POLICE BHAVAN KALABURAGI

POLICE BHAVAN KALABURAGI

20 December 2016

Kalburgi District Reported Crime

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ವಿಠಲ ತಂದೆ ಶರಣಪ್ಪಾ ಸಾಗರ ಸಾ; ಸುಂಠನೂರ ತಾ;ಆಳಂದ ಜಿ;ಕಲಬುರಗಿ ಹಾವ/ ಶರಣಸಿರಸಗಿ ಮಡ್ಡಿ ಅಂಬೇಡ್ಕರ ನಗರ ಕಲಬುರಗಿ  ಇವರು ದಿನಾಂಕ. 19-12-2016 ರಂದು ಅಫಜಲಪೂರ ತಾಲೂಕಿನ ತೆಗ್ಗೆಳ್ಳಿ ಗ್ರಾಮದಲ್ಲಿ ನನ್ನಮಗಳ ನಿಶ್ಚಿತಾರ್ಥ ಕಾರ್ಯಕ್ರಮ ಇದ್ದಕಾರಣ ಕ್ರೋಜರವಾಹನವನ್ನು ಕಟ್ಟಿಕೊಂಡು ನಮ್ಮ ಸಮ್ಮಂದಿಕರು ಮತ್ತು ಬಳಗದವರು ಹಾಗೂ  ಹೀರಾಪೂರ ಮತ್ತು ಶರಣಸಿರಸಗಿವರಿಗೆ ಕರೆದುಕೊಂಡು ತೆಗೆಳ್ಳಿಗೆ ಹೋಗಿ ಕಾರ್ಯಾಕ್ರಮ ಮುಗಿಸಿಕೊಂಡು ಮರಳಿ ಬರುವಾಗ ಕ್ರೋಜರದಲ್ಲಿ ಜಾಗೆ ಸಾಲದಕ್ಕೆ ನಮ್ಮ ಸಮ್ಮಂದಿಕರ ಹೊಂಡಾ ಶೈನ ಮೋಟಾರ ಸೈಕಲ್ ನಂ.ಕೆ.ಎ.32 ಇ.ಇ. 7227 ನೆದ್ದನ್ನು ತೆಗೆದುಕೊಂಡು ನಾನು ಮತ್ತು ನಮ್ಮ ಸಮ್ಮಂದಿಕನಾದ  ಯಲ್ಲಪ್ಪಾ ತಾಯಿ;ನಾಗಮ್ಮ ತಳಕೇರಿ ಸಾ;ಚಿಣಮಗೇರಿ ತಾ;ಅಫಜಲಪೂರ ಹಾವ; ಹೀರಾಪೂರ ಕಲಬುರಗಿ ಇಬ್ಬರು ಕೂಡಿಕೊಂಡು ಮೋಟಾರ ಸೈಕಲ್ ಮೇಲೆ ಬರುತ್ತಿದ್ದು ಮೋಟಾರ ಸೈಕಲ ನಾನು ನಡೆಯಿಸುತ್ತಿದ್ದೆ ಯಲ್ಲಪ್ಪಾ ತಳಕೇರಿ ಇತನು ನನ್ನ ಹಿಂದೆ ಕುಳಿತಿದ್ದನು.  ರಾತ್ರಿ 8-30 ಗಂಟೆಯ ಸುಮಾರಿಗೆ ಅಫಜಲಪೂರ ರೋಡಿನ ಶರಣಸಿರಸಗಿ ಅಂಬೇಡ್ಕರ ಕಾಲೂನಿಯ ಜಂಪ ಹತ್ತಿರ ನಾನು ಮೋಟಾರ ಸೈಕಲನ್ನು ಎಡಗಡೆ ಟರ್ನ ಮಾಡಿಕೊಳ್ಳುವಾಗ ಅದೇವೇಳೆಗೆ ನಮ್ಮ ಹಿಂದಿನಿಂದ ಅಂದರೆ ಅಫಜಲಪೂರ ಕಡೆಯಿಂದ ಒಂದು ಲಾರಿಯ ಚಾಲಕ ತನ್ನ ವಾಹನವನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ನಮ್ಮ ಮೋಟಾರ ಸೈಕಲಗೆ ಡಿಕ್ಕಿ ಹೊಡೆದನು ಇದರಿಂದ ನಾನು ಮೋಟಾರ ಸೈಕಲ್ ಮೇಲಿಂದ ರೋಡಿನ ಎಡಭಾಗದಲ್ಲಿ ಬಿದ್ದೇನು