POLICE BHAVAN KALABURAGI

POLICE BHAVAN KALABURAGI

04 June 2017

Kalaburagi District Reported Crimes

ಕೊಲೆ ಪ್ರಕರಣ :
ಜೇವರಗಿ ಠಾಣೆ : ಶ್ರೀ  ತಯ್ಯಬ್ ತಂದೆ ಕಾಸೀಂಸಾಬ ನದಾಫ್ ಸಾಃ ಬನಹಟ್ಟಿ ತಾಃ ಚಿತ್ತಾಪೂರ ಜಿಲ್ಲೆಃ ಕಲಬುರಗಿ ರವರು ಎರಡು ವರ್ಷಗಳ ಹಿಂದೆ ಪಾತಿಮಾ ಇವಳೊಂದಿಗೆ ನನ್ನ ಮದುವೆಯಾಗಿರುತ್ತದೆ. ನಮಗೆ ಮಶಾಖ ಅಂತ ಐದು ತಿಂಗಳ ಗಂಡು ಮಗು ಇರುತ್ತದೆ. ನನ್ನ ಹೆಂಡತಿ ಬಾಣೆತನ ಕಾಲಕ್ಕೆ ಸಿಜರೀನ್ ಆಗಿದ್ದು ಸಿಜರೀನ ಸರಿಯಾಗಿ ಆಗದಕ್ಕೆ ಅವಳಿಗೆ ಆಗಾಗ್ಗೆ ಹೊಟ್ಟೆ ಬೇನೆ ಆಗಿದ್ದು ಇರುತ್ತದೆ. ಅದಕ್ಕೆ ನಾವು ಅವಳಿಗೆ ಖಾಸಗಿ ಆಸ್ಪತ್ರೆಯಲ್ಲಿ ತೊರಿಸಿದರೂ ಆರಾಮವಾಗಿರುವುದಿಲ್ಲಾ. ಅವಳು ಈಗ 8-9 ದಿವಸಗಳ ಹಿಂದೆ ಮಗ ಮಶ್ಯಾಖ ಇತನಿಗೆ ತೆಗೆದುಕೊಂಡು ಕಲಬುರಗಿಗೆ ಹೋಗಿ ತನ್ನ ತಂದೆ ತಾಯಿಯ ಹತ್ತಿರ ಇದ್ದಳು.  ನಾನು ನಮ್ಮೂರಲ್ಲಿಯೇ ಇದ್ದೆನು. ನಿನ್ನೆ ದಿ. 02.06.2017 ರಂದು ಸಾಯಂಕಾಲ ಜೇವರಗಿಯ ಅಬ್ದುಲ್ ರಹೇಮಾನ ಇವರು ನನಗೆ ಪೊನ ಮಾಡಿ ತಿಳಿಸಿದ್ದೆನೆಂದರೆ ಇಂದು ಮದ್ಯಾಹ್ನ ಜೇವರಗಿ ತಾಲೂಕಿನ ಬೀಮಾ ಬ್ರೀಡ್ಜ ಕಟ್ಟಿಸಂಗಾವಿ ಹತ್ತಿರ ಬೀಮಾ ನದಿಯಲ್ಲಿ ನಿನ್ನ ಹೆಂಡತಿ ತನ್ನ ಮಗನೊಂದಿಗೆ ನದಿ ನೀರಿನಲ್ಲಿ ಬಿದ್ದಿರುತ್ತಾಳೆ. ನಿಮ್ಮ ಮಗ ಮಶ್ಯಾಖ ನದಿ ನೀರಿನಲ್ಲಿ ಮುಳುಗಿ ಸತ್ತಿರುತ್ತಾನೆ ನಿನ್ನ ಹೆಂಡತಿ ಬದುಕಿರುತ್ತಾಳೆ ಅಂತಾ ಹೇಳಿ ನನಗೆ ಬರಲು ತಿಳಿಸಿದನು.  ವಿಷಯ ಗೊತ್ತಾದ ನಂತರ ಇಂದು ಬೆಳಿಗ್ಗೆ ನಾನು ಮತ್ತು ನನ್ನ ತಂದೆ ಕಾಸೀಮ್ ನದಾಫ್ಹಾಗೂ ಅಣ್ಣ ಸೇಫೀಕ ನದಾಫ್ ಹಾಗೂ ನಮ್ಮ ಪಕ್ಕದ ಮನೆಯ ಮುತರ್ುಜಾ ಪಟೇಲ ಎಲ್ಲರೂ ಕೂಡಿಕೊಂಡು  ಜೇವರಗಿ ಸರಕಾರಿ ಆಸ್ಪತ್ರೆಗೆ ಬಂದು ನೋಡಲು ನನ್ನ ಮಗ ಮಶ್ಯಾಖ ಮೃತಪಟ್ಟಿದ್ದು . ಅಲ್ಲಿಯೇ ನನ್ನ ಅತ್ತೆ ಸೈಜಾದಬೀ ನದಾಫ್, ಮತ್ತು ನನ್ನ ಹೆಂಡತಿಯ ತಮ್ಮ ರಫೀಕ್ ಮತ್ತು ಅಬ್ದುಲ್ ರಹೀಮಾನ ಪಟೇಲ ಜೇವರಗಿ ರವರು ಇದ್ದರು. ಅಲ್ಲಿಯೇ ಇದ್ದ ನಮ್ಮ ಅತ್ತೆ ಸೈಜಾದಬೇಗಂ ಇವಳು ಹೇಳಿದ್ದೆನೆಂದರೆ ದಿ. 