಬ್ಯಾಗ ಕಾಣಲಿಲ್ಲ. ಯಾರೋ ಕಳ್ಳರು ನನ್ನ ಕಾರಿನಲ್ಲಿಟ್ಟ 3,85,000=00 (ಮೂರು ಲಕ್ಷ ಎಂಬತೈದು ಸಾವಿರ ರೂಪಾಯಿ) ಗಳು ಕಾರಿನ ಹಿಂಭಾಗದ ಡೋರಿನ ಗ್ಲಾಸ್ ಒಡೆದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಲ್ಲದೇ ಕಾರಿನ ಮುಂದಿನ ಟೈರ ಪಂಚರ ಮಾಡಿರುತ್ತಾರೆ. ನನ್ನ ಹಣವಿದ್ದ ಬ್ಯಾಗಿನಲ್ಲಿ 1) ಕಾರ್ಪೋರೇಶನ ಬ್ಯಾಂಕ್ ಕಲಬುರಗಿ , ಐಸಿಐ ಬ್ಯಾಂಕ್ ಕಲಬುರಗಿ, ಬಿ.ಒ.ಐ ಬ್ಯಾಂಕ್ ಕಲಬುರಗಿ, ಸಿಂಡಿಕೆಟ್ ಬ್ಯಾಂಕ್ ಶಹಬಾದ ಈ ಬ್ಯಾಂಕುಗಳ ನಾಲ್ಕು ಚೆಕಬುಕಗಳು ಮತ್ತು ಇತರೆ ದಾಖಲಾತಿಗಳೂ ಇದ್ದವು. ಈ ಘಟನೆಯು ಇಂದು ದಿನಾಂಕ.14.05.2019 ರಂದು 14.25 ಗಂಟೆಗೆ ಜರುಗಿರುತ್ತದೆ. ಕಾರಣ ಕಳೆದು ಹೋದ ನನ್ನ ಹಣ ಮತ್ತು ದಾಖಲಾತಿಗಳನ್ನು ಪತ್ತೆಮಾಡಿಕೊಡಬೆಕೆಂದು ವಿನಂತಿ. ಅಂತಾ ನೀಡಿದ ಅರ್ಜಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.53/2019, ಕಲಂ. 379 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
¤A§UÁð ¥ÉưøÀ oÁuÉ : ದಿನಾಂಕ 14/05/2019 ರಂದು 13.00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಶಿವಯೊಗಿ ತಂದೆ ಕಲ್ಲಪ್ಪ ಕಾಮನಗೊಳ ವಃ 50 ವರ್ಷ, ಜಾಃ ಕುಡ ಒಕ್ಕಲಿಗ, ಉಃ ಒಕ್ಕಲುತನ, ಸಾಃ ನಿಂಬರ್ಗಾ ಗ್ರಾಮ, ತಾಃ ಆಳಂದ ಇವರು ಠಾಣೆಗೆ  ಹಾಜರಾಗಿ ಒಂದು ಲಿಖೀತ ದೂರು ಸಲ್ಲಿಸಿದ್ದು ಅದರ ಸಂಕ್ಷಿಪ್ತ ಸಾರಾಂಶವೇನೆಂದರೆ ನನಗೆ ಒಬ್ಬ ಗಂಡು ಮಗ ಇಬ್ಬರು ಹೆಣ್ಣುಮಕ್ಕಳು ಇದ್ದು ನಾನು ಒಕ್ಕಲುತನ ಕೆಲಸ ಮಾಡಿಕೊಂಡು ಪರಿವಾರೊಂದಿಗೆ ವಾಸಿಸುತ್ತಿದ್ದೇನೆ. ನನ್ನ ಹೆಣ್ಣು ಮಗಳಾದ ಸಿದ್ದಮ್ಮ ಇವಳಿಗೆ ಹಿತ್ತಲಶಿರೂರ ಗ್ರಾಮದ ನಾಗರಾಜ ಎಂಬುವವನೊಂದಿಗೆ ಮದುವೆ ಮಾಡಿಕೊಟ್ಟಿದ್ದು ಹಾಗೂ ನನ್ನ ಕಿರಿಯ ಮಗಳಾದ ಮಹಾನಂದ ಇವಳಿಗೆ ಭುಯ್ಯಾರ ಗ್ರಾಮದ ವಿಜಯಕುಮಾರ ಇತನೊಂದಿಗೆ ಮದುವೆ ಮಾಡಿಕೊಟ್ಟಿರುತ್ತೇವೆ. ಈಗ ಇಬ್ಬರೂ ಹೆಣ್ಣು ಮಕ್ಕಳು ಬಾಣಂತನ ಸಲುವಾಗಿ ನಮ್ಮ ಮನೆಗೆ ಬಂದಿರುತ್ತಾರೆ. ಹೀಗಿದ್ದು ದಿನಾಂಕ 13/05/2019 ರಂದು ರಾತ್ರಿ 10.00 ಗಂಟೆಯ ಸುಮಾರಿಗೆ ನಾನು, ನನ್ನ ಹೆಂಡತಿ, ಹಾಗೂ ಮಕ್ಕಳು ಎಲ್ಲರೂ ಸೇರಿ ಊಟ ಮಾಡಿದ್ದು ನಂತರ 11.00 ಗಂಟೆಯ ಸುಮಾರಿಗೆ ನನ್ನ ಮನೆಯ ಬಾಗಿಲು ಮುಚ್ಚಿ ಕೀಲಿಹಾಕಿಕೊಂಡು ಎಲ್ಲರೂ ಮನೆಯ ಮಾಳಗಿ ಮೇಲೆ ಹೋಗಿ ಮಲಗಿಕೊಂಡಿರುತ್ತೇವೆ. ನಂತರ ನಾನು ದಿನಾಂಕ 14/05/2019 ರಂದು ಬೆಳಿಗ್ಗೆ 06.00 ಗಂಟೆಯ ಸುಮಾರಿಗೆ ಎದ್ದು ಮೇಳಿಗೆ ಮೇಲಿಂದ ಕೆಳಗೆ ಬಂದು ಬಾಗಿಲು ಕೀ ತೆರೆಯಬೇಕು ಎನ್ನುವಷ್ಟರಲ್ಲಿ ಬಾಗಿಲು ಮುರಿದಂತೆ ಕಂಡು ಬಂದಿದ್ದು ಆಗ ನಾನು ಗಾಬರಿಯಿಂದ ನನ್ನ ಹೆಂಡತಿ ಮಕ್ಕಳಿಗೆ ಕರೆದಿದ್ದು ಅವರು ಕೂಡ ಕೆಳಗೆ ಬಂದಿದ್ದು ನಾವೆಲ್ಲರೂ ಸೇರಿ ನಮ್ಮ ಮನೆಯ ಬಾಗಿಲನ್ನು ತೆರೆದಿದ್ದು ಎದುರಿಗೆ ಅಲಮಾರಿ ಇದ್ದುದ್ದನ್ನು ಕಂಡು ಗಾಬರಿಯಾಗಿ ಎಲ್ಲರೂ ಒಳಗೆ ಹೋಗಿ ನೋಡಿದಾಗ ಎಲ್ಲಾ ವಸ್ತುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದು ಮಲಗುವ ಕೊಣೆಯಲ್ಲಿದ್ದ ಅಲಮಾರಿಯು ಹಾಲ್ ನಲ್ಲಿ ಹಚ್ಚಿದ್ದು ನಂತರ ನಾವು ನೋಡಲಾಗಿ ಮನೆಯ ಅಲಮಾರನ ಲಾಕರದಲ್ಲಿಟ್ಟಿದ್ದ ನನ್ನ ಹಿರಿಯ ಮಗಳಾದ ಸಿದ್ದಮ್ಮ ಇವಳ 01] 1 ತೊಲೆ ಬಂಗಾರದ ಲಾಕೇಟ ಅ.ಕಿ 24,000/- ರೂಪಾಯಿ, 02] 3 ಜೊತೆ ಬಂಗಾರದ ಕಿವಿಯೊಲೆ 5 ಗ್ರಾಂ. ಅ.ಕಿ 12000/- ರೂಪಾಯಿ, 03] 1 ಜೊತೆ ಕಿವಿಯ ರಿಂಗ ಬಂಗಾರದ್ದು 1 ಗ್ರಾಂ. ಅ.ಕಿ 2400/- ರೂಪಾಯಿ ಹಾಗೂ ನನ್ನ ಕಿರಿಯ ಮಗಳಾದ ಮಹಾನಂದ ಇವಳ 01] 3 1/2 ತೊಲೆ ಬಂಗಾರದ ಮಂಗಳ ಸೂತ್ರ ಅ.ಕಿ 84000/- ರೂಪಾಯಿ, 02] 1 ತೊಲೆ ಬಂಗಾರದ 1 ನೆಕ್ಸ್ಲೇಸ ಅ.ಕಿ 24000/- ರೂಪಾಯಿ, 03] 3 ಗ್ರಾಂ ಬಂಗಾರದ ಕೈಕಟ್ಟುಗಳು ಅ.ಕಿ 7200/- ರೂಪಾಯಿ, 04] 1 ತೊಲೆ ಬಂಗಾರದ ಪಾಟಲಿ ಅ.ಕಿ 24,000/- ರೂಪಾಯಿ ಹಾಗೂ ಮನೆಯಲ್ಲಿಟ್ಟಿದ್ದ 60,000/- ರೂಪಾಯಿ ನಗದು ಹಣ ಹೀಗೆ ಒಟ್ಟು 7 ತೊಲೆ 3 ಗ್ರಾಂ ಬಂಗಾರದ ಆಭರಣಗಳು ಅ.ಕಿ 177600/- ರೂಪಾಯಿ ಮತ್ತು ನಗದು ಹಣ 60,000/- ರೂಪಾಯಿ ಯಾರೋ ಕಳ್ಳರು ದಿನಾಂಕ 13/05/2019 ರಂದು ರಾತ್ರಿ 11.00 ಗಂಟೆಯಿಂದ ದಿನಾಂಕ 14/05/2019 ರಂದು ಬೆಳಿಗ್ಗೆ 06.00 ಗಂಟೆಯ ಮಧ್ಯದ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೊಗಿದ್ದು ಅದೇ ಸಮಯಕ್ಕೆ ಹೊರಗಡೆ ಚೀರಾಡುವ ಸಪ್ಪಳ ಕೇಳಿ ನಾನು ಹೊರಗಡೆ ಬಂದು ನೋಡಿದಾಗ ನಮ್ಮೂರಿನ ಶ್ರೀ ಬಸವರಾಜ ತಂದೆ ಮಲ್ಲಪ್ಪ ಸಿಂದಗಿ ಇವರು ಚೀರಾಡುತ್ತಿದ್ದು ಅವರಲ್ಲಿಗೆ ಹೋಗಿ ವಿಚಾರಿಸಿದಾಗ ರಾತ್ರಿ 11.30 ಗಂಟೆಯಿಂದ ಬೆಳಿಗ್ಗೆ 06.00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೊ ಕಳ್ಳರು ನನ್ನ ಮನೆಯ ಬಾಗಿಲ ಕೀಲಿ ಮುರಿದು ಮನೆಯಲ್ಲಿ ಹೋಗಿ ಮನೆಯಲ್ಲಿದ್ದ ಟಿಜೋರಿಯಲ್ಲಿದ್ದ 01] 9 ಗ್ರಾಂ ಬಂಗಾರದ ಜೀರಾಮಣಿ ಅ.ಕಿ 21,600/-, 02] 2 ಗ್ರಾಂ ಬಂಗಾರದ ಕಿವಿಓಲೆ ಅ.ಕಿ 4800/- ರೂಪಾಯಿ ಹಾಗೂ 03] ನಗದು ಹಣ 4600/- ರೂಪಾಯಿ ಹೀಗೆ ಒಟ್ಟು 26,400/- ರೂಪಾಯಿ ಮೌಲ್ಯದ ಬಂಗಾರದ ಆಭರಣಗಳು ಮತ್ತು ನಗದು ಹಣ 4600/- ರೂಪಾಯಿ ಇವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ನನ್ನ ಹಾಗೂ  ಬಸವರಾಜ ಇವರ ಮನೆಯ ಬಾಗಿಲು ಮುರಿದು ರೂ. 2,68,600/- ಮೌಲ್ಯದ  ಬಂಗಾರದ ಆಭರಣ ಮತ್ತು ನಗದು ಹಣವನ್ನು ದಿನಾಂಕ 13/05/2019 ರಂದು ರಾತ್ರಿ 11.00 ಗಂಟೆಯಿಂದ ದಿನಾಂಕ 14/05/2019 ರಂದು ಬೆಳಿಗ್ಗೆ 06.00  ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಕೊಟ್ಟ ಫಿರ್ಯಾದಿ ಮೇಲಿಂದ ನಿಂಬರ್ಗಾ ಪೊಲೀಸ ಠಾಣೆ ಗುನ್ನೆ ನಂ. 39/2019 ಕಲಂ 457, 380 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
