POLICE BHAVAN KALABURAGI

POLICE BHAVAN KALABURAGI

20 January 2015

Kalaburagi District Reported Crimes

ಮಟಕಾ ಜುಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಅಫಜಲಪೂರ ಠಾಣೆ : ದಿನಾಂಕ 20-01-2015 ರಂದು  ಘತ್ತರಗಿ ಗ್ರಾಮದ ಭಾಗ್ಯವಂತಿ ಕಲ್ಯಾಣ ಮಂಟಪದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಘತ್ತರಗಾ ಗ್ರಾಮದ ಭಾಗ್ಯವಂತಿ ಕಲ್ಯಾಣ ಮಂಟಪದಿಂದ ಸ್ವಲ್ಪ ದೂರು ನಮ್ಮ ಇಲಾಖಾ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು ಭಾಗ್ಯವಂತಿ ಕಲ್ಯಾಣ ಮಂಟಪದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಚಂದುಗೌಡ ತಂದೆ ಹಣಮಂತ್ರಾಯ ಮಾಲಿ ಪಾಟೀಲ ಸಾ|| ಘತ್ತರಗಾ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 510/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ  20-01-2015  ರಂದು ಬೇಳಿಗ್ಗೆ ಶ್ರೀ ಮಹಾಂತಪ್ಪಾ ತಂದೆ ವೀರಭದ್ರಪ್ಪಾ ಸಿರವಾಳ ಸಾ: ಸರಸ್ವತಿ ಮಂದಿರ ಹತ್ತಿರ ನ್ಯೂ ರಾಘವೇಂದ್ರ ನಗರ : ಕಲಬುರಗಿ  ರವರು ಗೊವಾ ಹೋಟೆಲ ಕಡೆ ಚಹಾ ಕುಡಿಯಲು ನಡೆದುಕೊಂಡು ಹೋಗುವಾಗ ಗೋವಾ ಹೋಟೆಲ್ ಎದುರಿನ ರೋಡ ಮೇಲೆ ಮೋಟಾರ ಸೈಕಲ ನಂ ಕೆಎ-32-ಆರ್-6976 ರ ಸವಾರನು ತನ್ನ ಮೋಟಾರ ಸೈಕಲನ್ನು ಜಗತ ಸರ್ಕಲ್ ಕಡೆಯಿಂದ ಎಸ.ಬಿ ಟೆಂಪಲ್ ಕಡೆಗೆ ಹೋಗುವ ಕುರಿತು ಅತಿವೇಗ  ಮತ್ತು ಅಲಕ್ಷತನದಿಂದ ಚಲಾಯಿಸಿ ಕೊಂಡು ಬಂದು ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ನನಗೆ ಬಲಗಾಲು ಮೊಳಕಾಲ ಕೆಳೆಗೆ ರಕ್ತಗಾಯ ಎಡಗಾಲ ಮೊಳಕಾಲ ಕೆಳೆಗೆ ರಕ್ತಗಾಯ ಹಾಗೂ ಮುಗಿಗೆ ತರಚಿದ ಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ  20-01-2015  ರಂದು ಬೇಳಿಗ್ಗೆ ನಮ್ಮೂರಿಗೆ ಹೋಗುವ ಕುರಿತು ಶ್ರೀ ತಾಯಪ್ಪಾ ತಂದೆ ಹಣಮಂತ ದನಗೊರೆ ಸಾ: ವಚ್ಛ ತಾ: ಚಿತ್ತಾಪೂರ ಜಿ: ಕಲಬುರಗಿ  ಮತ್ತು ನಮ್ಮ ಸಂಬಂದಿಯಾದ ರಾಮು ಮತ್ತು ಅವರ ಮಗಳಾದ ಮಿನಾಕ್ಷಿ  3 ಜನರು ಬಸ್ ನಿಲ್ದಾಣದ ಎದುರಿನ ಬಸ್ಸಗಳ ಪ್ರವೇಶ ಗೇಟ ಎದುರುಗಡೆ ರೋಡ ಪಕ್ಕದಲ್ಲಿ 3 ಜನರು ನಿಂತಿರುವಾಗ  ಅಂದಾಜು 07-45 ಗಂಟೆ ಸುಮಾರಿಗೆ ಕೆ,ಎಸ,ಆರ,ಟಿ,ಸಿ ಬಸ್ಸ ನಂ ಕೆಎ-19-ಎಫ್-3300 ನೇದ್ದರ ಚಾಲಕನು ತನ್ನ ಬಸ್ಸನ್ನು ಆರ.