POLICE BHAVAN KALABURAGI

POLICE BHAVAN KALABURAGI

25 January 2015

Kalaburagi District Reported Crimes

ಮಟ್ಕಾ ಜೂಜಾಟದಲ್ಲಿ ನಿರತ ಮೂವರ ಬಂದನ
ಸ್ಟೇಷನ ಬಜಾರ ಠಾಣೆ : ಸ್ಟೇಷನ ಬಜಾರ ಪೊಲೀಸ್ ಠಾಣಾ ವ್ಯಾಪ್ತಿಯ ಪಂಚಶೀಲನಗರದ ಕೆ.ಇ.ಬಿ ಆಫೀಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ಬರೆದುಕೊಳ್ಳತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ರಾಜಶೇಖರ ಹಳೆಗೋದಿ ಪಿ.ಐ ಹಾಗೂ ಸಿಬ್ಬಂದಿಯವರಾದ ರಾಜಕುಮಾರ ಪಿಸಿ 1100, ಶಿವಾನಂದ ಪಿಸಿ 1240, ದಾವಲಸಾಬ ಎಪಿಸಿ-188 ರವರೊಂದಿಗೆ ಮಾನ್ಯ ಶ್ರೀ ಮಹಾನಿಂಗ ನಂದಗಾಂವಿ ಡಿ.ಎಸ್.ಪಿ ಸಾಹೇಬರು ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ದಾಳಿ ಮಾಡಿ 1) ಶರಣಬಸ್ಸಪ್ಪಾ ತಂದೆ ಅಂಬಾರಾಯ ಅಂಬಲಗಿ ವಯಃ 50 ವರ್ಷ ಸಾಃ ಪಂಚಶೀಲ ನಗರ ಕಲಬುರಗಿ 2) ಶಾಂತಪ್ಪಾ ತಂದೆ ಮಾರುತಿ ಘಂಟೆ ವಯಃ 65 ವರ್ಷ ಸಾಃ ಪಂಚಶೀಲ ನಗರ ಕಲಬುರಗಿ, 3)  ನಂದಕುಮಾರ ತಂದೆ ಪರಮನಗೌಡ ಪಾಟೀಲ ಸಾ|| ಪಂಚಶೀಲನಗರ ಕಲಬುರಗಿ ಇವರುಗಳನ್ನು ದಸ್ತಗಿರಿ ಮಾಡಿ ಇವರ ಬಳಿಯಿಂದ ನಗದು ಹಣ 22,150/- ರೂ, ಮೂರು ಮಟ್ಕಾ ಚೀಟಿ, ಎರಡು ಬಾಲ ಪೇನ, ಒಂದು ನೊಕಿಯಾ ಮೊಬೈಲ ಫೋನ ಜಪ್ತಿ ಮಾಡಿಕೊಳ್ಳಲಾಗಿದೆ.
ಅಪಘಾತ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ನಿಂಗಪ್ಪಾ @ ನಿಂಗಣ್ಣ ತಂದೆ ಸಾಯಿಬಣ್ಣ ಹಿರೆ ಪೂಜಾರಿ ಸಾ|| ಕಡೆಹಳ್ಳಿ ಹಾ||||ಬಸವೇಶ್ವರ ನಗರ ಶಹಾಬಾದ ರವರ ಹೆಣ್ಣು ಮಕ್ಕಳಾದ ಸುಮಂಗಲಾ ಮತ್ತು ಉಮಾಶ್ರೀ  ಇವರು  ಹೊಲದಲ್ಲಿಯ ತೊಗರಿ ಕಟ್ಟಿಗೆ ತರಲು ಮನೆಯಿಂದ  ಹೋಗಿದ್ದು ಶಹಾಬಾದದ ನಾಗಪ್ಫಾ ಸುಬೇದಾರ ರವರ ಹೊಲದ ಹತ್ತಿರ  ಎಡಗಡೆ ರೋಡಿನ ಬದಿಗೆ ನಡೆದುಕೊಂಡು ಹೋಗುವಾಗ ಹಿಂದುಗಡೆ ಶಹಾಬಾದದಿಂದ  ಜೇವರ್ಗಿ ಕಡೆಗೆ  ಬರುತ್ತಿದ್ದ ಹುಂಡಿಯಾ ಕಂಪನಿಯ ಕಾರ ನಂ ಕೆಎ-01, ಟಿಎಸ್-7337 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾಧಿಯ ಮಕ್ಕಳಿಗೆ ಡಿಕ್ಕಿ ಹೊಡೆದು  ರೋಡಿನ ಎಡಬದಿಗೆ  ತಗ್ಗಿನಲ್ಲಿ ಪಲ್ಟಿಮಾಡಿ ವಾಹನದ ಕೆಳಗೆ  ಫಿರ್ಯಾದಿ  ಮಕ್ಕಳು ಸಿಕ್ಕಿಬಿದ್ದಿದ್ದು, ಫಿರ್ಯಾದಿಗೆ & ಫಿರ್ಯಾದಿ ಹೆಂಡಿಗೆ ಹಾಗೂ ಅರೂಣ ಕುಮಾರ , ವೀರಭದ್ರ ನಾಟೀಕಾರ ವರಿಗೆ ಗೊತ್ತಾಗಿ ಸ್ಥಳಕ್ಕೆ ಹೋಗಿ ನೋಡಲಾಗಿ ಫಿರ್ಯಾದಿ ಮಗಳಾದ ಸುಮಂಗಳಾ ಇವಳಿಗೆ ಗದ್ದಕ್ಕೆ  ಎಡಕಾಲು ಪಾದದ ವರೆಗೆ ಎಡಕಣ್ಣಿಗೆ, ಮುಖಕ್ಕೆ  ತಲೆಗೆ ಹಾಗೂ ಅಲ್ಲಲ್ಲಿ ಭಾರಿ ಒಳಪೆಟ್ಟಾಗಿದ್ದು ಮತ್ತು ಮಾಲಾಶ್ರೀಗೆ ಬಾಯಿಗೆ ಎಡ ಕಪಾಳಿಗೆ ಬಲ ಕಾಲ ತೊಡೆಯಿಂದ ಪಾದದ ವರೆಗೆ ಭಾರಿ  ಒಳಪೆಟ್ಟಾಗಿ ಅವರಿಗೆ ಉಪಚಾರ ಕುರಿತು 108 ಅಂಬುಲೆನ್ಸದಲ್ಲಿ ಹಾಕಿಕೊಂಡು ಜಿಜಿಹೆಚ್. ಕಲಬುರಗಿಗೆ  ಸೇರಿಕೆ ಮಾಡಿದ್ದು ಉಪಚಾರ ಹೊಂದುತ್ತಾ  ಸುಮಂಗಳಾ ಮೃತಪಟ್ಟಿರುತ್ತಾಳೆ.  ಮತ್ತು ಮಾಲಾಶ್ರೀ ಇವಳಿಗೆ ಸರಕಾರಿ ಆಸ್ಪತ್ರೆಯಿಂದ  ಹೆಚ್ಚಿನ ಉಪಚಾರ ಕುರಿತು ಯುನೆಟೆಡ್ ಆಸ್ಪತ್ರೆ ಕಲಬುರಗಿಗೆ ಸೇರಿಕೆ ಮಾಡಿದ್ದು ಇರುತ್ತದೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.