POLICE BHAVAN KALABURAGI

POLICE BHAVAN KALABURAGI

23 December 2011

GULBARGA DIST REPORTED CRIMES

ಮುಂಜಾಗ್ರತೆ ಕ್ರಮ:
ಬ್ರಹ್ಮಪೂರ ಠಾಣೆ:
ಶ್ರೀ.ರಾಜಕುಮಾರ ಪೊಲೀಸ್ ಪೇದೆ ಬ್ರಹ್ಮಪೂರ ಪೊಲೀಸ ಠಾಣೆ ಗುಲಬರ್ಗಾರವರು ನಾನು ದಿನಾಂಕ: 23/12/2011 ರಂದು ಸಾಯಂಕಾಲ ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ ಕರ್ತವ್ಯ ಕುರಿತು ಹೊರಟು ತಹಶೀಲ ಕಾರ್ಯಾಲಯದ ಹತ್ತಿರ 7-00 ಗಂಟೆಯ ಸುಮಾರಿಗೆ ಹೋದಾಗ ಒಬ್ಬ ವ್ಯಕ್ತಿ ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಯಾವುದೇ ಕಾರಣ ಇಲ್ಲದೆ ಹೋಗಿ ಬರುವ ಸಾರ್ವಜನಿಕರಿಗೆ ಬೈಯುವದು, ಹೊಡೆಯಲ್ಲಿಕೆ ಹೋದಂತೆ ಮಾಡುವದು, ಮಾಡಿ ಭಯಾನಕ ರೀತಿಯಿಂದ ರೌಡಿ-ಗುಂಡಾನಂತೆ ವರ್ತಿಸುತ್ತಿದ್ದು ಸಾರ್ವಜನಿಕ ಶಾಂತತೆಯನ್ನು ಹಾಳು ಮಡುವುದನ್ನು ಕಂಡು ಅವನನ್ನು ಹಿಡಿದು ಹೆಸರು ವಿಚಾರಿಸಲಾಗಿ ಕುಪ್ಪಣ್ಣ ತಂದೆ ದುರ್ಗಪ್ಪ ಆನಗಳಿ, ವಯ 26, ಉ ಕೂಲಿ ಕೆಲಸ, ಸಾ ಪಾಶಾಪೂರ ಯಾದುಲ್ಲಾ ಕಾಲೋನಿ ಗುಲಬರ್ಗಾ ಅಂತಾ ತಿಳಿದು ಬಂದ ಮೇರೆಗೆ ಠಾಣೆಗ ಕರೆ ತಂದು ವರದಿ ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ: 122/2011 ಕಲಂ 324, 504, 307 ಐಪಿಸಿ ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಕೊಲೆ ಪ್ರಯತ್ನ ಪ್ರಕರಣ:
ಚಿತ್ತಾಪೂರ ಠಾಣೆ:
ಶ್ರೀ ಮೊಹಮ್ಮದ ಅಯ್ಯುಬ ತಂಧೆ ಅಬ್ದುಲ್ಲಾ ಮೆಮಾರ ವ-44 ಸಾ ತೀನ ಮಳಗಿ ಚಿತ್ತಾಪೂರ ರವರು ನಾನು ಮತ್ತು ನನ್ನ ತಮ್ಮ ಹಾಗು ಮಗನ ಸಂಗಡ ಫಾರೂಕ ಬಾಜೆ ರವರ ಮನೆಯ ಮುಂದೆ ರೋಡಿನ ಮೇಲೆ ನಿಂತಾಗ ಯೂಸೂರ್ಫ ತಂದೆ ಖಾಸಿಂಸಾಬ ಗೌಂಡಿ ಯೂನೂಸ್ ತಂದೆ ಖಾಸಿಂಸಾಬ ಗೌಂಡಿ, ಯಾಸೀನ @ ಪಪ್ಪು ತಂದೆ ಸತ್ತಾರಗೌಂಡಿ ರವರು ಅವಾಚ್ಯವಾಗಿ ಬೈದು ನೀನು