ಪಿ.ಸರ್ಕಲ್ ರೋಡ ಕಡೆಯಿಂದ  ಅತಿವೇಗ  ಮತ್ತು ಅಲಕ್ಷತನದಿಂದ ಚಲಾಯಿಸಿ ಕೊಂಡು ಬಂದು ನನಗೆ ಮತ್ತು ನನ್ನ ಜೋತೆಯಲ್ಲಿದ್ದ ಮಿನಾಕ್ಷಿ ಇವಳಿಗೆ ಡಿಕ್ಕಿಪಡಿಸಿ ಅಪಘಾತ ಮಾಢಿದ್ದರಿಂದ ನಾನು ಮತ್ತು ಮೀನಾಕ್ಷಿ ಪುಟಿದು ಕೆಳೆಗೆ  ಬಿದ್ದಿದ್ದು ಅಪಘಾತದಿಂದ ನನಗೆ ಎಡಗೈ ಮುಂಗೈ ಹತ್ತೀರ ಭಾರಿ ಪೆಟ್ಟು ಎಡಗಾಲ ಮೊಳಕಾಲ ಕೆಳೆಗೆ ರಕ್ತಗಾಯ ಬಲ ತೊಡೆಗೆ ಎಡ ತೊಡೆಗೆ ಭಾರಿ ಗುಪ್ತಪೆಟ್ಟು ಹಾಗೂ ಟೊಂಕಕ್ಕೆ ಭಾರಿ ಗುಪ್ತಪೆಟ್ಟು ಆಗಿತ್ತು ಮಿನಾಕ್ಷಿ ಇವಳಿಗೆ ಎಡಟೊಂಕಕ್ಕೆ ತೆಲೆಗೆ ಗುಪ್ತಪೆಟ್ಟು ಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Kalaburagi District Reported Crimes

ಮಟಕಾ ಜುಜಾಟದಲ್ಲಿ ನಿರತ ವ್ಯಕತ್ಇಯ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 19/01/2015 ರಂದು ಮಾಡಿಯಾಳ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮೇಲೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತ ಮಾಹಿತಿ ಮೇರೆಗೆ ಪಿ.ಎಸ್.ಐ. ನಿಂಬರ್ಗಾ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾಡಿಯಾಳ ಗ್ರಾಮದ ಬಸ್ ನಿಲ್ದಾಣದ ಹತ್ತರ ಹೋಗಿ ನೋಡಲಾಗಿ ರೋಡಿನ ಮೇಲೆ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲು ತನ್ನ ಹೆಸರು ಕಲ್ಯಾಣಿ ತಂದೆ ಸಿದ್ದಪ್ಪ ಆಳಂದ ಉ|| ಕೂಲಿಕೆಲಸ, ಸಾ|| ಮಾಡಿಯಾಳ ಗ್ರಾಮ ಅಂತ ತಿಳಿಸಿದನು ಅವನನ್ನು ಚೆಕ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಿಸಿರುವ ನಗದು ಹಣ 2660/-, ಒಂದು ಮಟಕಾ ಅಂಕಿ ಸಂಖ್ಯೆಯುಳ್ಳ ಚೀಟಿ, ಒಂದು  ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಇಸ್ಪೀಟ ಜುಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 19/01/2015 ರಂದು ವೈಜಾಪೂರ ಗ್ರಾಮದ ಅಪ್ಪಾರಾಯಗೌಡ ಪೊಲೀಸ್ ಪಾಟೀಲ ಇವರ ಮನೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ ಜೂಜಾಟವಾಡುತ್ತಿದ್ದ  ಬಗ್ಗೆ ಬಾತ್ಮಿ ಮೇರೆಗೆ ಪಿ.ಎಸ್.ಐ. ನಿಂಬರ್ಗಾ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ವೈಜಾಪೂರ ಗ್ರಾಮದ ಅಪ್ಪಾರಾಯಗೌಡ ಪೊಲೀಸ್ ಪಾಟೀಲ ಇವರ ಮನೆಯ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಊರ ಭಾವಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಐದು ಜನ ವ್ಯಕ್ತಿಗಳು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ ಇಸ್ಪೀಟ ಜೂಜಾಟ ಆಡುತ್ತಿರುವದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ 05 ಜನರನ್ನು ಹಿಡಿದು ವಿಚಾರಿಸಲಾಗಿ 1) ಮಲ್ಲಿಕಾರ್ಜುನ ತಂದೆ ಮಾಹಾದೇವಪ್ಪ ಸಾಗರ 2) ಮಲ್ಲಿನಾಥ ತಂದೆ ಚಂದ್ರಶಾ ಕಲವಗಿ, 3) ಸಿದ್ದಪ್ಪ ತಂದೆ ಪರಶುರಾಮ ಹಾದಿಮನಿ 4) ಸಿದ್ರಾಮ ತಂದೆ ಬಾಬು ಹಾದಿಮನಿ 5) ನಭೀಸಾಬ ತಂದೆ ಸೈಯದಸಾಬ ನಧಾಫ್ ಸಾ: ಎಲ್ಲರು ವೈಜಾಪೂರ  ಇವರಿಂದ ನಗದು ಹಣ 4060/- ರೂಪಾಯಿ ಹಾಗೂ 52 ಇಸ್ಪೀಟ ಎಲೆಗಳನ್ನು ಜಪ್ತಿಪಡಿಸಿಕೊಂಡು ಸದರಿಯವರೊಂದಿಗೆ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ನಿಂಬರ್ಗಾ ಠಾಣೆ : ದಿನಾಂಕ 19/01/2015 ರಂದು ದೇವಂತಗಿ ಗ್ರಾಮದ  ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಎದುರು ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟ ನಡೆಯುತ್ತಿದೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ನಿಂಬರ್ಗಾ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ  ದೇವಸ್ಥಾನದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ನಾಲ್ಕು ಜನ ವ್ಯಕ್ತಿಗಳು ದುಂಡಾಗಿ ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ ಇಸ್ಪೀಟ ಜೂಜಾಟ ಆಡುತ್ತಿರುವದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ 04 ಜನರನ್ನು ಹಿಡಿದು ವಿಚಾರಿಸಲಾಗಿ  1) ಶರಣಬಸಪ್ಪ ತಂದೆ ಸೋಮಶಂಕರ ಮುಲಗೇ 2) ನಾಗೇಂದ್ರಪ್ಪ ತಂದೆ ಚಂದ್ರಶಾ ನಿಂಬಿತೋಟ 3) ಶ್ರೀಮಂತ ತಂದೆ ದೇವಪ್ಪ ಘರ 4) ಬಸಣ್ಣ ತಂದೆ ಲಗಶೇಪ್ಪ ದೋಡಮನಿ ಸಾ : ಎಲ್ಲರು ದೇವಂತಗಿ ಇವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ 1730/- ರೂಪಾಯಿ ನಗದು ಹಣ ಹಾಗೂ 52 ಇಸ್ಪೀಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ :  ದಿನಾಂಕ:18/01/2015 ರಂದು 04-00 ಪಿ.