POLICE BHAVAN KALABURAGI

POLICE BHAVAN KALABURAGI

03 May 2012

GULBARGA DIST REPORTED CRIMES


ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ :ಶ್ರೀ ನೀರಜ ಕುಮಾರ ಜೈನ ತಂದೆ ಪ್ರೇಮಕೂಮಾರ ಜೈನ್ ಸಾ; ಪ್ಲಾಟ ನಂ:ಎಮ್.ಐ.ಜಿ 03 ಕೆ.ಹೆಚ್.ಬಿ ಕಾಲೋನಿ ಶಾಂತಿನಗರ ಗುಲಬರ್ಗಾರವರು ನಾನು ನನ್ನ ದಿನನಿತ್ಯದ ಕೆಲಸದ ಸಲುವಾಗಿ ನನ್ನ ಪಲ್ಸರ ಕಪ್ಪು ಬಣ್ಣದ ದ್ವಿಚಕ್ರ ವಾಹನ ನಂ:ಕೆಎ-32 ವ್ಹಿ-2398  ನೇದ್ದನ್ನು ದಿನಾಂಕ:27/04/2012 ರಂದು ಮುಂಜಾನೆ 11:00 ಎಎಮ್ ಸುಮಾರಿಗೆ ನಮ್ಮ ಅಂಗಡಿಯ ಎದುರಿಗಡೆ ಗೇಟ ಹ್ತತಿರ ನಿಲ್ಲಿಸಿದ್ದು,  ಮಧ್ಯಾಹ್ನ 4:00 ಪಿಎಮ್ ಕ್ಕೆ ನಾನು ಅಂಗಡಿಯಿಂದ  ಹೊರಗಡೆ ಬಂದಾಗ ನನ್ನ ಅಂಗಡಿಯ ಮುಂದೆ ನಿಲ್ಲಿಸಿದ ಮೋಟರ ಸೈಕಲ್ ಬಜಾಜ ಪಲ್ಸರ ಕಪ್ಪು ಬಣ್ಣದ್ದು ಕೆಎ-32 ವ್ಹಿ-2398 ಚೆಸ್ಸಿ ನಂ:MD2DHDHZZRCL88700 ಇಂಜಿನ ನಂ: DHGBRL86981  ಅ.ಕಿ 30,000 ರೂ.ಗಳ ಕಿಮ್ಮತ್ತಿನ ವಾಹನ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ..ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 32/2012 ಕಲಂ:379 ಐಪಿಸಿ ಪ್ರಕಾರ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DIST REPORTED CRIMES


ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ  ರಾಜೇಶ ತಂದೆ ಸಿದ್ದವೀರಪ್ಪ ಪಾಟೀಲ ಸಾ: ಮನೆ ನಂ: 1-1495/41 ಗೋದುತಾಯಿ ನಗರ ಜೇವರ್ಗಿ ರೋಡ ಗುಲಬರ್ಗಾ ರವರು  ನಾನು ದಿನಾಂಕ: 02-05-2012 ರಂದು ಮಧ್ಯಾಹ್ನ 2=30 ಪಿ.ಎಮ್.ಕ್ಕೆ ಜಗತ ಸರ್ಕಲ್ ದಿಂದ ಎಸ್.ವಿ.ಪಿ.ಸರ್ಕಲ್ ಮೇನ ರೋಡಿನಲ್ಲಿ ಬರುವ ಕೆ.ಬಿ.ಎನ್.ಕಾಂಪ್ಲೇಕ್ಸದಲ್ಲಿರುವ ಅಯ್ಯಂಗಾರ ಬೇಕರಿ ಎದುರು ರೋಡಿನ ಬಾಜು ಕಾರ ನಂ: ಕೆಎ 01 ಎಮ್.ಡಿ. 7585 ನೇದ್ದು ನಿಲ್ಲಿಸಿ ಬೇಕರಿಯಿಂದ ಕೇಕ ತರುವಾಗ ಜಗತ ಸರ್ಕಲ್ ಕಡೆಯಿಂದ ಅಟೋರೀಕ್ಷಾ ನಂ:ಕೆಎ 32-5796   ನೇದ್ದರ ಚಾಲಕ ಸಿದ್ದಣ್ಣ  ತಂದೆ ಶಿವಶರಣಪ್ಪ ಇವರು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಕಾರಿಗೆ   ಡಿಕ್ಕಿ ಪಡಿಸಿ  ಕಾರ ಜಕಂ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 53/2012  ಕಲಂ: 279  ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ:ಶ್ರೀಕಾಂತ ತಂದೆ ಮಲ್ಲಪ್ಪ ಯಂಕ್ಕಂಚಿ ಸಾ|| ಬೋರಾಬಾಯಿ ನಗರ ಬ್ರಹ್ಮಪೂರ ಗುಲಬರ್ಗಾರವರು  ನಾನು ರಾತ್ರಿ 8-45 ಗಂಟೆಯ ಸುಮಾರಿಗೆ ಮನೆಯಲ್ಲಿ ಊಟ ಮಾಡಿ ಸ್ವಾಮಿ ಕಿರಾಣ ಅಂಗಡಿಯ ಮುಂದೆ ಹೋಗುತ್ತಿದ್ದಾಗ, ಎದುರಿನಿಂದ ಇಬ್ಬರು ಅಪರಿಚಿತ ಹುಡುಗರು ಬಂದು ಅವಾಚ್ಯವಾಗಿ ಬೈದು ಚಾಕುವಿನಿಂದ ಹೊಟ್ಟೆಗೆ ಹೊಡೆದು ಹೋಗಿರುತ್ತಾರೆ. ಸದರಿಯವರನ್ನು ನೋಡಿದರೆ ಗುರುತಿಸುತ್ತೇನೆ ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 30/12 ಕಲಂ 341, 323, 324, 504 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ಕ್ರಮಕೈಕೊಂಡೆನು.