POLICE BHAVAN KALABURAGI

POLICE BHAVAN KALABURAGI

21 April 2012

GULBARGA DIST REPORTED CRIMES

ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ
:ಶ್ರೀ ಚಂದ್ರಕಾಂತ ತಂದೆ ಮಹಾದೇವಪ್ಪ ಜಂಬಗಿ ಸಾ|| ವಿಜಯ ನಗರ ಕಾಲೋನಿ ಬ್ರಹ್ಮಪೂರ ಗುಲಬರ್ಗಾರವರು ನಮ್ಮ ಮನೆಯ ಮನೆಯ ಪಕ್ಕದಲ್ಲಿ ಅಂಬಾರಾಯ ತಂದೆ ಶಾಂತಪ್ಪ ಹಡಗಿಲ್ ಈತನ ಮನೆಯಿದ್ದು, ಗಲ್ಲಿಯ ಜಾಗೆಯ ಸಂಬಂಧ ನಮಗೆ ಮತ್ತು ಅಂಬಾರಾಯನ ಜೊತೆಗೆ ಕೆಲವು ವರ್ಷಗಳಿಂದ ಜಗಳ ನಡೆಯುತ್ತಾ ಬಂದಿದ್ದು ಇರುತ್ತದೆ. ದಿನಾಂಕ 17-04-2012 ರಂದು ರಾತ್ರಿ 9-30 ಗಂಟೆಯ ಸುಮಾರಿಗೆ ನನ್ನ ತಮ್ಮ, ಸಂಜು, ಶಿವಶರಣಪ್ಪ ಇವರೊಂದಿಗೆ ಮನೆಯ ಹತ್ತಿರ ಮಾತಾಡುತ್ತಾ ನಿಂತಾಗ,ಅಂಬಾರಾಯ ಈತನು ಕೈಯಲ್ಲಿ ಒಂದು ಕಬ್ಬಿಣದ ರಾಡ ಹಿಡಿದುಕೊಂಡು ಬಂದು ಹೊಡೆ ಬಡೆ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:27/12 ಕಲಂ 341, 323, 324, 504 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:

ಶ್ರೀ ಯಲ್ಲಪ್ಪಗೌಡ ತಂದೆ ಶೇಖರಗೌಡ  ಸಾ:ಬೇಂದ್ರೆ ನಗರ ಹೊಸ್ ಜೇವರ್ಗಿ ಕಾಲೋನಿ ಗುಲಬರ್ಗಾ ರವರು ನಾನು ದಿನಾಂಕ 20-04-12 ರಂದು ರಾಷ್ಟ್ರಪತಿ ಸರ್ಕಲ್ ಹತ್ತಿರವಿರುವ ಎಸ್,ಬಿ,ಹೆಚ್ ಬ್ಯಾಂಕ ಎ.ಟಿ.ಎಮ್ ದಿಂದ ಹಣ ತರಲು  ಬಸ್ಸ ಡಿಪೋ ನಂಬರ ಒಂದರಿಂದ ಹತ್ತಿರ ನಡೆದುಕೊಂಡು  ಬರುವಾಗ ಪಟೇಲ ಸರ್ಕಲ ಕಡೆಯಿಂದ ಒಬ್ಬ  ಮೋಟಾರ ಸೈಕಲ್  ನಂ: ಕೆಎ 32 ಎಲ್-4741 ರ ಸವಾರ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿ ಭಾರಿಗಾಯ ಮತ್ತು ಗುಪ್ತಗಾಯಗೊಳಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 49/2012  ಕಲಂ: 279 ,338 ಐ.ಪಿ.ಸಿ ಸಂ 187 ಐ,ಎಮ್,ವಿ,ಆಕ್ಟ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

Gulbarga Dist


ಗುಲಬರ್ಗಾ ಜಿಲ್ಲಾ  ಪೊಲೀಸರ ಕಾರ್ಯಾಚರಣೆ
ಕೇವಲ 24 ಗಂಟೆಯಲ್ಲಿ ಅಪಹರಣವಾದ ಅಪ್ರಾಪ್ತ  ಹುಡುಗಿಯ ರಕ್ಷಣೆ.