ಮತ್ತು ಯಲಪ್ಪಾ ತಳಕೇರಿ ಇತನು ರೋಡಿನ ಮದ್ಯದಲ್ಲಿ ಬಿದ್ದಾಗ ಸದರಿ ಅಪಘಾತ ಪಡಿಸಿದ್ದ ಲಾರಿಯು ಆತನ ತಲೆಯ ಮೇಲಿಂದ ಹೋಯಿತು ಆಗ ನಾನು ಚೀರುವಷ್ಟರಲ್ಲಿ ಸದರಿ ಲಾರಿಯ ಚಾಲಕ ಸ್ವಲ್ಪ ನಿಲ್ಲಿಸಿದಂತೆ ಮಾಡಿ ತನ್ನ ವಾಹವನ್ನು ನಿಲ್ಲಿಸದೇ  ಹಾಗೆ ಓಡಿಸಿಕೊಂಡು ಹೋದನು . ರಾತ್ರಿ ಕತ್ತಲಿದ್ದ ಪ್ರಯುಕ್ತ ಲಾರಿಯ ನಂಬರ ಸರಿಯಾಗಿ ಕಂಡಿರುವದಿಲ್ಲಾ ಅದರ ಚಾಲಕನಿಗೆ  ಮತ್ತು ಲಾರಿಯನ್ನು ನೋಡಿದಲ್ಲಿ ಗುರ್ತಿಸುತ್ತೇನೆ.   ಈ ಘಟನೆಯಿಂದ ಯಲ್ಲಪ್ಪನ ತಲೆ ಒಡೆದಿದ್ದು ತಲೆಯಿಂದ ಮಾಂಸ ಖಂಡಗಳು ಹೋರಬಂದಿದ್ದು ಮತ್ತು ಬಲಗೈ ಮುಂಗೈ ಹತ್ತಿರ ರಕ್ತಗಾಯ ತರಚಿದಗಾಯಗಳಾಗಿ  ಸ್ಥಳದಲ್ಲಿ ಮೃತ ಪಟ್ಟಿದ್ದನು ಮತ್ತು   ಮತ್ತು ನನಗೆ  ಬಲಗೈ ಅಂಗೈಯಲ್ಲಿ , ಬಲಗಾಲುಮೋಳಕಾಲು ಪಾದದ ಹತ್ತಿರ ತರಚಿದ ರಕ್ತಗಾಯಗಳಾಗಿ ರುತ್ತವೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣಮಾಡಿಕೊಂಡು ಹೋಗಿ ಹಲ್ಲೆ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಮಳೇಪ್ಪ ತಂದೆ ಗುರುಶಾಂತಪ್ಪ ರಾಂಪೂರ ಸಾ|| ಅಫಜಲಪೂರ ರವರು ದಿನಾಂಕ: 31-10-2016 ರಂದು ಸಾಯಂಕಾಲ ನಮ್ಮ ಮನೆಗೆ ಈರಪ್ಪ ತಂದೆ ಗುರುಶಾಂತಪ್ಪ ರಾಂಪೂರೆ ಮತ್ತು ಅವನ ಹೆಂಡತಿ ಜಗದೇವಿ ಗಂಡ  ಈರಪ್ಪ ರಾಂಪೂರೆ ಇಬ್ಬರು ನಮ್ಮ ಮನೆಗೆ ಬಂದು ನಮ್ಮಿಬ್ಬರ ಜೋತೆ ಜಗಳವಾಡಿ ನಿನ್ನ ಹೆಂಡತಿಯನ್ನು ಯಾಕೆ ಮನೆಯೊಳಗೆ ತಗೊಂಡಿದಿಯಾ ನನ್ನಂತವನಾದರೆ ಜೀವ ಹೊಡೆಯುತಿದ್ದೆ ಎಂದು ಜಗಳವಾಡಿ ಹೋಗುವಾಗ ನಿಮ್ಮಿಬ್ಬರ ಜೀವ ಹೊಡೆಸುತ್ತೇನೆ ಎಂದು ಹೋಗಿದ್ದಾನೆ. ಆ ಸಮಯದಲ್ಲಿ ನಮ್ಮ ತಂದೆಯಾದ ಗುರುಶಾಂತಪ್ಪ ರವರು ಮನೆಯಲ್ಲಿಯೇ ಇದ್ದರು ದಿನಾಂಕ 01-11-2016  ರಂದು ರಾತ್ರಿ ನಾನು ನನ್ನ ಹೆಂಡತಿ ಭುವನೇಶ್ವರಿ ಹಾಗು ನಮ್ಮ ಮಕ್ಕಳಾದ ಆಕಾಶ, ಸುವಾಸನಿ, ಅಭಿಷೇಕ ಎಲ್ಲರು ಮನೆಯಲ್ಲಿ ಮಲಗಿಕೊಂಡಾಗ 4 ಜನ ಅಪರಿಚಿತರು ಕಪ್ಪು ಜಾಕೇಟ ಧರಿಸಿದರು ಬಿಳಿ ಸಿಪ್ಟ ಕಾರು ಒಂದು ಶೈನ ಮೋಟಾರ ಬಯ್ಕ ಎಮ್ ಹೆಚ್ 13 ಎವ್ಹಿ 4868 4 ಜನ ಮನೆಯ ಬಾಗಿಲು ತಟ್ಟಿ ನಾವು ಪೊಲೀಸರಿದ್ದೆವೆ ಎಂದರು ನಾನು ಬಾಗಿಲು ತೆರೆದೆ ನಿನನ್ನು ಸಾಹೇಬರು ಬಾ ಎಂದು ಹೇಳಿದ್ದಾರೆ ಎಂದು ಕಾರಿನಲ್ಲಿ ಹಾಕಿಕೊಂಡು ಹೋಗಿದ್ದಾರೆ ಕಾರಿನಲ್ಲಿ 3 ಜನ ಬೈಕಲ್ಲಿ ಒಬ್ಬ ಬಂದಿದ್ದು ಅಲಿಂದ ಸಿಂದಗಿ ತಾಲೂಕು ರಾಂಪುರ ಗ್ರಾಮದ ಹತ್ತಿರ ಸೈಡಲ್ಲಿ ಕಾರನ್ನು ನಿಲ್ಲಿಸಿ ಕಣ್ಣಿಗೆ ಬಟ್ಟೆ ಕಟ್ಟಿದರು ಸ್ವಲ್ಪ ದುರ ಸೈಡಲ್ಲಿ ತಗೊಂಡೊಗಿ ತೊಗರಿ ಹೊಲದಲ್ಲಿ ನನ್ನನ್ನು ಇಡಿ ರಾತ್ರಿ ಕೈ ಕಾಲು ಕಟ್ಟಿ ಇಟ್ಟಿದ್ದಾರೆ ನನ್ನ ಕೈಯಲಿದ್ದ ಒಂದು ತೊಲೆ ಬಂಗಾರದ ಉಂಗುರ ಅಲ್ಲೆ ಎಲ್ಲೋ ಬಿದ್ದಿರುತ್ತದೆ. ದಿನಾಂಕ 02-11-2016 ರಂದು ಬೆಳಿಗ್ಗೆ ನನ್ನನ್ನು ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ತುಂಬಾ ತ್ರಾಸ ಮಾಡಿರುತ್ತಾರೆ ನಿನ್ನ ತಮ್ಮನಾದ ಈರಪ್ಪ ತಂದೆ ಗುರುಶಾಂತಪ್ಪ ರಾಂಪುರ ಐವತ್ತು ಸಾವಿರ ರೂಪಾಯಿಯನ್ನು ಅಡವನ್ಸವಾಗಿ ಕೊಟ್ಟಿದ್ದಾನೆ ಇನ್ನೂ ಉಳಿದ ಹಣ ಎರಡುವರೆ ಲಕ್ಷ ಮದ್ಯಾಹ್ನ ನಂತರ ಕೊಡುತ್ತೇನೆ ಎಂದು ಹೇಳಿದರು ಆ ನಂತರ ರಾತ್ರಿ 9 ಗಂಟೆಗೆ ಟಾ ಟಾ ಸುಮೋದಲ್ಲಿ ಇಬ್ಬರು ನನ್ನನ್ನು ಕರೆದುಕೊಂಡು ಅಫಜಲಪೂರ ತಾಲೂಕಿನ ಗೌರ ಗ್ರಾಮದ ಹತ್ತಿರ ಜೋಳದ ಹೊಲದಲ್ಲಿ ವಿಸವನ್ನು  ಕುಡಿಸಿ ಕುತ್ತಿಗೆಗೆ ಹಗ್ಗವನ್ನು ಹಾಕಿ ಜಗ್ಗಿ ಬಿಟ್ಟು ಹೋಗಿದ್ದಾರೆ ಸ್ವಲ್ಪ ಸಮಯದ ನಂತರ ನನಗೆ ಎಚ್ಚರವಾಗಿದೆ ನಾನು ಅಫಜಲಪೂರಕ್ಕೆ ಬಂದಿದ್ದೆನೆ ರಾತ್ರಿ 12 ಗಂಟೆಗೆ ಉಪೇಂದ್ರ ದವಾಖಾನೆಯಲ್ಲಿ ಚಿಕಿತ್ಸೆ ಪಡೆದಿದ್ದೆನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.