POLICE BHAVAN KALABURAGI

POLICE BHAVAN KALABURAGI

09 September 2011

GULBARGA DISTRICT REPORTED CRIMES

ಪೊಲೀಸ ಅಧೀಕಾರಿಗಳ ಮೇಲೆ ಹಲ್ಲೆ :
ಬ್ರಹ್ಮಪೂರ ಠಾಣೆ :ಇಂದು ದಿನಾಂಕ: 08-09-2011 ರಂದು ರಾತ್ರಿ ಶ್ರೀ.ವಿರೇಶ ಪೊಲೀಸ ಇನ್ಸಪೆಕ್ಟರ್ ಚೌಕ ಪೊಲೀಸ್ ಠಾಣೆ ಗುಲಬರ್ಗಾರವರು ಚೌಕ ಪೊಲೀಸ ಠಾಣೆಯ ಹದ್ದಿಯಲ್ಲಿ ನಮಗೆ ಒದಗಿಸಿದ ಸರಕಾರಿ ಜೀಪ ನಂ: ಕೆಎ 10 ಜಿ 76 ನೇದ್ದರಲ್ಲಿ ವಾಹನ ಚಾಲಕ ಮೋಹನ ಎ.ಪಿ.ಸಿ 270 ರವರೊಂದಿಗೆ ಪೆಟ್ರೋಲಿಂಗ ಕರ್ತವ್ಯದ ಮೇಲೆ ಇದ್ದಾಗ ಗೊತ್ತಾಗಿದ್ದೆನೆಂದರೆ ಬ್ರಹ್ಮಪೂರ ಪೊಲೀಸ್ ಠಾಣೆಯ ಹದ್ದಿಯ ಪೈಕಿ ಎಸ್.ಟಿ.ಬಿ.ಟಿ  ಕ್ರಾಸ ಹತ್ತಿರ ಕೆಲವು ಜನರು ರೋಡಿನ ಮೇಲೆ ನಿಂತು ಹೋಗಿ ಬರುವ ಜನರಿಗೆ ಮತ್ತು ವಾಹನಗಳನ್ನು ತಡೆದು ಅಂಜಿಸಿ ಅವರಿಂದ ಹಣ ಪಡೆಯುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೆರೆಗೆ ಸ್ಥಳಕ್ಕೆ ಹೋಗಿ ನೋಡಲು ಅಲ್ಲಿ ಒಬ್ಬ ವ್ಯಕ್ತಿ ರೋಡಿನ ಮೇಲೆ ಮಾರಾಕಾಸ್ತ್ರಗಳನ್ನು ಹಿಡಿದುಕೊಂಡು ನಿಂತು ಟವೇರಾ ವಾಹನವನ್ನು ನಿಲ್ಲಿಸಿದ್ದು, ಅವನನ್ನು ನೋಡಿ ನಾನು ಮತ್ತು ನಮ್ಮ ವಾಹನದ ಚಾಲಕ ಕೆಳಗೆ ಇಳಿದು ಹಿಡಿಯಲು ಪ್ರಯತ್ನಿಸಿದ್ದು ಸದರಿಯವನು ತನ್ನ ಕೈಯಲ್ಲಿದ್ದ ಮಾರಾಕಾಸ್ತ್ರದಿಂದ ನಮಗೆ ಕೊಲೆ ಮಾಡುವ ಉದ್ದೇಶದಿಂದ ಮೈಮೇಲೆ ಹೊಡೆಯಲು ಬಂದಿದ್ದು, ನಾವು ತಪ್ಪಿಸಿಕೊಂಡಾಗ ಆ ಏಟು ನಮ್ಮ ವಾಹನದ ಹಿಂದಿನ ಗ್ಲಾಸಿಗೆ ಹತ್ತಿದ್ದರಿಂದ ಗ್ಲಾಸ ಒಡೆದು ಹಾನಿಯಾಗಿರುತ್ತದೆ. ನಂತರ ಸದರಿಯವನು ಅಲ್ಲಿಂದ ಓಡಿ ಹೋದನು. ಸದರಿ ವ್ಯಕ್ತಿಯ ಹೆಸರು ವಿಳಾಸ ಗೊತ್ತಾಗಿರುವದಿಲ್ಲ ನೋಡಿದರೆ ಗುರುತಿಸುತ್ತೇವೆ. ಮತ್ತು ಟವೇರಾ ವಾಹನ ಚಾಲಕನನ್ನು ವಿಚಾರಿಸಲು ತನ್ನ ಹೆಸರು ಬಸವರಾಜ ತಂದೆ ಅಮೃತಪ್ಪ ಯಾಲಕ್ಕಿ ಅಂತಾ ಹೇಳಿದ್ದು, ತಾನು ಸೇಡಂ ಎಮ್.ಎಲ್.ಎ ಶರಣಪ್ರಕಾಶ ಪಾಟೀಲ ರವರ ವಾಹನ ಚಾಲಕ ಅಂತಾ ತಿಳಿಸಿದ್ದು ನಮ್ಮ ಕರ್ತವ್ಯಕ್ಕೆ ಅಡೆತಡೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿದ್ದು ಅಲ್ಲದೆ ನಮ್ಮ ವಾಹನದ ಹಿಂದಿನ ಗ್ಲಾಸ ಒಡೆದ ವ್ಯಕ್ತಿಯ ಮೇಲೆ ಕಾನೂನು ಕ್ರಮ ಜರುಗಿಸಲು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಬ್ರಹ್ಮಫೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
 


ಅಪಘಾತ ಪ್ರಕರಣಗಳು :

ಸುಲೇಪೇಟ ಠಾಣೆ :ದಿನಾಂಕ 09-09-2011 ರಂದು ಶ್ರೀ ಮಲ್ಲಪ್ಪಾ ತಂದೆ ಯಲ್ಲಪ್ಪಾ ಕೊಡ್ಲಿ ಸಾ : ಪೆಂಚನಪಳ್ಳಿ ಇವರ ಮಗನಾದ ಗಣೇಶ ಇತನು ತನ್ನ ಸೈಕಲ್ ಮೇಲೆ ಸುಏಪೇಟ ಮುಖ್ಯ ರಸ್ತೆಯ ಅಂಬಿಗರ ಚೌಡಯ್ಯ ವೃತ್ತದ ಹತ್ತಿರ ಹೋಗುತ್ತಿರುವಾಗ ಎದುರುಗಡೆಯಿಂದ ಟ್ರ್ಯಾಕ್ಟರ ನಂ ಕೆಎ – 32 ಟಿಎ 1619 ಟ್ರ್ಯಾಲಿ ನಂ ಟಿಎ 2525 ನೇದ್ದರ ಚಾಲಕನಾದ ಗೌರಿಶ ತಂದೆ ಹಣಮಂತ ನಾಯಿಕೊಡಿ ಸಾ: ಕಾಚೂರ ತಾ: ಸೇಡಂ ಇವನು ತನ್ನ ಟ್ರ್ಯಾಕ್ಟರನ್ನು ನಿಷ್ಕಾಳಜಿತನದಿಂದ ಅತೀ ವೇಗವಾಗಿ ಚಲಾಯಿಸಿಕೊಂಡು ಬಂದು ಗಣೇಶನಿಗೆ ಅಪಘಾತಪಡಿಸಿದ್ದರಿಂದ ತಲೆಗೆ ಭಾರಿ ಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸುಲೇಪೇಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ರಹ್ಮಪೂರ ಠಾಣೆ :ದಿನಾಂಕ: 09-09-2011 ರಂದು ರಾತ್ರಿ ಬಸವೇಶ್ವರ ಆಸ್ಪತ್ರೆ ಕಡೆಯಿಂದ ಒಬ್ಬ ಮೋಟರ ಸೈಕಲ ಚಾಲಕ ವಿಶ್ವನಾಥ ತಂದೆ ಕಲ್ಯಾಣರಾವ ಕುಲಕರ್ಣಿ, ಸಾ|| ಓಲ್ಡ ಜೇವರ್ಗಿ ರೋಡ ಹೌಸಿಂಗ ಬೋರ್ಡ ಕಾಲೋನಿ ಗುಲಬರ್ಗಾ ಇವರು ತನ್ನ ಮೋಟರ ಸೈಕಲ ನಂ: ಕೆಎ 32 ಎಕ್ಸ 8001 ಬಜಾಜ ಪಲ್ಸರ ನೇದ್ದನ್ನು ಅತೀ ವೇಗ ಹಾಗೂ ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ರೋಡಿನ ಬ್ರಿಜಗೆ ಡಿಕ್ಕಿ ಪಡಿಸಿ ಅಪಘಾತಪಡಿಸಿರುತ್ತಾನೆ ಅಂತಾ ಶ್ರೀ.ಸತ್ಯನಾರಾಯಣ ಪಿ.ಎಸ್.ಐ ಬ್ರಹ್ಮಪೂರ ಪೊಲೀಸ್ ಠಾಣೆ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹಮ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತ ವ್ಯಕ್ತಿಯ ಅಸ್ವಾಭಾವಿ ಮರಣ :

ಬ್ರಹ್ಮಪೂರ ಠಾಣೆ :ಶ್ರೀ.ವಿಶ್ವನಾಥ ತಂದೆ ಮಹಾದೇವಪ್ಪ ಚೌಡಿಯಾಳ, ಸಾ|| ಅಶೋಕ ಕಾಂಪ್ಲೇಕ್ಸ ಗೋವಾ ಹೊಟೇಲ ಹತ್ತಿರ ಬ್ರಹ್ಮಪೂರ ಗುಲಬರ್ಗಾ ರವರು ನಮ್ಮದೊಂದು ಕಾಂಪ್ಲೆಕ್ಸ ಗೋವಾ ಹೊಟೇಲ ಹತ್ತಿರ ಇದ್ದು ನಾನು ವ್ಯಾಪಾರ ಮಾಡಿಕೊಂಡು ವಾಸವಾಗಿರುತ್ತೇನೆ. ನಿನ್ನೆ ದಿನಾಂಕ: 08-09-2011 ರಂದು ರಾತ್ರಿ 11:00 ಗಂಟೆಯ ಸುಮಾರಿಗೆ ಎಂದಿನಂತೆ ನಾನು ನನ್ನ ಅಂಗಡಿ ಮುಚ್ಚಿಕೊಂಡು ನನ್ನ ಮನೆಗೆ ಹೋಗಿದ್ದು, ಇಂದು ದಿನಾಂಕ: 09-09-2011 ರಂದು ಬೆಳೀಗ್ಗೆ 0930 ಗಂಟೆಯ ಸುಮಾರಿಗೆ ನನ್ನ ಅಂಗಡಿ ಹತ್ತಿರ ಬಂದು ನೋಡಲು ನನ್ನ ಅಂಗಡಿ ಹಿಂದುಗಡೆ ಅಂಧಾಜು 80 ವರ್ಷ ವಯಸ್ಸಿನ ಒಬ್ಬ ಅಪರಿಚಿತ ಗಂಡು ವ್ಯಕ್ತಿಯು ಯಾವುದೋ ಕಾಯಿಲೆಯಿಂದ ಮೃತ ಪಟ್ಟಿದ್ದು, ಸದರಿಯವನ ಹೆಸರು ವಿಳಾಸ ಗೊತ್ತಿರುವದಿಲ್ಲ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

GULBARGA DIST REPORTED CRIMES

ಅಪಘಾತ ಪ್ರಕರಣ :-
ಫರಹತಾಬಾದ ಠಾಣೆ :
ಶ್ರೀ ಅಹ್ಮದ ಹುಸೇನ ತಂದೆ ಮಹ್ಮದ ಹುಸೇನ ಅಜಮೇರಿ ಸಾ: ರಾಮಾ ಮೊಹಲ್ಲಾ ಶಹಾಬಾದ ರವರು, ನಾನು ನನ್ನ ಲಾರಿ ನಂ: ಕೆಎ 25 ಬಿ-599 ನೇದ್ದರಲ್ಲಿ ಶಹಾಬಾದದಲ್ಲಿ ಫರಸಿ ಲೋಡ ಮಾಡಿಕೊಂಡು ಬಿಜಾಪೂರಕ್ಕೆ ಹೋರಟು, ಮುಂದೆ ಶಹಾಬಾದ ಕ್ರಾಸ ದಾಟಿ ರಾಷ್ಟ್ರೀಯ ಹೆದ್ದಾರಿ 218 ರಸ್ತೆ ಸೊಮನಾಥ ಹಳ್ಳಿ ಕ್ರಾಸ ಹತ್ತಿರ ಹೋಗುತ್ತಿದ್ದಾಗ ನನ್ನ ಲಾರಿಯ ಕಚ್ ಪ್ಲೇಟ ಮತ್ತು ಡೈನೋಮೊ ಫೇಲ್ ಆಗಿದ್ದರಿಂದ ಲಾರಿಯನ್ನು ರಸ್ತೆಯ ಎಡಬದಿಗೆ ನಿಲ್ಲಿಸಿದೇನು. ರಾತ್ರಿ 9-45 ಗಂಟೆಯ ಸುಮಾರಿಗೆ ಗುಲಬರ್ಗಾ ಕಡೆಯಿಂದ ಒಬ್ಬ ಅಂಬ್ಯುಲೇನ್ಸ ಚಾಲಕನು ತನ್ನ ವಾಹವನ್ನು ಅತಿವೇಗ ಮತ್ತು ಅಲಕ್ಷನತದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಲಾರಿಗೆ, ಅಪಘಾತ ಪಡಿಸಿದ್ದು, ಅಂಬ್ಯಲೇನ್ಸದ ಎಡಭಾಗದ ಪೂರ್ತಿ ಬಾಡಿ ಕಿತ್ತಿದ್ದು ಆಗ ನಾನು ಅಂಬ್ಯುಲೇನ್ಸ ವಾಹನ ಕೆಎ 32 ಜಿ-373 ಚಾಲಕನಿಗೆ ವಿಚಾರಿಸಲು ತನ್ನ ಹೆಸರು ನಾಗರಾಜ @ ನಾಗೇಂದ್ರಪ್ಪಾ ತಂದೆ ಶಿವಣ್ಣಾ ತೇಲಿ ಎಂದು ಹೇಳಿದ್ದು, ನಾಗೇಂದ್ರಪ್ಪನಿಗೆ ಬಲಗಡೆ ಕಣ್ಣಿನ ಹತ್ತಿರ ರಕ್ತಗಾಯವಾಗಿರುತ್ತದೆ. ಕಾರಣ ಅಪಘಾತ ಪಡಿಸಿದ ಅಂಬ್ಯುಲೇನ್ಸ ಚಾಲಕನ ಮೇಲೆ  ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಹತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :-
ಶಹಾಬಾದ ನಗರ ಠಾಣೆ :
ಶ್ರೀ ರಾಘವೇಂದ್ರ ತಂದೆ ರಂಗೆರಾವ ದೇಶಪಾಂಡೆ ಸಾ: ರೈಲ್ವೇ ಸ್ಟೇಷನ ಶಹಾಬಾದ ರವರು, ದಿನಾಂಕ 30-08-11 ರಂದು ನನ್ನು ತಮ್ಮನಾದ ಧನಂಜಯನು ತನ್ನ ಮೋಟಾರ ಸೈಕಲ್ ನಂ ಕೆ.ಎ 32 ಎಸ್ 3128 ನೇದ್ದನ್ನು ಅತಿ ವೇಗ ಮತ್ತು ನಿಷ್ಕಳಜಿತನದಿಂದ ನಚಲಾಯಿಸಿಕೊಂಡು ಬಂದು ಶಹಾಬಾದದ ಜಗಜೀವನ ರಾಮ ಕ್ರಾಸ ಹತ್ತಿರ ಒಮ್ಮೇಲೆ ಬ್ರೇಕ ಹಾಕಿದ್ದರಿಂದ ಸದರಿ ಮೋಟಾರ ಸೈಕಲ್ ಸ್ಕಿಡಾಗಿ ಬಿದ್ದು ಬಲಗಣ್ಣಿನ ಮೇಲೆ ಬಾರಿ ರಕ್ತಗಾಯವಾಗಿದ್ದು ಇರುತ್ತದೆ. ನಂತರ ಹೆಚ್ದಿನ ಉಪಚಾರ ಕುರಿತು ಕಾಮಿನಿ ಆಸ್ಪತ್ರೆ ಹೈದ್ರಾಬಾದದಲ್ಲಿ ಸೇರಿಕೆ ಮಾಡಿದಾಗ ಉಪಚಾರ ಹೊಂದುತ್ತಾ ದಿನಾಂಕ 02-09-11 ರಂದು 5 ಎ.ಎಂ ಕ್ಕೆ ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.