ದಿನಾಂಕ: 20-04-2012 ರಂದು ನಸುಕಿನ ವೇಳೆ ಗುಲಬರ್ಗಾ ನಗರದಲ್ಲಿ ಅಪ್ರಾಪ್ತ ಬಾಲಕಿಯ ಅಪಹರಣವಾಗಿತ್ತು. ಈ ಅಪಹರಣಕ್ಕೆ ಒಳಗಾಗಿದ್ದ ಅಪ್ರಾಪ್ತ ಬಾಲಕಿಯ ಪತ್ತೆಗಾಗಿ ಶ್ರೀ ಪ್ರವೀಣ ಮಧುಕರ ಪವಾರ ಐಪಿಎಸ ಜಿಲ್ಲಾ ಪೊಲೀಸ ಅಧೀಕ್ಷಕರು ಗುಲಬರ್ಗಾ ರವರು  ಶ್ರೀ ಭೂಷಣ ಬೊರಸೆ ಐಪಿಎಸ (ಎ) ಉಪ-ವಿಭಾಗಧಿಕಾರಿಗಳಗಳ ನೇತ್ರತ್ವದಲ್ಲಿ  ಎರಡು ವಿಶೇಷ ತಂಡಗಳನ್ನು ರಚಿಸಿದ್ದು, ಶ್ರೀ ಟಿ.ಎಚ. ಕರಿಕಲ್ ಪೊಲೀಸ್ ಇನ್ಸಪೇಕ್ಟರ, ಅಶೋಕ ನಗರ ಠಾಣೆ,  ಅಸ್ಲಾಂ ಭಾಶ ಪಿಐ ವಿಶೇಷ ಶಾಖೆ ಗುಲಬರ್ಗಾ, ಶ್ರೀ ಬಸೀರ ಪಟೇಲ್ ಪಿಐ ಡಿಸಿಐಬಿ ಗುಲಬರ್ಗಾ, ಶ್ರೀ ಬಸವರಾಜ ತೇಲಿ ಪಿ.ಎಸ.ಐ ಆರ.ಜಿ.ನಗರ ಠಾಣೆ ಮತ್ತು ಸಿಬ್ಬಂದಿ ಜನರಾದ ಬಸಯ್ಯ ಸ್ವಾಮಿ ಎಎಸಐ, ಸುರೇಶ ಬರಹಗಾರರು, ಮೌಲಾಲಿ, ರಪೀಕ, ದೇವಿಂದ್ರ, ರಾಮು ಪವಾರ, ಶಿವಪ್ರಕಾಶ, ಶ್ರೀನಿವಾಸ, ಅಣ್ಣಪ್ಪಾ, ಚನ್ನವಿರೇಶ, ಗಂಗಯ್ಯಾ, ರವರುಗಳನ್ನು ಹೊಂದಿದ್ದು, ಈ ಎರಡು ತನಿಖಾ ತಂಡಗಳು ವಿವಿಧ ಕಡೆ ಮಿಂಚಿನ ಕಾರ್ಯಚರಣೆ ಅಪಹರಣ ಆಗಿದ್ದ ಅಪ್ರಾಪ್ತ ಬಾಲಕಿಯನ್ನು ಪತ್ತೆ ಹಚ್ಚಿ ರಕ್ಷಿಸುವಲ್ಲಿ ಯಶ್ವಸಿಯಾಗಿರುತ್ತಾರೆ. ಅಪಹರಣ ಮಾಡಿದ ಆರೋಪಿ ರಾಮು ತಂದೆ ಬಾಬು ರಾಠೋಡ ಸಾ|| ಕಾಳನೂರ ತಾಂಡ ಎಂಬುವವನಿಗೆ ದಸ್ತಗಿರಿ ಮಾಡಿ ಮೊಬಾಯಿಲ್ ಪೋನ ಮತ್ತು ವಿವಿಧ ಕಂಪನಿಯ 20 ಸಿಮ್ ಕಾರ್ಡಗಳನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂದನಕ್ಕೆ ಕಳುಹಿಸಿರುತ್ತಾರೆ. ಈ ಕಾರ್ಯವನ್ನು ಶ್ಲಾಘಿಸಿ ಶ್ರೀ ಪ್ರವೀಣ ಮಧುಕರ ಪವಾರ ಐಪಿಎಸ ಪೊಲೀಸ್ ಆಧೀಕ್ಷಕರು, ಗುಲಬರ್ಗಾ ರವರು ತನಿಖಾ ತಂಡಗಳಿಗೆ  10,000/- ರೂ ಬಹುಮಾನ ಘೋಷಿಸಿರುತ್ತಾರೆ.

ಗುಲಬರ್ಗಾ ನಗರದಲ್ಲಿ ಪರವಾನಿಗೆ ಹೊಂದದೇ ಇರುವ ಅಟೋರೀಕ್ಷಾಗಳ ಬಗ್ಗೆ ಪತ್ರಿಕಾ ಪ್ರಕಟಣೆ:
 ದಿನಾಂಕ:29-03-2012 ರಂದು ಸಂಚಾರಿ ಪೊಲೀಸ್ ಠಾಣೆ ಗುಲಬರ್ಗಾದಲ್ಲಿ ಶ್ರೀ ಪ್ರವೀಣ ಮಧುಕರ ಪವಾರ ಐಪಿಎಸ ಜಿಲ್ಲಾ ಪೊಲೀಸ್ ಅಧೀಕ್ಷಕರು ಗುಲಬರ್ಗಾರವರು  ಮತ್ತು ಶ್ರೀ ಈಶ್ವರ ಅವಂಟಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಗುಲಬರ್ಗಾ ರವರು ಅಟೋ ಚಾಲಕ ಸಂಘದವರು ತಮ್ಮ ಸಮಸ್ಯೆಗಳ ಬಗ್ಗೆ ಸಭೆಯನ್ನು  ಮಾಡಿದ್ದು, ಈ ಸಭೆಯಲ್ಲಿ ಪರವಾನಿಗೆ ಇಲ್ಲದೇ (Without Permit) ಅನಧಿಕೃತವಾಗಿ ಸಾವಿರಕ್ಕಿಂತ ಹೆಚ್ಚಿನ ಅಟೋಗಳು ತಿರುಗಾಡುತ್ತಿದ್ದು, ಇದರಿಂದ ಪರವಾನಿಗೆ ಹೊಂದಿರುವ ಅಟೋದಾರರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ಉಂಟಾಗಿರುತ್ತದೆ. ಹಾಗು ಗ್ಯಾಸ್ ಇಂದನದ ಕೊರತೆ ಉಂಟಾಗುತ್ತಿದೆ ಎಂದು ಚರ್ಚಿಸಿರುತ್ತಾರೆ.
ಈ ಸಂಬಂಧ ಅಟೋ ಮಾಲಿಕರಿಗೆ ತಿಳಿಸುವದೇನೆಂದರೆ, ತಮ್ಮ ಅಟೋ ರೀಕ್ಷಾಗೆ ಸಂಬಂಧ ಪಟ್ಟ ಎಲ್ಲಾ ಮೂಲ ದಾಖಲಾತಿಗಳನ್ನು ಗುಲಬರ್ಗಾ ನಗರದ ಸಂಚಾರಿ ಮತ್ತು ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಹಾಜರ ಪಡಿಸತಕ್ಕದು. ಹಾಜರ ಪಡಿಸಿ ಎಲ್ಲಾ ದಾಖಲಾತಿಗಳು ಪರಿಶೀಲಿಸಿ ಆ ಅಟೋಗೆ ಸಂಬಂಧಪಟ್ಟಂತೆ ದಾಖಲಾತಿಗಳ ಮಾಹಿತಿಯ  ಗುರುತಿನ ಪತ್ರ (ಸ್ಟಿಕರ) ವನ್ನು ನೀಡಲಾಗುವದು.  ಈ ಪ್ರಕ್ರೀಯೆಯನ್ನು ಈಗಾಗಲೇ ಪ್ರಾರಂಭಿಸಿದ್ದು, ದಿನಾಂಕ:31-05-2012 ರಂದು ಕೊನೆಯ ದಿನಾಂಕವಾಗಿರುತ್ತದೆ.
ಆದ್ದರಿಂದ ಅಟೋ ರೀಕ್ಷಾ ಮಾಲಕರು ಮೇಲ್ಕಂಡ ದಿನಾಂಗಳದೊಳಗಾಗಿ ಗುರುತಿನ ಪತ್ರ (ಸ್ಟಿಕರ) ಪಡೆಯತಕ್ಕದು. ಪರವಾನಿಗೆ ಇಲ್ಲದೆ ಇರುವ (Without Permit)  ಅಟೋಗಳ ವಿರುದ್ದ ಸೂಕ್ತ ಕಾನೂನಿನ ಕ್ರಮ ಜರೂಗಿಸಲಾಗುವದು. ಈ ಬಗ್ಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಗುಲಬರ್ಗಾ ರವರು ಮತ್ತು ಗುಲಬರ್ಗಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಜಂಟಿ ಪತ್ರಿಕಾ ಪ್ರಕಟಣೆ ನೀಡಿರುತ್ತಾರೆ.   

Gulbarga Dist Reported Crimes


ಹಲ್ಲೆ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ : ಶ್ರೀ ಧಾವೂದಸಾಬ  ತಂದೆ  ಲಾಲಸಾಬ ನಧಾಪ್  ಸಾಚಲಗೇರಾ  ರವರು  ನಾನು ನಮ್ಮ ಮನೆಯ ಅಂಗಳದಲ್ಲಿ ದಿನಾಂಕ 18/04/2012 ರಂದು  ರಾತ್ರಿ 9 ಗಂಟೆಯ ಸುಮಾರಿಗೆ  ಕುಳಿತಾಗ ನನ್ನ ಅಣ್ಣನಾದ ಮೈಬೂಬಸಾಬ ಆತನ  ಹೆಂಡತಿಯಾದ  ಬೇಗಂ  ಇಬ್ಬರೂ ಕೊಡಿಕೊಂಡು  ನಮ್ಮ  ಮನೆಗೆ ಬಂದು  ಈ ಮನೆಯ ಜಾಗ ನನ್ನದಿದೆ  ಬಿಟ್ಟು ಕೊಡು ಅಂತಾ  ಅವಾಚ್ಯ ಶಬ್ದಗಳಿಂದ ಕೈಯಿಂದ  ಕಪಾಳ ಮೇಲೆ   ಮೈಬೂಬ ಸಾಬ  ಇತನು  ಹೊಡೆದಿರುತ್ತಾನೆ,  ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 16/2012 ಕಲಂ 341, 324, 504 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ,
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:ಶ್ರೀ ಅಬ್ದುಲಗಫುರ ತಂದೆ ಅಹ್ಮಿದಹುಸೇನ  ಸಾ:ಹುದ್ದಾ ಮಜೀದ ಸಮೀಪ ರಹೀಮತ ನಗರ  ಗುಲಬರ್ಗಾ ರವರು ನಾನು ದಿನಾಂಕ 19-04-12 ರಂದು ನಮ್ಮ ಸಂಬಂಧಿಕರಾದ ಸೈಯದ ಶಹಬಾಶ ರವರ ಏಷಿಯನ ಮಹಲ್ ನಲ್ಲಿರುವ ಅಂಗಡಿಯನ್ನು ಬಂದು ಮಾಡಲು ಮೋಟಾರ ಸೈಕಲ ನಂ ಎಮ್,ಹೆಚ್,-13 ಎಕ್ಸ-8264 ರ ಮೇಲೆ ಲಾಹೋಟಿ ಪೆಟ್ರೋಲ್ ಪಂಪ ರೋಡಿನಿಂದ ಎಸ್,ವಿ,ಪಿ ಸರ್ಕಲ ರೋಡಿನಲ್ಲಿ ಬರುವಾಗ ರಾತ್ರಿ 10-00 ಗಂಟೆಗೆ ಲಾಹೋಟಿ ರವರ ಹಳೆ ಕಟ್ಟಡ ಹತ್ತಿರ ಎತಿಮಖಾನ ಹತ್ತಿರ ಮೋಟಾರ ಸೈಕಲ  ನಂ: ಕೆಎ 32  ವಿ-6143 ರ ಸವಾರ ಮೋಟಾರ ಸೈಕಲಗೆ ಡಿಕ್ಕಿ ಪಡಿಸಿ ರಕ್ತಗಾಯಗೊಳಿಸಿ ತನ್ನ  ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 48/2012  ಕಲಂ: 279 ,337 ಐ.ಪಿ.ಸಿ ಸಂ 187 ಐ,ಎಮ್,ವಿ,ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.