POLICE BHAVAN KALABURAGI

POLICE BHAVAN KALABURAGI

09 July 2017

Kalaburagi District Reported Crimes

ಮದುವೆ ಮಾಡಿಕೊಳ್ಳುವುದಾಗಿ ಪುಸಲಾಯಿಸಿ ಅಪಹರಿಸಿಕೊಂಡು ಹೋದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಮಹಮ್ಮದ ಅಲಿ ಖಾನ ತಂದೆ ಕರಿಮುಲ್ಲಾ ಖಾನ ವಿಳಾಸ; ಝಮ ಝಮ ಕಾಲೂನಿ ಸಿಟಿ ಆಕಾಡೆಮಿ ಶಾಲೆ ಹತ್ತಿರ ಹಾಗರಗಾ ರೋಡ ಕಲಬುರಗಿ  ಇವರು ದಿನಾಂಕ 3-7-2017 ರಂದು ಮನೆಗೆ ಬಂದಾಗ ನನ್ನ ಹೆಂಡತಿ ಅಳುತ್ತಾ ತಿಳಿಸಿದ್ದು ಏನೆಂದರೆ  ದಿನಾಂಕ.2-7-2017 ರಂದು ಬೆಳಗ್ಗೆ ಮುಂಜಾನೆ 5-00 ಗಂಟೆಯ ಸುಮಾರಿಗೆ ನಾವೆಲ್ಲರೂ ಬಡ್ ರೂಮಿನಲ್ಲಿ ಮಲಗಿದಾಗ ಹೊರಗಡೆಯಿಂದ ಬಾಗಿಲು ಬಾರಿಸಿದ್ದ ಶಬ್ದ ಕೇಳಿ ಪಾಪಾ ಗಾಂವಸೇ ವಾಪಸ ಆಯೇ ದಿಕ್ತಾ ಅಂತಾ ನನ್ನ ಮಗಳು ಮದಿಯಾಖಾನಂ ಇವಳು ಬಾಗಿಲು ತೆಗೆದಾಗ ಯಾರೋ ಅವಳ ಬಾಯಿ ಒತ್ತಿ ಹಿಡಿದಾಗ ಅವಳು ಚೀರ ಹತ್ತಿದ್ದಳು ಆಗ ನಾನು ಎದ್ದು ಬರುವಷ್ಟರಲ್ಲಿ ನನ್ನ ಮಗಳು ಮದಿಯಾಖಾನಂ. ಇವಳ ಬಾಯಿಯನ್ನು ರೆಹಾನ ಸೌದಾಗರ ಇತನು ಒತ್ತಿ ಹಿಡಿದಿದ್ದು  ಅವನ ಸಂಗಡ ಇದ್ದ ಇನ್ನೊಬ್ಬ ಹುಡುಗನು ಓಡುತ್ತಾ ಬಂದು ನಮ್ಮ ಬೆಡರೂಮಿನ ಕೊಂಡಿ ಹಾಕಿದನು ನಾವೆಲ್ಲರೂ ಚಿರಾಡಿದರು ಕೂಡಾ  ರೆಹನಾ ಸೌದಾಗರ ಇತನು ಮದಿಯಾಖಾನಂ ಇವಳಿಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಪುಸಲಾಯಿಸಿ ಜಬರದಸ್ತಿಯಿಂದ ಅಪಹರಿಸಿಕೊಂಡು ಹೋದರು, ರೆಹಾನ ಸೌಧಾಗರ ಇತನೊಂದಿಗೆ ಇನ್ನೂ 2 ಜನರು ಇದ್ದರು ಅಂತಾ ಅಳುತ್ತಾ ಹೇಳಿದಳು       ನಂತರ ನಾನು ಮತ್ತು ನನ್ನ ಹಿರಿಯ ಮಗಳು ಮರಿಯಮ್ಮಾಖಾನಂ. ಮತ್ತು ಅಳಿಯ ಖದೀರ ಸೌದಾಗ ಕೂಡಿಕೊಂಡು  ರೆಹಾನ ಸೌದಾಗರ  ಇತನ ತಂದೆ ರಶೀದ ಸೌಧಾಗರ ಮತ್ತು ಚಿಕ್ಕಪ್ಪಾ ಡಾ; ರಮಹಿಮ ಸೌಧಾಗರ ಇವರ ಹತ್ತಿರ  ವಿಚಾರಣೆ ಮಾಡಿದ್ದಾಗ ನಮಗೆ ಗೊತ್ತಿಲ್ಲಾ ಹುಡುಕಾಡಿರಿ ಅಂತಾ ತಿಳಿಸಿದ್ದು, ಆಗನಾವು ಎಲ್ಲಾ ಕಡೆಗೂ ಹುಡುಕಾಡಿದ್ದರೂ ಸಿಕ್ಕಿರುವದಿಲ್ಲಾ. ನಂತರ  ಗೊತ್ತಾಗಿದ್ದು ಏನೆಂದರೆ ರೆಹಾನ ಸೌಧಾಗರ ಇತನು ನನ್ನ ಮಗಳನ್ನು ಮದುವೆ ಮಾಡಿಕೊಳ್ಳಬೇಕೆಂದು ದುರುದ್ದೇಶದಿಂದ ಅವಳನ್ನು ಪುಸಲಾಯಿಸಿ ತನ್ನ ಇಬ್ಬರು ಗೆಳೆಯರೊಂದಿಗೆ ಮನೆಗೆ ಬಂದು ಅಪ್ರಾಪ್ತ ವಯಸ್ಸಿನ ನನ್ನ ಮಗಳು ಮದಿಯಾ ಖಾನಂ ಇವಳನ್ನು ಜಬರದಸ್ತಿಯಿಂದ ಅಪಹರಿಸಿಕೊಂಡು ಹೋಗಿದ್ದು , ಸದರಿ ರೆಹಾನ ಸೌಧಾಗರ ಇತನು ನನ್ನ ಅಪ್ರಾಪ್ತ ಮಗಳನ್ನು ಅಪಹರಿಸಿಕೊಂಡು ಹೋಗುವಲ್ಲಿ ಆತನ ತಂದೆ ರಶೀದ ಸೌಧಾಗರ , ಅಣ್ಣರಿಜ್ಞಾನ ಸೌಧಾಗರ, ತಾಯಿಶ್ರೀಮತಿ ಝರಿನಾ ಸೌಧಾಗರ ಹಾಗೂ ಆತನ ಚಿಕ್ಕಪ್ಪಾ ಡಾ;ರಹೀಮ ಸೌದಾಗರ ಇವರು ಪ್ರಚೋದಿಸಿ ಸಹಕಸಿರುತ್ತಾರೆ. ಮತ್ತು ಡಾ;ರಹೀಮ ಸೌಧಾಗರ ಇತನು ರೆಹಾನ ಸೌಧಾಗರ ಇತನಿಗೆ ಅಪಹರಿಸಿಕೊಂಡು ಹೋಗಲು ಆತನ ಖರ್ಚಿಗಾಗಿ ಹಣದ ಸಹಾಯ ಮಾಡಿರುತ್ತಾನೆ ಅಂತಾ ಗೊತ್ತಾಗಿರುತ್ತದೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣಗಳು :
ಶಾಹಾಬಾದ ನಗರ ಠಾಣೆ : ಶ್ರೀ ಅಬ್ದುಲ ರಹೀಮ ತಂದೆ ಶೇಖ ದಾವೂದ ಸಾ: ನೆಹರು ಚೌಕ ಶಹಾಬಾದ ಇವರು ದಿನಾಂಕ: 08/07/2017 ರಂದು ಸಾಯಂಕಾಲ ಜೇವರ್ಗಿ ಕ್ರಾಸ ಹತ್ತಿರದ ಅಂಗಡಿಯಿಂದ ತಾನು ಮತ್ತು ರಿಯಾಜ ತಂದೆ ಚಾಂದಸಾಬ ಪಠಾಣ ಇಬ್ಬರು ಕೂಡಿ ಮೋಟಾರ ಸೈಕಲ ಮೇಲೆ ಮನೆಗೆ ಬರುವಾಗ ದುರ್ಗಾ ಭಾರ ಹತ್ತಿರ ಗಿರಿಣಿ ಹತ್ತಿರ ರಸ್ತೆಯಲ್ಲಿ ಬಂದಾಗ ರಸ್ತೆಯಲ್ಲಿ ಯಾರೋ ತಮ್ಮ ಮೋಟಾರ ಸೈಕಲ ನಿಲ್ಲಿಸಿದ್ದು ನೋಡಿ ಕೋನ ರಸ್ತೆಮೆ ಮೋಟಾರ ಸೈಕಲ ಖಡಾಯ ಅಂತಾ ಅಂದಾಗ ಅಲ್ಲಿಯೇ ಇದ್ದ ಶರಣು ತಂದೆ ಸಿದ್ಪಪ್ಪ ಇತನು ನನ್ನದೆ ಇದೆ ರಸ್ತೆಯಲ್ಲಿ ನಿಲ್ಲಿಸಿದರೆ ನಿನಗೆನು ಆಯಿತ್ತು ತೆಗೆಯುವುದಿಲ್ಲಾ ಏನು ಮಾಡುತ್ತಿ ಹೊಗಲೇ ಅಂತಾ ಅಂದಾಗ ರಸ್ತೆಯಲ್ಲಿ ನಿಲ್ಲಿಸಿದ್ರ ಹೇಗೆ ತೆಗೆಯಿರಿ ಅಂತಾ ಅಂದಾಗ ಮಗನೆ ನಿನ್ನ ತಿಂಡಿ ಜಾಸ್ತಿ ಆಗಿದೆ ನಾನು ಯಾರು ನಿನಗೆ ಗೊತ್ತಿಲ್ಲಾ ಅಂತಾ ಬೈದು ನನಗೆ ಕೈಯಿಂದ ಎದೆಯ ಮೇಲಿನ ಅಂಗಿ ಹಿಡಿದು ಕಪಾಳದ ಮೇಲೆ ಹೊಡೆಯುತ್ತಿದ್ದಾಗ ಅಲ್ಲಿಯೇ ಇದ್ದ ಮನೋಜ ಮತ್ತು ವಿನಾಯಕ ಇವರು ಬಂದು ಏನಾಯಿತ್ತು ಮಗ ಏನಂತಾನೆ ಹಿಡಿಯಿರಿ ರಂಡಿ ಮಗನಿಗೆ ಅಂತಾ ಬೈದು ಇಬ್ಬರು ಬಡಿಗೆಯಿಂದ ಮತ್ತು ಬೆಲ್ಡದಿಂದ ಹೊಡೆಯುತ್ತಿದ್ದಾಗ ನಾನು ಅಂಜಿ ಗಿರಣಿ ಹತ್ತಿರ ಓಡಿ ಹೋಗುವಾಗ ಅವರೆಲ್ಲಾರು ಹಾಗೂ ಇತರೆ 10-15 ಜನರು ಬಂದು ನನಗೆ ಗಿರಣಿಯಲ್ಲಿ ಹಾಕಿ ಕೈಯಿಂದ ಮತ್ತು ಕಾಲಿನಿಂದ ಒದ್ದು ಕೈಯಿಂದ ಬೆನ್ನಿಗೆ ಎದೆಗೆ ಹೊಡೆಯುತ್ತಿದ್ದಾಗ ಪಕ್ಕದ ಗಿರಣಿಯವರ ಮನೆಯ ಹೋಗುವಾಗ ಎಲ್ಲಾರು ಕೂಡಿ ಹೊಡೆಯುತ್ತಿದ್ದಾಗ ನನ್ನ ಜೀವ ಉಳಿಸಿಕೊಳ್ಳಲು ಸೂಗೂರ ಸಾಹುಕಾರ ಇವರ ಮನೆಯಲ್ಲಿ ಹೋದಾಗ ಅಲ್ಲಿಯು ಕೂಡ ಅದೆ ಜನ ಅಲ್ಲಿಗೆ ಬಂದು ಅವರೊಂದಿಗೆ ಶಂಕರ ಸೂಗೂರ ಮತ್ತು ಆತನ ಸಹೋದರ ಹಾಗೂ ಮುನಿಮ ಇವರು ನಿಟದಿಂದ ಮೈ ಕೈಗೆ ತಲೆಯ ಮೇಲೆ ಹೊಡೆದು ಗಾಯಾ ಪೆಟ್ಟು ಗೊಳಿಸಿದಾಗ  ನಾನು ಚಿರಾಡುವದನ್ನು ನೋಡಿ ಸಾಯುತ್ತಾನೆ ನಡೆಯಿತಿ ಸುಳೆ ಮಗ ಅಂತಾ ಬೈದು ಹೋಗುವಾಗ ನಾನು ನೀರು ಕೊಡಿರಿ ಸಾಯುತ್ತೇನೆ ಅಂತಾ ಅಂದಾಗ ಶಂಕರ ಇತನು ಉಚ್ಚಿ ಕುಡಿ ಅಂತಾ ಬೈದು ಹೊಡೆಯುವಾಗ ವಿಷಯ ಗೊತ್ತಾಗಿ ಅಲ್ಲಿಗೆ ಬಂದ ನಮ್ಮ ಚಿಕ್ಕಪ್ಪ ಮಹ್ಮದ ಹನೀಪ , ಅಮಜದ ಖಾನ , ಹಾಗೂ ಇತರರು ಶಹಾಬಾದಕ್ಕೆ ತಂದು ಸೇರಿಕೆ ಮಾಡಿದ್ದು ಇರುತ್ತದೆ. ತನಗೆ ಕೊಲೆ ಮಾಡುವ ಉದ್ದೇಶದಿಂದ ಹೊಡೆ ಬಡೆ ಮಾಡಿದವರ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಶಾಹಾಬಾದ ನಗರ ಠಾಣೆ : ಶ್ರೀಮತಿ ಸಂಗಮ್ಮ ಗಂಡ ಶಿವಲಿಂಗಪ್ಪ ಹೂಗಾರ ಸಾ: ತೊನಸನಹಳ್ಳಿ ಎಸ್  ಇವರು.  ದಿನಾಂಕ: 04/07/2017 ರಂದು ರಾತ್ರಿ ತೊನಸನಳ್ಳಿ ಗ್ರಾಮದ ಪಿರ್ಯಾದಿ ಗಂಡನಾದ ಶಿವಲಿಂಗಪ್ಪ ಹೂಗಾರ ಇವರ ಅಂಗಡಿಯ ಮುಂದುಗಡೆ ಅರೋಪಿತನಾದ ಮಹಾಂತೇಶ ತಂದೆ ಸಿದ್ದಣ್ಣ ಪಾಳಾ ಇತನು ಪಿರ್ಯಾದಿ ಮೃತ ಮಗನಾದ ರವಿ ಇತನಿಗೆ ಒಂದು ಲಕ್ಷ ರೂ ಸಾಲ ಕೊಟ್ಟಿದ್ದ ವಿಷಯದಲ್ಲಿ ಪಿರ್ಯಾದಿ ಗಂಡನಾದ ಶಿವಲಿಂಗಪ್ಪ ಇವರಿಗೆ ಜಗಳ ತೆಗೆದು ಆಕ್ರಮ ತಡೆ ಮಾಡಿ ಅವಾಚ್ಯವಾಗಿ ಕೈಹಿಂದ ಮತ್ತು ಪಳಿಯಿಂದ ತಲೆಗೆ ಹೊಡೆದು ರಕ್ತಗಾಯಾ ಪಡಿಸಿ ಹಣ ಕೊಡದಿದ್ದರೆ ಸುಮ್ಮನೆ ಬಿಡುವುದಿಲ್ಲಾ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಭಯ ಹಾಕಿರುತ್ತಾನೆ ನನ್ನ ಗಂಡನಿಗೆ ಜಗಳದಲ್ಲಿ ರಕ್ತಗಾಯಾವಾಗಿ ಕಿವಿಯಿಂದ ರಕ್ತ ಬಂದು ಬೋಹೊಷ ಆದಾಗ ಅವರಿಗೆ ಉಪಚಾರ ಕುರಿತು ಕಲಬುರಗಿಯ ಮೇಡಿಕೇರ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.