POLICE BHAVAN KALABURAGI

POLICE BHAVAN KALABURAGI

29 August 2020

KALABURAGI DISTRICT REPORTED CRIMES 29-08-2020

 ಎ.ಟಿ.ಎಂ ಕಳ್ಳತನ:-

ಆಳಂದ ಪೊಲೀಸ ಠಾಣೆ 

            ದಿನಾಂಕ 28/08/2020 ರಂದು 04.00 ಪಿ ಎಮ್ ಕ್ಕೆ ಫಿರ್ಯಾದಿ ಶ್ರೀ ಇಜಾಜ್ ಅಹ್ಮದ ತಂದೆ ಅಹ್ಮೇದ ಅಲಿ ಸಿದ್ದಕಿ ವಯಾ|| 31 ವರ್ಷ ಜಾತಿ|| ಮುಸ್ಲೀಂ ಉದ್ಯೋಗ|| ಅಟೋ ಮೋಬೈಲ ವ್ಯಾಪಾರ ಸಾ|| ಸಿದ್ದಕಿ ಕಾಲೋನಿ ಆಳಂದ ಜಿಲ್ಲಾ|| ಕಲಬುರಗಿ ಇವರು ಕೊಟ್ಟ ದೂರಿನ ಸಾರಾಂಶವೆನೆಂದರೆ, ಆಳಂದ ಪಟ್ಟಣದ ರಜವಿ ರೋಡಿಗೆ ಇರುವ ನಮ್ಮ ಕಾಂಪ್ಲೇಕ್ಸದ ಒಂದು ಶೇಟರದಲ್ಲಿ ಎರಡು ವರ್ಷದಿಂದ ಏಕ್ಸಸ್ ಬ್ಯಾಂಕನವರು ಎಟಿಎಮ್ ಸಲುವಾಗಿ ಬಾಡಿಗೆಗೆ ಪಡೆದುಕೊಂಡಿರುತ್ತಾರೆಬ್ಯಾಂಕಿನವರು ಆಗಾಗ ಎಟಿಎಮ್ ದಲ್ಲಿ ಹಣ ತುಂಬಿ ಹೊಗುತ್ತಿದ್ದರು. ದಿನಾಂಕ : 27/08/2020 ರಂದು 11.00 ಪಿ ಎಮ್ ದಿಂದ ದಿನಾಂಕ : 28/08/2020 ರಂದು 05.00 ಎ ಎಮ್  ನಡುವಿನ ಅವದಿಯಲ್ಲಿ ಯಾರೋ ಕಳ್ಳರು ಗ್ಯಾಸ ಕಟರ ಮಸೀನದಿಂದ ಎ ಟಿ ಎಮ್ ನ್ನು ಕಟ್ ಮಾಡಿ ಅದರೊಳಗಿದ್ದ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.  ಈ ಬಗ್ಗೆ ಎಕ್ಸಸ್ ಬ್ಯಾಂಕಿನ ಎಟಿಎಂ ದವರಿಗೆ  ವಿಷಯ ತಿಳಿಸಿದಾಗ ಅವರು ಬಂದು ಎ.ಟಿ.ಎಂ.ಹಣ ವರ್ಗಾವಣೆ ಬಗ್ಗೆ ಚೆಕ್ಕ ಮಾಡಿದಾಗ ದಿನಾಂಕ.20/08/2020 ರಂದು 05 ಲಕ್ಷ ರೂಪಾಯಿ ಜಮಾ ಮಾಡಿದಾಗ ಎ.ಟಿ.ಎಮ್.ನಲ್ಲಿ ಒಟ್ಟು 15,21,200/-ರೂ ಇದ್ದು ಅದರಲ್ಲಿ ದಿ.28/08/2020 ರ ಬೆಳಗ್ಗೆವರೆಗೆ 1,34,700/-ರೂ ವಿತ್ ಡ್ರಾ ಆಗಿರುತ್ತದೆ. ಉಳಿದ ಹಣ.13,86,500/-ರೂ ಎ.ಟಿ.ಎಮ್.ನಲ್ಲಿ ಉಳಿದಿರುತ್ತವೆ. ಸದರಿ ಹಣವನ್ನು ಯಾರೋ ಕಳ್ಳರು ಗ್ಯಾಸ ಕಟರ್ ಮಸೀನದಿಂದ ಕಟ್ ಮಾಡಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಕೊಟ್ಟ ಹೇಳಿಕೆ ಮೇಲಿಂದ ಆಳಂದ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.  

 

