POLICE BHAVAN KALABURAGI

POLICE BHAVAN KALABURAGI

05 May 2014

Gulbarga District Reported Crimes

ಅಪಘಾತ ಪ್ರಕರಣಗಳು :
ಮುಧೋಳ ಠಾಣೆ : ಶ್ರೀ ಗಿರ್ಯಾಪ್ಪ @ ಗಿರೀಶ ತಂದೆ ಬಸವರಾಜ ತೇಲ್ಕೂರ ಸಾ: ಬೊಮ್ಮನ್ನಳ್ಳಿ ತಾ: ಚಿತ್ತಾಪೂರ ಇವರು ದಿನಾಂಕ: 04-05-2014 ರಂದು ಸಾಯಂಕಾಲ 05:30 ಗಂಟೆ ಸುಮಾರಿಗೆ ಖಂಡೇರಾಯನಪಲ್ಲಿ ಕಡೆಯಿಂದ ಅಂದಾಜು 01 ಕಿಮಿ ಅಂತರದಲ್ಲಿರುವ ರಸ್ತೆಯಲ್ಲಿ ಬರುತ್ತಿದ್ದಾಗ, ನಮ್ಮ ಇನೋವಾ ಕಾರನ್ನು ನಡೆಯಿಸುತ್ತಿದ್ದ ಚಾಲಕನಾದ ಖಾಲೀದ ಅಹ್ಮದ ತಂದೆ ಇಬ್ರಾಹಿಮ ಸಾ: ಚಿತ್ತಾಪೂರ ಇತನು ವಾಹನವನ್ನು ಅತಿ ವೇಗವಾಗಿ ಹಾಗು ನಿಷ್ಕಾಳಜಿತನದಿಂದ ನಡುರಸ್ತೆಯಲ್ಲಿ ನಡೆಸುತ್ತಾ ಹೊರಟನು, ಇದೆ ರೀತಿಯಾಗಿ ಮುಧೋಳ ಕಡೆಯಿಂದ ಹೊರಟಿದ್ದ ಟಾಟಾ ಇಂಡಿಕಾ ಕಾರ ನಂ ಎಪಿ-11-ಎನ್ -1037 ನೇದ್ದರ ಚಾಲಕನು ಕೂಡ ಅತಿ ವೇಗವಾಗಿ ಹಾಗು ನಿಷ್ಕಾಳಜಿತನದಿಂದ ನಡು ರಸ್ತೆಯಲ್ಲಿ ನಡೆಯಿಸಿಕೊಂಡು ಬಂದನು. ಮತ್ತು ಎರಡು ವಾಹನದ ಚಾಲಕರು ಒಂದು ವಾಹನವು ಇನ್ನೊಂದು ವಾಹನಕ್ಕೆ ಹೊಗಲು ಸೈಡ್ ಕೊಡಲಾರದೆ ಹಾಗೆ ನಡೆಯಿಸಿಕೊಂಡು ಬಂದಾಗ, ಎರಡು ವಾಹನಗಳು ಪರಸ್ಪರ ಒಂದಕ್ಕೊಂದು ಮುಖಾಮುಖಿ ಡಿಕ್ಕಿ ಹೊಡೆದವು. ಆಗ ನನಗೆ ಸೊಂಟಕ್ಕೆ ಗುಪ್ತಗಾಯವಾಯಿತು, ಮತ್ತು ಎಡಗಣ್ಣಿನ ಹುಬ್ಬಿಗೆ ಒಳಪೇಟ್ಟಾಯಿತು. ಮತ್ತು ಉಳಿದ ನಮ್ಮ ಕಾರಿನಲ್ಲಿದ್ದ ಸಂಗೀತಾ ಗಂಡ ಮಲ್ಲೇಶಿ, ಸಾಬಣ್ಣಾ ತಂದೆ ಮಲ್ಲೇಶಿ, ಶಾಣಮ್ಮ ಗಂಡ ಧರ್ಮಣ್ಣಾ ಇವರಿಗೆ ಗಾಯಗಳು ಮತ್ತು ಭಾರಿಗಾಯಗಳಾದವು ಮತ್ತು ಹೈಯಾಳಿ ತಂದೆ ನಾಗಣ್ಣಾ ಇತನಿಗೆ ಮುಖಕ್ಕೆ, ತಲೆಗೆ ಹಾಗು ಇತರೆ ಕಡೆ, ಭಾರಿಗಾಯಗಳಾಗಿ, ಸ್ಥಳದಲ್ಲಿಯೇ ಮೃತ ಪಟ್ಟನು. ನಾವು ಕುಳಿತು ಹೊರಟಿದ್ದ ಕಾರನ್ನು