ನಿನ್ನೆ ನನ್ನ ಹೆಂಡತಿಗೆ ನಿನ್ನ ಹೆಂಡತಿ ಕಡೆಯಿಂದ ಬೈಸುತ್ತೀ ಇವತ್ತು ನಿನಗೆ ಬಿಡುವದಿಲ್ಲಾ ಅಂತ ಯೂಸೂಫ್ ನು ತಕ್ಕೆಯಲ್ಲಿ ಹಿಡಿದಿದ್ದು ಯೂನೂಸ್ ಇವನು ಚಾಕುವಿನಿಂದ ಅಯ್ಯುಬ ಮತ್ತು ಅಬ್ದುಲ ವಾಹೇದ ರವರಿಗೆ ಚಾಕುವಿನಿಂದ ಹೊಡೆದು ಗಾಯಪಡಿಸಿ ಕೊಲೆ ಮಾಡಲು ಪ್ರಯತ್ನ ಮಾಡಿದ್ದು ಮತ್ತು ಅಬ್ದುಲ ಮಲಿಕ ಇವನಿಗೆ ಕಲ್ಲಿನಿಂದ ಹೊಡೆದು ತಲೆಗೆ ಪೆಟ್ಟುಪಡಿಸಿದ್ದು ಸದರಿಯವರು ಹೆಣ್ಣು ಮಕ್ಕಳು ನೀರು ತುಂಬವಲ್ಲಿ ಜಗಳ ಮಾಡಿದ್ದಕ್ಕೆ ವೈಷಮ್ಯ ಬೆಳೆಸಿ ಹೊಡೆ ಬಡೆ ಮಾಡಿ ಕೊಲೆ ಮಾಡಲು ಪ್ರಯತ್ನ ಮಾಡಿದವರ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕೆಂದು ಅಂತಾ ದೂರು ಸಲ್ಲಿಸಿದ ಮೇಲಿಂದ ಠಾಣೆ ಗುನ್ನೆ ನಂ 122/2011 ಕಲಂ 324,504,307 ಸಂಗಡ 34 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ :
ಶ್ರೀ ಸೋಮಯ್ಯ ತಂದೆ ಲಿಂಗಯ್ಯ ಹಿರೇಮಠ ಸಾಃ ಮಹಾಲಕ್ಷ್ಮೀ ಲೇಔಟ್ ಗುಲಬರ್ಗಾರವರು ನಾನು ದಿನಾಂಕ: 23-12-2011 ರಂದು ಸಾಯಂಕಾಲ 4-15 ಗಂಟೆಯ ಸುಮಾರಿಗೆ ಚೌಕ್ ಸರ್ಕಲ್ ದಿಂದ ಮದನ ಟಾಕೀಜ್ ಕಡೆಗೆ ಹೋಗುವ ರೋಡಿಗೆ ಬರುವ ಸತ್ಯಮ್ ಟೇಲರ್ ಅಂಗಡಿ ಎದುರುಗಡೆ ರೋಡಿನ ಮೇಲೆ ಗುಡುಸಾಬ ತಂದೆ ಖಾಸಿಂ ಈತನು ತನ್ನ ಟಾಟಾ ಸುಮೋ ನಂ : KA 28 – 5683 ನೇದ್ದನ್ನು ಚೌಕ್ ಸರ್ಕಲ್ ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಮುಂದೆ ಹೋಗುತ್ತಿದ್ದ ಕಾರ ನಂ : KA 32 – N – 0115 ನೇದ್ದಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತ ಮಾಡಿ ಕಾರಿನ ಹಿಂಭಾಗ ಹಾನಿಗೊಳಿಸಿದ್ದು ಇರುತ್ತದೆ ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ನಂ: 78/2011 ಕಲಂ 279 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ.
