POLICE BHAVAN KALABURAGI

POLICE BHAVAN KALABURAGI

19 November 2011

Gulbarga Dist Reported

:ಪತ್ರಿಕಾ ಪ್ರಕಟಣೆ:
ದಿನಾಂಕ:18/11/11 ರಂದು ಸಾಯಂಕಾಲ 7 ಗಂಟೆಗೆ ಗುಲಬರ್ಗಾ ನಗರದ ಸ್ಟೇಷನ ಬಜಾರ ವ್ಯಾಪ್ತಿಯ ಮೊಹನ ಲಾಜ್‌ ಹಿಂದುಗಡೆ ಇರುವ ರೀಗಲ್‌ ಹೋಟೇಲ್‌ ಹತ್ತಿರ ಮಟಕಾ ಜುಜಾಟ ನಡೆದ ಬಗ್ಗೆ ಖಚಿತ ಮಾಹಿತಿ ಮೆರೆಗೆ ಮಾನ್ಯ ಎಸ್‌ ಪಿ ಸಾಹೇಬ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಗುಲಬರ್ಗಾ ಡಿಸಿಐಬಿ ಘಟಕದ ಪಿ.ಐ. ಬಿ.ಬಿ.ಪಟೇಲ್‌, ಸ್ಟೇಷನ ಬಜಾರ ಪಿಐ ಇನಾಮದಾರ ಮತ್ತು ಡಿಸಿಐಬಿ ಸಿಬ್ಬಂಧಿಯವರಾದ ಅಪ್ಪಾರಾವ ಕೊರಳ್ಳಿ,ಶಿವಯೋಗಿ, ಅಣ್ಣಾರಾಯ, ವಿಜಯ ಕುಮಾರ ಮತ್ತು ಚಾಲಕ ವೀರಣ್ಣ ರವರೊಂದಿಗೆ ದಾಳಿ ಮಾಡಿ ಮಟಕಾ ಜುಜಾಟದಲ್ಲಿ ತೊಡಗಿದ 1)ಮಿರಾಜ ಶೇಕ ತಂದೆ ಖಾಜಾ ಶೆಕ ವಯ 40 ವರ್ಷ ಉ:ರಿಗಲ್‌ ಹೊಟೇಲ್‌ದಲ್ಲಿ ನೌಕರಿ ಸಾ:ಹಾಗರಗಾ ಕ್ರಾಸ್‌ ಮಹಿಬೂಬ ನಗರ ಗುಲಬರ್ಗಾ ಮತ್ತು 2) ಮಹ್ಮದ ಯಾಸೀನ ತಂದೆ ಅಬ್ದುಲ್‌ ಗಫೂರ ವಯ 40 ವರ್ಷ ಉ: ವ್ಯಾಪಾರ ಸಾ: ಮೋಹನ್‌ ಲಾಜ್ ಹಿಂದುಗಡೆ ಉಪ್ಪರಗಲ್ಲಿ ಗುಲಬರ್ಗಾ. ಇವರನ್ನು ದಸ್ತಗೀರ ಮಾಡಿ ಮಟಕಾ ಜುಜಾಟಕ್ಕೆ ಸಂಬಂಧಿಸಿದ ನಗದು ಹಣ ರೂ,8,280/-, ಮಟಕಾ ಚೀಟಿಗಳು,ಒಂದು ಕೈನೇಟಿಕ್‌ ಹೋಡಾ ದ್ವಿಚಕ್ರ ವಹಾನ ಹೀಗೆ ಒಟ್ಟು 16,280=00 ರೂ,ಬೆಲೆವುಳ್ಳವು ಜೆಪ್ತ ಮಾಡಿ ಕೊಂಡಿದ್ದು ಈ ಬಗ್ಗೆ ಸ್ಡೇಷನ ಬಜಾರ ಪೊಲೀಸ ಠಾಣೆಯಲ್ಲಿಗುನ್ನೆ ದಾಖಲಾಗಿರುತ್ತದೆ. ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಗುರಿಪಡಿಸಲಾಗಿದೆ.

