POLICE BHAVAN KALABURAGI

POLICE BHAVAN KALABURAGI

07 September 2017

Kalaburagi District Reported Crimes

ಕಿರುಕಳ ನೀಡಿ ಮಾರಣಾಂತಿಕ ಹಲ್ಲೆ ಮಾಡಿದ ಪ್ರಕರಣ :
ನರೋಣಾ ಠಾಣೆ : ಶ್ರೀಮತಿ ಶರಣಮ್ಮ ತಂದೆ ಜಯಪಾಲ ಫಿರಂಗೆ ಸಾ: ಮುನ್ನಳ್ಳಿ ಇವರ ಅಕ್ಕಳಾದ ಸುರೇಖಾಳಿಗೆ ಈಗ ಸುಮಾರು 2 ವರ್ಷಗಳ ಹಿಂದೆ ಸಂಗೋಳಗಿ(ಸಿ) ಗ್ರಾಮದ ಕಲ್ಯಾಣಿ ತಂದೆ ಶಿವರುದ್ರಪ್ಪ ಸಾಗರ ಎಂಬುವವರೊಂದಿಗೆ ಸಾಂಪ್ರದಾಯಿಕವಾಗಿ ಮದುವೆ ಮಾಡಿಕೊಟ್ಟಿರುತ್ತಾರೆ, ಅವರಿಗೆ ಈಗ ಇಬ್ಬರು ಹೆಣ್ಣು ಮಕ್ಕಳಿರುತ್ತಾರೆ, ನಮ್ಮ ಅಕ್ಕಳಾದ ಸುರೇಖಾಳು 2ನೇ ಮಗಳಿಗೆ ಜನ್ಮ ನೀಡಿ ಈಗ 12 ದಿವಸಗಳು ಮಾತ್ರ ಆಗಿದ್ದು ಅವಳು ನಮ್ಮೊಂದಿಗೆ ಮುನ್ನಳ್ಳಿ ಗ್ರಾಮದಲ್ಲಿಯೇ ಇದ್ದಾಳೆ, ನನ್ನ ಅಕ್ಕಳಾದ ಸುರೇಖಾಳಿಗೆ ಮದುವೆ ಆದ ಸುಮಾರು ಒಂದು ವರ್ಷ ಅವಳ ಗಂಡ ಅವಳನ್ನು ಚನ್ನಾಗಿಯೇ ನೋಡಿಕೊಂಡಿದ್ದು ನಂತರ ಅವಳ ಮೇಲೆ ಅನುಮಾನ ಪಡುತ್ತಾ ರಂಡಿ ನೀನು ಅವನ ಜೋತೆ ಮಾತಾಡ್ತಿಯಾ ಅಂತ ಇತ್ಯಾದಿಯಾಗಿ ಸಂಶಯ ಪಡುತ್ತಾ ಅವಳಿಗೆ ಮಾನಸಿಕ ಕಿರುಕುಳ ಕೊಡುವುದಲ್ಲದೆ ಕೈಯಿಂದ ಹೊಡೆಬಡೆ ಮಾಡುತ್ತಾ ದೈಹಿಕವಾಗಿಯು ಸಹ ಕಿರುಕುಳ ಕೊಡುತ್ತಿರುವ ಬಗ್ಗೆ ನಮ್ಮ ಅಕ್ಕಳು ಆಗಾಗ ನಮ್ಮೂರಿಗೆ ಬಂದಾಗ ಮತ್ತು ಫೋನ್ ಮಾಡಿದಾಗ ನನ್ನ ಹಾಗೂ ನನ್ನ ತಂದೆ-ತಾಯಿ ಮುಂದೆ ಹೇಳಿ ದುಃಖ ಪಡುತ್ತಿದ್ದಳು ಅದಕ್ಕೆ ನಮ್ಮ ತಂದೆ-ತಾಯಿ ನಮ್ಮ ಅಕ್ಕಳಿಗೆ ಸಮಾಧಾನ ಹೇಳಿ ಗಂಡನೊಂದಿಗೆ ಸಂಸಾರ ಮಾಡಿಕೊಂಡು ಅಲ್ಲಿಯೇ ಇರಬೇಕು ಎಂದು ಹೇಳಿರುತ್ತಾರೆ, ಮತ್ತು ನಮ್ಮ ಭಾವನಾದ ಕಲ್ಯಾಣಿಗು ಸಹ ನಮ್ಮ ಅಕ್ಕಳಿಗೆ ಚನ್ನಾಗಿ ನೋಡಿಕೊಳ್ಳುವಂತೆ ತಿಳಿಸಿ ಹೇಳಿರುತ್ತಾರೆ, ಆದರೂ ಸಹ ನಮ್ಮ ಅಕ್ಕಳ ಗಂಡನಾದ ಕಲ್ಯಾಣಿ ಇವರು ನಮ್ಮ ಅಕ್ಕಳಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುವುದು ಬಿಟ್ಟಿರಲಿಲ್ಲ. ಹೀಗಿದ್ದು ಇಂದು ದಿನಾಂಕ:- 06/09/2017 ರಂದು ಮುಂಜಾನೆ ನಾನು ನಮ್ಮ ಅಕ್ಕ ಸುರೇಖಾ ಹಾಗೂ ನಮ್ಮ ತಂದೆ ಜಯಪಾಲ ಮತ್ತು ತಾಯಿಯಾದ ಸರಸ್ವತಿ ರವರುಗಳು ನಮ್ಮ ಮನೆಯಲ್ಲಿದ್ದಾಗ ನಮ್ಮ ಅಕ್ಕ ಸುರೇಖಾಳ ಗಂಡನಾದ ಕಲ್ಯಾಣಿ ಇವರು ಬಂದು ನಮ್ಮ ಅಕ್ಕಳಿಗೆ  ಏ ರಂಡಿ ಬಾಣತನ ಆಗಿ 10-12 ದಿವಸ ಆದರೂ ಸಹ ಏಕೆ ಗಂಡನ ಮನಿಗೆ ಬರುತ್ತಿಲ್ಲಾ ಎಂದು ಚಿರಾಡುತ್ತಾ ಅವಾಚ್ಯ ಶಬ್ದಗಳಿಂದ ಬೈಯುತ್ತಿರುವಾಗ ನಮ್ಮ ತಾಯಿಯಾದ ಸರಸ್ವತಿ ಇವಳು ಇನ್ನು ಹಸಿ ಮೈಯಲ್ಲಿರೊ ಬಾಣಂತಿ ಅವಳು ಇಷ್ಟ್ ಬೇಗ ಕರೆದುಕೊಂಡು ಹೋಗುವುದು ಸರಿ ಅಲ್ಲಾ ಎಂದು ಹೇಳುತ್ತಿರುವಾಗ  ಏ ಭೋಸಡಿ ನಿನೇನು ಹೇಳತಿ ಅಲೆ ಎಂದು ಅವಾಚ್ಯವಾಗಿ ಬೈಯುತ್ತಾ ತನ್ನ ಸೊಂಟದಲ್ಲಿದ್ದ ಚಾಕು ತೆಗೆದು ನಮ್ಮ ತಾಯಿಗೆ ಹೊಡೆಯಬೇಕೆನ್ನುವಷ್ಟರಲ್ಲಿ ನಾನು ಅಡ್ಡ ಹೋಗಿ ಬಿಡಿಸುತ್ತಿರುವಾಗ ನಮ್ಮ ಮಾವ(ಭಾವ) ಕಲ್ಯಾಣಿ ಇವರು ನನಗೆ ರಂಡಿ ನಿಂದು ಬಹಳ ಆಗ್ಯಾದ ಇವತ್ತು ನೀನಗೆ ಕೊಲೆ ಮಾಡಿಯೇ ಬಿಡುತೇನೆಂದು ಸದರಿ ಚಾಕುವಿನಿಂದ ನನ್ನ ಬಲಗಡೆ ಮಗ್ಗಲಿಗೆ ಎರಡು ಬಾರಿ ಚುಚ್ಚಿದ್ದು ಅಲ್ಲದೆ ಅದೆ ಚಾಕುವಿನಿಂದ ನನ್ನ ಬಲಗೈ ರಟ್ಟೆಯ ಒಳ ಭಾಗಕ್ಕೆ ಹಾಗೂ ಅಂಗೈಗೆ ಚುಚ್ಚಿದ್ದರಿಂದ ರಕ್ತಗಾಯ ವಾಗಿರುತ್ತದೆ. ಅಷ್ಟರಲ್ಲಿಯೇ ಅಲ್ಲಿಯೇ ಮನೆಯ ಹೊರಗಡೆ ನಿಂತಿದ್ದ ನಮ್ಮ ಭಾವನ ತಮ್ಮನಾದ ಶ್ರೀನಿವಾಸ ತಂದೆ ಶಿವರುದ್ರಪ್ಪ ಸಾಗರ ಇವನು ಬಂದು ಕಲ್ಲಿನಿಂದ ನನ್ನ ತಾಯಿ ಏಡಗೈ ಮಣಿಕಟ್ಟಿನ ಹತ್ತಿರ ಹೊಡೆದು ರಕ್ತಗಾಯ ಪಡೆಸಿರುತ್ತಾನೆ. ಅಷ್ಟೊತ್ತಿಗೆ ನಮ್ಮ ತಂದೆ ಹಾಗೂ ನಮ್ಮ ಅಕ್ಕ ಸುರೇಖಾಳು ಬಿಡಿಸಲು ಬಂದಾಗ ನಮ್ಮ ಭಾವ ಕಲ್ಯಾಣಿ ಇವರು ಕಾಲಿನಿಂದ ನಮ್ಮ ಅಕ್ಕಳಾದ ಸುರೇಖಾಳ ಹೊಟ್ಟೆಗೆ ಒದ್ದಿರುತ್ತಾನೆ. ಆಗ ನಮ್ಮ ಓಣಿಯವರಾದ ಸಾಯಬಣ್ಣ ತಂದೆ ಲಕ್ಕಪ್ಪ ಫಿರಂಗೆ ತಾರಾಬಾಯಿ ಗಂಡ ಶರಣಪ್ಪ ಫಿರಂಗೆ, ಸುಮಿತ್ರಾ ಗಂಡ ವಿಠಲ ಸಿಂಗೆ ಮತ್ತು ಗುಜ್ಜವ್ವ ಗಂಡ ಕಲ್ಯಾಣಿ ಸಿಂಗೆ ರವರುಗಳು ಬಂದು ಜಗಳ ನೋಡಿ ಬಿಡಿಸಿರುತ್ತಾರೆ. ಒಂದು