ಶ್ರೀ ಪರಶುರಾಮ ತಂದೆ ಅಣ್ಣಪ್ಪ ದೊಡ್ಡ ಮನಿ ಸಾ: ಚಲಗೇರಾ ಗುಲಬರ್ಗಾರವರು ಅಶ್ವಿನಿ ರುಗ್ನಾಲಯ ಆಸ್ಪತ್ರೆಯಲ್ಲಿ ಕೊಟ್ಟ ಹೇಳಿಕೆ ಸಾರಾಂಸವೆನೆಂದರೆ ನಾನು ಮತ್ತು ಮಾರುತಿ ತಂದೆ ಶರಣಪ್ಪ ದೊಡ್ಡಮನಿ ರವರು ದಿನಾಂಕ;21/12/2011 ರಂದು ಮಧ್ಯಾನ ಖಾಸಗಿ ಕೇಲಸದ ನಿಮಿತ್ಯವಾಗಿ ದುದನಿಗೆ ಹೊಗಬೇಕಾಗಿದ್ದರಿಂದ ಬಸ ನಿಲ್ದಾಣದ ಹತ್ತಿರ ಬಂದು ಮಾದನ ಹಿಪ್ಪರಗಾ ಕಡೆಯಿಂದ ಒಂದು ಮ್ಯಾಕ್ಸ ಜೀಪ್ ಪ್ಯಾಸೆಂಜರ್ ತುಂಬಿಕೊಂಡು ಚಲಗೇರಾ ಬಸ್ಸ ನಿಲ್ದಾಣದ ಹತ್ತಿರ ಬಂದಾಗ ನಾನು ಜೀಪ ಚಾಲಕನಿಗೆ ಕೈ ಮಾಡಿ ಜೀಪ ನಿಲ್ಲಿಸಿ ಜೀಪ್ ಹತ್ತಲು ಹೋದಾಗ ಜೀಪ ನಂ ಕೆ,ಎ-25 – 3408 ಚಾಲಕನು ಜೀಪ ಪುಲ್ಲ ಆಗಿದೆ, ಜೀಪಿನ ಟಾಪ ಮೇಲೆ ಕುಳಿತು ಕೋಳ್ಳಿರಿ ಅಂತಾ ಹೇಳಿದನು ನನಗೆ ಅರ್ಜೇಂಟೆ ದುದನಿಗೆ ಹೋಗಬೆಕಾಗಿದ್ದರಿಂದ ಸದರಿ ಜೀಪ್ ಟಾಪ ಮೇಲೆ ಎರಿ ಕುಳಿತುಕೊಂಡೆನು ಜೀಪ ನಿಂಬಾಳ ದುದನಿ ರೊಡ ಅಂದಾಜು 1 ಕಿ.ಮೀ.ಅಂತರ ರೊಡಿನಲ್ಲಿ ದುದನಿಕಡೆ ಹೊಗುವ ರಸ್ತೆಯಲ್ಲಿ ಜೀಪ ಚಾಲಕನು ಅತಿವೇಗದಿಂದ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಿದ್ದಾಗ ನಾನು ಜೀಪಿನ ಮೇಲಿಂದ ಕೇಳೆಗೆ ಬಿದ್ದೆನು ರಕ್ತಗಾಯವಾಗಿರುತ್ತದೆ, ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 77/2011 ಕಲಂ 279,337 ಐಪಿಸಿ ಸಂಗಡ 187 ಐ.ಎಮ್.ವಿ ಎಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಯು.ಡಿ.ಅರ್. ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ಮುನೀರಾಬೇಗಂ ಗಂಡ ಮಹಿಬೂಬ ಪಟೇಲ ಪೋಲೀಸ ಪಾಟೀಲ ಸಾ ಹುಲಸಗೂಡ ತಾ : ಚಿಂಚೋಳಿ ಹಾಃ ವಃ ಮಹಮದಿಯಾ ಮಜೀದ ಅಬುಬಕರ ಕಾಲೋನಿ ಗುಲಬರ್ಗಾ ರವರು ನನ್ನ ಗಂಡನು