POLICE BHAVAN KALABURAGI

POLICE BHAVAN KALABURAGI

05 December 2017

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಆಳಂದ ಠಾಣೆ : ದಿನಾಂಕ 03/12/2017 ರಂದು ಮದ್ಯಾಹ್ನ ಶ್ರೀ ಅರುಣಕುಮಾರ ತಂದೆ ಚಂದ್ರಕಾಂತ ವಿಭೂತೆ ಸಾ: ಪಡಸಾವಳಗಿ ತಾ:ಆಳಂದ ರವರು  ಮತ್ತು ನಮ್ಮ ಅಣ್ಣತಮ್ಮಕೀಯ ಮಲ್ಲಿಕಾರ್ಜುನ ವಿಭೂತೆ ರವರು ಕೂಡಿಕೊಂಡು ನಮ್ಮ ಗ್ರಾಮದ ನಾಗೇಶ ತಂದೆ ಶಿವಾನಂದ ನಿಂಬರ್ಗಿ ರವರ ಕ್ರೋಜರ ನಂ ಕೆಎ 39 6490 ನೇದ್ದರಲ್ಲಿ ನಾವು ಮತ್ತು ನಮ್ಮ ಗ್ರಾಮದ ಮುಬಾರಕ ತಂದೆ ರಾಜಾಬಾಯಿ ಮುಲಗೆ , ಮಹೇಶ ತಂದೆ ಚಂದ್ರಕಾಂತ ಮುನ್ನೋಳ್ಳಿ ಹಾಗು ಇತರರು ಕೂಡಿಕೊಂಡು ಆಳಂದಕ್ಕೆ ಬಿಜೆಪಿ ಪಕ್ಷದ ಕಾರ್ಯಕ್ರಮಕ್ಕೆ ಬಂದು ಕಾರ್ಯಕ್ರಮ ಮುಗಿದ ನಂತರ ರಾತ್ರಿ 8:00 ಗಂಟೆಗೆ ಮರಳಿ ಅದೆ ಕ್ರೋಜರದಲ್ಲಿ ನಮ್ಮ ಗ್ರಾಮಕ್ಕೆ ಬರುವಾಗ ಸವಳೇಶ್ವರ ಕ್ರಾಸ ಹತ್ತಿರ ರೋಡಿನ ಮೇಲೆ ಬಂದಾಗ ಕ್ರೋಜರ ಚಾಲಕ ನಾಗೇಶ ಇತನು ಅತಿವೇಗದಿಂದ ಮತ್ತು ಅಲಕ್ಷತನದಿಂದ ವಾಹನ ಚಲಾಯಿಸುತ್ತಿದ್ದರಿಂದ ಕ್ರೊಜರ ತುದಿಗೆ ಕುಳಿತ್ತಿದ್ದ ಮಲ್ಲಿಕಾರ್ಜುನ ಇತನು ಕ್ರೋಜರದಿಂದ ಕೆಳಗೆ ಬಿದಿದ್ದು ಅವನನ್ನು ಹಿಡಿಯಲು ನಾನು ಹೋಗಿ ನಾನು ಸಹ ಅವನ ಮೇಲೆ ಬಿದಿದ್ದು ಆಗ ನನಗೆ ಬಲ ಭುಜಕ್ಕೆ , ಬಲ ರಟ್ಟೆಗೆ , ಬಲ ಸೊಂಟಕ್ಕೆ , ಎರಡು ಮೋಳಕಾಲಿಗೆ , ಮುಂಗೈ ರಕ್ತಗಾಯ ಮತ್ತು ತರಚಿದ ಸಾದಾ ಸ್ವರೂಪದ ಗಾಯವಾಗಿದ್ದು ಮತ್ತು ಮಲ್ಲಿಕಾರ್ಜುನ ಇತನಿಗೆ ಹಣೆಯ ಮೇಲೆ ತರಚಿದ ಗಾಯ ಮತ್ತು ಗುಪ್ತಗಾಯವಾಗಿದ್ದು ಮತ್ತು ಮುಗಿನ ಮೇಲೆ ರಕ್ತಗಾಯ ಮತ್ತು ಎಡಗಣ್ಣಿನ ಪಕ್ಕದೆ ಬಾರಿಗಾಯವಾಗಿದ್ದು ನಂತರ ನಮಗೆ ಅದೆ ಕ್ರೋಜರದಲ್ಲಿ ನಮ್ಮಿಬ್ಬರಿಗೆ ಹಾಕಿಕೊಂಡು ಬಸವೇಶ್ವರ ಆಸ್ಪತ್ತೆಗೆ ತೆಗೆದುಕೊಂಡು ಹೋಗಿದ್ದು ನನಗೆ ಅಷ್ಟೊಂದು ಗಾಯವಾಗದ ಕಾರಣ ನಾನು ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುತ್ತೇನೆ  ಮತ್ತು ಮಲ್ಲಿಕಾರ್ಜುನ ಇತನಿಗೆ ಭಾರಿಗಾಯವಾಗಿದ್ದರಿಂದ ಚಿರಾಯು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆ ಕುರಿತು ತೆಗೆದುಕೊಂಡು ಹೊಗಿದ್ದು ರಸ್ತೆ ಅಪಘಾತದಿಂದ ಆದ ಗಾಯದಿಂದ ಇಂದು 04/12/2017 ರಂದು ಮದ್ಯಾಹ್ನ 03:30 ಗಂಟೆಗೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ನರೋಣಾ ಠಾಣೆ : ಶ್ರೀ.ಶಿವಶರಣಪ್ಪ ತಂದೆ ದೇವಿಂದ್ರಪ್ಪಾ ಬೋಲ್ಡೆ ಸಾ||ದಣ್ಣೂರ ಇವರು ದಿನಾಂಕ:04-12-2017 ರಂದು ಮುಂಜಾನೆ 09-00 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ಮಾಲಿಕರ ಹತ್ತಿರ ಕೆಲಸ ಮಾಡುವವರಾದ ಸಿದ್ಧಾರೂಢ ತಂದೆ ಭೀಮರಾವ ಬಿಕ್ಕಬಸ್ತಿ ಹಾಗೂ ಸಿದ್ದಪ್ಪ ವಾಚಮೆನ ರವರುಗಳು ನಮ್ಮ ಮಾಲೀಕರ ಕಡಗಂಚಿ-ಲಾಡಚಿಂಚೋಳಿ ವಾರ್ಗಮಧ್ಯ ಮುಖ್ಯ ರಸ್ತೆಯ ಬದಿಯಲ್ಲಿರುವ ತೋಟದ ಮನೆಯಲ್ಲಿದ್ದಾಗ ರಸ್ತೆಯ ಮೇಲೆ ರಸ್ತೆ ಅಪಘಾತವಾದ ಶಬ್ದಕೇಳಿಬಂದ ಮೇರೆಗೆ ನಾವು 3ಜನರು ಹೋಗಿ ನೋಡಲಾಗಿ ಒಬ್ಬ ಗಂಡು ಮನುಷ್ಯ ಸುಮಾರು 55-60 ವರ್ಷದ ವ್ಯಕ್ತಿಯ ಮೈಮೇಲೆ ಯಾವುದೋ ವಾಹನ ಚಾಲಕನು ತನ್ನ ಅಧಿನದಲ್ಲಿಯ ವಾಹನವನ್ನು ಅತಿವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಕೊಂಡು ಹೋಗಿದ್ದರಿಂದ ಸದರಿ ವ್ಯಕ್ತಿಯ ದೇಹದಲ್ಲಿನ ಮೌಂಸಖಂಡ ಹೊರೆಗೆ ಬಂದಿದ್ದು ಅಲ್ಲದೇ ಹೊಟ್ಟೆಯಿಂದ ಕೆಳಭಾಗ ಪೂರ್ತಿ ಕಟ್ಟಾದಂತೆ ಆಗಿದ್ದು. ಸದರಿ ವ್ಯಕ್ತಿಯ ಮುಖ ಮತ್ತು ಎರಡು ಕೈಗಳ ಸಾಬಿತ್ತಿದ್ದು ನಾವುಗಳೂ ಮುಖ ನೋಡಲಾಗಿ, ಸದರಿ ವ್ಯಕ್ತಿಯೂ ಯಾವಾಗಲೂ ಹುಚ್ಚನಂತೆ ರಸ್ತೆಯ ಬದಿಯಲ್ಲಿ ತಿರುಗಾಡುವ ವ್ಯಕ್ತಿಯಾಗಿದ್ದನು. ಅವನ ಹೆಸರು ಮತ್ತು ವಿಳಾಸ ನಮಗೆ ಗೊತ್ತಾಗಿರುವುದಿಲ್ಲ.ಯಾವುದೋ ವಾಹನ ಚಾಲಕನು ತನ್ನ ಅಧಿನದಲ್ಲಿಯ ವಾಹನವನ್ನು ಅತೀವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಇದ್ದ ಅಪರಿಚಿತ ಗಂಡು ಮನುಷ್ಯನ ಮೇಲೆ ವಾಹನವನ್ನು ಹಾಯಿಸಿದ್ದರಿಂದ ಸದರಿ ವ್ಯಕ್ತಿಯೂ ಸ್ಥಳದಲ್ಲಿಯೇ ಮೃತಪಟ್ಟಿದ್ದು ಅಲ್ಲದೇ ಸದರಿ ವಾಹನ ಚಾಲಕನು ಅಪಘಾತ ಪಡಿಸಿ ವಾಹನ ಸಮೇತವಾಗಿ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣು ಮಕ್ಕಳಿಗೆ ಚುಡಾಯಿಸುತ್ತಿದ್ದವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 03.12.2017 ರಂದು ಕುಮಾರಿ ಭವಾನಿ ಇವರು ತನ್ನ ಕೆಲಸ ಮೂಗಿಸಿಕೊಂಡು ತಮ್ಮ ಮನೆಯ ಹತ್ತಿರ ಇರುವ ಅಣ್ಣಪ್ಪ ಇವರ ಕಿರಾಣಾ ಅಂಗಡಿಯ ಮುಂದೆ ಇರುವ ರಸ್ತೆಯ ಮೇಲೆ ನಾನು ನಡೆದುಕೊಂಡು ಹೋಗುತ್ತಿದ್ದು ಆಗ ಸದರಿ ಕೀರಣ @ ಕೀರಣಕುಮಾರ @ ಪುಟ್ಯಾ ತಂದೆ ಶಿವರಾಜ ಪಂಡೆದ ಇತನು ನನ್ನ ಹತ್ತಿರ ಬಂದು ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿದ್ದ ನನಗೆ ನಿಲ್ಲಿಸಿ ಏ ರಂಡಿ ನಿನ್ನದು ಬಹಳ ಸೊಕ್ಕು ಇದೆ ನಾನು ಕರೆದರೆ ಬರುವದಿಲ್ಲ ಅಂತ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದು ಆಗ ನಾನು ಸದರಿಯವನಿಗೆ ನೀನು ಯಾರು ನನಗೆ ಬೈಯುವವನು ವಿನಾಕಾರ ನನಗೆ ಏಕೆ ತೊಂದರೆ ಮಾಡುತ್ತಿದ್ದಿ ಅಂತ ಕೇಳಿದ್ದು ಆಗ ಸದರಿಯವನು ನನಗೆ ಹಿಡಿದುಕೊಳ್ಳಲು ಬರುತ್ತಿದ್ದು ಆಗ ನಾನು ಚಿರಾಡುತ್ತಾ ನಮ್ಮ ಮನೆಗೆ ಕಡೆಗೆ ಓಡುತ್ತಿದ್ದು ನಾನು ಚಿರಾಡುವದನ್ನು ಕೇಳಿ ಮನೆಯಲ್ಲಿದ್ದ ನಮ್ಮ ತಾಯಿ ಗುರುಬಾಯಿ ಇವರು ಮನೆಯಿಂದ ಹೊರಗೆ ಬಂದು ನನ್ನ ಹಿಂದೆ ಬರುತ್ತಿದ್ದ ಸದರಿ ಕೀರಣ ಇತನಿಗೆ ಯಾಕೆ ನನ್ನ ಮಗಳ ಹಿಂದೆ ಬಿದಿದ್ದಿ ಅವಳಿಗೆ ಯಾಕೆ ತೊಂದರೆ ಕೂಡುತ್ತಿದ್ದಿ ಅಂತ ಕೇಳಿದ್ದು ಆಗ ಸದರಿಯವನು ನಮ್ಮ ತಾಯಿಗೂ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದು ಆಗ ಅಕ್ಕಪಕ್ಕದಲ್ಲಿದ್ದ ಅಂಗಡಿಯವರು ಬಂದು ಸದರಿಯವನಿಗೆ ಬೈದು ಕಳುಹಿಸಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀ ಶರಣಬಸವೇಶ್ವರ ಸಯುಕ್ತ ಪದವಿ ಪೂರ್ವ ಮಹಾ ವಿಧ್ಯಾಲಯ ಶರಣ ನಗರ ಕಲಬುರಗಿ ಇವರು ದಿನಾಂಕ 04.11.2017 ರಂದು ಮತ್ತು ದಿನಾಂಕ 15.11.2017 ರಂದು ಠಾಣೆಗೆ ಹಾಜರಾಗಿ ತಮ್ಮ ವಿಧ್ಯಾ ಸಂಸ್ಥೆ ಶ್ರೀಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿದ್ದು, ದೇವಸ್ಥಾನ ಆವರಣದಲ್ಲಿ ಬಾಲಕ/ಬಾಲಕೀಯರ ಹೈಸ್ಕೂಲ ಮತ್ತು ಕಾಲೇಜ ಇರುವದಿಂದ ವಿದ್ಯಾರ್ಥಿಗಳು/ವಿದ್ಯಾರ್ಥಿನಿಯರಿಗೆ ಕೆಲವು ಹುಡುಗರು ಚುಡಾಯಿಸುವದು ಕಂಡು ಬಂದಿದ್ದು ವಿದ್ಯಾರ್ಥಿನಿಯರಿಗೆ ತೊಂದರೆ ಮಾಡುವವರ ವಿರುಧ್ದ ಕ್ರಮ ಕೈಕೊಳ್ಳಬೇಕು ಮತ್ತು ಸಿಬ್ಬಂದಿಯವರನ್ನು ನೀಯೊಜನೆ ಮಾಡುವ ಕುರಿತು ಅರ್ಜಿಯನ್ನು ಸಲ್ಲಿಸಿದ್ದು ಸದರಿ ವಸೂಲಾದ ಅರ್ಜಿಯಂತೆ ಶ್ರೀ ಶರಣಬಸವೇಶ್ವರ ಆವರಣದಲ್ಲಿ ವಿದ್ಯಾರ್ಥಿನಿಯರಿಗೆ ತೊಂದರೆ ಯಾಗುವಂತೆ ನೋಡಿಕೊಂಡು ಬರಲು ನಮ್ಮ ಠಾಣೆಯಿಂದ ಪ್ರತಿ ದಿವಸ ಸಿಬ್ಬಂದಿ ಜನರನ್ನು ನೇಮಕ ಮಾಡಿಕೊಂಡು ಬಂದಿದ್ದು ಅದರಂತೆ ಇಂದು ದಿನಾಂಕ 04.12.2017 ರಂದು ಶ್ರೀ ಶರಣಬಸವೇಶ್ವರ ಗುಡಿ ಶ್ರೀ ಶಿವಶರಣಪ್ಪ ಗೊಡಖೆ ಹೆಚ್.ಸಿ 107 ಮತ್ತು ಶ್ರೀ ಜಗದೀಶ್ವರ ಹೆಚ್.ಸಿ 367 ರವರಿಗೆ ನೇಮಕ ಮಾಡಿ ಕಳುಹಿಸಿದ್ದು ಸದರಿಯವರು ಶ್ರೀ ಶರಣಬಸವೇಶ್ವರ ಆವರದಲ್ಲಿ ಕರ್ತವ್ಯ ನಿರ್ವಹಿಸಿಕೊಂಡು ಬಂದಿದ್ದು ನಾನು ಪೇಟ್ರೋಲಿಂಗ್ ಕರ್ತವ್ಯ ನಿರ್ವಹಿಸುತ್ತಾ ಇಂದು ದಿನಾಂಕ 04.12.2017 ರಂದು ಮಧ್ಯಾನ 3:30 ಗಂಟೆಗೆ ಶ್ರೀ ಶರಣಬಸವೇಶ್ವರ ಗುಡಿಯ ಆವರಣದಲ್ಲಿ ಹೋಗಿ ಅಲ್ಲಿ ಇದ್ದ ನಮ್ಮ ಠಾಣೆಯ ಸಿಬ್ಬಂದಿ ಜನರಿಗೆ ವಿಚಾರಿಸುತ್ತಿದ್ದು ಅದೆ ವೇಳೆಗೆ ಗೊದುತಾಯಿ ಕಾಲೋಜ ಗೇಟ ಮುಂದೆ ಒಬ್ಬ ಹುಡುಗ ನಿಂತುಕೊಂಡು ಕಾಲೇಜ ಗೇಟ ದಿಂದ ಹೊರಗೆ ಹೊಗಿಬರುವ ಹೆಣ್ಣು ಮಕ್ಕಳಿಗೆ ನೋಡಿ ಕೀಟಲೆ ಮಾಡುವದು ಮತ್ತು ಹೆಣ್ಣು ಮಕ್ಕಳ ಮರ್ಯಾದೆಗೆ ಅಪಮಾನ ವಾಗುವ ರೀತಿಯಲ್ಲಿ ಕೇಕೆ ಹಾಕುತ್ತಾ ಅಸಭ್ಯವಾಗಿ ವರ್ತನೆ ಮಾಡುವದು ನೋಡಿ ನಾನು ಮತ್ತು ಶ್ರೀ ಶಿವಶರಣಪ್ಪ ಗೊಡಖೆ ಹೆಚ್.ಸಿ 107, ಶ್ರೀ ಜಗದೀಶ್ವರ ಹೆಚ್.ಸಿ 367 ಕೂಡಿಕೊಂಡು ದಾಳಿ ಮಾಡಿ ಸದರಿ ಹುಡುಗನಿಗೆ ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಹೆಸರು ನಿತೀಶ ತಂದೆ ಶ್ರೀಕಾಂತ ಬಬಲೇಶ್ವರ ಸಾ: ಬೊರಾಬಾಯಿ ನಗರ ಬ್ರಹ್ಮಪೂರ ಕಲಬುರಗಿ ಅಂತ ತಿಳಿಸಿದ್ದು ಸದರಿಯವನಿಗೆ ವಶಕ್ಕೆ ಪಡೆದುಕೊಂಡು ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.