POLICE BHAVAN KALABURAGI

POLICE BHAVAN KALABURAGI

26 February 2017

Kalaburagi District Reported Crimes

ಅತ್ಯಾಚಾರ ಪ್ರಕರಣ :
ಜೇವರಗಿ ಠಾಣೆ : ಶ್ರೀಮತಿ ರವರ ಊರಿನ ಶರಣಪ್ಪ ತಂದೆ ಚಂದ್ರಾಮ ಗುಬ್ಬಾ ಇತನು ನಾನು ನೀರಿಗೆ ಹೋಗುವಾಗ ಮತ್ತು ಹೊಲಕ್ಕೆ ಕೆಲಸಕ್ಕೆ ಹೋಗುವಾಗ ನನಗೆ ನೋಡಿ ಸಿಳ್ಳೆ ಹೊಡೆದು ಚುಡಾಯಿಸುವುದು ಮಾಡುತ್ತಾ ಬಂದಿರುತ್ತಾನೆ ಈ ವಿಷಯವನ್ನು ಮನೆಯಲ್ಲಿ ನನ್ನ ತಾಯಿ ಅನಸೂಬಾಯಿಗೆ ಮತ್ತು ಮಾವ ಇವರಿಗೆ ಹೇಳಿದ್ದೆನು. ಅವರು ಅವನ ಮನೆಗೆ ಹೋಗಿ ಬುದ್ದಿ ಮಾತು ಹೇಳಿದ್ದು ಇರುತ್ತದೆ ನಾವು ಮರ್ಯಾದೆಗೆ  ಅಂಜಿ ಸುಮ್ಮನಿದ್ದೆವು. ಈಗ ಸುಮಾರು 6 ತಿಂಗಳ ಹಿಂದೆ ಮೂದಬಾಳ (ಬಿ) ಗ್ರಾಮದ ಬಸವರಾಜ ತೆಳಗಿನಮನಿ ಇವನೊಂದಿಗೆ ನನ್ನ ಮದುವೆಯಾಗಿರುತ್ತದೆ ಮದುವೆಯಾದ ನಂತರ ನಾನು ಮೂದಬಾಳ (ಬಿ) ಗ್ರಾಮದಲ್ಲಿಯೇ ನನ್ನ ಗಂಡನ ಮನೆಯಲ್ಲಿ ವಾಸವಾಗಿದ್ದೆನು. ನನ್ನ ತವರು ಮನೆ ಮಾರಡಗಿ (ಎಸ್.ಎ) ಗ್ರಾಮದಲ್ಲಿ ದೇವಿ ಜಾತ್ರೆ ಇದ್ದುದ್ದರಿಂದ ನಾನು ದಿ. 15.02.17 ರಂದು ಮುಂಜಾನೆ ಮಾರಡಗಿ (ಎಸ್.ಎ) ಗ್ರಾಮಕ್ಕೆ ಬಂದು ನನ್ನ ತಾಯಿ ಹತ್ತಿರ ಇದ್ದೆನು. ದಿ. 16.02.2017 ರಂದು ರಾತ್ರಿ ನಾನು ಮನೆಯಿಂದ ಬೈಲ ಕಡೆಗೆ ( ಬರ್ಹಿದೇಶಕ್ಕೆ) ಹೋಗಿ ಮರಳಿ ಮನೆಗೆ ಬರುವಾಗ  ರಾತ್ರಿ 8.00 ಗಂಟೆ ಸುಮಾರಿಗೆ ಶರಣಪ್ಪ ಗುಬ್ಬಾ ಇತನು ಬಂದು ನನಗೆ ತಡೆದು ನಿಲ್ಲಿಸಿ ಏ ಬಾರೆ ಎಂದು ನನ್ನ ಕೈ ಹಿಡಿದು ಜಗ್ಗಾಡ ಹತ್ತಿದನು. ನಾನು ಅವನಿಗೆ ನನಗೆ ಯಾಕೆ? ಈ ರೀತಿ ಮಾಡುತ್ತಿದ್ದಿ ಎಂದು ಕೇಳಿದಾಗ ನೀನ್ನ ಮೇಲೆ ನನ್ನ ಮನಸ್ಸು ಇದೆ ನನ್ನ ಜೊತೆ ಮಲಗು ಬಾ ಎಂದು ಕರೆದನು. ಅದಕ್ಕೆ ನಾನು ಒಪ್ಪದೆ ಇದ್ದಾಗ ಅವನು ನನಗೆ ಜಬರದಸ್ತಿಯಿಂದ ಎಳೆದುಕೊಂಡು ಹೆಣ್ಣುಮಕ್ಕಳು ಬರ್ಹಿದೇಶಕ್ಕೆ ಹೊಗುವ ಸ್ಥಳದ ಜಾಲಿ ಕಂಟಿಯ ಮರೆಯಲ್ಲಿ ಒಯ್ದು ನನಗೆ ನೇಲಕ್ಕೆ ಕೆಡುವಿ ಜಬರದಸ್ತಿಯಿಂದ ಸಂಬೊಗ ಮಾಡಿರುತ್ತಾನೆ. ಈ ವಿಷಯ ಯಾರಿಗಾದರೂ ಹೇಳಿದರೆ ನೀನ್ನ ಜೀವ ಸಹಿತ ಬಿಡುವುದಿಲ್ಲಾ ಎಂದು ಜೀವದ ಬೇದರಿಕೆ ಹಾಕಿರುತ್ತಾನೆ. ನಾನು ಮರ್ಯಾದೆಗೆ  ಅಂಜಿ ಸುಮನಿದ್ದೆನು. ಮತ್ತು ದಿ. 