POLICE BHAVAN KALABURAGI

POLICE BHAVAN KALABURAGI

15 March 2018

KALABURAGI DISTRICT REPORTED CRIMES

ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ ಪ್ರಕರಣ :
ಶಾಹಾಬಾದ ನಗರ ಠಾಣೆ : ಕುಮಾರಿ ಇವರಿಗೆ  ಶಹಾಬಾದದ ಚಂದ್ರಶೇಖರ ರಾಠೋಡ ಸಾಃ ಸ್ಟೇಷನ ತಾಂಡ ಶಹಾಬಾದ ಇತನೊಂದಿಗೆ ದಿನಾಂಕಃ 30/12/2016 ರಂದು ಹಿರಿಯರ ಸಮಕ್ಷಮ ನಿಶ್ಚಿತಾರ್ಥ ಆಗಿದ್ದು ಇಲ್ಲಿಯವರೆಗೆ ಮದುವೆ ಆಗಿರುವದಿಲ್ಲಾ. ಹೀಗಿದ್ದು ದಿನಾಂಕಃ 06/03/2018 ರಂದು 11-00 ಎ ಎಮ್  ನಾನು ಒಬ್ಬಳೆ ಮನೆಯಲ್ಲಿದ್ದಾಗ  ಚಂದ್ರಶೇಖರ ರಾಠೋಡ ಮತ್ತು ಅವನಣ್ಣ ರಾಜೇಶ ರಾಠೋಡ ಇಬ್ಬರು ನಮ್ಮ ಮನೆಗೆ ಬಂದು, ನನಗೆ ನಿನ್ನ ತಾಯಿ ಮದುವೆ ಮಾಡುವದಿಲ್ಲಾ ಅಂತಾ ಹೇಳುತ್ತಿದ್ದಾಳೆ ಕೊರ್ಟ ಮ್ಯಾರೇಜ ಮಾಡಿಕೊಳ್ಳೊಣ ಅಂತಾ ಚಂದ್ರಶೇಖರ ಹೇಳಿದನು. ನಾನು ಬರುವದಿಲ್ಲಾ ಅಂತಾ ಹೇಳಿದರೂ ಬಲವಂತವಾಗಿ ಇಲ್ಲಾ ಮದುವೆ ಆಗುತ್ತೇನೆ ಬಾ ಅಂತ ಎಳೆದುಕೊಂಡು ಕರೆದುಕೊಂಡು ತಮ್ಮ ಮನೆಗೆ ಹೋದನು. ಅಲ್ಲಿ ಮನೆಯಲ್ಲಿ ಚಂದ್ರಶೇಖರ, ಅವನ ತಾಯಿ ಸೋನಾಬಾಯಿ ಮತ್ತು ರಾಜೇಶ ಸೇರಿ ಅವರ ವಾಸದ ಮನೆಯಲ್ಲಿ ಇಟ್ಟರು. ನಂತರ ಅಂದು ರಾತ್ರಿ ಚಂದ್ರಶೇಖರನು ನಾನು ಮಲಗಿದ್ದಲ್ಲಿಗೆ ಬಂದು ನಿನಗೆ ನಾನು ಮದುವೆ ಆಗುತ್ತೇನೆ,  ಬಾ ನನ್ನ ಜೊತೆ ಮಲಗು ಅಂತಾ ಒತ್ತಾಯ ಮಾಡಿದನು.  ನಾನು ಮದುವೆ ಮುಂಚೆ ನಿನ್ನ ಜೊತೆ ಮಲಗುವದಿಲ್ಲಾ ಅಂತಾ ಹೇಳಿ ನಿರಾಕರಿಸಿದೆನು.  ಅದಕ್ಕೆ ನೀನು ನನ್ನ ಜೊತೆ ಮಲಗಲಿಲ್ಲಾ ಅಂದರೆ ನಿನಗೆ  ಜೀವ ಸಹಿತ ಬಿಡುವದಿಲ್ಲಾ ಅಂತಾ ಪ್ರಾಣ ಬೆದರಿಕೆ ಹಾಕಿ ನನಗೆ  ಬಲತ್ಕಾರವಾಗಿ ಸಂಭೋಗವನ್ನು ಮಾಡಿರುತ್ತಾನೆ.  