POLICE BHAVAN KALABURAGI

POLICE BHAVAN KALABURAGI

08 February 2014

Gulbarga District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 07-02-2014 ರಂದು ಠಾಣೆಯ ಜೀಪ ನಂ. ಕೆ.ಎ 32, ಎಮ 1760 ನೇದ್ದರಲ್ಲಿ ನಾನು ಹಾಗೂ ಠಾಣೆಯ ಸಿಬ್ಬಂಧಿಯವರಾದ ಶ್ರೀ ಸತೀಶ ಸಿಪಿಸಿ 851 ರವರೊಂದಿಗೆ 1830 ಗಂಟೆ ಸುಮಾರಿಗೆ ನಿಂಬರ್ಗಾ ಗ್ರಾಮದಲ್ಲಿ ಪೆಟ್ರೊಲಿಂಗ ಕರ್ತವ್ಯದಲ್ಲಿದ್ದಾಗ ಶ್ರೀ ದತ್ತಾತ್ರೇಯ ಎ.ಎಸ್.ಐ ಡಿ.ಸಿ.ಐ.ಬಿ ಘಟಕ ಗುಲಬರ್ಗಾ ರವರು ಫೊನ ಮುಖಾಂತರ ತಿಳಿಸಿದ್ದೇನೆಂದರೆ ನಿಂಬರ್ಗಾ ಗ್ರಾಮದಲ್ಲಿನ ಮೌಲಾ ನಗರದಲ್ಲಿಯ ಅಂಬೇಡ್ಕರ ಶಾಲೆಯ ಹಿಂದೆ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತ ಮಾಹಿತಿ ಕೊಟ್ಟ ಮೇರೆಗೆ ಕೂಡಲೇ ನಾವಿಬ್ಬರು ಗ್ರಾಮದ ಅಂಬೇಡ್ಕರ ಸರ್ಕಲ ಹತ್ತಿರ ಜೀಪ ನಿಲ್ಲಿಸಿದ್ದು ಡಿ.ಸಿ.ಐ.ಬಿ ಘಟಕದ ಶ್ರೀ ದತ್ತಾತ್ರೇಯ ಎ.ಎಸ್.ಐ, ಶ್ರೀ ಶಿವಯೋಗಿ ಹೆಚ್.ಸಿ 220ಶ್ರೀ ಪ್ರಕಾಶ ಹೆಚ್.ಸಿ 370, ಅಂಬಾರಾಯ ಹೆಚ್.ಸಿ 54,ಮಲ್ಲಿಕಾರ್ಜುನ ಸಿ.ಹೆಚ್.ಸಿ 58, ಚಂದ್ರಕಾಂತ ಹೆಚ್.ಸಿ 78 ನಮ್ಮನ್ನು ಬಂದು ಸೇರಿಕೊಂಡರು ಆಗ ಇಬ್ಬರು ಪಂಚರನ್ನು ಬರಮಾಡಿಕೊಂಡು ಶ್ರೀ ಯು.ಶರಣಪ್ಪ ಪಿ.ಐ ಡಿ.ಸಿ.ಐ.ಬಿ ಘಟಕ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಪಂಚರು ಹಾಗೂ ಸಿಬ್ಬಂಧಿಯೊಂದಿಗೆ ಬಾತ್ಮಿ ಬಂದ ಸ್ಥಳವಾದ ನಿಂಬರ್ಗಾ ಗ್ರಾಮದ ಮೌಲಾ ನಗರದಲ್ಲಿರುವ ಅಂಬೇಡ್ಕರ ಶಾಲೆಯ ಹಿಂದೆ ಮರೆಯಾಗಿ ನಿಂತು ನೋಡಲಾಗಿ ಸಾರ್ವಜನಿಕ ಬೀದಿ ದೀಪದ ಬೆಳಕಿನಲ್ಲಿ ಒಬ್ಬ ವ್ಯಕ್ತಿ ಕುಳಿತು ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವ ದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ನಾನು ಮತ್ತು ಸಿಬ್ಬಂಧಿ ಜನರು ಕೂಡಿ ಸದರಿ ವ್ಯಕ್ತಿಯ ಮೇಲೆ ದಾಳಿ ಮಾಡಿ ಹಿಡಿದು ವಿಚಾರಿಸಲು ನೂರಂದ ತಂದೆ ಸೈಬಣ್ಣ ಟಪ್ಪಾ  ಸಾ|| ನಿಂಬರ್ಗಾ ಗ್ರಾಮ ದವನನ್ನು ದಸ್ತಗೀರ ಮಾಡಿ ಚೆಕ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಿಸಿರುವ 01. ನಗದು ಹಣ 3620/-02. ಎರಡು ಮಟಕಾ ಅಂಕಿ ಸಂಖ್ಯೆ ಹಾಳೆ03. ಒಂದು ಬಾಲ ಪೆನ್ನ ವಶಪಡಿಸಿಕೊಂಡು ಮರಳಿ ಠಾಣೆಗೆ ಬಂದು ಸದರಿಯವನ ವಿರುದ್ಧ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ವಿಲಾಸ ತಂದೆ ಮೋಹನ ಚಂದ್ರ ಬಸ್ತಾಳಕರ ಸಾ|| ಹೊನ್ನಕಿರಣಗಿ ತಾ|| ಜಿ|| ಗುಲಬರ್ಗಾ ಇದ್ದು  ನಮ್ಮ ಬ್ಲೂಡಾರ್ಟ ಎಕ್ಸಪ್ರೆಸ್ ಆಪೀಸದಿಂದ ಸುಮಾರು 8,13,717/- ರೂ ಬೆಲೆಬಾಳುವ  ಆನ್ ಲೈನ ಶಾಪಿಂಗ ದಿಂದ ಮೋಬೈಲ್. ಲ್ಯಾಪಟಾಪ. ಬಟ್ಟೆಗಳು, ಬಂದಿದ್ದು ಅವುಗಳನ್ನು ವಿತರಣೆಗಾಗಿ ಇಟ್ಟಿದ್ದವುಗಳು ದಿನಾಂಕ; 16-01-2014 ರಂದು 5 ಪಿ ಎಮ್‌ ದಿಂದ ದಿನಾಂಕ; 17-01-20148;40 ಎಎಮ್ ಅವದಿಯಲ್ಲಿ ಯಾರೋ ಕಳ್ಳರು ಶಟರ್ ತೆಗೆದು ನಮ್ಮ ಆಫೀಸದಿಂದ ಕಳ್ಳತನ ಮಾಡಿಕೊಂಡು ಹೊಗಿದ್ದು ಅದೆ ಕಾರಣ ಈ ಬಗ್ಗೆ ಕಳ್ಳತನ ಮಾಡಿದವರನ್ನು ಪತ್ತೆ ಮಾಡಿ ಕ್ರಮ ಜರುಗಿಸಿ ನಮ್ಮ ಆಫೀಸದಿಂದ ಕಳ್ಳತನವಾದ ಆನ್ ಲೈನ ಶಾಪಿಂಗದಿಂದ ಬಂದಂತಹ 8,13,717/- ರೂ ಬೆಲೆಬಾಳುವ ವಸ್ತುಗಳನ್ನು ಮರಳಿ ಕೊಡಿಸಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣಗಳು :
ಮಾಹಾಗಾಂವ ಠಾಣೆ : ಶ್ರೀ ವಿಜಯಕುಮಾರ ತಂ ಪ್ರಭು ಚವ್ಹಾಣ ಸಾ|| ಮಹಾಗಾಂವ ತಾಂಡ ರವರ ಮಗಳಾದ ಮಮೀತಾ ಇವಳು ದಿನಾಂಕ 07-02-2014 ರಂದು ಮಮೀತಾ ಇವಳು ಶಾಲೆಗೆ ಹೋಗಿ ಮನೆಗೆ ಬಂದಿದ್ದು ಅವಳು ನಮ್ಮ ಮನೆಯ ಪಕ್ಕದಲ್ಲಿದ್ದ ವಿಠಲ ಚೋಕಲಾ ಇತನ ಮನೆಯ ಹಿಂದೆ ರಸ್ತೆಯ ಮೇಲೆ ಆಟ ಆಡುತ್ತಿದ್ದಳು ಅಲ್ಲೆ ರಸ್ತೆಯ ಪಕ್ಕ ತಾನು ಹಾಗೂ ತನ್ನ ತಾಂಡಾದ ಭೀಮಶ್ಯಾ ತಂ ಸಿತಾರಾಮ ಚವ್ಹಾಣ ಮಾತಾಡುತ್ತಾ ನಿಂತ್ತಿದ್ದು ಸೂಮಾರು 4.45 ಪಿ,ಎಮ್,ಕ್ಕೆ ಮಹಾಗಾಂವ ಕ್ರಾಸ ಕಡೆಯಿಂದ ಒಂದು ಪಿಯಾಗೋ ಎಪ್ ಟಂಟಂ ಗೂಡ್ಸ ವಾಹನದ ಚಾಲಕನು ತನ್ನ ವಶದಲ್ಲಿದ್ದ ವಾಹನವನ್ನು ಅತಿವೇಗ ಮತ್ತು ಅಲಕ್ಷತನಿದಂದ ಚಲಾಯಿಸಿಕೊಂಡು ಬಂದವನೆ ರಸ್ತೆಯ ಮೇಲೆ ಆಟ ಆಡುತಿದ್ದ ತನ್ನ ಮಗಳಾದ ಮಮೀತಾ ಇವಳಿಗೆ ಹಿಂದಿನಿಂದ ಜೋರಾಗಿ ಡಿಕ್ಕಿ ಹೋಡೆದು ಅಪಘಾತ ಪಡಿಸಿದ್ದರಿಂದ ತನ್ನ ಮಗಳು ಚೀರಾಡಿ ಕುಸಿದು ಕೆಳಗೆ ಬಿದ್ದಾಗ ತಾನು ಹಾಗೂ ಬೀಮಶ್ಯಾ ಇಬ್ಬರೂ ಓಡಿ ಹೋಗಿ ನೋಡಲಾಗಿ ಮಮೀತಾಳ ಮೂಗಿನಿಂದ ರಕ್ತ ಬಂದಿದ್ದು ತಲೆಯ ಹಿಂದುಗಡೆ ಭಾರಿ ರಕ್ತಗಾಯ ಮತ್ತು ಒಳಪೆಟ್ಟಾಗಿದ್ದು ಮಮೀತಾ ಮಾತನಾಡಲಿಲ್ಲಾ ತಲೆಗೆ ಆದ ಭಾರಿ ರಕ್ತಗಾಯ ಮತ್ತು ಒಳಪೆಟ್ಟಿನಿಂದ ಅವಳು ಸ್ಥಳದಲ್ಲಿಯೆ ಮೃತಪಟ್ಟಿರುತ್ತಾಳೆ ಟಂಟಂ ನಂ ನೋಡಲಾಗಿ ಅದು ಪಿಯಾಗೋ ಎಪ್, ಕಂಪನೀಯ ಗೂಡ್ಸ ಟಂಟಂ ನಂ ಕೆ,ಎ, 32 ಎ, 9507 ಅಂತಾ ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ವೀರಭದ್ರಪ್ಪ ತಂದೆ ಮಲಕಣ್ಣಾ ಬಾಳದ  ಸಾ:ಟೆಂಗಳಿ ತಾ:ಚಿತ್ತಾಪೂರ ಹಾ:ವ: ದೇವಿ ನಗರ ಗುಲಬರ್ಗಾ ರವರು  ದಿನಾಂಕ 17-02-2014  ರಂದು ಮಧ್ಯಾಹ್ನ 2=15 ಗಂಟೆಗೆ ತನ್ನ ಮೋ/ಸೈಕಲ್ ನಂ: ಕೆಎ 32 ವಾಯಿ 8340 ನೆದ್ದರ ಮೇಲೆ ಎಲ್.ಐ.ಸಿ.ಆಫೀಸ್ ನಿಂದ ಶಹಾಬಜಾರ ನಾಕಾ ಮುಖಾಂತರ ನಿಧಾನವಾಗಿ ಮೋ/ಸೈಕಲ್ ಚಲಾಯಿಸಿಕೊಂಡು ದೇವಿನಗರ ಕಡೆಗೆ ಹೋಗುವಾಗ ಖಾದ್ರಿ ಚೌಕ ದಾಟಿ ಸಂತೋಷ ಕಾಲೋನಿ ಕ್ರಾಸ್ ಹತ್ತಿರ ಅಟೋರೀಕ್ಷಾ ನಂ: ಕೆಎ 32 ಬಿ 5423 ರ ಚಾಲಕನ ಅತಿವೇಗವಾಗಿ ಮತ್ತು ಅಲಕ್ಷತನದಿಂದ ರಾಂಗ ಸೈಡಿನಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ಡಿಕ್ಕಿ ಪಡಿಸಿ ಅಪಘಾತಮಾಡಿ ಭಾರಿ ಪೆಟ್ಟುಗೊಳಿಸಿ ತನ್ನ ಅಟೋರೀಕ್ಷಾ ಅಲ್ಲೇ ಬಿಟ್ಟು ಚಾಲಕ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.