ದಿನಾಂಕ 18/12/2011 ರಂದು ಮದ್ಯಾಹ್ನ 3 ಗಂಟೆಯ ಸುಮಾರಿಗೆ ತನ್ನ ತಾಯಿ ಮನೆಗೆ ಹೋಗಿ ಮನೆಯಲ್ಲಿ ಚಾಹ ಕುಡಿಯಲು ಸ್ಟೋಗೆ ಹವಾ ಹಾಕಲು ಸ್ಟೋದ ಸೀಮೆ ಎಣ್ಣೆ ಹೊರಗೆ ಬರದ ಕಾರಣ ಜೋರಾಗಿ ಹವಾ ಹಾಕಿ ಪಿನ್‌ ಮಾಡಿದಾಗ ಸೀಮೆಎಣ್ಣೆ ಚಿಮ್ಮಿ ಮೈಮೇಲೆ ಧರಿಸಿದ ಬಟ್ಟೆಯ ಮೇಲೆ ಬಿದ್ದಿದ್ದು ಒಮ್ಮೇಲೆ ಕಡ್ಡಿ ಕೊರೆದು ಸ್ಟೋ ಬೆಂಕಿ ಹಚ್ಚಿದಾಗ ಊರಿ ಬಟ್ಟೆಗೆ ಹತ್ತಿದ್ದರಿಂದ ಪೂರ್ತಿ ಮೈಸುಟ್ಟಿದ್ದು ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಉಪಚಾರ ಫಲಕಾರಿಯಾಗದೇ ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಯು.ಡಿ.ಅರ್. ನಂ: 35/2011 ಕಲಂ 174 ಸಿ.ಅರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ಮಹಮ್ಮದ ಸೆಮೀಮ ತಂದೆ ಮಹಮ್ಮದ ಸಲೀಮ ಸಾ; ನಿಯರ ಗುಲಶನ ಚೌಕ ಮದಿನಾ ಕಾಲೂನಿ ಎಂ.ಎಸ್.ಕೆ.ಮಿಲ್ಲ್ ಗುಲಬರ್ಗಾರವರು ನಾನು ಆಳಂದ ಚೆಕ್ಕ ಪೋಸ್ಟ ರಿಂಗರೋಡ ಹತ್ತಿರ ನಾನು ನನ್ನ ಹೀರೊಹೊಂಡಾ ಫ್ಯಾಶನ ಮೋಟಾರ ಸೈಕಲ್ ನಂ.ಕೆ.ಎ.32 ಡಬ್ಲೂ. 7710 ನೆದ್ದರ ಮೇಲೆ ಹೋಗುತ್ತಿರುವಾಗ ಆಳಂದ ಕಡೆಯಿಂದ ಕೆ.ಎಸ್.ಆರ್.ಟಿ. ಬಸ್ಸ ನಂ.ಕೆ.ಎ.32ಎಫ್.1498 ನೆದ್ದರ ಚಾಲಕ ತನ್ನ ಬಸ್ಸನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಮೋಟಾರ ಸೈಕಲ್ ಗೆ ಡಿಕ್ಕಿ ಹೊಡೆದು ನನಗೆ ಮತ್ತು ಹಿಂದೆ ಕುಳಿತಿದ್ದ ಮಹಮ್ಮದ ಹಲೀಮ ಇಬರಿಗೆ ಗಾಯಗೊಳಿಸಿ ಬಸ್ಸ ನಿಲ್ಲಿಸಿದ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: ಗುನ್ನೆ ನಂ 277/2011 ಕಲಂ 279 337 338 ಐಪಿಸಿ ಸಂ/ 187 ಐಎಂವಿ ಎಕ್ಟ್‌ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ದಲಾಗಿದೆ.