POLICE BHAVAN KALABURAGI

POLICE BHAVAN KALABURAGI

03 January 2019

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ದಿನಾಂಕ 19-10-2018 ರಂದು ಬೆಳಿಗ್ಗೆ ಶ್ರೀ ಬಸವರಾಜ ತಂದೆ ಯಶವಂತ ಬಾಸ್ಲೆಗಾಂವಕರ್ ಸಾ|| ಬಾಸ್ಲೇಗಾಂವ ತಾ|| ಅಕ್ಕಲಕೋಟ ಜಿ|| ಸೋಲ್ಲಾಪೂರ ರವರು ಮತ್ತು ನನ್ನ ತಂದೆಯಾದ ಯಶವಂತ ತಂದೆ ಭೀಮಶಾ ಬಾಸ್ಲೇಗಾಂವಕರ್ ಹಾಗೂ ತಾಯಿಯಾದ ಅಂಬುಬಾಯಿ ಹಾಗೂ ನನ್ನ ತಂದೆಯ ಗೆಳೆಯನವರಾದ ದವಲಪ್ಪ ತಂದೆ ದತ್ತಪ್ಪ ಜಮಾದಾರ ರವರೆಲ್ಲರೂ ಕೂಡಿಕೊಂಡು ಮೋಟರ ಸೈಕಲಗಳ ಮೇಲೆ ಘತ್ತರಗಾ ಶ್ರೀ ಭಾಗ್ಯವಂತಿ ದೇವಸ್ಥಾನಕ್ಕೆ ಹೋಗಿರುತ್ತೇವೆ. ಘತ್ತರಗಾಕ್ಕೆ ಹೋಗುವಾಗ ನಾನು ಮತ್ತು ದವಲಪ್ಪ ಜಮಾದಾರ ರವರು ನಮ್ಮ ಮೋಟರ ಸೈಕಲ ಮೇಲೆ ಹಾಗೂ ನನ್ನ ತಂದೆ ಹಾಗೂ ತಾಯಿಯವರು ನಮ್ಮ ತಂದೆಯ ಗೆಳೆಯರಾದ ಗೌರಿಶಂಕರ ಕೋಳಿ ರವರ ಮೋಟರ ಸೈಕಲ ನಂ ಎಮ್.ಹೆಚ್-13 ಡಿಸಿ-1358 ನೇದ್ದರ ಮೇಲೆ ಹೋಗಿರುತ್ತೇವೆ. ದರ್ಶನ ಮಾಡಿಕೊಂಡು ಮರಳಿ ನಮ್ಮ ಗ್ರಾಮಕ್ಕೆ ಹೋಗುತ್ತಿರುವಾಗ ಸಾಯಂಕಾಲ 4:30 ಗಂಟೆಯ ಸುಮಾರಿಗೆ ಅಫಜಲಪೂರ  ಘತ್ತರಗಾ ರೋಡಿಗೆ ಇರುವ ಹಿಂಚಗೇರಾ ಗ್ರಾಮದ ತಿರುವಿನಲ್ಲಿ ಹೋಗುತ್ತಿದ್ದಾಗ ಮುಂದೆ ಹೊಗುತ್ತಿದ್ದ ನಮ್ಮ ತಂದೆ ಮೋಟರ ಸೈಕಲನ್ನು ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿದ್ದರಿಂದ ಹಿಂದಿನ ಸೀಟಿನಲ್ಲಿ ಕುಳಿತಿದ್ದ ನನ್ನ ತಾಯಿ ರೋಡಿಗೆ ಇರುವ ಸ್ಪೀಡ್ ಬ್ರೇಕ್ಕರ್ ಮೇಲೆ  ಕೆಳಗೆ ಬಿದ್ದಿದ್ದರಿಂದ ತಲೆಗೆ ಭಾರಿ ಒಳಪೆಟ್ಟಾಗಿ ಪ್ರಜ್ಞೆ ತಪ್ಪಿರುತ್ತದೆ. ಆಗ ನಾವು 108 ಅಂಬ್ಯೂಲೆನ್ಸ ವಾಹನಕ್ಕೆ ಪೋನ್ ಮಾಡಿದ್ದು ಸ್ಥಳಕ್ಕೆ 108 ವಾಹನ ಬಂದ ನಂತರ ಅದರಲ್ಲೆ ಹಾಕಿಕೊಂಡು ಅಫಜಲಪೂರ ಸರ್ಕಾರಿ ಆಸ್ಪತ್ರೆಗೆ ತಂದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಅಂಬ್ಯೂಲೆನ್ಸ ವಾಹನದಲ್ಲಿ ಕರೆದುಕೊಂಡು ಸೋಲ್ಲಾಪೂರದ ಶ್ರೀ ಮಾರ್ಕಂಡಯ್ಯ ಸಹಕಾರಿ ರುಗ್ಣಾಲಯ ದಲ್ಲಿ ಸೇರಿಕೆ ಮಾಡಿದ್ದು ಚಿಕಿತ್ಸೆ ಫಲಕಾರಿ ಆಗದೆ ಸಾಯಂಕಾಲ 6:20 ಗಂಟೆ ಸುಮಾರಿಗೆ ಮೃತ ಪಟ್ಟಿರುತ್ತಾಳೆ. ಸದರಿ ಘಟನೆಯು ನನ್ನ ತಂದೆಯವರು ಮೋಟರ ಸೈಕಲ ನಂ ಎಮ್.ಹೆಚ್-13 ಡಿಸಿ-1358 ನೇದ್ದನ್ನು ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿದ್ದರಿಂದ ಹಿಂದಿನ ಸೀಟಿನಲ್ಲಿ ಕುಳಿತಿದ್ದ ನನ್ನ ತಾಯಿ ರೋಡಿಗೆ ಇರುವ ಸ್ಪೀಡ್ ಬ್ರೇಕ್ಕರ್ ಮೇಲೆ  ಕೆಳಗೆ ಬಿದ್ದಿದ್ದರಿಂದ ತಲೆಗೆ ಭಾರಿ ಒಳಪೆಟ್ಟಾಗಿ ಮೃತ ಪಟ್ಟಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ : ದಿನಾಂಕ 28/12/2018 ರಂದು ನನ್ನ ಮಗ & ವಿಶಾಲ ತಂದೆ ರಾಜಶೇಖರ ಸರಸಂಬಿ ರವರಿಬ್ಬರೂ ಮೋಟಾರ ಸೈಕಲ್ ನಂ, ಕೆಎ-32, ಇಕ್ಯೂ-8424 ನೇದ್ದರ ಮೇಲೆ ನನ್ನ ಹತ್ತೀರ ಬಂದು ನನಗೆ ಆಳಂದಕ್ಕೆ ಮದುವೆ ಸಂತೆಗೆ ಹೋಗಿ ಬರುತ್ತೇವೆ ಅಂತಾ ಹೇಳಿ ಸದರಿ ಮೋಟರ ಸೈಕಲನ್ನು ವಿಶಾಲ ಇತನು ಚಲಾಯಿಸಿಕೊಂಡು ನನ್ನ ಮಗನಿಗೆ ಹಿಂದೆ ಕುಡಿಸಿಕೊಂಡು ಆಳಂದ ಕ್ಕೆ ಹೋಗಿ ಬರುತ್ತೇವೆ ಅಂತಾ ಹೇಳಿ ಹೋಗಿದ್ದು ನಂತರ 05;40 ಪಿ.ಎಂ ಸುಮಾರಿಗೆ ನಮ್ಮೂರಿನ ಮಡಿವಾಳಯ್ಯ ತಂದೆ ಗುರುಲಿಂಗಯ್ಯ ಹಿರೇಮಠ & ಬಸವರಾಜ ತಂದೆ ರಾಮಚಂದ್ರ ನಂದಗೂರ ರವರು ಫೋನ ಮಾಡಿ ನನ್ನ ಮಗ & ವಿಶಾಲ ಸರಸಂಬಿ ರವರುಗಳು ಹಳ್ಳಿ ಸಲಗರ ತಾಂಡಕ್ಕೆ ಹೊಗು ರೋಡಿನ ಕ್ರಾಸ್ ಹತ್ತೀರ ಮೋಟಾರ ಸೈಕಲ್ ನ್ನು ಸ್ಕೀಡ್ಡಾಗಿ ಬೀದ್ದಿದ್ದು, ಚಂದ್ರಕಾಂತ ಇತನಿಗೆ ಹಣೆಯ ಮೇಲೆ ಭಾರಿ ರಕ್ತಗಾಯ, ಬಲಗಾಲಿನ ಮೋಳಕಾಲಿನ ಕೇಳಗೆ ಭಾರಿ ರಕ್ತಗಾಯ ವಾಗಿದ್ದು ಮತ್ತು ವಿಶಾಲ ಇತನಿಗೆ ತಲೆಗೆ ಭಾರಿ ರಕ್ತಗಾಯ ಕೈ ಕಾಲುಗಳಿಗೆ ಅಲ್ಲಲ್ಲಿ ಸಣಪುಟ್ಟ ತರಚೀದ ಗಾಯಗಳಾಗಿದ್ದು ಕಾರಣ ನೀವು ಬನ್ನೀರಿ ಅಂತಾ ತಿಳಿಸಿದ ಮೇರೆಗೆ ನಾನು ಗಾಬರಿಯಾಗಿ ಘಟನಾ ಸ್ಥಳಕ್ಕೆ ಹೋಗಿ ನೊಡಲಾಗಿ ನನ್ನ ಮಗನು ರಸ್ತೆಯ ಅಪಘಾತದಲ್ಲಿ ಹಣೆಗೆ, ಎರಡು ಕಾಲುಗಳಿಗೆ ಗಂಭೀರ ಸ್ವರೂಪದ ರಕ್ತಗಾಯ ಹೊಂದಿ ನರುಳಾಡುತಿದ್ದು ಮಾತನಾಡುವ ಸ್ಥೀತಿಯಲ್ಲಿ ಇದ್ದಿರುವದಿಲ್ಲ ಅಲ್ಲೇ ನಿಂತಿದ ವಿಶಾಲ ಸರಸಂಬಿ ಇವರಿಗೆ ವಿಚಾರಿಸಿದಾಗ ತನ್ನ ಮೋಟಾರ ಸೈಕಲ್ ನಂ, ಕೆಎ-32, ಇಕ್ಯೂ-8424 ನೇದ್ದರ ಮೇಲೆ ನಾನು ಚಲಾಯಿಸಿಕೊಂಡು ಹಿಂದೆ ಚಂದ್ರಕಾಂತನಿಗೆ ಕೂಡಿಸಿಕೊಂಡು ಹಳ್ಳಿ ಸಲಗರದಿಂದ ಆಳಂದ ಕಡೆಗೆ ಹೋಗುತ್ತಿದ್ದಾಗ ಒಮ್ಮೇಲೇ ಮೋಟಾರ ಸೈಕಲ್ ಸ್ಕೀಡ್ಡಾಗಿ ಬಿದ್ದಿದ್ದು ಇರುತ್ತದೆ ಅಂತಾ ತಿಳಿಸಿದ್ದರಿಂದ ನಾವೆಲ್ಲರೂ ಕೂಡಿಕೊಂಡು ಎರಡು ಜನರಿಗೆ ಉಪಚಾರ ಕುರಿತು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಬಸವೇಶ್ವರ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿದ್ದು ದಿನಾಂಕ 28/12/2018 ರಿಂದ ದಿನಾಂಕ 01/01/2019 ರಂದು ಗಾಯಾಳು ಚಂದ್ರಕಾಂತ ತಂದೆ ಕಾಶಪ್ಪ ಪುಜಾರಿ ಇತನು ಬಸವೇಶ್ವರ ಆಸ್ಪತ್ರೆ ಕಲಬುರಗಿಯಲ್ಲಿ ಉಪಚಾರ ಫಲಕಾರಿಯಾಗದೇ ಮೃತಪಟ್ಟಿರುತ್ತಾನೆ ಅಂತಾ ಶ್ರೀ ಕಾಶಪ್ಪ ತಂದೆ ಶರಣಪ್ಪ ಪುಜಾರಿ ಸಾ; ಹಳ್ಳಿ ಸಲಗರ ತಾ; ಆಳಂದ ಜಿ; ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 01/01/2019 ರಂದು ರಾತ್ರಿ 10.00 ಗಂಟೆ ಸುಮಾರಿಗೆ ಪ್ರತಿ ದಿವಸದಂತೆ ನಾವು ಮನೆಯವರೆಲ್ಲರು ಊಟ ಮಾಡಿ ಮಲಗಿಕೊಂಡಿರುತ್ತೇವೆ. ಇಂದು ದಿನಾಂಕ 02//01/2019 ರಂದು ಬೆಳಗ್ಗಿನ ಜಾವ 05.00 ಗಂಟೆ ಸುಮಾರಿಗೆ ಎದ್ದು ತಲಬಾಗಿಲು ತೆರೆಯಲು ಹೋದಾಗ ಅದಕ್ಕೆ ಹೊರಗಿನ ಕೊಂಡಿ ಹಾಕಿತ್ತು ಆಗ ನಾನು ಹಿಂದಿನ ಬಾಗಿಲಿನಿಂದ ತಲಬಾಗಿಲು ಕಡೆ ಹೋದಾಗ ತಲಬಾಗಿಲಗೆ ಹೊರಗಿನಿಂದ ಕೊಂಡಿ ಹಾಕಿದ್ದು ಮತ್ತು ನಮ್ಮ ಅಂಗಡಿಯ ಸೆಟರ ಕೀಲಿ ಮುರಿದು ಸೆಟರ ಬಾಗಿಲು ಅರ್ಧಕ್ಕೆ ತೆರೆದಿತ್ತು ಆಗ ನಾನು ಗಾಬರಿಯಾಗಿ ಮನೆಯವರೇಲ್ಲರಿಗೂ ಎಬ್ಬಿಸಿ ವಿಷಯ ತಿಳಿಸಿದೆನು ನಂತರ ಒಳಗಡೆ ಹೋಗಿ ನೋಡಲು ಅಂಗಡಿಯ ಒಳಗಡೆ ರೂಮಿನಲಿದ್ದ ಅಲಮಾರಿ ಕಿಲಿ ಮುರಿದು ಲಾಕರನ ಕಿಲಿ ಸಹ ಮುರಿದು ಅದರಲ್ಲಿನ ಬಟ್ಟೆಗಳೆಲ್ಲಾ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು ಅಲಮಾರಿ ಲಾಕರದಲ್ಲಿ ಇಟ್ಟಿದ್ದ 1) 40 ಗ್ರಾಮ ಬಂಗಾರದ ಮಂಗಳ ಸೂತ್ರ 2) 10 ಗ್ರಾಂ ಬಂಗಾರದ ಲಾಕೇಟ್ 3) 05 ಗ್ರಾಂ ಬಂಗಾರದ ಉಂಗುರ ಇವುಗಳೆಲ್ಲವು ಇದ್ದಿರಲಿಲ್ಲ ದಿನಾಂಕ 01/01/2019 ರಾತ್ರಿ 10.00 ಗಂಟೆಯಿಂದ ದಿನಾಂಕ 02/01/2019 ಬೆಳಿಗ್ಗಿನ ಜಾವ 05.00 ಗಂಟೆಯ ಮದ್ಯದ ಅವದಿಯಲ್ಲಿ ಯಾರೋ ಕಳ್ಳರು ನಮ್ಮ ಅಂಗಡಿಯ ಸೆಟರ ಬಾಗಿಲಿಗೆ ಹಾಕಿದ ಕಿಲಿ ಮುರಿದು ಒಳಗೆ ಪ್ರಮೇಶಿಸಿ ಒಳಗಡೆ ರೂಮಿನ ಅಲಮಾರಿಯ ಮತ್ತು ಅಲಮಾರಿ ಲಾಕರಿನ ಕಿಲಿ ಮುರಿದು ಅಂದಾಜು 55 ಗಾಂ ಬಂಗಾರದ ಆಭರಣಗಳು .ಕಿ 1,65,000/-ರೂಪಾಯಿ ಕಿಮ್ಮತ್ತಿನದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂಯಾ ಶ್ರೀ ಸದಾಶಿವ ತಂದೆ ಲೇಸಪ್ಪ ತಳವಾರ ಸಾ: ಉಡಚಾಣ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.