ಒಂದು ವೇಳೆ ಇವರುಗಳು ಜಗಳ ಬಿಡಿಸದೆ ಹೊದಲ್ಲಿ ನಮ್ಮ ಮಾವ(ಭಾವ) ಕಲ್ಯಾಣಿ ಇವರು ನನಗೆ ಕೊಲೆ ಮಾಡಿಯೇ ಬಿಡುತ್ತಿದ್ದರು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ನರೋಣಾ ಠಾಣೆ : ಶ್ರೀ  ಮಲ್ಲಿಕಾರ್ಜುನ ತಂದೆ ರುಕ್ಮಣ್ಣ ಶಾ/ನಿ 360 ಆಳಂದ ಘಟಕ ಇವರು ದಿನಾಂಕ:- 04/09/2017 ರಂದು ನನ್ನ ಕರ್ತವ್ಯವು ಮಾರ್ಗ ಸಂ. 19/20, ಕೆಎ32 ಎಫ್-1484 ಮುತ್ಯನ ಬಬಲಾದ ದಿಂದ ಆಳಂದ ಮಾರ್ಗದ ಮೇಲೆ ನಿರ್ವಾಹಕನಾಗಿದ್ದು ನನ್ನೊಂದಿಗೆ ವಿಜಯಕುಮಾರ ಚಾಲಕ 3733 ರವರನ್ನು ನಿಯೋಜಿಸಿದ್ದು ಆ ಪ್ರಕಾರ ನಾವಿಬ್ಬರು ಸೇರಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಮುತ್ಯಾನ ಬಬಲಾದ ದಿಂದ ಆಳಂದಗೆ ಬರುವಾಗ ಬೆಳಿಗ್ಗೆ ಸುಮಾರು 07:30 ಗಂಟೆಗೆ ತೆಲ್ಲೂರ ಗ್ರಾಮದ ಹತ್ತಿರ ನರೋಣಾ ಗ್ರಾಮದ ನರೋಣಾ ಬಸ್ ನಿಲ್ದಾಣದಿಂದ ಹತ್ತಿದ ವಿದ್ಯಾರ್ಥಿಗಳಾದ ಸಾಯಬಣ್ಣ ತಂದೆ ಆನಂದರಾಯ ಸಂಗೋಳಗಿ ಹಾಗೂ ಸಂತೋಷ ತಂದೆ ಶ್ರೀಶೈಲ ಬೊಳಶೆಟ್ಟಿ ಇಬ್ಬರು ಐಟಿಐ ವಿದ್ಯಾರ್ಥಿಗಳು ಸದರಿ ವಾಹನದ ಫುಟ್ ಬೋರ್ಡ್ ಮೇಲೆ ನಿಂತು ಪ್ರಯಾಣ ಮಾಡುತ್ತಿದ್ದು ಫುಟ್ ಬೋರ್ಡ್ ಮೇಲೆ ನಿಂತು ಪ್ರಯಾಣಿಸಬಾರದು ಎಂದು ಸರಕಾರದ ಮತ್ತು ಸಂಸ್ಥೆಯ ಕಾನೂನಾಗಿದ್ದು ಜಂಪ್ ಮತ್ತು ಹಂಸಗಳಲ್ಲಿ ಚಾಲಕರು ಬ್ರೇಕ್ ಹಾಕಿದಾಗ ಸದರಿ ಪ್ರಯಾಣಿಕರು ಬಿದ್ದು ಸಾವು ಸಂಭವಿಸುವ ಸಾದ್ಯತೆ ಇದ್ದು ಅಂತಹ ಪ್ರಕರಣದಲ್ಲಿ ನಿರ್ವಾಹಕರು ಅವರನ್ನು ಒಳಗಡೆ ಕರೆಯುವ ಜವಬ್ದಾರಿ ಇರುವುದರಿಂದ ನಾನು ಅವರಿಗೆ ಸಾಕಸ್ಟು ಬಾರಿ ವಿನಂತಿಸಿ ಒಳಗೆ ಬರುವಂತೆ ಹೇಳಿದರು ಕೇಳದೆ ಹಟಾ ಮಾಡುತ್ತಿದ್ದರಿಂದ ಅವರಿಗೆ ಒಳಗೆ ಬರುವಂತೆ ಒತ್ತಾಯ ಮಾಡುವ ಸಲುವಾಗಿ ವಾಹನ ನಿಲ್ಲಿಸಲು ವಿಜಿಲ್ ಹೊಡೆದು ನಿಲ್ಲಿಸಿದಾಗ ವಾಹನದಿಂದ ಇಬ್ಬರು ಇಳಿದರು ನಾನು ಅವರಿಗೆ ದಯವಿಟ್ಟು ಬಸ್ಸಿನ ಒಳಗೆ ಬರಬೇಕೆಂದು ಹೇಳಿದಾಗ ನಾವು ಒಳಗಡೆ ಹೋಗುವುದಿಲ್ಲ, ನೀನು ಅದ್ಯಾಂಗ್ ಇಲ್ಲಿ ಇಳಿಸಿ ಹೋಗುತ್ತಿ ಬೋಸಡಿ ಮಗನೆ ನಿನ್ನನ್ನು ನೋಡಿಕೊಳ್ಳುತ್ತೇನೆಂದು ಮತ್ತೊಂದು ಬಾರಿ ಈ ರೂಟ್ ನಲ್ಲಿ ತಿರುಗಾಡಿದರೆ ಜೀವ ಹೊಡೆಯುತ್ತೇವೆ ಬೊಳಿಮಕ್ಕಳೆ ಎಂದಾಗ ನಾವು ಆಯ್ತಪ್ಪ ನೀವು ಒಳಗಡೆ ಬರದಿದ್ದರೆ ನನಗೆ ತೊಂದರೆಯಾಗುತ್ತದೆ ಎಂದು ಪರಿಪರಿಯಾಗಿ ಹೇಳಿದರು ಅದರಲ್ಲಿ ಒಬ್ಬರಾದ ಸಾಯಬಣ್ಣ ತಂದೆ ಆನಂದರಾಯ ಸಂಗೋಳಗಿ ಎಂಬ ವಿದ್ಯಾರ್ಥಿ ಸೂಳಿ ಮಗನ್ಯಾ ಬಿಟ್ಟು ಹೋಗುತಿಯಾ ಎಂದು ಸುಮಾರು ಒಂದುವರೆ ಕೆ.ಜಿ ಯಿಂದ ಎರಡು ಕೆ.ಜಿ ಕಲ್ಲಿನಿಂದ ಬಿಸಿ ಹೊಡೆದಾಗ ನನ್ನ ಎಡಗಡೆಯ ಹೊಟ್ಟೆಯ ಪಕ್ಕೆಯಲ್ಲಿ (ಕಿಡ್ನಿ ಸಮೀಪ) ಬಲವಾಗಿ ಬಡೆದು ಗಾಯವಾಗಿದ್ದು ಅಷ್ಟರಲ್ಲಿ ಬಸ್ಸಿನಲ್ಲಿದ್ದ ಪ್ರಯಾಣಿಕರು ಜಗಳವನ್ನು ಬಿಡಿಸಿದಾಗ ಅಷ್ಟರಲ್ಲಿ ಜನರು ಬೈಯ್ಯುತ್ತಾರೆಂದು ಸಾಯಬಣ್ಣ ತಂದೆ ಆನಂದರಾವ ಸಂಗೋಳಗಿ ರವರು ಓಡಿ ಹೋಗಿರುತ್ತಾರೆ ಅವನೊಂದಿಗೆ ಇದ್ದ ಸಂತೋಷ ತಂದೆ ಶ್ರೀಶೈಲ್ ಬೊಳಶೆಟ್ಟಿ ರವರನ್ನು ಪ್ರಯಾಣಿಕರು ಹಿಡಿದುಕೊಂಡು ಅವರಲ್ಲಿದ್ದ ಬಸ್ ಪಾಸ್ ನ್ನು ಪ್ರಯಾಣಿಕರು ಕಿತ್ತಿಕೊಂಡು ನಮ್ಮ ಚಾಲಕರ ಕೈಗೆ ಕೊಟ್ಟಿದ್ದು (ಸದರಿ ಬಸ್ ಪಾಸ್ ಸಂ. 0314313 ನರೋಣಾ ದಿಂದ ಎಸ್.ಬಿ ನಾಕಾ ಪ್ರಯಾಣಿಸುವವರಾಗಿದ್ದು ಆದರ್ಶ ಐಟಿಐ ಕಲಬುರಗಿಯಲ್ಲಿ ವಿದ್ಯಾಭ್ಯಾಸ ಮಾಡುವವರಾಗಿದ್ದು) ಅದನ್ನು ಚಾಲಕರು ತಮ್ಮ ಬಳಿ ಇಟ್ಟುಕೊಂಡು ಸದರಿ ಚಾಲಕರು ಆಳಂದ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನರೋಣಾ ಠಾಣೆ : ಶ್ರೀ ಸಾಯಬಣ್ಣ ತಂದೆ ಆನಂದರಾಯ ಸಂಗೋಳಗಿ ಸಾ: ನರೋಣಾ ಇವರು ಕಲಬುರಗಿಯ ಜ್ಯೋತಿಬಾ ಪುಲೆ ಪದವಿ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಬಿ.ಎ 1ನೇ ಸೆಮ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತೇನೆ ದಿನಾಲು ನಮ್ಮೂರಿನಿಂದ ಕಾಲೇಜಿಗೆ ಸರಕಾರಿ ಬಸ್ಸಿನಲ್ಲಿ ಹೋಗಿ ಬರುವುದು ಮಾಡುತೇನೆ ನನ್ನಂತೆ ನಮ್ಮ ಗ್ರಾಮದ ಸಂತೋಷ ತಂದೆ ಶ್ರೀಶೈಲ ಬೊಳಶೆಟ್ಟಿ ಹಾಗೂ ಶಿವುಕುಮಾರ ಗುತ್ತೆದಾರ ರವರುಗಳು ಸಹ ಕಲಬುರಗಿ ಕಾಲೇಜಿಗೆ ದಿನಾಲು ಬಸ್ಸಿನಲ್ಲಿ ಬರುತ್ತಾರೆ ಅದರಂತೆ ದಿನಾಂಕ:- 04/09/2017 ರಂದು ನಾನು ಹಾಗೂ ನನ್ನ ಸ್ನೇಹಿತರಾದ ಸಂತೋಷ ಬೊಳಶೆಟ್ಟಿ ಹಾಗೂ ಶಿವಕುಮಾರ ಗುತ್ತೆದಾರ ಅವರು ಕಾಲೇಜಿಗೆ ಹೋಗಬೇಕೆಂದು ನಮ್ಮೂರಿನ ಬಸ್ಸ ನಿಲ್ದಾಣದಲ್ಲಿ ನಿಂತಿರುವಾಗ ಮುತ್ಯಾನ ಬಬಲಾದ ದಿಂದ ನರೋಣಾ ಮಾರ್ಗವಾಗಿ ಆಳಂದ ಹೋಗುವ ಸರಕಾರಿ ಬಸ್ಸ್ ಬಂದಿದ್ದು ಕಡಗಂಚಿ ವರೆಗೆ ಅದೆ ಬಸ್ಸಿನಲ್ಲಿ ಹೋಗಬೇಕೆಂದು ನಾವು ಮೂರು ಜನ ವಿಚಾರಿಸಿಕೊಂಡು ಬಸ್ ಹತ್ತಿದೆವು ತೆಲ್ಲೂರ ಗ್ರಾಮದ ಹತ್ತಿರದಲ್ಲಿ ಹೋಗುತ್ತಿರುವಾಗ ಮುಂಜಾನೆ 07:30 ಗಂಟೆ ಸುಮಾರಿಗೆ ಬಸ್ಸಿನ ನಿರ್ವಾಹಕರು ನನ್ನ ಸ್ನೇಹಿತನಾದ ಸಂತೋಷ ಇವರಿಗೆ ಮುಂದೆ ಹೋಗು ಎಂದು ಹೆಡಕ್ ಹಿಡಿದು ಮುಂದೆ ತಳ್ಳಿದನು ಅದಕ್ಕೆ ಸಂತೋಷನು ನನಗೆ ತಳ್ಳಬೇಡಿ ಬಹಳ ಜನ ಇದ್ದಾರೆ ನಾನು ಅವರನ್ನು ಸರಿಸಿ ಮುಂದೆ ಹೋಗುತ್ತೇನೆಂದು ಹೇಳುತ್ತಿರುವಾಗ ನಿರ್ವಾಹಕರು ಏರು ಧ್ವನಿಯಲ್ಲಿ  ಏ ರಂಡಿ ಮಗನೆ ಬೇಗ ಬೇಗ ಒಳಗಡೆ ಹೋಗುವುದಕ್ಕೆ ಬರಲ್ಲ ಎನು ಎಂದು ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ ಕೈಯಿಂದ ಅವನ ಬೆನ್ನ ಮೇಲೆ ಹೊಡೆದನು ಆಗ ನಾನು ಅವನಿಗೆಕೆ ಹೊಡೆಯುತ್ತಿರೆಂದು ಕೇಳಿದಾಗ ನಿನ್ಯಾವನೊ ಸೂಳಿ ಮಗನ್ಯಾ ಎಂದು ಅವಾಚ್ಯವಾಗಿ ಬೈಯ್ಯುತ್ತಾ ಕೈ ಮುಷ್ಟಿ ಮಾಡಿ ನನ್ನ ಹೊಟ್ಟೆಗೆ ಗುದ್ದುತ್ತಿರುವಾಗ ಬಸ್ಸಿನಲ್ಲಿದ್ದ ಪ್ರಯಾಣಿಕರು ಬಸ್ಸನ್ನು ನಿಲ್ಲಿಸಿದ್ದು ಆಗ ಸದರಿ ಬಸ್ಸಿನ ನಿರ್ವಾಹಕರು ನಮಗೆ ಕಾಲಿನಿಂದ ಒದ್ದು ಬಸ್ಸಿನಿಂದ ಕೆಳಗೆ ಬಿಳಿಸಿ ಅವರು ಸಹ ಕೆಳಗೆ ಇಳಿದು ಕೈಯಲ್ಲಿ ಕಲ್ಲು ಹಿಡಿದುಕೊಂಡು ನನ್ನ ಹೊಟ್ಟೆಗೆ ಜೋರಾಗಿ ಗುದ್ದಿದ್ದರಿಂದ ಒಳಪೆಟ್ಟಾಗಿ ಹೊಟ್ಟೆನೋವು ಆಗುತ್ತಿದೆ ಮತ್ತು ಸಂತೋಷನಿಗೆ ಕಾಲಿನಿಂದ ಹೊಟ್ಟೆಯ ಮೇಲೆ ಒದ್ದಿರುತ್ತಾನೆ, ಅಷ್ಟರಲ್ಲಿ ಅದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ನಮ್ಮ ಗ್ರಾಮದ ಬಸವರಾಜ ಬಳಗಾರ ಮತ್ತು ನನ್ನ ಸ್ನೇಹಿತನಾದ ಶಿವಕುಮಾರ ಗುತ್ತೆದಾರ ರವರು ಜಗಳ ನೋಡಿ ಬಿಡಿಸಿರುತ್ತಾರೆ. ನಂತರ ನಾವಿಬ್ಬರು ಅದೇ ಬಸ್ಸಿನಲ್ಲಿ ಕಡಗಂಚಿಯವರೆಗೆ ಬಂದು ಅಲ್ಲಿಂದ ಬೇರೆ ಬಸ್ಸಿನಲ್ಲಿ ಕಲಬುರಗಿಗೆ ಬಂದು ಹೊಟ್ಟೆ ನೋವು ಆಗುತ್ತಿದ್ದರಿಂದ ನಾನು ಸಂತೋಷ ಕೂಡಿ ನನ್ನ ಸ್ನೇಹಿತರ ರೂಮಿಗೆ ಹೋಗಿ ಸ್ವಲ್ಪ ಸುದಾರಿಸಿಕೊಂಡು ನಂತರ ಉಪಚಾರ ಕುರಿತು ಮದ್ಯಾಹ್ನ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆಯಾಗಿರುತ್ತೆನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಕಸ್ತೂರಿಬಾಯಿ ಗಂಡ ಪಂಡಿತ ಹಣಮನವರ ಸಾ||ಜೇವರ್ಗಿ (ಬಿ) ತಾ||ಅಫಜಲಪೂರ ರವರು ದಿನಾಂಕ 15/08/2017 ರಂದು ಮದ್ಯಾಹ್ನ 3.00 ಗಂಟೆ ಸುಮಾರಿಗೆ ನಮ್ಮ ಮನೆಯಲ್ಲಿ ನಾನು ಹಾಗು ನನ್ನ ಗಂಡ ಮತ್ತು ಅಣ್ಣ ತಮ್ಮಕ್ಕಿಯ ಕಾಂತಪ್ಪ ತಂದೆ ರಾಮಣ್ಣ ಹಣಮನವರ, ಲಕ್ಷ್ಮಣ ತಂದೆ ನಿಂಗಪ್ಪ ಹಣಮನವರ ಮಾತನಾಡುತ್ತಾ ಕುಳಿತಿದ್ದಾಗ ನನ್ನ ಮಗಳಾದ ಭಾಗ್ಯ  ವ||25 ವರ್ಷ ಇವಳು ನಮ್ಮ ಮನೆಯ ಮುಂದೆ  ಬಟ್ಟೆ ತೊಳೆಯುತಿದ್ದಾಗ  ಅದೇ ವೇಳೆಗೆ ನಮ್ಮ ದೂರದ ಸಂಬಂದಿಕರಾದ ಸುರೇಶ ತಂದೆ ಮಾರುತಿ ಸಿಂಗೆ, ಗಣಪತಿ ತಂದೆ ಮಾರುತಿ ಸಿಂಗೆ, ಬಸವರಾಜ ತಂದೆ ಮಾರುತಿ ಸಿಂಗೆ, ಮಾರುತಿ ಸಿಂಗೆ ಸಾ|| ಎಲ್ಲರು ಕಾಕಡೆ ವಸತಿ ಕೊಂಡವಾ ಪೂನಾ(ಮಹಾರಾಷ್ಟ್ರ) ರವರು ಒಂದು ಕಾರಿನಲ್ಲಿ ಬಂದರು ನಾನು ಅವರಿಗೆ ಮನೆಯಲ್ಲಿ ಕರೆಯುವಷ್ಟರಲ್ಲಿ ಅವರು ಏಕಾಏಕಿ ನನ್ನ ಮಗಳನ್ನು ಹಿಡಿದು ಕಾರಿನಲ್ಲಿ ಕಾಹಿಕೊಂಡು ತಮ್ಮ ಕಾರ ತಗೆದುಕೊಂಡು ಹೋದರು ನಾವು ಚಿರಾಡಿದರು ಕುಗಾಡಿದರು ಕೇಳಲಿಲ್ಲ ನಾವು ಗಾಬರಿಯಲ್ಲಿ ಕಾರಿನ ನಂಬರ ನೋಡಿರುವುದಿಲ್ಲ.  ನಂತರ ನನ್ನ ಮಗಳ ಬಗ್ಗೆ ನಮ್ಮ ಸಂಬಂದಿಕರಲ್ಲಿ ವಿಚಾರಿಸಿದ್ದು ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲಾ ನಮ್ಮ ದೂರದ ಸಂಬಂದಿಕರಾದ 1) ಸುರೇಶ ತಂದೆ ಮಾರುತಿ ಸಿಂಗೆ 2) ಗಣಪತಿ ತಂದೆ ಮಾರುತಿ ಸಿಂಗೆ 3) ಬಸವರಾಜ ತಂದೆ ಮಾರುತಿ ಸಿಂಗೆ 4) ಮಾರುತಿ ಸಿಂಗೆ ಸಾ|| ಎಲ್ಲರು ಕಾಕಡೆ ವಸತಿ ಕೊಂಡವಾ ಪೂನಾ(ಮಹಾರಾಷ್ಟ್ರ) ರವರು  ನನ್ನ ಮಗಳಾದ ಭಾಗ್ಯ ವ||25 ವರ್ಷ ಇವಳನ್ನು ಯಾವುದೋ ಉದ್ದೇಶಕ್ಕೆ ಅಫಹರಿಸಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಲೊಕೇಶ ತಂದೆ ಬಸವರಾಜ ಉಡಗಿ ಸಾ: ಮನೆ ನಂ. 10-5-16 ಮಲ್ಲಿಕಾರ್ಜುನ ಗುಡಿಯ ಹತ್ತಿರ ರಾಜಾಪೂರ ಕಾಲೋನಿ ಶಹಾಬಾದ ರೋಡ ಹಾ.ವ: ಡಾನ್ಸ ಶಾಲೆಯ ಹತ್ತಿರ ಪಾಟೀಲ ರವರ ಮನೆಯಲ್ಲಿ ಬಾಡಿಗೆ ಕಲಬುರಗಿ ಇವರು ದಿನಾಂಕ 04/09/2017 ರಂದು ರಾತ್ರಿ 11 ಗಂಟೆಗೆ ನಮ್ಮ ಮನೆಯ ಮುಂದಿನ ನನ್ನ ಹಿರೋ ಹೊಂಡಾ ಕರಿಷ್ಮಾ ಮೋಟಾರ ಸೈಕಲ್ ನಂ. ಕೆ.ಎ-32 ವಿ-0555 ಚಸ್ಸಿ ನಂ. MBLMC38EB8GL00452 ಇಂಜಿನ ನಂ. MC38EA8GL0029 ಅ.ಕಿ. 40,000/- ರೂ ನೇದ್ದನ್ನು ನಿಲ್ಲುಗಡೆ ಮಾಡಿದ್ದು ದಿನಾಂಕ 05/09/2017 ರಂದು ಬೆಳಿಗ್ಗೆ 6 ಗಂಟೆಗೆ ಎದ್ದು ನೋಡಲಾಗಿ ಮೋಟಾರ ಸೈಕಲ್ ಇರಲಿಲ್ಲಾ. ಇಲ್ಲಿಯವರೆಗೆ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ. ಯಾರೋ ಕಳ್ಳರು ನನ್ನ ಮೊಟಾರ ಸೈಕಲ್ ಕಳ್ಲತನ ಮಾಡಿಕೊಂಡಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ನಿಂಗರಾಜ ತಂದೆ ಮಲ್ಲಣ್ಣ ಅನಸೂರ ಸಾ|| ಐನಾಪೂರ ತಾ|| ಜೆವರ್ಗಿ ಜಿಲ್ಲಾ|| ಕಲಬುರಗಿ ರವರ ತಾಯಿಯಾದ ಲಕ್ಷ್ಮೀಬಾಯಿ ಗಂ ಮಲ್ಲಣ್ಣ ಅನಸೂರ ಸಾ: ಐನಾಪೂರ ರವರು ನನಗೆ ಫೋನ ಮಾಡಿ ನಾನು ಬ್ಯಾಂಕ ಕೆಲಸದ ಸಲುವಾಗಿ ನಮ್ಮ ಅಣ್ಣತಮ್ಮಕಿಯ ಭೀಮಣ್ಣ ದೇವರಮನಿ ರವರ ಮೋಟರ ಸೈಕಲ್ ಮೇಲೆ ನಿನ್ನ ಗೆಳೆಯ ರವಿಕುಮಾರ ತಂದೆ ನಿಂಗಣ್ಣ  ಹಂದರಾಳ ಸಾ||  ಗೊಲಗೇರಿ ರವರೊಂದಿಗೆ ಮಳ್ಳಿ ಗ್ರಾಮಕ್ಕೆ ಹೋರಟಿರುತ್ತೇನೆ ಅಂತಾ ಹೇಳಿ ಹೋಗಿರುತ್ತಾರೆ, ನಂತರ 11;45 .