Gulbarga Dist Reported Crimes

ಕೊಲೆ ಪ್ರಕರಣ:
ಸೇಡಂ ಪೊಲೀಸ ಠಾಣೆ:
ಶ್ರೀಮತಿ ಬಿಜಾನಬಿ ಗಂಡ ಬಾಬುಮಿಯಾ ಜಮಾದಾರ ರಾಜಭೈಗಲ್ಲಿ ಸೇಡಂ. ರವರು ನನಗೆ 5 ಗಂಡು ಮಕ್ಕಳು ಇಬ್ಬರು ಹೆಣ್ಣು ಮಕ್ಕಳು ಇರುತ್ತಾರೆ. ನನಗೆ ನನ್ನ ಮಕ್ಕಳು ಸರಿಯಾಗಿ ನೋಡಿಕೊಳ್ಳದ ಕಾರಣ ನಾನು ಕುರಕುಂಟಾ ಗ್ರಾಮದಲ್ಲಿ ಖಣಿಯಲ್ಲಿ ಕೆಲಸ ಮಾಡಿಕೊಂಡು ಇರುತ್ತಿದ್ದನೆ. ಒಂದು ವಾರದ ಹಿಂದೆ ನನ್ನ ಮಗ ಖಾಜಾಮಿಯಾ ಇತನು ಕುರಕುಂಟಾ ಗ್ರಾಮದಲ್ಲಿ ನಾನಿರುವ ಮನೆಗೆ ಬಂದು ಸೇಡಂ ಪಟ್ಟಣದ ಮನೆಯ ಚಾವಿಕೊಟ್ಟು ಹೇಳಿದ್ದೇನೆಂದರೆ, ದಿನಾಂಕ:07-11-2011 ರಂದು ರಾತ್ರಿ 8-30 ಗಂಟೆ ಸುಮಾರಿಗೆ, ಅಣ್ಣ ಶಹಾಬೊದ್ದಿನ್ ಇತನು ಹೈದ್ರಾಬಾದದಿಂದ ಸೇಡಂದ ಮನೆಗೆ ಬಂದಿದ್ದು. ಮನೆಯಲ್ಲಿ ನಾನು ನನ್ನ ಹೆಂಡತಿ ಇದ್ದೇವು. ಮನೆಯ ಪಾಲದ ಸಂಬಂಧ ತಕರಾರು ಮಾಡಿದ್ದಲ್ಲದೇ, ಅಮೃತಾ ಇವಳಿಗೆ ಕೆಟ್ಟ ದೃಷ್ಟಿಯಿಂದ ನೋಡುವದು ಮಾಡುತ್ತಿರುವ ಬಗ್ಗೆ ಜಗಳವಾಗಿ, ತೆಕ್ಕೆ ಕುಸ್ತಿಗೆ ಬಿದ್ದು ನೆಲಕ್ಕೆ ಖೆಡವಿ ಕೊಂದು, ಕಟ್ಟಿಗೆ ಕುಳ್ಳು ಇಡುವ ಪತ್ರಾ ಮನೆಯಲ್ಲಿ ಪರಿಸಿಗಳು ತೆಗೆದು ಕೆದರಿ ಅಲ್ಲಿಯೇ ಅವನ ಶವ ಮುಚ್ಚಿಹಾಕಿ ಮೇಲೆ ಸಿಮೆಂಟ್ ಪ್ಲಾಸ್ಟರ್ ಮಾಡಿರುತ್ತೇನೆ. ನೀನು ಕೂಡ ಸೇಡಂದ ಮನೆಗೆ ಹೋಗಬೇಡ ನಾನು ಹೈದ್ರಾಬಾದಕ್ಕೆ ಹೋಗುತ್ತೇನೆ ಅಂತ ಹೇಳಿ ಹೋದನು. ಅದಕ್ಕೆ ನಾನು ಸುಮ್ಮನೆ ಹೇಳಿರಬಹುದೆಂದು ಹಾಗೇಯೆ ಕುಳಿತುಕೊಂಡೆ ದಿನಾಂಕ:17-11-2011 ರಂದು ಸಾಯಂಕಾಲ ಸೇಡಂ ಮನೆಯ ಪಕ್ಕದಲ್ಲಿರುವ ಅಜ್ಜು ಎಂಬಾತ ಹುಡುಗ ಬಂದು ಕಟ್ಟಿಗೆ ಕುಳ್ಳು ಇಡುವ ಪತ್ರಾ ಮನೆಯಲ್ಲಿ ಪರಸಿ ತೆಗೆದು ಹೊಸದಾಗಿ ಸಿಮೆಂಟ್ ಪ್ಲಾಸ್ಟರ ಮಾಡಿದ ಗುರುತು ಕಾಣುತ್ತದೆ ಅಂತ ಹೇಳಿದನು. ದಿ:18-11-2011 ರಂದು ಮದ್ಯಾಹ್ನ ಸೇಡಂದ ಮನೆಗೆ ಬಂದು ನೋಡಲು ವಿಷಯ ನಿಜವಿರುತ್ತದೆ. ನನ್ನ ಮಗ ಖಾಜಾಮಿಯಾ ಇತನು ಶಹಾಬುದ್ದಿನನ್ನು ಕೊಂದು ಕಟ್ಟಿಗೆ ಕುಳ್ಳು ಇಡುವ ಪತ್ರಾ ಮನೆಯಲ್ಲಿ ನೆಲ ಕೆದರಿ ಮುಚ್ಚಿಹಾಕಿ ಸಾಕ್ಷಿ ನಾಶ ಮಾಡಿರುತ್ತಾನೆ ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.205/2011 ಕಲಂ. 302, 201 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ
: ಶ್ರೀ ಶಿವರಾಯ ತಂದೆ ಬಸಣ್ಣ ಖಣಗೆ ವ: 45 ಉ:ಕೂಲಿಕೆಲಸ ಸಾ: ಸಿಂದಗಿ (ಬಿ) ತಾ: ಗುಲಬರ್ಗಾ ರವರು ನಾನು ದಿನಾಂಕ.18-11-2011 9 ಎಎಮಕ್ಕೆ ನನ್ನ ಮಕ್ಕಳೊಂದಿಗೆ ಮನೆಯ ಮುಂದೆ ಕುಳಿತಾಗ ಸುನೀಲ ತಂದೆ ಕಾಂತಪ್ಪ ಕಡಗಂಚಿ ಇನ್ನೂ 3 ಜನರು ಸಾ: ಸಿಂದಗಿ (ಬಿ) ಗ್ರಾಮದವರು ನನ್ನ ಅಳಿಯ ಇತನು ಮನೆಯ ಹತ್ತಿರ ಬಂದು ನಾನು ಇಟ್ಟುಕೊಂಡ ಹೆಣ್ಣಿಗೆ ಬಿಡು ಅಂತಾ ಕೇಳುವವರು ನೀನು ಯಾರು ಅಂತಾ ಜಗಳ ತೆಗೆದು ಅವ್ಯಾಚ್ಛವಾಗಿ ಬೈದು ಕೈಯಿಂದ, ಕೊಡಲಿ ಕಾವಿನಿಂದ ಹೊಡೆದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 343/2011 ಕಲಂ 341, 323, 324, 504 506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತೆನೆ.