POLICE BHAVAN KALABURAGI

POLICE BHAVAN KALABURAGI

01 November 2013

Gulbarga District Reported Crimes

ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಎಮ್ ಎ ಹಖಿಂ ತಂದೆ ಮಹ್ಮದ್ ಯಾಖುಬ ಅಲಿ  ಸಾ|| ಹೆಚ್ ಜಿ 95 ಹುಸೇನ್ ಗಾರ್ಡನ್ 4 ನೇ ಕ್ರಾಸ ಮಜ್ಜಿದ ಹತ್ತಿರ ಗುಲಬರ್ಗಾ ಇವರು . ಮಿನಿ ವಿಧಾನ ಸೌದದ ಎದುರುಗಡೆ ವಾಮನಾಚಾರಿಯವರ ಕಾಂಪ್ಲೇಕ್ಸನಲ್ಲಿ ತಮ್ಮ ಹಿಂದುಸ್ತಾನ ಎಂಟರಪ್ರೇಸಸ್ ಅಂಗಡಿ ಇರುತ್ತದೆ. ದಿನಾಂಕ; 30-10-2013 ರಂದು ಅಂಗಡಿಯಲ್ಲಿ ವ್ಯಾಪಾರ ಮುಗಿಸಿಕೊಂಡು ರಾತ್ರಿ 8;00 ಗಂಟೆಯ ಸುಮಾರಿಗೆ ನಮ್ಮ ಅಂಗಡಿಯ ಶಟರ ಕೀಲಿ ಹಾಕಿಕೊಂಡು ಮನೆಗೆ ಹೊಗಿದ್ದು ದಿನಾಂಕ; 31-10-2013 ಬೆಳಗ್ಗೆ 7;00 ಗಂಟೆಯ ಸುಮಾರಿಗೆ ನಮ್ಮ ಅಂಗಡಿಗೆ ಬಂದು ನೋಡಲಾಗಿ ಶಟರ್ ನ ಒಂದು ಬದಿಯ ಕೀಲಿ ಮುರಿದು ಶಟರ ಬೆಂಡಮಾಡಿ ಎತ್ತಿದ್ದನ್ನು ನೋಡಿ ಗಾಬರಿಗೋಂಡು ನಾವು ಶಟರತೆಗೆದು ಒಳಗಡೆ ಹೋಗಿ ನೋಡಲಾಗಿ ನಮ್ಮ ಅಂಗಡಿಯಲ್ಲಿಯ 1) ಬ್ರಾಸ ಕೊಟೆಡ ಇಂಜಿಸ್ 5 ಇಂಚಸ್ 25 ಪಾಕೇಟ ಅ|| ಕಿ|| 31200/- ರೂ, 2) ಬ್ರಾಸ ಕೊಟೆಡ ಇಂಜಿಸ್ 3 ಇಂಚಸ್ 60 ಪಾಕೇಟ ಅ|| ಕಿ|| 25200/- ರೂ 3) ಟಾವರ ಬೋಲ್ಟ್  6 ಇಂಚಸ್  30 ಪಾಕೇಟ ಅ|| ಕಿ|| 16200/- ರೂ 4) ಟಾವರ ಬೋಲ್ಟ್  8 ಇಂಚಸ್  35 ಪಾಕೇಟ ಅ|| ಕಿ|| 21000/- ರೂ 5) ಟಾವರ ಬೋಲ್ಟ್  4 ಇಂಚಸ್  40 ಪಾಕೇಟ ಅ|| ಕಿ|| 14400/- ರೂ ಹಿಗೆ ಒಟ್ಟು 1,08,000/- ರೂ ಕಿಮ್ಮತಿನ ಸಾಮಾನುಗಳನ್ನು ರಾತ್ರಿ ವೇಳೆ ಯಾರೂ ಕಳ್ಳರು ಕಳ್ಳತನ ಮಾಢಿಕೊಂಡು ಹೊಗಿರುತ್ತಾರೆ. ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಮುಧೋಳ ಠಾಣೆ : ಶ್ರೀ ವಿಜಯಕುಮಾರ ತಂದೆ ಈರಣ್ಣಾ ಜಾಬಾ ಸಾ: ಕೆಇಬಿ ಕಾಲೋನಿ ಸೇಡಂ ಇವರ ತಮ್ಮನಾದ ರಾಜು ತಂದೆ ಸಿದ್ದಣ್ಣ ಗೌಡ @ ಈರಣ್ಣಾ ಜಾಬಾ ಸಾ: ಸೇಡಂ ಇವನು. ದಿನಾಂಕ: 30-10-13 ರಂದು ಮಧ್ಯಾಹ್ನ 14:00 ಗಂಟೆ ಸುಮಾರಿಗೆ ಮುಧೋಳಕ್ಕೆ ಹೊಗಿ ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೊಗಿರುತ್ತಾನೆ. ರಾತ್ರಿ 23:45 ಗಂಟೆ ಸುಮಾರಿಗೆ ನನಗೆ ತಿಳಿದು ಬಂದಿದ್ದೆನೆಂದರೆ, ನಮ್ಮ ತಮ್ಮನಾದ ರಾಜು ಇತನಿಗೆ ರಾತ್ರಿ 22:30 ಗಂಟೆ ಸುಮಾರಿಗೆ ಮುಧೋಳದಿಂದ ಸೇಡಂ ಕಡೆಗೆ ನಡೆದುಕೊಂಡು ಬರುತ್ತಿದ್ದಾಗ, ಮುಧೋಳ ಆಡಕಿ ರೊಡಿನ ಮಧ್ಯದಲ್ಲಿ ಯಾವುದೊ ಒಂದು ವಾಹನ ಚಾಲಕನು ಅಪಘಾತ ಪಡಿಸಿ ಓಡಿ ಹೊಗಿದ್ದು, ನಮ್ಮ ತಮ್ಮ ರಾಜು ಇತನು ಸ್ಥಳದಲ್ಲಿ ಮೃತ ಪಟ್ಟಿರುತ್ತಾನೆ. ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.