POLICE BHAVAN KALABURAGI

POLICE BHAVAN KALABURAGI

11 November 2013

Gulbarga District Police Crime Report.

ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ : ಶ್ರೀಮತಿ ಶಾಂತಾಬಾಯಿ ಗಂಡ ಶ್ರೀಮಂತ ರವರು ಸಾಃ ಸಂಜೀವನಗರ  ಗುಲಬರ್ಗಾ. ರವರು ದಿನಾಂಕ 09-11-2013 ರಂದು ಹುಮನಾಬಾದ ರಿಂಗರೋಡ ಅಟೋಸ್ಟ್ಯಾಂಡ ಹತ್ತಿರ ನಡೆದುಕೊಂಡು ಹೋಗುವಾಗ ಗೂಡ್ಸ ಟಂ-ಟಂ ನಂ ಕೆ ಎ 32 ಬಿ 3650 ನೇದ್ದರ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಡಿಕ್ಕಿ ಪಡೆಸಿ ಗಾಯಗೊಳಿಸಿ ತನ್ನ ಟಂ-ಟಂ ಸಮೇತ ಓಡಿಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಂಗಲ್ಯ ಸರ ದೋಚಿದ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀಮತಿ ಮೀರಾಬಾಯಿ ಗಂಡ ದಶರಥ ಎಖೇಳ್ಳಿಕರ್ ಸಾಃ ಜಯನಗರ ಗುಲಬರ್ಗಾ ಇವರು ದಿನಾಂಕ 08-11-2013 ರಂದು ಸಾಯಂಕಾಲ 06:50 ಪಿ.ಎಂ. ಸುಮಾರಿಗೆ ಮನೆಯಿಂದ ಹೊರಟು ಅವಿನಾಶ ಆಸ್ಪತ್ರೆಯ ಹತ್ತಿರವಿರುವ ಟೇಲರ್ ಅಂಗಡಿ ಹೋಗಿ ಬ್ಲೌಸ್ ಪೀಸ್ ನ್ನು ಹೊಲೆಯಲು ಹಾಕಿ ವಿಶ್ವೆಶ್ವರಯ್ಯ ಕಾಲೋನಿ ಹತ್ತಿರವಿರುವ ಬಟ್ಟೆ ಅಂಗಡಿ ಹೋಗಿ ಮರಳಿ ಮನೆಗೆ ಬರುವಾಗ ಜಯನಗರದಲ್ಲಿರುವ ಕೊರಳ್ಳಿ ರವರ ಮನೆಯ ಮುಂದೆ ಬಂದಾಗ ಎದರುಗಡೆಯಿಂದ ಒಬ್ಬ ಅಪರಿಚಿತ ಮೋಟಾರ ಸೈಕಲ ಸವಾರನು ಬಂದವನೇ ನನ್ನ ಕೊರಳಿಗೆ ಕೈ ಹಾಕಿ ಕೊರಳ್ಳಿದ್ದ 45 ಗ್ರಾಂ ಬಂಗಾರದ ಚೈನ್ ಅಃಕಿಃ 1,12,500/- ರೂ. ಹಾಗು 2) 1/2 ತೊಲೆ ಮಂಗಳ ಸೂತ್ರ ಅಃಕಿಃ 12,500/- ರೂ.ಹೀಗೆ ಒಟ್ಟು ಅಃಕಿಃ 1,25,000/- ರೂ. ಬೆಲೆ ಬಾಳುವುದನ್ನು ಜಬರದಸ್ತಿಯಿಂದ ಕಿತ್ತುಕೊಂಡು ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಭೀಮವ್ವ ಗಂಡ ರಾಮ ಗೊಲ್ಲರ  ಸಾ|| ಕರಜಗಿ ಸುಮಾರು ದಿನಗಳಿಂದ ಸದರಿ ಗ್ರಾಮದಲ್ಲಿ ಹಂದಿಗಳು ಬಿಡುವ ವಿಷಯಕ್ಕೆ ಸಂಬಂಧ ನಮಗೆ ಮತ್ತು ನನ್ನ ತಮ್ಮಂದಿರರ ಮದ್ಯ ತಕರಾರುಗಳು ಆಗುತ್ತಾ ಬಂದಿದ್ದು ದಿನಾಂಕ 08-11-2013 ರಂದು ಬೆಳಿಗ್ಗೆ 11;00 ಗಂಟೆಗೆ ನಮ್ಮ ಮನೆಯ ಮುಂದೆ ನಾನು ಮತ್ತು ನನ್ನ ಮಕ್ಕಳಾದ ಸೋಮಣ್ಣ, ಜಗಪ್ಪ, ತಿಮ್ಮಣ್ಣ, ಶಂಕರ, ಪರಸಪ್ಪ, ಹಾಗು ಸೊಸೆಯಾದ ಶಾಂತವ್ವ ಹೀಗೆ ಎಲ್ಲರು ಕೂಡಿ ಮಾತಾಡುತ್ತಾ ಕುಳಿತಾಗ ನಮ್ಮ ತಮ್ಮಂದಿರಾದ ತಿಮ್ಮಣ್ಣ ತಂದೆ ಭೀಮಶಾ ಗೊಲ್ಲರ, ಮತ್ತು ಅವನ ಹೆಂಡತಿ ಗುರುಬಾಯಿ, ಸೋಮಣ್ಣ ತಂದೆ ಭೀಮಶಾ ಗೊಲ್ಲರ, ಮತ್ತು ಮಾಶಾಳ ಗ್ರಾಮದ ನಮ್ಮ ಅಣ್ಣತಮ್ಮಕಿಯವರಾದ ಗುರಪ್ಪ ಗೊಲ್ಲರ, ಸಿದ್ರಾಮ ತಂದೆ ಯಲ್ಲಪ್ಪ ಗೊಲ್ಲರ ಹಾಗು ತಿಮ್ಮಣ್ಣನ ಅಳಿಯಂದಿರರಾದ ಬಾಬು ಗೊಲ್ಲರ, ಜಂಗಪ್ಪ ಗೊಲ್ಲರ, ಕುಮಾರ ತಂದೆ ಸುಕದೇವ ಗೊಲ್ಲರ ಇವರುಗಳು ಗುಂಪ್ಪು ಕಟ್ಟಿಕೊಂಡು ತಮ್ಮ ಕೈಯಲ್ಲಿ ಹಗ್ಗ, ಬಡಿಗೆಗಳು ಹಿಡಿದಕೊಂಡು ನಮ್ಮ ಹತ್ತಿರ ಬಂದು ಜಗಳ ತೆಗೆದು ಹೋಡೆ ಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ರಕ್ತಗಾಯಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಒಡವೆಗಳನ್ನು ಕಸಿದುಕೊಳ್ಳುಲು ಪ್ರಯತ್ನ :
ಸ್ಟೇಷನ ಬಜಾರ ಠಾಣೆ : ಶ್ರೀಮತಿ ಕಲಾವತಿ ಗಂಡ ಲಕ್ಷ್ಮಣರಾವ ಲಂಡನಕರ್ ರವರು  7.20 ಪಿ.ಎಂಕ್ಕೆ ಸಾಯಿ ವೈನಶಾಪ ಹಿಂದುಗಡೆ ಕಂಟಿಯಲ್ಲಿ ಸಂಡಾಸಕ್ಕೆ ಹೋಗಿ ಸಂಡಾಸ ಮುಗಿಸಿಕೋಂಡು ಬರುವಾಗ ಅದೆ ವೇಳೆಗೆ ಯಾರೋ ಒಬ್ಬ ಹುಡುಗ ಕಂಟಿಯಲ್ಲಿಂಧ ಬಂದವನೆ ತನ್ನ ತಲೆಗೆ ಕಲ್ಲಿನಿಂದ ಹೊಡೆದು ಬಾರಿ ರಕ್ತಗಾಯ ಗೊಳಿಸಿ ಕೊರಳ್ಳಿಗೆ ಕೈಹಾಕಿ ವಡವೆಗಳನ್ನು ಕಿತ್ತಿಕೊಳ್ಳುವಾಗ ಜೊರಾಗಿ ಚಿರಾಡಲು ಅವನು ತನ್ನ ಬಾಯಿ ಮುಚ್ಚಲು ಕೈಯಿಂದ ಒತ್ತಿ ಹಿಡಿದ ತಾನು ಕೈಗೆ ಜೊರಾಗಿ ಕಚ್ಚಲು ಅವನು ತನ್ನ ಕೈಯನ್ನು ಬಿಡಿಕೊಳ್ಳಲು ಜೊರಾಗಿ ಕಿರಿಚಿಕೊಂಡ ಪ್ರಯುಕ್ತ ಬಾಯಿಯಲ್ಲಿಯ ಒಂದು ಮುಂದಿನ ಕೆಳಗಡೆ ಹಲ್ಲು ಕಿತ್ತಿಬಿದ್ದು ಇನ್ನು ಮೂರು ಹಲ್ಲುಗಳು ಅಳಗಾಡುತ್ತಿವೆ ತನ್ನ ಚಿರಾಟವನ್ನು ನೋಡಿ 2-3 ಜನರು ತನ್ನ ಕಡೆಗೆ ಬರುವುದನ್ನು ನೋಡಿ ಅವನು ಕಂಟಿಯಲ್ಲಿ ಓಡಿ ಹೋದನು ಆಹುಡುಗ ಕೆಂಪು ಬಿಳಿ ಗೆರೆಗೆರೆಯ ಶರ್ಟು ಮತ್ತು ಬೂದಿ ಬಣ್ಣದ ಶರ್ಟ ದರಿಸಿದ್ದು ತೆಳ್ಳನೆಯ ಮೈಕಟ್ಟು ಉಳ್ಳವನಾಗಿದ್ದಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಬ್ರಹ್ಮಪೂರ  ಠಾಣೆ : ಶ್ರೀ ಮಲ್ಲಪ್ಪ ತಂದೆ ಹಣಮಂತರಾಯ ಪೂಜಾರಿ ಸಾ : ಶಾಂತವೀರ ನಗರ ಕೊರಿ ಮಠದ ಹತ್ತಿರ ಬ್ರಹ್ಮಪೂರ  ಗುಲಬರ್ಗಾ ರವರು ದಿನಾಂಕ 31-10-2013 ರಂದು ರಾತ್ರಿ 9 ರಿಂದ 11 ಗಂಟೆಯ ನಡುವಿನ ವೇಳೆಯಲ್ಲಿ  ಜವಳಿ ಕಾಂಪ್ಲೆಕ್ಸದ ಎದುರುಗಡೆ ನಿಲ್ಲಿಸಿದ ಹೊಂಡಾ ಸೈನ್ ಮೋಟಾರ ಸೈಕಲ್ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಅದರ ಬಗ್ಗೆ ಎಲ್ಲ ಕಡೆಗೆ ಇಲ್ಲಿಯವರೆಗೆ ಹುಡುಕಾಡಿದರು ಎಲ್ಲಿಯು ಅದರ ಪತ್ತೆಯಾಗಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: