POLICE BHAVAN KALABURAGI

POLICE BHAVAN KALABURAGI

11 November 2013

Gulbarga District Reported Crimes

ಇಸ್ಪೀಟ ಜೂಜಾಟ ನಿರತ ವ್ಯಕ್ತಿಗಳ ಬಂಧನ :
ಸ್ಟೇಷನ ಬಜಾರ ಠಾಣೆ : ದಿನಾಂಕ 09-11-2013 ರಂದು 01-15 .ಎಮ್ ಸುಮಾರಿಗೆ ಪಿ ಎಸ್ ಐ ಕಾಸು  ಮತ್ತು ಪಿಸಿ-625 ರವರೊಂದಿಗೆ ರಾತ್ರಿ ಗಸ್ತು ಚೆಕಿಂಗ ಕರ್ತವ್ಯದಲ್ಲಿದ್ದಾಗ ಗುಲಬರ್ಗಾ ನಗರದ ಪಂಜಾಬ ಬೂಟಹೌಸ ಪಕ್ಕದಲ್ಲಿ ಅಪ್ಪಣ ಹೇರ ಡ್ರೆಸಿಂಗ್ ಅಂಗಡಿ ಮುಂದೆ ಕೆಲವು ಜನರು ಗುಂಪಾಗಿ ಕುಳಿತುಕೊಂಡು ಇಸ್ಪೆಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದಿದ್ದು ಆಗ ನಾನು ಮೇಲಾಧಿಕಾರಿಗಳಿಗೆ ಸದರಿ ವಿಷಯ ತಿಳಿಸಿ ಪಂಚರನ್ನು ಬರಮಾಡಿಕೊಂಡು ಶ್ರೀ ಮಲ್ಲಿಕಾರ್ಜುನ ಭಂಡೆ ಪಿ.ಎಸ್. (ಅವಿ) ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ಮಾನ್ಯ ಡಿ.ಎಸ್.ಪಿ ಸಾಹೇಬರ ಮಾರ್ಗದರ್ಶನದಲ್ಲಿ ಶ್ರೀ ಬಿ.ಬಿ.ಬಜಂತ್ರಿ ಪಿ. ಸಾಹೇಬರ ನೆತೃತ್ವದಲ್ಲಿ  ಜಿಪ ನಂ. ಕೆಎ-32-ಜಿ-532 ನಲ್ಲಿ ಕುಳಿತು ಹೊರಟು ಸದರಿ ಪಂಜಾಬ ಬೂಟ್ ಹೌಸ ಸಮಿಪ ಹೋಗಿ ದೂರದಿಂದ ನೋಡಲು ಕೆಲವು ಜನರು ಅಪ್ಪಣ ಹೇರ ಡ್ರೆಸಿಂಗ್ ಅಂಗಡಿ ಮುಂದೆ ಖುಲ್ಲಾ ಜಾಗೆಯಲ್ಲಿ ಲೈಟ ಬೆಳಕಿನಲ್ಲಿ ಗುಂಪಾಗಿ ಕುಳಿತು ಇಸ್ಪೆಟ ಎಲೆಗಳ ಸಹಾಯದಿಂದ ಪಣಕ್ಕೆ ಹಣ ಹಚ್ಚಿ ಅಂದರ ಬಹಾರ ಎಂಬ ದೈವಲಿಲೆ ಇಸ್ಪೆಟ್ ಜೂಜಾಟ ಆಡುತ್ತಿದ್ದದ್ದು ಖಚಿತಪಡಿಸಿಕೊಂಡು ದಾಳಿ ಮಾಡಿ  ಹಿಡಿದು ವಿಚಾರಿಸಲು ಅವರ ಹೆಸರು 1. ರಾಜಕುಮಾರ ತಂದೆ ವೈಜನಾಥ ಕಾಮಠಾಣೆ ಸಾ: ಅಂಬಿಕಾಚಾರ್ಯ ಜಯನಗರ ಗುಲಬರ್ಗಾ 2. ಮಲ್ಲು @ ಮಲ್ಲಿಕಾರ್ಜುನ ತಂದೆ ಭಿಮರಾವ ಮರುಮಕಲ್ ಸಾ : ಬೋರಾಬಾಯಿ ನಗರ ಬ್ರಹ್ಮಪೂರ ಗುಲಬರ್ಗಾ 3. ಶಿವಪುತ್ರ ತಂದೆ ಬಸವರಾಜ ಹಡಪದ ಸಾ : ಅಪ್ಜಲಪೂರ ರೋಡ ಗುಲಬರ್ಗಾ ಸಿರಸಿ ಮಡ್ಡಿ ಗುಲಬರ್ಗಾ 4. ಮುಬಿನ ತಂದೆ ಮೆಹಬೂಬಸಾಬ ಸಾ: ರಾಮನಗರ ಗುಲಬರ್ಗಾ  5. ರಿಚರ್ಡ ನಿಕ್ಸನ್ ತಂದೆ ರವಿಕುಮಾರ ಡೇವಿಡ ಸಾ :  ಗುಲ್ಲಾಬಾಡಿ ಗುಲಬರ್ಗಾ 6.  ರಾಜಕುಮಾರ ತಂದೆ ವೈಜನಾಥ ಹಡಪದ ಸಾ: ಗುಬ್ಬಿ ಕಾಲೂನಿ ಗುಲಬರ್ಗಾ 7. ಕಿರಣಕುಮಾರ ತಂದೆ. ಸಂತೋಷ ಆಗ್ರಹಾರಕರ್  ಸಾ : ಇಂದಿರಾನಗರ ಗುಲಬರ್ಗಾ 8. ರಾಜಕುಮಾರ ತಂದೆ ಧರ್ಮಸಿಂಗ್ ಪವಾರ ಸಾ : ಸ್ಟೇಷನ ಏರಿಯಾ ಗುಲಬರ್ಗಾ  9. ಜಗನಾಥ ತಂದೆ ಅಮೃತ ಹಡಪದ ಸಾ:ಶಿವಶಕ್ತಿ ನಗರ ಆಶ್ರಯ ಕಾಲೂನಿ ಗುಲಬರ್ಗಾ 10. ಮಂಜುನಾಥ ತಂದೆ ಮಲ್ಲಿಕಾರ್ಜುನ ಸಿಂಗ್ರೆ ಸಾ : ಸಿಂದಗಿ ಹಾ.ವ: ರಿಗಲ ಹೊಟೇಲ ಗುಲಬರ್ಗಾ 11. ನಾರಯಣ ತಂದೆ ಸೂರ್ಯಕಾಂತ ಹೀಲಾಲಪೂರ ಸಾ: ರಾಮನಗರ ಗುಲಬರ್ಗಾ ಅವನಿಂದ 12. ಬಸವರಾಜ ತಂದೆ ಹಣಮಂತ ಪೂಜಾರಿ ಸಾ : ಖೂಭಾ ಪ್ಲಾಟ ಗುಲಬರ್ಗಾ ಅವನಿಂದ 13. ಅನೀಲ ತಂದೆ ಸುಭಾಷ ಹಡಪದ ಸಾ : ಗುಬ್ಬಿಕಾಲೂನಿ ಗುಲಬರ್ಗಾ  14. ಮಹ್ಮದ ಮೌಲಾ ತಂದೆ ಲಾಡ್ಲೆಸಾಬ ಸಾ: ಹಜ್ ಕಮೀಟಿ ದರ್ಗಾ ಎರಿಯಾ ಗುಲಬರ್ಗಾ ಅವನಿಂದ 15. ದತ್ತು ತಂದೆ ವೈಜನಾಥ ಹಿಲಾಲಪೂರ ಸಾ: ಸಂಗೊಳಗಿ ಹಾ. : ಸ್ಟೇಷನ ಏರಿಯಾ ಗುಲಬರ್ಗಾ 16. ಭಿಮು ತಂದೆ ನಾಗಣ್ಣ ಉಡುಗಿ ಸಾ : ಶಕ್ತಿ ನಗರ ಗುಲಬರ್ಗಾ ಅವನಿಂದ ಒಟ್ಟು. 18,640/- ರೂ ಮತ್ತು 52 ಇಸ್ಪೆಟ್ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಆರೋಪಿ ಮತ್ತು ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಸಮೇತ ಠಾಣೆಗೆ ಕರೆದುಕೊಂಡು ಬಂದು ಹಾಜರುಪಡಿಸಿದ್ದರ ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಹುಡುಗ ಕಾಣೆಯಾದ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಶಾಮರಾವ ತಂದೆ ಶಿವರಾವ ಸುಲ್ತಾನಪೂರ ಸಾ|| ಸ್ವಾಮಿ ವಿವೇಕಾನಂದ ನಗರ, ಅಳಂದ ರಸ್ತೆ ಗುಲಬರ್ಗಾ ಇವರ ಮಗನಾದ ಸಚಿನ ವಯ :15 ವರ್ಷ ಈತನು ಗುಲಬರ್ಗಾ ನಗರದ ಸಂತೋಷ ಕಾಲೋನಿಯಲ್ಲಿ ಭೋಗೇಶ್ವರ ಶಾಲೆಯಲ್ಲಿ  9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಅವನು ದಿನಾಂಕ 05-11-2013 ರಂದು ಬೆಳಗ್ಗೆ 7-45 ಗಂಟೆಯ ಸುಮಾರಿಗೆ ಮನೆಯಿಂದ ಹೊರಗೆ  ಹೊದವನು  ಮರಳಿ ಮನೆಗೆ ಸಾಯಂಕಾಲದ ವರೆಗೆ ಬರದೆ ಇರುವದರಿಂದ ನಾನು ಮತ್ತು ನನ್ನ ಹೆಂಡತಿ ಶಿವಲಿಲಾ ಇಬ್ಬರು ಅಲ್ಲಲ್ಲಿ ಹುಡುಕಾಡಿದರು ನನ್ನ ಮಗ ಪತ್ತೆ ಆಗಿರುವದಿಲ್ಲ ಅವನು ಈ ಹಿಂದೆ ಕೂಡ ಎರಡು ಸಲಾ ಮನೆಯಿಂದ ಹೊಗಿದ್ದು 3 – 4 ದವಸ ಬಿಟ್ಟು ಮರಳಿ ಮನೆಗೆ ಬಂದಿರುತ್ತಾನೆ ಆದ್ದರಿಂದ ಅವನು ಮನೆಗೆ ಬರಬಹುದು ಅಂತ ನಾವು ಅವನ ದಾರಿ ನೋಡಿ ಅವನು ಹೋಗುವಾಗ ಮನೆಯಲ್ಲಿದ್ದ  ಸೀಮ ನಂ 9945932884 ನೇದ್ದನ್ನು ತೆಗೆದುಕೊಂಡು ಹೋಗಿದ್ದು ಅದರಿಂದ ದಿನಾಂಕ 08-11-2013 ರಂದು ನಮ್ಮ ಮೋಬೈಲ್ ನಂ 8050669383 ನೇದ್ದಕ್ಕೆ ಸಂದೇಶಗಳು ಕಳುಹಿಸಿದ್ದು ಅದರಿಂದ ಅವನು ಮರಳಿ ಮನೆಗೆ ಬರುತ್ತಾನೆ ಅಂತ ನಾವು ಧಾರಿ ನೋಡುತ್ತಿದ್ದೆವು  ಅವನ ಹತ್ತಿರ ಮೋಬೈಲ್ ನಂಬರಕ್ಕೆ ನೋವು ಫೋನ ಮಾಡಲು ಅವನು ನಮ್ಮ ಜೊತೆಯಲ್ಲಿ ಮಾತನಾಡದೆ  