POLICE BHAVAN KALABURAGI

POLICE BHAVAN KALABURAGI

18 March 2015

Kalaburagi District Reported Crimes

ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ವಾಜೀದ ತಂದೆ ಮಹೇಬೂಬಸಾಬ ಸಾ:ಸಾವಳಗಿ ಹಾ:ವ:ಸಂಗಮೇಶ್ವರ ಕಾಲೋನಿ ಕಲಬುರಗಿ ರವರು ದಿನಾಂಕ:16/03/2015 ರಂದು ರಾತ್ರಿ ಅರವಿಂದ ರವರು ಪಪ್ಪು ಇತನು ಸತೀಶ @ ಬಾಂಬೆ ಸತೀಶ ಇತನ ಮನೆಯಲ್ಲಿ ಇದ್ದು ಅವನಿಗೆ ಕರೆದುಕೊಂಡು ಬಂದು ಆತನ ಮನೆಗೆ ಒಯ್ದು ಬಿಡು ಅಂತಾ ತಿಳಿಸಿದ ಮೇರೆಗೆ ನಾನು ಸತೀಶನ ಮನೆಗೆ ಹೊಗಿದ್ದು. ಆಗ ಸತೀಶನಿಗೆ ಗಾರ್ಡ ಇರುವ ಒಬ್ಬ ಪೊಲೀಸ ಕೆಳಗಡೆ ಮನೆಯ ಮುಂದೆ ಇದ್ದನು. ಆಗ ನಾನು ಪಪ್ಪು ಎಲ್ಲಿ ಇದ್ದಿ ಅಂತಾ ಕೂಗಲು ಮನೆಯ ಮೇಲ್ಮಹಡಿಯಲ್ಲಿ ಇದ್ದ ರಾಣು ಈತನು ನನಗೆ ಮೇಲೆ ಬರಲು ತಿಳಿಸಿದನು. ನಾನು ಮೇಲೆ ಹೋಗಿ ನೋಡಲು ಅಲ್ಲಿದ್ದ ಸತೀಶ@ಬಾಂಬೆ ಸತೀಶ ಇತನು ಏ ಭೋಸಡಿ ಮಗನೆ ಒಳಗಡೆ ಬಾ ಅಂತಾ ಕರೆಯಲು ನಾನು ಒಳಗಡೆ ಹೋದಾಗ ಸತೀಶ ಇತನ ಜೊತೆಯಲ್ಲಿ  1)ದಾದು 2)ರಾಣು 3)ಶಿವಶರಣ @ ಕೆಂಚ ಶರಣು 4)ರೇವಣಸಿದ್ದ @ ಮೀಸ್ಟರ್‌ ಬಿನ್‌ 5) ಅಂಬ್ರ್ಯಾ@ಸಾಮಾನ ಅಂಬ್ರ್ಯಾ ಇವರೆಲ್ಲರೂ ಇದ್ದರು. ನಾನು ಕರೆಯಲು ಹೋದ ಪಪ್ಪು ಇತನು ಅಲ್ಲಿಯೇ ಇದ್ದನು. ಸತೀಶ@ಬಾಂಬೆ ಸತೀಶ ಇತನು ನನಗೆ ನೀನು ಅರವಿಂದನ ಜೊತೆಯಲ್ಲಿ ಕೂಡಿ ಏಕೆ ಬಿಸನೆಸ್‌‌ ಮಾಡುತ್ತಿದ್ದಿ ಅಂತಾ ಹೇಳಿದ್ದಕ್ಕೆ ನಾನು ಹಣದ ಕೊರತೆಯಿಂದ ಅರವಿಂದನ ಸಂಗಡ ಪಾಟನರಶೀಪ ಮಾಡಿಕೊಂಡಿರುತ್ತೇನೆ ಅಂತಾ ಅಂದಿದ್ದಕ್ಕೆ ಭೋಸಡಿ ಮಗನೆ ನನಗೆ ಈಗ ಒಂದು ಲಕ್ಷ ರೂಪಾಯಿ ಕೊಡಬೇಕು ಅಂತಾ ತನ್ನ ಹತ್ತಿರ ಇದ್ದ ತಲವಾರು ತೆಗೆದುಕೊಂಡು ರೂಪಾಯಿ ಕೊಡಲಿಲ್ಲ ಅಂದರೆ ನಿನಗೆ ಇದರಿಂದ ಖಲಾಸ ಮಾಡುತ್ತೇನೆ ಅಂತಾ ಕೈಯಿಂದ ಕಪಾಳದ ಮೇಲೆ ಬೆನ್ನಿನ ಮೇಲೆ ಹೊಡೆದು ಕಾಲಿನಿಂದ ಟೊಂಕದ ಮೇಲೆ ಒದ್ದಿರುತ್ತಾನೆ. ಅದಕ್ಕೆ ನಾನು ಅಣ್ಣಾ ಬಡವನಿದ್ದೇನೆ ನನ್ನ ಹತ್ತಿರ ರೂಪಾಯಿ ಇರುವದಿಲ್ಲಾ ಅಂತಾ ಕೇಳಿಕೊಂಡಿದ್ದಕ್ಕೆ ಈಗ ನಿನಗೆ ಬಿಡುವದಿಲ್ಲಾ ನಿನಗೆ ಮುಗಿಸಿ ಬಿಡುತ್ತೇನೆ ಮಗನೆ ಅಂತಾ ಕೊಲೆ ಮಾಡುವ ಉದ್ದೇಶದಿಂದ ತಲವಾರದಿಂದ ನನ್ನ ತಲೆಯ ಮೇಲೆ ಹೊಡೆದನು ಆಗ ನಾನು ತಪ್ಪಿಸಿಕೊಂಡರು ನನ್ನ ತಲೆಯ ಹಿಂಭಾಗದಲ್ಲಿ ತಲವಾರ ಹತ್ತಿ ಭಾರಿ ರಕ್ತ ಗಾಯವಾಗಿರುತ್ತದೆ. ಆಗ ಪಪ್ಪು ಇತನು ಹೀಗೆಲ್ಲಾ ಹೊಡೆಯ ಬೇಡ ಅಣ್ಣಾ ಅಂತಾ ಬಿಡಿಸಲು ಬಂದವನಿಗೆ ಅದೆ ತಲವಾರ ಉಲ್ಟಾಮಾಡಿ ಎಡಗೈ ರಟ್ಟೆಯ ಮೇಲೆ ಬೆನ್ನಿನ ಮೇಲೆ ಹೊಡೆದಿರುತ್ತಾನೆ. ಆಗ ಆತನ ಸಂಗಡಿಗರಾದ ದಾದು, ರಾಣು, ಶಿವಶರಣ@ಕೆಂಚಶರಣು, ರೇವಣಸಿದ್ದ @ ಮೀಸ್ಟರಬೀನ, ಸಾಮಾನ ಅಂಬ್ರ್ಯಾ ಇವರೆಲ್ಲರೂ ಹೀಗೆ ಬಿಟ್ಟರೆ ನಾವು ಹೇಗೆ ಹಣ ಜಮಾ ಮಾಡಬೇಕು ಅಂತಾ ಕುಮ್ಮಕ್ಕು ನೀಡುತ್ತಿದ್ದರು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣಗಳು :
ಮಾಹಾಗಾಂವ ಠಾಣೆ : ಶ್ರೀ ಶಿವಪುತ್ರಪ್ಪಾ ತಂದೆ ಮಾಣಿಕಪ್ಪಾ ಕೋಟರಗಿ ಸಾ; ದಸ್ತಾಪೂರ ಇವರು ದಿನಾಂಕ 16-03-2015 ರಂದು ರಾತ್ರಿ 8-00 ಗಂಟೆಗೆ ಚಿನ್ನಮಳ್ಳಿ ಗ್ರಾಮದಿಂದ ತನ್ನ ಮೋಮ್ಮಗಳ ಜವಳ ಕಾರ್ಯಕ್ರಮ ಮಾಡಿ ತಾನು ತನ್ನ ಹೆಂಡತಿ ರತ್ನಮ್ಮ ಹಾಗೂ ಹಿರಿಯ ಮಗ ಮಹೇಶ ಮನೆಗೆ ಬಂದಿದ್ದು, ರಾತ್ರಿ ಊಟ ಮುಗಿಸಿ ನಂತರ 11-00 ಗಂಟೆಗೆ ಮನೆಯ ಬಾಗಿಲ ಚೀಲಕ್ಕ ಹಾಕಿ ಮನೆಯ ಮೇಲೆ ಇರುವ ಮಹಡಿಯಲ್ಲಿ ಮಲಗಿಕೊಂಡಿದ್ದು ದಿನಾಂಕ 17-03-2015 ರಂದು ಬೆಳಗ್ಗಿನ ಜಾವ 2-30 ಗಂಟೆಗೆ ನಮ್ಮೂರಿನ ಶರಣಬಸಪ್ಪಾ ಹೋಂಪಳ್ಳಿ ಹಾಗೂ ಶಿವಶರಣಪ್ಪಾ ತಂದೆ ಹಣಮಂತರಾಯ ಯಳವಂತಗಿ ಇವರಿಬ್ಬರು ಊರಲ್ಲಿ ಯಾರೋ ಕಳ್ಳರು ಬಂದಿದ್ದಾರೆ ಏಳಿರಿ ಅಂತ ಸಪ್ಪಳ ಮಾಡುತ್ತಾ ನಮ್ಮ ಮನೆಯ ಹಿಂದೆ ಇರುವ ರಸ್ತೆಯ ಮೇಲೆ ಕೂಗಾಡುತ್ತಿದ್ದಾಗ ಆಗಾ ನಾವು ಸಪ್ಪಳ ಕೇಳಿ ಎದ್ದು, ಕೇಳಗೆ ಬಂದು ನಮ್ಮ ಮನೆಗೆ ನೋಡಿದಾಗ ಬಾಗಿಲು ತೆರದಿದ್ದು ಕಂಡುಬಂತು, ನಂತರ ಲೈಟಿನ ಬೆಳಕಿನಲ್ಲಿ ಓಳಗೆ ಹೋಗಿ ದೇವರ ಮನೆಯಲ್ಲಿ ನೋಡಲಾಗಿ ಎಲ್ಲಾ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಕಂಡುಬಂತು ,ದೇವರಮ ಜಗಲಿ ಕೆಳಗೆ ಇಟ್ಟಿರುವ ಕಟ್ಟಿಗೆ ಗಲ್ಲಾ ಪೆಟ್ಟಿಗೆ ಒಳಗೆ ಇಟ್ಟಿದ್ದ, 54,000 ರೂಪಾಯಿಗಳು ನಗದು ಹಣ ಹಾಗು ಬಂಗಾರದ ಆಭರಣಗಳು ಹೀಗೆ ಒಟ್ಟು  1,60,220 ರೂ ಕಿಮ್ಮತ್ತಿನ ನಗದು ಹಣ , ಬಂಗಾರ ಮತ್ತು ಬೆಳ್ಳಿಯ ಆಭಾರಣಗಳು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.            
ನೆಲೋಗಿ ಠಾಣೆ : ನೆಲೋಗಿ ಕ್ರಾಸ್ ಹತ್ತಿರ ಸೊನ್ನ ಸರ್ವೇ ನಂ. 215 ರಲ್ಲಿ ನಿರ್ಮಿಸಿದ ವೋಡಾಪೋನ ಟಾವರ ಎಸ್.ಹೆಚ್-12008.ಇನ್ 1245802 ಇದಕ್ಕೆ ಅಳವಡಿಸಿದ ಬ್ಯಾಟ್ರಿ ಬ್ಯಾಂಕಿನ 24 ಬ್ಯಾಟ್ರಿಗಳು ದಿನಾಂಕ:13-03-2015 ರಂದು ರಾತ್ರಿ 9-00 ಗಂಟೆಯಿಂದ 9-35 ಗಂಟೆಯ ಮದ್ಯೆ ಅವದಿಯಲ್ಲಿ ಯಾರೋ ಕಳ್ಳರು ಗೇಟ ಚಾವಿ ಮುರಿದು ಒಳಗಡೆ ಇದ್ದ ಎನ್.ಇ.ಡಿ ಕಂಪನಿಯ 24 ಬ್ಯಾಟ್ರಿಗಳು ಅ:ಕಿ: 24,000=00 ಕಿಮ್ಮತ್ತಿನವುಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ  ಶರಣಬಸಪ್ಪ ತಂದೆ ಧೂಳಪ್ಪ ಪಾಟೀಲ ಸಾ|| ಕೆಸರಟಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.