POLICE BHAVAN KALABURAGI

POLICE BHAVAN KALABURAGI

22 April 2015

Kalaburagi District Reported Crimes

ಅಪಹರಣ ಪ್ರಕರಣ :
ಶಾಹಾಬಾದ ನಗರ ಠಾಣೆ : ದಿನಾಂಕ 16-04-2015 ರಂದು ಶ್ರೀಮತಿ ಸವಿತಾ ಗಂಡ ಗಂಗಾರಾಮ ರಾಠೋಡ ಸಾ. ನಿಜಾಮಬಜಾರ ಗೊಳಾ (ಕೆ)  ರವರ ಮಗಳು ಪ್ರಿಯಾಂಕ ವ-16 ವರ್ಷ ಇವಳು ತನ್ನ ಮನೆಯಿಂದ ಹೊರಗಡೆ ಬಂದಾಗ ಪಿರ್ಯಾದಿ ಮತ್ತು ಆಕೆಯ ಗಂಡ ಮತ್ತು ಮಾವ ಇವರು ಮನೆಯಿಂದ ಹೊರಗಡೆ ಹೋಗಿ ಬರುತ್ತಾಳೆ ಅಂತಾ ಸುಮ್ಮನೆ ಇದ್ದಾಗ ಪ್ರಿಯಾಂಕ ಇವಳು ಬರದೇ ಇದ್ದಾಗ ಅವಳನ್ನು ಹುಡಕಿಕೊಂಡು ಹೊದಾಗ 1)ಅಶೋಕ ತಂದೆ ಶರಣಪ್ಪಾ ಹಂಗರಗಿ ಜಾ.ಹರಿಜನ  2) ಶರಣಪ್ಪಾ ತಂದೆ ಸಿದ್ದಪ್ಪಾ  3) ಹಣಮಂತ ತಂದೆ ಸಿದ್ದಪ್ಪಾ   ಸಾ. ಎಲ್ಲರೂ ನಿಜಾಮ ಬಜಾರ ಗೊಳಾ (ಕೆ) ಇವರುಗಳು ನನ್ನ ಮಗಳಿಗೆ ಮಾತನಾಡಿಸಿ ಮದುವೆಯಾಗುತ್ಥೇನೆ ಅಂತಾ ಪುಸಲಾಯಿಸಿ ಅಪಹರಿಸಿಕೊಂಡು ಹೋಗುತ್ತಿದ್ದಾಗ  ಅವರನ್ನು ಹಿಡಿದುಕೊಂಡು ಹೋಗು ಬೇಕೆಂದು ಹೋದಾಗ ಸದರಿ ಆರೋಪಿತನು ತನ್ನ ಮಗಳೊಂದಿಗೆ ಓಡಿ ಹೋಗಿರುತ್ತಾನೆ. ಮತ್ತು ಇದಕ್ಕೆ ಆರೋಪಿತನ ತಂದೆ ಮತ್ತು ಕಾಕನವರ ಆರೋಪಿತನಿಗೆ ಸಹಕಾರ  ನೀಡಿ  ನನಗೆ ಅವಾಚ್ಯವಾಗಿ ಬೈದಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸೇಡಂ ಠಾಣೆ : ದಿನಾಂಕ 21-04-2015 ರಂದು ನಮ್ಮ ಮಗನಾದ ನಾಗರಾಜ ಹಾಗೂ ನಮ್ಮೂರ ರಮೇಶ ತಂದೆ ಜಲಂಧರರಾವ ಛತ್ರಸಾಲಿ ಇಬ್ಬರೂ ಕೂಡಿ ಟಂ-ಟಂ ನಂ-KA-32A-6764 ನೇದ್ದರಲ್ಲಿ ಕುಳಿತು ಅಲ್ಲೊಳ್ಳಿಯಿಂದ ಕೊಡ್ಲಾ ಗ್ರಾಮಕ್ಕೆ ಹೋಗುವಾಗ, ಟಂ-ಟಂ ಚಾಲಕ ಮಂಜೂನಾಥ ತಂದೆ ಶರಣಪ್ಪ ತನ್ನ ವಶದಲ್ಲಿದ್ದ ಟಂ-ಟಂ ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗಿ ಸೇಡಂ-ಯಾದಗೀರ ಮುಖ್ಯರಸ್ತೆಯ ಕಲಕಂಬಾ ಗೇಟ್ ಹತ್ತಿರ ಇರುವ ಬಸವಂತರಾವ ಛತ್ರಸಾಲಿ ಇವರ ಹೊಲದ ಹತ್ತಿರ ಒಮ್ಮೆಲೆ ಕಟ್ ಹೊಡೆದಿದ್ದರಿಂದ ವಾಹನದೊಂದಿಗೆ ಕೆಳಗೆ ಬಿದ್ದು ಈ ಅಪಘಾತದಲ್ಲಿ ರಮೇಶನಿಗೆ ಸಾದಾ ಗುಪ್ತಗಾಯಗಳಾಗಿದ್ದು, ನನ್ನ ಮಗನಾದ ನಾಗರಾಜ ಇತನಿಗೆ ತಲೆಯ ಹಿಂದುಗಡೆ ಭಾರಿ ರಕ್ತ ಮತ್ತು ಗುಪ್ತಗಾಯ ಹಾಗೂ ಎಡಕಪಾಳಕ್ಕೆ, ಬಲಗಾಲಿಗೆ ತರಚಿದಗಾಯ ಮತ್ತು ಗುಪ್ತಗಾಯಗಳಾಗಿ, ಮೂಗಿನಿಂದ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ಶ್ರೀ ಬಸವರಾಜ ಮಾಲಿಪಾಟೀಲ್ ಸಾ:ಅಲ್ಲೊಳ್ಳಿ ಗ್ರಾಮ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರುಕಳ ನೀಡಿ ಹಲ್ಲೆ ಮಾಡಿದ ಪ್ರಕರಣ :
ಸೇಡಂ ಠಾಣೆ : ಶ್ರೀಮತಿ. ಬಸಮ್ಮ ಗಂಡ ಭೀಮರಾಯ ಮಡಿವಾಳ ಸಾ:ಹಂದರಕಿ ಗ್ರಾಮ ಇವರನ್ನು ಹಂದರಕಿ ಗ್ರಾಮದ ಭೀಮರಾಯ ತಂದೆ ಸುಬ್ಬಣ್ಣ ಮಡಿವಾಳ ಇವರಿಗೆ ಮದುವೆ ಮಾಡಿಕೊಟ್ಟಿದ್ದು ಮದುವೆಯಾಗಿ 5 ವರ್ಷಗಳಾಗಿರುತ್ತದೆ. ನನಗೆ ಇಲ್ಲಿಯವರೆಗೆ ಮಕ್ಕಳಾಗದೇ ಇರುವದರಿಂದ ನನ್ನ ಗಂಡ ಭೀಮರಾಯ, ಮಾವ ಸುಬ್ಬಣ್ಣ, ಅತ್ತೆ ಮಹಾದೇವಿ ಹಾಗೂ ನಾದನಿ ಮೊನಮ್ಮ ಎಲ್ಲರೂ ಕೂಡಿ ಒಂದಿಲ್ಲ ಒಂದು ಕಾರಣದಿಂದ ನಿನಗೆ ಮಕ್ಕಳಾಗಿಲ್ಲ ಗೊಡ್ಡು ಇದ್ದಿ, ಕೆಲಸ ಬರಲ್ಲ, ನೀನು ಕಪ್ಪಗಿ ಇದ್ದಿ, ಅಂತ ನಿಂದಿಸಿ ರಂಡಿ ಭೋಸಡಿ ಅಂತ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆ ಬಡೆ ಮಾಡುತ್ತಿದ್ದರು ಈ ಬಗ್ಗೆ ನಮ್ಮ ತಂದೆ-ತಾಯಿಗೆ ತಿಳಿಸಲು ಅವರು ಸಮಾದಾನ ಹೇಳಿದ್ದು ದಿನಾಂಕ 20-04-2015 ರಂದು ಸಾಯಂಕಾಲ 05-00 ಗಂಟೆಗೆ ಗಂಡ. ಅತ್ತೆ, ಮಾವ & ನಾದನಿ  ನಾಲ್ಕು ಜನರು ಕೂಡಿ ಎಲ್ಲಾದರು ಬಿದ್ದು ಸತ್ತುಹೊಗು ಎಂದು ನನ್ನ ಗಂಡ ಬಡಿಗೆಯಿಂದ ಎಡಭಾಗದ ಟೊಂಕಕ್ಕೆ ಹಾಗೂ ಬೆನ್ನಿಗೆ ಹೊಡೆದಿರುತ್ತಾನೆ. ಇನ್ನೂಳಿದವರು ನಮ್ಮ ಅತ್ತೆ ಕಾಲಿನಿಂದ ಬಲಕಾಲ ಕಾಲಿಗೆ ಮತ್ತು ಹೊಟ್ಟೆಗೆ ಒದ್ದಿರುತ್ತಾಳೆ ಇನ್ನೂಳಿದವರು ಕೈಯಿಂದ ತಲೆಯ ಮೇಲೆ ಮೈಮೇಲೆ ಹೊಡೆದಿರುತ್ತಾರೆ. ನಾನು ತವರು ಮನೆಗೆ ಹೊಗಬೇಕೆಂದು ಬಸ್ ಸ್ಟಾಂಡ ಗೇಟಿಗೆ ಬಂದಿದ್ದು  ನನ್ನ ಗಂಡ ಅತ್ತೆ,ಮಾವ ನಾದನಿ ಇವರು ಬಂದು ಬೊಸಡಿ ಸೂಳಿ ನಿನು ತವರುರಿಗೆ ಹೊಗು ನಿಮ್ಮಪ್ಪ ನಿಮ್ಮವ್ವ ಅಣ್ಣನಿಗೆ ಚಾಡಿ ಹೇಳಬೆಕಂದಿ ಎಂದು ನನ್ನ ಹಿಡಿದು ಎಳೆದುಕೊಂಡು ಮನೆಗೆ ಒಯ್ದಿರುತ್ತಾರೆ. ದಿನಾಂಕ : 21-04-2015 ರಂದು ಬೆಳಿಗ್ಗೆ 9 ಗಂಟೆಗೆ ನನ್ನ ಮೈಮೆಲೆ ನನ್ನ ಗಂಡ ಮತ್ತು ಅತ್ತೆ ಮಾವ, ನಾದನಿ ಎಲ್ಲರು ಸೇರಿ ನನಗೆ ಕೊಲೆ ಮಾಡಬೇಕೆಂದು ನನ್ನ ಅತ್ತೆ ಮನೆಯಲ್ಲಿದ್ದ ಸಿಮೆ ಎಣ್ಣೆ ಡಬ್ಬಿಯನ್ನು ನನ್ನ ಗಂಡನಿಗೆ ಕೊಟ್ಟಾಗ ಅವನು ನನ್ನ ಮೈಮೆಲೆ ಸುರಿವಿದನು ಕಡ್ಡಿ ಪಟ್ಟಣ ತೆಗೆದುಕೊಂಡು ಉರಿ ಹಚ್ಚಲು ಪ್ರಯತ್ನಿಸಿದಾಗ ನಾನು ಜೊರಾಗಿ ಚಿರಾಡಿದೆನು. ನನ್ನ ಶಬ್ದವನ್ನು ಕೇಳಿ ಆಜು, ಬಾಜು ಮನೆಯವರು ಬಿಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.