ನಡೆಯಿಸುತ್ತಿದ್ದ ಖಾಲೀದ ಅಹ್ಮದ ಇತನಿಗು ಕೂಡ ಗಾಯಗಳಾದವು. ನಾನು ಕಾರಿನಿಂದ ಕೆಳಗೆ ಇಳಿದು ಎದುರುಗಡೆ ಹೊರಟಿದ್ದ ಕಾರ ನಂ ಎಪಿ-11-ಎನ್-1037 ನೇದ್ದರಲ್ಲಿ ಕುಳಿತು ಹೊರಟಿದ್ದ ಮಹೀಮೂದ ಖಾನ ತಂದೆ ಫಜಲಖಾನ ಸಾ: ವಿಖಾರಾಬಾದ(ಎಪಿ) ಮಹ್ಮದ ರೀಯಾನ ತಂದೆ ಮಹ್ಮದ ಹಸನ್ನ ವ: 04, ಸಾ; ವಿಖಾರಾಬಾದ ಇವರಿಗೆ ಭಾರಿಗಾಯಗಳಾಗಿ ಸ್ಥಳದಲ್ಲಿಯೇ ಮೃತ ಪಟ್ಟರು. ಸದರಿ ವಾಹನದ ಚಾಲಕನಾದ ಫಜಲ್ ಖಾನ ತಂದೆ ಮಹೀಮೂದ ಖಾನ ಸಾ: ವಿಖಾರಾಬಾದ ಇವನಿಗು ಕೂಡಾ ಭಾರಿಗಾಯಗಳಾಗಿ ಸ್ಥಳದಲ್ಲಿಯೇ ಮೃತ ಪಟ್ಟನು. ಹಾಗು ಹೆಣ್ಣುಮಕ್ಕಳಾದ ಆಹಿಷಾ ಬೇಗಂ ಗಂಡ ಮಹೇಮೂದ ಅಲಿ ಖಾನ ಸಾ: ವಿಖಾರಾಬಾದ ಮತ್ತು ಮಹೇರುನಿಸ್ಸಾ ಗಂಡ ಸಲಾಹುದ್ದಿನ ಸಾ: ವಿಖಾರಾಬಾದ ಹಾವ; ಕಡತಾಳ ತಾ: ಸೇಡಂ ಇವರಿಗೆ ಭಾರಿಗಾಯಗಳಾಗಿ ಸ್ಥಳದಲ್ಲಿ ಭೆಹೋಷಗಾಗಿ ಬಿದಿದ್ದರು, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಹೆಚ್ಚುವರಿ ಸಂಚಾರಿ : ಭಾರತಿ ಗಂಡ ಮಹಾದೇವ ಚವ್ವಾಣ  ಸಾ: ಹಾವನೂರ ತಾ:ಅಫಜಲಪೂರ ಹಾ:ವ; ಜಿ.ಡಿ.ಎ ಲೇ ಔಟ ಎಮ್.ಎಸ್.ಕೆ.ಮಿಲ್ ಗುಲಬರ್ಗಾ ರವರು ದಿನಾಂಕ: 04-05-2014 ರಂದು ಮಧ್ಯಾಹ್ನ 3=00 ಗಂಟೆಗೆ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಇರುವ ಕಪಿಲಾ ಲಾಡ್ಜ ಎದುರಿನ ರೋಡ ಮೇಲೆ ತಮ್ಮ ಗಂಡನಾದ ಮಾಹಾದೇವ ಇವರು ತನ್ನ ಮನೆಗೆ ಹೋಗಬೇಕೆಂದು ಅಟೋರೀಕ್ಷಾ ಸಂಬಂದವಾಗಿ ಕಪಿಲಾ ಲಾಡ್ಜ ಎದುರಿನ ರೋಡ ದಾಟುತ್ತಿದ್ದಾಗ ಎಮ್.ಎಸ್.ಕೆ.