C±ÉÆÃPÀ £ÀUÀgÀ ¥Éưøï oÁuÉ : ಇಂದು ದಿನಾಂಕ:14.05.2019 ರಂದು 08:00 ಪಿ.ಎಂ.ಕ್ಕೆ ಫಿರ್ಯಾದಿ ಶ್ರೀ ಅತೀಶ ತಂದೆ ಸುರೇಶ ಗಾಯಕವಾಡ ವಯ: 30 ವರ್ಷ : ಖಾಸಗಿ ಕೆಲಸ ಸಾ|| ಎಂ.ಎಸ್.ಕೆ. ಮಿಲ್ ಕ್ವಾಟರ್ಸ ಸಿದ್ದಾರ್ಥ ನಗರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರು ಅರ್ಜಿಯನ್ನು ಸಲ್ಲಿಸಿದ್ದು ಅದರ ಸಾರಾಂಶ ವೆನೆಂದರೆ, ನಾನು ಖಾಸಗಿ ಕೆಲಸ ಮಾಡಿಕೊಂಡು ನನ್ನ ಕುಟುಂಬದೊಂದಿಗೆ ವಾಸವಾಗಿರುತ್ತೇನೆ. ನಾನು ನನ್ನ ಕೆಲಸದ ನಿಮಿತ್ಯ ಆಗಾಗ ಬೇರೆ ಬೇರೆ ಊರುಗಳಿಗೆ ಹೋಗುತ್ತಿರುತ್ತೇನೆ. ಹೀಗಿದ್ದು ಇಂದು ದಿನಾಂಕ:14.05.2019 ರಂದು ಸಾಯಂಕಾಲ 07:00 ಗಂಟೆಗೆ ನಾನು ಮನೆಯಿಂದ ಹೊರಟು ಕೇಂದ್ರ ಬಸ್ ನಿಲ್ದಾಣಕ್ಕೆ ಬಂದು ಶಹಾಬಾದ ನಗರಕ್ಕೆ ಹೋಗುವ ಸಲುವಾಗಿ ಬಸಗಾಗಿ ಕಾಯುತ್ತಾ ನಿಂತಾಗ ಇಬ್ಬರು ವ್ಯಕ್ತಿಗಳು ನನಗೆ ಅನುಮಾನ ರೀತಿಯಲ್ಲಿ ದೂರದಿಂದ ನೋಡುತ್ತಿದ್ದರು. ನಂತರ ನಾನು ಬಸ್ ಬಂದಾಗ ಬಸ್ ಹತ್ತಲು ಹೋಗುತ್ತಿರುವಾಗ ಒಬ್ಬ ವ್ಯಕ್ತಿ ನನ್ನ ಮುಂದುಗಡೆ ಬಂದು ಬಸ್ ಹತ್ತುವ ರೀತಿಯಲ್ಲಿ ನಿಂತಿದ್ದು ಇನ್ನೊಬ್ಬ ವ್ಯಕ್ತಿ ನನ್ನ ಹಿಂದುಗಡೆ ನಿಂತು ನನ್ನ ಪ್ಯಾಂಟಿನ ಹಿಂದುಗಡೆಯ ಜೇಬಿನಲ್ಲಿದ್ದ ಪರ್ಸ ನನಗೆ ಗೊತ್ತಾಗದ ರೀತಿಯಲ್ಲಿ  ತೆಯುತ್ತಿದ್ದಾಗ ನಾನು ಹಿಂದಿರುಗಿ ನೋಡಲು ನನ್ನ ಪರ್ಸ ಅವನ ಕೈಯಲ್ಲಿ ಇತ್ತು ನಾನು ನೋಡುತ್ತಿದ್ದಂತೆ ಅವನು ಮತ್ತು ನನ್ನ ಮುಂದುಗಡೆ ನಿಂತಿದ್ದ ವ್ಯಕ್ತಿ ಇಬ್ಬರು ಓಡಲು ಪ್ರಾರಂಭಿಸಿದರು, ನಾನು ಕಳ್ಳ ಕಳ್ಳ ಅಂತ ಚೀರುತ್ತಾ ಅವರ ಹಿಂದೆ ಓಡುತ್ತಿದ್ದಾಗ ಕೇಂದ್ರ ಬಸ್ ನಿಲ್ದಾಣದಲ್ಲಿದ್ದ ಇಬ್ಬರು ಪೊಲೀಸರು ಬಂದು ಇಬ್ಬರು ವ್ಯಕ್ತಿಗಳನ್ನು ಹಿಡಿದುಕೊಂಡರು. ನಂತರ ಅವರಿಗೆ ಹೆಸರು ಮತ್ತು  ವಿಳಾಸ ವಿಚಾರಿಸಲಾಗಿ ಅವರ ಹೆಸರು 1) ಮಹ್ಮದ ಅಲ್ತಾಫ್ ಅಲಿ ತಂದೆ ಮಹ್ಮದ ಉಸ್ಮಾನ ಅಲಿ ಶೇಕ್  ಜಾ: ಮುಸ್ಲಿಂ ವಯ: 25 ವರ್ಷ : ಆಟೋ ಚಾಲಕ ಸಾ|| ಅಲ್ ಫಾರುಕ್ ಮಜೀದ ಹತ್ತಿರ ಇಸ್ಲಾಮಾಬಾದ ಕಾಲೋನಿ ಕಲಬುರಗಿ ಮತ್ತು 2) ಶಾರುಖ ಶೇಖ ತಂದೆ ಮಹ್ಮದ ಮಶಾಕ್ ಫುಲಾರೆ ವಯ: 25 ವರ್ಷ : ಹಣ್ಣಿನ ವ್ಯಾಪಾರ ಸಾ|| ನೂರಾ ಇಲಾಯಿ ಮಜೀದ ಹತ್ತಿರ ಮೀಲತ್ ನಗರ ಕಲಬುರಗಿ ಅಂತ ತಿಳಿಸಿರುತ್ತಾರೆ. ನನ್ನ ಪರ್ಸನಲ್ಲಿ ನಗದು ಹಣ ರೂ. 2350/- ಗಳನ್ನು ಇಟ್ಟಿರುತ್ತೇನೆ. ಕಾರಣ ನನ್ನ ಹತ್ತಿರ ಇದ್ದ ಹಣದ ಪರ್ಸನ್ನು ಪಿಕ್ ಪಾಕೇಟ್ ಮಾಡಿದ ಮೇಲ್ಕಾಣಿಸಿದ ಇಬ್ಬರು ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ನನ್ನ ಪರ್ಸ ನನಗೆ ದೊರಕಿಸಿ ಕೊಡಲು ವಿನಂತಿ ಅಂತ ವಗೈರೆಯಾಗಿ ನೀಡಿದ ಅರ್ಜಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 37/2019  ಕಲಂ 379 .ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
C¥sÀd®¥ÀÆgÀ : ದಿನಾಂಕ 14-05-2019 ರಂದು 7:00 .ಎಮ್ ಕ್ಕೆ ಫೀರ್ಯಾದಿದಾರಳಾದ ಮಂಜುಳಾ ಗಂಡ ರಾಜಕುಮಾರ ದೋಡಮನಿ ಸಾ: ಬನ್ನೆಟ್ಟಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ಸಲ್ಲಿಸಿದ್ದು ಸದರಿ ಹೇಳಿಕೆಯ ಫೀರ್ಯಾದಿ ಸಾರಾಂಶವೇನೆಂದರೆ ನಾನು ಮೇಲೆ ನಮೂದಿಸಿದ ಹೆಸರು ಮತ್ತು ವಿಳಾಸಿತಳಿದ್ದು ಮನೆಕೆಲಸ ಮಾಡಿಕೊಂಡು ಗಂಡ  ಹಾಗೂ ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ಹೀಗಿದ್ದು ನನ್ನ ಗಂಡನಾದ ರಾಜಕುಮಾರ ಈತನು ಕೂಲಿ ಕೇಲಸ ಮಾಡಿಕೊಂಡಿರುತ್ತಾನೆ.ನನಗೆ ಪೃಥ್ವಿರಾಜ,ಕಿರ್ತಿರಾಜ,ಯುವರಾಜ ಅಂತ ಮೂರು ಜನ ಗಂಡು ಮಕ್ಕಳಿರುತ್ತಾರೆ. ಹೀಗಿದ್ದು ದಿನಾಂಕ:25/04/2019 ರಂದು ನನ್ನ ಗಂಡನು ನಮ್ಮ ಹೊಲಕ್ಕೆ ಹೋಗಿ ಬರುತ್ತೇನೆ ಅಂತ ನಮ್ಮ ಮನೆಯಿಂದ ಬೆಳಿಗ್ಗೆ 06-00 ,ಎಮ್.