02.06.2017. ರಂದು ಮುಂಜಾನೆ ಮನೆಯಿಂದ ತನ್ನ ಮಗನ್ನೊಂದಿಗೆ ಹೋಗಿರುತ್ತಾಳೆಅವಳಿಗೆ  ಹುಡುಕಾಡಿದರೂ ಸಿಕ್ಕಿರುವುದಿಲ್ಲಾ. ಸಾಯಂಕಾಲ ಅಬ್ದುಲ್ ರಹೀಮಾನ ಪಟೇಲ ಇವರು ಪೊನ ಮಾಡಿ ಹೇಳಿದರಿಂದ ನಾನು  ಮತ್ತು ಮಗ  ರಫೀಕ ಇಬ್ಬರೂ ಜೇವರಗಿಗೆ ಬಂದಿರುತ್ತೆವೆ ಎಂದು ಹೇಳಿದಳು. ಅಲ್ಲಿಯೇ ಇದ್ದ ಅಬ್ದುಲ್ ರಹೇಮಾನ ಪಟೇಲ ಜೇವರಗಿ ಇವರು ಹೇಳಿದ್ದನೆಂದರೆ ದಿ. 02.06.2017 ರಂದು ಮದ್ಯಾಹ್ನ 3.00 ಗಂಟೆಯ ಸುಮಾರಿಗೆ ನಾನು ಕಟ್ಟಿ ಸಂಗಾವಿ ಭೀಮಾ ಬ್ರೀಡ್ಜ್ ಹತ್ತಿರ ಬರುತ್ತಿದ್ಧಾಗ ಒಬ್ಬ ಹೆಣ್ಣು ಮಗಳು ಭಿಮಾ ನದಿಯಲ್ಲಿ ತನ್ನ ಮಗುವಿನೊಂದಿಗೆ ನೀರಿನಲ್ಲಿ ಜಿಗಿದಿದ್ದು ನೋಡಿದೆನು. ಮತ್ತು ನದಿಯಲ್ಲಿ ಮೀನು ಹಿಡಿಯುತ್ತಿದ್ದ ಮೀನುಗಾರರು ನೋಡಿ ಅವಳಿಗೆ ಉಳಿಸಲು ಹೋಗುತ್ತಿದ್ದನ್ನು ನೋಡಿ ನಾನು ಕೂಡಾ ಸಮೀಪ್ ಹೊದೇನು, ಮೀನುಗಾರರು ಆ ಹೆಣ್ಣುಮಗಳಿಗೆ ನೀರಿನಿಂದ ತೆಗೆದಿರುತ್ತಾರೆ ನೋಡಲು ಅವಳು ನಿನ್ನ ಹೆಂಡತಿ ಪಾತೀಮಾ ಇದ್ದಳು ಅವಳು ಅಸ್ವಸ್ಥ ಆಗಿದ್ದರಿಂದ ಅವಳಿಗೆ ಉಪಚಾರಕ್ಕೆ ಆಸ್ಪತ್ರಗೆ ಕೊಟ್ಟು ಕಳಿಸಿದ್ದು ಇರುತ್ತದೆ. ಅವಳ ಮಗ ಮಶ್ಯಾಖ ನದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು  ಅವನ ಹೆಣ ಮೀನುಗಾರರು ತೆಗೆದರು ನಂತರ ಹೆಣ ತೆಗೆದುಕೊಂಡು ಜೇವರಗಿ ಸರಕಾರಿ ಆಸ್ಪತ್ರೆಯಲ್ಲಿ ತಂದು ಹಾಕಿರುತ್ತವೆ ಎಂದು ತಿಳಿಸಿದರಿಂದ ನನಗೆ ಗೊತ್ತಾಗಿರುತ್ತದೆ. ನನ್ನ ಹೆಂಡತಿ ಫಾತೀಮಾ ಇವಳು ಹೊಟ್ಟೇ ಬೇನೆ ತಾಳಲಾರದೆ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ತನ್ನ ಹತ್ತಿರ ಇದ್ದ ಮಗುವಿಗೆ ಕೊಲೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ದಿ: 2-6-17 ರಂದು ಮದ್ಯಾಹ್ನ 3 ಗಂಟೆಗೆ ಅವಳು ಕಟ್ಟಿ ಸಂಗಾವಿ ಭೀಮಾ ಬ್ರೀಡ್ಜ ಹತ್ತಿರ ಭೀಮಾ ನದಿಯಲ್ಲಿ ಮಗುವಿನೊಂದಿಗೆ ನದಿ ನೀರಿನಲ್ಲಿ ಜಿಗಿದಿದ್ದರಿಂದ ನನ್ನ ಮಗ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣಗಳು :
ಫರತಾಬಾದ ಠಾಣೆ : ಶ್ರೀ ಮಹೇಶ ತಂದೆ ನಾಗನಾಥ ಮಾಳಗೆ ಸಾ : ಮಲ್ಲಿಕಾರ್ಜುನ  ನಗರ ಅಕ್ಕಲಕೋಟ ರೋಡ್ ಸೋಲಾಪೂರ ಇವರು ದಿನಾಂಕ: 03/06/2017 ರಂದು ಬೆಳ್ಳಿಗ್ಗೆ ಐರೋಡಗಿ ಮಠದ ಮುತ್ಯಾ ಶ್ರೀ ರಾಜಶೇಖರ ಸ್ವಾಮಿಗಳು ನನಗೆ ಹೇಳಿದ್ದೆನೆಂದರೆ ಕರ್ನೂಲ ನಗರದಲ್ಲಿ ಭಕ್ತರ ಮದುವೆ ಕಾರ್ಯಕ್ರಮ ವಿರುತ್ತದೆ ನಮ್ಮ ಜೊತೆಗೆ ನೀನು ಸಹ ಬರಬೇಕು ಅಂತಾ ಹೇಳಿ ಸ್ವಾಮಿಗಳ ಕಾರ ನಂಬರ ಎಮ್ ಎಚ್ 13 ಸಿಕೆ- 1117 ನೇದ್ದರಲ್ಲಿ ಸ್ವಾಮಿಗಳ ಜೊತೆಗೆ ಅವರ ಹೆಂಡತಿ ಶಿವಮ್ಮ ಮಗ ಸಿದ್ದರಾಮ ಅವರ ಸಂಬಂದಿ ಲಲಿತಾಬಾಯಿ ಎಲ್ಲರೂ ಕೂಳಿತುಕೊಂಡು ಕಾರನ್ನು ಸ್ವಾಮಿಗಳ ಮಗ ಸಿದ್ದರಾಮ ಈತನು ಚಲಾಯಿಸುತ್ತಾ ಹೊರಟು ಎನ್ಹೆಚ್ 218 ಕಲಬುರಗಿ ಯಿಂದ ಜೇವರ್ಗಿ  ಕಡೆಗೆ ಹೋಗುವ ರಸ್ತೆ ಮೂಲಕ ಹೊರಟು ಶಹಾಬಾದ ಕ್ರಾಸ ಹತ್ತಿರ ಸಾಯಂಕಾಲ 5 ಗಂಟೆಗೆ ಹೋಗುತ್ತಿದ್ದಂತೆ ಎದುರಿನಿಂದ ಬರುತ್ತಿದ್ದ ಲಾರಿ ನಂಬರ ಎಪಿ-28 ಟಿಬಿ-9279 ನೇದ್ದರ ಚಾಲಕ ತನ್ನ ವಾಹನವನ್ನು ಅತೀವೇಗ ಹಾಗೂ ಅಲಕ್ಷತನದಿಂದ ಮಾನವ ಜೀವಕ್ಕೆ ಅಫಾಯವಾಗುವ ರೀತಿಯಲ್ಲಿ ಚಲಾಯಿಸಿ ಒಮ್ಮೇಲೆ ಬಲಭಾಗಕ್ಕೆ ತಿರುಗಿಸಿ ನಮ್ಮ ಕಾರಿಗೆ ಡಿಕ್ಕಿ ಪಡೆಯಿಸಿದನು ಇದರಿಂದ ಕಾರ ಚಲಾಯಿಸುತ್ತಿದ್ದ ಸಿದ್ದರಾಮ ಇವರಿಗೆ ಮುಖಕ್ಕೆ ಚಚ್ಚಿದ ಭಾರಿ ರಕ್ತಗಾಯ ತಲೆಗೆ ಬಾರಿ ಗುಪ್ತಗಾಯ ಬಲಗೈ ಮೋಣಕೈ ಕೆಳಗೆ ಕೈ ಮುರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದು ನನಗೆ ತಲೆಗೆ ಹಾಗು ಬುಜಕ್ಕೆ ಗುಪ್ತಗಾಯ, ರಾಜಶೇಖರ ಸ್ವಾಮಿಗಳಿಗೆ ಮುಖದ ಮೇಲೆ ರಕ್ತಗಾಯ ಎದೆಗೆ ಭಾರಿಗುಪ್ತಗಾಯ ಎರಡುಮೊಣಕಾಲು ಕೆಳಗೆ ಭಾರಿ ಗುಪ್ತಗಾಯ ಎಡಗೈ ಮೊಣಕೈ ಕೆಳಗೆ ಗುಪ್ತಗಾಯ ಅವರ ಹೆಂಡತಿ ಶಿವಮ್ಮ ಇವರ ತಲೆಗೆ ಮುಖಕ್ಕೆ ಬಾರಿರಕ್ತಗಾಯವಾಗಿ ಇಬ್ಬರು ಮಾತಾಡುವ ಸ್ಥಿತಿಯಲ್ಲಿರಲಿಲ್ಲಾ ಲಲಿತಾಬಾಯಿ ಇವರಿಗೆ ಮುಖದ ಮೇಲೆ ರಕ್ತಗಾಯ ಹಾಗೂ ಅಲಲ್ಲಿ ತರಚಿದ ರಕ್ತಗಾಯವಾಗಿದ್ದು ಲಾರಿ ಚಾಲಕನು ತನ್ನ ವಾಹನವನ್ನು ಅಲ್ಲಿಯೇಬಿಟ್ಟು ಓಡಿ ಹೋಗಿದ್ದು ಆತನಿಗೆ ನೋಡಿದರೆ ಗುರುತಿಸುತ್ತೇನೆ. ನಂತರ ಯಾರೋ 108 ಅಂಬುಲೈನ್ಸ ಕರೆಯಿಸಿ ಅದರಲ್ಲಿ ನಮ್ಮೇಲ್ಲರಿಗೆ ಹಾಗೂ ಉಪಚಾರ ಕುರಿತು ಕಳುಹಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಗ್ರಾಮೀಣ ಠಾಣೆ : ದಿನಾಂಕ :- 03/06/2017 ರಂದು ಮದ್ಯಾಹ್ನ 02:00 ಗಂಟೆಯಿಂದ 03:00 ಗಂಟೆಯ ಮದ್ಯದ ಅವಧಿಯಲ್ಲಿ ಮೃತ ಮಲ್ಲಿಕಾರ್ಜುನ ತಂದೆ ಗುರಪ್ಪ ಕಮಲಾಪುರ ಇತನ ತನ್ನ ಮೋಟಾರ ಸೈಕಲ್ ನಂ ಕೆಎ-34 ಇಸಿ-8695 ನೇದ್ದರ ಮೇಲೆ ಯಾವುದೋ ಕೆಲಸದ ನಿಮಿತ್ಯಾ ಕಲಬುರಗಿಯಿಂದ ಪಟ್ಟಣ ಗ್ರಾಮದ ಕಡೆಗೆ ಹೋಗುವಾಗ ತನ್ನ ವಶದಲ್ಲಿದ್ದ ಮೋಟಾರ ಸೈಕಲನ್ನು ಅಡ್ಡಾ-ತಿಡ್ಡಿಯಾಗಿ ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಕೇರಿ ಭೋಸಗಾ ಗ್ರಾಮದ ಸಿಮಾಂತರ ಅಭಿ ವ್ಯಾಲಿ ರೆಸ್ಟಾರೆಂಟ ಎದುರಗಡೆ ಇರುವ ಅರಳಿ ಮರಕ್ಕೆ ಜೋರಾಗಿ ಡಿಕ್ಕಿ ಕೊಟ್ಟು ಅಪಘಾತ ಪಡಿಸಿದ ಪರಿಣಾಮ ಆತನಿಗೆ ತಲೆಗೆ ಹಾಗು ಇತರೇ ಕಡೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ಶ್ರೀಮತಿ ಗುರೂಬಾಯಿ ಗಂಡ ಮಲ್ಲಿಕಾರ್ಜುನ ಕಮಲಾಪುರ ಸಾ: ಹನುಮಾನ ಗುಡಿಯ ಹತ್ತಿರ ಗಂಗಾ ನಗರ ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಹಾಬಾದ ನಗರ ಠಾಣೆ : ಶ್ರೀ ನಾಗರಾಜ ತಂದೆ ಸುಭಾಶ್ಚಂದ್ರ ಸಾ:ಅಲ್ದಿಹಾಳ ಇವರು ದಿನಾಂಕ 01/06/2017 ರಂದು ಸಾಯಂಕಾಲ ತನ್ನ ತಂಗಿ ಜಯಶ್ರೀ ಮಾವ ಮಲ್ಲಿಕಾರ್ಜುನ ಇವರು ಬೆಂಗಳೂರಿಗೆ ಹೊಗುವ ಸಲುವಾಗಿ ನನ್ನ ತಾಯಿ ಈರಮ್ಮಾ, ತಂಗಿ ರಾಜಶ್ರೀ, ನನ್ನ ಹೆಂಡತಿ ಸುನಂದ, ಮಗಳು ವೈಷ್ಣವಿ ಎಲ್ಲರೂ ನಮ್ಮೂರ ಲಿಂಗರಾಜ ಇವರ ಟಂಟಂನಲ್ಲಿ ಹೋಗಿ ರೈಲು ನಿಲ್ದಾಣಕ್ಕೆ ಬೀಟ್ಟು ಮರಳಿ ಬರುವಾಗ ಹಳ್ಳದ ಬ್ರೀಡ್ಜ ದಾಟಿ ಬರುತ್ತಿರುವಾಗ ಲಾರಿ ನಂ ಕೆಎ. 32 ಬಿ 2712 ನೇದ್ದರ ಚಾಲಕನು ಅತೀವೆಗ ಮತ್ತು ಅಲಕ್ಷ್ಯತನದಿಂದ ನಡೆಸಿ ಟಂ ಟಂ ಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿದಾಗ  ಅಪಘಾತವಾಗಿರುತ್ತದೆ ಅಂತಾ ಗೊತ್ತಾಗಿ ಹೋಗಿ ನೋಡಿದಾಗ ಟಂ ಟಂ ನಲ್ಲಿದ್ದ ಎಲ್ಲರೀಗೂ ಭಾರಿ ಮತ್ತು ಸಾದ ರಕ್ತಗಾಯವಾಗಿ ಉಪಚಾರ ಕುರಿತು ಸರ್ಕಾರಿ ಆಸ್ಪತ್ರೆ ಶಹಾಬಾದಕ್ಕೆ ಸೇರಿಕೆ ಮಾಡಿ ನಂತರ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ವಾತ್ಸಲ್ಯ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೆವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ನರೋಣಾ ಠಾಣೆ : ಶ್ರೀ.ಗಜಾನಂದ ತಂದೆ ಕಲ್ಯಾಣಿ ಕೊರಳ್ಳಿ, ಸಾ||ಬಟಗೇರಾವಾಡಿ, ತಾ||ಬಸವಕಲ್ಯಾಣ, ಜಿ::ಬೀದರ, ಹಾ.ವ||ಮನೆ ನಂ-191/ಎ ಸಿವಿಲ್ ಲೈನ್, ಪೊಲೀಸ್ ವಸತಿ ಗೃಹ ಕಲಬುರಗಿರವರು ಸುಮಾರು 5ವರ್ಷಗಳಿಂದ ಕಲಬುರಗಿ ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆಯಲ್ಲಿ ಸಶಸ್ತ್ರ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನನಗೆ ಮದುವೆ ಆಗಿದ್ದು ನನ್ನ ಹೆಂಡತಿಯಾದ ಸತ್ಯಭಾಮ ಇವಳಿಗೆ ಒಂದು ಗಂಡು ಮಗು ಇರುತ್ತದೆ. ದಿನಾಂಕ:02/06/2017 ರಂದು ನನ್ನ ತಂದೆಯಾದ ಕಲ್ಯಾಣಿ ಕೊರಳ್ಳಿ ಇವರ ತಂಗಿಯಾದ ಅಂಬವ್ವ ಗಂಡ ನರಸಣ್ಣಾ ಜಮಾದಾರ ಇವಳು ಆಳಂದ ತಾಲ್ಲೂಕಿನ ಗೋಳಾ (ಬಿ) ಗ್ರಾಮದ ಗೋಳಾ ಲಕ್ಕಮ್ಮ ದೇವಸ್ಥಾನದಲ್ಲಿ ದೇವರು ಮಾಡಿದ್ದು ಈ ಕಾರ್ಯಕ್ರಮಕ್ಕೆ ನನ್ನ ತಂದೆ ಬಟಗೇರಾವಾಡಿಯಿಂದ ಗೋಳಾ (ಬಿ) ಲಕ್ಕಮ್ಮ ದೇವಸ್ಥಾನಕ್ಕೆ ಬಂದಿದ್ದು ನನಗೂ ಸಹ ನಮ್ಮ ತಂದೆಯವರು ದೇವರ ಕಾರ್ಯಕ್ರಮಕ್ಕೆ ಬರಲು ತಿಳಿಸಿದ್ದರಿಂದ ನಾನು ನನ್ನ ಬೆಳಗಿನ ಕರ್ತವ್ಯವನ್ನು ಮುಗಿಸಿಕೊಂಡು ನಾನು ನನ್ನ ಮೊಟಾರ್ ಸೈಕಲ್ ಕೆಎ 56-9236 ಹೊಂಡಾ ಶೈನ ಕಂಪನಿಯ ಮೋಟಾರ್ ಸೈಕಲ ಮೇಲೆ ಕಲಬುರಗಿ ಮನೆಯಿಂದ ಹೊರಟು ಗೋಳಾ ಲಕ್ಕಮ್ಮ ದೇವಸ್ಥಾನಕ್ಕೆ ಹೋಗಿ ಅಲ್ಲಿ ದೇವರ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಯಂಕಾಲ ಅಲ್ಲಿಂದ ನನ್ನ ತಂದೆಯನ್ನು ಸಹ ನನ್ನ ಜೊತೆಯಲ್ಲಿ  ನನ್ನ ಮೊಟಾರ್ ಸೈಕಲಮೇಲೆ ಕುಳಿತುಕೊಂಡು ಹೋಗುತ್ತಿರುವಾಗ ಕಡಗಂಚಿಯ ಕೇಂದ್ರಿಯ ವಿಶ್ವವಿದ್ಯಾಲಯ ದಾಟಿ ಕಲಬುರಗಿ ಕಡೆಗೆ ಹೋಗುತ್ತಿದ್ದಾಗ ಹಿಂದಿನಿಂದ ಅತೀವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದ ಒಂದು ಕಾರು ನಾವು ಕುಳಿತುಕೊಂಡು ಹೊರಟಿದ್ದ ಮೊಟಾರ್ ಸೈಕಲಗೆ ಹಿಂದಿನಿಂದ ಡಿಕ್ಕಿಪಡಿಸಿದನು ಇದರಿಂದ ನಾನು ಮತ್ತು ನನ್ನ ತಂದೆ ಮೊಟಾರ್ ಸೈಕಲ್ ಸಮೇತ ಕೇಳಗೆ ಬಿದ್ದೇವು ಕಾರ್ ನಂ ನೋಡಲಾಗಿ ಕೆಂಪು ಬಣ್ಣದ ಎಮ್.ಎಚ್ 43 ಯು 3979 ಇದ್ದು ಅದರ ಚಾಲಕನು ಕಾರನ್ನು ತಗೆದುಕೊಂಡು ಅಲ್ಲಿಂದ ಓಡಿಹೋದನು ಈ ಘಟನೆಯಿಂದ ನನಗೆ ಬಲಗೈಗೆ ಭಾರಿ ರಕ್ತಗಾಯ ಮತ್ತು ಮುಖಕ್ಕೆ ತರಚಿದ ಗಾಯಗಳು ಮತ್ತು ಎಡಗೈಗೆ ತರಚಿದ ಗಾಯಗಳು ಆಗಿರುತ್ತವೆ. ನನ್ನ ತಂದೆಗೆ ಕುಂಡಿ ಚೆಪ್ಪಿಗೆ ಪೆಟ್ಟಾಗಿದ್ದು ಬಲಗಾಲಿಗೆ ಗುಪ್ತಗಾಯವಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣಗಳು :
ಜೇವರಗಿ ಠಾಣೆ : ಶ್ರೀಮತಿ ಭಾಗ್ಯಶ್ರಿ. ಗಂಡ ರಾಜು ಹೊಸಕೋಟೆ ಸಾ|| ಜೇವರಗಿ ರವರ ಮದುವೆ 2015 ನೇ ಸಾಲಿನಲ್ಲಿ ಮುಧೋಳ ಪಟ್ಟಣದ ರಾಜು ಹೊಸಕೋಟೆ ಇವರೊಂದಿಗೆ ವಿವಾಹವಾಗಿದ್ದು ಇರುತ್ತದೆ. ನನ್ನ ಗಂಡ ರಾಜು, ಮಾವ ಮಾಲಿಂಗಪ್ಪ. ಅತ್ತೆ ಪುಷ್ಪಾ. ಮೈದುನ ರವಿ, ನೇಗೆಣಿ ಜ್ಯೋತಿ, ನಾದಿನಿ ರೂಪಾ, ನಾದಿನಿಯ ಗಂಡ ರಾಜೇಶ ಇವರೆಲ್ಲರು ಕೂಡಿಕೊಂಡು ನನಗೆ ನಿನ್ನ ತವರು ಮನೆಯಿಂದ ವರದಕ್ಷಿಣೆ ಹಣ ಮತ್ತು ಬಂಗಾರ ತೆಗೆದುಕೊಂಡು ಬಾ ಅಂತ ಜಗಳ ಮಾಡಿ ಕೈಯಿಂದ ಹೊಡೆ ಬಡೆ ಮಾಡಿ ಮಾನಸೀಕ ಹಾಗು ದೈಹಿಕ ಕಿರುಕುಳ ಕೊಟ್ಟಿದ್ದು ಅಲ್ಲದೆ ದಿನಾಂಕ 17.04.2017 ರಂದು ಮುಂಜಾನೆ ನಾನು ಜೇವರಗಿ ಪಟ್ಟಣದ ಶಿವಲಿಂಗಪ್ಪ ಪಾಟೀಲ ನರಿಬೊಳ ಏರಿಯಾದಲ್ಲಿ ಇರುವ ನನ್ನ ತಂದೆ ಯವರು ವಾಸವಾಗಿರುವ ಮನೆಯಲ್ಲಿ ಇದ್ದಾಗ ನನ್ನ ಗಂಡ ರಾಜು ಮೈದುನ ರವಿ, ಮಾವನಾದ ಮಾಲಿಂಗಪ್ಪ ಮತ್ತೆ ಯಾದ ಪುಷ್ಪಾ ಇವರೆಲ್ಲರು ಕುಡಿಕೊಂಡು ನಮ್ಮ ಮನೆಗೆ ಬಂದು ನನಗೆ ಅವಾಚ್ಯವಾಗಿ ಬೈಯುತ್ತ ರಂಡಿ ತವರು ಮನೆಯಿಂದ ಹಣ ಬಂಗಾರ ತೆಗೆದುಕೊಂಡು ಬಾ ಅಂತ ಹೇಳಿದರು ಕೂಡ ನೀನು ತವರು ಮನೆಯಲ್ಲಿಯೆ ಇರುತ್ತಿ ಎಂದು ಬೈದಿರುತ್ತಾರೆ. ಅಲ್ಲದೆ ನನ್ನ ಗಂಡ ನನಗೆ ಕೂದಲು ಹಿಡಿದು ಎಳೆದಾಡಿ ಕೈಯಿಂದ ಹೊಡೆಬಡೆ ಮಾಡಿರುತ್ತಾರೆ. ಮೈದುನ ಮತ್ತು ಮಾವ ಇವಳಿಗೆ ಜೀವ ಸಹಿತ ಬಿಡಬ್ಯಾಡ ಖಲಾಸ್ ಮಾಡು ಅಂತ ಪ್ರಚೋದನೆ ನಿಡಿರುತ್ತಾರೆ. ನನ್ನ ಗಂಡ ಮತ್ತು ಅತ್ತೆ ಮಾವ, ನೆಗೆಣಿ, ಮೈದುನರು, ನಾದಿನಿ ಮತ್ತು ಅವಳ ಗಂಡ ಎಲ್ಲರೂ ಕೂಡಿಕೊಂಡು ನನಗೆ ತವರು ಮನೆಯಿಂದ ಹಣ ಬಂಗಾರ ತೆಗೆದುಕೊಂಡು ಬಾ ಎಂದು ಜಗಳ ಮಾಡಿ ಅವಾವಚ್ಯವಾಗಿ ಬೈದು ಕೈಯಿಂದ ಹೊಡೆ ಬಡೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಹಿಳಾ ಠಾಣೆ : ಶ್ರೀಮತಿ ಸುನೀತಾ ಗಂಡ ಅಶೋಕ ಸಾಲಿಮನಿ ಸಾ: ಮನೆ ನಂ 119 ರಾಮಚಂದ್ರ ಗೂಡುರು ಇವರ ಮನೆಯಲ್ಲಿ ಬಾಡಿಗೆ ಸಿ.ಐ.ಬಿ ಕಾಲನಿ ಕಲಬುರಗಿ ಇವರು ದಿನಾಂಕ 28.05.2012 ರಂದು ಗುರು ಹಿರಿಯರು ನಿಶ್ಚಯಿಸಿದಂತೆ ಅಶೋಕ ಸಾಲಿಮನಿ ಇವರೊಂದಿಗೆ ವಿವಾಹವಾಗಿದ್ದು ಇರುತ್ತದೆ. ಮದುವೆಯಾದಾಗಿನಿಂದ ನಾನು ಒಂದು ದಿನವು ನೆಮ್ಮದಿಯಿಂದ ಉಸಿರಾಡಿದ ನೆನಪಿಲ್ಲ ಕಾರಣ ನನ್ನ ಗಂಡ ಕುಡಿಯುವ ಚಟದವನಿರುತ್ತಾನೆ. ಕುಡಿದ ನಶೆಯಲ್ಲಿ ದಿನಾಲು ನನಗೆ ಹೊಡೆಯುವುದು ಅವಾಚ್ಯ ಶಬ್ದಗಳಿಂದ ಬೈಯ್ಯುವುದು ಕೂದಲು ಹಿಡಿದು ಗೋಡೆಗೆ ಹೊಡೆಯುವುದು ಮಾಡುತ್ತಾ ಬಂದಿರುತ್ತಾನೆ. ನನ್ನ ಗಂಡ ಕೊಡುವ ಹಿಂಸೆಯನ್ನು ತಾಳಲಾರದೇ ನಾನು ಸ್ಪಂದನಾ ಕೌನ್ಸಲಿಂಗ ಕೂಡ ಮಾಡಿದ್ದು ಅಲ್ಲದೇ ನಮ್ಮ ಹಿರಿಯರು ನನ್ನ ಗಂಡನಿಗೆ ನ್ಯಾಯ ಪಂಚಾಯತಿ ಮಾಡಿ ಬುದ್ದಿವಾದ ಕೂಡ ಹೇಳಿದ್ದು ಇರುತ್ತದೆ. ಆದರೂ ಕೂಡ ಮತ್ತೇ ತವರು ಮನೆಯಿಂದ 1 ಲಕ್ಷ ರೂಪಾಯಿ ತರುವಂತೆ ಪೀಡಿಸುತ್ತಿದ್ದನು. ದಿನಾಂಕ 19.05.2017 ರಂದು ಮದ್ಯಾಹ್ನ 2 ಗಂಟೆಯ ಸುಮಾರಿಗೆ ನನ್ನ ಗಂಡ ಕುಡಿದು ಬಂದು ನಿನ್ನ ಸಾಯಿಸ್ತಿನಿ ನೀ ಸತ್ತರೇ ನಾನು ಇನ್ನೊಂದು ಮದುವೆ ಮಾಡಿಕೊಳ್ಳೂತ್ತೇನೆ ಈ ಎಲ್ಲಾ ವಿಷಯಗಳು ನಿನ್ನ ಸಹೋದರಿಗೆ ಹೇಳುತ್ತಿಯಾ ಎಂದು ನನ್ನ ಕುತ್ತಿಗೆ ಬಲವಾಗಿ ಹಿಡಿದು ಅಪ್ಪಳಿಸಿ ಗೋಡೆಗೆ ಹೊಡೆದು ಕಾಲಿನಿಂದ ಒದ್ದು ಕೂದಲು ಹಿಡಿದು ಮೇಲಿನಿಂದ ಬಿಸಾಕಿರುತ್ತಾನೆ.  ಆಗ ನಾನು ಪ್ರಜ್ಞೆ ತಪ್ಪಿ ಬಿದ್ದೆ. ಈ ಜಗಳವನ್ನು ನೋಡಿದ ಮಹಾಂತೇಶ ಹಾಗೂ ತಿರ್ಥಕುಮಾರ ಅವರು ಬಿಡಿಸಿದ್ದು ಇರುತ್ತದೆ. ಆಗ ನನ್ನ ಅಣ್ಣಂದಿರು ಬಂದು ನನಗೆ ಉಪಚಾರ ಕುರಿತು ಜಿಲ್ಲಾ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ. ಸುಮಾರು 2 ದಿನಗಳ ಕಾಲ ನಾನು ಆಸ್ಪತ್ರೆಯಲ್ಲಿ ಇದ್ದೆ. ನನ್ನ ತಲೆಯ ಹಿಂದುಗಡೆ ಬುಗಟೆ ಬಂದಿರುತ್ತದೆ. ಕುತ್ತಿಗೆ ಒತ್ತಿ ಹಿಡಿದಿದ್ದರಿಂದ ತರಚಿದ ಗಾಯಗಳಾಗಿವೆ. ಈ ಎಲ್ಲಾ ಹಿಂಸೆ ಮತ್ತು ಕಿರುಕುಳದಿಂದ ನನಗೆ ಜೀವ ಬೆದರಿಕೆ ಇದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಹರಣ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ತಾರಾಬಾಯಿ ಗಂಡ ದಿಃಶೇಖಪ್ಪಾ ಮೈನಾಳ ಸಾ: ಪ್ಲಾಟ ನಂ 1050 ನ್ಯೂ ಕ್ರಷ್ಣಾ ಸುತಾರ ಇವರ ಮನೆಯಲ್ಲಿ ಬಾಡಿಗೆ ಜೆವರ್ಗಿ ಕಾಲನಿ ಕಲಬುರಗಿ ಇವರ ಮಗಳಾದ ಭಾಗ್ಯಶ್ರೀ ವಯಸ್ಸು 20 ವರ್ಷ ಇವಳು ಎಸ್.ಬಿ ಕಾಲೇಜಿನಲ್ಲಿ ಬಿ.ಎಸ್.ಸಿ ದ್ವೀತಿಯ ವರ್ಷದಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದಾಳೆ. ದಿನಾಂಕ 31.05.2017 ರಂದು 5 ಪಿ.ಎಂಕ್ಕೆ ನಾವು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಅಪಹರಿಸಿಕೊಂಢು ಹೋಗಿರುತ್ತಾರೆ. ತದ ನಂತರ ರಾತ್ರಿ 8 ಗಂಟೆಗೆ ಮೊಬೈಲ ನಂ 7760760245, 7204088093, 8550844167 ದಿಂದ ನನ್ನ ಮೊಬೈಲ ನಂ 7760820487, 7760726099 ನೇದ್ದಕ್ಕೆ ಕರೆ ಮಾಡಿ ನಿನ್ನ ಮಗಳನ್ನು ನಾನು ಅಪಹರಿಸಿಕೊಂಡು ಹೋಗಿರುತ್ತೇನೆ ಇದರ ಬಗ್ಗೆ ನೀವು ಪೊಲೀಸರಿಗೆ ಏನಾದರು ದೂರು ಸಲ್ಲಿಸಿದರೆ ನಾನು ನಿಮ್ಮ ಕುಟುಂಬವನ್ನು ಸಮೇತ ಸುಟ್ಟು ಬಿಡುತ್ತೆವೆಂದು ಜೀವದ ಬೆದರಿಕೆ ಹಾಕಿರುತ್ತಾನೆ. ಅವನು ತನ್ನ ಹೆಸರು ಗೋಪಾಲ ಹಂಗರಗಿ ಎಂದು ತಿಳಿಸಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.