ಎಂ ಕ್ಕೆ ಮಳ್ಳಿ ಗ್ರಾಮದ ನಮ್ಮ ಸಂಬಂಧಿಕರಾದ ಮಾಳಪ್ಪ ತಂದೆ ಹೊನ್ನಪ್ಪ ಮಳ್ಳಿಮನಿ ರವರು ನನಗೆ ಫೋನ ಮಾಡಿ ಹೇಳಿದ್ದೇನೆಂದರೆ, ಇದೀಗ 11;30 .ಎಂ ಸುಮಾರಿಗೆ ನಿಮ್ಮ ತಾಯಿ ಮತ್ತು ರವಿಕುಮಾರ ತಂದೆ ನಿಂಗಣ್ಣ  ಹಂದರಾಳ ಸಾ||  ಗೊಲಗೇರಿ ರವರು ಕೂಡಿ ಮೋಟರ ಸೈಕಲ್ ನಂ ಕೆ.-32/.ಎಲ್-6023 ನೇದ್ದರಮೇಲೆ ನಮ್ಮೂರ ಮಳಸಿದ್ದಯ್ಯಾ ಕಲಕೇರಿ ರವರ ಹೊಲದ ಹತ್ತಿರ ರೋಡಿನ ಮೇಲೆ ಹೋಗುತ್ತಿದ್ದಾಗ ರವಿಕುಮಾರಿ ಈತನು ಮೋಟರ ಸೈಕಲನ್ನು ಅತೀವೇಗವಾಗಿ  ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿ ಮೋಟರ ಸೈಕಲ್ ಒಮ್ಮೇಲೆ ಕಟ್ ಮಾಡಿದ್ದರಿಂದ ನಿಮ್ಮ ತಾಯಿ ಮೋಟರ ಸೈಕಲ ಮೇಲಿಂದ ಕೆಳಗೆ ಬಿದ್ದಾಗ ಅವರ ಬಲ ಕಿವಿ ಹತ್ತಿ ಮೆಲಕಿನ ಬಳಿ ಭಾರಿ ಒಳಪೆಟ್ಟಾಗಿದೆ, ಅವರನ್ನು ಉಪಚಾರ ಕುರಿತು ನಾನು ಮತ್ತು ನಮ್ಮೂರ ಸಂತೋಷ ಯಾದಗೀರಿ ಹಾಗು ರವಿಕುಮಾರ ಹಂದರಾಳ ರವರು ಕೂಡಿ ಖಾಸಗಿ ವಾಹನದಲ್ಲಿ ಹಾಕಿಕೊಂಡು ಬಿಜಾಪೂರಕ್ಕೆ ಹೋಗುತ್ತಿದ್ದೇವೆ ಅಂತಾ ಹೇಳಿದರು, ನಂತರ ನಮ್ಮ ತಾಯಿಗೆ ಉಪಚಾರ ಕುರಿತು ಬಿಜಾಪೂರದ ಸಂಜೀವಿನಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೇವೆ, ದಿನಾಂಕ 06-09-2017 ರಂದು 12:10 ಎ.ಎಂ ಸುಮಾರಿಗೆ ನಮ್ಮ ತಾಯಿ ಉಪಚಾರ ಪಡೆಯುತ್ತಾ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾರೆ, ನನ್ನ ಗೆಳೆಯ ರವಿಕುಮಾರ ಹಂದರಾಳ ಈತನು ಮೋಟರ ಸೈಕಲನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿ ಮೋಟರ ಸೈಕಲ್ ಒಮ್ಮೇಲೆ ಕಟ್ ಮಾಡಿದ್ದರಿಂದ ನಮ್ಮ ತಾಯಿ ಮೋಟರ ಸೈಕಲಮೇಲಿಂದ ರೋಡಿನ ಮೇಲೆ ಬಿದ್ದು ಬಲ ಕಿವಿ ಹತ್ತಿರ ಮೆಲಕಿನ ಬಳಿ ಭಾರಿ ಒಳಪೆಟ್ಟಾಗಿದ್ದರಿಂದ ನಮ್ಮ ತಾಯಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಾ ಮೃತ ಪಟ್ಟಿರುತ್ತಾಳೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.