ಕ್ಕೆ ಹೋಗಿರುತ್ತಾನೆ.ನಂತರ  06-20 ,ಎಮ್.ಸುಮಾರಿಗೆ ನಮ್ಮ ಗ್ರಾಮದ ಅವದೂತ ತಂದೆ ಮೋತಿಲಾಲ ಜಮಾದಾರ ರವರು ನಮ್ಮ ಮನೆಗೆ ಬಂದು ತಿಳಿಸಿದ್ದೆನಂದರೆ ಈಗ 06-10 ,ಎಮ್.ಸುಮಾರಿಗೆ  ನಾನು ಮತ್ತು ನನ್ನ ಗೆಳೆಯನಾದ ರವಿ ತಂದೆ ಅರ್ಜುನ ಜಮಾದಾರ ಇಬ್ಬರು ಕೂಡಿಕೊಂಡು ಬನ್ನೆಟ್ಟಿ ಗ್ರಾಮದಿಂದ ಶಿವಪೂರ ಗ್ರಾಮಕ್ಕೆ ಹೊಗುವ ರಸ್ತೆ ಹತ್ತೀರ ಇರುವ ಸರ್ಕಾರಿ ಬಾವಿ ಹತ್ತೀರ ಮಾತನಾಡುತ್ತಾ ನಿಂತಿದ್ದಾಗ ಸದರಿ ಬಾವಿಯ ಹತ್ತೀರ ಇರುವ ಡಾಂಬರ ರಸ್ತೆ ಮೆಲೆ ನಿನ್ನ ಗಂಡನು ರೊಡಿನ ದಂಡೆಯಿಂದ ನಡೆದುಕೊಂಡು ನಿಮ್ಮ ಹೊಲದ ಕಡೆಗೆ ಹೊರಟಿದ್ದಾಗ ಅವನ ಹಿಂದಿನಿಂದ ಜಾನ ಡಿಯರ್ ಕಂಪನಿಯ ಟ್ರ್ಯಾಕ್ಟರ ಚಾಲಕನು ಅದಕ್ಕೆ ನೇಗಿಲು ಹಚ್ಚಿಕೊಂಡು ಬನ್ನೆಟ್ಟಿ ಗ್ರಾಮದೊಳಗಿನಿಂದ  ಹೊರಟಿದ್ದು ಸದರಿ ಟ್ರ್ಯಾಕ್ಟರ ಇಂಜಿನನ್ನು ಚಾಲಕನು ತನ್ನ ಟ್ರ್ಯಾಕ್ಟರನ್ನು ಅತಿ ವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ರಾಜಕುಮಾರನಿಗೆ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿರುತ್ತಾನೆ ಆಗ ರಾಜಕುಮಾರನು  ರೊಡಿನ ದಂಡೆಯಲ್ಲಿ ಬಿದ್ದಿದ್ದರಿಂದ ಸದರಿ ಟ್ರ್ಯಾಕ್ಟರನ ದೊಡ್ಡ ಟಾಯರ ರಾಜಕುಮಾರನ ಶರಿರದ ಮೇಲೆ ಹಾಯ್ದಿರುತ್ತದೆ ಆಗ ನಾನು ಮತ್ತು ರವಿ ಇಬ್ಬರು ರಾಜಕುಮಾರನ ಹತ್ತೀರ ಹೋಗಿ ನೋಡಲು ರಾಜಕುಮಾರನ ಎದೆಗೆ ಮತ್ತು ಹೊಟ್ಟೆಗೆ ಭಾರಿ ಒಳಪೆಟ್ಟಾಗಿರುತ್ತದೆ ಮತ್ತು  ಎಡಗಡೆ ತೊಡೆಗೆ ಭಾರಿ ಒಳಪೇಟ್ಟಾಗಿರುತ್ತದೆ ಅಂತ ತಿಳಿಸಿದ ಮೇರೆಗೆ ನಾನು ಮತ್ತು ನನ್ನ ಮೈದುನನಾದ ಯಲ್ಲಪ್ಪ ಇಬ್ಬರು ಕೂಡಿಕೊಂಡು ನನ್ನ ಗಂಡನ ಹತ್ತೀರ ಹೋಗಿ ನೊಡಲಾಗಿ ಗಾಯಗಳಾಗಿದ್ದು ನೀಜವಿತ್ತು ಮತ್ತು ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರನ್ನು ಅಪಘಾತ ಪಡಿಸಿದ ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿದ್ದು ಅದರ ನಂಬರ ನೋಡಲು ಅದಕ್ಕೆ ನಂಬರ ಹಾಕಿಸಿರುವದಿಲ್ಲ ಟ್ರ್ಯಾಕ್ಟರ ಜಾನ ಡಿಯರ್ ಕಂಪನಿಯದಿದ್ದು ಟ್ರ್ಯಾಕ್ಟರ ಇಂಜಿನ ನಂಬರ PY3029T277533 ಮತ್ತು ಚೆಸ್ಸಿ ನಂಬರ 1PY5210EHKA003642 ನೇದ್ದು ಇತ್ತು ನಂತರ ನನ್ನ ಗಂಡನಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಕಲಬುರಗಿಗೆ ಹೋಗಿ ಸರಕಾರಿ ದವಾಖಾನೆಗೆ ಸೆರಿಕೆಮಾಡಿ ನಂತರ ಅಲ್ಲಿಂದ ದಿನಾಂಕ:02/05/2019 ರಂದು ಕಲಬುರಗಿಯ ಮೇಡಿಕೇರ ಆಸ್ಪತ್ರೇಯಲ್ಲಿ ಸೇರ್ಪಡೆ ಮಾಡಿರುತ್ತೇವೆ ನಂತರ ಅಲ್ಲಿಂದ  ದಿನಾಂಕ:03/05/2019 ರಂದು ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ಬಸವೇಶ್ವರ ಆಸ್ಪತ್ರೇಗೆ ಸೇರ್ಪಡೆ ಮಾಡಿರುತ್ತೇವೆ.ನನ್ನ ಗಂಡನು ಅಪಘಾತದಲ್ಲಿ ಆಗಿದ ಗಾಯಗಳಿಂದ ಚಿಕಿತ್ಸೆ ಫಲಿಸದೆ ನಿನ್ನೆ ದಿನಾಂಕ:13/05/2019 ರಂದು 11-45 ಪಿ,ಎಮ್.ಕ್ಕೆ ಮೃತ ಪಟ್ಟಿರುತ್ತಾನೆ.ಸದ್ಯ ನನ್ನ ಗಂಡನ ಶವವು ಅಫಜಲಪೂರದ ಶವಾಗಾರ ಕೊಣೆಯಲ್ಲಿ ತಂದು ಹಾಕಿಸಿ ನಾನು ಪೊಲೀಸ್ ಠಾಣೆಗೆ ಬಂದು ನನ್ನ ಹೇಳಿಕೆ ಪಿರ್ಯಾದಿ ಸಲ್ಲಿಸುತ್ತಿದ್ದು ನನ್ನ ಗಂಡನಿಗೆ ತಿವ್ರ ಸ್ವರೂಪದ ಗಾಯಗಳಾಗಿದ್ದರಿಂದ ನಾನು ಪಿರ್ಯಾದಿ ಸಲ್ಲಿಸಲು ತಡವಾಗಿರುತ್ತದೆ.ಕಾರಣ ನನ್ನ ಗಂಡನಿಗೆ ಅಫಘಾತ ಪಡಿಸಿದ ಟ್ರ್ಯಾಕ್ಟರ ಇಂಜಿನ ನಂಬರ PY3029T277533 ಮತ್ತು ಚೆಸ್ಸಿ ನಂಬರ 1PY5210EHKA003642 ನೇದ್ದರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿಅಂತಾ ಕೊಟ್ಟ ಹೇಳಿಕೆ ಫೀರ್ಯಾದಿ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 66/2019 ಕಲಂ 279, 304 (ಐಪಿಸಿ ಮತ್ತು 187 .ಎಮ್.ವಿ ಆಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.