ಅವರ ಮನೆಯಲ್ಲಿಯೇ  ಇಟ್ಟುಕೊಂಡಿದ್ದು ನಾನು ನನಗೆ  ಮದುವೆ ಆಗು ಅಂದರೆ ಚಂದ್ರಶೇಖರನು ಮದುವೆ ಆಗುವದಿಲ್ಲಾ ಏನ್ ಮಾಡ್ಕೋತಿ ಮಾಡ್ಕೊ ಅಂತಾ ಹೇಳಿದ್ದು ರಾಜೇಶ ಮತ್ತು ಸೋನಾಬಾಯಿ ಚಂದ್ರಶೇಖರನಿಗೆ ಬೇರೆ ಕಡೆ ಸಂಬಂಧ ಹುಡುಕಿ ಮದುವೆ ಮಾಡುತ್ತೇವೆ  ನಿನ್ನೊಂದಿಗೆ  ಮದುವೆ ಮಾಡುವದಿಲ್ಲಾ  ರಂಡಿ ಅಂತಾ ದುರ್ಭಾಷೆಗಳಿಂದ  ಬೈಯ್ದಿರುತ್ತಾರೆ. ನನ್ನ ತಾಯಿಗೆ  ಚಂದ್ರಶೇಖರ ತಮ್ಮ ಮನೆಯಲ್ಲಿ ನನಗೆ ಇಟ್ಟಿರುವದು ಗೊತ್ತಾಗಿ ಅವಳು ಬಂದು ನನಗೆ ಕರೆದುಕೊಂಡು ಬಂದಿರುತ್ತಾರೆ. ನನಗೆ ಪ್ರಾಣ ಬೇದರಿಕೆ ಹಾಕಿ ಹಠ ಸಂಬೋಗ ಮಾಡಿದ ವಿಷಯ ತಿಳಿಸಿ  ನನ್ನ ಮನೆಯಿಂದ  ಬಲವಂತವಾಗಿ ಕರೆದುಕೊಂಡು ಹೋಗಿ ಪ್ರಾಣ ಬೆದರಿಕೆ ಹಾಕಿ ಹಠ ಸಂಬೋಗ ಮಾಡಿದ ಚಂದ್ರಶೇಖರ ಮತ್ತು ಇದಕ್ಕೆ ಸಹಕರಿಸಿ ದುರ್ಭಾಷೆಗಳಿಂದ ಬೈಯ್ದು ಮನೆಯಲ್ಲಿ ಕೂಡಿ ಹಾಕಿದ ರಾಜೇಶ ಮತ್ತು ಸೋನಾ ಬಾಯಿ ರವರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಹಲ್ಲೆ ಪ್ರಕರಣಗಳು :
ಫರತಾಬಾದ ಠಾಣೆ : ಠಾಣೆ : ಶ್ರೀ ಲಕ್ಕಪ್ಪ ತಂದೆ ಶಂಕರಪ್ಪಾ ಸಾಃ ಹಸನಾಪುರ ಇವರು ಹಸನಾಪೂರ ಗ್ರಾಮದ ಸೀತರಾಮ ತಂದೆ ತಿಪ್ಪಣ್ಣ ಸುಭೇದಾರ ಈತನಿಗೆ ಫಿರ್ಯಾದಿದಾರರ ಈಗ ಸುಮಾರು  ವರ್ಷಗಳ ಹಿಂದೆ 10 ಸಾವಿರ ರೂಪಾಯಿ ಹಣ ಕೈಗಡ ಅಂತಾ ಕೊಟ್ಟಿದ್ದು, ಇಲ್ಲಿಯವರೆಗೆ ಮರಳಿ ಕೊಟ್ಟಿರುವುದಿಲ್ಲ ವಿನಾ ಕಾರಣ ತಂಟೆ ತಕರಾರು ಮಾಡುತ್ತಾ ಬಂದಿದ್ದು, ದಿನಾಂಕ 13/03/2018 ರಂದು ಸಾಯಂಕಾಲ ಫಿರ್ಯಾದಿದಾರರ ಮತ್ತು ಆತನ ಸಂಗಡ ಯಲ್ಲಾಲಿಂಗ, ಹಣಮಂತ, ಯಮನಪ್ಪ ಎಲ್ಲರೂ ಕೂಡಿ  ಹಸನಾಪೂರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಮಾತಾಡುತ್ತಾ ಕುಳಿತುಕೊಂಡಾ ಅದೇ ವೇಳೆಗೆ ಸೀತರಾಮ ಸುಬೇದಾರ ಈತನು ಕಾರ ಚಲಾಯಿಸಿಕೊಂಡು ಬಂದಿದ್ದು, ಆಗ ಫಿರ್ಯಾದಿದಾರರು ಸದರಿಯವನಿಗೆ ಹಣ ಕೊಡುವಂತೆ ಕೇಳಿದಾಗ ಸುಬೇದಾರ ಈತನು ಫಿರ್ಯಾದಿಗೆ ಏ ರಂಡಿ ಮಗನೇ ನಿನಗೆ ಯಾವ ಹಣ ಕೊಡಬೇಕು ನಿನ್ನ ಹತ್ತಿರ ಅದಕ್ಕೆ ಸಾಕ್ಷಿ ಏನು ಇದೆ ಯಾವುದಾದರೂ ಕಾಗದ ಪತ್ರ ಇದ್ದರೆ ತೋರಿಸು ಊರಲ್ಲಿ ನಿಮ್ಮ ಕುರುಬರದು ಬಹಳ ಆಗಿದೆ ಮಕ್ಕಳೇ ನಾನು ಬಂದರೆ ನೀವು ಎದ್ದು ನಿಂತು ನಮಸ್ಕಾರ ಮಾಡಬೇಕು ನನ್ನ ಕಾರ ಬಂದರೆ ದಾರಿ ಬಿಡಬೇಕು ಅಂತೆಲ್ಲಾ ಬೈಯುತ್ತಿದ್ದಾಗ ನಾನು ಯಾಕೆ ಬೈಯುತ್ತಿದ್ದಿ ಅಂತಾ ಕೇಳಿದಾಗ ತಕರಾರು ಮಾಡಿದ್ದು, ನಂತರ ಪೋನ ಮಾಡಿ ತನ್ನಣ್ಣ ದೇವರಾಜ ಹಾಗೂ ಅಳಿಯ ಇಂದ್ರಜೀತ @ ವಿನೂ ಇವರುಗಳಿಗೆ ಕರೆಯಿಸಿದ್ದು, ಸದರಿಯವರು ಬಂದು ನನಗೆ ಕೈಗಳಿಂದ ಹೊಟ್ಟೆಯಲ್ಲಿ, ಬೆನ್ನಿನ ಮೇಲೆ ಸೊಂಟಕ್ಕೆ ಹೊಡೆದಿದ್ದು, ಸೀತರಾಮ ಈತನು ಕೈ ಹಿಡಿದು ಹಿಂದಕ್ಕೆ ತಿರುವಿದ್ದು, ನಂತರ ಮೂರು ಜನರೂ ಕೂಡಿಕೊಂಡು ನನಗೆ ಎಳೆದುಕೊಂಡು ತಮ್ಮ ಕಾರಿನಲ್ಲಿ ಜಬರದಸ್ತಿಯಿಂದ ಎತ್ತಿ ಹಾಕಿ ಹಸನಾಪೂರ ಕ್ರಾಸ ವರೆಗೆ ಅಪಹರಣ ಮಾಡಿಕೊಂಡು ಬಂದು ಅಲ್ಲಿ ಇನ್ನೊಮ್ಮೆ ಹಣ ಕೇಳಿದರೆ ಮತ್ತು ನಮ್ಮ ತಂಟೆಗೆ ಬಂದರೆ ಜೀವ ಸಹಿತ ಬೀಡುವುದಿಲ್ಲ ಅಂತಾ ಜೀವದ ಭೇದರಿಕೆ ಹಾಕಿರುತ್ತಾರೆ ಸದರಿ ಸೀತರಾಮ ತಂದೆ ತಿಪ್ಪಣ್ಣ ಸುಬೇದಾರ, ಆತನ ಅಣ್ಣ ದೇವರಾಜ ತಂದೆ ತಿಪ್ಪಣ್ಣ , ಅಳಿಯನಾದ ಇಂದ್ರಜೀತ @ ವಿನೂ ತಂದೆ ಗೌಡಪ್ಪಾ ಇವರುಗಳ ವಿರುದ್ದ ಸೂಕ್ತ ಕಾನೂನು ರೀತಿ ಕ್ರಮ ಜರೂಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಹಾಬಾದ ನಗರ ಠಾಣೆ : ಶ್ರೀ ಅಂಬದಾಸ ತಂದೆ ಭಾರತ ಸಾ:ಶಾಸ್ತ್ರಿ ಚೌಕ್ ಲೋಹಾರ ಗಲ್ಲಿ ಇವರು ದಿನಾಂಕ:12.03.2018 ರಂದು 8.30 ಪಿಎಂಕ್ಕೆ ನಮ್ಮ ಮನೆಯ ಮುಂದಿನ ಹೋಟೆಲ ಹತ್ತಿರ ಬರುವಾಗ ಅದೇ ವೇಳೆಗೆ ಮೊಹ್ಮದ ರಫೀಕ್ ಇತನು ಅವಾಚ್ಚವಾಗಿ ಬೈದು ಎದೆ ಮೇಲಿನ ಅಂಗಿ ಹಿಡಿದು ಕೈ ಜೊಗ್ಗಾಡುವಾಗ ಕೇಳಿದ್ದಕ್ಕೆ ಕಾಲಿನಿಂದ ಒದ್ದು ರಫೀಕ್ ಮತ್ತು ಅನ್ವರ ಹಾಗೂ ಇತತರ ಕೂಡಿಕೊಂಡು ಅವಾಚ್ಯವಗಿ ಬೈದು ಗುಂಪು ಕಟ್ಟಿಕೊಂಡು ಕೈಯಿಂದ ಮತ್ತು ಕೋಲೆ ಮಾಡುವ ಉದ್ದೇಶದಿಂದ ಕಬ್ಬಣದ ನಳದ ಪೈಪ್ ನಿಂದ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.