17.02.2017 ರಂದು ಅವನು ನನ್ನ ಗಂಡನಿಗೆ ಪೊನ ಮಾಡಿ ನೀನ್ನ ಹೆಂಡತಿಗೆ ಎತ್ತಿಕೊಂಡು ಹೋಗುತ್ತೆನೆ ಎಂದು ಅವಾಚ್ಯ ಶಬ್ದಗಳಿಂದ ಬೈದ್ದಿರುತ್ತಾನೆ. ಅದಕ್ಕೆ ನನ್ನ ಗಂಡನು ಅವನಿಗೆ ನೀನು ಯಾರು ಎಂದು ಕೇಳಿದರೆ ಏ ಬೊಸಡಿ ಮಗನೆ ನಾನು ಯಾರಾದರು ಏನು ನೀನ್ನ ಹೆಂಡತಿಗೆ ಬಿಡುವುದಿಲ್ಲಾ ಎಂದು ಬೇದರಿಕೆ ಹಾಕಿರುತ್ತಾನೆ. ಈ ವಿಷಯವನ್ನು ಮನೆಯಲ್ಲಿ ನನ್ನ ಗಂಡ ಹೇಳಿದಾಗ, ಶರಣಪ್ಪನು ನನಗೆ ಜಬರದಸ್ತಿಯಿಂದ ಸಂಬೊಗ ಮಾಡಿದ ವಿಷಯ ತಿಳಿಸಿರುತ್ತೆನೆ. ದಿ. 18.02.2017 ರಂದು ಮುಂಜಾನೆ ನಾನು ಮತ್ತು ನನ್ನ ಗಂಡ, ಹಾಗೂ ನನ್ನ ತಾಯಿ, ಮಾಂವದಿರು ಎಲ್ಲರೂ ಕೂಡಿ ಶರಣಪ್ಪನ ಮನೆಗೆ ಕೇಳಲು ಹೋದಾಗ ಮನೆಯಲ್ಲಿ  ಶರಣಪ್ಪ ತಂದೆ ಚಂದ್ರಾಮ ಗುಬ್ಬಾ ಇದ್ದಿರಲಿಲ್ಲಾ, ಶರಣಪ್ಪನ ಮನೆಯವರಾದ 1) ಚಂದ್ರಾಮ ತಂದೆ ಬೀರಪ್ಪ ಗುಬ್ಬಾ 2) ಮರೆಮ್ಮ ಗಂಡ ಚಂದ್ರಾಮ ಗುಬ್ಬಾ 3) ಶಂಕರೇಪ್ಪ ತಂದೆ ಚಂದ್ರಾಮ ಗುಬ್ಬಾ 4) ನಿಂಗಣ್ಣಾ ತಂದೆ ಚಂದ್ರಾಮ ಗುಬ್ಬಾ ಇವರೆಲ್ಲರೂ ಕೂಡಿ ಶರಣಪ್ಪನ ಬಗ್ಗೆ ನಮಗೇನು ಗೊತ್ತಿಲ್ಲಾ ನೀವು ನಮ್ಮ ಮನೆಯತನಕ ಬಂದು ಕೇಳುತ್ತಿರಿ ನೀವು ಏನು ಬೇಕಾದರೂ ಮಾಡಿಕೊಳಿರಿ ಬೊಸಡಿ ಮಕ್ಕಳೆ ಎಂದು ಬೈಯ್ದು ನಮಗೆ ಬೇದರಿಕೆ ಹಾಕಿರುತ್ತಾರೆ,  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಕಿರುಕಳ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 20-02-2017 ರಂದು ರಾತ್ರಿ 10 ಗಂಟೆಯ ಸುಮಾರಿಗೆ ಶ್ರೀಮತಿ  ರೇಣುಕಾ ತಂದೆ ಈಶ್ವರ ಕಾಟನೂರ ಸಾ: ಬಸವಪಟ್ಟಣ್ಣ ಹಾ: ವ: ಬಿದನೂರ ತಾ; ಅಫಜಲಪೂರ ಇವರಿಗೆ  ಈಶ್ವರ ತಂದೆ ಶರಣಪ್ಪಾ ಕಾಟನೂರ ಇನ್ನೂ 7 ಜನರು ಸಾ: ಎಲ್ಲರೂ ಬಸವಪಟ್ಟಣ್ಣ ಇವರು ಕುಡಿಕೊಂಡು ಜಗಳತೆಗೆದು  ಈ ಮೊದಲಿನಂತೆ ನಿನಗೆ ಅಡುಗೆ ಮಾಡಲು ಬರಲ್ಲಾ ಹೊಲದ ಕೆಲಸ ಬರುವುದಿಲ್ಲಾ ನೀನು ನಮ್ಮ ಮನೆಯಲ್ಲಿ ಇರಬೇಡ ಅಂತಾ ಅವ್ಯಾಚ್ಚವಾಗಿ ಬೈದು ಕೈಯಿಂದ ಹೊಡೆಬಡೆ ಮಾಡಿ ಜೀವದ ಭಯ ಹಾಕಿರುತ್ತರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದೆ ಠಾಣೆಯಲ್ಲಿ ಪ್ರಕರಣ ದಾಖಾಲಗಿದೆ.