ಒಂದೊಂದು ಸಲಾ ಮೋಬೈಲ್ ಚಾಲು ಮಾಡುತ್ತಾನೆ ಮತ್ತೆ ಸ್ವೀಚ್ ಆಫ ಮಾಡುತ್ತಾನೆ ಕಾರಣ ನನ್ನ ಮಗನು ಕಾಣೆಯಾಗಿದ್ದು ಆತನ ಪತ್ತೆ ಹಚ್ಚಿ ಕೊಡಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಫರತಾಬಾದ ಠಾಣೆ : ಶ್ರೀ ಗಣೆಶ ಪೆಟ್ರೊಲ್‌ ಬಂಕ್‌ನಲ್ಲಿ ದಿನಾಂಕ 04-11-2013  ರಂದು ಬೆಳಿಗ್ಗೆ 11-00 ಗಂಟೆಯ ಸುಮಾರಿಗೆ ನನಗೆ ನಮ್ಮ ಪೆಟ್ರೋಲ ಬಂಕಿನ ಲೇಕ್ಕ ಪತ್ರವನ್ನು ಮಾಡುವ ಚಂದ್ರಕಾಂತ ಗುತ್ತೆದಾರ ಇತನು ನನಗೆ ಫೊನ ಮಾಡಿ ತಿಳಿಸಿದೆನೆಂದರೆ ಇಂದು ನಾನು ಬೆಳಿಗ್ಗೆ 10-00 ಗಂಟೆಗೆ ಬಂದು ಪೆಟ್ರೋಲ್ ಬಂಕನಲ್ಲಿನ ಪೆಟ್ರೋಲ್ ಮತ್ತು ಡಿಸೇಲ್ ಚೆಕ ಮಾಡಿ ಲೆಕ್ಕ ಪತ್ರ ಮಾಡಲಾಗಿ 2 ನೇಯ ಡಿಸೇಲ್ ಟ್ಯಾಂಕಿನಿಂದ 828 ಲೀಟರ ಡಿಸೇಲ್ ವ್ಯತ್ಯಾಸ ಬರುತ್ತಿದೆ ಅಂತಾ ತಿಳಿಸಿದಾಗ ನಾನು ಕೂಡಲೆ ಹೋಗಿ ಸದರಿ ಬಂಕಿನ ಲೆಕ್ಕ ಪತ್ರವನ್ನು ಪರಿಶಿಲಿಸಿ ನೋಡಲಾಗಿ 828 ಲೀಟರ ಡಿಸೇಲ್ ವ್ಯತ್ಯಾಸ ಕಂಡು ಬಂದಿದ್ದು ಇರುತ್ತದೆ. ಸದರಿ ಡಿಸೇಲ್ ಟ್ಯಾಂಕನ್ನು ಚೇಕ್ ಮಾಡಿ ನೋಡಲಾಗಿ 2 ನೇಯ ಡಿಸೇಲ್ ಟ್ಯಾಂಕಿನ ಕ್ಯಾಪ ತಗೆದಿದ್ದು ಅದರಲ್ಲಿನ 828 ಲೀಟರ ಡಿಸೇಲ್ ಅ.ಕಿ. 47,709/- ರೂ ನೇದ್ದನು ದಿನಾಂಕ  03-11-2013 ರಿಂದ ದಿನಾಂಕ 04-11-2013 ರ ಮುಂಜಾನೆ 6-00 ಗಂಟೆಯ ಅವಧಿಯೊಳಗೆ ವೇಳೆಯಲ್ಲಿ ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ವೀರಭದ್ರಯ್ಯ ತಂದೆ ಮಲ್ಲಯ್ಯಾ ಪಾಟೀಲ್‌ ಸಾ : ಮನೆ ನಂ. 1-949/62/3  ಹಳೆ ಜೇವರ್ಗಿ ರೋಡ ಗುಲಬರ್ಗಾ   ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