ಎಮ್.ದಿಂದ 06-00 ಪಿ.ಎಮ್. ಅವಧಿಯಲ್ಲಿ ಯಾರೋ ಕಳ್ಳರು ಐ.ಟಿ.ಐ ಕಾಲೇಜಿನ ಎಲೆಕ್ಟ್ರಾನಿಕ್ ಕೋಣೆಯ ಬಾಗಿಲ ತೆಗೆದು ಒಳಗಡೆ ಇದ್ದ ACER MONITOR-17" MODEL NO.1706 AS 2) SONY LCD T.V-32" MODEL NO.KLV 3253 10A ಹಾಗು ದಿನಾಂಕ:28/12/2014 ರಂದು ವರ್ಕಶಾಪ ರೂಮಿನಲ್ಲಿದ್ದ ಕಾರನ ಬ್ಯಾಟರಿ ಸಹ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ಎಸ್.ಎನ್ ಪಂಚಾಳ ಪ್ರಚಾರ್ಯರು ITI ಕಾಲೇಜ್ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2.5 ಲಕ್ಷ ರೂ ಬೆಲೆಬಾಳುವ ಟಾಟಾ ಎಸಿ ವಾಹನದೊಂದಿಗೆ ಇಬ್ಬರ ಕಳ್ಳರ ಬಂಧನ :
ಅಶೋಕ ನಗರ ಠಾಣೆ : ದಿನಾಂಕ 12/01/2015 ರಂದು ಮದ್ಯಾಹ್ಬ 1 -30 ಗಂಟೆಗೆ ಶ್ರೀ. ಬಸಲಿಂಗಪ್ಪಾ ತಂದೆ ಶಿವಬಸಪ್ಪಾ ನಿರಡಿ  ಸಾ: ಮನೆ ನಂ. 85 ಶಾಂತಿ ನಗರ ಗಾರ್ಡನ ಹತ್ತಿರ ಗುಲಬರ್ಗಾ  ಇವರ ಟಾಟಾ ಎಸ್ ವಾಹನ ನಂ. ಕೆಎ 32-ಎ-9256 ಚಸ್ಸಿ ನಂ.445051ಜಿಆರಝೆಡವಿ40943 ಇಂಜಿನ ನಂ. 275ಐಡಿಐ05ಜಿಆರ್‌ಜೆಡ್‌ಎಸ್‌39993 ನೇದ್ದನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಪ್ರಕರಣ ದಾಖಲಾಗಿದ್ದು  ಫಿರ್ಯಾದಿದಾರರು ಸಂಶಯ ಪಡ್ಡುತ್ತಿದ್ದ ಸಾಜೀದ ತಂದೆ ಮಹ್ಮದ ಅಲಿ ನಾಗೂರ ಇತನ ಪತ್ತೆ ಮಾಡಿ ದಿನಾಂಕ 13-01-2014 ರಂದು  ಸಂಜೆ 4 ಗಂಟೆಗೆ ಆಳಂದ ಚೆಕ್ ಪೋಸ್ಟ  ಹತ್ತಿರ ಮತ್ತು 5 ಪಿ ಎಂ ಕ್ಕೆ  ಪಿಡಬ್ಲ್ಯೂಡಿ ಕ್ವಾಟರ್ಸ ಹಳೆ ಜೇವರ್ಗಿ ರೋಡ ಹತ್ತಿರ ಪರಶುರಾಮ ತಂದೆ ಶರಣಪ್ಪಾ ಭಜಂತ್ರಿ ರವರಿಗೆ ದಸ್ತಗಿರಿ ಮಾಡಿಕೊಂಡು ಠಾಣೆಗೆ ತಂದು ವಿಚಾರಣೆ ಮಾಡಲಾಗಿ 11/12-01-2015 ರ ರಾತ್ರಿ ವೇಳೆಯಲ್ಲಿ ತಾವು ಇಬ್ಬರು ಕೂಡಿ ಬಸಲಿಂಗಪ್ಪಾ ನಿರಡಿ ಮಾಲೀಕರ ಟಾಟಾ ಎಸಿಇ ವಾಹನವನ್ನು ಕಳ್ಳತನ ಮಾಡಿಕೊಂಡು ಚೋರ ಗುಮ್ಮಜ ಹತ್ತಿರ ಒಯ್ದು ಯಾರಿಗಾದರೂ ಮಾರುವ ಸಲುವಾಗಿ  ನಿಲ್ಲಿಸಿರುತ್ತೇವೆ ಅಂತಾ ಒಪ್ಪಿಕೊಂಡಿರುತ್ತಾರೆ.