ರಸ್ತೆ ಅಪಘಾತ:-

ಮುಧೋಳ ಠಾಣೆ 

   ದಿನಾಂಕ;27-08-2020 ರಂದು ಸಾಯಂಕಾಲ 06-00 ಗಂಟೆ ಸುಮಾರಿಗೆ ಫಿರ್ಯಾದಿ ನಿತ್ಯಾನಂದ ತಂದೆ ಮಲ್ಲಯ್ಯಸ್ವಾಮಿ ವ|| 21 ವರ್ಷ ಸಾ|| ವಿಠ್ಠಲಾಪೂರ ಮಂಡಲ|| ದಾಮರಗಿದ್ದ ತಾ|| ಕೊಡಂಗಲ ಜಿ|| ನಾರಾಯಣಪೇಟ ಈತನು ನೀಡಿದ ದೂರಿನ ಸಾರಾಂಶವೇನೆಂದರೆ, ತಾನು, ತನ್ನ ಗೆಳೆಯನಾದ ಅಭಿಲಾಷ ಇತನೊಂದಿಗೆ ಮೊಟರ ಸೈಕಲ ನಂ ಟಿಎಸ್-06-ಈಟಿ-7118 ನೆದ್ದರ ಮೇಲೆ ಕುಳಿತುಕೊಂಡು ಚಂದಾಪೂರದಿಂದ ಪಾಕಲ ಕಡೆಗೆ ಹೋಗುತ್ತಿದ್ದಾಗ ಮುಧೋಳ ಕ್ರಾಸ್ ಆರೋಪಿತನಾದ ಲಕ್ಷ್ಮಪ್ಪ ಇತನು ತನ್ನ ಮೊಟರ ಸೈಕಲ ನಂ ಎಪಿ-13-ಜೆ-1371 ನೆದ್ದನ್ನು ಅತೀವೇಗವಾಗಿ ಮತ್ತು ನಿಷ್ಕಳಾಜಿತನದಿಂದ ಚಲಾಯಿಸಿ ಫಿರ್ಯಾದಿ ಮೊ ಸೈಕಲಗೆ ಅಪಘಾತ ಮಾಡಿದ್ದರಿಂದ ಫಿರ್ಯಾದಿಗೆ ಹಾಗು ಹಿಂದೆ ಕುಳಿತ ವ್ಯಕ್ತಿಗೆ ಸಾಧಾ ಮತ್ತು ಭಾರಿ ಪ್ರಮಾಣದ ರಕ್ತಗಾಯಗಳಾಗಿದ್ದು ನಂತರ ಆಪಾದಿತನು ತನ್ನ ಮೊಟರ ಸೈಕಲ ತೆಗೆದುಕೊಂಡು ಓಡಿ ಹೋದ ಬಗ್ಗೆ ಮುಧೋಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  

 

ರಸ್ತೆ ಅಪಘಾತ:-

ವಾಡಿ ಪೊಲೀಸ ಠಾಣೆ 

               ದಿನಾಂಕಃ 28/08/2020 ರಂದು ಫಿರ್ಯಾಧಿ ಶ್ರೀಜಾವೀಧ ತಂದೆ ಅಲ್ಲಾವುದ್ದಿನ ಸಾಃ ಕಮಲಿಬಾಬಾ ದರ್ಗಾ ಆರಿಯಾ ವಾಡಿ ರವರು ಠಾಣೆಗೆ ಹಾಜರಾಗಿ ದೂರು ಅರ್ಜಿ ಸಲ್ಲಿಸಿದ್ದು ಸಾರಂಶವೇನೆಂಧರೆನಿನ್ನೆ ದಿನಾಂಕಃ 27/08/2020 ರಂದು  8.20 ಪಿ.ಎಮ್. ಸುಮಾರಿಗೆ ನಮ್ಮ ಮಾವನಾದ ಶಬ್ಬೀರ ತಂದೆ ಮಹೆಬೂಬಸಾಬ ವಃ 50 ವರ್ಷ ಇವರು  ಹಲಕಟ್ಟಾಕ್ಕೆ ಹೋಗಿದ್ದರು ನಿನ್ನೆ ನಾನು ,ನನ್ನ ಗೆಳೆಯನಾದ ಸಲ್ಮಾನ ಬಾಬರವರು  ಕೂಡಿ ಬಲರಾಮ ಚವಕ ಹತ್ತಿರ ಇದ್ದಾಗ  ನನ್ನ ಗೆಳೆಯ ನಾದ  ಅಖೀಲ  ನನಗೆ ಫೋನ ಮಾಡಿ ನಿಮ್ಮ ಮಾವನಾದ  ಶಬ್ಬೀರ ರವರು  ವಾಲ್ಮೀಕಿ ನಾಯಕ ರವರ  ಮನೆಯ ಹತ್ತಿರ ರೋಡಿನಲ್ಲಿ ತಮ್ಮ ಮೊ ಸೈ ನಂ  ಕೆಎ-32 1688 ನೇದ್ದನ್ನು  ಅತಿವೇಗ ಮತ್ತು ಅಲಕ್ಷತನದಿಂದ  ನಡೆಸಿಕೊಂಡು ಬಂದು ಒಮ್ಮಲೆ ಬ್ರೇಕ ಹಾಕಿ ಸ್ಕಿಡ ಆಗಿ ಬಿದ್ದಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಹೋಗಿ ನೋಡಲಾಗಿ, ನಮ್ಮ ಮಾವನ ಬಲ ಹಣೆಗೆ, ಬಲ ಗಲ್ಲಕ್ಕೆಮತ್ತ ತಲೆಗೆ  ರಕ್ತಗಾಯ ವಾಗಿದ್ದು ಮೈ ಕೈ ಗೆ  ಗುಪ್ತಗಾಯವಾಗಿರುತ್ತದೆ. ಕಾರಣ ನಮ್ಮ ಮಾವ ಶಬ್ಬಿರ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ನೀಡಿದ ಫೀರ್ಯಾದಿ ಮೇಲಿಂದ ವಾಡಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.