ಮಿಲ್ ರೋಡ ಕಡೆಯಿಂದ ಟಂಟಂ ನಂ;ಕೆಎ 32 ಸಿ 1378 ರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಅಪಘಾತಮಾಡಿ ಗಾಯಗೊಳಿಸಿ ತನ್ನ ವಾಹನ ಸಮೇತ ಹೊರಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ : ದಿನಾಂಕ 04-05-2014  ರಂದು ಬೆಳಿಗ್ಗೆ 10-30 ಗಂಟೆ ಸುಮಾರಿಗೆ ನಮ್ಮೂರಿನ  ಅಣ್ಣಾರಾವ ತಂದೆ ಮಲ್ಕಪ್ಪ ಪಾಟೀಲ ಇವರ ಮಗ ಮಂಜುನಾಥ ಇತನಿಗೆ ಹೆಣ್ಣು ನೋಡುವ ಸಂಬಂಧ ಜೇವರ್ಗಿ ಕ್ರಾಸ ಗುಲಬರ್ಗಾ ಹತ್ತಿರ ಇರುವ ಎನ್.ಜಿ.ಓ. ಕಾಲನಿ ನಿವಾಸಿತನಾದ ಬಸವರಾಜ ಸಾ:ಸೇಡಂ ಇವರ ಮಗಳಿಗೆ ನೋಡಲು ನಮ್ಮೂರಿನ ರಾಘವೇಂದ್ರ ತಂದೆ ಮಲ್ಲೇಶಪ್ಪ ಕಂಠಿಕರ ಇವರ ಕ್ರೋಜರ ಕೆಎ 32 ಬಿ 4424 ನೇದ್ದು ಕಟ್ಟಿದ್ದು,  ಅದರಲ್ಲಿ ನಾನು ಮತ್ತು ನಮ್ಮೂರಿನ ಅಣ್ಣಾರಾವ ತಂದೆ ಮಲ್ಕಪ್ಪ ಪಾಟೀಲ್,  ಅವರ ಮಗ  ಮಂಜುನಾಥ, ಮೈನಾಬಾಯಿ ಗಂಡ ಅಣ್ಣಾರಾವ ಪಾಟೀಲ, ವೀರಣ್ಣಾ ತಂದೆ ಗುಂಡಪ್ಪ ಪಾಟೀಲ್, ಮಲ್ಲಮ್ಮಾ ಗಂಡ ಮಲ್ಲಣ್ಣಾ ನಂದಿ ಸಾ:ಮಾಹಾಗಾಂವ ಕ್ರಾಸ, ಶರಣಬಸಪ್ಪ ತಂದೆ ಶಿವಲಿಂಗಪ್ಪ ಮಾಲಿಪಾಟೀಲ, ರವಿ @ ರಾಜಕುಮಾರ ತಂದೆ ಭೀಮಶ್ಯಾ ನಾಯಿಕೋಡಿ, ಜಗದೇವಪ್ಪ ತಂದೆ ಚನ್ನಬಸಪ್ಪ ಯರಭಾಗ, ಸುಜಾತಾ ಗಂಡ ಶ್ರೀಶೈಲ ಬಿರಾದಾ, ಆಶ್ವಿನಿ ತಂದೆ ರಾಜಶೇಖರ ಪಾಟೀಲ, ಉಮಾದೇವಿ ಗಂಡ ಶರಣಬಸಪ್ಪ ಪಾಟೀಲ, ನಿರಂಜನ ತಂದೆ ಶರಣಬಸಪ್ಪ ಪಾಟೀಲ, ಚಿತಂಬರಾವ ತಂದೆ ಬಾಪುರಾವ ಪಾಟೀಲ ಸಾ:ಜನವಾಡ, ರಾಜಶೇಖರ ತಂದೆ ಅಣ್ಣೆಪ್ಪ ಪಾಟೀಲ್, ಎಲ್ಲರೂ ಕ್ರೋಜರದಲ್ಲಿ ಕುಳಿತುಕೊಂಡಾಗ, ರಾಘವೇಂದ್ರ ಕಂಠಿಕರ ಇತನು ಕ್ರೋಜರ ಚಲಾಯಿಸುತ್ತಿದ್ದು,  ನಮ್ಮೂರಿನಿಂದ ಗುಲಬರ್ಗಾಕ್ಕೆ ಹೋಗಿ ಹೆಣ್ಣು ನೋಡಿ ವಾಪಸ್ಸು ಹರಕಂಚಿಗೆ ಬರುವ ಕುರಿತು ಈ ಮೇಲಿನ ಎಲ್ಲಾ ಜನರು ಕ್ರೋಜರನಲ್ಲಿ ಕುಳಿತುಕೊಂಡು ಗುಲಬರ್ಗಾದಿಂದ ಮಧ್ಯಾಹ್ನ 1-30 ಗಂಟೆ ಸುಮಾರಿಗೆ ಹೊರಟಿದ್ದುಮಧ್ಯಾಹ್ನ 2-15  ಗಂಟೆ ಸುಮಾರಿಗೆ ಅವರಾದ ಗ್ರಾಮ ದಾಟಿ  ಮುಂದೆ ಇರುವ ಬ್ರೀಡ್ಜ ದಾಟಿ ಸ್ವಲ್ಪ ಮುಂದೆ ರೋಡಿನ ಎಡಗಡೆಯಿಂದ ತನ್ನ ಸೈಡ ಹಿಡಿದುಕೊಂಡು  ಹೊರಟಾಗ, ಆಗ ಎದುರುನಿಂದ ಹುಮನಾಬಾದ ರೋಡ ಕಡೆಯಿಂದ ಒಬ್ಬ ಟಾಟಾ ಸೋಮು ಚಾಲಕನು ತನ್ನ ವಶದಲ್ಲಿದ್ದ ವಾಹವನ್ನು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ಹಾಗೂ ಅಡ್ಡಾ ತಿಡ್ಡಿಯಾಗಿ ನಡೆಸುತ್ತಾ ಬಂದವನೇ ತನ್ನ ಸೈಡಿಗೆ ಹೋಗದೇ ನಮ್ಮ ಸೈಡಿಗೆ ಬಂದು ನಾವು ಕುಳಿತ ಕ್ರೋಜರಕ್ಕೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದರಿಂದ, ಡಿಕ್ಕಿ ಹೊಡೆದ ರಸಭಕ್ಕೆ ನಮ್ಮ ಕ್ರೋಜರ ರೋಡಿನ ಎಡಗಡೆ ಇರುವ ಗಿಡಕ್ಕೆ ಬಡಿದು ರೋಡಿನ ತೆಗ್ಗಿನಲ್ಲಿ ಬಿದ್ದಿತ್ತು. ನಾವೆಲ್ಲಾ ಜನರು ಹೊರೆಗೆ ಬಂದು ನನ್ನ ಮೈ ನೋಡಿಕೊಳ್ಳಲು ನನಗೆ ಎರಡು ಕಣ್ಣಿನ ಮಧ್ಯದ ಮೂಗಿನ ಮೇಲೆ, ಹಣೆಯ ಮೇಲೆ ರಕ್ತಗಾಯಗಳಾಗಿದ್ದು, ಬಲ ಭುಜಕ್ಕೆ ಒಳಪೆಟ್ಟಾಗಿರುತ್ತದೆ. ಕ್ರೋಜರನಲ್ಲಿದ್ದ ಈ ಮೇಲಿನ 14 ಜನರಿಗೂ ಕೂಡಾ ತ್ರೀವ ಮತ್ತು ಸಾದಾ ಸ್ವರೂಪದ ರಕ್ತಗಾಯ ಮತ್ತು ಗಾಯಗಳಾಗಿದ್ದು, ಕ್ರೋಜರ ಚಾಲಕನಿಗೆ ಯಾವುದೇ ಗಾಯಗಳಾಗಿದ್ದು ಕಂಡು ಬಂದಿರುವುದಿಲ್ಲಾ. ನಮಗೆ ಡಿಕ್ಕಿ ಹೊಡೆದ ಟಾಟಾ ಸೋಮು ವಾಹನ ನಂಬರ ನೋಡಲಾಗಿ  ಕೆಎ 32 ಎಂ 4912 ಇತ್ತು ಅದು ಸಿಲ್ವರ ಬಣ್ಣದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ಶ್ರೀ ಬಾಬುರಾವ ತಂದೆ ಸುಬಾಷ ಪರೀಟ್‌ ಸಾ:ನದಿಶಿನ್ನೂರ ತಾ:ಜಿ:ಗುಲಬರ್ಗಾ ಇವರ ತಂದೆಯಾದ ಬಸವರಾಜ ತಂದೆ ಈರಣ್ಣಾ ಸಾ : ನದಿಸಿನ್ನೂರ ಇವರು ದಿನಾಂಕ: 03-05-2014  ರಂದು ರಾತ್ರಿ 8 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ಭಾರತೀಯ ವಿದ್ಯಾ ಕೇಂದ್ರದ ಹತ್ತಿರ ರೋಡಿನ ಮೇಲೆ ಮೋಟರ್‌ ಸೈಕಲ್‌ ನಂ. ಕೆಎ 33 ಇ-776 ನೇದ್ದರ ಮೇಲೆ ಗುಲಬರ್ಗಾ ಕಡೆಯಿಂದ ಬರುತ್ತಿರುವ  ಇಬ್ಬರಿಗೆ ಯಾವುದೋ ಒಂದು ಮೋಟರ್‌ ಸೈಕಲ್‌‌ ಚಾಲಕನು ತನ್ನ ಮೋಟರ್‌ ಸೈಕಲ್‌ ಅತಿವೇಗ ಮತ್ತು ಆಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಪಡಿಸಿರುತ್ತಾನೆ ಇದರಿಂದ ಅವರಿಗೆ ಹಣೆಗೆ, ತಲೆಗೆ,ಕುತ್ತಿಗೆಗೆ,ಮುಖಕ್ಕೆ, ಗಾಯಗಳಾಗಿರುತ್ತವೆ. ಅವರಿಬ್ಬರಿಗೆ 108 ಅಂಬ್ಯುಲೆನ್ಸನಲ್ಲಿ ಹಾಕಿ ಗುಲಬರ್ಗಾದ ಯುನೆಟೇಡ್ ಆಸ್ಪತ್ರೆಗೆ ಕಳಿಸುತ್ತಿದ್ದೆವೆ ಅಂತಾ ತಿಳಿಸಿದ್ದರಿಂದ ಗಾಬರಿಗೊಂಡು ನಾನು ಮತ್ತು ನಮ್ಮ ತಾಯಿ ಮಲ್ಲಮ್ಮ ಹಾಗೂ ಬಸವರಾಜನ ಮಗ ಎಲ್ಲರೂ ಕೂಡಿಕೊಂಡು ಒಂದು ಖಾಸಗಿ ವಾಹನದಲ್ಲಿ ಗುಲಬರ್ಗಾದ ಕಾಮರೆಡ್ಡಿ ಆಸ್ಪತ್ರೆಗೆ ಬಂದು ನೋಡಲಾಗಿ ನಮ್ಮ ತಂದೆ ಹಣೆಗೆ ಭಾರಿ ರಕ್ತಗಾಯ,ಎಡಗಡೆ ಕಣ್ಣಿನ ಹುಬ್ಬಿಗೆ ರಕ್ತಗಾಯ, ಮುಖಕ್ಕೆ ತರಿಚಿದ ಗಾಯವಾಗಿದ್ದಲ್ಲದೆ ತಲೆಗೆ ಒಳಪೆಟ್ಟಾಗಿರುತ್ತವೆ, ನಮ್ಮ ತಂದೆ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ, ನಂತರ ಬಸವರಾಜ ಇತನಿಗೆ ವಿಚಾರಿಸಲಾಗಿ ನಾನು ಮತ್ತು ನಿಮ್ಮ ತಂದೆ ಗುಲಬರ್ಗಾದಲ್ಲಿ ಬಟ್ಟೆ ಖರಿದಿಸಿ ಮರಳಿ ಊರಿಗೆ ಬರುವ ಸಲುವಾಗಿ ಗುಲಬರ್ಗಾದಿಂದ ರಾತ್ರಿ 7:30 ಗಂಟೆಯ ಸುಮಾರಿಗೆ ಬಿಟ್ಟು 8 ಗಂಟೆಯ ಸುಮಾರಿಗೆ ರಾಷ್ರ್ಟೀಯ ಹೆದ್ದಾರಿ 218 ರಸ್ತೆಯ ಮೇಲೆ ಭಾರತೀಯ ವಿದ್ಯಾ ಕೇಂದ್ರ ಹತ್ತಿರ ಹೊಗುತ್ತಿದ್ದಾಗ ನಮ್ಮ ಎದುರುಗಡೆಯಲ್ಲಿ ಒಂದು ಲಾರಿ ಬರುತ್ತಿತ್ತು ಲಾರಿಯ ಲೈಟಿನ ಬೆಳಕು ನನ್ನ ಕಣ್ಣಿನ ಮೇಲೆ ಬಿದ್ದು ಕಣ್ಣು ಕುಕ್ಕುತ್ತದ್ದರಿಂದ ನಾನು ನನ್ನ ಗಾಡಿಯನ್ನು ರೋಡಿನ ಎಗಡೆಯಲ್ಲಿ ಸಾವಕಾಶವಾಗಿ ನಡೆಯಿಸಿಕೊಂಡು ಹೋಗುತ್ತಿದ್ದೆನು. ಲಾರಿಯ ಹಿಂದಗಡೆಯಿಂದ ಒಬ್ಬ ಮೋಟರ್‌ ಸೈಕಲ್‌ ಚಾಲಕನು ತನ್ನ ಗಾಡಿಯನ್ನು