POLICE BHAVAN KALABURAGI

POLICE BHAVAN KALABURAGI

20 January 2015

Kalaburagi District Reported Crimes

ಮಟಕಾ ಜುಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಅಫಜಲಪೂರ ಠಾಣೆ : ದಿನಾಂಕ 20-01-2015 ರಂದು  ಘತ್ತರಗಿ ಗ್ರಾಮದ ಭಾಗ್ಯವಂತಿ ಕಲ್ಯಾಣ ಮಂಟಪದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಘತ್ತರಗಾ ಗ್ರಾಮದ ಭಾಗ್ಯವಂತಿ ಕಲ್ಯಾಣ ಮಂಟಪದಿಂದ ಸ್ವಲ್ಪ ದೂರು ನಮ್ಮ ಇಲಾಖಾ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು ಭಾಗ್ಯವಂತಿ ಕಲ್ಯಾಣ ಮಂಟಪದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಚಂದುಗೌಡ ತಂದೆ ಹಣಮಂತ್ರಾಯ ಮಾಲಿ ಪಾಟೀಲ ಸಾ|| ಘತ್ತರಗಾ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 510/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ  20-01-2015  ರಂದು ಬೇಳಿಗ್ಗೆ ಶ್ರೀ ಮಹಾಂತಪ್ಪಾ ತಂದೆ ವೀರಭದ್ರಪ್ಪಾ ಸಿರವಾಳ ಸಾ: ಸರಸ್ವತಿ ಮಂದಿರ ಹತ್ತಿರ ನ್ಯೂ ರಾಘವೇಂದ್ರ ನಗರ : ಕಲಬುರಗಿ  ರವರು ಗೊವಾ ಹೋಟೆಲ ಕಡೆ ಚಹಾ ಕುಡಿಯಲು ನಡೆದುಕೊಂಡು ಹೋಗುವಾಗ ಗೋವಾ ಹೋಟೆಲ್ ಎದುರಿನ ರೋಡ ಮೇಲೆ ಮೋಟಾರ ಸೈಕಲ ನಂ ಕೆಎ-32-ಆರ್-6976 ರ ಸವಾರನು ತನ್ನ ಮೋಟಾರ ಸೈಕಲನ್ನು ಜಗತ ಸರ್ಕಲ್ ಕಡೆಯಿಂದ ಎಸ.ಬಿ ಟೆಂಪಲ್ ಕಡೆಗೆ ಹೋಗುವ ಕುರಿತು ಅತಿವೇಗ  ಮತ್ತು ಅಲಕ್ಷತನದಿಂದ ಚಲಾಯಿಸಿ ಕೊಂಡು ಬಂದು ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ನನಗೆ ಬಲಗಾಲು ಮೊಳಕಾಲ ಕೆಳೆಗೆ ರಕ್ತಗಾಯ ಎಡಗಾಲ ಮೊಳಕಾಲ ಕೆಳೆಗೆ ರಕ್ತಗಾಯ ಹಾಗೂ ಮುಗಿಗೆ ತರಚಿದ ಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ  20-01-2015  ರಂದು ಬೇಳಿಗ್ಗೆ ನಮ್ಮೂರಿಗೆ ಹೋಗುವ ಕುರಿತು ಶ್ರೀ ತಾಯಪ್ಪಾ ತಂದೆ ಹಣಮಂತ ದನಗೊರೆ ಸಾ: ವಚ್ಛ ತಾ: ಚಿತ್ತಾಪೂರ ಜಿ: ಕಲಬುರಗಿ  ಮತ್ತು ನಮ್ಮ ಸಂಬಂದಿಯಾದ ರಾಮು ಮತ್ತು ಅವರ ಮಗಳಾದ ಮಿನಾಕ್ಷಿ  3 ಜನರು ಬಸ್ ನಿಲ್ದಾಣದ ಎದುರಿನ ಬಸ್ಸಗಳ ಪ್ರವೇಶ ಗೇಟ ಎದುರುಗಡೆ ರೋಡ ಪಕ್ಕದಲ್ಲಿ 3 ಜನರು ನಿಂತಿರುವಾಗ  ಅಂದಾಜು 07-45 ಗಂಟೆ ಸುಮಾರಿಗೆ ಕೆ,ಎಸ,ಆರ,ಟಿ,ಸಿ ಬಸ್ಸ ನಂ ಕೆಎ-19-ಎಫ್-3300 ನೇದ್ದರ ಚಾಲಕನು ತನ್ನ ಬಸ್ಸನ್ನು ಆರ.ಪಿ.ಸರ್ಕಲ್ ರೋಡ ಕಡೆಯಿಂದ  ಅತಿವೇಗ  ಮತ್ತು ಅಲಕ್ಷತನದಿಂದ ಚಲಾಯಿಸಿ ಕೊಂಡು ಬಂದು ನನಗೆ ಮತ್ತು ನನ್ನ ಜೋತೆಯಲ್ಲಿದ್ದ ಮಿನಾಕ್ಷಿ ಇವಳಿಗೆ ಡಿಕ್ಕಿಪಡಿಸಿ ಅಪಘಾತ ಮಾಢಿದ್ದರಿಂದ ನಾನು ಮತ್ತು ಮೀನಾಕ್ಷಿ ಪುಟಿದು ಕೆಳೆಗೆ  ಬಿದ್ದಿದ್ದು ಅಪಘಾತದಿಂದ ನನಗೆ ಎಡಗೈ ಮುಂಗೈ ಹತ್ತೀರ ಭಾರಿ ಪೆಟ್ಟು ಎಡಗಾಲ ಮೊಳಕಾಲ ಕೆಳೆಗೆ ರಕ್ತಗಾಯ ಬಲ ತೊಡೆಗೆ ಎಡ ತೊಡೆಗೆ ಭಾರಿ ಗುಪ್ತಪೆಟ್ಟು ಹಾಗೂ ಟೊಂಕಕ್ಕೆ ಭಾರಿ ಗುಪ್ತಪೆಟ್ಟು ಆಗಿತ್ತು ಮಿನಾಕ್ಷಿ ಇವಳಿಗೆ ಎಡಟೊಂಕಕ್ಕೆ ತೆಲೆಗೆ ಗುಪ್ತಪೆಟ್ಟು ಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: