POLICE BHAVAN KALABURAGI

POLICE BHAVAN KALABURAGI

21 November 2014

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಮಾಹಾಗಾಂವ ಠಾಣೆ : ದಿನಾಂಕ: 20/11/2014 ರಂದು ಹರಸೂರ ಗ್ರಾಮದಲ್ಲಿಯ ಹನುಮಾನ ಗುಡಿಯ ಹಿಂದುಗಡೆ ಇಬ್ಬರು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಡುತ್ತಿದ್ದಾರೆಂದು ಭಾತ್ಮಿ ಬಂದ ಮೇರೆಗೆ, ಪಿಎಸ್ಐ ಮಾಹಾಗಾಂವ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ, ಮಟಕಾ ಜೂಜಾಟದಲ್ಲಿ ತೊಡಗಿದ 1) ಈರಣ್ಣಾ ತಂದೆ ಅಣ್ಣಾರಾವ ತೊಂಡಕಲ್ 2) ಅಂಬಾದಾಸ ತಂದೆ ಬಾಬುರಾವ ಕಂಬಾರ ಸಾ: ಇಬ್ಬರು ಹರಸೂರ ತಾ:ಜಿ: ಕಲಬುರಗಿ ಇವರುಗಳನ್ನು ದಸ್ತಗಿರಿ ಮಾಡಿ, ಅವರ ವಶದಿಂದ ಮಟಕಾ ಜೂಜಾಟಕ್ಕೆ ಉಪಯೋಗಿಸಿದ ಎರಡು ಮಟಕಾ ಚೀಟಿಗಳು, ಎರಡು ಬಾಲಪೆನ್ನಗಳು ನಗದು ಹಣ 350-00 ರೂ. ಗಳನ್ನು ಜಪ್ತಿಮಾಡಿಕೊಂಡು ಸದರಿಯವರೊಂದಿಗೆ ಮಾಹಾಗಾಂವ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಕಮಲಾಪೂರ ಠಾಣೆ : ದಿನಾಂಕ: 20-11-2014 ರಂದು ರಾಷ್ಟ್ರೀಯ  ಹೆದ್ದಾರಿಯ 218 ರೋಡಿನ ಮೇಲೆ  ಅಯ್ಯುಬ ಧಾಬಾದ ಮುಂದಗಡೆ ಸಾರ್ವಜನಿಕರು ತಿರುಗಾಡುವ ಸ್ಥಳದಲ್ಲಿ ಸಾರ್ವಜನಿಕರಿಂದ ಹಣವನ್ನು ಪಡೆದು ಮಟಕಾ ನಂಬರ ಬರೆದುಕೊಡುತ್ತಿದ್ದ  ಬಗ್ಗೆ ಬಾತ್ಮಿ ಮೇರೆಗೆ ಪಿ.ಎಸ್.ಐ. ಕಮಲಾಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಸೋಮನಾಥ ತಂದೆ ಭೀಮಶ್ಯಾ ಕೊಡ್ಲಿಗಿ ಸಾ: ಬೇಳಕೂಟಾ ತಾ:ಜಿ:ಕಲಬುರ್ಗಿ , ಇವನನನ್ನು ವಶಕ್ಕೆ ತೆಗೆದುಕೊಂಡು ಅವನ  ಹತ್ತಿರ ಇದ್ದ 850  ರೂ ಒಂದು ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಮತ್ತು ಒಂದು ಬಾಲಪೆನು ಜಪ್ತಿಮಾಡಿಕೊಂಡು ಸದರಿಯವನೊಂದಿಗೆ ಕಮಲಾಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ,
ದ್ವೀಚಕ್ರ ವಾಹನ ಕಳವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಮಂಜುನಾಥ ತಂದೆ ಶಿವಶರಣಪ್ಪ ಗುಡ್ಡಡಗಿ ಸಾ :ಅಫಜಲಪೂರ  ಇವರು ನನ್ನದು ಹಿರೋ ಸ್ಪೇಂಡರ ಪ್ಲಸ್ ಕಂಪನಿಯ ಮೋಟಾರ ಸೈಕಲ ನಂಬರ ಕೆಎ-32 ಇಎ-6710 ಅಂತಾ ಇದ್ದು, ಚೆಸ್ಸಿ ನಂಬರ:- MBLHA10EZBHM69426  ಇಂಜೆನ ನಂಬರ:- HA10EFBHM88454 ಅಂತಾ ಇದ್ದು, ಶಿಲವರ ಬಣ್ಣದ್ದು ಇರುತ್ತದೆ. ಅದರ ಅಂದಾಜು 25,000/- ರೂ ಕಿಮ್ಮತ್ತಿನದನ್ನು ದಿನಾಂಕ 29-08-2014 ರಂದು ಬೆಳಿಗ್ಗೆ 11:00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಅಣ್ಣ ಮಾಹಾಂತೇಶ ಇಬ್ಬರು ಕೂಡಿ ನಮ್ಮ ಹೊಲದ ಪಹಣಿಯನ್ನು ತಗೆದುಕೊಂಡು ಬರಲು ಅಫಜಲಪೂರ ತಹಸಿಲ ಕಾರ್ಯಾಲಯಕ್ಕೆ ಸದರಿ ಮೇಲೆ ತಿಳಿಸಿದ ನನ್ನ ಮೋ/ಸೈ ಮೇಲೆ ಹೋಗಿರುತ್ತೆವೆ, ಸದರಿ ನನ್ನ ಮೋಟಾರ ಸೈಕಲನ್ನು ಅಫಜಲಪೂರದ ತಹಸಿಲ ಕಾರ್ಯಾಲಯದ ಮುಂದೆ ಇರುವ ಆವರಣದಲ್ಲಿ ನಿಲ್ಲಿಸಿ ನಾವಿಬ್ಬರು ಪಹಣಿಯನ್ನು ತಗೆದುಕೊಳ್ಳಲು ಪಹಣಿ ತಗೆದುಕೊಳ್ಳುತ್ತಿದ್ದ ಸರತಿ ಸಾಲಿನಲ್ಲಿ ನಿಂತುಕೊಂಡು, ಪಾಳಿ ಪ್ರಕಾರ ಪಹಣಿ ಪಡೆದುಕೊಂಡು ನಂತರ 11:30 ಎ ಎಮ್ ಸುಮಾರಿಗೆ ಮರಳಿ ನಾವು ಮೋ/ಸೈ ನಿಲ್ಲಿಸಿದ ಜಾಗಕ್ಕೆ ಬಂದು ನೋಡಲಾಗಿ ನನ್ನ ಮೋ/ಸೈ ಇರಲಿಲ್ಲ, ಸದರಿ ನನ್ನ ಮೋ/ಸೈ ನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಕಮಲಾಪೂರ ಠಾಣೆ : ಶ್ರೀ ಮಹಾದೇವ ತಂದೆ ರಾಜಪ್ಪ ಬಿರಾದಾರ  ಸಾ:ಕಮಲಾಪೂರ ತಾ:ಜಿ:ಗುಲಬರ್ಗಾ ಇವರು ದಿನಾಂಕ:13-11-2014 ರಂದು ಸಾಯಂಕಾಲ 07-00 ಗಂಟೆಯ ಸೂಮಾರಿಗೆ ನನ್ನ ತಮ್ಮ ಶಿವಕುಮಾರ ತಂದೆ ರಾಜಪ್ಪ ಬಿರಾದಾರ ಇವನು ಹಿರೋಹೊಂಡಾ ಮೊಟರ ಸೈಕಲ ನಂ.ಕೆಎ-32 ಯು-2018 ನೇದ್ದರ ಮೇಲೆ ಭೂಂಯಾರ ಗ್ರಾಮದ ನಮ್ಮ ಮಾವನ ಮನೆಗೆ ಹೋಗುವಾಗ ಗುಲಬರ್ಗಾ ಹೆದ್ದಾರಿಯ ನಾಡ ತಹಸಿಲ ಕಾರ್ಯಾಲಯದ ಮುಂದೆ ಹೆದ್ದಾರಿಯ ಮೇಲೆ ರಸ್ತೆ ಅಪಘಾತವಾಗಿರುವ ಬಗ್ಗೆ ನಮ್ಮ ಸಂಭಂದಿ ಉದಯಕುಮಾರ ರಟಕಲ ಇವರು ನನಗೆ ಫೊನ ಮುಖಾಂತರ ತಿಳಿಸಿದ್ದು. ನಾನು ಹೆದ್ದಾರಿಯ ನಾಡ ತಹಸಿಲ ಕಾರ್ಯಾಲಯದ ಎದರು ಹೆದ್ದಾರಿಯ ಹತ್ತೀರ ಹೋಗಿ ನೋಡಲು ಉದಯಕುಮಾರ ಹೇಳಿದಂತೆ ನನ್ನ ತಮ್ಮ ಶಿವಕುಮಾರನಿಗೆ ರಸ್ತೆ ಅಪಘಾತವಾಗಿ ಅವನ ಮುಗಿನ ಮೇಲೆ ಕಟ್ಟಾಗಿ ರಕ್ತಗಾಯವಾಗಿದ್ದು. ಅಲ್ಲದೆ ಬಲಗಣ್ಣ ಕೆಳಗೆ ಬಲಹುಬ್ಬಿನ ಮೇಲೆ ಕೆಳ ತುಟಿಯ ಕೆಳಗೆ ರಕ್ತಗಾಯ ಮತ್ತು ಅಲ್ಲಲ್ಲಿ ತರಚಿದ ರಕ್ತ ಮತ್ತು ಗುಪ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಆದಪ್ಪ ತಂದೆ ಸಿದ್ದಣ್ಣಾ ಕೊಳಕೂರ ಸಾ: ವಸಂತ ನಗರ  ಕಲಬುರಗಿ ರವರು ದಿನಾಂಕ: 20/11/2014 ರಂದು ರಾತ್ರಿ 9=00 ಗಂಟೆಯ ಸುಮಾರಿಗೆ ತನ್ನ ಮೋ/ಸೈಕಲ್ ನಂ;' ಕೆಎ 32 ಇಇ 0167 ನೆದ್ದರ ಮೇಲೆ ಎಸ್.ವಿ.ಪಿ.ಸರ್ಕಲ್ ದಿಂದ ಆರ್.ಪಿ.ಸರ್ಕಲ್ ರೋಡ ಕಡೆಗೆ ಮೋ/ಸೈಕಲ್ ಚಲಾಯಿಸಿಕೊಂಡು ಹೋಗಿ ಕಿಚನ ನೀಡ್ಸ ಗ್ಯಾಸ ಎಜೇನ್ಸಿ ಎದುರಿನ ಕ್ರಾಸ್ ಹತ್ತಿರ ಫಿರ್ಯಾದಿ ಮೋ/ಸೈಕಲ್ ಮೇಲೆ ರೋಡ ಕ್ರಾಸ್ ಮಾಡುತ್ತಿದ್ದಾಗ ಕೇಂದ್ರ ಬಸ್ ನಿಲ್ದಾಣ ಕಡೆಯಿಂದ ಮೋ/ಸೈಕಲ್ ಸವಾರನು ತನ್ನ ಮೋ/ಸೈಕಲ್ ಮೇಲೆ ಹಿಂದೆ ಒಬ್ಬರಿಗೆ ಕೂಡಿಸಿಕೊಂಡು ಅತಿವೇಗ ಮತ್ತು  ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಪಡಿಸಿ ಅಪಘಾತಮಾಡಿ ಫಿರ್ಯಾದಿಯ ಎಡ ತೊಡೆಗೆ ಭಾರಿ ಗುಪ್ತ ಪೆಟ್ಟು ಮಾಡಿ ಆತನ ಹಿಂದೆ ಕುಳಿತವನಿಗೆ ಗಾಯಮಾಡಿ ತನ್ನ ಮೋ/ಸೈಕಲ್ ಸ್ಥಳದಲ್ಲೇ ಬಿಟ್ಟು ಸವಾರ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಚೌಕ ಠಾಣೆ : ಶ್ರೀ ಮಹ್ಮದ ರಬಾನಿ ತಂದೆ ಅಬ್ದುಲ್ ರಹಿಮ್ ಸಾಬ ಮುಡ್ಡಿ ಸಾಃ ಜವಾಹರ ಹಿಂದ ಸ್ಕೋಲ್ ಹತ್ತಿರ ಗೋಸುದಾಸ ಕಾಲೋನಿ ಕಲಬುರಗಿ ರವರು ಬಾಂಡ್ಯೆ ಬಜಾರದಲ್ಲಿ ಹಣ್ಣಿನ ಗೋದಾಮ ಇದ್ದು ಪ್ರತಿ ದಿನ ಹಣ್ಣು ಮಾರಾಟ ಮಾಡಿ ಬಂದ ಹಣ ಗೋದಾಮದಲ್ಲಿಟ್ಟು  ಮತ್ತು ನಸುಕಿನಜಾವ ಹಣ್ಣು ಮಾರಾಟ ಮಾಡುವದು ಗೋಸ್ಕರ ಮತ್ತು ಹಣ್ಣು ಹರಾಜು ಮಾಡುವದಕ್ಕೆ ಬೇಕೆಂದು ಸ್ವಲ್ಪ ಹಣ ಇಡುತ್ತಾ ಬಂದಿರುತ್ತಾನೆ. ಅಲ್ಲದೆ ನಿನ್ನೆ ದಿನಾಂಕಃ 19.11.2014 ರಂದು ರಾತ್ರಿ 10 ಗಂಟೆಯ ಸುಮಾರಿಗೆ ನನ ಹತ್ತಿರ ಯೂನಿಕ್ ಜನರಲ್ ಸ್ಟೋರದ ಮಾಲೀಕರಾದ ರಾಜೇಶ ಪವಾರ ಎಂಬುವರು ಹೇಳಿದ್ದೆನೆಂದರೆ ನಾನು ಬಾಂಬೆಗೆ ಹೋಗುತ್ತಿದ್ದಿನೆ. ಆದರಿಂದ ನನ ಹತ್ತಿರ ಇರುವ ಹಣ ಇಟ್ಟಿಕೊಳ್ಳಿ ಬೆಳಿಗ್ಗೆ ನಮ್ಮ ಅಂಗಡಿಯಲ್ಲಿ ಕೆಲಸ ಮಾಡುವ ಹುಡಗ ಬರುತ್ತಾನೆ ಅವರ ಕೈಯಲ್ಲಿ ಹಣ ಕೊಡಿ ಬೆಳಿಗ್ಗೆ ಬ್ಯಾಂಕಿಗೆ ತುಂಬುವದು ಇದೆ ಅಂತಾ ಹೇಳಿ ನನ ಕೈಯಲ್ಲಿ 1,50,000/- ನಗದು ಹಣ ಕೊಟ್ಟು ಹೋಗಿದ್ದು ಆ ಹಣ ನಾನು ನಮ್ಮ ಗೋದಾಮಿನಲ್ಲಿರುವ ಅಲಮಾರಿಯಲ್ಲಿಟ್ಟು ಹೋಗಿರುತ್ತೇನೆ. ನಮ್ಮ ಗೋದಾಮಿನಲ್ಲಿ ರಾತ್ರಿ ವೇಳೆಯಲ್ಲಿ ಹಬೀಬ ತಂದೆ ಸೈಯದ ಪಟೇಲ ಎಂಬುವನಿಗೆ ಕೆಲಸಕ್ಕೆಂದು ಇಟ್ಟಿಕೊಂಡಿದ್ದು ಇರುತ್ತದೆ. ಅವನು ರಾತ್ರಿ ವೇಳೆ ಬೇರೆಯವರ ಅಂಗಡಿಯಲ್ಲಿ ಮಲಗಿ ಕೊಂಡು ಬೆಳಿಗ್ಗೆ 6.00 ಗಂಟೆಯ ಸುಮಾರಿಗೆ ನಮ್ಮ ಗೋದಾಮಕ್ಕೆ ಬಂದು ನೋಡಿ ನನಗೆ ಪೋನ್ ಮಾಡಿ ತಿಳಿಸಿದೆನೆಂದರೆ ಮಾಲೀಕರೆ ಎದುರಗಡೆಯ ಚಾವಿ ಹಾಗೆ ಇದ್ದು ಒಳಗಡೆಯ ಅಲಮಾರ ಮಾತ್ರ ಒಡೆದ ಹಾಗೆ ಕಾಣುತ್ತಿದೆ ಅಂತಾ ಪೋನ್ ಮಾಡಿದ್ದಾಗ  ನಾನು ನೇರವಾಗಿ ಬಂದು ನೋಡಿದಾಗ ಗೋದಾಮಿನ ಚಾವಿ ಹಾಗೆ ಇದ್ದು ಗೋದಾಮನಿಲ್ಲಿರುವ ಅಲಮಾರ ಮಾತ್ರ ಒಡೆದಿದ್ದು ಇತ್ತು  ನಂತರ ನಾನು ಪರೀಶಲನೆ ಮಾಡಿ ನೋಡಿದ್ದಾಗ ಯೂನಿಕ್ ಜನರಲ್ ಸ್ಟೋರದ ಮಾಲೀಕರಾದ ರಾಜೇಶ ಪವಾರ ಕೊಟ್ಟಿರುವ 1,50,000/- ನಗದು ಹಣ  ಇರಲ್ಲಿಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.