ಅತಿವೇಗ ಮತ್ತು ಆಲಕ್ಷ್ಯತನದಿಂದ ನಡೆಯಿಸಿಕೊಂಡು ಲಾರಿಗೆ ಓವರಟೇಕ ಮಾಡುತ್ತಾ ಬಂದು ನಮ್ಮ ಗಾಡಿಗೆ ಡಿಕ್ಕಿ ಪಡಿಸಿರುತ್ತಾನೆ, ಡಿಕ್ಕಿ ಪಡಿಸಿ ಆ ಗಾಡಿ ಚಾಲಕನು ನಿಲ್ಲಿಸಿ ನಂತರ ರೋಡಿನ ಮೇಲೆ ಹೋಗಿ ಬರುವ ಜನರು ಬೈಯುತ್ತಿದ್ದರಿಂದ ತನ್ನ ಗಾಡಿಯನ್ನು ಓಡಿಸಿಕೊಂಡು ಹೋಗಿರುತ್ತಾನೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಭಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ  04-05-2014 ರಂದು ಸಾಯಂಕಾಲ ನನ್ನ ಹೆಂಡತಿ ದುಂಡಮ್ಮ ಇವಳು ನಮ್ಮ ಮನೆಯ ಬಾಜು ಇದ್ದ ಲಕ್ಷ್ಮಣ ಮಾಗಣಗೇರಿ ಇವರ ಜಾಗದಲ್ಲಿ ಕಟ್ಟಿಗೆಯನ್ನು ಹಾಕಿದ್ದು, ಸದರಿ ಕಟ್ಟಿಗೆಯನ್ನು ತಗಿ ಅಂತಾ ಲಕ್ಷ್ಮಣ ಮಾಗಣಗೇರಿ ಮತ್ತು ಮಲ್ಲಪ್ಪ ಮಾಗಣಗೇರಿ, ಬೂತಾಳಿ ಮಾಗಣಗೇರಿ ಇವರು ಕಾಂತು ಮಾಗಣಗೇರಿ ಈತನ ಪ್ರಚೋದನೆಯಿಂದ ನಮ್ಮ ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ, ನನ್ನ ಹೆಂಡತಿಗೆ ಅವಾಚ್ಯವಾಗಿ ಬೈದು, ಕೈಯಿಂದ ನನ್ನ ಹೆಂಡತಿಯ ಎದೆಯ ಮೇಲೆ ಹಾಗೂ ಕುತ್ತಿಗೆ ಮೇಲೆ ಹೊಡೆದು ಎ್ಲಲರೂ ಸ್ವ ಇಚ್ಚೆಯಿಂದ ತಿವ್ರಗಾಯ ಪಡಿಸಿ, ಜೀವ ಬೇದರಿಕೆ ಹಾಕಿರುತ್ತಾರೆ ಅಂತಾ ಶ್ರೀ ಶಾಂತಪ್ಪಾ ತಂದೆ ನಿಂಗಪ್ಪಾ ಗೌರ ಸಾ : ನಂದರ್ಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾವು ಕಚ್ಚಿ ಸಾವು ಪ್ರಕರಣ :
ಅಫಜಲಪೂರ ಠಾಣೆ : ನಾಂಕ 03-05-2014  ರಂದು ರಾತ್ರಿ 10:30 ಗಂಟೆಗೆ ಭೀಮಶಾ ಕಟ್ಟಿಮನಿ ಈತನು ಶ್ರೀ ಲಗಸಪ್ಪಾ ತಂದೆ ಹಿರಗಪ್ಪಾ ಕಟ್ಟಿಮನಿ ಸಾ ಬಿಲ್ವಾಡ ಕೆ. ರವರ ಮನೆಯ ಮೋಬೈಲ್ ಫೋನ್ ಗೆ ಕರೆ ಮಾಡಿ ತಿಳಿಸಿದ್ದೇನೆಂದರೆ ರಾತ್ರಿ 8:00 ಗಂಟೆಯ ಸುಮಾರಿಗೆ ಊಟಮಾಡಿ ಜೊಪಡಿಯಲ್ಲಿ ಮಾತನಾಡುತ್ತಾ ಕುಳಿತಾಗ ನಿಮ್ಮ ಮಗ ಮಹಾಂತಪ್ಪನ ಎಡಗೈಗೆ ಹಾವು ಕಚ್ಚಿದೆ ನಾವು ಅವನಿಗೆ ನಾಟಿ ಔಷದಿ ಕುಡಿಸಲು ಬಂಕಲಗಿ ಗ್ರಾಮಕ್ಕೆ ಕರೆದುಕೊಂಡು ಹೋಗುತ್ತಿದ್ದೇವೆ ನೀವು ಬನ್ನಿ ಅಂತ ಹೇಳಿದ ನಂತರ ನಾನು ಮತ್ತು ನನ್ನ ಮಕ್ಕಳನ್ನು ಕರೆದುಕೊಂಡು ಸದರಿ ಬಂಕಲಗಿ ಗ್ರಾಮಕ್ಕೆ ಹೋದೆವು ಅಲ್ಲಿ ನನ್ನ ಮಗನ ಎಡಗೈ ನಡು ಬೆರಳಿನ ಹತ್ತಿರ ಹಾವು ಕಚ್ಚಿರುವ ಗಾಯವಿತ್ತು ಆದರೆ ನನ್ನ ಮಗ ಮಾತನಾಡುವ ಸ್ಥೀತಿಯಲ್ಲಿರಲಿಲ್ಲ. ವಾಹನ ಸೌಕರ್ಯ ಇಲ್ಲದ ಕಾರಣ ಬೆಳಗಿನ ಜಾವ ಒಂದು ಖಾಸಗಿ ವಾಹನದಲ್ಲಿ ಸದರಿ ನನ್ನ ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗ ಮದ್ಯದಲ್ಲಿ ನನ್ನ ಮಗ ಮೃತಪಟ್ಟಿರುತ್ತಾನೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :

ಮುಧೋಳ ಠಾಣೆ : ಶ್ರೀ ಸಂಗಪ್ಪ ತಂದೆ ಚಂದ್ರಪ್ಪ ಘಾಣಿಗೇರ್ ಸಾ: ಆಡಕಿ ಗ್ರಾಮ ತಾ: ಸೇಡಂ ಇವರ ತಂಗಿಯಾದ ವಿಜಯಲಕ್ಷ್ಮಿ ಗಂಡ ರಾಜು ಘಾಣಿಗೇರ ಇವರಿಗೆ ಆಂದ್ರ ಪ್ರದೇಶದಲ್ಲಿ ನಾವದಗಿ ಗ್ರಾಮಕ್ಕೆ ಕೊಟ್ಟಿರುತ್ತೇವೆ ಸದರಿಯವಳಿಗೆ 3 ಜನ ಮಕ್ಕಳಿದ್ದು, ನನ್ನ ತಂಗಿಯ ಮಗಳಾದ ಕು. ಸ್ವಪ್ನ ತಂದೆ ರಾಜು ವ: 16 ವರ್ಷ ಇವಳು 10 ನೇ ತರಗತಿಯ ಪರೀಕ್ಷೆಯನ್ನು ಮುಗಿಸಿದ ನಂತರ ಶಾಲೆಯ ರಜೆಗಳು ಇದ್ದ ಕಾರಣ ಈಗ ಸುಮಾರು 15 ದಿವಸಗಳ ಹಿಂದೆ ಆಡಕಿ ಗ್ರಾಮದಲ್ಲಿರುವ ನಮ್ಮ ಮನೆಯಲ್ಲಿ ಬಂದು ಉಳಿದುಕೊಂಡಿರುತ್ತಾರೆ. ದಿನಾಂಕ: 03.05.2014 ರಂದು ರಾತ್ರಿ 22:30 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಮನೆಯವರು ಮನೆಯಲ್ಲಿದ್ದೇವು ಮತ್ತು ಈ ವೇಳೆಯಲ್ಲಿ ಕರೆಂಟು ಹೊಗಿ ಕತ್ತಲಾಗಿತ್ತು, ಆಗ ನನ್ನ ತಂಗಿಯ ಮಗಳಾದ ಕುಮಾರಿ ಸ್ವಪ್ನ ಇವಳು ನನಗೆ ಮನೆಯಲ್ಲಿ ಧಗೆಯಾಗುತ್ತಿದೆ, ನಾನು ಮನೆಯ ಹೊರಗೆ ಇರುವ ಮನೆಯ ಮುಂದಿನ ಕಟ್ಟೆಯ ಮೇಲೆ ಕುಡುತ್ತೇನೆ ಅಂತಾ ಹೇಳಿ ಹೊದಳು, ಸದರಿಯವಳು ಬಹಳ ಸಮಯವಾದರು ಮನೆಯಲ್ಲಿ ಬರಲಾರದ ಕಾರಣ ಯಾಕೆ ಬರಲಿಲ್ಲಿ ಅಂತಾ ನಾನು ಮತ್ತು ನನ್ನ ತಂದೆಯಾದ ಭದ್ರಪ್ಪ, ತಮ್ಮನಾದ ಮಲ್ಲಿಕಾರ್ಜುನ ಹಾಗು ದೊಡ್ಡನಾದ ಶರಣಪ್ಪ ಇವರು ಕೂಡಿ ಮನೆಯಿಂದ ಹೊರಗೆ ಬಂದು ಕಟ್ಟೆಯ ಮೇಲೆ ನೋಡಲು ನಮ್ಮ ತಂಗಿಯ ಮಗಳಾದ ಸ್ವಪ್ನ ಇವಳು ಇರಲಿಲ್ಲಾ. ಆಗ ಇವಳಿಗೆ ಹುಡುಕಾಡುತ್ತಾ ಊರಲ್ಲಿ ತಿರುಗಾಡಿದೇವು ಸಿಗಲಿಲ್ಲಾ. ನಂತರ ನಮ್ಮೂರದಿಂದ ಮೈಲ್ವಾರ ಕಡೆ ಹೊಗುವ ಅಂದಾಜು 02 ಕಿಮಿ ಅಂತರದ ರಸ್ತೆಯಲ್ಲಿ ಹುಡುಕಾಡುತ್ತಾ ಹೊಗುವ ಕಾಲಕ್ಕೆ ಈ ರಸ್ತೆಯಲ್ಲಿ ಒಂದು ಆಟೋ ಟಂಟಂ ನಂ ಕೆಎ/32-ಬಿ-0276 ನೇದ್ದು ನಿಂತಿತ್ತು. ಸದರಿ ಆಟೋ ಬಲಿ ಯಾರು ಇರಲಿಲ್ಲಾ. ಸದರಿ ಆಟೋ ನಮ್ಮೂರಿನ ದೇವಪ್ಪ ತಂದೆ ಶಿವಣ್ಣಾ ಕೋತಿ ಇವರ ಆಟೋ ಇತ್ತು, ಮತ್ತು ನಮಗೆ ಅನುಮಾನ ಬಂದು ಪುನಃ ಆಡಕಿಯಲ್ಲಿ ಬಂದು ದೇವಪ್ಪನ ಮನೆಗೆ ಹೊಗಿ ನೋಡಲು ಇತನು ಕೂಡ ತನ್ನ ಮನೆಯಲ್ಲಿ ಇರಲಿಲ್ಲಾ. ಮತ್ತೆ ಅಲ್ಲಿ ಇಲ್ಲಿ ಹುಡುಕಾಡಿದೇವು. ಇಂದು ದಿನಾಂಕ: 04-05-2014 ರಂದು ಮುಂಜಾನೆ ಸದರಿ ಆಟೋ ನಿಂತ ಸ್ಥಳಕ್ಕೆ ಹೊಗಿ ನೋಡಿದೇವು ಆಗ ಆಟೋ ಹತ್ತಿರ ನಮ್ಮುರಿನ ಭೀಮರೆಡ್ಡಿ ತಂದೆ ಬಸರೆಡ್ಡಿ ಇತನು ಬಂದನು. ಸದರಿಯವನಿಗೆ ವಿಚಾರಿಸಿದಾಗ ನನಗೆ ತಿಳಿಸಿದೇನೆಂದರೆ, ನಿನ್ನ ತಂಗಿಯ ಮಗಳಾದ ಸ್ವಪ್ನ ಇವಳಿಗೆ ಆಡಕಿ ಗ್ರಾಮದ ದೇವಪ್ಪ ತಂದೆ ಶಿವಣ್ಣ ಕೋತಿ ಎಂಬುವವನು ತನ್ನ ಆಟೋದಲ್ಲಿ ಕುಡಿಸಿಕೊಂಡು ಯಾವುದೋ ಉದ್ದೇಶದಿಂದ ಅಪಹರಣ ಮಾಡಿಕೊಂಡು ಬಸೀರಾಬಾದ ರೈಲ್ವೆ ನಿಲ್ದಾನದಿಂದ ಹೊಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.