15 July 2013
GULBARGA DIST REPORTED CRIME
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ
ಶ್ರೀ. ಜಯಕುಮಾರ ತಂದೆ ಧನಸಿಂಗ ಪವ್ಹಾರ ಸಾ:ಉದನೂರ ತಾಂಡಾ ತಾ:ಜಿ:ಗುಲಬರ್ಗಾ ಕೊಟ್ಟ ಹೇಳಿಕೆ ಸಾರಂಶ ಏನೆಂದರೆ ತನ್ನ ಹೆಂಡತಿ ಸುರೇಖಾಳು ತನ್ನ ಮೇಲೆ ಇಲ್ಲ-ಸಲ್ಲದ ಆರೋಪ ಮಾಡಿ ವಿಷಸೇವನೆ ಮಾಡಿ ತನ್ನ ವಿರುದ್ದ ಹೆಂಡತಿಗೆ ಕಿರುಕುಳ ಕೊಡುತ್ತೇನೆ ಅಂತಾ ತನ್ನ ಅತ್ತೆ ಶಾರದಾಬಾಯಿ ಕೇಸು ದಾಖಲಿಸಿದ್ದು ಕೇಸು ಕೊರ್ಟಿನ ವಿಚಾರಣೆಯಲ್ಲಿ ಇದ್ದು. ದಿನಾಂಕ:-10/07/2013 ರಂದು ಕೇಸಿನ ವಿಚಾರಣೆ ಇದ್ದ ಕಾರಣ ಕೋರ್ಟಿಗೆ ಹೋದಾಗ
ರಾಜಿ ಆಗೋಣಾ ಅನ್ಯೋನದಿಂದ ಮಕ್ಕಳೊಂದಿಗೆ ಸಂಸಾರ ಮಾಡೋಣಾ ಅಂತಾ ತನ್ನ ಹೆಂಡತಿಗೆ ತಿಳಿ ಹೇಳಿದಾಗ ಅತ್ತೆ ಶಾರಾದಾಬಾಯಿ ಮತ್ತು ಬನಸಿ ರಾಠೋಡ ಅವರೆಲ್ಲರೂ ನನಗೆ ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ಮಾನಸಿಕ ಕಿರುಕುಳ ಕೊಟ್ಟು ಮದುವೆ ಸಮಯದಲ್ಲಿ ಕೊಟ್ಟ
ಬಂಗಾರ ವಾಪಸ್ಉ ಕೋಡು ಇಲ್ಲದಿದ್ದರಿ ನಿನಗೆ ಖಲ್ಲಾಸ ಮಾಡಿ ಬೀಡುತ್ತೇವೆ ಅಂತಾ ಜೀವದ ಭಯ ಹಾಕಿದ್ದು. ನಾನು ಮನ ನೊಂದು 3 ತೋಲಿ ಬಂಗಾರ ಹೇಗೆ ಮುಟ್ಟಿಸಲಿ ಎಂದು ಮನಸ್ಸಿನ ಮೇಲೆ ಮಾನಸಿಕವಾಗಿ ಪರಿಣಾಮ ಮಾಡಿಕೊಂಡು ಅವರು ಪದೇ ಪದೇ ಕೊಟ್ಟ ಕಿರುಕುಳದಿಂದ ಬೆಸತ್ತು ಕೊರ್ಟಿನಿಂದ ನೇರವಾಗಿ ಮನೆಗೆ ಹೋಗಿ ಮನೆಯಲ್ಲಿ ಸಂಜೆ 06:30 ಗಂಟೆ ಸುಮಾರಿಗೆ ಮನೆಯಲ್ಲಿದ್ದ ಗಾಸಲೇಟ ಎಣ್ಣೆ ಡಬ್ಬಿ ತೆಗೆದುಕೊಂಡು ಮೈಮೇಲೆ ಸುರಿದುಕೊಂಡು ಮೈಗೆ ಬೆಂಕಿ ಹಚ್ಚಿಕೊಂಡಿದ್ದರಿಂದ ತಲೆಯಿಂದ ತೊಡೆಯವರೆಗೆ ಪೂರ್ತಿ ಮೈ ಸುಟ್ಟಿರುತ್ತದೆ ಕಾರಣ ಸದರಿ ನನ್ನ ಹೆಂಡತಿ ಸುರೇಖ , ಅತ್ತೆ ಶಾರದಾಬಾಯಿ
ಮತ್ತು ಬನಸಿರಾಠೋಡ ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳ ಬೇಕು ಅಂತಾ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಕೊಟ್ಟ ಹೇಳಿಕೆ ಫಿರ್ಯಾದಿ ಸಾರಂಶದ ಮೇಲಿಂದ ಗುಲಬರ್ಗಾ ಗ್ರಾಮೀಣ ಠಾಣೆಯಲ್ಲಿ
ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾದ್ದು.
ಇಂದು ದಿನಾಂಕ 14-07-2013 ರಂದು ಸಾಯಂಕಾಲ 08-30 ಗಂಟೆಗೆ ಜಯಕುಮಾರನು
ಆಸ್ಪತ್ರೆಯಲ್ಲಿ ಗುಣ ಮುಖನಾಗದೆ ಮೃತ ಪಟ್ಟಿದ್ದು ಈ ಬಗ್ಗೆ ಮೃತನ ತಾಯಿ ಚಾಂದಿಬಾಯಿ ಕೊಟ್ಟ
ಹೇಳಿಕೆ ಮೇಲಿಂದ ಮುಂದಿನ ಕ್ರಮ ಕೈಕೊಳ್ಳಲಾಗಿದೆ.
Subscribe to:
Posts (Atom)